Tuesday 8 August 2017

pathama anicca vagga ಪ್ರಥಮ ಅನಿಚ್ಚವರ್ಗ

ಪ್ರಥಮ ಅನಿಚ್ಚವರ್ಗ


35.1.1. ಅಜ್ಝತ್ತಾನಿಚ್ಚ ಸುತ್ತ (ವೈಯಕ್ತಿಕ ಅನಿತ್ಯ)
                1. ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿನ ಜೇತವನದಲ್ಲಿ ಅನಾಥಪಿಂಡಿಕನ ಆರಾಮದಲ್ಲಿ ವಿಹರಿಸುತ್ತಿದ್ದರು. ಅಲ್ಲಿ ಭಗವಾನರು ಭಿಕ್ಷುಗಳನ್ನು ಕುರಿತು ಭಿಕ್ಷುಗಳೇ ಎಂದರು. ಭದಂತರೇ ಎಂದು ಭಿಕ್ಷುಗಳು ಗೌರವದಿಂದ ಸಂಬೋಧಿಸಿದರು. ಆಗ ಭಗವಾನರು ಭಿಕ್ಷುಗಳೊಂದಿಗೆ ಹೀಗೆ ಹೇಳಿದರು:
                ಭಿಕ್ಷುಗಳೇ, ಚಕ್ಷುವು ಅನಿತ್ಯವಾಗಿದೆ. ಯಾವುದು ಅನಿತ್ಯವೋ ಅದು ದುಃಖಕರವಾಗಿದೆ. ಹೀಗಾಗಿ ಯಾವುದು ದುಃಖವೋ ಅದು ಆತ್ಮವಲ್ಲ (ತಾನಲ್ಲ, ತನ್ನದಲ್ಲ) ಹೀಗೆ ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು. ಭಿಕ್ಷುಗಳೇ, ಕಿವಿಯು ಸಹಾ ಅನಿತ್ಯವಾಗಿದೆ ಹಾಗೂ ಯಾವುದು ಅನಿತ್ಯವೋ ಅದು ದುಃಖಕರವಾಗಿದೆ. ಎಲ್ಲಿ ದುಃಖವಿದೆಯೋ ಅಲ್ಲಿ ಆತ್ಮ (ತಾನು) ಇರುವುದಿಲ್ಲ. ಹೀಗಾಗಿ ಇವು ತನ್ನದಲ್ಲ, ತಾನು ಅಲ್ಲ ಅಥವಾ ನನ್ನ ಆತ್ಮವೂ ಅಲ್ಲ. ಹೀಗೆ ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು. ಭಿಕ್ಷುಗಳೇ, ಮೂಗು ಸಹಾ ಅನಿತ್ಯವಾಗಿದೆ.... ಭಿಕ್ಷುಗಳೇ ನಾಲಿಗೆ ಸಹಾ ಅನಿತ್ಯವಾಗಿದೆ.... ಭಿಕ್ಷುಗಳೇ ದೇಹ ಸಹಾ ಅನಿತ್ಯವಾಗಿದೆ.... ಭಿಕ್ಷುಗಳೇ, ಮನಸ್ಸು ಸಹಾ ಅನಿತ್ಯವಾಗಿದೆ. ಯಾವುದು ಅನಿತ್ಯವಾಗಿದೆಯೋ ಅದು ದುಃಖಕರವಾಗಿದೆ. ಹೀಗಾಗಿ ಯಾವುದು ಅನಿತ್ಯವೋ ಅದು ನನ್ನದಲ್ಲ, ನಾನಲ್ಲ, ನನ್ನ ಆತ್ಮವೂ ಅಲ್ಲ ಎಂದು ಯಥಾಭೂತವಾಗಿ ಸಂಯಕ್ ಜ್ಞಾನದಿಂದ ದಶರ್ಿಸಬೇಕು. ಭಿಕ್ಷುಗಳೇ, ಆರಿಯ ಶ್ರಾವಕನು ಹೀಗೆ ದಶರ್ಿಸುವಾಗ ಆತನು ಕಣ್ಣಿನಿಂದ, ಕಿವಿಯಿಂದ, ಮೂಗಿನಿಂದ, ನಾಲಿಗೆಯಿಂದ, ದೇಹದಿಂದ ಮತ್ತು ಮನಸ್ಸಿನಿಂದ ವಿಮುಖನಾಗುತ್ತಾನೆ. ವಿಮುಖನಾದಾಗ, ರಾಗರಹಿತನಾಗಿ, ವಿರಾಗ ಹೊಂದುತ್ತಾನೆ. ವಿರಾಗದಿಂದಾಗಿ ವಿಮುಕ್ತಿ ಲಭಿಸುತ್ತದೆ. ಅದರಿಂದಾಗಿ ಹೀಗೆ ವಿಮುಕ್ತಿ ಜ್ಞಾನವು ಲಭಿಸುವುದು: ಜನ್ಮವು ನಾಶವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಇನ್ನು ಇಚ್ಛಿಸುವಿಕೆ ಯಾವುದೂ ಇಲ್ಲ.

