Wednesday 6 June 2018

Samyutta nikaya 40 ಮೋಗ್ಗಲಾನ ಸಂಯುತ್ತಂ

ಮೋಗ್ಗಲಾನ ಸಂಯುತ್ತಂ


1.ಪಠಮಝಾನ ಪಞ್ಞಾ ಸುತ್ತಂ

332 .ಒಮ್ಮೆ ಅಯುಷ್ಮಂತರಾದ ಮಹಾಮೊಗ್ಗಲಾನರವರು ಸಾವಸ್ಥಿಯಲ್ಲಿನ ಆನಾಥಪಿಂಡಿಕನ ಜೇತವನದಲ್ಲಿ ವಿಹರಿಸುತ್ತಿದ್ದರು, ಆಗ ಮೊಗ್ಗಲಾನರು ಬಿಕ್ಖುಗಳನ್ನು ಕುರಿತು ಹೀಗೆ ಸಂಬೋಧಿಸಿದರು: ಅಯುಷ್ಮಂತ ಭಿಕ್ಖುಗಳೇ,ಆಗ ಅವರು ಸಹಾ ಆಯುಷ್ಮಂತರೇಎಂದರು. ಆಗ ಮೊಗ್ಗಲಾನರು ಭಿಕ್ಖಗಳೊಂದಿಗೆ ಹೀಗೆ ನುಡಿದರು:
ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತುಪ್ರಥಮ ಝಾನ, ಪ್ರಥಮ ಝಾನ ಎನ್ನುತ್ತಾರಲ್ಲ ಏನಿದು ಪ್ರಥಮ ಝಾನ ? ಆಗ ಮಿತ್ರರೇ ಉತ್ತರವು ಹೀಗೆ ಹೋಳೆಯಿತುಇಲ್ಲಿ ಎಲ್ಲಾ ವಿಧವಾದ ಕಾಮಸುಖಗಳಿಂದ ವಿಮುಖವಾಗಿ, ಅಕುಶಸ್ಥಿತಿಗಳಿಂದ ಬರಿದಾಗಿ, ಭಿಕ್ಖುವು ಪ್ರಥಮ ಝಾನದಲ್ಲಿ ಪ್ರವೇಶಿಸಿ ವಿಹರಿಸುತ್ತಾನೆ. ಅದು  ವಿತರ್ಕ, ವಿಚಾರಗಳಿಂದ ಕೂಡಿ, ಏಕಾಂತದಿಂದ ಉಂಟಾದ ಪೀತಿ(ಆನಂದ),ಸುಖಗಳಿಂದ ಕೂಡಿರುತ್ತದೆ. ಇದೇ ಪ್ರಥಮ ಧ್ಯಾನವಾಗಿದೆ. ನಂತರ ಮಿತ್ರರೆ ಕಾಮಸುಖಗಳಿಂದ ವಿಮುಖನಾಗಿ, ಅಕುಶಸ್ಥಿತಿಗಳಿಂದ ಬರಿದಾಗಿ, ನಾನು ಪ್ರಥಮ ಝಾನದಲ್ಲಿ ಪ್ರವೇಶಿಸಿರುವಾಗ ಇಂದ್ರೀಯಸುಖಗಳ ಸಂಜ್ಞೆಯು ಹಾಗು ಗಮನವು ದಾಳಿಮಾಡಿತು.
ಆಗ ಭಗವಾನರು ಇದ್ಧಿಬಲದಿಂದಾಗಿ ಕಾಣಿಸಿಕೊಂಡು ಹೀಗೆ ನುಡಿದರು.ಮೊಗ್ಗಲಾನ ಮೊಗ್ಗಲಾನ ಅಲಕ್ಷಿಸಬೇಡ,ಬ್ರಾಹ್ಮಣನೇ ಪ್ರಥಮ ಝಾನದ ಬಗ್ಗೆ ಅಲಕ್ಷ ಬೇಡ, ನಿನ್ನ ಮನಸ್ಸನ್ನು ಪ್ರಥಮ ದ್ಯಾನದ ಬಗ್ಗೆ ಸಮಾಹಿತಗೋಳಿಸು, ಏಕಾಗ್ರಿತಗೊಳಿಸು,  ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಕಾಮಸುಖಗಳಿಂದ ವಿಮುಖವಾಗಿ, ಅಕುಶಸ್ಥಿತಿಗಳಿಂದ ಬರಿದಾಗಿ, ವಿತರ್ಕ, ವಿಚಾರಗಳಿಂದ ಕೂಡಿ, ಏಕಾಂತದಿಂದ ಉಂಟಾದ ಪೀತಿ(ಆನಂದ), ಸುಖಗಳಿಂದ ಕೂಡಿ ಪ್ರಥಮ ಝಾನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


