Friday 8 June 2018

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ)


1. ಖೇಮಾ ಸುತ್ತ

410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ವಿಹರಿಸುತ್ತಿದ್ದರು. ಆ ಸಂದರ್ಭದಲ್ಲಿ ಭಿಕ್ಷುಣಿ ಖೇಮಾಳು ಕೋಸಲದಲ್ಲಿ ಸಂಚರಿಸುತ್ತಾ, ಶ್ರಾವಸ್ತಿ ಹಾಗು ಸಾಕೇತದ ಮಧ್ಯದಲ್ಲಿನ ತೋರಣವತ್ಥುವಿನಲ್ಲಿ ಉಳಿದಳು. ಅದೇ ಸಮಯದಲ್ಲಿ ಕೋಸಲದ ರಾಜನಾದ ಪಸೇನದಿಯು ಸಾಕೇತದಿಂದ ಶ್ರಾವಸ್ತಿಯ ಕಡೆಗೆ ಹೊರಟಿದ್ದನು. ಆದರೆ ಈ ನಡುವೆ ಆತನು ಸಹಾ ತೋರಣವತ್ಥುವಿನಲ್ಲಿ ಒಂದು ರಾತ್ರಿ ಕಳೆಯಲು ಉಳಿದನು. ಆಗ ರಾಜ ಪಸೇನದಿಯು ತನ್ನ ಮನುಷ್ಯರಿಗೆ ಹೀಗೆ ಹೇಳಿದನು: ಸುಜನರೇ, ಈ ತೋರಣವತ್ಥುವಿನಲ್ಲಿ ನಾನು ಇಂದು ಇಲ್ಲಿ ಭೇಟಿ ಮಾಡಲು ಸಮರ್ಥರಾದ ಸಮಣ ಅಥವಾ ಬ್ರಾಹ್ಮಣರಿದ್ದಾರೆಯೇ, ಅವರನ್ನು ಹುಡುಕಿ ತನ್ನಿ.
ಆಯಿತು ದೇವಾ ಎಂದು ನುಡಿದು ಆತನು ರಾಜ ಪಸೇನದಿಯು ಮಾತನಾಡಲು ಅರ್ಹನಾಗಿದ್ದಂತಹ ಯಾವ ಸಮಣ ಬ್ರಾಹ್ಮಣರು ಆತನಿಗೆ ಹುಡುಕಿದರೂ ಸಿಗಲಿಲ್ಲ. ಆದರೆ ಆತನಿಗೆ ಭಿಕ್ಖುಣಿ ಖೇಮಾಳು ತೋರಣವತ್ಥುವಿನಲ್ಲಿ ಕಂಡು, ಈ ವಿಷಯವನ್ನು ಆತನು ರಾಜ ಪಸೇನದಿಗೆ ಬಂದು ಹೀಗೆ ವಿನಂತಿಸಿಕೊಂಡನು: ದೇವಾ, ಈ ತೋರಣವತ್ಥುವಿನಲ್ಲಿ ತಾವು ಭೇಟಿ ಮಾಡತಕ್ಕಂತಹ ಯಾವ ಸಮಣರಾಗಲಿ ಅಥವಾ ಬ್ರಾಹ್ಮಣರಾಗಲಿ ನನಗೆ ಸಿಗಲಿಲ್ಲ. ಆದರೆ ದೇವಾ ಸಮೀಪದಲ್ಲೇ ಖೇಮಾ ಎಂಬ ತೇಜಸ್ವಿ ಭಿಕ್ಖುಣಿಯೊಬ್ಬಳು ಇದ್ದಾಳೆ. ಆಕೆಯು ಅರಹಂತರು, ಸಮ್ಮಾಸಂಬುದ್ಧರೂ ಆದ ಭಗವಾನರ ಶಿಷ್ಯೆಯಾಗಿರುವಳು. ಆಕೆಯ ಬಗ್ಗೆ ಈ ಬಗೆಯ ಖ್ಯಾತಿ ಹರಡಿದೆ: ಆಕೆಯು ಪ್ರಾಜ್ಞಳು, ಸಮರ್ಥಳು, ಬುದ್ಧಿಶಾಲಿ, ಪಂಡಿತಳು, ವಾಗ್ಮಿ, ಮೇಧಾವಿಯು ಹಾಗು ವಾಚಾಳು, ಕುಶಲಳು ಆಗಿದ್ದಾಳೆ. ಹೀಗಾಗಿ ದೇವಾ, ಖಂಡಿತವಾಗಿ ನೀವು ಆಕೆಯನ್ನೇ ಭೇಟಿಮಾಡಿರಿ.
ಆಗ ರಾಜ ಪಸೇನದಿಯು ಭಿಕ್ಖುಣಿ ಖೇಮಾಳ ಬಳಿಗೆ ಬಂದನು. ಆಕೆಗೆ ವಂದಿಸಿ, ಗೌರವದಿಂದ ಒಂದೆಡೆ ಕುಳಿತನು ಹಾಗು ಆಕೆಯೊಂದಿಗೆ ಹೀಗೆಂದನು: ಆರ್ಯೆ, ತಥಾಗತರು ಮರಣದ ನಂತರ ಇರುತ್ತಾರೆಯೇ? ಮಹಾರಾಜ, ಭಗವಾನರು, ತಥಾಗತರು ಮರಣದ ನಂತರ ಇರುವರು ಎಂದು ಘೋಷಿಸಿಲ್ಲ. ಹಾಗಾದರೆ ಆರ್ಯೆ, ತಥಾಗತರು ಮರಣದ ನಂತರ ಇರುವುದಿಲ್ಲವೆ? ಮಹಾರಾಜ, ಭಗವಾನರು, ತಥಾಗತರು ಮರಣದ ನಂತರ ಇರುವುದಿಲ್ಲ ಎಂದೂ ಘೋಷಿಸಿಲ್ಲ. ಹಾಗಾದರೆ ಇದು ಹೇಗೆ ಆರ್ಯೆ, ತಥಾಗತರು ಇರುವರು ಹಾಗು ಇರುವುದಿಲ್ಲ ಎರಡೂ ಸಾಧ್ಯವೇ? ಮಹಾರಾಜ, ಭಗವಾನರು, ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲ ಈ ಎರಡೂ ಸಾಧ್ಯವೆಂದು ಘೋಷಿಸಿಲ್ಲ. ಆರ್ಯೆ, ಹಾಗಾದರೆ ಮರಣದ ನಂತರ ತಥಾಗತರು ಇರುತ್ತಾರೆ ಎಂಬುದಿಲ್ಲ ಹಾಗೆಯೇ ಇಲ್ಲದೇ ಹೋಗುತ್ತಾರೆ ಎಂಬುದು ಇಲ್ಲವೇ? ಮಹಾರಾಜ, ಭಗವಾನರು ತಥಾಗತರು ಮರಣದ ನಂತರ ಇರುತ್ತಾರೆ ಎಂಬುದು ಇಲ್ಲ, ಇರುವುದಿಲ್ಲ ಎಂಬುದಿ ಇಲ್ಲ ಎಂದು ಸಹಾ ಘೋಷಿಸಿಲ್ಲ.
ಇದು ಹೇಗೆ ಆರ್ಯೆ, ಯಾವಾಗ ತಥಾಗತ ಮರಣದ ನಂತರ ಇರುತ್ತಾರೆಯೇ ಎಂದು ಕೇಳಿದಾಗ, ಭಗವಾನರು ಹಾಗೆ ಘೋಷಿಸಿಲ್ಲ ಎಂದಿರಿ, ಆರ್ಯೆ ತಥಾಗತರು ಮರಣದ ನಂತರ ಇರುವುದಿಲ್ಲವೆ ಎಂದು ಕೇಳಿದಾಗ ಭಗವಾನರೂ ಹಾಗೆಯೂ ಘೋಷಿಸಿಲ್ಲವೆಂದಿರಿ. ಆಗ ನಾವು ತಥಾಗತರು ಮರಣದ ನಂತರ ಇರುತ್ತಾರೆ, ಇರುವುದಿಲ್ಲ ಈ ಎರಡೂ ಸಾಧ್ಯತೆ ಇರುವುದೇ ಎಂದು ಪ್ರಶ್ನಿಸಿದಾಗಲೂ ನೀವು ಭಗವಾನರು ಹಾಗೆ ಘೋಷಿಸಿಲ್ಲ ಎಂದು ನುಡಿದಿರಿ. ಕೊನೆಗೆ ತಥಾಗತರು ಮರಣದ ನಂತರ ಇರುತ್ತಾರೆ ಎಂದೂ ಇಲ್ಲ, ಇರುವುದಿಲ್ಲ ಎಂದೂ ಇಲ್ಲವೆ ಎಂದು ಪ್ರಶ್ನಿಸಿದಾಗ, ಭಗವಾನರು ಹೀಗೂ ಘೋಷಿಸಿಲ್ಲ ಎಂದಿರಿ. ಈಗ ಏನು ಆರ್ಯೆ, ಯಾವ ಕಾರಣದಿಂದಾಗಿ, ಯಾವ ಉದ್ದೇಶದಿಂದಾಗಿ ಭಗವಾನರು ಹಾಗೆ ನುಡಿದಿಲ್ಲ? ಏತಕ್ಕಾಗಿ ಭಗವಾನರು ನುಡಿದಿಲ್ಲ?
ಸರಿ ಮಹಾರಾಜರೇ, ನಾನು ಈ ವಿಷಯಕ್ಕೆ ಸಂಬಂಧಿಸಿದಂತೆಯೇ ಪ್ರಶ್ನಿಸುವೆನು, ನಿಮಗೆ ಸಮಂಜಸವೆನಿಸಿದಂತೆ ಉತ್ತರಿಸಿರಿ. ನಿಮ್ಮಲ್ಲಿ ಲೆಕ್ಕಿಗನು ಅಥವಾ ಗಣಿತಜ್ಞನು ಅಥವಾ ಗಣಕಶಾಸ್ತ್ರಜ್ಞನು ಇರಬೇಕಲ್ಲವೇ? ಆತನು ಗಂಗಾತೀರದ ಮರಳನ್ನು ಹೀಗೆ ಲೆಕ್ಕಹಾಕಬಲ್ಲನೇ? ಹೇಗೆಂದರೆ ಇಲ್ಲಿ ಬಹಳಷ್ಟು ಮರಳು ಕಣಗಳಿವೆ ಅಥವಾ ಲಕ್ಷಕ್ಕಿಂತಲೂ ಹೆಚ್ಚಿನ ಮರಳಲು ಕಣಗಳಿವೆ. ಇಲ್ಲ ಆರ್ಯೆ, ಏಕೆಂದರೆ (ಸಮುದ್ರವು ಮಹಾನದಿಯು ಮಹಾ ಆಳವಾದುದು, ಅಳತೆಗೆ ಮೀರಿದ್ದು, ಅಳೆಯಲು ದುಷ್ಕರವಾದದ್ದು. ಅದೇರೀತಿಯಾಗಿ ಮಹಾರಾಜ, ತಥಾಗತರ ಬಗ್ಗೆ ವಿವರಿಸಲು ದುಷ್ಕರವಾಗಿದೆ. ಹೇಗೆಂದರೆ ಯಾವುದರಿಂದ ತಥಾಗತರನ್ನು ನಾನು ಎಣಿಸುತ್ತೇನೆಯೋ ಅವೆಲ್ಲವೂ ತಾಳೆಯ ಮರದ ಬುಡದಂತೆ ಅವರಿಂದ ಕತ್ತರಿಸಲ್ಪಟ್ಟಿದೆ. ಭವಿಷ್ಯದಲ್ಲಿ ಉದಯಿಸದಂತೆ ಮಾಡಲ್ಪಟ್ಟಿದೆ. ತಥಾಗತರನ್ನು ಯಾವ ಭೌತಿಕ ರೂಪದಿಂದ ಅಳೆಯುತ್ತಾರೋ, ಆ ಭೌತಿಕ ರೂಪವೂ ತಾಳೆಯ ಮರದ ಬುಡದಂತೆ ಕತ್ತರಿಸಿಹಾಕಿದ್ದಾರೆ. ತಥಾಗತರು ಮಹಾ ಸಮುದ್ರದ ರೀತಿಯಲ್ಲಿ ಆಳವಾದವರು, ಅಳೆಯಲಾಗದವರು. ಆದ್ದರಿಂದಾಗಿ ತಥಾಗತರು ಮರಣದ ನಂತರ ಇರುವರು ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುವುದಿಲ್ಲ ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುವರು ಹೌದು, ಇಲ್ಲ ಎಂಬುದು ಹೌದು ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುತ್ತಾರೆ ಎಂಬುದಿಲ್ಲ, ಇರುವುದಿಲ್ಲ ಎಂಬುದಿಲ್ಲ ಎಂದು ಅನ್ವಯವಾಗುವುದಿಲ್ಲ.
ಯಾವ ವೇದನೆಗಳಿಂದ ತಥಾಗತರನ್ನು ಗುರುತಿಸುತ್ತೇವೆಯೋ... ಯಾವ ಸನ್ಯಾ (ಗ್ರಹಿಕೆಗಳಿಂದ) ತಥಾಗತರನ್ನು ಗುರುತಿಸುತ್ತೇವೆಯೋ... ಯಾವ ಸಂಖಾರಗಳಿಂದ ತಥಾಗತರನ್ನು ಗುರುತಿಸುತ್ತೇವೆಯೋ... ಯಾವ ವಿಞ್ಞಾನಗಳಿಂದ ತಥಾಗತರನ್ನು ಗುರುತಿಸುತ್ತೇವೆಯೋ ಅವೆಲ್ಲವೂ ತಥಾಗತರಿಂದ ತೊರೆದುಹಾಕಲ್ಪಟ್ಟಿದೆ, ಕತ್ತರಿಸಲ್ಪಟ್ಟಿದೆ. ಹೇಗೆಂದರೆ ತಾಳೆಯ ಬುಡದಂತೆ, ಹೀಗಾಗಿ ಭವಿಷ್ಯದಲ್ಲಿ ಉದಯವಾಗುವ ಸಂದರ್ಭವೇ ಇಲ್ಲ. ತಥಾಗತರು ಓ ಮಹಾರಾಜ, ಯಾವ ವಿಞ್ಞಾನದಿಂದ ನಾವು ಪರಿಗಣಿಸುತ್ತೇವೆಯೋ, ಅವೆಲ್ಲದರಿಂದ ಅವರು ಮುಕ್ತರಾಗಿದ್ದಾರೆ. ಅವರು ಅಳೆಯಲಾಗದವರು. ಮಹಾಸಮುದ್ರದಂತೆ ಅಳೆಯಲು ಕಠಿಣವಾದವರು. ಹೀಗಾಗಿ ತಥಾಗತರು ಮರಣದ ನಂತರ ಇರುತ್ತಾರೆ ಎಂಬುದು ಅನ್ವಯವಾಗುವುದಿಲ್ಲ; ತಥಾಗತರು ಮರಣದ ನಂತರ ಇರುವುದಿಲ್ಲ ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲ ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುತ್ತಾರೆ ಎಂಬುದು ಇಲ್ಲ, ಇರುವುದಿಲ್ಲ ಎಂಬುವುದು ಇಲ್ಲ, ಎನ್ನುವುದು ಅನ್ವಯವಾಗುವುದಿಲ್ಲ. ಹೀಗೆ ಖೇಮಾ ಭಿಕ್ಖುಣಿಯು ಉತ್ತರಿಸಿದಾಗ, ರಾಜ ಪಸೇನದಿಯು ಆನಂದಪಟ್ಟರು. ಅತ್ಯಂತ ಆಹ್ಲಾದತೆಯನ್ನು ಅನುಭವಿಸಿದವರಾಗಿ ಆಕೆಗೆ ಗೌರವಿಸಿ, ವಂದಿಸಿ ಅಲ್ಲಿಂದ ಎದ್ದು ಆಕೆಯ ಬಲಭಾಗದಿಂದ ತಿರುಗಿ ಹೊರಟನು.
ನಂತರ ರಾಜ ಪಸೇನದಿಯು ಇನ್ನೊಂದು ಸಂದರ್ಭದಲ್ಲಿ ಭಗವಾನರ ಬಳಿಗೆ ಬಂದನು. ಭಗವಾನರಿಗೆ ಗೌರವಪೂರ್ವಕವಾಗಿ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಭಗವಾನರೊಂದಿಗೆ ಸಂಭಾಷಣೆ ಆರಂಭಿಸಿದನು. ಭಂತೆ, ತಥಾಗತರು ಮರಣದ ತರುವಾಯ ಇರುವರೇ? ಮಹಾರಾಜ, ತಥಾಗತರು ಮರಣದ ತರುವಾಯ ಇರುವರೆಂದು ನಾನು ಘೋಷಿಸಿಲ್ಲ..... ಮಹಾರಾಜ, ತಥಾಗತರು ಮರಣದ ತರುವಾಯ ಇರುತ್ತಾರೆ ಎಂದೂ ಇಲ್ಲ, ಇರುವುದಿಲ್ಲ ಎಂದೂ ಇಲ್ಲ ಎಂದು ನಾನು ಘೋಷಿಸಿಲ್ಲ. ಇದು ಹೇಗೆ ಭಂತೆ, ಯಾವಾಗ ನಾನು ತಥಾಗತರು ಮರಣದ ತರುವಾಯ ಇರುವರೇ ಎಂದು ಕೇಳಿದಾಗ.... ಮಹಾರಾಜ ನಾನು ಹಾಗೆ ಘೋಷಿಸಿಲ್ಲ ಎಂದು ನುಡಿದಿರಿ, ಈಗ ಭಂತೆ ಯಾವ ಕಾರಣಕ್ಕಾಗಿ, ಯಾವ ಉದ್ದೇಶದಿಂದ, ಏತಕ್ಕಾಗಿ ಭಗವಾನರು ಇದನ್ನು ಘೋಷಿಸಿಲ್ಲ?
ಹಾಗಾದರೆ ಮಹಾರಾಜ, ಇದಕ್ಕೆ ಸಂಬಂಧಿಸಿದಂತೆ ಪ್ರಶ್ನಿಸುವೆನು, ನಿನಗೆ ಸರಿ ಎನಿಸಿದಂತೆ ಉತ್ತರಿಸು. ಮಹಾರಾಜ, ನಿನ್ನಲ್ಲಿ ಲೆಕ್ಕಿಗನು ಅಥವಾ ಗಣಿತಜ್ಞನು ಇರಬೇಕಲ್ಲವೆ? (ಎಲ್ಲಾ ಹಿಂದಿನಂತೆಯೇ....) ಮಹಾರಾಜ, ತಥಾಗತರು ಅರಿವಿನಿಂದ ಅಳೆಯಬಹುದಾದ ಎಲ್ಲಾ ಬಗೆಯ ಪ್ರಮಾಣಗಳಿಂದ ಮುಕ್ತರಾಗಿದ್ದಾರೆ. ಅವರು ಆಳವಾದವರು, ಅಳತೆಗೆ ನಿಲುಕದವರು, ಸಮುದ್ರದಂತೆ ಅಳೆಯಲು ಕ್ಲಿಷ್ಟರಾಗಿರುವವರು. ಹೀಗಾಗಿ ತಥಾಗತರು ಮರಣದ ನಂತರ ಇರುತ್ತಾರೆ ಎಂಬುದು ಅನ್ವಯವಾಗುವುದಿಲ್ಲ. ಅದೇರೀತಿ ಮರಣದ ನಂತರ ಇರುವುದಿಲ್ಲ ಎಂಬುದು ಅನ್ವಯವಾಗುವುದಿಲ್ಲ.
ಆಶ್ಚರ್ಯಕರ ಭಂತೆ, ಅದ್ಭುತ ಭಂತೆ! ಅರ್ಥವಾಗಲಿ, ವರ್ಣನೆಯಾಗಲಿ, ವ್ಯಂಜನವಾಗಲಿ ಹೇಗೆ ಗುರುವು ಅದ್ಭುತಶಾಲಿಯೋ, ಹಾಗೆಯೇ ಶಿಷ್ಯೆಯೂ ಸಹಾ ಪ್ರತಿಭಾಶಾಲಿಯಾಗಿರುವಳು. ನಮ್ಮಿಬ್ಬರ ಬೋಧನೆಯಲ್ಲಿ ಏಕಸಾಮ್ಯತೆಯಿದೆ, ವಿರೋಧವಿಲ್ಲ. ಇದೇ ಅಗ್ರವಾದ ವಿಷಯವಾಗಿದೆ. ಒಂದು ಸಂದರ್ಭದಲ್ಲಿ ಭಂತೆ, ನಾನು ಭಿಕ್ಖುಣಿ ಖೇಮಾಳ ಬಳಿಗೆ ಹೋಗಿ ಇದೇ ವಿಷಯವಾಗಿ ಪ್ರಶ್ನಿಸಿದ್ದೆನು. ಆ ಮಹಾ ಆರ್ಯೆಯು ಭಗವಾನರ ರೀತಿಯಲ್ಲಿಯೇ ಅರ್ಥಗಭರ್ಿತವಾಗಿ ಅದೇರೀತಿಯ ವರ್ಣನೆಯಿಂದಾಗಿ, ವ್ಯಂಜನಗಳಿಂದಾಗಿ ವಿವರಿಸಿದಳು. ಇದು ನಿಜಕ್ಕೂ ಆಶ್ಚರ್ಯಕರವಾಗಿದೆ, ಅದ್ಭುತವಾಗಿದೆ. ಭಂತೆ, ಇಬ್ಬರಲ್ಲೂ ಏಕಸಾಮ್ಯತೆಯಿದೆ, ವಿರೋಧಾಭಾಸವಿಲ್ಲ. ಇದೇ ಅಗ್ರ ವಿಷಯವಾಗಿದೆ. ಪೂಜ್ಯ ಭಂತೆ, ನಾವು ಹೋಗಬೇಕಾಗಿದೆ, ಬಹಳ ಕಾರ್ಯಗಳಿವೆ. ಮಹಾರಾಜ, ಹಾಗಾದರೆ ನಿನಗೆ ಸರಿ ಎನಿಸಿದಂತೆ ಹೊರಡುವಂತಾಗು. ಆಗ ಪಸೇನದಿಯು ಆನಂದದಿಂದ, ಆಹ್ಲಾದತೆಯಿಂದ ಕೂಡಿದವನಾಗಿ, ಆಸನದಿಂದೆದ್ದು, ಭಗವಾನರಿಗೆ ಗೌರವಪೂರ್ವಕವಾಗಿ ವಂದಿಸಿ, ಬಲಗಡೆಯಿಂದ ಪ್ರದಕ್ಷಿಸಿ ಅಲ್ಲಿಂದ ಹೊರಟನು.


