4.
ಜಾತಿಧಮ್ಮವಗ್ಗೋ
35.4.1-10. ಜಾತಿಧಮ್ಮಾದಿಸುತ್ತ ದಸಕಂ
33. ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿನ
ಅನಾಥಪಿಂಡಿಕನ ಜೇತವನದ ವಿಹಾರದಲ್ಲಿದ್ದಾಗ ಭಿಕ್ಷುಗಳೊಂದಿಗೆ
ಹೀಗೆಂದರು: ಭಿಕ್ಷುಗಳೇ, ಎಲ್ಲವೂ ಜಾತಿ (ಜನ್ಮ)
ಧಮ್ಮಕ್ಕೆ ಒಳಪಟ್ಟಿದೆ. ಮತ್ತೆ ಯಾವುದು ಭಿಕ್ಷುಗಳೇ
ಆ ಎಲ್ಲವೂ ಹುಟ್ಟಿನ
ಧರ್ಮಕ್ಕೆ ಒಳಪಟ್ಟಿರುವುದು? ಕಣ್ಣು ಹುಟ್ಟಿನ ಧಮ್ಮಕ್ಕೆ
ಒಳಪಟ್ಟಿದೆ... ರೂಪಗಳೂ... ಚಕ್ಷು ರೂಪದ
ಸಂಸ್ಪರ್ಶ... ಭಿಕ್ಷು ಸಂವೇದನೆಗಳು ಸಹಾ
ಜನ್ಮಧಮ್ಮಕ್ಕೆ ಒಳಪಟ್ಟಿದೆ. ಅದೇರೀತಿಯಾಗಿ ಕಿವಿಗಳು... ನಾಲಿಗೆ... ದೇಹ... ಮನಸ್ಸು...
ಯಾವುದೆಲ್ಲ ವೇದನೆಗಳು ಉದಯಿಸುತ್ತವೆಯೋ ಅವೆಲ್ಲವೂ
ಹುಟ್ಟಿನ ಧಮ್ಮವನ್ನು ಹೊಂದಿವೆ. ಇದನ್ನು
ಹೀಗೆ ಗಮನಿಸಿದಂತಹ ಆರ್ಯ ಶ್ರಾವಕ ಭಿಕ್ಷುವು
ಕಣ್ಣಿನ ಬಗ್ಗೆ... ರೂಪಗಳ ಬಗ್ಗೆ...
ಚಕ್ಷು ವಿಞ್ಞಾನದ ಬಗ್ಗೆ... ಚಕ್ಷು
ಸಂಸ್ಪರ್ಶದ ಬಗ್ಗೆ ವಿಕಷರ್ಿತನಾಗುತ್ತಾನೆ... ವಿರಾಗತಾಳುತ್ತಾನೆ...
ವಿಮುಕ್ತನಾಗುತ್ತಾನೆ... ಮುಂದೆ ಜನ್ಮವಿಲ್ಲವೆಂದು ಅರಿಯುತ್ತಾನೆ.
34. ಭಿಕ್ಷುಗಳೇ, ಸರ್ವವೂ ಜರಾ ಧಮ್ಮವನ್ನು
(ಮುಪ್ಪಾಗುವ ಗುಣವನ್ನು) ಹೊಂದಿವೆ.... (ಎಲ್ಲವೂ
ಈ ಹಿಂದಿನಂತೆಯೇ) ಅರಿಯುತ್ತಾನೆ.
35. ಭಿಕ್ಷುಗಳೇ, ಸರ್ವವೂ ವ್ಯಾಧಿ ಧಮ್ಮವನ್ನು
(ರೋಗ) ಹೊಂದಿವೆ.... (ಎಲ್ಲವೂ ಈ ಹಿಂದಿನಂತೆಯೇ)
ಅರಿಯುತ್ತಾನೆ.
36. ಭಿಕ್ಷುಗಳೇ, ಸರ್ವವೂ ಮರಣ ಧಮ್ಮವನ್ನು
ಹೊಂದಿವೆ.... (ಎಲ್ಲವೂ ಈ ಹಿಂದಿನಂತೆಯೇ)
ಅರಿಯುತ್ತಾನೆ.
37. ಭಿಕ್ಷುಗಳೇ, ಸರ್ವವೂ ಶೋಕ ಧಮ್ಮವನ್ನು
ಹೊಂದಿವೆ.... (ಎಲ್ಲವೂ ಈ ಹಿಂದಿನಂತೆಯೇ)
ಅರಿಯುತ್ತಾನೆ.
38. ಭಿಕ್ಷುಗಳೇ,
ಸರ್ವವೂ ಕ್ಲೇಷಗಳ ಹೊಂದಿರುವಿಕೆಯ ಧಮ್ಮವನ್ನು
ಹೊಂದಿವೆ.... (ಎಲ್ಲವೂ ಈ ಹಿಂದಿನಂತೆಯೇ)
ಅರಿಯುತ್ತಾನೆ.
39. ಭಿಕ್ಷುಗಳೇ, ಸರ್ವವೂ ಕ್ಷಯವಾಗುವ (ನಾಶವಾಗುವ)
ಧಮ್ಮವನ್ನು ಹೊಂದಿವೆ.... (ಎಲ್ಲವೂ ಈ ಹಿಂದಿನಂತೆಯೇ)
ಅರಿಯುತ್ತಾನೆ.
40. ಭಿಕ್ಷುಗಳೇ, ಸರ್ವವೂ ಕಣ್ಮರೆಯಾಗುವ (ಮಾಯ)
ಧಮ್ಮವನ್ನು ಹೊಂದಿವೆ.... (ಎಲ್ಲವೂ ಈ ಹಿಂದಿನಂತೆಯೇ)
ಅರಿಯುತ್ತಾನೆ.
41. ಭಿಕ್ಷುಗಳೇ, ಸರ್ವವೂ ಸಮುದಾಯ (ಉದಯಿಸುವ/ಮೂಲ/ಕಾರಣ) ಧಮ್ಮವನ್ನು
ಹೊಂದಿವೆ.... (ಎಲ್ಲವೂ ಈ ಹಿಂದಿನಂತೆಯೇ)
ಅರಿಯುತ್ತಾನೆ.
42. ಭಿಕ್ಷುಗಳೇ, ಸರ್ವವೂ ನಿರೋಧ (ಸಮಾಪ್ತಿ/ನಿಲ್ಲುವಿಕೆ/ಉದಯಿಸದಿರುವಿಕೆ) ಧಮ್ಮವನ್ನು ಒಳಗೊಂಡಿದೆ.... (ಎಲ್ಲವೂ
ಈ ಹಿಂದಿನಂತೆಯೇ) ಅರಿಯುತ್ತಾನೆ.
ನಾಲ್ಕನೆಯ
ಜಾತಿಧಮ್ಮವರ್ಗವು ಮುಗಿಯಿತು.

No comments:
Post a Comment