35.1.2. ಅಜ್ಝತ್ತ ದುಃಖ ಸತ್ಯ
                2. ಭಿಕ್ಷುಗಳೇ, ಚಕ್ಷುವು ದುಃಖಕರ, ದುಃಖದಲ್ಲಿ ಯಾವುದೇ ಸ್ವಯಂ (ಆತ್ಮ) ಇರುವುದಿಲ್ಲ, ಅದು ನನ್ನದಲ್ಲ, ನಾನು ಸಹಾ ಅಲ್ಲ. ಇದು ಹೀಗೆ ಸಮ್ಯಕ್ ಜ್ಞಾನದಿಂದ ಹೀಗೆ ಯಥಾಭೂತವಾಗಿ ದಶರ್ಿಸಬೇಕು. ಅದೇರೀತಿಯಲ್ಲಿ ಕಿವಿಯು.... ಮೂಗು.... ನಾಲಿಗೆಯು.... ದೇಹವೂ.... ಮನಸ್ಸು ದುಃಖಕರವಾಗಿದೆ. ದುಃಖದಲ್ಲಿ ಯಾವುದೇ ಆತ್ಮವಿರುವುದಿಲ್ಲ (ಸ್ವಯಂ), ಅದು ನಾನಲ್ಲ ಹಾಗು ನನ್ನದೂ ಸಹಾ ಅಲ್ಲ. ಹೇಗೆ ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು. ಭಿಕ್ಷುಗಳೇ ಹೀಗೆ ಯಥಾಭೂತವಾಗಿ ದಶರ್ಿಸಿದಾಗ ಆತನ ಚಿತ್ತವೂ ಕಣ್ಣಿನಿಂದ, ಕಿವಿಯಿಂದ, ನಾಲಿಗೆಯಿಂದ, ದೇಹದಿಂದ ಮತ್ತು ಮನಸ್ಸಿನಿಂದ ವಿಮುಖವಾಗುತ್ತವೆ. ವಿಮುಖನಾದ್ದರಿಂದ ವಿರಾಗ ಹೊಂದುತ್ತಾನೆ, ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತಾನೆ, ವಿಮುಕ್ತನಾಗಿ ಆತನಲ್ಲಿ ಹೀಗೆ ವಿಮುಕ್ತಿ ಜ್ಞಾನವು ಉದಯಿಸುತ್ತದೆ: ವಿಮುಕ್ತನಾದೆನು, ಜನ್ಮವೂ ಕ್ಷಯಿಸಿತು, ಪವಿತ್ರ ಬ್ರಹ್ಮಚರ್ಯಜೀವನ ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು ಇನ್ನು ಬಯಸುವಂಥದ್ದು ಏನೂ ಇಲ್ಲ.

35.1.3. ಅಜ್ಝತ್ತ ಅನತ್ತ ಸತ್ಯ
                3. ಭಿಕ್ಷುಗಳೇ, ಚಕ್ಷು (ಕಣ್ಣು) ಸ್ವಯಂ ಅಲ್ಲ (ಆತ್ಮವಲ್ಲ) ಕಣ್ಣು ನನ್ನದು ಅಲ್ಲ ಅಥವಾ ನಾನೂ ಅಲ್ಲ. ಹೀಗೆ ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು.... ಭಿಕ್ಷುಗಳೇ ಹಾಗೆಯೇ ಕಿವಿಯೂ.... ಮೂಗೂ.... ನಾಲಿಗೆಯೂ....ದೇಹವೂ.... ಮನಸ್ಸು.... ಸ್ವಯಂವಲ್ಲ (ಆತ್ಮವಲ್ಲ), ಮನಸ್ಸು ನಾನೂ ಅಲ್ಲ, ಹಾಗೆಯೇ ಮನಸ್ಸು ನನ್ನದು ಅಲ್ಲ. ಹೀಗೆ ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು. ಆರ್ಯ ಶ್ರಾವಕನು ಹೀಗೆ ದಶರ್ಿಸಿದಾಗ, ಆತನು ಕಣ್ಣಿನಿಂದ, ಕಿವಿಯಿಂದ, ಮೂಗಿನಿಂದ, ನಾಲಿಗೆಯಿಂದ, ದೇಹದಿಂದ ಮತ್ತು ಮನಸ್ಸಿನಿಂದ ವಿಮುಖನಾಗುತ್ತಾನೆ. ವಿಮುಖನಾಗಿ ವಿರಾಗಿಯಾಗುತ್ತಾನೆ, ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ, ವಿಮುಕ್ತನಾದ್ದರಿಂದಾಗಿ ಹೀಗೆ ವಿಮುಕ್ತ ಜ್ಞಾನವು ಉಂಟಾಗುತ್ತದೆ: ವಿಮುಕ್ತನಾದೆನು, ಜನ್ಮವೆಲ್ಲ ಕ್ಷಯಿಸಿತು, ಪವಿತ್ರ ಬ್ರಹ್ಮಚರ್ಯ ಜೀವನವು ಪೂರ್ಣಗೊಂಡಿತು, ಮಾಡಬೇಕಾದುದೆಲ್ಲ ಮಾಡಿಯಾಯಿತು. ಇಚ್ಛಿಸಲು ಇನ್ನೇನೂ ಉಳಿದಿಲ್ಲ.

