Wednesday 10 January 2018

ಸಂಯುತ್ತ ನಿಕಾಯ 3. ಸಬ್ಬವಗ್ಗೋ (ಸರ್ವ ವರ್ಗ) samyutta nikaya sabba vaggo

                                  3. ಸಬ್ಬವಗ್ಗೋ (ಸರ್ವ ವರ್ಗ)


35.3.1. ಸಬ್ಬ ಸುತ್ತಂ

23. ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ, ಅನಾಥಪಿಂಡಿಕನ ಜೇತವನದಲ್ಲಿದ್ದಗ ಭಗವಾನರು ಭಿಕ್ಷುಗಳೊಂದಿಗೆ ಹೀಗೆ ಸಂಬೋಧಿಸಿದರು: ಭಿಕ್ಷುಗಳೇ, ನಾನು ನಿಮಗೆ ಸರ್ವದ (ಎಲ್ಲದರ) ಬಗ್ಗೆ ಬೋಧಿಸುವೆನು. ಜಾಗ್ರತೆಯಿಂದ ಯೋಗ್ಯ ಗಮನದಿಂದ ಆಲಿಸಿರಿ. ಭಿಕ್ಷುಗಳೇ, ಎಲ್ಲದರ (ಸರ್ವ) ಬಗ್ಗೆ ಎಂದರೇನು? ಚಕ್ಷು ಮತ್ತು ರೂಪ ಎಲ್ಲವಾಗುತ್ತದೆ. ಕಿವಿ ಹಾಗು ಶಬ್ದಗಳು, ಮೂಗು ಹಾಗು ವಾಸನೆ, ನಾಲಿಗೆ ಹಾಗು ರುಚಿಯು, ದೇಹ ಹಾಗು ಸ್ಪರ್ಶಗಳು ಮತ್ತು ಮನಸ್ಸು ಹಾಗು ಧಮ್ಮಗಳು ಎಲ್ಲವಾಗುತ್ತವೆ. ಇವನ್ನೇ ಒಟ್ಟಾರೆ ಎಲ್ಲವೆಂದು ಹೇಳಲಾಗುತ್ತದೆ. ಹಾಗಲ್ಲದೆ ಭಿಕ್ಷುಗಳೇ ಇಲ್ಲಿ ಯಾರಾದರೊಬ್ಬನು ಹೀಗೆ ಹೇಳಬಹುದು. ಇವನ್ನು ಬಿಟ್ಟು ಬೇರೊಂದಿಗೆ ಅದನ್ನೇ ಎಲ್ಲಾ (ಸರ್ವ) ಎಂದು ಹೇಳಲಾಗುತ್ತದೆ ಎಂದು ಹೇಳಿದರೆ, ಅದು ಕೇವಲ ಆತನ ಬರಿದದ ಒಣ ಸ್ವಪ್ರಶಂಸೆಯಾಗಿರುತ್ತದೆ ಅಷ್ಟೇ. ಆತನಿಗೆ ಯೋಗ್ಯವಾಗಿ ಪ್ರತಿ ಪ್ರಶ್ನೆಗಳನ್ನು ಹಾಕಿದರೆ ಆತನು ಉತ್ತರಿಸಲಾರನು. ಆತನು ಮತ್ತಷ್ಟು ಕೆರಳಲ್ಪಡುತ್ತಾನೆ. ಏಕೆ ಹೀಗೆ? ಏಕೆಂದರೆ ಅವನ್ನು ಉತ್ತರಿಸುವಂತಹ ಕ್ಷೇತ್ರ ಅವನದಲ್ಲವಾಗಿದೆ.

35.3.2. ಪಹಾನ ಸುತ್ತಂ (ಹೋಗಲಾಡಿಸುವಿಕೆಯ (ವಜರ್ಿಸುವ) ಸೂತ್ರ)

24. ಶ್ರಾವಸ್ಥಿಯಲ್ಲಿ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ನಾನು ನಿಮಗೆ ಸರ್ವವನ್ನು ವಜರ್ಿಸುವಿಕೆಯ ಧಮ್ಮವನ್ನು ಉಪದೇಶಿಸುತ್ತೇನೆ. ಗಮನವಿಟ್ಟು ಕೇಳಿರಿ. ಯಾವುದು ಭಿಕ್ಷುಗಳೇ ವಜರ್ಿಸುವಿಕೆಯ ಧಮ್ಮವು? ಇಲ್ಲಿ ಭಿಕ್ಷುಗಳೇ, ಚಕ್ಷು (ಕಣ್ಣು)ವನ್ನು ವಜರ್ಿಸುವುದು, ರೂಪಗಳನ್ನು ವಜರ್ಿಸುವುದು. ಚಕ್ಷು ಹಾಗು ರೂಪಗಳ ಸಂಗಮವಾದ ಸ್ಪರ್ಶವನ್ನು ವಜರ್ಿಸುವುದು. ಹೀಗೆ ಸಂಗಮವಾಗಿ ಉದಯಿಸುವ ಚಕ್ಷುವಿಞ್ಞಾನ (ಚಕ್ಷುವಿನಿಂದ ಉದಯಿಸುವ ಅರಿಯುವಿಕೆ)ವನ್ನು ವಜರ್ಿಸುವುದು. ಹೀಗೆ ಸಂಗಮವಾಗಿ ಸ್ಪರ್ಶವಾಗಿ ಉದಯಿಸುವ ಯಾವುದೇ ವೇದನೆಗಳನ್ನು ವಜರ್ಿಸುವುದು (ಪ್ರಿಯ ಸಂವೇದನೆಗಳು, ಅಪ್ರಿಯ ಸಂವೇದನೆಗಳು ಹಾಗು ತಟಸ್ಥ ವೇದನೆಗಳು). ಹಾಗೆಯೇ ಇಲ್ಲಿ ಭಿಕ್ಷುಗಳೇ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನ್ಸನ್ನು ವಜರ್ಿಸುವುದು. ಧಮ್ಮಗಳನ್ನು (ಮಾನಸಿಕ ವಿಷಯವಸ್ತು) ವಜರ್ಿಸುವುದು. ಇವೆರಡರ ನಡುವಿನ ಸ್ಪರ್ಶಗಳನ್ನು, ಸ್ಪರ್ಶದಿಂದ ಉದಯಿಸುವ ವಿಞ್ಞಾನವನ್ನು ಹಾಗು ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳನ್ನು ವಜರ್ಿಸುವುದು. ಇದೇ ಭಿಕ್ಷುಗಳೇ ವಜರ್ಿಸುವಿಕೆಯ ಧಮ್ಮವಾಗಿದೆ.

