5.
ಸಬ್ಬ ಅನಿಚ್ಚ ವಗ್ಗೋ
35.5.1 - 9.
ಅನಿಚ್ಚಾದಿ ಸುತ್ತ ನವಕಂ
43. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ
ಅನಾಥಪಿಂಡಿಕನ ಜೇತವನದ ವಿಹಾರದಲ್ಲಿದ್ದಾಗ ಭಿಕ್ಷುಗಳನ್ನು
ಹೀಗೆ ಸಂಬೋಧಿಸಿದರು: ಭಿಕ್ಷುಗಳೇ, ಸರ್ವವೂ ಅನಿತ್ಯಕರವಾಗಿದೆ, ಯಾವುದು
ಭಿಕ್ಷುಗಳೇ, ಆ ಅನಿತ್ಯಕರವಾಗಿರುವುದು?
ಭಿಕ್ಷುಗಳೇ, ಚಕ್ಷು ಅನಿತ್ಯಕರವಾಗಿದೆ. ರೂಪ
ಅನಿತ್ಯ, ಚಕ್ಷುವಿಞ್ಞಾನ ಅನಿತ್ಯ, ಚಕ್ಷು ಸಂಸ್ಪರ್ಶ
ಅನಿತ್ಯ, ಚಕ್ಷು ಸಂಸ್ಪರ್ಶದಿಂದಾಗಿ ಉಂಟಾದ
ವೇದನೆಗಳಾದ ಪ್ರಿಯ ವೇದನೆಗಳು, ಅಪ್ರಿಯ
ವೇದನೆಗಳು, ಪ್ರಿಯವಲ್ಲದ ಹಾಗು ಅಪ್ರಿಯವೂ ಅಲ್ಲದ
ತಟಸ್ಥ ವೇದನೆಗಳು ಅನಿತ್ಯ. ಕಿವಿ....
ಮೂಗು.... ನಾಲಿಗೆ.... ದೇಹ.... ಮನಸ್ಸು ಅನಿತ್ಯ.
ಧಮ್ಮವೂ ಅನಿತ್ಯಕರವಾಗಿದೆ, ಮನೋವಿಞ್ಞಾನವೂ ಅನಿತ್ಯಕರವಾಗಿದೆ. ಮನೋ ಸಂಸ್ಪರ್ಶವೂ ಅನಿತ್ಯಕರವಾಗಿದೆ.
ಸಂಸ್ಪರ್ಶದಿಂದ ಉದಯಿಸುವ ವೇದನೆಗಳಾದ ಪ್ರಿಯ,
ಅಪ್ರಿಯ ಹಾಗು ತಟಸ್ಥ ವೇದನೆಗಳೂ
ಅನಿತ್ಯಕರವಾಗಿದೆ. ಹೀಗೆ ಯಥಾಭೂತವಾಗಿ ದಶರ್ಿಸಿದಂತಹ
ಆರ್ಯಶ್ರಾವಕ ಭಿಕ್ಷುವು ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ.
ಧಮ್ಮಗಳಿಂದ ವಿಕಷರ್ಿತನಾಗುತ್ತಾನೆ. ಮನೋವಿಞ್ಞಾನದಿಂದ ವಿಕಷರ್ಿತನಾಗುತ್ತಾನೆ. ಮನೋಸಂಸ್ಪರ್ಶದಿಂದ ವಿಕಷರ್ಿತನಾಗುತ್ತಾನೆ. ಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ,
ಅಪ್ರಿಯವೇದನೆ ಹಾಗು ಪ್ರಿಯಾಪ್ರಿಯವಲ್ಲದ ವೇದನೆಗಳಿಂದ
ವಿಕಷರ್ಿತನಾಗುತ್ತಾನೆ. ವಿಕರ್ಷಣೆಯಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದಾಗಿ
ವಿಮುಕ್ತಿ ಹೊಂದುತ್ತಾನೆ. ಜೊತೆಗೆ ವಿಮುಕ್ತಿ ಹೊಂದಿದ
ಜ್ಞಾನವನ್ನು ಪಡೆಯುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು
ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಮುಂದೆ ಜನ್ಮವಿಲ್ಲ ಎಂದು
ಅರಿಯುತ್ತಾನೆ.
44. ಭಿಕ್ಷುಗಳೇ, ಸರ್ವವೂ ದುಃಖಕರವಾಗಿವೆ....
45. ಭಿಕ್ಷುಗಳೇ, ಸರ್ವವೂ ಅನಾತ್ಮಕರವಾಗಿವೆ....
46. ಭಿಕ್ಷುಗಳೇ, ಸರ್ವವೂ ಅಭಿಜ್ಞಾದಿಂದ ನೇರವಾಗಿ
ಅರಿಯಬಹುದು....
47. ಭಿಕ್ಷುಗಳೇ, ಸರ್ವವನ್ನು ಪರಿಜ್ಞಾ (ಪರಿಪೂರ್ಣವಾಗಿ)
ಅರಿಯಬಹುದು....