2. ಅನುರಾದ ಸುತ್ತ 
411. ಒಮ್ಮೆ ಭಗವಾನರು ವೈಶಾಲಿಯ ಮಹಾವನದಲ್ಲಿರುವ ಕೂಟಾಗಾರ ಸಾಲಯದಲ್ಲಿ (ದೊಡ್ಡ ಸಭಾಂಗಣದಲ್ಲಿ) ವಾಸಿಸುತ್ತಿದ್ದರು. ಅದೇ ಸಮಯದಲ್ಲಿ ಆಯುಷ್ಮಂತ ಅನುರಾದರವರು ಭಗವಾನರಿಂದ ದೂರವಲ್ಲದ ಅರಣ್ಯ ಕುಟೀರದಲ್ಲಿ ವಿಹರಿಸುತ್ತಿದ್ದನು. ಆಗ ಬಹುಸಂಖ್ಯಾತ ಪರಿವ್ರಾಜಕ ತೀರ್ಥಂಕರು ಪೂಜ್ಯ ಅನುರುದ್ದರ ಬಳಿಗೆ ಹೋಗಿ ಅವರಲ್ಲಿ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡರು. ನಂತರ ಒಂದೆಡೆ ಕುಳಿತರು. ಆಗ ಅವರು ಪೂಜ್ಯ ಅನುರುದ್ದರೊಡನೆ ಹೀಗೆ ಕೇಳಿದರು: ಆಯುಷ್ಮಂತ ಅನುರುದ್ದ, ತಥಾಗತರು ಉತ್ತಮ ಪುರುಷರಾಗಿದ್ದಾರೆ, ಪರಮಶ್ರೇಷ್ಠ ಪುರುಷರಾಗಿದ್ದಾರೆ, ಪರಮೋತ್ತರವಾದುದನ್ನು ಸಿದ್ಧಿಸಿಕೊಂಡಿದ್ದಾರೆ, ಅಂತಹ ತಥಾಗತರು ಈ ನಾಲ್ಕು ಸ್ಥಿತಿಗಳಲ್ಲಿ ಒಂದನ್ನು ಭವಿಷ್ಯದಲ್ಲಿ ಪಡೆಯಬಹುದೇ? ಅದೆಂದರೆ ತಥಾಗತರು ಮರಣದ ನಂತರ ಇರುವರು, ತಥಾಗತರು ಮರಣದ ನಂತರ ಇರುವುದಿಲ್ಲ, ತಥಾಗತರು ಮರಣದ ನಂತರ ಇರುವರು ಹಾಗು ಇಲ್ಲ ಮತ್ತು ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಇಲ್ಲ. ಯಾವಾಗ ಹೀಗೆ ಕೇಳಲಾಯಿತೋ, ಆಗ ಆಯುಷ್ಮಂತ ಅನುರುದ್ದರು ಆ ಪರಿಬ್ಬಾಜಕರಿಗೆ ಹೀಗೆ ಹೇಳಿದರು: ಆಯುಷ್ಮಂತರೇ, ತಥಾಗತರು ಉತ್ತಮ ಪುರುಷರಾಗಿದ್ದಾರೆ, ಪರಮಶ್ರೇಷ್ಠ ಪುರುಷರಾಗಿದ್ದಾರೆ, ಪರಮೋತ್ತರವಾದುದನ್ನು ಸಿದ್ಧಿಸಿಕೊಂಡಿದ್ದಾರೆ. ಅಂತಹ ತಥಾಗತರು ಈ ನಾಲ್ಕು ಸ್ಥಿತಿಗಳಿಗೆ ಅತೀತವಾದುದನ್ನು ಗಳಿಸುವರು. ಯಾವಾಗ ಹೇಗೆ ಆ ಪರಿಭಾಜಕರು ಕೇಳಿದರೋ ಅವರು ಅನುರುದ್ದರೊಂದಿಗೆಯೇ ಅವರ ಬಗ್ಗೆ ಹೀಗೆ ಹೇಳಿದರು: ಈ ಭಿಕ್ಷುವು ಹೊಸತಾಗಿ ಸಂಘಕ್ಕೆ ಸೇರಿದವನಾಗಿರಬೇಕು ಅಥವಾ ಭಿಕ್ಷುತನವೇ ಇನ್ನೂ ಹೊಂದಿಲ್ಲದಿರಬಹುದು ಅಥವಾ ಮುರ್ಖನಾಗಿರಬಹುದು ಅಥವಾ ಅಪಕ್ವ ಅನುಭವಿಯು ಆಗಿರಬಹುದು ಎಂದು ಹೀಗೆ ಆಯುಷ್ಮಂತರ ಬಗ್ಗೆ ಅಸಮಾಧಾನ ಹೊಂದಿ ಅಲ್ಲಿಂದ ಎದ್ದು ಹೊರಟರು.
ಅವರು ಹೊರಟ ಸ್ವಲ್ಪಕಾಲದಲ್ಲಿ ಆಯುಷ್ಮಂತ ಅನುರುದ್ದರಿಗೆ ಹೀಗೆ ಆಲೋಚನೆ ಉಂಟಾಯಿತು: ಒಂದುವೇಲೆ ಪುನಃ ಆ ಪರಿವ್ರಾಜಕರು ನನ್ನನ್ನು ಪ್ರಶ್ನಿಸಿದರೆ ನಾನು ಹೇಗೆ ತಥಾಗತರಂತೆಯೆ, ಸತ್ಯದ ರೀತಿಯಲ್ಲಿಯೇ ಉತ್ತರಿಸಬಹುದು. ಭಗವಾನರಿಗೆ ಅಪಚಾರವಾಗದಂತೆ, ಧಮ್ಮಕ್ಕೆ, ಪರಮಸತ್ಯಕ್ಕೆ ಅಪಚಾರವಾಗದಂತೆ ಹೇಗೆ ನಾನು ಉತ್ತರಿಸಬಹುದು? ಆಗ ನನಗೆ ಯಾರು ಸಹಾ ಟೀಕಿಸಲು ನೆಲೆಸಿಗಬಾರದು ಎಂದು ಯೋಚಿಸುತ್ತ, ಅಲ್ಲಿಂದ ಎದ್ದು ಭಗವಾನರು ಇರುವಲ್ಲಿಗೆ ಹೋಗಿ, ಭಗವಾನರಿಗೆ ಗೌರವದಿಂದ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಹೀಗೆ ನಿವೇದಿಸಿಕೊಂಡನು: ಭಗವಾನ್, ನಾನು ತಾವು ವಾಸಿಸುತ್ತಿರುವ ಮಹಾವನಕ್ಕೆ ಅಷ್ಟೇನೂ ದೂರವಿಲ್ಲದ ಸ್ಥಳದಲ್ಲಿ ನೆಲೆಸಿರುವಾಗ ಪರಿವ್ರಾಜಕರ ಗುಂಪೊಂದು ಬಂದು ಹೀಗೆ ಪ್ರಶ್ನಿಸಿದರು: ಆಯುಷ್ಮಂತ ಅನುರುದ್ಧ, ತಥಾಗತರು ಉತ್ತಮ ಪುರುಷರಾಗಿದ್ದಾರೆ... ಆಗ ನಾನು ಹೀಗೆ ಉತ್ತರಿಸಿದೆನು: ಆಯುಷ್ಮಂತರೇ, ತಥಾಗತರು ಉತ್ತಮ ಪುರುಷರಾಗಿರುವರು... ಆಗ ಅವರು... ಹೀಗೆ ನುಡಿದು ಅಲ್ಲಿಂದ ಹೊರಟರು. ಆಗ ನಾನು ಹೀಗೆ ಯೋಚಿಸಿದೆನು: ಒಂದುವೇಳೆ ಪುನಃ ಆ ಪರಿವ್ರಾಜಕರು ಪ್ರಶ್ನಿಸಿದರೆ ಯಾವರೀತಿ ಉತ್ತರಿಸಬೇಕು...
ಅನುರುದ್ದ, ಇದನ್ನು ಹೇಗೆ ತಿಳಿಯುವೆ, ರೂಪವು ನಿತ್ಯವೋ ಅಥವಾ ಅನಿತ್ಯವೋ? ಅನಿತ್ಯ ಭಂತೆ.
ಅಂತಹ ಅನಿತ್ಯವಾದದ್ದು ದುಃಖವನ್ನು ನೀಡುತ್ತದೋ ಅಥವಾ ಸುಖವನ್ನು ನೀಡುತ್ತದೋ? ದುಃಖವನ್ನು ಭಂತೆ.
ಯಾವುದು ಅನಿತ್ಯವೋ, ದುಃಖವನ್ನು ನೀಡುವಂತಹುದೋ ಅಂತಹುದರ ಬಗ್ಗೆ ಹೀಗೆ ತಿಳಿಯುವುದು ಸಮಂಜಸವೋ, ಇದು ನನ್ನದು, ಇದು ನನ್ನ ಆತ್ಮ, ಇದೇ ನಾನು. ಇಲ್ಲ ಭಂತೆ, ಸಮಂಜಸವಲ್ಲ.
ವೇದನೆಯು ನಿತ್ಯವೋ ಅಥವಾ ಅನಿತ್ಯವೋ.... ಸಞ್ಞಾವು.... ಸಂಖಾರವು.... ವಿಞ್ಞಾನವು ನಿತ್ಯವೋ ಅಥವಾ ಅನಿತ್ಯವೋ? ಅನಿತ್ಯ ಭಂತೆ.
ಅಂತಹ ಅನಿತ್ಯವಾದದ್ದು ದುಃಖವನ್ನು ನೀಡುತ್ತದೋ ಅಥವಾ ಸುಖವನ್ನು ನೀಡುತ್ತದೋ? ದುಃಖವನ್ನು ಭಂತೆ.
ಯಾವುದು ಪರಿವರ್ತನಾ ನಿಯಮವನ್ನು ಹೊಂದಿದಂತಹ ಅನಿತ್ಯವೋ, ದುಃಖ ಪರಿಣಾಮ ಬೀರುವಂತಹುದೋ ಅಂತಹುದನ್ನು ಹೀಗೆ ಪರಿಗಣಿಸುವುದು ಸಮಂಜಸವೇ? ಇದು ನನ್ನದು, ಇದು ನನ್ನ ಆತ್ಮ, ಇದೇ ನಾನು ಎಂದು. ಇಲ್ಲ ಭಂತೆ.
ಇದನ್ನು ಹೇಗೆ ತಿಳಿಯುವೆ ಅನುರುದ್ಧ, ರೂಪವೇ (ದೇಹಾಕೃತಿಯೆ) ತಥಾಗತರೇ? ಇಲ್ಲ ಭಂತೆ. ಅಥವಾ ವೇದನೆಗಳನ್ನೇ ತಥಾಗತರೆಂದು ಪರಿಗಣಿಸುವೆಯಾ? ಇಲ್ಲ ಭಂತೆ. ಅಥವಾ ಗ್ರಹಿಕೆಗಳನ್ನೇ... ಸಂಖಾರಗಳನ್ನೇ... ವಿಞ್ಞಾನ (ಅರಿವನ್ನು) ತಥಾಗತರೆಂದು ಪರಿಗಣಿಸುವೆಯಾ? ಇಲ್ಲ ಭಂತೆ.
ಈಗ ಹೇಗೆ ಭಾವಿಸುವೆ ಅನುರುದ್ದ, ತಥಾಗತರನ್ನು ರೂಪ (ದೇಹಾಕೃತಿ) ಹೊಂದಿರುವ ಜೀವಿಯೆಂದು ಭಾವಿಸುವೆಯಾ?... ದೇಹಕ್ಕೆ ಹೊರತಾಗಿರುವ... ಎಂದು ಭಾವಿಸುವೆಯಾ? ತಥಾಗತರು ವೇದನೆ (ಭಾವವೇಶಗಳು) ಹೊಂದಿರುವ ಜೀವಿಯೆಂದು ತಿಳಿದಿರುವೆಯಾ... ವೇದನೆಗಳಿಗೆ ಹೊರತಾಗಿರುವ... ಎಂದು ಭಾವಿಸುವೆಯಾ? ಅದೇರೀತಿ ಗ್ರಹಿಕೆ... ಸಂಖಾರ... ವಿಞ್ಞಾನ (ಅರಿವು) ವನ್ನು ಹೊಂದಿರುವ ಜೀವಿಯೆಂದು ಭಾವಿಸುವೆಯಾ?... ಅಥವಾ ಅರಿವಿಗೆ ಹೊರತಾಗಿ ಏನು ಎಂದು ಭಾವಿಸುವೆಯಾ? ಇಲ್ಲ ಭಂತೆ.
ಅನುರುದ್ದ ಯಾವರೀತಿ ತಿಳಿಯುವೆ? ತಥಾಗತರನ್ನು ರೂಪವೆಂದು (ದೇಹಾಕೃತಿ)... ವೇದನಗಳೆಂದು... ಗ್ರಹಿಕೆಗಳೆಂದು... ಸಂಖಾರವೆಂದು... ವಿಞ್ಞಾನವೆಂದು ತಿಳಿಯುವೆಯಾ? ಇಲ್ಲ ಭಂತೆ.
ಹಾಗಾದರೆ ತಥಾಗತರೆಂದರೆ ರೂಪವಿಲ್ಲದ, ವೇದನೆಗಳಿಲ್ಲದ, ಗ್ರಹಿಕೆಗಳಿಲ್ಲದ, ಸಂಖಾರಗಳಿಲ್ಲದ, ವಿಞ್ಞಾನಗಳಿಲ್ಲದ (ಏನೂ ಒಂದು) ಎಂದು ತಿಳಿಯುವೆಯಾ? ಇಲ್ಲ ಭಂತೆ.
ಹಾಗಾದರೆ ಅನುರುದ್ದ, ತಥಾಗತರು ಸತ್ಯವೆಂದು ಅಥವಾ ವಾಸ್ತವವೆಂದು ಈ ವರ್ತಮಾನ ಜೀವಿತದಲ್ಲೇ ಸ್ಪಷ್ಟ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲದೆ ಇರುವಾಗ, ಈ ಹಿಂದಿನ ನಿರ್ಣಯದಂತೆ ನರ್ಧರಿಸುವುದು ಸಮಂಜಸವೇ? ಹೇಗೆಂದರೆ: ಆಯುಷ್ಮಂತರೇ, ತಥಾಗತರು ಉತ್ತಮ ಪುರುಷರು... ಪರಮಪುರುಷರು... ಪರಮೋತ್ತರವಾದುದನ್ನು ಸಿದ್ಧಿಸಿದವರು, ಅರಹಂತರು ಮರಣದ ನಂತರ ಈ ನಾಲ್ಕು ಸ್ಥಿತಿಗಳಲ್ಲಿ ಒಂದನ್ನು ಪಡೆಯುವರು. ಅವೆಂದರೆ: ತಥಾಗತರು ಇರುತ್ತಾರೆ, ತಥಾಗತರು ಇರುವುದಿಲ್ಲ, ತಥಾಗತರು ಇರುತ್ತಾರೆ ಹಾಗು ಇರುವುದಿಲ್ಲ. ತಥಾಗತರು ಇರುವುದಿಲ್ಲ, ತಥಾಗತರು ಇರುತ್ತಾರೆ ಹಾಗು ಇರುವುದಿಲ್ಲ. ತಥಾಗತರು ಇರುವುದಿಲ್ಲ, ಇಲ್ಲದೆಯೂ ಇರುವುದಿಲ್ಲ.
ಇಲ್ಲ ಭಂತೆ. ಸಾಧು ಸಾಧು ಅನುರಾಧ! ಈ ಹಿಂದೆಯು ಹಾಗು ಈಗಲೂ ನಾನು ಘೋಷಿಸುವುದು ಏನೆಂದರೆ ಕೇವಲ ದುಃಖ ಹಾಗು ದುಃಖದ ನಿರೋಧ.


3. ಪಠಮ ಸಾರಿಪುತ್ರ ಕೋಟ್ಠಕ ಸುತ್ತಂ

412. ಒಮ್ಮೆ ಪೂಜ್ಯ ಸಾರಿಪುತ್ತರು ಮತ್ತು ಪೂಜ್ಯ ಮಹಾಕೊಟ್ಠಿಕರು ಇಸಿಪಟ್ಟಣದ ಸಮೀಪದ ವಾರಾಣಾಸಿಯಲ್ಲಿ ವಿಹರಿಸುತ್ತಿದ್ದರು. ಆಗ ಸಂಜೆಯಲ್ಲಿ ಪೂಜ್ಯ ಮಹಾಕೊಟ್ಠಿಕರು ಏಕಾಂತತೆಯಿಂದ ಹೊರಬಂದು, ಸಾರಿಪುತ್ತರ ಸಮೀಪ ಬಂದರು. ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡರು. ನಂತರ ಮಹಾಕೋಟ್ಠಿಕರು ಒಂದೆಡೆ ಕುಳಿತು ಹೀಗೆ ಹೇಳಿದರು:
ಇದು ಹೇಗೆ ಆಯುಷ್ಮಂತ ಸಾರಿಪುತ್ತ, ತಥಾಗತರು ಮರಣದ ನಂತರ ಇರುವರೇ? ಆಯುಷ್ಮಂತನೆ, ತಥಾಗತರು ಮರಣದ ನಂತರ ಇರುವರೆಂದು ಘೋಷಿಸಿಲ್ಲ. (ಈ ಹಿಂದಿನ ಸುತ್ತಗಳಂತೆ ಸಂಭಾಷಣೆ)... ಮಿತ್ರನೇ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಹೋಗುವುದಿಲ್ಲ... ಎಂದು ಘೋಷಿಸಿಲ್ಲ.
ಹೇಗೆ ಆಯುಷ್ಮಂತನೇ, ಯಾವಾಗ ನಾನು ತಥಾಗತರು ಮರಣದ ನಂತರ... ಘೋಷಿಸಿಲ್ಲ ಎಂದು ಹೇಳುವಿರಿ.
ಆಯುಷ್ಮಂತನೇ (ಈಗ ವಿವರವಾಗಿ ಚಚರ್ಿಸೋಣ) ತಥಾಗತರು ಮರಣದ ನಂತರ ಇರುತ್ತಾರೆ ಎಂದರೆ ಅದು ದೇಹಾಕೃತಿಗೆ (ರೂಪಕ್ಕೆ) ಒಳಗೊಳ್ಳುವಿಕೆಯಾಗುವುದು. ಅದೇರೀತಿ ತಥಾಗತರು ಮರಣದ ನಂತರ ಇಲ್ಲ ಎಂದರೆ ಇದು ಸಹಾ ರೂಪಕ್ಕೆ ಒಳಗೊಳ್ಳವಿಕೆಯಾಗುವುದು. ಹಾಗೆಯೇ ತಥಾಗತರು... ರೂಪಕ್ಕೆ ಒಳಗೊಳ್ಳುವಿಕೆಯಾಗುವುದು.
ಹಾಗೆಯೇ ತಥಾಗತರು ಮರಣದ ನಂತರ ಇರುವರು ಎಂಬುದು ವೇದನೆಗಳಿಗೆ ಒಳಗೊಳ್ಳುವಿಕೆಯಾಗುವುದು... ಸಞ್ಞಾ (ಗ್ರಹಿಕೆಗಳಿಗೆ) ಒಳಗೊಳ್ಳುವಿಕೆಯಾಗುವುದು... ಸಂಖಾರಗಳಿಗೆ ಒಳಗೊಳ್ಳುವಿಕೆಯಾಗುವುದು... ವಿಞ್ಞಾನ (ಅರಿವಿನ)ಕ್ಕೆ ಒಳಗಾಗುವಿಕೆ ಆಗುವುದು. ಹಾಗೆಯೇ ತಥಾಗತರು ಮರಣದ ನಂತರ ಇರುವುದಿಲ್ಲ. ಇದು ವಿಞ್ಞಾನಕ್ಕೆ ಒಳಗೊಳ್ಳುವಿಕೆಯಾಗುವುದು. ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇಲ್ಲ, ಇದು ವಿಞ್ಞಾನದ ಒಳಗೊಳ್ಳುವಿಕೆಯಾಗುವುದು; ತಥಾಗತರು ಇರುವುದಿಲ್ಲ ಹಾಗೇ ಇಲ್ಲದೆಯೂ ಇಲ್ಲ. ಇದು ವಿಞ್ಞಾನದ ಒಳಗೊಳ್ಳುವಿಕೆಯಾಗುವುದು. ಆದ್ದರಿಂದಾಗಿ ಆಯುಷ್ಮಂತನೇ, ಇದೇ ಕಾರಣಕ್ಕಾಗಿ ಹಾಗು ಇದೇ ಉದ್ದೇಶಕ್ಕಾಗಿ ತಥಾಗತರಿಂದ ಇದು ಹೀಗೆ ಘೋಷಿತವಾಗಿಲ್ಲ.


4. ದುತಿಯ ಸಾರಿಪುತ್ತ ಕೋಟ್ಠಕ ಸುತ್ತಂ

413. (ಪೀಠಿಕೆಯು ಈ ಹಿಂದಿನ ಸುತ್ತದಂತೆಯೇ). ಆಯುಷ್ಮಂತರೇ, ಯಾವ ಕಾರಣದಿಂದಾಗಿ, ಯಾವ ಉದ್ದೇಶದಿಂದಾಗಿ, ಭಗವಾನರಿಂದ ಇವು ಘೋಷಿಸಲ್ಪಟ್ಟಿಲ್ಲ? ಆಯುಷ್ಮಂತನೇ, ಯಾರು ರೂಪವನ್ನು (ದೇಹಾಕೃತಿಯನ್ನು) ಅದು ಹೇಗಿದೆಯೋ ಹಾಗೆ ಅರಿತಿಲ್ಲವೋ, ಅಂತಹವನು ಅದರ ಮೂಲವನ್ನು ಅರಿಯಲಾರನು. ಅಂತಹವನಿಗೆ ರೂಪದ ನಿರೋಧವು ತಿಳಿಯಲಾರದು. ರೂಪದ ನಿರೋಧಗಾಮಿ ಮಾರ್ಗವನ್ನು ಅರಿಯಲಾರನು. ಅಂತಹವನು ಹೀಗೆ ಯೋಚಿಸುತ್ತಾನೆ: ತಥಾಗತರು ಮರಣದ ಇರುತ್ತಾರೆ ಅಥವಾ ತಥಾಗತರು ಮರಣದ ನಂತರ ಇರುವುದಿಲ್ಲ ಅಥವಾ ಮರಣದ ನಂತರ ಇರುತ್ತಾರೆ ಹಾಗು ಇಲ್ಲ. ಅಥವಾ ತಥಾಗತರು ಮರಣದ ನಂತರ ಇರುವುದಿಲ್ಲ ಹಾಗೆ ಇಲ್ಲದೆಯೂ ಇಲ್ಲ. ಹಾಗೆಯೇ ಯಾರು ವೇದನೆಗಳನ್ನು ಅವು ಹೇಗಿವೆಯೋ ಹಾಗೆ ಅರಿಯಲಾರನೋ... ಗ್ರಹಿಕೆಗಳನ್ನು ಅವು ಇರುವಂತೆ ಅರಿಯಲಾರನೋ... ಸಂಖಾರಗಳನ್ನು ಅವು ಇರುವಂತೆಯೇ ಅರಿಯಲಾರನೋ... ವಿಞ್ಞಾನಗಳನ್ನು ಅವು ಇರುವಂತೆಯೇ ಅರಿಯಲಾರನೋ. ಅಂತಹವನಿಗೆ ಇವುಗಳ (ವೇದನೆ/ಗ್ರಹಿಕೆ/ಸಂಖಾರ/ವಿಞ್ಞಾನ) ಉದಯಿಸುವಿಕೆ, ಮೂಲ ಮತ್ತು ಕಾರಣಗಳು ತಿಳಿಯಲಾರವು. ಹಾಗೆಯೇ ಅವುಗಳ ನಿರೋಧವು ತಿಳಿಯಲಾರರು. ಹಾಗೆಯೇ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗವನ್ನು ಅರಿಯಲಾರರು. ಅಂತಹವರು ಮಾತ್ರತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಹಾಗು ಇಲ್ಲ/ಇರುವುದಿಲ್ಲ ಇಲ್ಲದೆಯೂ ಇಲ್ಲ ಎಂದೆಲ್ಲಾ ಯೋಚಿಸುತ್ತಾರೆ.
ಆದರೆ ಆಯುಷ್ಮಂತನೇ, ಯಾರು ರೂಪವನ್ನು ಅದು ಹೇಗಿದೆಯೋ ಅರಿಯುವಂತಹವನು... ವೇದನೆಗಳನ್ನು... ಗ್ರಹಿಕೆಗಳನ್ನು... ಸಂಖಾರಗಳನ್ನು... ವಿಞ್ಞಾನಗಳನ್ನು ಅವು ಹೇಗಿವೆಯೋ ಹಾಗಿ ಅರಿಯಬಲ್ಲವನಿಗೆ ಅವುಗಳ ಉದಯ ಕಾಣಬರುವುದು (ತಿಳಿಯುವುದು). ಹಾಗೆಯೇ ಅವುಗಳ ನಿರೋಧವು ತಿಳಿಯುವುದು. ಹಾಗೆಯೇ ನಿರೋಧಗಾಮಿ ಮಾರ್ಗವು ಗೊತ್ತಾಗುವುದು. ಅಂತಹವನು ಹೀಗೆ ಯೋಚಿಸಲಾರ. ಹೇಗೆಂದರೆ: ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಹಾಗು ಇಲ್ಲದೆಯೂ ಇಲ್ಲ. ಇದೇ ಕಾರಣಕ್ಕಾಗಿ ಹಾಗು ಇದೇ ಉದ್ದೇಶಕ್ಕಾಗಿ ತಥಾಗತರು ಇವನ್ನು ಹೀಗೆ ಘೋಷಿಸಿಲ್ಲ.