35.3.3. ಅಭಿಜ್ಞಾಪರಿಜ್ಞಾಪಹಾನ ಸುತ್ತಂ

25. ಭಿಕ್ಷುಗಳೇ, ನಾನು ನಿಮಗೆ ನೇರವಾದ ಜ್ಞಾನದಿಂದ (ಅಭಿಜ್ಞಾ/ಅತೀಂದ್ರಿಯ ಶಕ್ತಿಯಿಂದ ನೇರವಾಗಿ ಅರಿಯುವ ಜ್ಞಾನ) ಹಾಗು ಪರಿಪೂರ್ಣ ಜ್ಞಾನದಿಂದ (ಪರಿಜ್ಞಾ) ಎಲ್ಲವನ್ನು ವಜರ್ಿಸುವ ಧಮ್ಮ ಉಪದೇಶಿಸುತ್ತೇನೆ. ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಭಿಕ್ಷುಗಳೇ, ಯಾವುದು ಆ ಎಲ್ಲವನ್ನು ಅಭಿಜ್ಞ ಹಾಗು ಪರಿಜ್ಞಾದಿಂದ ವಜರ್ಿಸುವ ಧಮ್ಮವು? ಚಕ್ಷುವು ಭಿಕ್ಷುಗಳೇ, ಅಭಿಜ್ಞಾ ಹಾಗೂ ಪರಿಜ್ಞಾದಿಂದ ವಜರ್ಿಸುವುದು. ರೂಪಗಳು ಭಿಕ್ಷುಗಳೇ ಅಭಿಜ್ಞಾ ಹಾಗು ಪರಿಜ್ಞಾದಿಂದ ವಜರ್ಿಸುವುದು. ಚಕ್ಷು ವಿಞ್ಞಾನವನ್ನು (ಕಣ್ಣನಿಂದ ಅರಿಯುವಿಕೆ) ಅಭಿಜ್ಞಾ ಮತ್ತು ಪರಿಜ್ಞಾದಿಂದ ವಜರ್ಿಸುವುದು. ಚಕ್ಷುವಿನ ಸಂಸ್ಪರ್ಶವನ್ನು ಅಭಿಜ್ಞಾ ಮತ್ತು ಪರಿಜ್ಞಾದಿಂದ ವಜರ್ಿಸುವುದು. ಚಕ್ಷುವಿನ ಸಂಸ್ಪರ್ಶದಿಂದ ಉಂಟಾಗುವ ವೇದೆನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ವಜರ್ಿಸುವುದು. ಅದೇರೀತಿಯಾಗಿ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ಅಭಿಜ್ಞಾ ಹಾಗು ಪರಿಜ್ಞಾದಿಂದಾಗಿ ವಜರ್ಿಸುವುದು. ಧಮ್ಮವನ್ನು (ಮಾನಸಿಕ ವಿಷಯವ ವಸ್ತುಗಳನ್ನು) ಅಭಿಜ್ಞಾ ಹಾಗು ಪರಿಜ್ಞಾದಿಂದಾಗಿ ವಜರ್ಿಸುವುದು. ಮನೋವಿಜ್ಞಾನವನ್ನು (ಮನಸ್ಸಿನ ಅರಿಯುವಿಕೆ) ಅಭಿಜ್ಞಾ ಹಾಗು ಪರಿಜ್ಞಾದಿಂದ ವಜರ್ಿಸುವುದು. ಮನಸ್ಸಿನ ಸಂಸ್ಪರ್ಶವನ್ನು (ಮನಸ್ಸು ಹಾಗು ಮಾನಸಿಕ ವಿಷಯಗಳ ಸಂಯೋಗ) ಅಭಿಜ್ಞಾ ಹಾಗು ಪರಿಜ್ಞಾದಿಂದ ವಜರ್ಿಸುವುದು. ಮನಸ್ಸಿನ ಸಂಸ್ಪರ್ಶದಿಂದಾಗಿ ಉದಯಿಸುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅಭಿಜ್ಞಾ ಹಾಗು ಪರಿಜ್ಞಾದಿಂದಾಗಿ ವಜರ್ಿಸುವುದು. ಭಿಕ್ಷುಗಳೇ, ಇದೇ ಅಭಿಜ್ಞಾದಿಂದಾಗಿ ಹಾಗು ಪರಿಜ್ಞಾದಿಂದಾಗಿ ಎಲ್ಲವನ್ನು ವಜರ್ಿಸುವ ಧಮ್ಮವಾಗಿದೆ.

35.3.4. ಪಠಮ ಅಪರಿಜಾನನ ಸುತ್ತಂ

26. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಹೀಗೆ ನುಡಿದರು: ಭಿಕ್ಷುಗಳೇ, ಎಲ್ಲದರ ಬಗ್ಗೆ ಅಭಿಜ್ಞಾವಿಲ್ಲದೆ, ಪರಿಜ್ಞಾವಿಲ್ಲದೆ, ವಿರಾಗವಿಲ್ಲದೆ, ಪರಿತ್ಯಾಗವಿಲ್ಲದೆ ದುಃಖವನ್ನು ನಾಶಗೊಳಿಸಲಾಗುವುದಿಲ್ಲ. ಭಿಕ್ಷುಗಳೇ, ಯಾವುದರ ಅಭಿಜ್ಞಾವಿಲ್ಲದೆ, ಪರಿಜ್ಞಾವಿಲ್ಲದೆ, ವಿರಾಗವಿಲ್ಲದೆ, ಪರಿತ್ಯಾಗವಿಲ್ಲದೆ ದುಃಖವನ್ನು ನಾಶಗೊಳಿಸಲಾಗುವುದಿಲ್ಲ. ಅವೆಂದರೆ: ಚಕ್ಷುವಿನ ಬಗ್ಗೆ ಅಭಿಜ್ಞಾ (ನೇರವಾದ ಅತೀಂದ್ರಿಯ ಜ್ಞಾನ) ಇಲ್ಲದೆ ಪರಿಜ್ಞಾ (ಪರಿಪೂರ್ಣ ಸ್ಪರ್ಶಜ್ಞಾನ) ಇಲ್ಲದೆ ಚಕ್ಷುವಿನ ಬಗ್ಗೆ ವಿರಾಗವಿಲ್ಲದೆ, ಪರಿತ್ಯಾಗವೂ ಇಲ್ಲದೆ ದುಃಖವನ್ನು ಕ್ಷಯಗೊಳಿಸಲಾಗುವುದಿಲ್ಲ. ಹಾಗೆಯೇ ರೂಪಗಳ ಬಗ್ಗೆ... ಚಕ್ಷುವಿನಿಂದ ಆರಂಭವಾದ ಅರಿವಿನ ಬಗ್ಗೆ (ಚಕ್ಷುವಿಞ್ಞಾನ)... ಚಕ್ಷು ಹಾಗು ರೂಪಗಳ ನಡುವಿನ ಸ್ಪರ್ಶದ ಬಗ್ಗೆ... ಹೀಗೆ ಸಂಸ್ಪರ್ಶದ ನಂತರ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳ ಬಗ್ಗೆ... ಅಭಿಜ್ಞಾವಿಲ್ಲದೆ, ಪರಿಜ್ಞಾವಿಲ್ಲದೆ, ವಿರಾಗವಿಲ್ಲದೆ, ಪರಿತ್ಯಾಗವಿಲ್ಲದೆ ದುಃಖವನ್ನು ನಾಶಗೊಳಿಸಲಾಗುವುದಿಲ್ಲ. ಅದೇರೀತಿ ಕಿವಿಯ ಬಗ್ಗೆ... ಶಬ್ದಗಳ ಬಗ್ಗೆ... ಶ್ರೋತವಿಞ್ಞಾನದ ಬಗ್ಗೆ ಕಿವಿ ಹಾಗು ಶಬ್ದಗಳ ಸಂಸ್ಪರ್ಶಗಳ ಬಗ್ಗೆ... ಸಂಸ್ಪರ್ಶದ ನಂತರ ಉಂಟಾಗುವಿಕೆಯ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳ ಬಗ್ಗೆ ಅಭಿಜ್ಞಾವಿಲ್ಲದೆ, ಪರಿಜ್ಞಾವಿಲ್ಲದೆ ವಿರಾಗವಿಲ್ಲದೆ ಪರಿತ್ಯಾಗವಿಲ್ಲದೆ, ದುಃಖವನ್ನು ನಾಶಗೊಳಿಸಲಾಗುವುದಿಲ್ಲ. ಅದೇರೀತಿ ನಾಲಿಗೆಯ ಬಗ್ಗೆ... ರಸಗಳ ಬಗ್ಗೆ... ಜಿಹ್ವಾ ವಿಜ್ಞಾನದ ಬಗ್ಗೆ... ನಾಲಿಗೆ ಹಾಗು ರಸಗಳ ಸಂಸ್ಪರ್ಶಗಳ ಬಗ್ಗೆ... ಸಂಸ್ಪರ್ಶದ ನಂತರ ಉಂಟಾಗುವ ನಾಲಿಗೆಯ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳ ಬಗ್ಗೆ ಅಭಿಜ್ಞಾವಿಲ್ಲದೆ, ಪರಿಜ್ಞಾವಿಲ್ಲದೆ, ವಿರಾಗವಿಲ್ಲದೆ, ಪರಿತ್ಯಾಗಗಳಿಲ್ಲದೆ ದುಃಖವನ್ನು ನಾಶಗೊಳಿಸಲಾಗುವುದಿಲ್ಲ. ಅದೇರೀತಿ ದೇಹದ ಬಗ್ಗೆ... ದೇಹಕ್ಕೆ ಸ್ಪಶರ್ಿಸುವ ಸ್ಷರ್ಶಗಳ ಬಗ್ಗೆ... ಕಾಯವಿಜ್ಞಾನದಬಗ್ಗೆ... ದೇಹ ಹಾಗು ದೈಹಿಕವಾಗಿ ಸ್ಪಶರ್ಿಸುವ ಎಲ್ಲಾ ಸ್ಪರ್ಶಗಳ ಬಗ್ಗೆ... ಇವೆರಡರಿಂದ ಉಂಟಾಗುವ ಸಂಸ್ಪರ್ಶದ ಬಗ್ಗೆ... ಸಂಸ್ಪರ್ಶದ ನಂತರ ಉಂಟಾಗುವ ಪ್ರಿಯ ಸಂವೇದನೆ, ಅಪ್ರಿಯ ಸಂವೇದನೆ, ತಟಸ್ಥ ಸಂವೇದನೆಗಳ ಅಭಿಜ್ಞಾವಿಲ್ಲದೆ, ಪರಿಜ್ಞಾವಿಲ್ಲದೆ, ವಿರಾಗವಿಲ್ಲದೆ, ಪರಿತ್ಯಗವಿಲ್ಲದೆ ದುಃಖವನ್ನು ನಾಶಗೊಳಿಸಿ ಮನೋವಿಜ್ಞಾನದ ಬಗ್ಗೆ... ಮನಸ್ಸು ಹಾಗು ಧಮ್ಮದ ಸಂಗಮದ ಸ್ಪರ್ಶದ  ಬಗ್ಗೆ, ಸಂಸ್ಪರ್ಶದ ನಂತರ ಉಂಟಾಗುವ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳ ಬಗ್ಗೆ ಅಭಿಜ್ಞಾವಿಲ್ಲದೆ ಪರಿಜ್ಞಾವಿಲ್ಲದೆ ವಿರಾಗವಿಲ್ಲದೆ, ಪರಿತ್ಯಾಗವಿಲ್ಲದೆ ದುಃಖ ಕ್ಷಯವಾಗುವುದಿಲ್ಲ.
ಭಿಕ್ಷುಗಳೇ, ಎಲ್ಲದರ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ. ಮತ್ತೆ ಯಾವುದೆಲ್ಲದರಿಂದ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ? ಚಕ್ಷುವಿನ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ. ಕಿವಿಯ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ. ಮೂಗಿನ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ. ನಾಲಿಗೆಯ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ. ಕಾಯದ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ. ಮನಸ್ಸಿನ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ. ಇದೇ ಭಿಕ್ಷುಗಳೇ, ಎಲ್ಲದರ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನು ದುಃಖಗಳನ್ನು ನಾಶಗೊಳಿಸಲು ಸಾಧ್ಯವಾಗುತ್ತದೆ.