2. ದುತಿಯ ಝಾನ(ಧ್ಯಾನ) ಪಞ್ಞಾ ಸುತ್ತಂ

333. ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತದ್ವಿತೀಯ ಝಾನ ದ್ವಿತೀಯ ಝಾನ ಎನ್ನುತ್ತಾರಲ್ಲ ಯಾವುದಕ್ಕೆ ದ್ವಿತೀಯ ಝಾನವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು- ಇಲ್ಲಿ ಭಿಕ್ಷುವು ವಿತರ್ಕ ಹಾಗು ವಿಚಾರವನ್ನು ನಿಮರ್ೂಲವನ್ನಾಗಿಸಿ ದ್ವಿತೀಯ ಝಾನಕ್ಕೆ ಪ್ರವೇಶಿಸುತ್ತಾನೆ, ಅದು ವಿತರ್ಕ ಹಾಗು ವಿಚಾರಕ್ಕೆ ಅತೀತವಾಗಿ ಅಂತರಿಕ ಶ್ರದ್ಧೆಯಿಂದ ಹಾಗು ಚಿತ್ತದ ಏಕೋಭಾವದಿಂದ ಕೂಡಿರುತ್ತದೆ ಮತ್ತು ಸಮಾದಿಯಿಂದ ಪೀತಿ(ಆನಂದ) ಹಾಗು ಸುಖ ಉತ್ಪನ್ನವಾಗಿರುತ್ತದೆ.(ಕೂಡಿರುತ್ತದೆ). ಇದಕ್ಕೆ ದ್ವಿತೀಯ ಧ್ಯಾನವೆನ್ನುವರು.ಹೀಗೆ ಮಿತ್ರರೇ ನಾನು ವಿತರ್ಕ ಹಾಗು ವಿಚಾರವನ್ನು ನಿಮರ್ೂಲವನ್ನಾಗಿಸಿ ದ್ವಿತೀಯ ಝಾನಕ್ಕೆ ಪ್ರವೇಶಿಸಿ,  ವಿತರ್ಕ ಹಾಗು ವಿಚಾರಕ್ಕೆ ಅತೀತವಾಗಿ ಅಂತರಿಕ ಶ್ರದ್ಧೆಯಿಂದ ಹಾಗು ಚಿತ್ತದ ಏಕೋಭಾವದಿಂದ ಕೂಡಿದ ಮತ್ತು ಸಮಾದಿಯಿಂದ ಪೀತಿ(ಆನಂದ) ಹಾಗು ಸುಖ ಉತ್ಪನ್ನವಾದ ಆ ಸ್ಥಿತಿಯಲ್ಲಿರುವಾಗ ನನ್ನಲ್ಲಿ ವಿರ್ತಕ ಹಾಗು ವಿಚಾರವು ದಾಳಿ ಮಾಡಿತು.
   ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ದ್ವಿತೀಯ ಧ್ಯಾನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ದ್ವಿತೀಯ ಝಾನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ , ವಿತರ್ಕ, ವಿಚಾರಗಳಿಂದ ದೂರಾಗಿ ಹೀಗೆಯೇ ದ್ವಿತೀಯ ಝಾನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜಞ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


3. ತತಿಯ ಝಾನ(ಧ್ಯಾನ) ಪಞ್ಞಾ ಸುತ್ತಂ

334. ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತತ್ರಿತೀಯ ಝಾನ ದ್ವಿತೀಯ ಝಾನ ಎನ್ನುತ್ತಾರಲ್ಲ ಯಾವುದಕ್ಕೆ ತ್ರಿತೀಯ ಝಾನವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು- ಇಲ್ಲಿ ಭಿಕ್ಷುವು ಆನಂದವನ್ನು (ಪೀತಿ)ನಿಮರ್ೂಲವನ್ನಾಗಿಸಿ ತ್ರಿತೀಯ ಝಾನಕ್ಕೆ ಪ್ರವೇಶಿಸುತ್ತಾನೆ, ಅದು ಆನಂದಕ್ಕೆ ಅತೀತವಾಗಿ ವಿರಾಗ ಹೊಂದಿ ಉಪೇಕ್ಷಯಿಂದ ಕೂಡಿದ ಸುಖದಿಂದಾಗಿ ಕಾಯವೆಲ್ಲವೂ ಆ ಆದ್ಭುತ ಸುಖದಿಂದ ಕೂಡಿ ವಿಹರಿಸುತ್ತಾನೆ. ಅ ದಿವ್ಯ ಸುಖಕ್ಕೆ ಆರ್ಯರು ಉಪೆಕ್ಖ(ಸಮಚಿತ್ತತೆ)ಯಿಂದ ಕೂಡಿದ ಸ್ಮ್ರತಿವಂತನು ವಿಹರಿಸುವ ಸುಖವಿಹಾರೆಂದು ಕರೆಯುತ್ತಾರೆ ಇದನ್ನೇ ತ್ರತೀಯ ಧ್ಯಾನವೆನ್ನುವರು.ಹೀಗೆ ಮಿತ್ರರೇ ಹೀಗೆ ನಾನು ಆನಂದವನ್ನು (ಪೀತಿ)ನಿಮರ್ೂಲವನ್ನಾಗಿಸಿ ತ್ರಿತೀಯ ಝಾನಕ್ಕೆ ಪ್ರವೇಶಿಸಿ, ಆನಂದಕ್ಕೆ ಅತೀತವಾಗಿ ವಿರಾಗ ಹೊಂದಿ ಉಪೇಕ್ಷಯಿಂದ ಕೂಡಿದ ಸುಖದಿಂದಾಗಿ ಕಾಯವೆಲ್ಲವೂ ಆ ಆದ್ಭುತ ಸುಖದಿಂದ ಕೂಡಿ ವಿಹರಿಸುತ್ತದಾಗ ಚಿತ್ತದ ಏಕೋಭಾವದಿಂದ ಕೂಡಿದ ಮತ್ತು ಉಪೇಕ್ಷೇಯ ಹಾಗು ಸುಖ ಉತ್ಪನ್ನವಾದ ಆ ಸ್ಥಿತಿಯಲ್ಲಿರುವಾಗ ನನ್ನಲ್ಲಿ ಆನಂದವುು ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ  ತ್ರತೀಯ ಧ್ಯಾನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ತ್ರತೀಯ ಝಾನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ , ಆನಂದದಿಂದ ದೂರಾಗಿ ಹೀಗೆಯೇ ತ್ರತೀಯ ಝಾನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜಞ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