35.1.4. ಬಾಹಿರ ಅನಿಚ್ಚ ಸತ್ಯ
                4. ಭಿಕ್ಷುಗಳೇ, ದಶರ್ಿಸಬಹುದಾದ ರೂಪಗಳು ಅನಿತ್ಯವಾಗಿದೆ. ಯಾವುದು ಅನಿತ್ಯವೋ ಅದೆಲ್ಲಾ ದುಃಖಕರವಾಗಿವೆ. ಯಾವುದು ದುಃಖಕರವೋ ಅವೆಲ್ಲಾ ಅನಾತ್ಮವಾಗಿದೆ. ಯಾವುದು ದುಃಖಕರವೋ ಅವೆಲ್ಲಾ ಅನಾತ್ಮವಾಗಿದೆ. ಯಾವುದು ಅನಾತ್ಮವೋ ಅದು ನನ್ನದಲ್ಲ, ನಾನಲ್ಲ ಹಾಗು ನನ್ನ ಆತ್ಮವೂ ಅಲ್ಲ. ಹೀಗೆ ಯಥಾಭೂತವಗಿ ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು. ಹಾಗೆಯೇ ಶಬ್ದಗಳು... ವಾಸನೆಯು (ಗಂಧಗಳು)... ರಸಾ (ನಾಲಿಗೆಯಿಂದ ಆಸ್ವಾದಿಸುವಂತದ್ದು)... ದೈಹಿಕವಾಗಿ ಸ್ಪಶರ್ಿಸುವಂತಹುದು... ಧಮ್ಮಗಳು (ಮಾನಸಿಕ ವಿಷಯಗಳು) ಅನಿತ್ಯವಾಗಿವೆ. ಯಾವುದು ಅನಿತ್ಯವೋ ಅವೆಲ್ಲಾ ದುಃಖಕರವಾಗಿವೆ. ಯಾವುದು ದುಃಖಕರವೋ ಅವೆಲ್ಲಾ ಅನಾತ್ಮವಾಗಿವೆ. ಯಾವುವು ಅನಾತ್ಮವೋ ಅವು ನನ್ನದಲ್ಲ, ನಾನಲ್ಲ ಹಾಗು ನನ್ನ ಆತ್ಮವೂ ಅಲ್ಲ ಎಂದು ಯಥಾಭೂತವಾಗಿ ಸಂಯಕ್ ಜ್ಞಾನದಿಂದ ದಶರ್ಿಸಬೇಕು. ಹೀಗೆ ದಶರ್ಿಸಿದಾಗ ಆತನು ರೂಪದಿಂದ, ಶಬ್ದದಿಂದ, ವಾಸನೆಯಿಂದ, ರಸಗಳಿಂದ, ದೈಹಿಕವಾಗಿ ಸ್ಪಶರ್ಿಸುವಂತಹವುಗಳಿಂದ, ಮಾನಸಿಕ ವಿಷಯಗಳಿಂದ (ಧಮ್ಮಗಳಿಂದ) ವಿಮುಖನಾಗುತ್ತಾನೆ. ವಿಮುಕನಾಗಿದ್ದರಿಂದಾಗಿ ವಿರಾಗಿಯಾಗುತ್ತಾನೆ, ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾಗಿದ್ದರಿಂದ ವಿಮುಕ್ತಿ ಜ್ಞಾನವು ಉದಯಿಸುತ್ತದೆ. ವಿಮುಕ್ತನಾದೆನು, ಜನ್ಮವೆಲ್ಲಾ ಕ್ಷಯಿಸಿತು, ಪವಿತ್ರ ಜೀವನ ಪೂರ್ಣಗೊಂಡಿತು. ಮಾಡಬೇಕಾದ್ದು ಮಾಡಿಯಾಯಿತು, ಇಚ್ಛಿಸಲು ಇನ್ನೇನೂ ಉಳಿದಿಲ್ಲ.