35.3.5. ದುತಿಯ ಅಪರಿಜಾನನ ಸುತ್ತಂ

27. ಭಿಕ್ಷುಗಳೇ, ಅಭಿಜ್ಞಾವಿಲ್ಲದೆ, ಪರಿಜ್ಞಾವಿಲ್ಲದೆ ಎಲ್ಲದರ ಮೇಲೆ ವಿರಾಗವಾಗಲಿ, ಪರಿತ್ಯಾಗವಾಗಲಿ, ಅಭ್ಯಸಿಸದಿದ್ದರೆ, ದುಃಖಕ್ಷಯವು ಅಸಾಧ್ಯವಾಗುತ್ತದೆ. ಮತ್ತೆ ಭಿಕ್ಷುಗಳೇ, ಯಾವುದು ಆ ಎಲ್ಲವು? ಕಣ್ಣು ಮತ್ತು ರೂಪಗಳು ಮತ್ತು ಕಣ್ಣಿನ ವಿಞ್ಞಾನದ (ಅರಿಯುವಿಕೆ) ಮೂಲಕ ವೀಕ್ಷಿಸಬಹುದಾದ ವಿಷಯ ವಸ್ತುಗಳು. ಅದೇರೀತಿ ಕಿವಿ ಮತ್ತು ಶಬ್ದಗಳು. ಕಿವಿಯ ಮೂಲಕ ಅರಿಯಬಹುದಾದಂತಹ ವಿಷಯ ವಸ್ತುಗಳು ಅಥವಾ ಶಬ್ದಗಳು... ಮೂಗು... ನಾಲಿಗೆ... ದೇಹ... ಮನಸ್ಸು ಮತ್ತು ಮಾನಸಿಕ ವಿಷಯ ವಸ್ತುಗಳು, ಮನಸ್ಸಿನ ಮೂಲಕ ಅರಿಯಬಹುದಾದಂತಹ ವಿಷಯ ವಸ್ತುಗಳು. ಇವೇ ಭಿಕ್ಷುಗಳೇ ಆ ಎಲ್ಲವೂ ಇವುಗಳ ನೇರಜ್ಞಾನ (ಅಭಿಜ್ಞಾ), ಪರಿಪೂರ್ಣ ಸ್ಪರ್ಶಜ್ಞಾನ (ಪರಿಜ್ಞಾ) ಇಲ್ಲದೆ, ವಿರಾಗ ಹಾಗು ಪರಿತ್ಯಾಗದ ಅಭ್ಯಾಸವಿದ್ದರೆ ದುಃಖಕ್ಷಯವು ಸಾಧ್ಯವಾಗುತ್ತದೆ. ಭಿಕ್ಷುಗಳೇ, ಅಭಿಜ್ಞಾ ಸಹಿತವಾಗಿ, ಪರಿಜ್ಞಾ ಸಹಿತವಾಗಿ, ವಿರಾಗಯುತವಾಗಿ, ಪರಿತ್ಯಾಗಯುತವಾಗಿ, ದುಃಖಕ್ಷಯವು ಸಾಧ್ಯವಾಗುತ್ತದೆ. ಮತ್ತೆ ಯಾವುದದು ಭಿಕ್ಖುಗಳೇ ಅವೆಲ್ಲವೂ? ಕಣ್ಣು ಮತ್ತು ರೂಪಗಳು.... ಮತ್ತು ಧಮ್ಮಗಳು ಇವೇ ಭಿಕ್ಷುಗಳೇ ಅಭಿಜ್ಞಾದಿಂದ, ಪರಿಞ್ಞಾದಿಂದ, ವಿರಾಗದಿಂದ, ಪರಿತ್ಯಾಗದಿಂದ ಒಬ್ಬನ ದುಃಖ ಕ್ಷಯವು ಸಾಧ್ಯವಾಗುತ್ತದೆ.

35.3.6. ಆದಿತ್ತ ಸುತ್ತಂ (ಆದಿತ್ಯ ಸುತ್ತ)