5. ತತೀಯ ಸಾರಿಪುತ್ತ ಕೋಟ್ಠಕ ಸುತ್ತಂ

414. ಪೀಠಿಕೆ ಹಿಂದಿನಂತೆಯೇ... ಆಯುಷ್ಮಂತನೇ, ಯಾವ ಕಾರಣಕ್ಕಾಗಿ ಮತ್ತು ಯಾವ ಉದ್ದೇಶಕ್ಕಾಗಿ ತಥಾಗತರಿಂದ ಇದು ಘೋಷಿತವಾಗಿಲ್ಲ. ಆಯುಷ್ಮಂತನೇ, ಯಾರಲ್ಲಿ ರೂಪದ ಬಗ್ಗೆ ವಿರಾಗವಿಲ್ಲವೋ, ರೂಪದ ಬಗ್ಗೆ ಆಸೆರಹಿತತೆ ಉಂಟಾಗಿಲ್ಲವೋ, ರೂಪದ ಬಗ್ಗೆ ಪ್ರೇಮರಹಿತತೆ ಉಂಟಾಗಿಲ್ಲವೋ, ರೂಪದ ಬಗ್ಗೆ ಪಿಪಾಸತೆ ನಾಶವಾಗಿಲ್ಲವೋ, ರೂಪದ ಬಗ್ಗೆ ಭಾವೋದ್ರೇಕಗಳು ರಹಿತವಾಗಿಲ್ಲವೋ, ರೂಪದ ಬಗ್ಗೆ ತಣ್ಹಾವು ನಾಶವಾಗಿಲ್ಲವೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ / ಇರುವುದಿಲ್ಲ / ಇರುತ್ತಾರೆ ಮತ್ತು ಇಲ್ಲ / ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದೆಲ್ಲಾ ಯೋಚಿಸುತ್ತಾರೆ. ಹಾಗೆಯೇ ಆಯುಷ್ಮಂತನೇ, ಯಾರಲ್ಲಿ ವೇದನೆಗಳ ಬಗ್ಗೆ ವಿರಾಗವಿಲ್ಲವೋ... ಯಾರಲ್ಲಿ ಗ್ರಹಿಕೆಗಳ ಬಗ್ಗೆ ವಿರಾಗವಿಲ್ಲವೋ... ಯಾರಲ್ಲಿ ಸಂಖಾರಗಳ ಬಗ್ಗೆ ವಿರಾಗವಿಲ್ಲವೋ... ಯಾರಲ್ಲಿ ವಿಞ್ಞಾನದ (ಅರಿವಿನ) ಬಗ್ಗೆ ವಿರಾಗವಿಲ್ಲವೋ, ವಿಞ್ಞಾನದ ಬಗ್ಗೆ ಆಸೆರಹಿತತೆಯಿಲ್ಲವೋ, ವಿಞ್ಞಾನದ ಬಗ್ಗೆ ಪ್ರೇಮರಹಿತತೆಯಿಲ್ಲವೋ ವಿಞ್ಞಾನದ ಬಗ್ಗೆ ಪಿಪಾಸತೆ ನಾಶವಾಗಿಲ್ಲವೋ, ವಿಞ್ಞಾನದ ಬಗ್ಗೆ ಭಾವೋದ್ರೇಕಗಳು ಬರಿದಾಗಿಲ್ಲವೋ ವಿಞ್ಞಾನದ ಬಗ್ಗೆ ತಣ್ಹಾವು ನಾಶವಾಗಿಲ್ಲವೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ / ಇರುವುದಿಲ್ಲ / ಇರುತ್ತಾರೆ ಮತ್ತು ಇಲ್ಲ / ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದೆಲ್ಲಾ ಯೋಚಿಸುತ್ತಾರೆ.
ಆದರೆ ಮಿತ್ರನೇ, ಯಾರು ರೂಪದಲ್ಲಿ ವಿರಾಗಭಾವನೆ ಹೊಂದಿರುವವನೋ... ವೇದನೆಗಳಲ್ಲಿ ವಿರಾಗಭಾವನೆ ಹೊಂದಿರುವವನೋ... ಸಞ್ಞಾ(ಸನ್ಯ/ಗ್ರಹಿಕೆ) ಗಳಲ್ಲಿ ವಿರಾಗಿಯೋ... ಸಂಖಾರಗಳಲ್ಲಿ ವಿರಾಗಭಾವನೆ ಹೊಂದಿರುವವನೋ... ವಿಞ್ಞಾನದಲ್ಲಿ ರಾಗರಹಿತನೋ, ಆಸೆರಹಿತನೋ, ಪ್ರೇಮರಹಿತನೋ, ಪಿಪಾಸೆರಹಿತನೋ, ಭಾವಾವೇಶರಹಿತನೋ, ತೃಷ್ಣಾರಹಿತನೋ, ಅಂತಹವನು ತಥಾಗರು ಮರಣದ ನಂತರ ಇರುತ್ತಾರೆ ಎಂದು ಯೋಚಿಸುವುದಿಲ್ಲ. ತಥಾಗತರು ಮರಣದ ನಂತರ ಇರುವುದಿಲ್ಲವೆಂದು ಯೋಚಿಸುವುದಿಲ್ಲ. ತಥಾಗತರು ಇರುತ್ತಾರೆ ಮತ್ತು ಇಲ್ಲ ಎಂದೂ ಯೋಚಿಸಲಾರ, ತಥಾಗತರು ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲವೆಂದು ಯೋಚಿಸಲಾರನು. ಇದೇ ಕಾರಣಕ್ಕಾಗಿ ಮಿತ್ರನೇ, ತಥಾಗತರು ಇವನ್ನು ಘೋಷಿಸಿಲ್ಲ.


6. ಚತುತ್ಥ ಸಾರಿಪುತ್ತ ಕೋಟ್ಠಿಕ ಸುತ್ತ

415. ಒಮ್ಮೆ ಪೂಜ್ಯ ಸಾರಿಪುತ್ತರು ಹಾಗು ಪೂಜ್ಯ ಕೋಟ್ಠಕರು ವಾರಾಣಾಸಿಯ ಇಸಿಪತ್ತನದಲ್ಲಿ ವಾಸಿಸುತ್ತಿರುವಾಗ, ಒಂದು ಸಂಜೆ ಸಾರಿಪುತ್ತರು ಏಕಾಂತತೆಯಿಂದ ಹೊರಬಂದು ಪುಣಕೊಟನರ ಬಳಿಗೆ ಬಂದರು. ಇಬ್ಬರೂ ಪರಸ್ಪರ ಕುಶಲ ಕ್ಷೇಮಗಳನ್ನು ಹಂಚಿಕೊಂಡರು. ನಂತರ (ಕಥೆಯ ಪೀಠಿಕೆ ಮತ್ತು ವಿವರ ಹಿಂದಿನ ಘಟನೆಗಳಂತೆಯೇ...)
ಇದೇ ಕಾರಣಕ್ಕಾಗಿ ಆಯುಷ್ಮಂತನೇ, ತಥಾಗತರು ಇವನ್ನು ಘೋಷಿಸಿಲ್ಲ.
ಮಿತ್ರನೇ, ಯಾರು ರೂಪಗಳಲ್ಲಿ ಆನಂದಿಸುತ್ತಾನೋ, ಯಾರು ರೂಪಗಳಲ್ಲಿ ಆನಂದ ತೆಗೆದುಕೊಳ್ಳುತ್ತಾನೋ, ರೂಪಗಳಲ್ಲಿ ಸುಖಿಸುತ್ತಾನೋ ಹಾಗು ಯಾರಿಗೆ ರೂಪ ನಿರೋಧವೋ ತಿಳಿಯದು. ಅಂತಹವರು ಮಾತ್ರ. ಹೀಗೆ ಯೋಚಿಸುತ್ತಾರೆ: ಹೇಗೆಂದರೆ ತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ. ಆದರೆ ಮಿತ್ರನೇ, ಯಾರು ರೂಪಗಳಲ್ಲಿ ಆನಂದಿಸುವುದಿಲ್ಲವೋ, ಹಾಗೆಯೇ. ವೇದನೆಗಳಲ್ಲಿ ಆನಂದಿಸುವುದಿಲ್ಲವೋ... ಗ್ರಹಿಕೆಗಳಲ್ಲಿ ಆನಂದಿಸುವುದಿಲ್ಲವೋ... ಸಂಖಾರಗಳಲ್ಲಿ ಆನಂದಿಸುವುದಿಲ್ಲವೋ... ವಿಞ್ಞಾನಗಳಲ್ಲಿ ಆನಂದಿಸುವುದಿಲ್ಲವೋ... ಅಂತಹವರು ವಿಞ್ಞಾನದಲ್ಲಿ ಆನಂದ ತೆಗೆದುಕೊಳ್ಳುವುದಿಲ್ಲ, ವಿಞ್ಞಾನದಲ್ಲಿ ಸುಖಿಸುವುದಿಲ್ಲ. ಅಂತಹವರು ವಿಞ್ಞಾನದ ನಿರೋಧವನ್ನು ಅದು ಹೇಗಿದೆಯೋ ಹಾಗೆಯೇ ಅರಿಯುತ್ತಾರೆ. ಅಂತಹವರು ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದು ಯೋಚಿಸಲಾರರು. ಇದೇ ಕಾರಣಕ್ಕಾಗಿ ಮಿತ್ರನೇ, ತಥಾಗತರು ಮರಣದ ನಂತರದ ಸ್ಥಿತಿಗಳನ್ನು ಘೋಷಿಸಿಲ್ಲ.
ಆದರೆ ಆಯುಷ್ಮಂತನೇ, ಭಗವಾನರು ಏತಕ್ಕಾಗಿ ಘೋಷಿಸಿಲ್ಲ ಎಂಬುದಕ್ಕೆ ಪರ್ಯಾಯ ವಿಧದ ವಿವರಣೆಯಿದೆಯೇ? ಇದೆ ಆಯುಷ್ಮಂತನೇ, ಯಾರು ಭವದಲ್ಲಿ (ಅಸ್ತಿತ್ವದಲ್ಲಿ) ಆನಂದಿಸುವನೋ, ಭವದಲ್ಲಿ ಆನಂದ ತೆಗೆದುಕೊಳ್ಳುತ್ತಾನೋ, ಭವದಲ್ಲಿ ಸುಖಿಸುತ್ತಾನೋ ಮತ್ತು ಯಾರು ಭವದ ನಿರೋಧ ನೋಡಿಲ್ಲವೋ ಅಥವಾ ತಿಳಿದಿಲ್ಲವೋ ಅಂತಹವನು ಹೀಗೆ ಯೋಚಿಸುತ್ತಾನೆ: ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ. ಆದರೆ ಮಿತ್ರನೇ, ಯಾರು ಭವದಲ್ಲಿ ಸಂತಸಪಡುವುದಿಲ್ಲವೋ ಮತ್ತು ಯಾರು ಭವದ ನಿರೋಧ ಅದು ಹೇಗಿದೆಯೋ ಹಾಗೆಯೇ ಅರಿತಿರುವವನೋ ಅಂತಹವನು ಹೀಗೆ ಯೋಚಿಸುವುದಿಲ್ಲ. ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ. ಇದೇ ಕಾರಣಕ್ಕಾಗಿ ಆಯುಷ್ಮಂತನೇ, ಭಗವಾನರು ಇದನ್ನು ಹೀಗೆ ಘೋಷಿಸಿಲ್ಲ.
ಆದರೆ ಆಯುಷ್ಮಂತನೇ, ಏತಕ್ಕಾಗಿ ಭಗವಾನರು ಇದನ್ನು ಹೀಗೆ ಘೋಷಿಸಿಲ್ಲ ಎನ್ನುವುದಕ್ಕಾಗಿ ವಿವರಿಸಲು ಪರ್ಯಾಯ ವಿಧಾನವಿದೆಯೇ? ಇದೆ ಆಯುಷ್ಮಂತನೇ, ಯಾರು ಅಂಟುವಿಕೆಯಲ್ಲಿ ಆನಂದಿಸುತ್ತಾನೋ, ಅಂಟುವಿಕೆಯಲ್ಲಿ ಆನಂದ ತೆಗೆದುಕೊಳ್ಳುತ್ತಾನೋ, ಅಂಟುವಿಕೆಯಲ್ಲಿಯೇ ಸಂತಸಪಡುತ್ತಾನೋ ಮತ್ತು ಯಾರಿಗೆ ಅಂಟುವಿಕೆಯ ನಿರೋಧ ತಿಳಿದಿಲ್ಲವೋ ಹಾಗು ಕಂಡಿಲ್ಲವೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದು ಯೋಚಿಸುತ್ತಾರೆ. ಆದರೆ ಆಯುಷ್ಮಂತನೇ, ಯಾರು ಅಂಟುವಿಕೆಯಲ್ಲಿ ಆನಂದಿಸುವುದಿಲ್ಲವೋ, ಅಂಟುವಿಕೆಯಲ್ಲಿ ಆನಂದ ತೆಗೆದುಕೊಳ್ಳುವುದಿಲ್ಲವೋ, ಅಂಟುವಿಕೆಯಲ್ಲಿ ಸಂತಸ ತಾಳುವುದಿಲ್ಲವೋ ಹಾಗು ಯಾರು ಉಪಾದಾನದ (ಅಂಟುವಿಕೆಯ) ನಿರೋಧ ಕಂಡಿರುವರೋ ಹಾಗು ತಿಳಿದಿರುವರೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದು ಹೀಗೆ ಯೋಚಿಸಲಾರರು. ಇದೇ ಕಾರಣಕ್ಕಾಗಿ ಆಯುಷ್ಮಂತನೇ ಭಗವಾನರು ಇದನ್ನು ಘೋಷಿಸಿಲ್ಲ.
ಆದರೆ ಮಿತ್ರನೇ, ಏತಕ್ಕಾಗಿ ಭಗವಾನರು ಹೀಗೆ ಇದನ್ನು ಘೋಷಿಸಿಲ್ಲ ಎನ್ನುವುದಕ್ಕಾಗಿ ವಿವರಿಸಲು ಪರ್ಯಾಯ ವಿಧಾನವಿದೆಯೇ? ಇದೆ ಆಯುಷ್ಮಂತನೇ, ಯಾರು ತೃಷ್ಣೆಯಲ್ಲಿ ಆನಂದಿಸುವುದಿಲ್ಲವೋ, ಯಾರು ತೃಷ್ಣೆಯಲ್ಲಿ ಆನಂದ ತೆಗೆದುಕೊಳ್ಳುವುದಿಲ್ಲವೋ, ತೃಷ್ಣೆಯಲ್ಲಿ ಸಂತಸ ತಾಳುವುದಿಲ್ಲವೋ ಮತ್ತು ಯಾರಿಗೆ ತೃಷ್ಣಾ ನಿರೋಧ ತಿಳಿದಿಲ್ಲವೋ ಹಾಗು ಕಂಡಿಲ್ಲವೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದು ಯೋಚಿಸುತ್ತಾರೆ. ಆದರೆ ಮಿತ್ರನೇ, ಯಾರು ತೃಷ್ಣೆಯಲ್ಲಿ ಆನಂದ ತೆಗೆದುಕೊಳ್ಳುವುದಿಲ್ಲವೋ, ತೃಷ್ಣೆಯಲ್ಲಿ ಸಂತಸ ತಾಳುವುದಿಲ್ಲವೋ ಮತ್ತು ಯಾರಿಗೆ ತೃಷ್ಣೆ ನಿರೋಧ ತಿಳಿದಿದೆಯೋ ಆ ಸ್ಥಿತಿಯನ್ನು ಕಂಡಿರುವರೋ ಅವರು ಮಾತ್ರ ಹೀಗೆ ಯೋಚಿಸಲಾರರು. ಹೇಗೆಂದರೆ: ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ. ಇದೇ ಕಾರಣಕ್ಕಾಗಿ ಆಯುಷ್ಮಂತರೇ, ತಥಾಗತರ ಇವನ್ನು ಹೀಗೆ ಘೋಷಿಸಿಲ್ಲ.
ಆದರೆ ಮಿತ್ರನೇ, ಭಗವಾನರು ಏತಕ್ಕಾಗಿ ಘೋಷಿಸಿಲ್ಲ ಎಂಬುದನ್ನು ವಿವರಿಸಲು ಪರ್ಯಾಯ ವಿಧಾನವಿದೆಯೇ? ಇಲ್ಲ, ಈಗ ಆಯುಷ್ಮಂತ ಸಾರಿಪುತ್ತರೇ, ಇದಕ್ಕಿಂತಲೂ ಹೆಚ್ಚಿನದಾದ ವಿವರಣೆಯನ್ನು ಏತಕ್ಕಾಗಿ ಇಚ್ಛಿಸುವಿರಿ? ಆಯುಷ್ಮಂತ ಸಾರಿಪುತ್ತರೇ, ಯಾವಾಗ ಭಿಕ್ಷುವು ತಣ್ಹಾ ಕ್ಷಯದಿಂದ ವಿಮುಕ್ತನಾಗುವನೋ ಅಂತಹವನಿಗೆ ವಿವರಿಸಲು ಸುತ್ತಗಳಿರುವುದಿಲ್ಲ (ಪ್ರಮೇಯವಿರುವುದಿಲ್ಲ.)