35.1.5. ಬಾಹಿರ ದುಃಖ ಸುತ್ತಂ
                5. ಭಿಕ್ಷುಗಳೇ, ರೂಪಗಳು ದುಃಖಕರವಾಗಿವೆ. ಯಾವುವು ದುಃಖಕರವೋ ಅವು ಅನಾತ್ಮವಾಗಿವೆ. ಯಾವುವು ಅನಾತ್ಮವೋ ಅವನ್ನು ನನ್ನದಲ್ಲ, ನಾನಲ್ಲ, ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು. ಅದೇರೀತಿ ಶಬ್ದಗಳು... ವಾಸನೆಗಳು... ರಸಗಳು... ದೈಹಿಕವಾಗಿ ಸ್ಪಶರ್ಿಸಲ್ಪಡುವ ಎಲ್ಲವುಗಳು... ಮಾನಸಿಕ ವಿಷಯಗಳು (ಧಮ್ಮ) ದುಃಖಕರವಾಗಿವೆ. ಯಾವುವು ದುಃಖಕರವೋ ಅವೆಲ್ಲಾ ಅನಾತ್ಮವಾಗಿವೆ... ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು. ಹೀಗೆ ದಶರ್ಿಸಿದಾಗ ಆತನು ರೂಪಗಳಿಂದ, ಶಬ್ದಗಳಿಂದ, ವಾಸನೆಗಳಿಂದ, ರಸಗಳಿಂದ, ಸ್ಪರ್ಶದ ವಿಷಯಗಳಿಂದ, ಮಾನಸಿಕ ವಿಷಯಗಳಿಂದ ವಿಮುಖನಾಗುತ್ತಾನೆ. ವಿಮುಕ್ತನಾಗಿದ್ದರಿಂದ ವಿಮುಕ್ತಿ ಜ್ಞಾನವು ಉದಯಿಸುತ್ತದೆ. ವಿಮುಕ್ತನಾದೆನು, ಜನ್ಮವೆಲ್ಲಾ ಕ್ಷಯಿಸಿತು, ಪವಿತ್ರ ಜೀವನ ಪೂರ್ಣಗೊಂಡಿತು. ಮಾಡಬೇಕಾದ್ದು ಮಾಡಿಯಾಯಿತು, ಇಚ್ಛಿಸಲು ಇನ್ನೇನೂ ಉಳಿದಿಲ್ಲ.


35.1.6. ಬಾಹಿರಾಸತ್ತ ಸುತ್ತಂ
                6. ಭಿಕ್ಷುಗಳೇ, ರೂಪಗಳು ಅನಾತ್ಮವಾಗಿವೆ. ಯಾವೆಲ್ಲಾ ಅನಾತ್ಮವೋ ಅವನ್ನು ನನ್ನದಲ್ಲ, ನಾನಲ್ಲ, ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸಬೇಕು. ಶಬ್ದಗಳು... ಗಂಧಗಳು... ರಸಗಳು... ಸಶರ್ಿಸುವಂತಹವು... ಮಾನಸಿಕ ವಿಷಯಗಳು... ಇವೆಲ್ಲಾ ಅನತ್ಮವಾಗಿವೆ. ಯಾವುವು ಅನಾತ್ಮವೋ ಅವೆಲ್ಲ ನನ್ನದಲ್ಲ, ನಾನಲ್ಲ, ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ದಶರ್ಿಸಬೇಕು. ಹೀಗೆ ದಶರ್ಿಸಿದಾಗ ಆತನು ರೂಪಗಳಿಂದ, ಶಬ್ದಗಳಿಂದ, ವಾಸನೆಗಳಿಂದ, ರಸಗಳಿಂದ, ಸ್ಪಶರ್ಿಸುವಿಕೆಯಿಂದ, ಮಾನಸಿಕ ವಿಷಯಗಳಿಂದ ವಿಮುಖನಾಗುತ್ತಾನೆ. ವಿಮುಕ್ತನಾಗಿದ್ದರಿಂದ ವಿಮುಕ್ತಿ ಜ್ಞಾನವು ಉದಯಿಸುತ್ತದೆ. ವಿಮುಕ್ತನಾದೆನು, ಜನ್ಮವೆಲ್ಲಾ ಕ್ಷಯಿಸಿತು, ಪವಿತ್ರ ಜೀವನ ಪೂರ್ಣಗೊಂಡಿತು. ಮಾಡಬೇಕಾದ್ದು ಮಾಡಿಯಾಯಿತು, ಇಚ್ಛಿಸಲು ಇನ್ನೇನೂ ಉಳಿದಿಲ್ಲ.