48. ಭಿಕ್ಷುಗಳೇ, ಸರ್ವವನ್ನು ವಜರ್ಿಸಬಹುದು (ಪಹಾತಬ್ಬಂ).....
49. ಭಿಕ್ಷುಗಳೇ, ಸರ್ವವನ್ನೂ ಸಾಕ್ಷಾತ್ಕರಿಸಬಹುದು....
50. ಭಿಕ್ಷುಗಳೇ, ಸರ್ವವವನ್ನೂ ಪರಿಪೂರ್ಣವಾಗಿ ನೇರವಾಗಿ ಅರಿಯಬಹುದು....
51. ಭಿಕ್ಷುಗಳೇ, ಸರ್ವವವನ್ನೂ ಹತ್ತಿಕ್ಕಬಹುದು....
35.5.10. ಉಪಸ್ಸಟ್ಠ ಸುತ್ತಂ
52. ಭಿಕ್ಷುಗಳೇ, ಸರ್ವವನ್ನೂ ಜಯಿಸಬಹುದು. ಭಿಕ್ಷುಗಳೇ,
ಯಾವುದನ್ನು ಜಯಿಸಬಹುದು? ಭಿಕ್ಷುಗಳೇ, ಚಕ್ಷುವನ್ನು, ಚಕ್ಷುವಿಞ್ಞಾನವನ್ನು, ಚಕ್ಷುಸಂಸ್ಪರ್ಶವನ್ನು ಜಯಿಸಬಹುದು. ಚಕ್ಷುಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆಗಳು,
ಅಪ್ರಿಯ ವೇದನೆಗಳು, ತಟಸ್ಥ ವೇದನೆಗಳನ್ನು
ಜಯಿಸಬಹುದು. ಅದೇರೀತಿಯಲ್ಲಿ ಕಿವಿಯನ್ನು... ಜಿಹ್ವಾವನ್ನು.... ಕಾಯವನ್ನು.... ಮನಸ್ಸನ್ನು... ಮನೋವಸ್ತುಗಳನ್ನು, ಮನೋವಿಞ್ಞಾನವನ್ನು, ಮನೋಸಂಸ್ಪರ್ಶವನ್ನು, ಮನೋಸಂಸ್ಪರ್ಶದಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯ,
ಅಪ್ರಿಯ ಹಾಗು ಪ್ರಿಯಾಪ್ರಿಯಗಳಲ್ಲದ ವೇದನೆಗಳನ್ನು
ಜಯಿಸಬಹುದು. ಭಿಕ್ಷುಗಳೇ, ಯಾವಾಗ ಆರ್ಯಶ್ರಾವಕನು ಇವನ್ನು
ಯಥಾಭೂತವಾಗಿ ದಶರ್ಿಸುವನೋ, ಆಗ ಆತನು
ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ. ರೂಪಗಳಿಂದ ವಿಕಷರ್ಿತನಾಗುತ್ತಾನೆ, ಚಕ್ಷುವಿಞ್ಞಾನದಿಂದ,
ಚಕ್ಷುಸಂಸ್ಪರ್ಶದಿಂದ, ಚಕ್ಷುಸಂಸ್ಪರ್ಶದಿಂದ ಉದಯಿಸುವ ವೇದನೆಗಳಿಂದ ವಿಕಷರ್ಿತನಾಗುತ್ತಾನೆ.
ಅದೇರೀತಿಯಲ್ಲಿ ಕಿವಿಯಿಂದ.... ಮೂಗಿನಿಂದ.... ನಾಲಿಗೆಯಿಂದ.... ಕಾಯದಿಂದ.... ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ. ಮನೋವಸ್ತುಗಳಿಂದ, ಮನೋವಿಞ್ಞಾನದಿಂದ, ಮನೋಸಂಸ್ಪರ್ಶಗಳಿಂದ ಮನೋವೇದನೆಗಳಿಂದ ವಿಕಷರ್ಿತನಾಗುತ್ತಾನೆ. ಹೀಗೆ ವಿಕಷರ್ಿತನಾದ್ದರಿಂದಾಗಿ ವಿರಾಗ
ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದ
ವಿಮುಕ್ತಿ ಜ್ಞಾನವನ್ನು ಹೊಂದುತ್ತಾನೆ.
ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು
ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಬೇರೆ ಪುರ್ನಜನ್ಮವಿಲ್ಲ ಎಂದು
ಅರಿಯುತ್ತಾನೆ.
ಸರ್ವ ಅನಿಚ್ಚವರ್ಗವು ಮುಗಿಯಿತು.
ಸಳಾಯತನ ವರ್ಗದ ಪ್ರಥಮ ಪಣ್ಣಾಸಕೊ
ಸಮಾಪ್ತಿಯಾಯಿತು.


No comments:
Post a Comment