7. ಮೊಗ್ಗಲ್ಲಾನ ಸುತ್ತ

416. ನಂತರ ಪರಿವ್ರಾಜಕ ವಚ್ಚಗೊತ್ತನು (ಗೊತ್ತ) ಪೂಜ್ಯ ಮೊಗ್ಗಲ್ಲಾನರ ಬಳಿಗೆ ಬಂದನು ಹಾಗು ಕುಶಲ ಕ್ಷೇಮಗಳ ವಿನಿಯಮ ಮಾಡಿಕೊಂಡನು. ನಂತರ ಒಂದಡೆ ಕುಳಿತು ಹೀಗೆ ಮಹಾಮೊಗ್ಗಲಾನರ ಬಳಿಯಲ್ಲಿ ಪ್ರಶ್ನಿಸಿದನು:
ಮಹಾ ಮೊಗ್ಗಲ್ಲಾನರೇ, ಇದು ಹೇಗೆ ಈ ಲೋಕವೂ ಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಮಹಾಮೊಗ್ಗಲಾನರೇ, ಈ ಲೋಕವು ಅಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಅಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕಕ್ಕೆ (ಅಂತ್ಯವಿದೆಯೇ) ಸೀಮಿತವಿದೆಯೇ? ವಚ್ಚ, ಭಗವಾನರು ಈ ಲೋಕವು ಸೀಮಿತವಾಗಿದೆ ಎಂದೂ ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕವೂ ಅನಂತವೇ? ವಚ್ಚ, ಭಗವಾನರು ಈ ಲೋಕವನ್ನು ಅನಂತವೆಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ಜೀವ (ಆತ್ಮ) ಹಾಗು ಶರೀರವೂ ಒಂದೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರ ಒಂದೇ ಎಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲ್ಲಾನರೇ, ಹಾಗಾದರೆ ಜೀವ ಮತ್ತು ಶರೀರ ಬೇರೆ ಬೇರೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರವು ಬೇರೆ ಬೇರೆ ಎಂದು ಘೋಷಿಸಿಲ್ಲ. ಸರಿ, ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವರೇ? ವಚ್ಚ, ಭಗವಾನರು ಮರಣದ ನಂತರ ತಥಾಗತರು ಇರುವರೆಂದು ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲವೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುತ್ತಾರೆ ಮತ್ತು ಇರುವುದಿಲ್ಲ ಇದು ಸತ್ಯವೇ? ವಚ್ಚ, ಭಗವಾನರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲ ಮತ್ತು ಇಲ್ಲದೆಯೂ ಹೋಗುವುದಿಲ್ಲ ಎಂಬುದು ಸರಿಯೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಹೋಗುವುದಿಲ್ಲ ಎಂದು ಸಹಾ ಘೋಷಿಸಿಲ್ಲ.
ಮತ್ತೆ ಮಹಾಮೊಗ್ಗಲಾನರೇ, ಯಾವ ಕಾರಣದಿಂದಾಗಿ ಹಾಗು ಯಾವ ಉದ್ದೇಶದಿಂದಾಗಿ ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ಉದಾಹರಿಸುವುದಾದರೆ, ಲೋಕವು ಶಾಶ್ವತ ಅಥವಾ ಅಶಾಶ್ವತ ಅಥವಾ ಅಂತ ಅಥವಾ ಅನಂತವೆಂದೂ ಅಥವಾ ಜೀವ ಶರೀರವೊಂದೇ ಅಥವಾ ಬೇರೆ ಬೇರೆ ಅಥವಾ ತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಮತ್ತು ಇರುವುದಿಲ್ಲ/ಇರುವುದಿಲ್ಲ ಇಲ್ಲದೇಯೂ ಇಲ್ಲ ಇಂತಹ ಪ್ರಶ್ನೆಗಳಿಗೆ ಏತಕ್ಕಾಗಿ ಸಮಣ ಗೋತಮರು ಉತ್ತರಿಸುತ್ತಿಲ್ಲ. ಯಾವ ಕಾರಣದಿಂದಾಗಿ ಯಾವ ಉದ್ದೇಶದಿಂದಾಗಿ ಹೀಗೆ ಅಘೋಷಿತವಾಗಿದ್ದಾರೆ?
ವಚ್ಚ, ಬುದ್ಧರ ಹೊರತು ಪರ ಪಂಗಡದವರ ಕಣ್ಣಿಗೆ ಹೀಗೆ ಅಭಿಪ್ರಾಯರಾಗುತ್ತಾರೆ. ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮ. ಹಾಗೆಯೇ ಕಿವಿಗೆ... ನಾಲಿಗೆಗೆ... ಮೂಗಿಗೆ... ಶರೀರಕ್ಕೆ... ಮನಸ್ಸಿಗೆ ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅನ್ಯ ಪಂಗಡದವರು ಈ ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ... ಆದರೆ ವಚ್ಚ, ಯಾವಾಗ ತಥಾಗತರು ಅರಹಂತರು ಹಾಗು ಸಮ್ಮಾಸಂಬುದ್ಧರು ಕಣ್ಣಿನ ಬಗ್ಗೆ ಕಿವಿಗೆ ಮನಸ್ಸಿನ ಬಗ್ಗೆ ಅಭಿಪ್ರಾಯ ತಾಳುತ್ತಾರೆ. ಹೇಗೆಂದರೆ, ಇದು ನಾನಲ್ಲ, ಇದು ನನ್ನದಲ್ಲ ಹಾಗು ಇದು ನನ್ನ ಆತ್ಮವಲ್ಲ. ಆದ್ದರಿಂದಲೇ ತಥಾಗತರಿಗೆ ಈ ಬಗೆಯ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರಿಸಲಾರರು.
ಆಗ ಪರಿವ್ರಾಜಕ ವಚ್ಚಗೊತ್ತನು ತನ್ನ ಆಸನದಿಂದೆದ್ದು ಅಲ್ಲಿಂದ ಹೊರಟು ಭಗವಾನರ ಬಳಿಗೆ ಬಂದನು. ಅಲ್ಲಿ ಪರಸ್ಪರ ಕುಶಲ ಕ್ಷೇಮ ವಿನಿಮಯ ಮಾಡಿಕೊಂಡು ಭಗವಾನರೊಂದಿಗೆ ಹೀಗೆ ಕೇಳಿದನು: ಇದು ಹೇಗೆ ಗೋತಮರೇ, ಈ ಲೋಕವು ಶಾಶ್ವತವೇ? (ಇಲ್ಲಿ ಬರುವ ಸಂಭಾಷಣೆಯೆಲ್ಲವೂ ಮೊಗ್ಗಲಾನ ಹಾಗು ವಚ್ಚರೊಂದಿಗೆ ನಡೆದ ಸಂಭಾಷಣೆಯಂತೆಯೇ ಇರುತ್ತದೆ).
ವಚ್ಚ, ನಾನು ತಥಾಗತರು ಇರುವುದಿಲ್ಲ ಹಾಗೆಯೇ ಇಲ್ಲದೆಯೂ ಇಲ್ಲ ಎಂದು ಘೋಷಿಸಲಾರೆನು. ಏತಕ್ಕಾಗಿ ಗೋತಮಶಾಸ್ತ್ರರೇ, ಯಾವ ಕಾರಣಕ್ಕಾಗಿ ಹಾಗು ಯಾವ ಉದ್ದೇಶಕ್ಕಾಗಿ, ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ತಾವು ಉತ್ತರಿಸುವುದಿಲ್ಲ. ಉದಾಹರಿಸುವುದಾದರೆ ಈ ಲೋಕವು ಶಾಶ್ವತವೇ / ಅಶಾಶ್ವತವೇ? ಇತ್ಯಾದಿ... ವಚ್ಚ, ಪರಪಂಗಡದವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅವರಲ್ಲಿ ಅಂತಹ ಪ್ರಶ್ನೆಗಳಿರುತ್ತದೆ. ಹಾಗೆಯೇ ಅಂತಹುದು ಉತ್ತರಗಳು ಅವರಲ್ಲಿರುತ್ತದೆ. ಉದಾಹರಿಸುವುದಾದರೆ, ಈ ಲೋಕವು ಶಾಶ್ವತ, ಈ ಲೋಕವು ಅಶಾಶ್ವತ ಇತ್ಯಾದಿ. ಆದರೆ ವಚ್ಚ ತಥಾಗತರು ಸಮ್ಮಾಸಂಬುದ್ದರು ಅರಹಂತರಾಗಿರುವ ಅವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪರಿಗಣಿಸುತ್ತಾರೆ. ಆದ್ದರಿಂದಲೇ ತಥಾಗತರಲ್ಲಿ ಅಂತಹ ಪ್ರಶ್ನೆಗಳಾಗಲಿ ಅಥವಾ ಅಂತಹ ಉತ್ತರಗಳಾಗಿ ಉದಯಿಸುವುದಿಲ್ಲ.
ಆಶ್ಚರ್ಯಕರ ಗೋತಮ ಶಾಸ್ತ್ರರೇ, ಅದ್ಭುತಮಯ ಗೋತಮರೇ, ತಮ್ಮ ಶಿಷ್ಯನ ಹಾಗು ತಮ್ಮ ಹೇಳಿಕೆಯಲ್ಲಿ ಅರ್ಥದಲ್ಲಿಯಾಗಲಿ, ವ್ಯಂಜನದಲ್ಲಿಯಾಗಲಿ, ವಾಕ್ಯರಚನೆಯಲ್ಲಾಗಲಿ ಸ್ವಲ್ಪವೂ ವ್ಯತ್ಯಾಸವಿಲ್ಲ. ಹೇಗೆ ಅದ್ಭುತವಾದ ಗುರುವೋ ಹಾಗೆಯೇ ಪರಮಕುಶಲಿ ಶಿಷ್ಯನೂ ಸಹಾ. ತಮ್ಮಿಬ್ಬರಲ್ಲಿ ಯಾವುದೇ ಬೇಧವಿಲ್ಲದೆ ಒಂದೇರೀತಿಯಲ್ಲಿಯೇ ನುಡಿದಿದ್ದೀರಿ. ಈಗ ತಾನೇ ಗೋತಮರೆ, ನಾನು ಸಮಣ ಮಹಾಮೊಗ್ಗಲಾನರಲ್ಲಿಗೆ ಹೋಗಿದ್ದೆನು. ಅವರಲ್ಲಿಯೂ ಇದೇ ಪ್ರಶ್ನೆಗಳನ್ನು ಕೇಳಿದಾಗ ಅವರು ತಮ್ಮಂತೆಯೇ ಅಕ್ಷರ, ವಾಕ್ಯ, ಅರ್ಥ ವ್ಯತ್ಯಾಸವಿಲ್ಲದೆ ಇದೇ ರೀತಿಯಲ್ಲಿಯೇ ಉತ್ತರಿಸಿದ್ದರು. ಇದು ಆಶ್ಚರ್ಯಕರ, ಅದ್ಭುತಮಯ. ಹೇಗೆ ಅದ್ಭುತವಾದ ಶಾಸ್ತ್ರರೋ ಹಾಗೆಯೇ ಕುಶಲಿಯಾದ ಶಿಷ್ಯನೂ ಸಹಾ ಇದ್ದಾನೆ. ಯಾವುದೇ ರೀತಿಯಲ್ಲಿಯೂ ವಿರೋದಾಭಾಸವಿಲ್ಲದೆ ತಮ್ಮಂತೆಯೇ ತದ್ರೂಪಿಯಾಗಿ ಉತ್ತರಿಸಿದ್ದರು. ನಂತರ ವಚ್ಚನು ಅಲ್ಲಿಂದ ಹೊರಟನು.


8. ವಚ್ಚಗೊತ್ತ ಸುತ್ತ

417. ನಂತರ ಒಮ್ಮೆ ಪರಿವ್ರಾಜಕ ವಚ್ಚಗೊತ್ತನು ಭಗವಾನರ ಬಳಿಗೆ ಸಮೀಪಿಸಿದನು. ಅವರಲ್ಲಿ ಕುಶಲ ಕ್ಷೇಮಗಳ ವಿನಿಮಯ ಮಾಡಿದನು. ನಂತರ ಗೌರವದಿಂದ ವಂದಿಸಿ, ಒಂದೆಡೆ ಕುಳಿತನು ಹಾಗು ಹೀಗೆ ಪ್ರಶ್ನಿಸಿದನು: ಇದು ಹೇಗೆ ಗೋತಮರೇ, ಈ ಲೋಕವು ಶಾಶ್ವತವೇ?... (ಹಿಂದಿನಂತೆಯೇ ಪ್ರಶ್ನೆಗಳು ಹಾಗು ಉತ್ತರಗಳು).
ಯಾವ ಕಾರಣಕ್ಕಾಗಿ ಗೋತಮರೇ, ಹಾಗು ಯಾವ ಉದ್ದೇಶಕ್ಕಾಗಿ ಪರಪಂಗಡದವರು ತಮ್ಮಲ್ಲಿ ಹೀಗೆ ಪ್ರಶ್ನಿಸಿದಾಗ ಲೋಕವು ಶಾಶ್ವತವೇ, ಅಶಾಶ್ವತವೇ... ತಥಾಗತರು ಮರಣದ ನಂತರ ಇರುವುದಿಲ್ಲ ಹಾಗು ಇಲ್ಲದೆಯೂ ಇಲ್ಲ... ಇದು ಮಾತ್ರ ಸತ್ಯವೇ? ತಾವು ಇವಕ್ಕೆಲ್ಲ ಉತ್ತರವನ್ನು ಏತಕ್ಕಾಗಿ ನೀಡುವುದಿಲ್ಲ.
ವಚ್ಚ, ಪರಪಂಗಡದವರು ರೂಪವನ್ನು (ದೇಹಾಕೃತಿಯನ್ನು) ನಾನು ಎಂದು ಪರಿಗಣಿಸುತ್ತಾರೆ ಅಥವಾ ರೂಪವು ನನಗೆ (ಆತ್ಮಕ್ಕೆ) ಸೇರಿದ್ದು ಎಂದು ಪರಿಗಣಿಸುತ್ತಾರೆ. ಅಥವಾ ಆತ್ಮದಲ್ಲಿ ರೂಪವಿದೆ (ದೇಹವಿದೆ) ಅಥವಾ ದೇಹದಲ್ಲಿ (ರೂಪ) ಆತ್ಮವಿದೆ ಎಂದು ಪರಿಗಣಿಸುವರು. ಹಾಗೆಯೇ ಅವರು ವೇದನೆಗಳನ್ನು ತಾನು (ಆತ್ಮ) ಎಂದು... ಗ್ರಹಿಕೆಗಳನ್ನು ತಾನು (ಆತ್ಮ) ಎಂದು... ಸಂಖಾರಗಳನ್ನು ಆತ್ಮವೆಂದು... ವಿಜ್ಞಾ (ಅರಿವು) ತಾನು ಎಂದು ಅಥವಾ ತಾನು ವಿಜ್ಞಾನದಲ್ಲಿ ತಾನು ಇರುವುದೆಂದು ಪರಿಗಣಿಸುತ್ತಾರೆ. ಹೀಗೆ ಅವರು ಪರಿಗಣಿಸುವದರಿಂದಲೇ ಈ ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ. ಹೇಗೆಂದರೆ, ಲೋಕವು ಶಾಶ್ವತ... ಅಶಶ್ವಾತವೆ... ತಥಾಗತರು ಮರಣದ ನಂತರ ಇರುವುದಿಲ್ಲವೇ ಅಥವಾ ಇಲ್ಲದೆಯೂ ಇಲ್ಲವೇ...? ಆದರೆ ವಚ್ಚ, ತಥಾಗತರು ಅರಹಂತರು, ಸಮ್ಮಾಸಂಬುದ್ಧರು ರೂಪವನ್ನಾಗಲಿ... ವೇದನೆಯನ್ನಾಗಲಿ... ಗ್ರಹಿಕೆಗಳನ್ನಾಗಲಿ... ಸಂಖಾರಗಳನ್ನು... ವಿಞ್ಞಾನಗಳನ್ನು ತಾನು ಎಂದು ಪರಿಗಣಿಸುವುದಿಲ್ಲ. ಅಥವಾ ವಿಞ್ಞಾನವು ತಾನು ಎಂಬುದಕ್ಕೆ ಸೇರಿದ್ದು ಎಂದು ಪರಿಗಣಿಸುವುದಿಲ್ಲ ಅಥವಾ ವಿಞ್ಞಾನದಲ್ಲಿ ಆತ್ಮವಿದೆ ಎಂತಲೂ ಅಥವಾ ಆತ್ಮದಲ್ಲಿ ವಿಞ್ಞಾನವಿದೆ ಎಂತಲೂ ಪರಿಗಣಿಸುವುದಿಲ್ಲ. ಆದ್ದರಿಂದಲೇ ತಥಾಗತರು ಇಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ ಹಾಗು ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದೂ ಇಲ್ಲ.
ಆಗ ವಚ್ಚಗೊತ್ತನು ಆಸನದಿಂದೆದ್ದು, ಭಗವಾನರಿಗೆ ವಂದಿಸಿ, ಅಲ್ಲಿಂದ ಎದ್ದು ಮಹಾಮೊಗ್ಗಲಾನರ ಬಳಿಗೆ ಬಂದನು. ಅಲ್ಲಿ ಕುಶಲ ಕ್ಷೇಮ ವಿನಿಮಯ ಮಾಡಿಕೊಂಡನು. ನಂತರ ಹೀಗೆ ಕೇಳಿದನು: ಮೊಗ್ಗಲಾನರೇ, ಲೋಕವು ಶಾಶ್ವತವೇ? (ಮೊಗ್ಗಲಾನರು ಭಗವಂತರಂತೆಯೇ ಯಥಾಭೂತವಾಗಿ ಇರುವಂತೆಯೇ ಉತ್ತರಿಸಿದರು). ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಇಲ್ಲ ಎಂದು ಘೋಷಿಸಿಲ್ಲ.
ಯಾವ ಕಾರಣಕ್ಕಾಗಿ ಮಹಾಮೊಗ್ಗಲಾನರೇ, ಹಾಗು ಯಾವ ಉದ್ದೇಶಕ್ಕಾಗಿ ಭಗವಾನರು ಇಂತಹ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಉದಾಹರಿಸುವುದಾದರೆ, ಲೋಕವು ಶಾಶ್ವತವೇ... ಅಥವಾ ತಥಾಗತರು ಮರಣದ ನಂತರ ಇರುವುದಿಲ್ಲ ಹಾಗು ಇಲ್ಲದೆಯೂ ಇಲ್ಲ...
ವಚ್ಚ, ಪರಪಂಗಡದ ಪರಿವ್ರಾಜಕರು ದೇಹವನ್ನೇ (ರೂಪ) ಆತ್ಮವೆಂದು (ತಾನು/ನಾನು) ಪರಿಗಣಿಸುತ್ತಾರೆ. ಆತ್ಮವು ದೇಹವನ್ನು ಹೊಂದಿದೆ ಎಂದೂ ಅಥವಾ ವೇದನೆಗಳನ್ನು... ಗ್ರಹಿಕೆಗಳನ್ನು... ಸಂಖಾರಗಳನ್ನು... ವಿಞ್ಞಾನಗಳನ್ನು ತಾನು (ಆತ್ಮ)ವೆಂದು ಪರಿಗಣಿಸುತ್ತಾರೆ ಅಥವಾ ಆತ್ಮವು ವಿಞ್ಞಾನವನ್ನು ಹೊಂದಿದೆ ಎಂದೂ ಅಥವಾ ಆತ್ಮದಲ್ಲಿ ವಿಞ್ಞಾನವಿದೆ ಅಥವಾ ವಿಞ್ಞಾನದಲ್ಲಿ ಆತ್ಮವಿದೆ ಎಂತಲೂ ಭಾವಿಸುತ್ತಾರೆ. ಆದ್ದರಿಂದಲೇ ಪರಪಂಗಡಗಳ ಪರಿವ್ರಾಜಕರು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗೆಯೇ ಇಂತಹ ಉತ್ತರಗಳನ್ನು ನೀಡುತ್ತಾರೆ. ಆದರೆ ವಚ್ಚ, ತಥಾಗತರು, ಅರಹಂತರು, ಸಮ್ಮಾಸಂಬುದ್ಧರು ಆದ ಭಗವಾನರು ದೇಹವನ್ನು ತಾನೆಂದಾಗಲಿ, ತನ್ನದೆಂದಾಗಲಿ, ದೇಹದಲ್ಲಿ ಆತ್ಮವಿದೆ ಎಂತಲೋ ಅಥವಾ ಆತ್ಮದಲ್ಲಿ ದೇಹವಿದೆ ಎಂದಲೂ ಎಂದೂ ಪರಿಗಣಿಸುವುದಿಲ್ಲ. ಹಾಗೆಯೇ ವೇದನೆಗಳನ್ನು... ಸಞ್ಞಾಗಳನ್ನು... ಸಂಖಾರಗಳನ್ನು... ವಿಞ್ಞಾನಗಳನ್ನು ತಾನೆಂದು ಪರಿಗಣಿಸುವುದಿಲ್ಲ, ತನ್ನದೆಂದು ಪರಿಗಣಿಸುವುದಿಲ್ಲ ಅಥವಾ ಆತ್ಮದಲ್ಲಿ ವಿಞ್ಞಾನವಿದೆ ಎಂತಲೋ ಅಥವಾ ವಿಞ್ಞಾನದಲ್ಲಿ ಆತ್ಮವಿದೆ ಎಂತಲೂ ಪರಿಗಣಿಸುವುದಿಲ್ಲ. ಆದ್ದರಿಂದಲೇ ತಥಾಗತರು ಅಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ ಹಾಗೆಯೇ ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ.
ಆಶ್ಚರ್ಯಕರ ಮೊಗ್ಗಲಾನರೇ, ಅದ್ಭುತಮಯ ಮೊಗ್ಗಲಾನರೇ. ಹೀಗೆ ಅರ್ಥದಲ್ಲಿಯಾಗಲಿ, ವಾಕ್ಯದಲ್ಲಿಯಾಗಲಿ, ಗುರು ಹಾಗು ಶಿಷ್ಯರಿಬ್ಬರೂ ಸಮಾನವಾಗಿಯೇ ಉತ್ತರಿಸಿದ್ದೀರಿ. ವಿರೋಧಾಭಾಸವಿಲ್ಲದೆಯೇ ಇರುವಿರಿ. ಮುಖ್ಯವಾದ ವಿಷಯವೇನೆಂದರೆ ನಾನು ಈಗತಾನೇ ಭಗವಾನರ ಬಳಿಗೆ ಹೋಗಿದ್ದೆನು. ತಮಗೆ ಪ್ರಶ್ನಿಸಿದಂತೆಯೇ ಅವರಿಗೂ ಇದೇ ಪ್ರಶ್ನೆಗಳನ್ನು ಕೇಳಿದ್ದೆನು. ಭಗವಾನರು ಸಮಂಜಸವಾಗಿ ಉತ್ತರಿಸಿದ್ದರು. ತಾವು ಸಹಾ ಯಥಾವತ್ತಾಗಿ ಸಮಾನ ಅರ್ಥವಾಗಿಯೇ ಸಮಾನ ವಾಕ್ಯ ಪ್ರಯೋಗದಿಂದಲೇ ಉತ್ತರಿಸಿರುವಿರಿ. ಇದು ಆಶ್ಚರ್ಯಕರ ಮೊಗ್ಗಲಾನರೇ ಇದು ಅದ್ಭುತಮಯ... ಅದೇರೀತಿಯಲ್ಲಿಯೇ ಉತ್ತರಿಸಿರುವಿರಿ...