35.1.7. ಅಜ್ಝತ್ತಾನಿಚ್ಛಾತೀತನಾಗತ ಸುತ್ತಂ
                7. ಭಿಕ್ಷುಗಳೇ, ಅತೀತ (ಭೂತಕಾಲದಲ್ಲಿ) ದಲ್ಲಿಯೂ ಚಕ್ಷು (ಕಣ್ಣು) ಅನಿತ್ಯವಾಗಿತ್ತು, ಭವಿಷ್ಯದಲ್ಲಿಯೂ ಅದು ಅನಿತ್ಯವಾಗಿರುತ್ತದೆ (ಪರಿವರ್ತನಾಶೀಲವಾಗಿರುತ್ತದೆ). ಹಾಗೆಯೇ ವರ್ತಮಾನದಲ್ಲಿಯೂ ಅದರ ಅನಿತ್ಯತೆಯ ಬಗ್ಗೆ ಸಂದೇಹ ಬೇಡ. ಹೀಗೆ ದಶರ್ಿಸಿದ ಆರಿಯ ಶ್ರಾವಕನು ಅತೀತದಲ್ಲಿನ ಚಕ್ಷುವಿನ ಬಗ್ಗೆ ಅಪೇಕ್ಷೆರಹಿತನಾಗುತ್ತಾನೆ. ಹಾಗೆಯೇ ಭವಿಷ್ಯದ ಕಣ್ಣಿನ ಬಗ್ಗೆಯೂ ಅಪೇಕ್ಷೆವುಳ್ಳವನಾಗಿರುವುದಿಲ್ಲ. ವರ್ತಮಾನದಲ್ಲಿಯು ಆತನು ಚಕ್ಷುವಿನಿಂದ ವಿಕಷರ್ಿತನಾಗಿ, ವಿರಾಗವನ್ನು ಹೊಂದಿ, ನಿರೋಧವನ್ನು ಸ್ಥಾಪಿಸುತ್ತಾನೆ. ಕಿವಿಯು ಅನಿತ್ಯವಾಗಿದೆ... ಮೂಗು ಅನಿತ್ಯವಾಗಿದೆ... ನಾಲಿಗೆಯು ಸಹಾ ಅತೀತದಲ್ಲಿಯೂ, ಮುಂದೆಯೂ (ಭವಿಷ್ಯದಲ್ಲಿಯು) ಅನಿತ್ಯವಾಗಿದೆ, ವರ್ತಮಾನದಲ್ಲಿಯೂ ಅದರ ಅನಿತ್ಯತೆಯ ಬಗ್ಗೆ ಸಂದೇಹ ಬೇಡ. ಹೀಗೆ ದಶರ್ಿಸಿದ ಆರ್ಯ ಶ್ರಾವಕನು ಅತೀತದ ಬಗೆಗಿನ ಅಪೇಕ್ಷೆಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ಭವಿಷ್ಯದ ಬಗ್ಗೆಯೂ ಯಾವುದೇ ಪ್ರಿಯ ಅಪೇಕ್ಷೆಗಳನ್ನು ನಿರೀಕ್ಷಿಸುವುದಿಲ್ಲ, ವರ್ತಮಾನದಲ್ಲಿಯೂ ಆತನು ಇವುಗಳಿಂದ ವಿಕಷರ್ಿತನಾಗಿ, ವಿರಾಗ ಹೊಂದಿ, ನಿರೋಧವನ್ನು ಸ್ಥಾಪಿಸುತ್ತಾನೆ.

35.1.8. ಅಜ್ಝತ್ತದುಕ್ಖಾತೀತನಾಗತ ಸುತ್ತಂ
                8. ಭಿಕ್ಷುಗಳೇ, ಚಕ್ಷುವು ಅತೀತದಲ್ಲೂ ದುಃಖಕರವಾಗಿದೆ, ಹಾಗೆಯೇ ಭವಿಷ್ಯದಲ್ಲಿಯೂ ಸಹಾ ಅದು ದುಃಖವೇ ಆಗಿದ್ದು, ವರ್ತಮಾನದಲ್ಲೂ ಚಕ್ಷುವು ದುಃಖಕರವೆಂಬುದರಲ್ಲಿ ಸಂದೇಹವಿಲ್ಲ. ಇದನ್ನು ಅರಿತ ಆರಿಯ ಶ್ರಾವಕನು ಅತೀತದ ಚಕ್ಷುವಿನಲ್ಲಿ ಅನಾಪೇಕ್ಷೆಯುಳ್ಳವನಾಗುತ್ತಾನೆ. ಹಾಗೆಯೇ ಭವಿಷ್ಯದ ಕಣ್ಣಿನ ಬಗ್ಗೆಯು ಯಾವುದೇ ಆನಂದಕರ ಆಸೆಗಳನ್ನು ಇಡುವುದಿಲ್ಲ. ವರ್ತಮಾನದಲ್ಲಿಯೂ ಆತನು ಚಕ್ಷುವಿನಿಂದ ವಿಕಷರ್ಿತನಾಗಿ, ವಿರಾಗಹೊಂದಿ, ನಿರೋಧ ಸ್ಥಾಪಿಸುತ್ತಾನೆ. ಭಿಕ್ಷುಗಳೇ, ಕಿವಿ... ಮೂಗು... ನಾಲಿಗೆ... ದೇಹವು ಅತೀತದಲ್ಲೂ ದುಃಖಕರವಾಗಿದೆ. ಹಾಗೆಯೇ ಭವಿಷ್ಯದಲ್ಲೂ ಸಹಾ ಅದು ದುಃಖವೇ ಆಗಿದ್ದು... ನಿರೋಧ ಸ್ಥಾಪಿಸುತ್ತಾನೆ. ಭಿಕ್ಷುಗಳೇ, ಅತೀತದ ಮನಸ್ಸು ದುಃಖಕರವಾಗಿದೆ. ಹಾಗೆಯೇ ಭವಿಷ್ಯದಲ್ಲಿ ಮನಸ್ಸು ಸಹಾ ದುಃಖವೇ ಆಗಿದ್ದು ವರ್ತಮಾನದಲ್ಲೂ ಮನಸ್ಸು ದುಃಖವೇ ಎಂಬುದರಲ್ಲಿ ಸಂದೇಹವಿಲ್ಲ. ಇದನ್ನು ಅರಿತ ಅರಿಯ ಶ್ರಾವಕನು ಮನಸ್ಸಿನಿಂದ ವಿಕರ್ಷಣೆಯಾಗುತ್ತಾನೆ. ನಂತರ ವಿರಾಗ ಹೊಂದಿ ನಿರೋಧ ಪ್ರಾಪ್ತಿ ಮಾಡುತ್ತಾನೆ.