28. ಒಮ್ಮೆ ಭಗವಾನರು ಸಾವಿರ ಭಿಕ್ಖುಗಳ ಸಹಿತ ಗಯಾದ ಹತ್ತಿರ ಗಯಾಸೀಸೆ (ಗಯಾದ ಶಿರ)ಯಲ್ಲಿ ವಾಸಿಸುತ್ತಿದ್ದರು. ಆಗ ಭಗವಾನರು ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು: ಭಿಕ್ಖುಗಳೇ, ಎಲ್ಲವೂ ಉರಿಯುತ್ತಿದೆ, ಮತ್ತೆ ಭಿಕ್ಖುಗಳೇ, ಏನೆಲ್ಲಾ ಉರಿಯುತ್ತಿವೆ? ಇಲ್ಲಿ ಭಿಕ್ಖುಗಳೇ ಚಕ್ಷು (ಕಣ್ಣು) ಉರಿಯುತ್ತಿವೆ, ರೂಪಗಳು ಉರಿಯುತ್ತಿವೆ. ಕಣ್ಣಿನ ಮೂಲಕ ಪ್ರವಹಿಸುತ್ತಿರುವ ಅರಿವು (ಚಕ್ಷುವಿಞ್ಞಾನ) ಉರಿಯುತ್ತಿವೆ. ಕಣ್ಣು ಹಾಗು ರೂಪಗಳ ನಡುವಣ ಸಂಸ್ಪರ್ಶ ಉರಿಯುತಿಹುದು, ಅದರಿಂದ ಉಂಟಾದ ಯಾವುದೇ ವೇದನೆಗಳು ಸಹಾ ಉರಿಯುತ್ತಿವೆ. ಪ್ರಿಯ ವೇದನೆಗಳು, ಅಪ್ರಿಯ ವೇದನೆಗಳು, ಪ್ರಿಯಾಪ್ರಿಯವಲ್ಲದ (ತಟಸ್ಥ) ವೇದನೆಗಳು ಉರಿಯುತ್ತಿವೆ. ಭಿಕ್ಖುಗಳೇ, ಯಾವುದರಿಂದ ಉರಿಯುತ್ತಿವೆ. ಜನ್ಮದ ಜರಾದ (ಮುಪ್ಪಿನ), ಮರಣದ, ಶೋಕದ, ಪ್ರಲಾಪದ, ದುಃಖದ, ದುರ್ಮನಸ್ಸಿನ, ನೋವಿನ, ಹತಾಶೆಯಾದಿಗಳ ಅಗ್ನಿಗಳಿಂದ ಉರಿಯುತ್ತಿವೆ, ಹೀಗೆ ನಾನು ಹೇಳುತ್ತಿದ್ದೇನೆ. ಭಿಕ್ಷುಗಳೇ, ಕಿವಿಯು ಉರಿಯುತ್ತದೆ, ಶಬ್ದಗಳು ಉರಿಯುತ್ತಿವೆ... ಮೂಗು ಉರಿಯುತ್ತದೆ, ಗಂಧಗಳು ಉರಿಯುತ್ತಿವೆ... ನಾಲಿಗೆಯು ಉರಿಯುತ್ತಿದೆ, ರಸಗಳು ಉರಿಯುತ್ತಿವೆ... ದೇಹವು ಉರಿಯುತ್ತಿದೆ, ಸ್ಪರ್ಶಗಳು ಉರಿಯುತ್ತಿವೆ.... ಮನಸ್ಸು ಉರಿಯುತ್ತಿದೆ, ಧಮ್ಮಗಳು ನಡುವಣ ಸಂಸ್ಪರ್ಶ ಉರಿಯುತಿಹುದು. ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ, ಪ್ರಿಯಾಪ್ರಿಯಗಳಿಲ್ಲದ ವೇದನೆಗಳು ಉರಿಯುತಿಹುದು. ಭಿಕ್ಖುಗಳೇ, ಯಾವುದರಿಮದ ಉರಿಯುತ್ತಿವೆ? ರಾಗಾಗ್ನಿಯಿಂದ, ದ್ವೇಷಾಗ್ನಿಯಿಂದ, ಮೋಹಾಗ್ನಿಯಿಂದ ಉರಿಯುತ್ತಿವೆ. ಜನ್ಮದ, ಜರಾದ, ಮರಣದ, ಶೋಕದ, ಪ್ರಲಾಪದ, ದುಃಖದ, ದುರ್ಮನಸ್ಸಿನ, ನೋವಿನ, ಹತಾಶೆಯಾದಿಗಳ ಅಗ್ನಿಗಳಿಂದ ಉರಿಯುತ್ತಿವೆ. ಹೀಗೆ ನಾನು ಹೇಳುತ್ತಿದ್ದೇನೆ. ಹೀಗೆ ಯಥಾಭೂತವಾಗಿ ದಶರ್ಿಸಿದ ಆರ್ಯಶ್ರಾವಕ ಭಿಕ್ಷುವು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ರೂಪಗಳಿಂದ ವಿಕಷರ್ಿತನಾಗುತ್ತಾನೆ, ಚಕ್ಷು ವಿಞ್ಞಾನದಿಂದ ವಿಕಷರ್ಿತನಾಗುತ್ತಾನೆ. ಚಕ್ಷು ಸಂಸ್ಪರ್ಶದಿಂದ ವಿಕಷರ್ಿತನಾಗುತ್ತಾನೆ. ಸಂಸ್ಪರ್ಶಗಳಿಂದ ಉಂಟಾಗುವ ಸುಖವೇದನೆ, ದುಃಖವೇದನೆ, ಸುಖ ದುಃಖಗಳಲ್ಲದ (ತಟಸ್ಥ) ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ಅದೇರೀತಿಯಾಗಿ ಕಿವಿಯಿಂದ... ಮೂಗಿನಿಂದ.... ನಾಲಿಗೆಯಿಂದ.... ದೇಹದಿಂದ.... ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ. ಧಮ್ಮಗಳಿಂದ (ಮಾನಸಿಕ ವಿಷಯವಸ್ತು/ಮನೋವಸ್ತು) ಗಳಿಂದ ವಿಕಷರ್ಿತನಾಗುತ್ತಾನೆ. ಮನೋವಿಞ್ಞಾನಗಳಿಂದ ವಿಕಷರ್ಿತನಾಗುತ್ತಾನೆ. ಮನಸ್ಸು ಹಾಗು ಮನೋವಸ್ತುಗಳ ಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ. ಇವುಗಳ ಸಂಸ್ಪರ್ಶಗಳಿಂದ ಉಂಟಾಗುವ ಪ್ರಿಯ ವೇದನೆಗಳಿಂದ, ಅಪ್ರಿಯ ವೇದನೆಗಳಿಂದ, ಪ್ರಿಯಾಪ್ರಿಯಗಳಲ್ಲಿದ ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ವಿಕರ್ಷಣೆಯನ್ನು ಅನುಭವಿಸಿದವನಾಗಿ ಆತನು ವಿರಾಗವನ್ನು ತಾಳುತ್ತಾನೆ. ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ. ನಂತರ ವಿಮುಕ್ತಿ ಜ್ಞಾನವನ್ನು ಪಡೆಯುತ್ತಾನೆ. ಕ್ಷೀಣವಾಯಿತು ಜನ್ಮ, ಬ್ರಹ್ಮಚರ್ಯೆಯು ಪೂರ್ಣವಾಯಿತು, ಮಾಡಬೇಕಾದುದನ್ನು ಮಾಡಿಯಾಯಿತು, ಮುಂದೆ ಪುನರ್ಜನ್ಮವಿಲ್ಲ. ಹೀಗೆ ಭಗವಾನರು ನುಡಿದ ನಂತರ ಅದನ್ನು ಆಲಿಸಿದಂತಹ ಸಹಸ್ರ ಭಿಕ್ಖುಗಳ ಚಿತ್ತವು ನಿಶ್ಶೇಷವಾಗಿ ಆಸವಗಳಿಂದ ಮುಕ್ತವಾಗಿ, ಅಂಟದೆ ಇರುವಂತಹ ಸ್ಥಿತಿಯನ್ನು ಗಳಿಸಿದರು.

35.3.7. ಅದ್ಧಭೂತ ಸುತ್ತಂ (ಅನ್ದಭೂತ ಸುತ್ತ)