9. ಕುತೂಹಲ ಸಾಲಾಸುತ್ತ (ಚಚರ್ೆಯ ಸಭಾಂಗಣದಲ್ಲಿನ ಸುತ್ತ)

418. ಒಮ್ಮೆ ವಚ್ಚಗೊತ್ತನು ಭಗವಾನರ ಬಳಿಗೆ ಬಂದನು. ಅಲ್ಲಿ ಅವರಿಗೆ ವಂದಿಸಿ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತನು. ನಂತರ ಭಗವಾನರೊಂದಿಗೆ ಹೀಗೆ ಕೇಳಿದನು.
ಭಗವಾನ್ ಗೋತಮರೇ, ಇತ್ತೀಚಿನ ದಿನಗಳಲ್ಲಿ ಅಸಂಖ್ಯಾತ ಸಮಣ ಬ್ರಾಹ್ಮಣರು, ಪರಿವ್ರಾಜಕರು, ನಾನಾತೀರ್ಥಂಕರು, ನಾನಾ ಮತಾವಲಂಬಿಗಳು ಚಚರ್ೆಯ ಸಭಾಂಗಣದಲ್ಲಿ ಕುಳಿತಿರುವಾಗ ಅವರಲ್ಲಿಯೇ ಚಚರ್ೆಯೊಂದು ಉದಯಿಸಿತು. ಈ ಪೂರಣಕಸ್ಸಪ ಸಂಘಕ್ಕೆ ಗುರುವು, ಗಣಗಳಿಗೆ ಗಣಾಚಾರ್ಯನು, ಜ್ಞಾನನು, ಯಶಶ್ವಿ ತೀರ್ಥಂಕರನು, ಬಹುಜನರಿಂದ ಸಾಧು ಎಂದು ಸಮ್ಮತಿ ಗಳಿಸಿರುವವನು ಆಗಿದ್ದಾನೆ. ತನ್ನ ಸತ್ತುಹೋದ ಶಿಷ್ಯರ ಬಗ್ಗೆ ಹೀಗೆ ನಿರ್ಣಯ ಮಾಡುವವನು ಆಗಿದ್ದಾನೆ. ಈತನು ಇಲ್ಲಿ ಹುಟ್ಟಿದ್ದಾನೆ, ಆತನು ಅಲ್ಲಿ ಹುಟ್ಟಿದ್ದಾನೆ ಮತ್ತು ತನ್ನ ಶಿಷ್ಯರಲ್ಲಿ ಉತ್ತಮ ಪುರುಷ ಇದ್ದಿದ್ದಾದರೆ ಆತನು ಏನಾದರೂ ಪ್ರಾಪ್ತಿಮಾಡಿದ್ದರೆ, ಅಂತಹವನು ಗತಿಸಿದ್ದರೆ, ಅಂತಹವನ ಬಗ್ಗೆ ಹೀಗೆ ಆತನ ಪುನರ್ಜನ್ಮವನ್ನು ನಿರ್ಣಯಿಸುತ್ತಾನೆ. ಆತನು ಅಲ್ಲಿ ಜನಿಸಿದ್ದಾನೆ ಮತ್ತು ಈತನು ಇಲ್ಲಿ ಜನ್ಮಿಸಿದ್ದಾನೆ. ಈ ಮಕ್ಖಲಿ ಗೋಸಾಲನು... ಈ ನಿಗಂಠನಾಥಪುತ್ತನು... ಈ ಸಂಜಯ ಬೆಲಟ್ಠಿಪುತ್ತನು... ಈ ಪಕುದಕಚ್ಚಾಯನನು... ಈ ಅಜಿತಕೇಸಕಂಬಳಿಯು... ಆತನು ಅಲ್ಲಿ ಜನಿಸಿದ್ದಾನೆ ಎಂದು ನಿರ್ಣಯಿಸುತ್ತಾರೆ.
ಅದೇರೀತಿಯಲ್ಲಿ ತಾವು ಸಹಾ ಭಗವಾನ್ ಗೋತಮರು ತಮ್ಮ ಪವಿತ್ರ ಸಂಘಕ್ಕೆ ಗುರುವಾಗಿರುವಿರಿ. ನಾನಾ ಗಣಗಳಿಗೆ ತಾವು ಗಣಾಚಾರ್ಯರು ಆಗಿರುವಿರಿ, ಪರಮ ಜ್ಞಾನಿಗಳು, ಯಶಸ್ವಿಗಳು ಆಗಿರುವಿರಿ. ಬಹುಜನರಿಂದ ತಾವೇ ಸಮ್ಯಕ್ ಸಂಬುದ್ಧರೆಂದು ಪರಿಗಣಿಸಲ್ಪಟ್ಟಿರುವಿರಿ. ತಾವು ಸಹಾ ತಮ್ಮ ಶಿಷ್ಯರಲ್ಲಿ ಮರಣಿಸುವವರ ಬಗ್ಗೆ ಈತನು ಇಲ್ಲಿ ಹುಟ್ಟಿದ್ದಾನೆ, ಆತನು ಅಲ್ಲಿ ಅಲ್ಲಿ ಹುಟ್ಟಿದ್ದಾನೆ ಎಂದು ನಿರ್ಣಯಿಸುವವರಾಗಿರುವಿರಿ. ಹಾಗೆಯೇ ಈತನು ತೃಷ್ಣೆಯನ್ನು ಕತ್ತರಿಸಿದ್ದಾನೆ, ಬಂಧಮುಕ್ತನಾಗಿದ್ದಾನೆ, ಅಹಂಕರಕ್ಕೆ ಅತೀತನಗಿ ದುಃಖದ ಅಂತ್ಯ ಮಾಡಿದ್ದಾನೆ ಎಂದು ಹೇಳಬಲ್ಲವರಾಗಿದ್ದೀರಿ. ಆದರೆ ಶಾಸ್ತ ಗೋತಮರೇ, ನನ್ನಲ್ಲಿ ಒಂದು ಸಂಶಯವಿದೆ, ಅದೇನೆಂದರೆ ಸಮಣ ಗೋತಮರು ಧಮ್ಮವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ವಚ್ಚ ನೀನು ಸಂಶಯಪಡಬೇಕಾಗುವುದೇ... ವಚ್ಚ ನಿನ್ನಲ್ಲಿ ಸಂಶಯ ಉಂಟಾಗುವುದು ಉಚಿತವಾಗಿಯೇ ಇದೆ. ಸಂಶಯಕ್ಕೆ ಅರ್ಹನಾದ ವಿಷಯದಲ್ಲಿಯೇ ಸಂಶಯನಾಗಿರುವೆ. ವಚ್ಚ, ನಾನು ಇಂಧನಕ್ಕೆ ಅನುಸಾರವಾಗಿ ಜನ್ನವಿದೆಯೋ ಇಲ್ಲವೋ ನಿರ್ಧರಿಸಿರುವೆ. ಯಾರಲ್ಲಿ ಇಂಧನವಿದೆಯೋ ಅವರಿಗೆ ಪುನರ್ಜನ್ಮವಿರುತ್ತದೆ. ಯಾರಲ್ಲಿ ಇಂಧನ ಬರಿದಾಗಿದೆಯೋ ಅವರಿಗೆ ಪುನರ್ಜನ್ಮವಿರುವುದಿಲ್ಲ. ಹೀಗಾಗಿ ನಾನು ಇಂಧನವಿದ್ದರೆ ಜನ್ಮ, ಇಲ್ಲದಿದ್ದರೆ ಇಲ್ಲ ಎಂದು ಘೋಷಿಸುತ್ತೇನೆ.
ಸರಿ ಗೋತಮರೇ, ಒಂದುವೇಳೆ ಪ್ರಬಲ ಗಾಳಿಯಿಂದ ಜ್ವಾಲೆಯು ಆರಿಹೋಗುವುದು. ಇಂತಹ ಸಂದರ್ಭಗಳನ್ನು ಶಾಸ್ತ ಗೋತಮರು ಇಂಧನಕ್ಕೆ ಅನುಸಾರವಾಗಿ ಹೇಗೆ ನಿರ್ಧರಿಸುವರು? ವಚ್ಚ, ಒಂದುವೇಳೆ ಪ್ರಬಲ ಗಾಳಿಯಿಂದಾಗಿ ಜ್ವಾಲೆಯು ಆರಿಹೋದರೆ, ಗಾಳಿಯಿಂದಲೇ ಉರಿದಿದೆ (ಅರಿದೆ) ಎಂದು ಘೋಷಿಸುತ್ತೇನೆ. ಅಂತಹ ಸಂದರ್ಭದಲ್ಲಿ ಗಾಳಿಯೇ ಅದರ ಪುಷ್ಠಿಯಾಗುವುದು (ಇಂಧನವಾಗುವುದು). ಮತ್ತೆ ಶಾಸ್ತ ಗೋತಮರೇ, ಜೀವಿಯೊಂದು ಶರೀರ ಬಿಟ್ಟು ಬೇರೊಂದು ಶರೀರದಲ್ಲಿಯೂ ಜನ್ಮ ತಾಳದಿದ್ದರೆ, ಅಂತಹ ಸಮಯದಲ್ಲಿ ಶಾಸ್ತ ಗೋತಮರು ಯಾವ ರೀತಿಯಲ್ಲಿ ಇಂಧನವನ್ನು ನಿರ್ಧರಿಸುವರು? ವಚ್ಚ, ಜೀವಿಯೊಂದು ಶರೀರವನ್ನು ತ್ಯಜಿಸಿ, ಇನ್ನೊಂದೆಡೆ ಜನ್ಮ ತಾಳದಿದ್ದರೆ ತೃಷ್ಣೆಯಿಂದಾಗಿ ಎಂದು ಪುಷ್ಠಿ ಹೊಂದಿದೆ (ಪ್ರೇತ ಜನ್ಮ) ಎಂದು ಘೋಷಿಸುತ್ತೇನೆ. ಅಂತಹ ಸಂದರ್ಭದಲ್ಲಿಯು ತೃಷ್ಣೆಯೇ ಇಂಧನವಾಗಿರುತ್ತದೆ.


10. ಆನಂದ ಸುತ್ತ

419. ನಂತರ ಪರಿವ್ರಾಜಕ ವಚ್ಚಗೊತ್ತ ಭಗವಾನರ ಬಳಿಗೆ ಬಂದು... ಹೀಗೆ ಪ್ರಶ್ನಿಸಿದನು ಇದು ಈಗ ಹೇಗೆ, ಶಾಸ್ತ ಗೋತಮರೇ, ಆತ್ಮವಿದೆಯೇ? ಯಾವಾಗ ಹೀಗೆ ಕೇಳಿದನೋ, ಆಗ ಭಗವಾನರು ಮೌನ ವಹಿಸಿದರು. ಹಾಗಾದರೆ ಶಾಸ್ತ ಗೋತಮರೇ, ಆತ್ಮವಿಲ್ಲವೇ? ಈ ಎರಡನೆಯ ಪ್ರಶ್ನೆ ಕೇಳಿದಾಗಲು ಭಗವಾನರು ಮೌನ ವಹಿಸಿದರು. ಆಗ ಪರಿವ್ರಾಜಕ ವಚ್ಚಗೊತ್ತನು ಆಸನದಿಂದ ಎದ್ದು ಅಲ್ಲಿಂದ ಹೊರಟು ಹೋದನು.
ಆತನು ಹೋದ ಸ್ವಲ್ಪ ಸಮಯದಲ್ಲೇ ಪೂಜ್ಯ ಆನಂದರು ಭಗವಾನರ ಬಳಿಯಲ್ಲಿ ಹೀಗೆ ಪ್ರಶ್ನಿಸಿದರು: ಏತಕ್ಕಾಗಿ ಭಗವಾನ್, ಪರಿವ್ರಾಜಕ ವಚ್ಚಗೊತ್ತನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

" ಆನಂದ, ನಾನೇನಾದರೂ ವಚ್ಚಗೊತ್ತನ ಆತ್ಮವಿದೆಯೇ? ಎಂಬ ಪ್ರಶ್ನೆಗೆ ಸ್ವಯಂವಿದೆ (ಆತ್ಮವಿದೆ) ಎಂದು ಉತ್ತರಿಸಿದ್ದರೆ, ಆತನು ಶಾಶ್ವತವಾದಿ ಸಮಣ ಬ್ರಾಹ್ಮಣರ (ನಿತ್ಯಶುದ್ದ ಆತ್ಮ) ಸಿದ್ಧಾಂತದೆಡೆಯಲ್ಲಿ ವಾಲಿಬಿಡುತ್ತಿದ್ದನು. ಹಾಗಲ್ಲದೆ ನಾನು ಆತನ ಆತ್ಮವಿಲ್ಲವೆ (ಸ್ವಯಂವಿಲ್ಲ) ಎಂಬ ಪ್ರಶ್ನೆಗೆ ಆತ್ಮವಿಲ್ಲ ಎಂದು ಹೇಳಿದ್ದರೆ ಆತನು ಉಚ್ಛೇದವಾದಿ (ಸಾವಿನ ನಂತರ ಏನೂ ಇಲ್ಲ)ಗಳ ಸಿದ್ಧಾಂತದೆಡೆಯಲ್ಲಿ ವಾಲಿಬಿಡುತ್ತಿದ್ದನು. ಆನಂದ ನಾನು ವಚ್ಚಗೊತ್ತನ ಆತ್ಮವಿದೆಯೇ ಪ್ರಶ್ನೆಗೆ ಆತ್ಮವಿದೆ ಎಂದು ಹೇಳಿದ್ದರೆ ಎಲ್ಲಾ ಧಮ್ಮಗಳು ಅನಾತ್ಮ ಎಂಬ ಪರಮಜ್ಞಾನದ ಉದಯಕ್ಕೆ ಸಹಕಾರಿಯಾಗಿರುತ್ತಿತ್ತೆ. ಇಲ್ಲ ಭಂತೆ. ಅದೇರೀತಿ ವಚ್ಚಗೊತ್ತನ ಆತ್ಮವಿದೆ ಎಂಬ ಪ್ರಶ್ನೆಗೆ ಇಲ್ಲವೆಂದು ಹೇಳಿದ್ದರೆ ಮೊದಲೇ ಗೊಂದಲದಲ್ಲಿ ಮುಳುಗಿದ್ದ ವಚ್ಚಗೊತ್ತನು ಪುನಃ ಮತ್ತಷ್ಟು ಗೊಂದಲಭರಿತನಾಗುತ್ತಿದ್ದನು. ಆಗ ಆತನು ಹೀಗೆ ಯೋಚಿಸುತ್ತಿದ್ದನು: ನನ್ನಲ್ಲಿ ಹಿಂದೆ ಇದ್ದಂತಹ ಸ್ವಯಂ (ಆತ್ಮ) ಈಗಿಲ್ಲ ಎಂದು ಗೊಂದಲವುಳ್ಳವನಾಗುತ್ತಿದ್ದನು".

11. ಸಭಿಯ ಕಚ್ಚಾನ ಸುತ್ತ

420. ಒಮ್ಮೆ ಪೂಜ್ಯ ಸಭಿಯ ಕಚ್ಚಾನರು ನಾತಿಕದಲ್ಲಿನ ಇಟ್ಟಿಕೆಗಳ ವಿಶಾಲಾಂಗಣದಲ್ಲಿ ವಾಸಿಸುತ್ತಿದ್ದನು. ಆಗ ಪರಿವ್ರಾಜಕ ವಚ್ಚಗೊತ್ತನು ಪೂಜ್ಯ ಸಭಿಯರಲ್ಲಿಗೆ ಸಮೀಪಿಸಿ, ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತು ಹೀಗೆ ಪ್ರಶ್ನಿಸಿದನು. ಇದು ಹೇಗೆ ಪೂಜ್ಯ ಕಚ್ಚಾನರೇ, ತಥಾಗತರು ಮರಣದ ನಂತರ ಇರುವರೇ? (ಇದಕ್ಕೆ ಉತ್ತರ ಹಿಂದಿನಂತೆಯೇ). ಸರಿ ಪೂಜ್ಯ ಕಚ್ಚಾನರೇ, ಯಾವ ಕಾರಣದಿಂದಾಗಿ ಮತ್ತು ಯಾವ ಸಹಾಯಕಗಳಿಂದಾಗಿ ಭಗವಾನರು ಈ ಪ್ರಶ್ನೆಗೆ ಉತ್ತರಿಸಲಿಲ್ಲ? ವಚ್ಚ, ಯಾವುದೆಲ್ಲ ಕಾರಣದಿಂದ, ಯಾವುದೆಲ್ಲ ಸಹಾಯಕಗಳಿಂದ ಅವರನ್ನು ರೂಪ (ದೇಹ ಹೊಂದಿರುವವರು) ಅಥವಾ ಅರೂಪಿಯೆಂದು (ದೇಹ ಹೊಂದಿಲ್ಲದವರು) ಅಥವಾ ಗ್ರಹಿಕೆ ಇರುವವರು ಅಥವಾ ಗ್ರಹಿಕೆಗೆ ಅತೀತವಾದವರು ಅಥವಾ ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ (ನೇವಸಞ್ಞಾನಾಸಞ್ಞಾ) ದವರೆಂದು ವಿವಿರಿಸುತ್ತೇವೆಯೋ ಅಂತಹ ಕಾರಣ, ಅಂತಹ ಉದ್ದೇಶವು ಸರ್ವತ್ರವಾಗಿ ಪೂರ್ಣವಾಗಿ ನಿರೋಧವಾಗುತ್ತದೆಯೋ ಆಗ ಅಂಥದ್ದನ್ನು ರೂಪಿಯೆಂದು ಅಥವಾ ಅರೂಪಿಯೆಂದು ಅಥವಾ ಸಂಜ್ಞೆಯುತವೆಂದು ಅಥವಾ ಅಸಂಜ್ಞೆಯೆಂದು ಅಥವಾ (ನೇವಸಞ್ಞಾನಾಸಞ್ಞಾವೆಂದು ಯಾವ ರೀತಿಯಲ್ಲಿ ವ್ಯಾಖ್ಯಾನಿಸುವೆ? ಪೂಜ್ಯ ಕಚ್ಚಾನರೇ, ಪಬ್ಬಜಿತರಾಗಿ ಎಷ್ಟು ಕಾಲದಿಂದ ಇದ್ದೀರಿ? ಹೆಚ್ಚಿಲ್ಲ ಆಯುಷ್ಮಂತ, ಮೂರು ವರ್ಷಗಳಿಂದ. ಯಾರೆಲ್ಲಾ ಇಷ್ಟು ಕಡಿಮೆಯ ಅವಧಿಯಲ್ಲಿ, ಇಷ್ಟೊಂದು ಗಳಿಸಿರುವನೋ ಇದು ನಿಜಕ್ಕೂ ಮಹತ್ತರವೇ. ಇನ್ನು ಪಾರಂವನ್ನು ದಾಟಿರುವವರ ಬಗ್ಗೆ ಹೆಳಬೇಕಾದ್ದೇ ಇಲ್ಲ.


ಅಬ್ಯಾಕತ ಸಂಯುಕ್ತವು ಸಮಾಪ್ತಿಯಾಯಿತು 

Thursday 7 June 2018

Samyutta nikaya 43 ಅಸಙ್ಞತ (ಅಸಂಖತ) ಸಂಯುಕ್ತ


 ಅಸಙ್ಞತ (ಅಸಂಖತ) ಸಂಯುಕ್ತ 

1. ಪ್ರಥಮವರ್ಗ
1. ಕಾಯಗತಾಸತಿ ಸುತ್ತ

366. ಸಾವತ್ಥಿ (ಶ್ರಾವಸ್ತಿ)ಯಲ್ಲಿ ಹೇಳಿದ್ದು: ಭಿಕ್ಷುಗಳೇ, ನಾನು ಅಸಂಖತ (ಕಾರಣಾತೀತ) ಧಮ್ಮವನ್ನು ಬೋಧಿಸುತ್ತೇನೆ. ಹಾಗೆಯೇ ಅಸಂಖತ ಧಮ್ಮದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಯಾವುದು ಭಿಕ್ಷುಗಳೇ ಅಸಂಖತ ಧಮ್ಮ? ರಾಗಕ್ಷಯ, ದ್ವೇಷಕ್ಷಯ ಮತ್ತು ಮೋಹಕ್ಷಯ ಇದುವೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ, ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಕಾಯಗತಾಸತಿಯನ್ನೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇವೆ.
ಭಿಕ್ಷುಗಳೇ, ಹೀಗೆ ನಾನು ಅಸಂಖತ ಉಪದೇಶಿಸುತ್ತೇನೆ ಹಾಗು ಅಸಂಖತಗಾಮಿ ಮಾರ್ಗವನ್ನು ಉಪದೇಶಿಸುತ್ತೇನೆ. ಓರ್ವ ಅನುಕಂಪಭರಿತ ಉಪಾಧ್ಯಾಯನಿಂದ ತನ್ನ ಶಿಷ್ಯರಿಗೆ (ಅಂದರೆ ಶ್ರಾವಕರಿಗೆ) ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇದೇ ವೃಕ್ಷಮೂಲಗಳಾಗಿವೆ. ಇವೇ ಶೂನ್ಯಗೃಹಗಳಾಗಿವೆ. ಭಿಕ್ಷುಗಳೇ, ಧ್ಯಾನಸಿ, ಪ್ರಮಾದಿಗಳಾಗಬೇಡಿ, ಇಲ್ಲದೇಹೋದಲ್ಲಿ ನಂತರ ಪಶ್ಚಾತ್ತಾಪ ಬೀಳುವಿರಿ. ಇದೇ ನಾನು ನಿಮಗೆ ನೀಡುವ ಅನುಶಾಸನವಾಗಿದೆ.


2. ಸಮಥವಿಪಸ್ಸನಾ ಸುತ್ತ

367. ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಸಮಥ ಹಾಗು ವಿಪಶ್ಶನವೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


3. ಸವಿತರ್ಕ ಸವಿಚಾರ ಸುತ್ತ

368. ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಸವಿತರ್ಕ ಸವಿಚಾರ ಸಮಾದಿ (ಯೋಚನೆ ಹಾಗು ಪರೀಕ್ಷೆಯುತ) ಅಸವಿತರ್ಕ ಹಾಗು ಅವಿಚಾರ ಸಮಾದಿ (ಯೋಚನೆರಹಿತ ಹಾಗು ಪರೀಕ್ಷಾತೀತ) ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


4. ಶೂನ್ಯತ ಸಮಾಧಿ ಸುತ್ತ

369. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಸೂನ್ಯತಾ (ಶೂನ್ಯತೆ) ಸಮಾದಿ, ಸಂಕೇತರಹಿತ (ಅನಿಮಿತ್ತ) ಸಮಾದಿ, ಅಪ್ಪಣಿಹಿತೊ (ಆಸೆರಹಿತ/ಅಮಾರ್ಗದಶರ್ಿತ) ಸಮಾಧಿ. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


5. ಸತಿಪಟ್ಠಾನ ಸುತ್ತ (ಸ್ಮೃತಿಯ ಪ್ರತಿಷ್ಠಾಪನೆಯ ಸುತ್ತ)

370. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ನಾಲ್ಕು ಸ್ಮೃತಿ ಪ್ರತಿಷ್ಠಾಪನೆ (ನಾಲ್ಕು ಸತಿಪಟ್ಠಾನ)ಗಳು. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


6. ಸಮ್ಮಪ್ರಧಾನ ಸುತ್ತ (ಯೋಗ್ಯ ಪ್ರಯತ್ನಶೀಲತೆಯ ಸುತ್ತ)

371. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ನಾಲ್ಕು ಸಮಂಜಸ ಪ್ರಯತ್ನಶೀಲತೆ. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


7. ಇದ್ದಿಪಾದ [ಋದ್ದಿಪಾದ (ಆಧಾರ)] ಸುತ್ತ

372. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ನಾಲ್ಕು ಇದ್ದಿಪಾದಗಳು (ಋದ್ದಿಶಕ್ತಿಗೆ ಆಧಾರವಾಗಿರುವಂತಹುದು). ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


8. ಇಂದ್ರಿಯ ಸುತ್ತ

373. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ಪಂಚೇಂದ್ರಿಯಗಳು. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


9. ಬಲ ಸುತ್ತ

374. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ಪಂಚಬಲಗಳು. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


10. ಬೋಧಿ ಅಂಗಗಳ ಸುತ್ತ (ಭೋಜ್ಯಾಂಗ ಸುತ್ತ)

375. ಭಿಕ್ಷುಗಳೇ, ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ಸಪ್ತಬೋಧಿ ಅಂಗಗಳು. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


11. ಮಾರ್ಗ ಅಂಗಗಳ ಸುತ್ತ (ಮಾಗರ್ಾಂಗ ಸುತ್ತ)

376. ಭಿಕ್ಷುಗಳೇ, ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ಆರ್ಯ ಅಷ್ಠಾಂಗಿಕ ಮಾರ್ಗವೆಂದು ಹೇಳುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವು ಉಪದೇಶಿಸಲಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತವಾದ ಉಪಧ್ಯಾಯನಿಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅವೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ. ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಬೇಡಿ. ಇಲ್ಲದೇಹೋದಲ್ಲಿ ನಂತರ ಪಶ್ಚಾತ್ತಾಪ ಬೀಳುವಿರಿ. ಇದೇ ನಾನು ನಿಮಗೆ ನೀಡುವ ಅನುಶಾಸನವಾಗಿದೆ.