35.1.9. ಅಜ್ಝತ್ತಾನತ್ತಾತೀತನಾಗತ ಸುತ್ತಂ
                9. ಭಿಕ್ಷುಗಳೇ, ಚಕ್ಷುವು ಅತೀತದಲ್ಲಿಯೂ ಹಾಗು ಮುಂದೆಯೂ ಅನಾತ್ಮವಾಗಿದೆ. ವರ್ತಮಾನದಲ್ಲಿಯೂ ಚಕ್ಷುವು ಅನಾತ್ಮವೆಂಬುದರಲ್ಲಿ ಸಂದೇಹವಿಲ್ಲ. ಇದನ್ನು ದಶರ್ಿಸಿದ ಆರ್ಯ ಶ್ರಾವಕನು ಅತೀತದ ಚಕ್ಷುವಿನ ಬಗ್ಗೆ ಅಪೇಕ್ಷೆಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ಚಕ್ಷುವಿನ ಬಗ್ಗೆ ಭವಿಷ್ಯದಲ್ಲಿಯು ಯಾವುದೇ ಸುಂದರ ಅಪೇಕ್ಷೆಗಳನ್ನು ಇಡಲಾರ, ವರ್ತಮಾನದಲ್ಲಿಯು ಆತನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ವಿರಾಗ ಹೊಂದುತ್ತಾನೆ ಮತ್ತು ನಿರೋಧ ಹೊಂದುತ್ತಾನೆ. ಭಿಕ್ಷುಗಳೇ, ಕಿವಿಯು... ಮೂಗು... ನಾಲಿಗೆ... ದೇಹ ಮತ್ತು ಮನಸ್ಸು ಅತೀತದಲ್ಲಿಯೂ ಅನಾತ್ಮವಾಗಿತ್ತು, ಮುಂದೆ ಭವಿಷ್ಯದಲ್ಲಿಯೂ ಅನಾತ್ಮವಾಗಿರುವುದು, ಹಾಗೆಯೇ ವರ್ತಮಾನದಲ್ಲಿಯೂ ಮನಸ್ಸು ಅನಾತ್ಮವೆಂಬುದರಲ್ಲಿ ಸಂದೇಹವೇ ಇಲ್ಲ. ಇದನ್ನು ದಶರ್ಿಸಿದ ಆರ್ಯ ಶ್ರಾವಕನು ಅತೀತದಲ್ಲಿನ ಮನಸ್ಸಿನ ಬಗ್ಗೆ ಅಪೇಕ್ಷೆಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ಮನಸ್ಸಿನ ಬಗ್ಗೆ ಭವಿಷ್ಯದಲ್ಲಿಯೂ ಅಪೇಕ್ಷೆಗಳನ್ನು ಇಡಲಾರ. ವರ್ತಮಾನದಲ್ಲಿಯೂ ಸಹಾ ಆತನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ವಿರಾಗಹೊಂದುತ್ತಾನೆ ಮತ್ತು ನಿರೋಧ ಹೊಂದುತ್ತಾನೆ.