4.ಚತುತ್ಥ ಝಾನ (ಧ್ಯಾನ) ಪಞ್ಞಾ ಸುತ್ತಂ

335. ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈ ರೀತಿಯ ಯೋಚನೆಯುಂಟಾಯಿತಚತುತ್ಥ ಝಾನ ಚತುತ್ಥಝಾನ ಎನ್ನುತ್ತಾರಲ್ಲ ಯಾವುದಕ್ಕೆ ಚತುತ್ಥ ಝಾನವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು- ಇಲ್ಲಿ ಭಿಕ್ಖುವು ಸುಖವನ್ನು ಹಾಗು ದುಖಃವನ್ನು ವಜರ್ಿಸುತ್ತಾ, ಹಿಂದಿನ ಸುಖಪೂರ್ವಕ ಹಾಗು ದುಖಃಪೂರ್ವಕ ಮನಸ್ಥಿತಿಗಳೆಲ್ಲವನ್ನು ದಾಟುತ್ತಾ ,ಚತುರ್ಥ ಝಾನವನ್ನು ಪ್ರವೇಶಿಸಿ ವಿಹರಿಸುತ್ತಾನೆ, ಆ ದಿವ್ಯಸ್ಥಿತಿಯು ಸುಖವಲ್ಲದ ಹಾಗು ದುಃಖವಲ್ಲದ ಉಪೇಕ್ಷೇಭಾವದಿಂದ(ಸಮಚಿತ್ತತೆ) ಕೂಡಿದ್ದು ಆ ಸ್ಥಿತಿಯ ಜಾಗ್ರತೆಯಿಂದ ಕೂಡಿರುತ್ತಾನೆ. ಇದಕ್ಕೆ ಚತುರ್ಥ ಝಾನವೆನ್ನುವರು. .ಹೀಗೆ ಮಿತ್ರರೇ ನಾನು ಸುಖವನ್ನು ಹಾಗು ದುಖಃವನ್ನು ವಜರ್ಿಸುತ್ತಾ, ಹಿಂದಿನ ಸುಖಪೂರ್ವಕ ಹಾಗು ದುಖಃಪೂರ್ವಕ ಮನಸ್ಥಿತಿಗಳೆಲ್ಲವನ್ನು ದಾಟುತ್ತಾ ,ಚತುರ್ಥ ಝಾನವನ್ನು ಪ್ರವೇಶಿಸಿ ವಿಹರಿಸುತ್ತಿದ್ದಾಗ, ಆ ದಿವ್ಯಸ್ಥಿತಿಯು ಸುಖವಲ್ಲದ ಹಾಗು ದುಃಖವಲ್ಲದ ಉಪೇಕ್ಷೇಭಾವದಿಂದ(ಸಮಚಿತ್ತತೆ) ಕೂಡಿದ್ದು ಆ ಸ್ಥಿತಿಯ ಜಾಗ್ರತೆಯಿಂದ ಕೂಡಿದ್ದಾಗ ಸುಖದಿಂಧ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ಚತುತ್ಥ ಧ್ಯಾನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ಚತುರ್ಥಝಾನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ,ಸುಖದುಃಖಗಳಿಂದ ದೂರಾಗಿ ಹೀಗೆಯೇ ಚತುರ್ಥಝಾನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜಞ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


5. ಆಕಾಸನಞಚಾಯತನ ಪಞ್ಞಾ  ಸುತ್ತಂ

336. ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈರೀತಿಯಯೋಚನೆಯುಂಟಾಯಿತು ಆಕಾಸನಂಚಾಯತನ, ಆಕಾಸನಂಚಾಯತನ ಎನ್ನುತ್ತಾರಲ್ಲ ಯಾವುದಕ್ಕೆ ಆಕಾಸನಂಚಾಯತನವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ  ಆಕಾರಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಇಂದ್ರೀಯಗಳ ಗುರುತುಗಳನ್ನು ದಾಟಿಹೋಗಿ, ವೈವಿಧ್ಯತೆಗಳಿಗೆಲ್ಲಾ ಗಮನ ನೀಡದೆ, ಕೇವಲ ಆಕಾಶವು ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ  ಆಕಾಸನಂಚಾಯತನ ಎನ್ನುವರು.ಹೀಗೆ ಮಿತ್ರರೇ ನಾನು  ಆಕಾರಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಇಂದ್ರೀಯಗಳ ಗುರುತುಗಳನ್ನು ದಾಟಿಹೋಗಿ, ವೈವಿಧ್ಯತೆಗಳಿಗೆಲ್ಲಾ ಗಮನ ನೀಡದೆ, ಕೇವಲ ಆಕಾಶವು ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ಆಕಾರಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ಆಕಾಸನಂಚಾಯತನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ಆಕಾಸನಂಚಾಯತನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಆಕಾರಗಳಿಂದ ದೂರಾಗಿ ಆಕಾರಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಇಂದ್ರೀಯಗಳ ಗುರುತುಗಳನ್ನು ದಾಟಿಹೋಗಿ, ವೈವಿಧ್ಯತೆಗಳಿಗೆಲ್ಲಾ ಗಮನ ನೀಡದೆ, ಕೇವಲ ಆಕಾಶವು ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇ ಆಕಾಸನಂಚಾಯತನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜಞ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


6. ವಿನ್ಯಾನಂಚಾಯತನ ಪಞ್ಞಾ ಸುತ್ತಂ

337. ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈರೀತಿಯ ಯೋಚನೆಯುಂಟಾಯಿತು ವಿನ್ಯಾನಂಚಾಯತನ, ವಿನ್ಯಾನಂಚಾಯತನ,  ಎನ್ನುತ್ತಾರಲ್ಲ ಯಾವುದಕ್ಕೆ ವಿನ್ಯಾನಂಚಾಯತನ, ವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ  ಆಕಾಸನಂಚಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ ಆಕಾಶಕ್ಕೆ ಗಮನ ನೀಡದೆ, ಕೇವಲ ವಿನ್ಯಾನ ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ  ವಿನ್ಯಾನಂಚಾಯತನ,  ಎನ್ನುವರು.ಹೀಗೆ ಮಿತ್ರರೇ ನಾನು  ಆಕಾಸನಂಚಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಕೇವಲ ವಿನ್ಯಾನ ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ಆಕಾಸನಂಚಾಯತನಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ವಿನ್ಯಾನಂಚಾಯತನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ವಿನ್ಯಾನಂಚಾಯತನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಆಕಾಸನಂಚಾಯತನಗಳಿಂದ ದೂರಾಗಿ ಆಕಾಶದ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಬೇರಡೆ ಗಮನ ನೀಡದೆ, ಕೇವಲ ವಿನ್ಯಾನವು (ಅರಿವು)ಅನಂತ ಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇ ವಿನ್ಯಾನಂಚಾಯತನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