29. ನಾನು ಹೀಗೆ ಕೇಳಿದ್ದೇನೆ, ಒಮ್ಮೆ ಭಗವಾನರು ರಾಜಗೃಹದ ವೇಳುವನದಲ್ಲಿರುವ ಕಲನ್ದಕ ನಿವಾಪ (ಅಳಿಲು ಧಾಮ) ದಲ್ಲಿ ವಾಸಿಸುತ್ತಿದ್ದರು. ಆಗ ಭಿಕ್ಷುಗಳೊಂದಿಗೆ ಹೀಗೆ ಸಂಬೋಧಿಸಿ ಪ್ರವಚನ ನೀಡಿದರು. ಭಿಕ್ಷುಗಳೇ, ಪ್ರತಿಯೊಂದು ಅಂಧಕಾರಮಯವಾಗಿದೆ (ಭಾರ ಇಳಿಸುವಂತಹದ್ದಾಗಿದೆ), ಯಾವುದವು ಪ್ರತಿಯೊಂದು? ಚಕ್ಷುವು, ರೂಪಗಳು, ಚಕ್ಷುವಿಞ್ಞಾನ, ಚಕ್ಷುರೂಪಗಳ ಸಂಸ್ಪರ್ಶ, ಅದರಿಂದಾಗಿ ಉದಯಿಸುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ವೇದನೆಗಳು, ಇವೆಲ್ಲವೂ ಅಂಧಕಾರಮಯವಾಗಿದೆ. ಇವೆಲ್ಲವೂ ಯಾವುದರಿಂದಾಗಿ ಅಂಧಕಾರವಾಗಿದೆ. ರಾಗದಿಂದ ದ್ವೇಷದಿಂದ, ಮೋಹದಿಂದ, ಜನ್ಮದಿಂದ, ಜರಾದಿಂದ, ಮರಣದಿಂದ, ಶೋಕಗಳಿಂದ, ಪ್ರಲಾಪಗಳಿಂದ ದುಃಖ ದುರ್ಮನಸ್ಸುಗಳಿಂದ ಅಂಧಕಾರಮಯವಾಗಿದೆ ಎಂದು ನಾನು ಹೇಳುವೆ. ಅದೇರೀತಿಯಾಗಿ ಕಿವಿಗಳು.... ಮೂಗು.... ನಾಲಿಗೆ.... ದೇಹ.... ಮನಸ್ಸು.... ಧಮ್ಮಗಳು (ಮನೋವಸ್ತುಗಳು), ಮನೋವಿಞ್ಞಾನ, ಮನಸ್ಸು ಹಾಗು ಧಮ್ಮಗಳ ಸಂಸ್ಪರ್ಶ, ಅದರಿಂದ ಉಂಟಾಗುವ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ವೇದನೆಗಳು, ಇವೆಲ್ಲವೂ ಅಂಧಕಾರಮಯವಾಗಿದೆ. ಇವೆಲ್ಲವೂ ಯಾವುದರಿಂದಾಗಿ ಅಂಧಕಾರವಾಗಿದೆ. ರಾಗದಿಂದ ದ್ವೇಷದಿಂದ, ಮೋಹದಿಂದ, ಜನ್ಮದಿಂದ, ಜರಾದಿಂದ, ಮರಣದಿಂದ, ಶೋಕಗಳಿಂದ, ಪ್ರಲಾಪಗಳಿಂದ ದುಃಖ ದುರ್ಮನಸ್ಸುಗಳಿಂದ ಅಂಧಕಾರಮಯವಾಗಿದೆ. ಭಿಕ್ಷುಗಳೇ, ಇವನ್ನು ಯಥಾಭೂತವಾಗಿ ಆಲಿಸಿದ ಆರ್ಯಶ್ರಾವಕನು ಚಕ್ಷುವಿನಿಂದ, ರೂಪಗಳಿಂದ, ಚಕ್ಷು ವಿಞ್ಞಾನಗಳಿಂದ, ಚಕ್ಷು ರೂಪಗಳ ನಡುವಣ ಸಂಸ್ಪರ್ಶಗಳಿಂದ ಅದರಿಂದಾಗಿ ಉಂಟಾಗುವ ವೇದನೆಗಳಿಂದ (ಪ್ರಿಯ, ಅಪ್ರಿಯ, ತಟಸ್ಥ)... ಅದೇರೀತಿಯಲ್ಲಿ ಕಿವಿಗಳಿಂದ.... ಮೂಗಿನಿಂದ.... ನಾಲಿಗೆಯಿಂದ.... ದೇಹದಿಂದ.... ಮನಸ್ಸಿನಿಂದ, ಧಮ್ಮಗಳಿಂದ (ಮನೋವಸ್ತುಗಳು), ಸಂಸ್ಪರ್ಶಗಳಿಂದ, ಮನೋವಿಞ್ಞಾನಗಳಿಂದ, ವೇದನೆಗಳಿಂದ ವಿಕಷರ್ಿತನಾಗುತ್ತಾನೆ, ವಿಕರ್ಷಣೆಯಿಂದಾಗಿ ವಿರಾಗ ತಾಳುತ್ತಾನೆ. ವಿರಾಗದಿಂದಾಗಿ ಪರಿತ್ಯಾಗ ಮಾಡುತ್ತಾನೆ. ಪರಿತ್ಯಾಗದಿಂದಾಗಿ ವಿಮುಕ್ತನಾಗುತ್ತಾನೆ. ಅದರಿಂದಾಗಿ ವಿಮುಕ್ತಿ ಜ್ಞಾನಗಳು ಲಭಿಸುವುದು. ಜನ್ಮವು ಕ್ಷೀಣವಾಯಿತು (ನಾಶ), ಬ್ರಹ್ಮಚರ್ಯವು ಪರಿಪೂರ್ಣವಾಯಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇಚ್ಛಿಸುವುದಕ್ಕಾಗಿ ಇನ್ನೇನು ಉಳಿದಿಲ್ಲ, ಮುಂದೆ ಪುನರ್ಜನ್ಮವಿಲ್ಲ. ಹೀಗೆ ಭಗವಾನರು ವಿವರಿಸಿದರು.

35.3.8. ಸಮುಗ್ಘಾತಸಾರುಪ್ಪ ಸುತ್ತಂ (ಬುಡಸಮೇತ ಕಿತ್ತೆಸೆಯಲು ಸೂಕ್ತವಾದುದು)