35.1.10. ಬಾಹಿರಾನಿಚ್ಛಾತೀತನಾಗತ ಸುತ್ತಂ
                10. ಭಿಕ್ಷುಗಳೇ, ರೂಪಗಳು ಅತೀತದಲ್ಲಿಯು ಹಾಗು ಭವಿಷ್ಯದಲ್ಲಿಯು ಅನಿತ್ಯವಾಗಿವೆ, ವರ್ತಮಾನದಲ್ಲಿಯು ರೂಪಗಳು ಅನಿತ್ಯವೆಂಬುದರಲ್ಲಿ ಸಂದೇಹವಿಲ್ಲ. ಇದನ್ನು ದಶರ್ಿಸಿದಾಗ ಆರ್ಯ ಶ್ರಾವಕನು ಆತೀತದ ರೂಪಗಳ ಅಪೇಕ್ಷೆಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ರೂಪಗಳ ಬಗ್ಗೆ ಭವಿಷ್ಯದಲ್ಲಿಯು ಯಾವುದೇ ಅಪೇಕ್ಷೆಗಳನ್ನು ಇಡಲಾರನು, ವರ್ತಮಾನದಲ್ಲಿಯು ಆತನು ರೂಪಗಳ ಬಗ್ಗೆ ವಿಕಷರ್ಿತನಾಗುತ್ತಾನೆ. ವಿರಾಗ ಹೊಂದುತ್ತಾನೆ, ನಿರೋಧ ಪ್ರಾಪ್ತಿಮಾಡುತ್ತಾನೆ. ಭಿಕ್ಷುಗಳೇ ಹಾಗೆಯೇ ಶಬ್ದಗಳ... ಗಂಧ... ರಸಸ್ವಾದ... ದೇಹದಿಂದ ಸ್ಪಶರ್ಿಸುವಂತಹುದು... ಮನಸ್ಸಿಗೆ ತಾಕುವ ವಿಷಯ ವಸ್ತುಗಳು ಅತೀತದಲ್ಲಿಯು ಅನಿತ್ಯವಾಗಿದೆ. ಹಾಗೆಯೇ ಮುಂದೆಯು (ಭವಿಷ್ಯದಲ್ಲಿಯು) ಅನಿತ್ಯವಾಗಿರುತ್ತದೆ. ವರ್ತಮಾನದಲ್ಲಿಯು ಇವು ಅನಿತ್ಯವೆನ್ನುವುದರಲ್ಲಿ ಸಂದೇಹವಿಲ್ಲ. ಇದನ್ನು ದಶರ್ಿಸಿದ ಆರ್ಯ ಶ್ರಾವಕನು ಅತೀತದಲ್ಲಿನ ಮಾನಸಿಕ ವಿಷಯಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ಮಾನಸಿಕ ವಿಷಯ ವಸ್ತುಗಳ ಬಗ್ಗೆ ಭವಿಷ್ಯದಲ್ಲಿಯೂ ಯಾವುದೇ ಸಂಕಲ್ಪ ಅಪೇಕ್ಷೆಗಳನ್ನು ಇಡಲಾರನು. ವರ್ತಮಾನದಲ್ಲಿಯು ಮಾನಸಿಕ ವಿಷಯಗಳಿಂದ (ವಿಚಾರ) ವಿಕಷರ್ಿತನಾಗುತ್ತಾನೆ, ವಿರಾಗ ಹೊಂದುತ್ತಾನೆ ಮತ್ತು ನಿರೋಧ ಪ್ರಾಪ್ತಿಮಾಡುತ್ತಾನೆ.

35.1.11. ಬಾಹಿದುಕ್ಖಾತೀತನಾಗತ ಸುತ್ತಂ
                11. ಭಿಕ್ಷುಗಳೇ, ರೂಪಗಳು ಅತೀತದಲ್ಲಿಯು ಹಾಗು ಭವಿಷ್ಯದಲ್ಲಿಯು ದುಃಖಕರವಾಗಿವೆ, ವರ್ತಮಾನದಲ್ಲಿಯು ರೂಪಗಳು ದುಃಖಕರವೆಂಬುದರಲ್ಲಿ ಸಂದೇಹವಿಲ್ಲ. ಇದನ್ನು ದಶರ್ಿಸಿದಾಗ ಆರ್ಯ ಶ್ರಾವಕನು ಆತೀತದ ರೂಪಗಳ ಅಪೇಕ್ಷೆಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ರೂಪಗಳ ಬಗ್ಗೆ ಭವಿಷ್ಯದಲ್ಲಿಯು ಯಾವುದೇ ಅಪೇಕ್ಷೆಗಳನ್ನು ಇಡಲಾರನು, ವರ್ತಮಾನದಲ್ಲಿಯು ಆತನು ರೂಪಗಳ ಬಗ್ಗೆ ವಿಕಷರ್ಿತನಾಗುತ್ತಾನೆ. ವಿರಾಗ ಹೊಂದುತ್ತಾನೆ, ನಿರೋಧ ಪ್ರಾಪ್ತಿಮಾಡುತ್ತಾನೆ. ಭಿಕ್ಷುಗಳೇ ಹಾಗೆಯೇ ಶಬ್ದಗಳ... ಗಂಧ... ರಸಸ್ವಾದ... ದೇಹದಿಂದ ಸ್ಪಶರ್ಿಸುವಂತಹುದು... ಮನಸ್ಸಿಗೆ ತಾಕುವ ವಿಷಯ ವಸ್ತುಗಳು ಅತೀತದಲ್ಲಿಯು ದುಃಖಕರವಾಗಿದೆ. ಹಾಗೆಯೇ ಮುಂದೆಯು (ಭವಿಷ್ಯದಲ್ಲಿಯು) ದುಃಖಕರವಾಗಿರುತ್ತದೆ. ವರ್ತಮಾನದಲ್ಲಿಯು ಇವು ದುಃಖಕರವೆನ್ನುವುದರಲ್ಲಿ ಸಂದೇಹವಿಲ್ಲ. ಇದನ್ನು ದಶರ್ಿಸಿದ ಆರ್ಯ ಶ್ರಾವಕನು ಅತೀತದಲ್ಲಿನ ಮಾನಸಿಕ ವಿಷಯಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ಮಾನಸಿಕ ವಿಷಯ ವಸ್ತುಗಳ ಬಗ್ಗೆ ಭವಿಷ್ಯದಲ್ಲಿಯೂ ಯಾವುದೇ ಸಂಕಲ್ಪ ಅಪೇಕ್ಷೆಗಳನ್ನು ಇಡಲಾರನು. ವರ್ತಮಾನದಲ್ಲಿಯು ಮಾನಸಿಕ ವಿಷಯಗಳಿಂದ (ವಿಚಾರ) ವಿಕಷರ್ಿತನಾಗುತ್ತಾನೆ, ವಿರಾಗ ಹೊಂದುತ್ತಾನೆ ಮತ್ತು ನಿರೋಧ ಪ್ರಾಪ್ತಿಮಾಡುತ್ತಾನೆ.