2. ದ್ವಿತೀಯ ವರ್ಗ

1. ಅಸಂಖತ ಸುತ್ತಂ

377. ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಸಮಥವನ್ನು ಅಸಂಖತಗಾಮಿ ಮಾರ್ಗವೆನ್ನುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅದರ ಮಾರ್ಗ ಉಪದೇಶಿತವಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತನಾದ ಉಪಾಧ್ಯಾಯನಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದೇ ಹೋದಲ್ಲಿ ನಂತರ ಪಶ್ಚಾತ್ತಾಪದಲ್ಲಿ ಬೀಳುವಿರಿ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ವಿಪಶ್ಶನವನ್ನು ಅಸಂಖತಗಾಮಿ ಮಾರ್ಗವೆನ್ನುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅದರ ಮಾರ್ಗ ಉಪದೇಶಿತವಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತನಾದ ಉಪಾಧ್ಯಾಯನಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದೇ ಹೋದಲ್ಲಿ ನಂತರ ಪಶ್ಚಾತ್ತಾಪದಲ್ಲಿ ಬೀಳುವಿರಿ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಸವಿತರ್ಕ ಸವಿಚಾರ ಸಮಾಧಿ ಮತ್ತು ಅವಿತರ್ಕ ಅವಿಚಾರ ಸಮಾಧಿಯನ್ನು ಅಸಂಖತಗಾಮಿ ಮಾರ್ಗವೆನ್ನುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅದರ ಮಾರ್ಗ ಉಪದೇಶಿತವಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತನಾದ ಉಪಾಧ್ಯಾಯನಿಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದೇ ಹೋದಲ್ಲಿ ನಂತರ ಪಶ್ಚಾತ್ತಾಪದಲ್ಲಿ ಬೀಳುವಿರಿ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಸುನ್ಯತೋ ಸಮಾಧಿ ಅನಿಮಿತ್ತ ಸಮಾಧಿ ಮತ್ತು ಅಪ್ಪಣಿಹಿತೋ ಸಮಾಧಿಯನ್ನು ಅಸಂಖತಗಾಮಿ ಮಾರ್ಗವೆನ್ನುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅದರ ಮಾರ್ಗ ಉಪದೇಶಿತವಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತನಾದ ಉಪಾಧ್ಯಾಯನಿಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದೇ ಹೋದಲ್ಲಿ ನಂತರ ಪಶ್ಚಾತ್ತಾಪದಲ್ಲಿ ಬೀಳುವಿರಿ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ ಯಾವುದು ಅಸಂಖತ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಕಟನಾಗಿ, ಸ್ಪಷ್ಟವಾದ ಅರಿವುಳ್ಳವನಾಗಿ, ಸ್ಮೃತಿವಂತನಾಗಿ, ದುರಾಸೆಯಿಂದ ದೂರಾಗಿ, ಲೋಕದ ಬಗ್ಗೆ ವಿರಾಗಿಯಾಗಿ ವಿಹರಿಸುತ್ತಾನೆ. ಇದನ್ನೇ ಭಿಕ್ಷುಗಳೇ ಅಸಂಖತ ಮಾರ್ಗವೆನ್ನುವರು. ಇಲ್ಲಿ ಭಿಕ್ಷುಗಳೇ, ಭಿಕ್ಷುವು ವೇದಾನಾನುಪ್ಪಸಿಯಾಗಿ ವಿಹರಿಸುತ್ತಾನೆ. ಆತನು ಉತ್ಕಟನಾಗಿ, ಸ್ಪಷ್ಟ ಅರಿವುಳ್ಳವನಾಗಿ ಸದಾ ಸ್ಮೃತಿವಂತನಾಗಿ, ದುರಾಸೆಯಿಂದ ದೂರಾಗಿ, ಲೋಕದ ಬಗೆಗಿನ ಎಲ್ಲದಕ್ಕೂ ಅಂಟದವನಾಗಿ ವಿಹರಿಸುತ್ತಾನೆ. ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಿತ್ತದಲ್ಲಿ ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ. ಆತನು ಉತ್ಕಟನಾಗಿ ಸ್ಪಷ್ಟವಾದ ಅರಿವಿನಿಂದ ಸದಾ ಸ್ಮೃತಿವಂತನಾಗಿ, ದುರಾಸೆಯಿಂದ ದೂರಾಗಿ, ಲೋಕದ ಬಗೆಗಿನ ಯಾವುದಕ್ಕೂ ಅಂಟದೆ ವಿಹರಿಸುತ್ತಾನೆ... ಭಿಕ್ಷುಗಳೇ, ಇಲ್ಲಿ ಭಿಕ್ಷುವು ಧಮ್ಮಗಳಲ್ಲಿ ಧಮ್ಮಾನುಪ್ಪಸ್ಸಿಯಾಗಿ ವಿಹರಿಸುತ್ತಾನೆ. ಆತನು ಉತ್ಕಟನಾಗಿ ಸ್ಪಷ್ಟವಾದ ಅರಿವಿನಿಂದ, ಸದಾ ಸ್ಮೃತಿವಂತನಾಗಿ, ದುರಾಸೆಯಿಂದ ದೂರಾಗಿ, ಲೋಕದ ಬಗೆಗಿನ ಯಾವುದಕ್ಕೂ ಅಂಟದೆ ವಿಹರಿಸುತ್ತಾನೆ. ಇದನ್ನೇ ಅಸಂಖತ ಧಮ್ಮಕ್ಕೆ ಮಾರ್ಗವೆಂದು ಹೇಳುತ್ತೇನೆ.
ಭಿಕ್ಷುಗಳೇ, ಯಾವುದು ಅಸಂಖತ ಧಮ್ಮಕ್ಕೆ ಮಾರ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಇನ್ನೂ ಉಂಟಾಗದೆ ಇರುವ ಪಾಪಯುತ ಅಕುಶಲ ಮಾನಸಿಕ ಸ್ಥಿತಿಗಳನ್ನು ಉಂಟಾಗದೆ ಇರುವಂತೆ ಪ್ರಬಲ ಇಚ್ಛಾಶಕ್ತಿಯನ್ನು ಬೆಳೆಸುತ್ತಾನೆ. ಹಾಗೆಯೇ ಪ್ರಯತ್ನಶಾಲಿಯಾಗುತ್ತಾನೆ. ಪ್ರಯತ್ನವನ್ನು ಸದಾ ಚಾಲನೆಯಲ್ಲಿಟ್ಟಿರುತ್ತಾನೆ. ಇದೇರೀತಿಯಾಗಿ ಚಿತ್ತವನ್ನು ಅನ್ವಯಿಸಿ ಶ್ರಮಿಸುತ್ತಾನೆ. ಇದನ್ನೇ ಅಸಂಖತ ಧಮ್ಮಕ್ಕಿರುವ ಮಾರ್ಗವೆನ್ನುತ್ತಾರೆ.
.... ಭಿಕ್ಷುಗಳೇ, ಯಾವುದು ಅಸಂಖತ ಧಮ್ಮಕ್ಕಿರುವ ಮಾರ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಉಂಟಾಗಿರುವಂತಹ ಪಾಪಯುತ ಅಕುಶಲ ಮಾನಸಿಕ ಸ್ಥಿತಿಗಳನ್ನೆಲ್ಲವನ್ನು ತೊರೆಯುವ ಪ್ರಬಲ ಇಚ್ಛೆಯನ್ನುಂಟುಮಾಡುತ್ತಾನೆ. ಅದರಂತೆಯೇ ಶ್ರಮಿಸುತ್ತಾನೆ. ಆ ಪ್ರಯತ್ನಶೀಲತೆಯನ್ನು ಸದಾ ಚಾಲನೆಯಲ್ಲಿಡುತ್ತಾನೆ. ತನ್ನ ಚಿತ್ತವು ಅದೇರೀತಿಯಲ್ಲಿ ಸಾಗುವಂತೆ ಅನ್ವಯಿಸುತ್ತಾನೆ ಹಾಗು ಶ್ರಮಿಸುತ್ತಾನೆ...
.... ಭಿಕ್ಷುಗಳೇ, ಮತ್ತೆ ಯಾವುದದು ಅಸಂಖತದೆಡೆಗೆ ಕೊಂಡೊಯ್ಯುವ ಮಾರ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಇದುವರೆಗೂ ಉದಯಿಸದ ಕುಶಲ ಮಾನಸಿಕ ಸ್ಥಿತಿಗಳನ್ನು ಉದಯಿಸುವಂತಹ ಪ್ರಬಲ ಇಚ್ಛೆಯನ್ನುಂಟುಮಾಡುತ್ತಾನೆ. ಅದರಂತೆಯೇ ಸತತ ಪರಿಶ್ರಮಪಡುತ್ತಾನೆ. ಆ ಪ್ರಯತ್ನಶೀಲತೆಯನ್ನು ಸದಾ ಚಾಲನೆಯಲ್ಲಿಡುತ್ತಾನೆ. ತನ್ನ ಚಿತ್ತವು ಅದೇರೀತಿಯಲ್ಲಿ ಸಾಗುವಂತೆ ಅನ್ವಯಿಸುತ್ತಾನೆ ಹಾಗು ಶ್ರಮಿಸುತ್ತಾನೆ...
.... ಭಿಕ್ಷುಗಳೇ, ಮತ್ತೆ ಯಾವುದದು ಅಸಂಖತದೆಡೆಗೆ ಕೊಂಡೊಯ್ಯುವ ಮಾರ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಉದಯಿಸಿದಂತಹ ಕುಶಲ ಮಾನಸಿಕ ಸ್ಥಿತಿಗಳನ್ನು ಅವು ನಿರಂತರವಾಗಿ ನೆಲೆಸುವಂತಹ ಪ್ರಬಲ ಇಚ್ಛೆಯನ್ನುಂಟುಮಾಡುತ್ತಾನೆ. ಅದರಂತೆಯೇ ಸತತ ಪರಿಶ್ರಮ ಪಡುತ್ತಾನೆ. ಕುಶಲ ಸ್ಥಿತಿಗಳು ಶಿಥಿಲವಾಗದಂತೆ ನೋಡಿಕೊಳ್ಳುತ್ತಾನೆ. ಅವುಗಳ ವೃದ್ಧಿಗಳೆಡೆ, ವಿಕಾಸದೆಡೆಗೆ, ವೃದ್ಧಿಯ ಪರಿಪೂರ್ಣತೆಯೆಡೆಗೆ ಆತನು ಪರಿಶ್ರಮಪಡುತ್ತಾನೆ. ತನ್ನ ಚಿತ್ತವು ಅದೇದಿಕ್ಕಿನಲ್ಲಿ ಸಾಗುವಂತೆ ಅನ್ವಯಿಸುತ್ತಾನೆ ಹಾಗು ಪ್ರಯತ್ನಪಡುತ್ತಾನೆ. ಇದೇ ಅಸಂಖತದೆಡೆಗೆ ಸಾಗುವ ಮಾರ್ಗವಾಗಿದೆ.
.... ಭಿಕ್ಷುಗಳೇ, ಯಾವುದದು ಅಸಂಖತದೆಡೆಗೆ ಕೊಂಡೊಯ್ಯುವ ಮಾರ್ಗವು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಛನ್ದ (ಇಚ್ಛಾಶಕ್ತಿಯುತ) ಸಮಾಧಿ ಹಾಗು ಸಂಖಾರ ಸಮನ್ನಗತದಿಂದ (ಪರಿಶ್ರಮದ ಸಂಖಾರಗಳಿಂದ) ಪರಮಾರ್ಥ ಆಧಾರ (ಪಾದ)ವನ್ನು ವಿಕಸಿಸುತ್ತಾನೆ. ಇದೇ ಅಸಂಖತದೆಡೆಗೆ ಕೊಂಡೊಯ್ಯುವಂತಹ ಮಾರ್ಗವಾಗಿದೆ.
.... ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗವು? ಭಿಕ್ಷುಗಳೇ, ಇಲ್ಲಿ ಭಿಕ್ಷುವು ವೀರ್ಯವೇ (ಪ್ರಯತ್ನ) ಪ್ರಧಾನವಾಗಿರುವಂತಹ ಸಮಾಧಿಯನ್ನು ಹೊಂದುತ್ತಾನೆ ಹಾಗು ಸಂಖಾರದ ಸಮಾನ್ನಗತದಿಂದ ಅಂತಹ ಸಂಖಾರಗಳಿರುವಂತೆ ನೋಡಿಕೊಳ್ಳುತ್ತಾನೆ... ಮತ್ತೆ ಯಾವುದದು ಭಿಕ್ಷುಗಳೇ ಅಸಂಖತ ಧಮ್ಮವು? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಿತ್ತ ಏಕಾಗ್ರತೆ (ಸಮಾಧಿ) ಪ್ರಧಾನವಾದ ಸಮಾಧಿಯನ್ನು ಹೊಂದುತ್ತಾನೆ. ಹಾಗು ಅದಕ್ಕೆ ಸಹಾಯಕ ಸಮನ್ನಾಗತ ಸಂಖಾರಗಳು ಇರುವಂತೆ ನೋಡಿಕೊಳ್ಳುತ್ತಾನೆ. ಇದನ್ನೇ ಭಿಕ್ಷುಗಳೇ ಅಸಂಖತ ಧಮ್ಮಮಾರ್ಗವೆಂದು... ಮತ್ತೆ ಯಾವುದದು ಭಿಕ್ಷುಗಳೇ, ಅಸಂಖತ ಧಮ್ಮಕ್ಕಿರುವ ಮಾರ್ಗವು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಮಿಮಾಂಸ ಪ್ರಧಾನವಾದ (ಸತ್ಯಶೋಧನೆಯ ಪ್ರಧಾನವಾದ) ಸಮಾಧಿಯನ್ನು ಹೊಂದಿರುತ್ತಾನೆ ಹಾಗು ಅಂತಹ ಸಮನ್ನಾಗತ ಸಂಖಾರಗಳಿರುವಂತೆ ನೋಡಿಕೊಳ್ಳುತ್ತಾನೆ. ಇವೇ ಭಿಕ್ಷುಗಳೇ, ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವಾಗಿದೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಶ್ರದ್ಧೇಂದ್ರಿಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ವೀರಿಯೀಂದ್ರಿಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸ್ಮೃತೀಂದ್ರಿಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮಾಧೀಂದ್ರಿಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಪನ್ನೇಂದ್ರೀಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಶ್ರದ್ಧಾಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ವಿರಿಯಾ ಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸ್ಮೃತಿಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸಮಾಧಿ ಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಪ್ರಜ್ಞಾ ಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ ಸ್ಮೃತಿ (ಜಾಗರೂಕತೆಯ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ  ಧಮ್ಮವಿಚಯ (ಸ್ಥಿತಿಗಳ ವಿವೇಚನೆ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ  ವಿರಿಯಾ ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ ಪೀತಿ (ಆನಂದ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ  ಪಸ್ಸದ್ದಿ (ಪ್ರಶಾಂತತೆಯ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ ಸಮಾಧಿ ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ  ಉಪೇಕ್ಖ (ಸಮಚಿತ್ತತೆಯ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ದೃಷ್ಟಿಕೋನವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಸಂಕಲ್ಪವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ವಾಚವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಕರ್ಮವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಜೀವನವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ವ್ಯಾಯಾಮವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಸ್ಮೃತಿವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಸಮಾಧಿಯನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಹೀಗೆ ನಾನು ನಿಮಗೆ ಅಸಂಖತವನ್ನು ಮತ್ತು ಅಸಂಖತಗಾಮಿ ಮಾರ್ಗವನ್ನು ತಿಳಿಸಿದ್ದೇನೆ. ಓರ್ವ ಕರುಣಾಕರ ಗುರುವು ತನ್ನ ಶ್ರಾವಕ ಶಿಷ್ಯರಿಗೆ ಅನುಕಂಪದಿಂದಾಗಿ ಏನೆಲ್ಲಾ ಮಾಡಬಹುದಿತ್ತೋ ಅದೆಲ್ಲವನ್ನು ನಾನು ನಿಮಗೆ ಮಾಡಿದ್ದೇನೆ. ಇವೇ ವೃಕ್ಷಮೂಲವಾಗಿದೆ. ಭಿಕ್ಷುಗಳೇ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದಿದ್ದರೆ ಬಳಿಕ ಪಶ್ಚಾತ್ತಾಪಪಡುವಿರಿ. ಇದು ನಾನು ನಿಮಗೆ ನೀಡುವ ಅನುಶಾಸನವಾಗಿದೆ.


2. ಅನತ್ತಸುತ್ತಂ

378. ಭಿಕ್ಷುಗಳೇ, ನಾನು ನಿಮಗೆ ಈಗ ಅನತಂಚವನ್ನು (ತೃಷ್ಣೆಯ ಕಡೆಗೆ ಬಾಗಿಲ್ಲದ ಮನೋಸ್ಥಿತಿ) ಉಪದೇಶಿಸುತ್ತೇನೆ. ಹಾಗು ಈ ಅನತಂಚದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ, ಆಲಿಸಿ. ಯಾವುದು ಭಿಕ್ಷುಗಳೇ, ಅನಸಂಚವು ಹಾಗು ಅದರೆಡೆಗೆ ಸಾಗುವ ಮಾರ್ಗವು? (ಅಸಂಚಿತ ಹಾಗು ಅಸಂಖತದೆಡೆಗೆ ಸಾಗುವ ಮಾರ್ಗವನ್ನೇ ಇಲ್ಲಿಯೂ ಓದಿಕೊಳ್ಳುವುದು.)


3-32 ಅನಾಸವಾದಿ ಸುತ್ತ

379 ರಿಂದ 408: ಭಿಕ್ಷುಗಳೇ, ನಾನು ನಿಮಗೆ ಅನಾಸವ (ಆಸ್ರವರಹಿತ) ಹಾಗು ಅನಾಸವಗಾಮಿಯ ಮಾರ್ಗವನ್ನು (ಆಸ್ರವರಹಿತತೆಗೆ ಸಿಗುವ ಮಾರ್ಗವನ್ನು) ಉಪದೇಶಿಸುತ್ತೇನೆ. ತಾವೆಲ್ಲರೂ ಆಲಿಸಿ... ಭಿಕ್ಷುಗಳೇ, ನಾನು ಸತ್ಯದ ಹಾಗು ಸತ್ಯದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಆಲಿಸಿ... ಭಿಕ್ಷುಗಳೇ ನಾನು ನಿಮಗೆ ಪಾರವೂ (ಆಚೆಗಿನ ದಡದ) ಹಾಗು ಪಾರದದೆಡೆಗಿನ ಮಾರ್ಗದ ಬಗ್ಗೆ ಉಪದೇಶಿಸುತ್ತೇನೆ. ತಾವೆಲ್ಲರೂ ಆಲಿಸಿ... ಭಿಕ್ಷುಗಳೇ, ನಾನು ನಿಮಗೆ ನಿಪುಣ (ಪರಮಸೂಕ್ಷ್ಮತೆಯ) ಬಗ್ಗೆ ಹಾಗೆಯೇ ನಿಪುಣಗಾಮಿಯ ಮಾರ್ಗದ ಬಗ್ಗೆ... ಭಿಕ್ಷುಗಳೇ, ಸಮದ್ದಸನ್ಯತೆಯ (ನೋಡಲು ಹಾಗು ಗ್ರಹಿಸಲು ಪರಮಕಷ್ಟಕರವಾಗಿರುವುದು) ಬಗ್ಗೆ ಹಾಗು ಅದರ ಪ್ರಾಪ್ತಿಯ ಮಾರ್ಗದ ಬಗ್ಗೆ ಹೇಳುತ್ತೇನೆ, ಆಲಿಸಿ. ಭಿಕ್ಷುಗಳೇ, ನಿಮಗೆ ಅಜರಾ (ಮುಪ್ಪಿಲ್ಲದ) ಅಜರಾದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ನಿಮಗೆ ದ್ರುವ (ಸ್ಥಿರವಾಗಿರುವ)ದ ಬಗ್ಗೆ... ದ್ರುವದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅಪಲೋಕಿಂಚದ (ಅಶಿಥಿಲತೆಯ) ಬಗ್ಗೆ ಅಶಿಥಿಲದೆಡೆಯ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅನಿದಸ್ಸನಂಚ (ಅವ್ಯಕ್ತತೆಯ) ಬಗ್ಗೆ ಅನಿದಸ್ಸನಂಚದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ನಿಪ್ರಪಂಚ (ನಿಷ್ಪ್ರಪಂಚತೆಯ/ಅಗುಣಕವಾಗುವಿಕೆಯ) ಬಗ್ಗೆ ನಿಷ್ಪಪಂಚತೆಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ನಾನು ನಿಮಗೆ ಪರಮಶಾಂತತೆಯ (ಸಂತ) ಹಾಗು ಪರಮಶಾಂತತೆಯೆಡೆಗೆ ಸಾಗುವ ಮಾರ್ಗದ ಬಗ್ಗೆ ವಿವರಿಸುವೆನು, ಆಲಿಸಿರಿ... ಭಿಕ್ಷುಗಳೇ, ಅಮತ (ಅಮರತ್ವದ) ಹಾಗು ಅಮತದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಪಣೀತ (ಉದಾತ್ತದ) ಹಾಗು ಉದಾತ್ತದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಸಿವ (ಶುಭಕರ) ಹಾಗು ಸಿವದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಖೇಮ (ಕ್ಷೇಮಕರ) ಹಾಗು ಖೇಮದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ತಣ್ಹಾಕ್ಷಯದ ಹಾಗು ತಣ್ಹಾಕ್ಷಯದೆಡೆಗೆ ಸಾಗುವ ಮಾರ್ಗದ ಬಗ್ಗೆ...
ಭಿಕ್ಷುಗಳೇ, ಆಶ್ಚರ್ಯದ ಹಾಗು ಆಶ್ಚರ್ಯದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅದ್ಭುತ ಹಾಗು ಅದ್ಭುತದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅನೀತಿಕಂ (ರೋಗರಹಿತ) ಹಾಗು ರೋಗರಹಿತದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅನೀತಿಕಧಮ್ಮ (ನೋವುರಹಿತ ಸ್ಥಿತಿ) ಹಾಗು ನೋವುರಹಿತ ಸ್ಥಿತಿಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ನಿಬ್ಬಾಣದ ಬಗ್ಗೆ ಹಾಗು ನಿಬ್ಬಾಣಗಾಮಿ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅಭ್ಯಾಪಜ್ಝಂಚ (ನರಳಾಟವಿಲ್ಲದಿರುವ) ಹಾಗು ಅದರೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ವಿರಾಗದ ಹಾಗು ವಿರಾಗದೆಡೆಗೆ ಸಾಗುವ ಮಾರ್ಗದ ಬಗ್ಗೆ...
ಭಿಕ್ಷುಗಳೇ, ಸುದ್ದಿಂಚ (ಶುದ್ಧಿಯ) ಹಾಗು ಶುದ್ಧಿಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಮುಕ್ತಿಯ ಹಾಗು ಮುಕ್ತಿಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅನಾಲಯ (ಅಂಟುವಿಕೆಯಿಲ್ಲದ) ಹಾಗು ಅನಾಲಯದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ದ್ವೀಪದ ಹಾಗು ದ್ವೀಪದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಲೇಣಂಚ (ಪರಮವಸತಿ) ಹಾಗು ಪರಮ ವಸತಿಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ತಾಣಂಚ (ಪರಮ ಆಶ್ರಯ) ಹಾಗು ತಾಣದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಶರಣು (ಶರಣುವಿಗೆ ಯೋಗ್ಯ) ಹಾಗು ಶರಣುಯೆಡೆಗೆ ಸಾಗುವ ಮಾರ್ಗದ ಬಗ್ಗೆ...