30. ಭಿಕ್ಷುಗಳೇ, ಎಲ್ಲದರ ಬುಡಸಮೇತ ಕಿತ್ತೆಸೆಯಲು ಸೂಕ್ತವಾದ ಮಾರ್ಗವನ್ನು ಉಪದೇಶಿಸುತ್ತಿದ್ದೇನೆ. ತಾವೆಲ್ಲರೂ ಆಲಿಸಿರಿ, ಯೋಗ್ಯವಾಗಿ ಗಮನವಿಟ್ಟು ಆಲಿಸಿರಿ. ಭಿಕ್ಷುಗಳೇ, ಮತ್ತೆ ಎಲ್ಲವನ್ನು ಬುಡಸಮೇತ ಕಿತ್ತೆಸೆಯಲು ಸೂಕ್ತವಾದ ವಿಧಾನ ಯಾವುದು? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಕ್ಷುವನ್ನು ಗ್ರಹಿಸಲಾರ, ಚಕ್ಷುವಿನಿಂದ ಗ್ರಹಿಸಲಾರ, ಚಕ್ಷುವಿನ ಮೂಲಕ ಗ್ರಹಿಸಲಾರ, ಚಕ್ಷುವಿನಲ್ಲಿ ಗ್ರಹಿಸಲಾರ. ಈ ಚಕ್ಷು ನನ್ನದೆಂದು ಗ್ರಹಿಸಲಾರ. ಹಾಗೆಯೇ ಆತನು ರೂಪಗಳನ್ನು ಕುರಿತು ಚಿಂತಿಸಲಾರ, ರೂಪವನ್ನು ಗ್ರಹಿಸಲಾರ, ರೂಪಗಳ ಮೂಲಕ ಗ್ರಹಸಿಲಾರ, ರೂಪಗಳನ್ನು ತನ್ನದೆಂದು ಗ್ರಹಿಸಲಾರ. ಚಕ್ಷು ವಿಞ್ಞಾನದ ಮೂಲಕ ಗ್ರಹಿಸಲಾರ. ಹಾಗೆಯೇ ಚಕ್ಷು ಸಂಸ್ಪರ್ಶವನ್ನು ಉಂಟುಮಾಡಲಾರ. ಸ್ಪರ್ಶದಲ್ಲಿ ಇರಲಾರ, ಸ್ಪರ್ಶ ನನ್ನದೆಂದು ಭಾವಿಸಲಾರ, ಸ್ಪರ್ಶಗಳಿಂದ ಉಂಟಾಗುವ ವೇದನೆಗಳ ಬಗ್ಗೆಯೂ ಗ್ರಹಿಸಲಾರ. ವೇದನೆಗಳಿಂದ ಗ್ರಹಿಸಲಾರ, ವೇದನೆಗಳ ಮೂಲಕ ಗ್ರಹಿಸಲಾರ,ವೇದನೆಗಳಲ್ಲಿ ಗ್ರಹಿಸಲಾರ, ವೇದನೆಗಳು ತನ್ನದೆಂದು ಗ್ರಹಿಸಲಾರ (ಭಾವಿಸಲಾರ). ಇದೇ ರೀತಿಯಲ್ಲಿ ಕಿವಿಯನ್ನು ಗ್ರಹಿಸಲಾರ.... ಮೂಗನ್ನು ಗ್ರಹಿಸಲಾರ.... ನಾಲಿಗೆಯನ್ನು ಗ್ರಹಿಸಲಾರ.... ಮನಸ್ಸಿನ ಬಗ್ಗೆ ಗ್ರಹಿಸಲಾರ, ಮನಸ್ಸಿನ ಮೂಲಕ ಗ್ರಹಿಸಲಾರ. ಅದೇರೀತಿಯಲ್ಲಿ ಮನೋವಸ್ತುಗಳ ಬಗ್ಗೆ ಗ್ರಹಿಸಲಾರ, ಮನೋವಸ್ತುಗಳ ಮೂಲಕ ಗ್ರಹಿಸಲಾರ, ಮನೋವಸ್ತುಗಳಿಂದ ಗ್ರಹಿಸಲಾರ, ಮನೋವಸ್ತುಗಳು ತಾನೆಂದು, ತನ್ನದೆಂದು ಗ್ರಹಿಸಲಾರನು. ಹಾಗೆಯೇ ಮನೋವಿಞ್ಞಾನ (ಮನಸ್ಸು ಹಾಗು ಮನೋವಸ್ತುಗಳಿಂದ ಉಂಟಾದ ಚಿತ್ರ ಪ್ರವಾಹ)ವನ್ನು ಗ್ರಹಿಸಲಾರ, ಮನೋವಿಞ್ಞಾನ ಮೂಲಕ ಗ್ರಹಿಸಲಾರ. ಮನೋವಿಞ್ಞಾನದಿಂದ ಗ್ರಹಿಸಲಾರ, ಮನೋವಿಞ್ಞಾನವನ್ನು ತನ್ನದೆಂದು ಗ್ರಹಿಸಲಾರ. ಹಾಗೆಯೇ ಮನಸ್ಸು ಹಾಗು ಮನೋವಸ್ತುಗಳ ಸಂಸ್ಪರ್ಶವನ್ನು ಗ್ರಹಿಸಲಾರನು. ಸಂಸ್ಪರ್ಶದ ಮೂಲಕ ಗ್ರಹಿಸಲಾರ, ಸಂಸ್ಪರ್ಶದಿಂದ ಗ್ರಹಿಸಲಾರ, ಸಂಸ್ಪರ್ಶವೂ ತನ್ನದೆಂದು ಗ್ರಹಿಸಲಾರ. ಹಾಗೆಯೇ ಮನಸ್ಸು ಮತ್ತು ಮನೋವಸ್ತುಗಳ ಸಂಸ್ಪರ್ಶದಿಂದ ಉಂಟಾಗುವಂತಹ ಪ್ರಿಯ ವೇದನೆಗಳೇ ಆಗಲಿ, ಅಪ್ರಿಯ ವೇದನೆಗಳೇ ಆಗಲಿ, ಪ್ರಿಯಾಪ್ರಿಯಗಳಲ್ಲದ ತಟಸ್ಥ ವೇದನೆಗಳೇ ಆಗಲಿ ಅವುಗಳನ್ನು ಗ್ರಹಿಸಲಾರ, ವೇದನೆಗಳ ಮೂಲಕ ಗ್ರಹಿಸಲಾರ, ವೇದನೆಗಳಿಂದ ಗ್ರಹಿಸಲಾರ, ವೇದನೆಗಳು ತನ್ನದೆಂದು ಗ್ರಹಿಸಲಾರ. ಹೀಗೆ ಭಿಕ್ಷುಗಳೇ, ಆತನು ಎಲ್ಲದನ್ನು ಗ್ರಹಿಸಲಾರ, ಎಲ್ಲವುಗಳಿಂದ ಗ್ರಹಿಸಲಾರ, ಎಲ್ಲವುಗಳ ಮೂಲಕ ಗ್ರಹಿಸಲಾರ, ಎಲ್ಲವುಗಳನ್ನು ತನ್ನದೆಂದು ಗ್ರಹಿಸಲಾರ. ಹೀಗೆ ಯಾವುದನ್ನು ಗ್ರಹಿಸದೆ, ಲೋಕದ ಯಾವುದಕ್ಕೂ ಆತನು ಅಂಟದೆ ಹೋಗುತ್ತಾನೆ. ಹಾಗೆಯೇ ಯಾವುದರಿಂದಲೂ ಚಿಂತಿತನಾಗುವುದಿಲ್ಲ. (ಕ್ಷೊಭೆಗೊಳಗಾಗುವುದಿಲ್ಲ). ಹೀಗೆ ಯಾವುದಕ್ಕೂ ಅಂಟದೆ, ತಾನಾಗಿಯೇ ಪರಿನಿಬ್ಬಾಣವನ್ನು ಸಾಧಿಸುತ್ತಾನೆ. ಜನ್ಮವು ಕ್ಷೀಣವಾಯಿತು (ನಾಶ), ಬ್ರಹ್ಮಚರ್ಯವು ಪರಿಪೂರ್ಣವಾಯಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇಚ್ಛಿಸುವುದಕ್ಕಾಗಿ ಇನ್ನೇನು ಉಳಿದಿಲ್ಲ, ಮುಂದೆ ಅಸ್ತಿತ್ವಿಲ್ಲದ (ಪುನರ್ಜನ್ಮವಿಲ್ಲ) ಎಂದು ವಿಮುಕ್ತಿ ಪಡೆಯುತ್ತಾನೆ. ಇದೇ ಭಿಕ್ಷುಗಳೇ, ಬುಡಸಮೇತ ಕಿತ್ತೆಸೆಯಲು ಸೂಕ್ತವಾದ ಮಾರ್ಗವಾಗಿದೆ.