7. ಅಕಿಂಚನ್ಯಾಯತನ ಪಞ್ಞಾ ಸುತ್ತಂ

338..ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈರೀತಿಯ ಯೋಚನೆಯುಂಟಾಯಿತು ಅಕಿಂಚನ್ಯಾಯತನ,ಅಕಿಂಚನ್ಯಾಯತನ  ಎನ್ನುತ್ತಾರಲ್ಲ ಯಾವುದಕ್ಕೆ ಅಕಿಂಚನ್ಯಾಯತನ, ವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ  ವಿನ್ಯಾನಂಚಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ ವಿನ್ಯಾನಕ್ಕೆ ಗಮನ ನೀಡದೆ, ಕೇವಲ ಏನೂ ಇಲ್ಲ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ  ಅಕಿಂಚನ್ಯಾಯತನ  ಎನ್ನುವರು.ಹೀಗೆ ಮಿತ್ರರೇ ನಾನು  ವಿನ್ಯಾನಂಚಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಕೇವಲ ಏನೂ ಇಲ್ಲಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ವಿನ್ಯಾನಂಚಾಯತನಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ಅಕಿಂಚನ್ಯಾಯತನದ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ಅಕಿಂಚನ್ಯಾಯತನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ವಿನ್ಯಾನಂಚಾಯತನಗಳಿಂದ ದೂರಾಗಿ ವಿನ್ಯಾನದ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಬೇರಡೆ ಗಮನ ನೀಡದೆ, ಕೇವಲ ಏನೂ ಇಲ್ಲಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇ ಅಕಿಂಚನ್ಯಾಯತನದಲ್ಲಿ ಪ್ರವೇಶಿಸತೊಡಗಿದೆನು. ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜಞ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


8. ನೇವಸನ್ಯನಾಸನ್ಯಾಯತನ ಪಞ್ಞಾ ಸುತ್ತಂ

339..ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈರೀತಿಯ ಯೋಚನೆಯುಂಟಾಯಿತು ನೇವಸನ್ಯನಾಸನ್ಯಾಯತನ, ನೇವಸನ್ಯನಾಸನ್ಯಾಯತನ(ಗ್ರಹಿಕೆ ಇಲ್ಲ ಗ್ರಹಿಕೆ ಇಲ್ಲದೆಯು ಇಲ್ಲ) ಎನ್ನುತ್ತಾರಲ್ಲ ಯಾವುದಕ್ಕೆ ನೇವಸನ್ಯನಾಸನ್ಯಾಯತನವೆನ್ನುವರು? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ  ಅಕಿಂಚನ್ಯಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ ವಿನ್ಯಾನಕ್ಕೆ ಗಮನ ನೀಡದೆ, ಕೇವಲ ನೇವಸನ್ಯನಾಸನ್ಯಾಯತನ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ  ನೇವಸನ್ಯನಾಸನ್ಯಾಯತನ  ಎನ್ನುವರು.ಹೀಗೆ ಮಿತ್ರರೇ ನಾನು  ಅಕಿಂಚನ್ಯಾಯತನಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಕೇವಲ ನೇವಸನ್ಯನಾಸನ್ಯಾಯತನಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ ಅಕಿಂಚನ್ಯಾಯತನಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ನೇವಸನ್ಯನಾಸನ್ಯಾಯತನ ಬಗ್ಗೆ ಅರ್ಲಕ್ಷ ಬೇಡ,ನಿನ್ನ ಮನಸ್ಸನ್ನು ನೇವಸನ್ಯನಾಸನ್ಯಾಯತನದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಅಕಿಂಚನ್ಯಾಯತನಗಳಿಂದ ದೂರಾಗಿ ಆ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಬೇರಡೆ ಗಮನ ನೀಡದೆ, ಕೇವಲ ನೇವಸನ್ಯನಾಸನ್ಯಾಯತನಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇ ನೇವಸನ್ಯನಾಸನ್ಯಾಯತನದಲ್ಲಿ ಪ್ರವೇಶಿಸತೊಡಗಿದೆನು.  ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜ್ಞಾ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