33. ಪರಾಯನ ಸುತ್ತ

409. ಭಿಕ್ಷುಗಳೇ, ನಾನು ನಿಮಗೆ ಪರಮಗಮ್ಯತೆಯ ಬಗ್ಗೆ ಹಾಗೆಯೇ ಪರಮಗಮ್ಯತೆಯೆಡೆಗೆ ಸಾಗುವ ಮಾರ್ಗದ ಬಗ್ಗೆ ಉಪದೇಶಿಸುವೆ ಆಲಿಸಿರಿ. ಭಿಕ್ಷುಗಳೇ, ಯಾವುವು ಪರಮಗಮ್ಯತೆ? ರಾಗಕ್ಷಯ, ದ್ವೇಷಕ್ಷಯ ಹಾಗು ಮೋಹಕ್ಷಯ. ಇದುವೇ ಭಿಕ್ಷುಗಳೇ ಪರಮಗಮ್ಯತೆಯಾಗಿದೆ. ಹಾಗು ಭಿಕ್ಷುಗಳೇ, ಯಾವುದದು ಪರಮಗಮ್ಯತೆಯೆಡೆಗೆ ಸಾಗುವ ಮಾರ್ಗವು? ಕಾರ್ಯಗತಾಸ್ಮೃತಿಯೇ ಭಿಕ್ಷುಗಳೇ, ಪರಮಗಮ್ಯತೆಯೆಡೆಗೆ ಸಾಗುವ ಮಾರ್ಗವಾಗಿದೆ ಎಂದು ಹೇಳುತ್ತೇನೆ. ಹೀಗೆ ಭಿಕ್ಷುಗಳೇ, ನಾನು ಪರಮಗಮ್ಯತೆಯನ್ನು ಹಾಗು ಪರಮಗಮ್ಯತೆಯೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸಿದ್ದೇನೆ. ಭಿಕ್ಷುಗಳೇ, ಓರ್ವ ಕರುಣಾಕರ ಪರಮಗುರುವು ಅನುಕಂಪದಿಂದ ಏನೆಲ್ಲವನ್ನು ತನ್ನ ಶ್ರಾವಕ ಶಿಷ್ಯರಿಗೆ ಮಾಡಬಹುದೋ ಅದೆಲ್ಲವನ್ನು ನಾನು ನಿಮಗೆ ಮಾಡಿರುವೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ. ಭಿಕ್ಷುಗಳೇ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಗದಿರಿ. ಇಲ್ಲದೇಹೋದಲ್ಲಿ ನಂತರ ಪಶ್ಚಾತ್ತಾಪಪಡುವಿರಿ. ಇದೇ ನಾನು ನಿಮಗೆ ನೀಡುವ ಅನುಶಾಸನವಾಗಿದೆ. (ಇದೇರೀತಿಯಾಗಿ ಅಸಂಖತ ಧಮ್ಮದೆಡೆಗೆ ಸಾಗುವ ಉಳಿದ ಮಾರ್ಗಗಳನ್ನು ಹಿಂದಿನಂತೆಯೇ ಓದಿಕೊಳ್ಳಬೇಕು)
ಅಸಂಖತ ಸಂಯುಕ್ತವು ಸಮಾಪ್ತಿಯಾಯಿತು.

Samyutta nikaya 42 ಗಾಮಣಿ ಸಂಯುತ್ತಂ (ಗ್ರಾಮ ನಾಯಕನಿಗೆ ಸಂಬಂಧಿಸಿದ ಸುತ್ತಗಳು)

8. ಗಾಮಣಿ ಸಂಯುತ್ತಂ (ಗ್ರಾಮ ನಾಯಕನಿಗೆ ಸಂಬಂಧಿಸಿದ ಸುತ್ತಗಳು)

1. ಚಂಡ ಸುತ್ತಂ

353. ಶ್ರಾವಸ್ಥಿಯಲ್ಲಿರುವಾಗ, ಗ್ರಾಮೀಣ ಮುಖಂಡ ಚಂಡನು (ಕೋಪಿಷ್ಟ) ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತುಕೊಂಡನು. ಹಾಗು ಹೀಗೆ ಕೇಳಿದನು: ಭಂತೆ, ಯಾವ ಕಾರಣದಿಂದಾಗಿ, ಯಾವ (ಉದ್ದೇಶ) ಸಂಬಂಧದಿಂದಾಗಿ ಒಬ್ಬನು ಚಂಡನೆಂದು ಕರೆಯಲ್ಪಡುತ್ತಾನೆ ಮತ್ತು ಹಾಗೆಯೇ ಯಾವ ಕಾರಣದಿಂದಾಗಿ, ಯಾವ ಉದ್ದೇಶ (ಸಂಬಂಧದಿಂದಾಗಿ ಒಬ್ಬನು ಸಭ್ಯನೆಂದು ಕರೆಯಲ್ಪಡುತ್ತಾನೆ.
ಗ್ರಾಮೀಣ ಮುಖಂಡನೇ, ಇಲ್ಲಿ ಒಬ್ಬನು ರಾಗವನ್ನು ತೊರೆದಿರುವುದಿಲ್ಲ. ಹೀಗಾಗಿ ಪರರು ಸುಲಭವಾಗಿ ಕೋಪ ತರಿಸುವವರಾಗಿರುತ್ತಾರೆ. ಪರರಿಂದ ಕೋಪಗೊಂಡು, ಕೋಪದಲ್ಲೇ ಸ್ಥಾಪಿತನಾಗುತ್ತಾನೆ. ಹೀಗಾಗಿ ಆತನು ಚಂಡನೆಂದು ಗುರುತಿಸಲ್ಪಡುತ್ತಾನೆ. ಆತನು ದ್ವೇಷವನ್ನು ತೊರೆದಿರುವುದಿಲ್ಲ, ಹೀಗಾಗಿ ಪರರು ಆತನಿಗೆ ಸುಲಭವಾಗಿ ಕೋಪ ತರಿಸುವವರಾಗಿರುತ್ತಾರೆ. ಪರಿರಿಂದ ಕೋಪಗೊಂಡು, ಕೋಪದಲ್ಲೇ ಸ್ಥಾಪಿತನಾಗುತ್ತಾನೆ. ಹೀಗಾಗಿ ಆತನು ಚಂಡನೆಂದು ಗುರುತಿಸಲ್ಪಡುತ್ತಾನೆ. ಹಾಗೆಯೇ ಆತನು ಮೋಹವನ್ನು ತೊರೆದಿರುವುದಲ್ಲ. ಹೀಗಾಗಿ ಪರರು ಆತನಿಗೆ ಸುಲಭವಾಗಿ ಕೋಪ ತರಿಸುವವರಾಗಿರುತ್ತಾರೆ. ಪರರಿಂದ ಕೋಪಗೊಂಡು, ಕೋಪದಲ್ಲೇ ಸ್ಥಾಪಿತನಾಗುತ್ತಾನೆ. ಹೀಗಾಗಿ ಆತನು ಚಂಡನೆಂದು ಗುರುತಿಸಲ್ಪಡುತ್ತಾನೆ. ಇದೇ ಗ್ರಾಮಿಣಿಯೇ ಒಬ್ಬನು ಚಂಡನೆಂದು ಗುರುತಿಸಲ್ಪಡುವುದಕ್ಕೆ ಕಾರಣಗಳು ಹಾಗು ಉದ್ದೇಶವು ಆಗಿವೆ.
ಹಾಗೆಯೇ ಗ್ರಾಮೀಣಿಯೇ, ಇಲ್ಲಿ ಒಬ್ಬನು ರಾಗವನ್ನು ತೊರೆದಿರುತ್ತಾನೆ. ಆತನು ರಾಗವನ್ನು ತೊರೆದಿರುವುದರಿಂದಾಗಿ ಪರರು ಆತನಿಗೆ ಉದ್ರೇಕಿತ (ಕೋಪ) ನನ್ನಾಗಿಸಲಾರರು. ಹೀಗೆ ಕೋಪ ತಾಳದ ಕಾರಣ ಆತನಲ್ಲಿ ಕೋಪ ಗುಣವು ಸ್ಥಾಪಿತವಾಗುವುದಿಲ್ಲ. ಹೀಗಾಗಿ ಆತನು ಸಭ್ಯನೆಂದು ಗುರುತಿಸಲ್ಪಡುತ್ತಾನೆ. ಹಾಗೆಯೇ ಒಬ್ಬನು ಇಲ್ಲಿ ದ್ವೇಷವನ್ನು ತೊರೆದಿರುತ್ತಾನೆ. ಆತನು ದ್ವೇಷವನ್ನು ತೊರೆದಿರುವುದರಿಂದಾಗಿ, ಪರರು ಆತನಿಗೆ ಕೆರಳಿಸಲಾರರು. ಹೀಗೆ ಪರರಿಂದ ಕೆರಳದ ಆತನು ಕೋಪದಲ್ಲಿ ಸ್ಥಾಪಿತನಾಗಿರಲಾರ. ಹೀಗಾಗಿ ಆತನು ಸಭ್ಯನೆಂದು ಗುರುತಿಸಲ್ಪಡುತ್ತಾನೆ. ಹಾಗೆಯೇ ಒಬ್ಬನು ಮೋಹವನ್ನು ವಜರ್ಿಸಿರುತ್ತಾನೆ; ಮೋಹವನ್ನು ವಜರ್ಿಸಿರುವುದರಿಮದಾಗಿ ಪರರು ಆತನಿಗೆ ಕೆರಳಿಸಲಾರರು. ಪರರಿಂದ ಕೆರಳಲ್ಪಡದ ಆತನು ಕೋಪದಲ್ಲಿ ಸ್ಥಾಪಿತನಾಗಲಾರ. ಹೀಗಾಗಿ ಆತನು ಸಭ್ಯನೆಂದು ಗುರುತಿಸಲ್ಪಡುತ್ತಾನೆ. ಇದೇ ಗ್ರಾಮೀಣಿಯೇ, ಸಭ್ಯನೆಂದು ಕರೆಯಲ್ಪಡುವುದಕ್ಕಾಗಿ ಇರುವ ಕಾರಣಗಳು ಹಾಗು ಉದ್ದೇಶಗಳು ಇವೇ ಆಗಿವೆ.
ಯಾವಾಗ ಹೀಗೆ ಹೇಳಲಾಯಿತೋ, ಚಂಡ ಗ್ರಾಮೀಣನು ಭಗವಾನರೊಂದಿಗೆ ಹೀಗೆ ಹೇಳಿದನು: ಅತ್ಯಂತ ಭವ್ಯವಾದುದು ಭಂತೆ, ಘನವಾದುದು. ಭಗವಾನರಿಂದ ಧಮ್ಮವು ಅನೇಕ ವಿಧಗಳಿಂದ ಸ್ಪಷ್ಟವಾಗಿ ವಿವರಿಸಲ್ಪಟ್ಟಿದೆ. ಹೇಗೆಂದರೆ ತಲೆಕೆಳಗಾಗಿರುವುದು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಸ್ಪಷ್ಟವಾಗಿ ತೋರಿಸುವಂತೆ, ದಾರಿತಪ್ಪಿದವನಿಗೆ ಮಾರ್ಗ ತೋರಿಸುವಂತೆ, ಕತ್ತಲೆಯಲ್ಲಿರುವವನಿಗೆ ದೀಪವನ್ನು ಹಿಡಿದು ಬೆಳಕನ್ನು ತೋರುವಂತೆ ವಿವರಿಸಲ್ಪಟ್ಟಿದೆ. ಭಂತೆ ಭಗವಾನರಲ್ಲಿ ನಾನು ಶರಣುಹೋಗುವೆನು, ಅವರ ಧಮ್ಮದಲ್ಲಿಯು ಶರಣು ಹೋಗುವೆನು ಹಾಗು ಸಂಘದಲ್ಲಿಯೂ ಶರಣು ಹೋಗುವೆನು. ಭಗವಾನ್ ಇಂದಿನಿಂದ ಪ್ರಾಣವಿರುವವರೆಗೂ ನಾನು ತ್ರಿರತ್ನಗಳಲ್ಲಿ ಉತ್ಸುಕನಾಗಿರುವೆನು.


2. ತಾಲಪುಟ ಸುತ್ತಂ

354. ಒಮ್ಮೆ ಭಗವಾನರು ರಾಜಗೃಹದ ವೇಣುವನದ ಕಲಂದಕ ನಿವಾಪದಲ್ಲಿ (ಅಳಿಲು ಧಾಮದಲ್ಲಿ) ವಿಹರಿಸುತ್ತಿದ್ದರು. ಆಗ ತಾಲಪುಟ ಎಂಬ ನಟರ ಮುಖಂಡನು ಭಗವಾನರಲ್ಲಿಗೆ ಸಮೀಪಿಸಿ, ವಂದಿಸಿ, ಒಂದೆಡೆ ಕುಳಿತನು ಹಾಗು ಹೀಗೆ ಕೇಳಿದನು: ಪೂಜ್ಯನೀಯ ಭಗವಾನ್, ನಾನು ಪುರಾತನ ನಟನಾ ಶಾಸ್ತ (ಗುರುಗಳಲ್ಲಿ) ರಲ್ಲಿ ಹೀಗೆ ಕೇಳಿದ್ದೇನೆ; ಏನೆಂದರೆ: ಒಬ್ಬ ನಟನು ರಂಗಭೂಮಿಯಲ್ಲಾಗಲಿ, ವೇದಿಕೆಯಲ್ಲಾಗಲಿ ಸತ್ಯದಿಂದಲೂ ಅಥವಾ ಮಿಥ್ಯದಿಂದಲು ಜನರಿಗೆ ನಗಿಸುತ್ತಾನೆ, ಮನರಂಜನೆ ನೀಡುತ್ತಾನೆ. ಕಾಲನಂತರ ಆತನು ಕಾಲವಾದರೆ, ಆತನು ನಗಿಸುವಂತಹ ದೇವತೆಗಳ ಸಮೀಪದಲ್ಲಿ ಪುನರ್ಜನ್ಮ ತಾಳುತ್ತಾರಂತೆ ಇದು ನಿಜವೇ? ಭಗವಾನರು ಈ ಬಗ್ಗೆ ಏನೆಂದು ಹೇಳುವರು ಸಾಕು ಗ್ರಾಮೀಣಿಯೇ (ಮುಖಂಡನೇ), ಅದನ್ನು ಹಾಗೆಯೇ ಬಿಟ್ಟುಬಿಡು. ಆ ಬಗ್ಗೆ ಪ್ರಶ್ನಿಸಬೇಡ. ಆದರೆ ಆ ಗ್ರಾಮೀಣಿಯು ಎರಡನೇಬಾರಿ ಹಾಗೆಯೇ ಪ್ರಶ್ನಿಸಿದನು. ಆದರೆ ಭಗವಾನರು ಹಾಗೆಯೇ ಉತ್ತರಿಸಿದರು. ನಂತರ ಆ ಗ್ರಾಮಿಣಿಯು ಮೂರನೇಬಾರಿಯು ಹಿಂದಿನಂತೆ ಪ್ರಶ್ನಿಸಿದನು.
ನಿಜಕ್ಕೂ ನಟ ಮುಖಂಡನೆ, ನಾನು ಗ್ರಾಮಿಣಿಯೇ ಅದನ್ನು ಹಾಗೆಯೇ ಬಿಟ್ಟುಬಿಡು ಎಂದಾಗ ಪುನಃ ಕೇಳಬಾರದಿತ್ತು. ನಿನ್ನ ಒತ್ತಾಯದಿಂದಾಗಿ ಉತ್ತರಿಸುತ್ತಿರುವೆ ಆಲಿಸು. ರಂಗಭೂಮಿಯಲ್ಲಿ ಆಗಲಿ, ವೇದಿಕೆಯಲ್ಲಾಗಲಿ, ಸಮಾಜದ ಮಧ್ಯೆ ಆಗಲಿ, ಯಾರೆಲ್ಲಾ ರಾಗದಿಂದ ಮುಕ್ತರಾಗಿಲ್ಲವೋ, ಯಾರೆಲ್ಲಾ ರಾಗಬಂಧನದಿಂದ ಬಂಧಿತರಾಗಿರುವರೋ, ಒಬ್ಬ ನಟನು ಜನರನ್ನು ರಂಜಿಸಬಹುದು, ಇದರಿಂದಾಗಿ ಅವರಲ್ಲಿ ರಾಗಬಂಧನ ಇನ್ನೂ ಬಲಿಷ್ಠವಾಗಬಹುದು. ರಂಗಭೂಮಿಯಲ್ಲೇ ಆಗಲಿ ಅಥವಾ ಸಮಾಜದ ಮಧ್ಯೆಯಾಗಲಿ ಯಾರೆಲ್ಲಾ ದ್ವೇಷದಿಂದ ಮುಕ್ತರಾಗಿಲ್ಲವೋ, ಯಾರೆಲ್ಲಾ ದ್ವೇಷದಿಂದ ಬಂಧಿತರೋ, ಜನರಲ್ಲಿ ಮನರಂಜಿಸುತ್ತಾ ಅವರಲ್ಲೂ ದ್ವೇಷದ ಉದ್ರೇಕಗಳನ್ನು ಮಾಡುತ್ತಾರೋ, ಅವರ ಬಂಧನಗಳನ್ನು ಬಿಗಿಗೊಳಿಸುತ್ತಾರೆ. ಹಾಗೆಯೇ ರಂಗಭೂಮಿಯಲ್ಲಾಗಲಿ ಅಥವಾ ಸಮಾಜದ ಮಧ್ಯೆಯೇ ಆಗಲಿ, ಯಾವೆಲ್ಲಾ ಜೀವಿಗಳು ಮೋಹದಿಂದ ಮುಕ್ತರಾಗಿಲ್ಲವೋ, ಮೋಹದಿಂದ ಬಂಧಿತರಾಗಿರುವರೋ, ಹಲವಾರು ವಿಷಯಗಳನ್ನು ವ್ಯಕ್ತಪಡಿಸಿ ಜನರಲ್ಲೂ ಮೋಹವನ್ನು ಹೆಚ್ಚಿಸುವರೋ, ಇದರಿಂದಾಗಿ ಜನರಲ್ಲೂ ಸಹಾ ಮೋಹ ಬಂಧನವು ಬಿಗಿಯಾಗುತ್ತಾ ಹೋಗುವುದು. ಹೀಗಾಗಿ ಮತ್ತರಾಗಿ ಮತ್ತು ತಾನು ಅಲಕ್ಷಿತನಾಗಿ, ಪರರನ್ನು ಮತ್ತರನ್ನಾಗಿಸಿ ಹಾಗು ಅಲಕ್ಷಿತರನ್ನಾಗಿಸಿ, ಹೀಗೆ ಜೀವಿಸಿದಂತಹ ಆತನು ಕಾಲವಾದ ನಂತರ ನಗುನರಕ (ಪಹಾಸುನಿರಯ)ದಲ್ಲಿ ಹುಟ್ಟುವನು. ಆದರೆ ಆತನು ನಾನು ನಟ, ನಾನು ರಂಗಸ್ಥಳದಲ್ಲಿ, ವೇದಿಕೆಗಳಲ್ಲಿ, ಸಮಾಜದ ಮಧ್ಯೆ ಜನರನ್ನು ನಟನೆಯಿಂದಲೂ, ಮಿಥ್ಯವ್ಯಕ್ತತೆಯಿಂದಲೂ ಮನರಂಜಿಸಿದ್ದೇನೆ, ಇದರ ಫಲವಾಗಿ ಸಾವಿನ ನಂತರ ನಾನು ಪಹಾಸನ ದೇವ (ಹಾಸ್ಯದ ದೇವತೆಗಳೊಂದಿಗೆ) ರೊಂದಿಗೆ ಇರುವೆ ಎಂಬ ಮಿಥ್ಯಾದೃಷ್ಟಿಯಿಂದ ಕೂಡಿದ್ದರೆ, ಅಂತಹ ಮಿಥ್ಯಾದೃಷ್ಟಿಯ ಅಂಟುವಿಕೆಗೆ ಎರಡು ಫಲಗಳಿವೆ ಎಂದು ನಾನು ಹೇಳುತ್ತೇನೆ; ಒಂದು ನಿರಯ ಅಥವಾ ಪ್ರಾಣಿಗಳ (ತಿರಚ್ಚನ) ಹುಟ್ಟು.
ಇದನ್ನು ಆಲಿಸಿದಂತಹ ತಾಲಪುಟ ಗ್ರಾಮಿಣಿಯು ಆಶ್ರುಭರಿತ ಪ್ರಲಾಪ ಮಾಡಿದನು: ಓಹ್ ಭಗವಾನ್! ತಾವು ಸಾಕು ಗ್ರಾಮಿಣಿ, ಇದನ್ನು ಕೇಳಬೇಡ ಎಂದಾಗಲೇ ನಾನು ಅರ್ಥಮಾಡಿಕೊಳ್ಳಬೇಕಿತ್ತು. ಆದರೆ ನನಗೆ ಆಗ ಅರ್ಥವಾಗಲಿಲ್ಲ. ನಾನು ಅಳುತ್ತಿರುವುದು ತಾನು ಅನಾವರಣಗೊಳಿಸಿದ ಸತ್ಯಕ್ಕಾಗಿ ಅಲ್ಲ. ಬದಲಾಗಿ ನಮ್ಮ ಸಂಪ್ರದಾಯದ ಗುರುಗಳು ಶಾಸ್ತ್ರಜ್ಞರು ತಲೆತಲಾಂತರಗಳಿಂದ ನಮಗೆ ನಟನು ಜನರನ್ನು ರಂಜಿಸುತ್ತಾನೆ, ಹೀಗಾಗಿ ಕಾಲನಂತರ ಪಹಾಸ ದೇವತೆಗಳಾಗುವರು ಎಂದು ಕತ್ತಲೆಯಲ್ಲಿ ಇಟ್ಟಿದ್ದಾರೆ. ಭವ್ಯವಾದುದು ಭಗವಾನ್, ಘನವಾದುದು ಭಗವಾನ್. ಭಗವಾನರಿಂದ ಧಮ್ಮವು ನಾನಾ ಪ್ರಕಾರಗಳಿಂದ ಸ್ಪಷ್ಟೀಕರಿತವಾಗಿದೆ. ಹೇಗೆಂದರೆ ತಲೆಕೆಳಕಾಗಿರುವುದು ಸರಿಯಾಗಿ ನೇರವಾಗಿ ನಿಲ್ಲಿಸುವಂತೆ, ಅಡಗಿಹೋಗಿರುವುದು ಹುಡುಕಿ ಸ್ಪಷ್ಟವಾಗಿ ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗ ತೋರಿಸುವಂತೆ, ಕತ್ತಲೆಯಲ್ಲಿರುವವರಿಗೆ ಕಾಣಲು ದೀಪ ಹಿಡಿದಂತೆ ತಾವು ಅನೇಕ ಬಗೆಯಲ್ಲಿ ಧಮ್ಮವನ್ನು ಪ್ರಕಾಶಿಸಿರುವಿರಿ. ಈ ಕ್ಷಣದಿಂದ ನಾನು ಭಗವಾನರಲ್ಲಿ ಶರಣು ಹೋಗುವೆನು, ಹಾಗೆಯೇ ಧಮ್ಮಕ್ಕೂ ಹಾಗು ಸಂಘಕ್ಕೂ ಶರಣು ಹೋಗುವೆನು. ನನಗೆ ಭಗವಾನರು ಪಬ್ಬಜ್ಜವನ್ನು ನೀಡುವಂತಾಗಲಿ ಹಾಗು ಉಪಸಂಪದವನ್ನು ನೀಡುವಂತಾಗಲಿ. ನಂತರ ತಾಲಪುಟ್ಟನು ಭಗವಾನರಿಂದ ಪಬ್ಬಜ್ಜವನ್ನು ಸ್ವೀಕರಿಸಿದನು ಹಾಗು ಉಪಸಂಪದವನ್ನು ಪಡೆದನು. ನಂತರ ತನ್ನ ಸಾಧನೆಯಿಂದ ಅತ್ಯಲ್ಪ ಸಮಯದಲ್ಲಿ ಆತನು ಸಹಾ ಅರಹಂತರಲ್ಲಿ ಒಬ್ಬನಾದನು.