35.1.12. ಬಾಹಿರಾನಿಚ್ಛಾತೀತನಾಗತ ಸುತ್ತಂ
                12. ಭಿಕ್ಷುಗಳೇ, ರೂಪಗಳು ಅತೀತದಲ್ಲಿಯು ಹಾಗು ಭವಿಷ್ಯದಲ್ಲಿಯು ಅನಾತ್ಮವಾಗಿವೆ, ವರ್ತಮಾನದಲ್ಲಿಯು ರೂಪಗಳು ಅನಾತ್ಮವೆಂಬುದರಲ್ಲಿ ಸಂದೇಹವಿಲ್ಲ. ಇದನ್ನು ದಶರ್ಿಸಿದಾಗ ಆರ್ಯ ಶ್ರಾವಕನು ಆತೀತದ ರೂಪಗಳ ಅಪೇಕ್ಷೆಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ರೂಪಗಳ ಬಗ್ಗೆ ಭವಿಷ್ಯದಲ್ಲಿಯು ಯಾವುದೇ ಅಪೇಕ್ಷೆಗಳನ್ನು ಇಡಲಾರನು, ವರ್ತಮಾನದಲ್ಲಿಯು ಆತನು ರೂಪಗಳ ಬಗ್ಗೆ ವಿಕಷರ್ಿತನಾಗುತ್ತಾನೆ. ವಿರಾಗ ಹೊಂದುತ್ತಾನೆ, ನಿರೋಧ ಪ್ರಾಪ್ತಿಮಾಡುತ್ತಾನೆ. ಭಿಕ್ಷುಗಳೇ ಹಾಗೆಯೇ ಶಬ್ದಗಳ... ಗಂಧ... ರಸಸ್ವಾದ... ದೇಹದಿಂದ ಸ್ಪಶರ್ಿಸುವಂತಹುದು... ಮನಸ್ಸಿಗೆ ತಾಕುವ ವಿಷಯ ವಸ್ತುಗಳು ಅತೀತದಲ್ಲಿಯು ಅನಾತ್ಮವಾಗಿದೆ. ಹಾಗೆಯೇ ಮುಂದೆಯು (ಭವಿಷ್ಯದಲ್ಲಿಯು) ಅನಾತ್ಮವಾಗಿರುತ್ತದೆ. ವರ್ತಮಾನದಲ್ಲಿಯು ಇವು ಅನಾತ್ಮವೆನ್ನುವುದರಲ್ಲಿ ಸಂದೇಹವಿಲ್ಲ. ಇದನ್ನು ದಶರ್ಿಸಿದ ಆರ್ಯ ಶ್ರಾವಕನು ಅತೀತದಲ್ಲಿನ ಮಾನಸಿಕ ವಿಷಯಗಳನ್ನು ದೂರೀಕರಿಸುತ್ತಾನೆ. ಹಾಗೆಯೇ ಮಾನಸಿಕ ವಿಷಯ ವಸ್ತುಗಳ ಬಗ್ಗೆ ಭವಿಷ್ಯದಲ್ಲಿಯೂ ಯಾವುದೇ ಸಂಕಲ್ಪ ಅಪೇಕ್ಷೆಗಳನ್ನು ಇಡಲಾರನು. ವರ್ತಮಾನದಲ್ಲಿಯು ಮಾನಸಿಕ ವಿಷಯಗಳಿಂದ (ವಿಚಾರ) ವಿಕಷರ್ಿತನಾಗುತ್ತಾನೆ, ವಿರಾಗ ಹೊಂದುತ್ತಾನೆ ಮತ್ತು ನಿರೋಧ ಪ್ರಾಪ್ತಿಮಾಡುತ್ತಾನೆ.



ಪ್ರಥಮ ಅನಿಚ್ಚವರ್ಗ ಮುಗಿಯಿತು.

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...