9. ಅನಿಮಿತ್ತ (ಚಿನ್ಹರಹಿತ) ಪಞ್ಞಾ ಸುತ್ತಂ

340..ಮಿತ್ರರೇ ನಾನು ಏಕಾಂತದಲ್ಲಿದ್ದಾಗ ನನಗೆ ಈರೀತಿಯ ಯೋಚನೆಯುಂಟಾಯಿತು ಅನಿಮಿತ್ತ ಚೇತೋಸಮಾದಿ ನಿಮಿತ್ತ ಚೇತೋಸಮಾದಿ, ಎನ್ನುತ್ತಾರಲ್ಲ ಯಾವುದಕ್ಕೆ ಅನಿಮಿತ್ತ ಚೇತೋಸಮಾದಿವೆನ್ನುವರು ? ನಂತರ ಆಯುಷ್ಮಂತರು ಹೀಗೆ ಹೇಳಿದರು , ಆಗ ಮಿತ್ರರೇ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು ;ಇಲ್ಲಿ ಎಲ್ಲಾ ನಿಮಿತ್ತಗಳ(ಚಿನ್ಹೆಗಳ) ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ ಎಲ್ಲಾ ನಿಮಿತ್ತಗಳ(ಚಿನ್ಹೆಗಳಿ)ಗೆ ಗಮನ ನೀಡದೆ, ಕೇವಲ ಅನಿಮಿತ್ತ ಚೇತೋಸಮಾದಿ ಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಾನೆ ,ಇದನ್ನೇ  ಅನಿಮಿತ್ತ ಚೇತೋಸಮಾದಿ ಎನ್ನುವರು.ಹೀಗೆ ಮಿತ್ರರೇ ನಾನು  ಎಲ್ಲಾ ನಿಮಿತ್ತಗಳ(ಚಿನ್ಹೆಗಳ)ಗಳ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಕೇವಲ ಅನಿಮಿತ್ತ ಚೇತೋಸಮಾದಿಎಂಬ ಭಾವದಲ್ಲೇ ಜಾಗ್ರತನಾಗಿ ಈ ಆಧಾರದಲ್ಲೇ ವಿಹರಿಸುತ್ತಿದ್ದೆನು, ಆಗ  ನಿಮಿತ್ತಗಳ(ಚಿನ್ಹೆಗಳ)ಗಳಿಂದ ಕೂಡಿದ ಸಂಜ್ಞೆಯು ಹಾಗು ಗಮನವು ನನ್ನಲ್ಲಿ ದಾಳಿ ಮಾಡಿತು.
ಆಗ ಮಿತ್ರರೇ ಭಗವಾನರು ಇದ್ದಿಯ ಬಲದಿಂದಾಗಿ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಮೊಗ್ಗಲಾನ ಮೊಗ್ಗಲಾನ, ಅಲಕ್ಷಿಸಬೇಡ, ಬ್ರಾಹ್ಮಣನೇ ಈ ಅನಿಮಿತ್ತ ಚೇತೋಸಮಾದಿ ಬಗ್ಗೆ ಅರ್ಲಕ್ಷ ಬೇಡ, ನಿನ್ನ ಮನಸ್ಸನ್ನುಅನಿಮಿತ್ತ ಚೇತೋಸಮಾದಿದಲ್ಲೆ ಕೇಂದ್ರೀಕರಿಸು, ಏಕೋಭಾವವಿರಿಸು, ನಾನು ಹಾಗೆ ಮಾಡಿದೆನು. ನಂತರ ಮಿತ್ರರೇ ನಂತರದ ಸಂಧರ್ಭದಲ್ಲಿ ಎಲ್ಲಾ ನಿಮಿತ್ತಗಳ(ಚಿನ್ಹೆಗಳ)ಗಳಿಂದ ದೂರಾಗಿ ಆ ಸಂಜ್ಞೆಯನ್ನು ಪೂರ್ಣವಾಗಿ ಮೀರಿಹೋಗಿ ,ಸಮತಿಕ್ರಮಿಸಿ, ಬೇರಡೆ ಗಮನ ನೀಡದೆ, ಕೇವಲ ಅನಿಮಿತ್ತ ಚೇತೋಸಮಾದಿಎಂಬ ಭಾವದಲ್ಲೇ ಜಾಗ್ರತನಾಗಿ, ,ಹೀಗೆಯೇಅನಿಮಿತ್ತ ಚೇತೋಸಮಾದಿದಲ್ಲಿ ಪ್ರವೇಶಿಸತೊಡಗಿದೆನು.  ಮಿತ್ರರೇ ಒಬ್ಬನು ಈ ಶಿಷ್ಯನೇ ಗುರುವಿನ ಸಹಾಯದಿಂದ ಅಭಿಜಞ ಪ್ರಾಪ್ತಿಯ ಶ್ರೇಷ್ಟತ್ವ ಹೊಂದಿರುವವನು ಎಂದು ಯಾರ ಬಗ್ಗೆಯಾದರು ಹೇಳಿದರೆ ಖಂಡಿತವಾಗಿ ನಾನು ಅದಕ್ಕೆ ಅರ್ಹಪಾತ್ರನಾಗಿದ್ದೇನೆ.


10.ಸಕ್ಕ ಸುತ್ತಂ

1
341. ಒಮ್ಮೆ ಪರಮಪೂಜ್ಯ ಮೊಗ್ಗಲಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ಉಧ್ಯಾನದಲ್ಲಿ ವಿಹರಿಸುತ್ತಿದ್ದರು, ಆಗ ಬಲಶಾಲಿ ವ್ಯಕ್ತಿಯೊಬ್ಬ ಮಡಚಿದ ಕೈಯನ್ನು ವೇಗದಿಂದ ವಿಸ್ತಾರಮಾಡುವಷ್ಟು ಅಥವಾವಿಸ್ತರಿಸಿದ ಕೈಯನ್ನು ವೇಗದಿಂದ ಮಡಚುವಷ್ಟು ವೇಗದಲ್ಲಿ ಜೇತವನದಿಂದ ಕಣ್ಮರೆಯಾಗಿ ತಾವತಿಂಸ ದೇವಲೋಕದಲ್ಲಿ ಅವರ ನಡುವೆ ಪ್ರತ್ಯಕ್ಷರಾದರು. ಆಗ ಸಕ್ಕ ಹಾಗು 500 ದೇವತೆಗಳು ಭಕ್ತಿಯಿಂದ ಮೊಗ್ಗಲಾನರ ಬಳಿಗೆ ಸಮೀಪಿಸಿದರು ಹಾಗು ವಂದಿಸಿದರು ಹಾಗು ಗೌರವದಿಂದ ಒಂದೆಡೆ ನಿಂತರು. ಆಗ ಮೊಗ್ಗಲಾನರು ಅವರೊಂದಿಗೆ ಹಿಗೆ ಹೇಳಿದರು :
ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಎಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು ,ಹಾಗೆಯೆ ಧಮ್ಮದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಎಕೆಂದರೆ ಧಮ್ಮರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು ,ಹಾಗೆಯೆ ಸಂಘದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಎಕೆಂದರೆ ಸಂಘದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು.
ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು,ಬುದ್ಧರಲ್ಲಿ ಸರಣಾಗಮನವನ್ನು ಮಾಡುವುದು ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಎಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ ಮೊಗ್ಗಲಾನರವರೇ ಸಾಧು ,ಹಾಗೆಯೆ ಧಮ್ಮದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದೆ ಆಗಿದೆ ಎಕೆಂದರೆ ಧಮ್ಮರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ ಮಾರಿಸರಾದ ಮೊಗ್ಗಲಾನರೆ ಸಾಧು ,ಹಾಗೆಯೆ ಸಂಘದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಎಕೆಂದರೆ ಸಂಘದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ಮೊಗ್ಗಲಾನರವರೆ ಸಾಧು.