35.3.9. ಪಠಮಸಮುಗ್ಘಾತ ಸಪ್ಪಾಯ ಸುತ್ತಂ

31. ಭಿಕ್ಷುಗಳೇ, ಎಲ್ಲಾ ಗ್ರಹಿಕೆಗಳ ಬುಡಸಮೇತ ಕಿತ್ತೊಗೆಯಬಲ್ಲ ಸಮಂಜಸ ಮಾರ್ಗವನ್ನು ಉಪದೇಶಿಸುತ್ತಿದ್ದೇನೆ, ಗಮನವಿಟ್ಟು ಆಲಿಸಿರಿ. ಭಿಕ್ಷುಗಳೇ, ಎಲ್ಲಾ ಗ್ರಹಿಕೆಗಳ ಬುಡಸಮೇತ ಕಿತ್ತೊಗೆಯಬಲ್ಲಂತಹ ಸಮಂಜಸ ಮಾರ್ಗ ವಿಧಾನ ಯಾವುದು? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಕಣ್ಣನ್ನು ಗ್ರಹಿಸುವುದಿಲ್ಲ, ಕಣ್ಣಿನಲ್ಲಿ ಗ್ರಹಿಸುವುದಿಲ್ಲ, ಕಣ್ಣಿನಿಂದ ಗ್ರಹಿಸುವುದಿಲ್ಲ, ಕಣ್ಣು ನನ್ನದೆಂದು ಗ್ರಹಿಸುವುದಿಲ್ಲ. ಆತನು ರೂಪಗಳನ್ನು ಗ್ರಹಿಸುವುದಿಲ್ಲ. ರೂಪಗಳಿಂದ ಗ್ರಹಿಸುವುದಿಲ್ಲ. ರೂಪಗಳು ನನ್ನದೆಂದು ಗ್ರಹಿಸುವುದಿಲ್ಲ. ಹಾಗೆಯೇ ಆತನು ಸಂಸ್ಪರ್ಶವನ್ನು ಗ್ರಹಿಸುವುದಿಲ್ಲ. ಸಂಸ್ಪರ್ಶಗಳಲ್ಲಿ ಗ್ರಹಿಸುವುದಿಲ್ಲ. ಸಂಸ್ಪರ್ಶಗಳ ಮೂಲಕ ಗ್ರಹಿಸುವುದಿಲ್ಲ, ಸಂಸ್ಪರ್ಶವು ತನ್ನದೆಂದು ಗ್ರಹಿಸುವುದಿಲ್ಲ. ಹಾಗೆಯೇ ಆತನು ಚಕ್ಷುವಿಞ್ಞಾಣವನ್ನು ಗ್ರಹಿಸುವುದಿಲ್ಲ, ಚಕ್ಷುವಿಞ್ಞಾನದಲ್ಲಿ ಗ್ರಹಿಸುವುದಿಲ್ಲ, ಚಕ್ಷುವಿಞ್ಞಾನದ ಮೂಲಕ ಗ್ರಹಿಸುವುದಿಲ್ಲ. ಚಕ್ಷುವಿಞ್ಞಾನವನ್ನು ತನ್ನದೆಂದು ಗ್ರಹಿಸುವುದಿಲ್ಲ, ಹಾಗೆಯೇ ಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ಪ್ರಿಯಾಪ್ರಿಯಗಳಲ್ಲದ ತಟಸ್ಥ ವೇದನೆಗಳನ್ನು ಗ್ರಹಿಸುವುದಿಲ್ಲ. ವೇದನೆಗಳಲ್ಲಿ ಗ್ರಹಿಸುವುದಿಲ್ಲ, ವೇದನೆಗಳ ಮೂಲಕ ಗ್ರಹಿಸುವುದಿಲ್ಲ, ವೇದನೆಗಳನ್ನು ತನ್ನದೆಂದು ಗ್ರಹಿಸುವುದಿಲ್ಲ. ಭಿಕ್ಖುಗಳೇ ಯಾವುದೆಲ್ಲವನ್ನು ಒಬ್ಬನು ಗ್ರಹಿಸುವನೋ, ಯಾವುದೆಲ್ಲದರಲ್ಲಿ ಗ್ರಹಿಸುವನೊ, ಯಾವುದೆಲ್ಲದರಿಂದ ಗ್ರಹಿಸುವನೋ, ಯಾವುದೆಲ್ಲವನ್ನು ತನ್ನದೆಂದು ಗ್ರಹಿಸುವುದಿಲ್ಲ. ಭಿಕ್ಷುಗಳೇ, ಯಾವುದೆಲ್ಲವನ್ನು ಒಬ್ಬನು ಗ್ರಹಿಸುವನೋ, ಯಾವುದೆಲ್ಲದರಲ್ಲಿ ಗ್ರಹಿಸುವನೊ, ಯಾವುದೆಲ್ಲದರಿಂದ ಗ್ರಹಿಸುವನೋ, ಯಾವುದೆಲ್ಲವನ್ನು ತನ್ನದೆಂದು ಗ್ರಹಿಸುವನೋ ಆಗ ಅದು ಬೇರೆಯದೆ ಆಗುವುದು, ಸಮಂಜಸ ಆಗುವುದಿಲ್ಲ. ಆಗ ಆತನು ಭವಕ್ಕೆ ಅಂಟಿಕೊಳ್ಳುವನು, ಭವದಲ್ಲಿಯೇ ಆನಂದಿಸುವನು. ಅದೇರೀತಿಯಾಗಿ ಇಲ್ಲಿ ಭಿಕ್ಷುಗಳೇ, ಭಿಕ್ಷುವು ಕಿವಿಯನ್ನು ಗ್ರಹಿಸುವುದಿಲ್ಲ.... ಮೂಗನ್ನು ಗ್ರಹಿಸುವುದಿಲ್ಲ.... ನಾಲಿಗೆಯನ್ನು ಗ್ರಹಿಸುವುದಿಲ್ಲ.... ದೇಹವನ್ನು ಗ್ರಹಿಸುವುದಿಲ್ಲ.... ಮನಸ್ಸನ್ನು ಗ್ರಹಿಸುವುದಿಲ್ಲ, ಮನಸ್ಸಿನಲ್ಲಿ ಗ್ರಹಿಸುವುದಿಲ್ಲ, ಮನಸ್ಸಿನಿಂದ ಗ್ರಹಿಸುವುದಿಲ್ಲ, ಮನಸ್ಸು ನನ್ನದೆಂದು ಗ್ರಹಿಸುವುದಿಲ್ಲ. ಹಾಗೆಯೇ ಮನೋ ವಸ್ತುಗಳನ್ನು ಗ್ರಹಿಸುವುದಿಲ್ಲ. ಮನೋವಸ್ತುಗಳಲ್ಲಿ ಗ್ರಹಿಸುವುದಿಲ್ಲ. ಮನೋವಸ್ತುಗಳಿಂದ ಗ್ರಹಿಸುವುದಿಲ್ಲ. ಮನೋವಸ್ತುಗಳನ್ನು ನನ್ನದೆಂದು ಗ್ರಹಿಸುವುದಿಲ್ಲ. ಹಾಗೆಯೇ ಮನೋವಿಞ್ಞಾನವನ್ನು ಗ್ರಹಿಸುವುದಿಲ್ಲ. ಮನೋವಿಞ್ಞಾನಗಳಲ್ಲಿ ಗ್ರಹಿಸುವುದಿಲ್ಲ, ಮನೋವಿಞ್ಞಾಗಳಿಂದ ಗ್ರಹಿಸುವುದಿಲ್ಲ. ಮನೋವಿಞ್ಞಾನಗಳನ್ನು ನನ್ನದೆಂದು ಗ್ರಹಿಸುವುದಿಲ್ಲ. ಮನಸ್ಸು ಮತ್ತು ಮಾನಸಿಕ ವಿಷಯಗಳು (ಮನೋವಸ್ತು) ಇವುಗಳ ನಡುವಿನ ಸಂಸ್ಪರ್ಶಗಳನ್ನು ಗ್ರಹಿಸುವುದಿಲ್ಲ, ಸಂಸ್ಪರ್ಶಗಳಲ್ಲಿ ಗ್ರಹಿಸುವುದಿಲ್ಲ. ಸಂಸ್ಪರ್ಶಗಳಿಂದ ಗ್ರಹಿಸುವುದಿಲ್ಲ, ಸಂಸ್ಪರ್ಶಗಳನ್ನು ನನ್ನದೆಂದು ಗ್ರಹಿಸುವುದಿಲ್ಲ. ಸಂಸ್ಪರ್ಶಗಳಿಂದ ಉದಯಿಸುವ ವೇದನೆಗಳಾದ, ಪ್ರಿಯವೇದನೆಗಳೇ ಆಗಲಿ, ಅಪ್ರಿಯ ವೇದನೆಗಳೇ ಆಗಲಿ, ಪ್ರಿಯಾಪ್ರಿಯ ವೇದನೆಗಳಲ್ಲದ ವೇದನೆಗಳೇ ಆಗಲಿ ಅವನ್ನು ಗ್ರಹಿಸುವುದಿಲ್ಲ. ವೇದನೆಗಳಲ್ಲಿ  ಗ್ರಹಿಸುವುದಿಲ್ಲ, ವೇದನೆಗಳಿಂದ ಗ್ರಹಿಸುವುದಿಲ್ಲ, ವೇದನೆಗಳನ್ನು ನನ್ನದೆಂದು ಗ್ರಹಿಸುವುದಿಲ್ಲ. ಏಕೆಂದರೆ ಭಿಕ್ಷುಗಳೇ, ಯಾವುದೆಲ್ಲವನ್ನು ಒಬ್ಬನು ಗ್ರಹಿಸುವನೋ, ಯಾವುದೆಲ್ಲದರಲ್ಲಿ ಗ್ರಹಿಸುವನೋ, ಯಾವುದೆಲ್ಲದರಿಂದ ಒಬ್ಬನು ಗ್ರಹಿಸುವನೋ, ಯಾವುದೆಲ್ಲವನ್ನು ಒಬ್ಬನು ತನ್ನದೆಂದು ಗ್ರಹಿಸುವನೋ ಆಗ ಬೇರೆಯದೇ ಆಗುತ್ತದೆ. ಆಗ ಲೋಕವೇ ಬೇರೆರೀತಿ ಆಗುವುದು. ಅಂತಹವನು ಭವಕ್ಕೆ ಅಂಟಿಕೊಳ್ಳುತ್ತಾನೆ, ಭವದಲ್ಲಿ ಆನಂದಿಸುತ್ತಾನೆ. ಯಾವುದೆಲ್ಲಾ ಭಿಕ್ಷುಗಳೇ, ಅವು ಖಂಧಗಳಾಗಿರಲಿ, ಧಾತುಗಳಾಗಿರಲಿ, ಇಂದ್ರೀಯಗಳಿಗೆ ಆಧಾರವಾಗಿರುವಾಗಿರಲಿ (ಸಳಾಯತನ) ಜ್ಞಾನಿಯು ಅವುಗಳನ್ನು ಗ್ರಹಿಸಲು ಹೋಗುವುದಿಲ್ಲ. ಅವುಗಳಲ್ಲಿಯೇ ಗ್ರಹಿಸುವುದಿಲ್ಲ. ಅವುಗಳಿಂದಲೇ ಗ್ರಹಿಸುವುದಿಲ್ಲ. ಅವುಗಳನ್ನು ತನ್ನದೆಂದು ಗ್ರಹಿಸುವುದಿಲ್ಲ. ಹೀಗೆ ಆತನು ಯಾವುದನ್ನು ಗ್ರಹಿಸದೆ ಹೋದಾಗ ಲೋಕದ ಯಾವುದಕ್ಕೂ ಅಂಟಿಕೊಳ್ಳಲಾರ. ವಿರೋಧತೆಯನ್ನು ತಾಳಲಾರ, ಯಾವರೀತಿಯಲ್ಲಿ ಅಂಟದೆ ಇರುವುದರಿಂದಾಗಿ ಆತನು ತಾನಾಗಿಯೇ ನಿಬ್ಬಾಣವನ್ನು ಸಾಧಿಸುತ್ತಾನೆ. ಕ್ಷೀಣ (ನಾಶ) ವಾಯಿತು ಜನ್ಮವು, ಪೂರ್ಣವಾಯಿತು ಬ್ರಹ್ಮಚರ್ಯೆಯು, ಮಾಡಬೇಕಾದ್ದು ಮಾಡಿಯಾಯಿತು, ಮುಂದೆ ಪುನರ್ಜನ್ಮವಿಲ್ಲ ಎಂಬ ವಿಮುಕ್ತಿ ಜ್ಞಾನವನ್ನು ಪಡೆಯುತ್ತಾನೆ. ಇದೇ ಭಿಕ್ಖುಗಳೇ ಎಲ್ಲಾ ಗ್ರಹಿಕೆಗಳನ್ನು ಬುಡಸಮೇತ ಕಿತ್ತೊಗೆಯಬಲ್ಲಂತಹ ಸಮಂಜಸ ಮಾರ್ಗವಾಗಿದೆ.