ನಂತರ ದೇವತೆಗಳೊಡೆಯ ಸಕ್ಕರು ಹಾಗು 600ದೇವತೆಗಳೊಂದಿಗೆ ಮೊಗ್ಗಲಾನರ ಬಳಿಗೆ ಬಂದರು ಹಾಗು.............700 ದೇವತೆಗಳೊಂದಿಗೆ.........800......80000 ದೇವತೆಗಳೊಂದಿಗೆ ಮೊಗ್ಗಲಾನರ ಬಳಿ ಸಮೀಪಿಸಿ ವಂದಿಸಿ ,ಗೌರವದಿಂದ ಒಂದೆಡೆ ನಿಂತರು, ಆಗ ಮಹಾಮೊಗ್ಗಲಾನರು ಅವರೊಂದಿಗೆ ಹೀಗೆ ನುಡಿದರು,; (ಆ ಸಂಭಾಷಣೆಯೆಲ್ಲಾ ಮೇಲಿನಂತೆಯೆ ಇದೆ.)
2
ನಂತರ ದೇವತೆಗಳೊಡೆಯ ಸಕ್ಕರು ಹಾಗು 500ದೇವತೆಗಳೊಂದಿಗೆ ಮೊಗ್ಗಲಾನರ ಬಳಿಗೆ ಬಂದರು  ಬಳಿ ಸಮೀಪಿಸಿ ವಂದಿಸಿ ,ಗೌರವದಿಂದ ಒಂದೆಡೆ ನಿಂತರು, ಆಗ ಮಹಾಮೊಗ್ಗಲಾನರು ಅವರೊಂದಿಗೆ ಹೀಗೆ ನುಡಿದರು,
ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಅದೆಂದರೆ, ಭಗವಾನರು ಹೀಗಿರುವರು ಅವರು ಅರಹಂತರು, ಸಮ್ಮಸಂಬುದ್ಧರು, ವಿಧ್ಯಾಚರಣಸಂಪನ್ನರು, ಸುಗತರು, ಲೋಕವಿದರು, ಅನುತ್ತರ ದಮ್ಯಸಾರಥಿಯು, ಬುದ್ಧರು ಹಾಗು ಭಗವಾನರು ಆಗಿದ್ದಾರೆ. ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.
ಸಾಧು ದೇವಾಧಿಗಳೊಡೆಯ ಸಾಧು, ಧಮ್ಮದಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಹೇಗೆಂದರೆ,  ಭಗವಾನರಿಂದ ಧಮ್ಮವು ಬಹು ಚೆನ್ನಾಗಿ ವಿವರಿಸಲ್ಟಟ್ಟಿದೆ, ನೇರವಾಗಿ ನೋಡಬಹುದಾಗಿರುವಂತಹುದು, ಕಾಲವಿಳಂಬವಿಲ್ಲದೆ, ತಕ್ಷಣ ಫಲಕಾರಿಯು, ಬನ್ನಿ ಪರಿಕ್ಷಿಸಿ ಎಂದು ಆಹ್ವಾನಿಸುವಂತಹುದು, ಊದ್ರ್ವಗಾಮಿಯು ಉನ್ನತಿಕಾರಕವು, ಪ್ರತಿಯೊಬ್ಬ ಪ್ರಾಜ್ಞನಿಂದ ಅರಿಯಲ್ಪಡುವಂತಹುದು.ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.
ಸಾಧು ದೇವಾಧಿಗಳೊಡೆಯ ಸಾಧು, ಸಂಘದಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಹೇಗೆಂದರೆ, ಭಗವಾನರ ಶ್ರಾವಕಸಂಘವು ಒಳ್ಳೆಯ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ನೇರವಾದ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ಸತ್ಯದಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ಯೋಗ್ಯವಾದ ಮಾರ್ಗವನ್ನು ಅನುಸರಿಸುತ್ತಿದೆ, ಈ ಶ್ರಾವಕ ಸಂಘವು ನಾಲ್ಕು ಜೊತೆಯ ವ್ಯಕ್ತಿಗಳಿಂದ ,ಎಂಟು ವಿಧದ ವ್ಯಕ್ತಿಗಳಿಂದ ಕೂಡಿದೆ, ಈ ಶ್ರೇಷ್ಟಸಂಘವು ದಾನಗಳಿಗೆ,ಆತೀಥ್ಯಕ್ಕೆ, ದಕ್ಷಣೆಗೆ, ಅಂಜಲಿಬದ್ಧರಾಗಿ ವಂದಿಸುವುದಕ್ಕೂ ಅರ್ಹವಾಗಿದೆ.ಲೋಕದಲ್ಲಿರುವ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.
  ಸಾಧು ದೇವಾಧಿಗಳೊಡೆಯ ಸಾಧು, ಶೀಲಗಳ ಹೊಂದಿರುವಿಕೆ ಆರ್ಯರಿಗೆ ಪ್ರೀಯವಾಗಿರುತ್ತವೆ. ಅಖಂಡ ಶೀಲ, ಅಛಿದ್ರ ಶೀಲ, ಅಕಳಂಕಿತ ಶೀಲ, ಅನಿಂದನೀಯ ಶೀಲ, ಇವುಗಳೆಲ್ಲವೂ ಜ್ಞಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿವೆ, ಅಂಟುಕೊಳ್ಳದಿರುವಿಕೆಗೆ ಸಹಾಯಕವಾಗಿದೆ,ಸಮಾಧಿಗೆ ಸಹಾಯಕಾರಿಯಾಗಿವೆ, ಏಕೆಂದರೆ ಶೀಲಗಳನ್ನು ಹೊಂದಿರುವಿಕೆ ಆರ್ಯರಿಗೆ ಪ್ರಿಯವಾದುದು, ಶೀಲಪಾಲನೆ ಮಾಡುವ ಜೀವಿಗಳು ಸಾವಿನ ನಂತರ ಸುಗತಿಯನ್ನು, ಸ್ವರ್ಗಲೋಕಗಳಲ್ಲಿ ಉದಯಿಸುತ್ತವೆ.
ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು,ಬುದ್ಧರಲ್ಲಿ ಧೃಡಶ್ರದ್ಧೆ ಹೊಂದಿರುವುದು  ತುಂಬಾ ಒಳ್ಳೆಯದು ,.................ಹಾಗೆಯೇ ಧಮ್ಮದಲ್ಲಿ ಧೃಡಶ್ರದ್ಧೆಹೊಂದಿರುವುದುು ತುಂಬಾ ಒಳ್ಳೆಯದು ......................... ಹಾಗೆಯೇ ಸಂಘದಲ್ಲಿ  ಧೃಡಶ್ರದ್ಧೆ ಹೊಂದಿರುವುದು ತುಂಬಾ ಒಳ್ಳೆಯದು ...............,ಅದೇರೀತಿ ಶೀಲಗಳನ್ನು ಹೊಂದಿರುವುದು ಆರ್ಯರಿಗೆ ಪ್ರೀಯವಾಗಿರುತ್ತವೆ. ಅಖಂಡ ಶೀಲ, ಅಛಿದ್ರ ಶೀಲ, ಅಕಳಂಕಿತ ಶೀಲ, ಅನಿಂದನೀಯ ಶೀಲ, ಇವುಗಳೆಲ್ಲವೂ ಜ್ಞಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿವೆ, ಅಂಟುಕೊಳ್ಳದಿರುವಿಕೆಗೆ ಸಹಾಯಕವಾಗಿದೆ,ಸಮಾಧಿಗೆ ಸಹಾಯಕಾರಿಯಾಗಿವೆ, ಏಕೆಂದರೆ ಶೀಲಗಳನ್ನು ಹೊಂದಿರುವಿಕೆ ಆರ್ಯರಿಗೆ ಪ್ರಿಯವಾದುದು, ಶೀಲಪಾಲನೆ ಮಾಡುವ ಜೀವಿಗಳು ಸಾವಿನ ನಂತರ ಸುಗತಿಯನ್ನು ಹೊಂದಿ ಸ್ವರ್ಗಲೋಕಗಳಲ್ಲಿ ಉದಯಿಸುತ್ತವೆ.
ನಂತರ ದೇವತೆಗಳೊಡೆಯ ಸಕ್ಕರು ಹಾಗು 600ದೇವತೆಗಳೊಂದಿಗೆ ಮೊಗ್ಗಲಾನರ ಬಳಿಗೆ ಬಂದರು ಹಾಗು.............700 ದೇವತೆಗಳೊಂದಿಗೆ.........800......80000 ದೇವತೆಗಳೊಂದಿಗೆ ಮೊಗ್ಗಲಾನರ ಬಳಿ ಸಮೀಪಿಸಿ ವಂದಿಸಿ ,ಗೌರವದಿಂದ ಒಂದೆಡೆ ನಿಂತರು, ಆಗ ಮಹಾಮೊಗ್ಗಲಾನರು ಅವರೊಂದಿಗೆ ಹೀಗೆ ನುಡಿದರು,; (ಆ ಸಂಭಾಷಣೆಯೆಲ್ಲಾ ಮೇಲಿನಂತೆಯೆ ಇದೆ.)
3
ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಎಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ. 
ಸಾಧು ದೇವಾಧಿಗಳೊಡೆಯ ಸಾಧು ,ಧಮ್ಮದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಎಕೆಂದರೆ ದಮ್ಮದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.
ಸಾಧು ದೇವಾಧಿಗಳೊಡೆಯ ಸಾಧು ,ಸಂಘದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಎಕೆಂದರೆ ಸಂಘದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.
  ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು,ಬುದ್ಧರಲ್ಲಿ ಸರಣಾಗಮನವನ್ನು ಮಾಡುವುದು ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಎಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹಾಗು  ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.
ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು, ಧಮ್ಮದಲ್ಲಿ ಸರಣಾಗಮನವನ್ನು ಮಾಡುವುದು ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಎಕೆಂದರೆ ಧಮ್ಮದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹಾಗು  ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.
ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು, ಸಂಘದಲ್ಲಿ ಸರಣಾಗಮನವನ್ನು ಮಾಡುವುದು ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಎಕೆಂದರೆ ಸಂಘದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹಾಗು  ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.

  ನಂತರ ದೇವತೆಗಳೊಡೆಯ ಸಕ್ಕರು ಹಾಗು 600ದೇವತೆಗಳೊಂದಿಗೆ ಮೊಗ್ಗಲಾನರ ಬಳಿಗೆ ಬಂದರು ಹಾಗು.............700 ದೇವತೆಗಳೊಂದಿಗೆ.........800......80000 ದೇವತೆಗಳೊಂದಿಗೆ ಮೊಗ್ಗಲಾನರ ಬಳಿ ಸಮೀಪಿಸಿ ವಂದಿಸಿ ,ಗೌರವದಿಂದ ಒಂದೆಡೆ ನಿಂತರು, ಆಗ ಮಹಾಮೊಗ್ಗಲಾನರು ಅವರೊಂದಿಗೆ ಹೀಗೆ ನುಡಿದರು,; (ಆ ಸಂಭಾಷಣೆಯೆಲ್ಲಾ ಮೇಲಿನಂತೆಯೆ ಇದೆ.)
4
ನಂತರ ದೇವತೆಗಳೊಡೆಯ ಸಕ್ಕರು ಹಾಗು 500ದೇವತೆಗಳೊಂದಿಗೆ ಮೊಗ್ಗಲಾನರ ಬಳಿಗೆ ಬಂದರು  ಬಳಿ ಸಮೀಪಿಸಿ ವಂದಿಸಿ ,ಗೌರವದಿಂದ ಒಂದೆಡೆ ನಿಂತರು, ಆಗ ಮಹಾಮೊಗ್ಗಲಾನರು ಅವರೊಂದಿಗೆ ಹೀಗೆ ನುಡಿದರು,
ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಅದೆಂದರೆ, ಭಗವಾನರು ಹೀಗಿರುವರು ಅವರು ಅರಹಂತರು, ಸಮ್ಮಸಂಬುದ್ಧರು, ವಿಧ್ಯಾಚರಣಸಂಪನ್ನರು, ಸುಗತರು, ಲೋಕವಿದರು, ಅನುತ್ತರ ದಮ್ಯಸಾರಥಿಯು, ಬುದ್ಧರು ಹಾಗು ಭಗವಾನರು ಆಗಿದ್ದಾರೆ. ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.
ಸಾಧು ದೇವಾಧಿಗಳೊಡೆಯ ಸಾಧು, ಧಮ್ಮದಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಹೇಗೆಂದರೆ,  ಭಗವಾನರಿಂದ ಧಮ್ಮವು ಬಹು ಚೆನ್ನಾಗಿ ವಿವರಿಸಲ್ಟಟ್ಟಿದೆ, ನೇರವಾಗಿ ನೋಡಬಹುದಾಗಿರುವಂತಹುದು, ಕಾಲವಿಳಂಬವಿಲ್ಲದೆ, ತಕ್ಷಣ ಫಲಕಾರಿಯು, ಬನ್ನಿ ಪರಿಕ್ಷಿಸಿ ಎಂದು ಆಹ್ವಾನಿಸುವಂತಹುದು, ಊದ್ರ್ವಗಾಮಿಯು ಉನ್ನತಿಕಾರಕವು, ಪ್ರತಿಯೊಬ್ಬ ಪ್ರಾಜ್ಞನಿಂದ ಅರಿಯಲ್ಪಡುವಂತಹುದು.ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.
ಸಾಧು ದೇವಾಧಿಗಳೊಡೆಯ ಸಾಧು, ಸಂಘದಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಹೇಗೆಂದರೆ, ಭಗವಾನರ ಶ್ರಾವಕಸಂಘವು ಒಳ್ಳೆಯ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ನೇರವಾದ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ಸತ್ಯದಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ಯೋಗ್ಯವಾದ ಮಾರ್ಗವನ್ನು ಅನುಸರಿಸುತ್ತಿದೆ, ಈ ಶ್ರಾವಕ ಸಂಘವು ನಾಲ್ಕು ಜೊತೆಯ ವ್ಯಕ್ತಿಗಳಿಂದ ,ಎಂಟು ವಿಧದ ವ್ಯಕ್ತಿಗಳಿಂದ ಕೂಡಿದೆ, ಈ ಶ್ರೇಷ್ಟಸಂಘವು ದಾನಗಳಿಗೆ,ಆತೀಥ್ಯಕ್ಕೆ, ದಕ್ಷಣೆಗೆ, ಅಂಜಲಿಬದ್ಧರಾಗಿ ವಂದಿಸುವುದಕ್ಕೂ ಅರ್ಹವಾಗಿದೆ.ಲೋಕದಲ್ಲಿರುವ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಘಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.