35.3.10. ದುತಿಯಸಮುಗ್ಘಾತ ಸಪ್ಪಾಯ ಸುತ್ತಂ

32. ಭಿಕ್ಷುಗಳೇ, ನಾನು ನಿಮಗೆ ಎಲ್ಲಾ ಗ್ರಹಿಕೆಗಳನ್ನು ಬುಡಮೇಲು ಮಾಡುವಂತಹ ಯೋಗ್ಯ ವಿಧಾನದ ಬಗ್ಗೆ ಬೋಧಿಸುವೆನು, ಗಮನವಿಟ್ಟು ಆಲಿಸಿರಿ. ಭಿಕ್ಷುಗಳೇ, ಯಾವುದು ಸರ್ವಗ್ರಹಿಕೆಗಳನ್ನು ಬುಡಮೇಲು ಮಾಡುವಂತಹ ಯೋಗ್ಯ ವಿಧಾನವು? ಭಿಕ್ಷುಗಳೇ, ಇದನ್ನು ಹೇಗೆ ಭಾವಿಸುವಿರಿ. ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯಂತಹ ವಿಪರಿಣಾಮ ಧಮ್ಮವುಳ್ಳದ್ದೋ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪಗಳು... ಚಕ್ಷು ವಿಞ್ಞಾನ... ಚಕ್ಷು ಸಂಸ್ಪರ್ಶ ನಿತ್ಯವೋ ಅಥವಾ ಅನಿತ್ಯವೋ.
ಅನಿತ್ಯ ಭಂತೆ...
ಯಾವುದೆಲ್ಲವೂ ಚಕ್ಷು ಸಂಸ್ಪರ್ಶದಿಂದ ಉದಯಿಸಿದ ವೇದನೆಗಳಾದ ಸುಖವಾಗಲಿ, ದುಃಖವಾಗಲಿ ಅಥವಾ ಅಸುಖ-ದುಃಖವಾಗಲಿ (ತಟಸ್ಥ) ನಿತ್ಯವೋ ಅಥವಾ ಅನಿತ್ಯವೋ.
ಅನಿತ್ಯ ಭಂತೆ.
ಯಾವುದೆಲ್ಲಾ ಅನಿತ್ಯವೋ, ದುಃಖವಿಪರಿಣಾಮ ಧಮ್ಮವುಳ್ಳದ್ದೊ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ನಾಲಿಗೆಯು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ರಸ.... ಜಿಹ್ವಾವಿಞ್ಞಾನ.... ಜಿಹ್ವಾಸಂಸ್ಪರ್ಶ.... ಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಸುಖವೇದನೆಗಳಾಗಲಿ, ದುಃಖ ವೇದನೆಗಳಾಗಲಿ ಅಸುಖ ಅದುಃಖ ವೇದನೆಗಳಾಗಲಿ ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವೆಲ್ಲಾ ವೇದನೆಗಳು ಮನೋಸಂಸ್ಪರ್ಶದಿಂದ ಉಂಟಾಗಿದೆಯೋ ಅವು ನಿತ್ಯವೋ ಅಥವಾ ಅನಿತ್ಯವೋ? -
ಅನಿತ್ಯ ಭಂತೆ.
ಯಾವುದೆಲ್ಲಾ ಅನಿತ್ಯವೋ, ಅವು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದೆಲ್ಲವೂ ದುಃಖ ವಿಪರಿಣಾಮ ಧಮ್ಮವುಳ್ಳದ್ದೋ ಅಂತಹವನ್ನು ಇದು ನನ್ನದು, ಇದೇ ನಾನು ಇದೇ ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಭಿಕ್ಷುಗಳೇ, ಇಲ್ಲಿ ಪ್ರಜ್ಞಾವಂತ ಆರಿಯ ಶ್ರಾವಕನು ಕಣ್ಣಿನಿಂದ ವಿಕಷರ್ಿತನಾಗುತ್ತಾನೆ, ರೂಪಗಳಿಂದ, ಚಕ್ಷು ವಿಞ್ಞಾನದಿಂದ, ಚಕ್ಷು ಸಂಸ್ಪರ್ಶದಿಂದ, ಸಂಸ್ಪರ್ಶದಿಂದ ಉಂಟಾಗುವ ವೇದನೆಗಳು ಸುಖವೇದನೆಗಳೇ ಆಗಿರಲಿ, ದುಃಖವೇದನೆಗಳಾಗಿರಲಿ, ಅಸುಖ ಅದುಃಖ ವೇದನೆಗಳೇ ಆಗಿರಲಿ, ಅವುಗಳಿಂದ ವಿಕಷರ್ಿತನಾಗುತ್ತಾನೆ. ಕಿವಿಯಿಂದ... ಮೂಗಿನಿಂದ... ರಸಗಳಿಂದ... ಜಿಹ್ವಾ ಸಂಸ್ಪರ್ಶದಳಿಂದ ಉದಯಿಸುವ ಸುಖವೇದನೆಗಳಿಂದ ವಿಕಷರ್ಿತನಾಗುತ್ತಾನೆ... ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ, ಧಮ್ಮಗಳಿಂದ ವಿಕಷರ್ಿತನಾಗುತ್ತಾನೆ, ಮನೋವಿಞ್ಞಾನದಿಂದ ವಿಕಷರ್ಿತನಾಗುತ್ತಾನೆ, ಮನೋಸಂಸ್ಪರ್ಶದಿಂದ ವಿಕಷರ್ಿತನಾಗುತ್ತನೆ, ಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಸುಖವೇದನೆ, ದುಃಖವೇದನೆ, ಅಸುಖ ಅದುಃಖ (ಪ್ರಿಯಾಪ್ರಿಯಗಳಲ್ಲದ) ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ವಿಕರ್ಷಣೆಯಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನವನ್ನು ಹೊಂದುತ್ತಾನೆ.
ನಾಶವಾಯಿತು ಜನ್ಮವು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಮುಂದೆ ಜನ್ಮವಿಲ್ಲ ಎಂದು ಅರಿಯುತ್ತಾನೆ. ಇದೇ ಭಿಕ್ಖುಗಳೇ, ಎಲ್ಲಾ ಗ್ರಹಿಕೆಗಳನ್ನು ಬುಡಮೇಲು ಮಾಡುವಂತಹ ಯೋಗ್ಯ ವಿಧಾನವಾಗಿದೆ.


ಮೂರನೆಯದಾದ ಸಬ್ಬವರ್ಗ ಮುಗಿಯಿತು.

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...