 1. ಚಂದನ ಸುತ್ತಂ



342. ನಂತರ ದೇವತೆಗಳೊಡೆಯ ಸಕ್ಕರು ಹಾಗು 600 ದೇವತೆಗಳೊಂದಿಗೆ ಮೊಗ್ಗಲಾನರ ಬಳಿಗೆ ಬಂದರು ಹಾಗು.............700 ದೇವತೆಗಳೊಂದಿಗೆ.........800......80000 ದೇವತೆಗಳೊಂದಿಗೆ ಮೊಗ್ಗಲಾನರ ಬಳಿ ಸಮೀಪಿಸಿ ವಂದಿಸಿ, ಗೌರವದಿಂದ ಒಂದೆಡೆ ನಿಂತರು, ಆಗ ಮಹಾಮೊಗ್ಗಲಾನರು ಅವರೊಂದಿಗೆ ಹೀಗೆ ನುಡಿದರು,; (ಆ ಸಂಭಾಷಣೆಯೆಲ್ಲಾ ಮೇಲಿನಂತೆಯೆ ಇದೆ.)
ನಂತರ ಚಂದನವೆಂಬ ಯುವ ದೇವ.....
ನಂತರ ಸುಯಾಮವೆಂಬ ಯುವ ದೇವ.....
ನಂತರ ಸಂತುಸಿತವೆಂಬ ಯುವ ದೇವ.....
ನಂತರ ವಸವತ್ತಿವೆಂಬ ಯುವ ದೇವ.....
(ಆ ಸಂಭಾಷಣೆಯೆಲ್ಲಾ ಮೇಲಿನಂತೆಯೆ ಇದೆ.)
ಮೊಗ್ಗಲಾನ ಸಂಯುತ್ತ ಸಮಾಪ್ತಿಯಾಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...