3. ಯೋಧಾಜೀವ ಸುತ್ತಂ

355. ಯೋಧರಲ್ಲಿ ಮುಖ್ಯಸ್ಥನಾಗಿದ್ದ ಯೋಧ ಜೀವಿಯು ಭಗವಾನರ ಸಮೀಪಕ್ಕೆ ಬಂದನು. ಸಮೀಪಕ್ಕೆ ಬಂದು ಒಂದೆಡೆ ಕುಳಿತು ಹೀಗೆ ಹೇಳಿದನು: ಭಗವಾನ್ ಹಿಂದಿನ ಯೋಧರಾದ ಹಿರಿಯರು ಈ ಬಗೆಯ ನಂಬಿಗೆ ಇಟ್ಟಿರುವರು, ಅದೇನೆಂದರೆ ಯಾವ ಯೋಧನು ಯುದ್ಧದಲ್ಲಿ ವೀರ ಸಾವನ್ನು ಅಪ್ಪಿದರೆ, ಹೀಗೆ ಪರರಿಂದ ಹತನಾದ ಆತನ ಸಾವಿನ ನಂತರ ಪರಾಜೀತ ದೇವನಾಗಿ ಹುಟ್ಟುವನೆಂದು ನಂಬಿದ್ದಾರೆ. ಇದರ ಕುರಿತು ಭಗವಾನರು ಏನೆಂದು ಹೇಳುವರು? ಸಾಕು ಸೇನಾ ಮುಖ್ಯಸ್ಥನೇ ಸಾಕು, ಇದನ್ನು ಕುರಿತು ಕೇಳಬೇಡ. ಆಗ ಯೋಧಜೀವಿಯು ಎರಡನೇ ಬಾರಿ ಹಾಗು ಮೂರನೇಬಾರಿಯು ಹೀಗೆಯೇ ಪ್ರಶ್ನಿಸಿದನು. ಎರಡನೆಯಬಾರಿ ಹೀಗೆ ಉತ್ತರಿಸಿದ ಭಗವಾನರು.
ಮೂರನೇಬಾರಿ ಹೀಗೆಂದರು: ಸಾಕು ಯೋಧನೇ ಸಾಕು, ಇದರ ಕುರಿತು ಕೇಳಬೇಡವೆಂದರೂ ಕೇಳುತ್ತಿದ್ದೀಯೆ. ಹೀಗಾಗಿ ಉತ್ತರಿಸುತ್ತಿರುವೆ ಆಲಿಸು. ಯೋಧಜೀವಿಯೇ, ಯಾವಗ ಯೋಧನು ರಣರಂಗದಲ್ಲಿ ಕಾದಾಡುತ್ತಿರುವಾಗ ಆತನ ಮನಸ್ಸು ಈಗಾಗಲೇ ನೀಚಮಟ್ಟಕ್ಕೆ ಇಳಿದಿರುತ್ತದೆ. ನೈತಿಕವಾಗಿ ಭ್ರಷ್ಟವಾಗಿರುತ್ತದೆ. ಮಿಥ್ಯಾನಿದರ್ೆಶನದತ್ತ ವಾಲಿರುತ್ತದೆ. ಹೇಗೆಂದರೆ: ಈ ಜೀವಿಗಳು ಕೊಲ್ಲಲ್ಪಡಲಿ, ನಾಶವಾಗಲಿ, ಹಾಳಾಗಲಿ ಅಥವಾ ಅಳಿದುಹೋಗಲಿ. ಹೀಗಿರುವ ಮನೋಭಾವದಲ್ಲಿ ರಣರಂಗದಲ್ಲಿ ಕಾದಾಡುತ್ತಿರುವಾಗ ಪರರು ಆತನನ್ನು ಕೊಂದರೆ, ಆತನು ಸಾವಿನ ನಂತರ ಪರಜೀತಾನಿರಯದಲ್ಲಿ ಉಗಮಿಸುವನು. ಆದರೆ ಆತನು ಇಂತಹ ದೃಷ್ಟಿಕೋನ ಹೊಂದಿದವನಾಗಿದ್ದರೆ ಯಾವ ಯೋಧನು ಕಾದಾಡುವಾಗ ಕೊಲ್ಲಲ್ಪಟ್ಟು ಮರಣಿಸಿದರೆ ಆತನು ವೀರಸ್ವರ್ಗ ಪಡೆಯುತ್ತಾನೆ. ಪರಾಜೀತ ದೇವಗಳಲ್ಲಿ ಉದಯಿಸುವನು. ಇದರ ಪರಿಣಾಮವಾಗಿ ಇಂತಹ ಮಿಥ್ಯಾದೃಷ್ಟಿಯ ಕಾರಣದಿಂದಾಗಿ ಎರಡುಬಗೆಯ ಗತಿಗಳಿವೆ. ಒಂದು ನಿರಯ, ಮತ್ತೊಂದು ತಿರಚ್ಚನಯೋನಿಗಳಲ್ಲಿ (ಪ್ರಾಣಿಲೋಕ) ಜನಿಸುವುದು.
ಹೀಗೆ ಭಗವಾನರಿಂದ ಕೇಳಿದ ಬಳಿಕ ಯೋಧನು ಆಶ್ರುಭರಿತನಾಗಿ ಅಳಲು ಆರಂಭಿಸಿದನು. ಆಗ ಭಗವಾನರು ಸಮಾಧಾನಿಸಿದರು: ಅದಕ್ಕೇ ಯೋಧನೆ, ನಾನು ನಿನಗೆ ಕೇಳಬೇಡವೆಂದು ಮೂರುಬಾರಿಯು ನಿರಾಕರಿಸಿದ್ದೆನು. ಭಗವಾನ್ ನಾನು ಅಳುತ್ತಿರುವುದು ತಮ್ಮಿಂದ ಪಡೆದಂತಹ ಉತ್ತರಕ್ಕಾಗಿಯೇ ಅಲ್ಲ. ಬದಲಾಗಿ ಹಿಂದಿನ ಹಿರಿಯ ಯೋಧರಿಂದ ಈ ಬಗ್ಗೆ ಹೀಗೆ ಕೇಳಲ್ಪಟ್ಟು ಕಾದಾಟದಲ್ಲಿ ಸಾಯುವವನು ವೀರಸ್ವರ್ಗ ಪಡೆಯುತ್ತಾನೆಂದು, ಪರಾಜಿತ ದೇವನಾಗಿ ಹುಟ್ಟುವನೆಂದು ಮೋಸ ಹೋಗಿದ್ದೇನೆ, ವಂಚನೆಗೆ ಒಳಗಾಗಿದ್ದೇನೆ, ದೀರ್ಘ ಕಾಲದಿಂದ ಮಂಕುಬೂದಿ ಹಾಕಲ್ಪಟ್ಟಿದ್ದೇನೆ. ಅದ್ಭುತ ಭಂತೆ, ಆಶ್ಚರ್ಯ ಭಂತೆ. ಇಂದಿನಿಂದ ಭಗವಾನರು ನನ್ನನ್ನು ಜೀವನಪರ್ಯಂತ ಶ್ರದ್ಧೋಪಾಸಕನೆಂದು ಪರಿಗಣಿಸಲಿ.


4. ಹತ್ಥಾರೋಹ ಸುತ್ತಂ

356. ಗಜಯೋಧರಲ್ಲಿ ಮುಖ್ಯಸ್ಥನಾಗಿದ್ದ ಗಜಾರೋಹಿಯು ಭಗವಾನರ ಸಮೀಪಕ್ಕೆ ಬಂದನು. ಸಮೀಪಕ್ಕೆ ಬಂದು ಒಂದೆಡೆ ಕುಳಿತು ಹೀಗೆ ಹೇಳಿದನು: ಭಗವಾನ್ ಹಿಂದಿನ ಗಜಯೋಧರಾದ ಹಿರಿಯರು ಈ ಬಗೆಯ ನಂಬಿಗೆ ಇಟ್ಟಿರುವರು, ಅದೇನೆಂದರೆ ಯಾವ ಗಜಯೋಧನು ಯುದ್ಧದಲ್ಲಿ ವೀರಸಾವನ್ನು ಅಪ್ಪಿದರೆ, ಹೀಗೆ ಪರರಿಂದ ಹತನಾದ ಆತನ ಸಾವಿನ ನಂತರ ಪರಾಜೀತ ದೇವನಾಗಿ ಹುಟ್ಟುವನೆಂದು ನಂಬಿದ್ದಾರೆ. ಇದರ ಕುರಿತು ಭಗವಾನರು ಏನೆಂದು ಹೇಳುವರು? ಸಾಕು ಸೇನಾ ಮುಖ್ಯಸ್ಥನೇ ಸಾಕು, ಇದನ್ನು ಕುರಿತು ಕೇಳಬೇಡ. ಆಗ ಗಜಾರೋಹಿಯು ಎರಡನೇಬಾರಿ ಹಾಗು ಮೂರನೇಬಾರಿಯು ಹೀಗೆಯೇ ಪ್ರಶ್ನಿಸಿದನು. ಎರಡನೇಯಬಾರಿ ಹೀಗೆ ಉತ್ತರಿಸಿದ ಭಗವಾನರು,
ಮೂರನೇಬಾರಿ ಹೀಗೆಂದರು: ಸಾಕು ಗಜಯೋಧನೇ ಸಾಕು, ಇದರ ಕುರಿತು ಕೇಳಬೇಡವೆಂದರೂ ಕೇಳುತ್ತಿದ್ದೀಯೆ. ಹೀಗಾಗಿ ಉತ್ತರಿಸುತ್ತಿರುವೆ ಆಲಿಸು. ಗಜಯೋಧನೆ, ಯಾವಾಗ ಗಜಯೋಧನು ರಣರಂಗದಲ್ಲಿ ಕಾದಾಡುತ್ತಿರುವಾಗ ಆತನ ಮನಸ್ಸು ಈಗಾಗಲೇ ನೀಚಮಟ್ಟಕ್ಕೆ ಇಳಿದಿರುತ್ತದೆ. ನೈತಿಕವಾಗಿ ಭ್ರಷ್ಟವಾಗಿರುತ್ತದೆ. ಮಿಥ್ಯಾನಿದರ್ೆಶನದತ್ತ ವಾಲಿರುತ್ತದೆ. ಹೇಗೆಂದರೆ: ಈ ಜೀವಿಗಳು ಕೊಲ್ಲಲ್ಪಡಲಿ, ನಾಶವಾಗಲಿ, ಹಾಳಾಗಲಿ ಅಥವಾ ಅಳಿದುಹೋಗಲಿ. ಹೀಗಿರುವ ಮನೋಭಾವದಲ್ಲಿ ರಣರಂಗದಲ್ಲಿ ಕಾದಾಡುತ್ತಿರುವಾಗ ಪರರು ಆತನನ್ನು ಕೊಂದರೆ, ಆತನು ಸಾವಿನ ನಂತರ ಪರಜೀತಾನಿರಯದಲ್ಲಿ ಉಗಮಿಸುವನು. ಆದರೆ ಆತನು ಇಂತಹ ದೃಷ್ಟಿಕೋನ ಹೊಂದಿದವನಾಗಿದ್ದರೆ ಯಾವ ಗಜಯೋಧನು ಕಾದಾಡುವಾಗ ಕೊಲ್ಲಲ್ಪಟ್ಟು ಮರಣಿಸಿದರೆ ಆತನು ವೀರಸ್ವರ್ಗ ಪಡೆಯುತ್ತಾನೆ. ಪರಾಜೀತ ದೇವಗಳಲ್ಲಿ ಉದಯಿಸುವನು. ಇದರ ಪರಿಣಾಮವಾಗಿ ಇಂತಹ ಮಿಥ್ಯಾದೃಷ್ಟಿಯ ಕಾರಣದಿಂದಾಗಿ ಎರಡುಬಗೆಯ ಗತಿಗಳಿವೆ. ಒಂದು ನಿರಯ, ಮತ್ತೊಂದು ತಿರಚ್ಚನಯೋನಿಗಳಲ್ಲಿ (ಪ್ರಾಣಿಲೋಕ) ಜನಿಸುವುದು.
ಹೀಗೆ ಭಗವಾನರಿಂದ ಕೇಳಿದ ಬಳಿಕ ಗಜಯೋಧನು ಆಶ್ರುಭರಿತನಾಗಿ ಅಳಲು ಆರಂಭಿಸಿದನು. ಆಗ ಭಗವಾನರು ಸಮಾಧಾನಿಸಿದರು: ಅದಕ್ಕೇ ಗಜಯೋಧನೆ, ನಾನು ನಿನಗೆ ಕೇಳಬೇಡವೆಂದು ಮೂರುಬಾರಿಯು ನಿರಾಕರಿಸಿದ್ದೆನು. ಭಗವಾನ್, ನಾನು ಅಳುತ್ತಿರುವುದು ತಮ್ಮಿಂದ ಪಡೆದಂತಹ ಉತ್ತರಕ್ಕಾಗಿಯೇ ಅಲ್ಲ. ಬದಲಾಗಿ ಹಿಂದಿನ ಹಿರಿಯ ಗಜಯೋಧರಿಂದ ಈ ಬಗ್ಗೆ ಹೀಗೆ ಕೇಳಲ್ಪಟ್ಟು ಕಾದಾಟದಲ್ಲಿ ಸಾಯುವವನು ವೀರಸ್ವರ್ಗ ಪಡೆಯುತ್ತಾನೆಂದು, ಪರಾಜಿತ ದೇವನಾಗಿ ಹುಟ್ಟುವನೆಂದು ಮೋಸ ಹೋಗಿದ್ದೇನೆ, ವಂಚನೆಗೆ ಒಳಗಾಗಿದ್ದೇನೆ, ದೀರ್ಘ ಕಾಲದಿಂದ ಮಂಕುಬೂದಿ ಹಾಕಲ್ಪಟ್ಟಿದ್ದೇನೆ. ಅದ್ಭುತ ಭಂತೆ, ಆಶ್ಚರ್ಯ ಭಂತೆ. ಇಂದಿನಿಂದ ಭಗವಾನರು ನನ್ನನ್ನು ಜೀವನಪರ್ಯಂತ ಶ್ರದ್ಧೋಪಾಸಕನೆಂದು ಪರಿಗಣಿಸಲಿ.



5. ಅಸ್ಸಾರೋಹ ಸುತ್ತಂ

357. ಅಶ್ವಯೋಧರಲ್ಲಿ ಮುಖ್ಯಸ್ಥನಾಗಿದ್ದ ಅಶ್ವಾರೋಹಿಯು ಭಗವಾನರ ಸಮೀಪಕ್ಕೆ ಬಂದನು. ಸಮೀಪಕ್ಕೆ ಬಂದು ಒಂದೆಡೆ ಕುಳಿತು ಹೀಗೆ ಹೇಳಿದನು: ಭಗವಾನ್ ಹಿಂದಿನ ಅಶ್ವಯೋಧರಾದ ಹಿರಿಯರು ಈ ಬಗೆಯ ನಂಬಿಗೆ ಇಟ್ಟಿರುವರು, ಅದೇನೆಂದರೆ ಯಾವ ಅಶ್ವಯೋಧನು ಯುದ್ಧದಲ್ಲಿ ವೀರಸಾವನ್ನು ಅಪ್ಪಿದರೆ, ಹೀಗೆ ಪರರಿಂದ ಹತನಾದ ಆತನ ಸಾವಿನ ನಂತರ ಪರಾಜೀತ ದೇವನಾಗಿ ಹುಟ್ಟುವನೆಂದು ನಂಬಿದ್ದಾರೆ. ಇದರ ಕುರಿತು ಭಗವಾನರು ಏನೆಂದು ಹೇಳುವರು? ಸಾಕು ಸೇನಾ ಮುಖ್ಯಸ್ಥನೇ ಸಾಕು, ಇದನ್ನು ಕುರಿತು ಕೇಳಬೇಡ. ಆಗ ಅಶ್ವಾರೋಹಿಯು ಎರಡನೇಬಾರಿ ಹಾಗು ಮೂರನೇಬಾರಿಯು ಹೀಗೆಯೇ ಪ್ರಶ್ನಿಸಿದನು. ಎರಡನೇಯಬಾರಿ ಹೀಗೆ ಉತ್ತರಿಸಿದ ಭಗವಾನರು,
ಮೂರನೇಬಾರಿ ಹೀಗೆಂದರು: ಸಾಕು ಅಶ್ವಯೋಧನೇ ಸಾಕು, ಇದರ ಕುರಿತು ಕೇಳಬೇಡವೆಂದರೂ ಕೇಳುತ್ತಿದ್ದೀಯೆ. ಹೀಗಾಗಿ ಉತ್ತರಿಸುತ್ತಿರುವೆ ಆಲಿಸು. ಅಶ್ವಯೋಧನೆ, ಯಾವಾಗ ಅಶ್ವಯೋಧನು ರಣರಂಗದಲ್ಲಿ ಕಾದಾಡುತ್ತಿರುವಾಗ ಆತನ ಮನಸ್ಸು ಈಗಾಗಲೇ ನೀಚಮಟ್ಟಕ್ಕೆ ಇಳಿದಿರುತ್ತದೆ. ನೈತಿಕವಾಗಿ ಭ್ರಷ್ಟವಾಗಿರುತ್ತದೆ. ಮಿಥ್ಯಾನಿದರ್ೆಶನದತ್ತ ವಾಲಿರುತ್ತದೆ. ಹೇಗೆಂದರೆ: ಈ ಜೀವಿಗಳು ಕೊಲ್ಲಲ್ಪಡಲಿ, ನಾಶವಾಗಲಿ, ಹಾಳಾಗಲಿ ಅಥವಾ ಅಳಿದುಹೋಗಲಿ. ಹೀಗಿರುವ ಮನೋಭಾವದಲ್ಲಿ ರಣರಂಗದಲ್ಲಿ ಕಾದಾಡುತ್ತಿರುವಾಗ ಪರರು ಆತನನ್ನು ಕೊಂದರೆ, ಆತನು ಸಾವಿನ ನಂತರ ಪರಜೀತಾನಿರಯದಲ್ಲಿ ಉಗಮಿಸುವನು. ಆದರೆ ಆತನು ಇಂತಹ ದೃಷ್ಟಿಕೋನ ಹೊಂದಿದವನಾಗಿದ್ದರೆ ಯಾವ ಅಶ್ವಯೋಧನು ಕಾದಾಡುವಾಗ ಕೊಲ್ಲಲ್ಪಟ್ಟು ಮರಣಿಸಿದರೆ ಆತನು ವೀರಸ್ವರ್ಗ ಪಡೆಯುತ್ತಾನೆ. ಪರಾಜೀತ ದೇವಗಳಲ್ಲಿ ಉದಯಿಸುವನು. ಇದರ ಪರಿಣಾಮವಾಗಿ ಇಂತಹ ಮಿಥ್ಯಾದೃಷ್ಟಿಯ ಕಾರಣದಿಂದಾಗಿ ಎರಡುಬಗೆಯ ಗತಿಗಳಿವೆ. ಒಂದು ನಿರಯ, ಮತ್ತೊಂದು ತಿರಚ್ಚನಯೋನಿಗಳಲ್ಲಿ (ಪ್ರಾಣಿಲೋಕ) ಜನಿಸುವುದು.
ಹೀಗೆ ಭಗವಾನರಿಂದ ಕೇಳಿದ ಬಳಿಕ ಅಶ್ವಯೋಧನು ಆಶ್ರುಭರಿತನಾಗಿ ಅಳಲು ಆರಂಭಿಸಿದನು. ಆಗ ಭಗವಾನರು ಸಮಾಧಾನಿಸಿದರು: ಅದಕ್ಕೇ ಅಶ್ವಯೋಧನೆ, ನಾನು ನಿನಗೆ ಕೇಳಬೇಡವೆಂದು ಮೂರುಬಾರಿಯು ನಿರಾಕರಿಸಿದ್ದೆನು. ಭಗವಾನ್, ನಾನು ಅಳುತ್ತಿರುವುದು ತಮ್ಮಿಂದ ಪಡೆದಂತಹ ಉತ್ತರಕ್ಕಾಗಿಯೇ ಅಲ್ಲ. ಬದಲಾಗಿ ಹಿಂದಿನ ಹಿರಿಯ ಅಶ್ವಯೋಧರಿಂದ ಈ ಬಗ್ಗೆ ಹೀಗೆ ಕೇಳಲ್ಪಟ್ಟು ಕಾದಾಟದಲ್ಲಿ ಸಾಯುವವನು ವೀರಸ್ವರ್ಗ ಪಡೆಯುತ್ತಾನೆಂದು, ಪರಾಜಿತ ದೇವನಾಗಿ ಹುಟ್ಟುವನೆಂದು ಮೋಸ ಹೋಗಿದ್ದೇನೆ, ವಂಚನೆಗೆ ಒಳಗಾಗಿದ್ದೇನೆ, ದೀರ್ಘ ಕಾಲದಿಂದ ಮಂಕುಬೂದಿ ಹಾಕಲ್ಪಟ್ಟಿದ್ದೇನೆ. ಅದ್ಭುತ ಭಂತೆ, ಆಶ್ಚರ್ಯ ಭಂತೆ. ಇಂದಿನಿಂದ ಭಗವಾನರು ನನ್ನನ್ನು ಜೀವನಪರ್ಯಂತ ಶ್ರದ್ಧೋಪಾಸಕನೆಂದು ಪರಿಗಣಿಸಲಿ.


6. ಅಸಿಬಂಧಕಪುತ್ತ ಸುತ್ತಂ

358. ಒಮ್ಮೆ ನಳಂದದ ವಾವಾರಿಕನ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಮುಖಂಡನಾದ ಅಸಿಬಂಧಕಪುತ್ತನು ಭಗವಾನರ ಬಳಿಗೆ ಬಂದನು. ಭಗವಾನರನ್ನು ಗೌರವಿಸಿ, ಪೂಜಿಸಿ ಒಂದೆಡೆ ಕುಳಿತನು. ನಂತರ ಹೀಗೆ ಹೇಳಿದನು: ಭಗವಾನ್, ಪಶ್ಚಿಮ ಭಾಗದ ಬ್ರಾಹ್ಮಣರು ನೀರಿನ ಬಿಂದಿಗೆಗಳನ್ನು ತೆಗೆದುಕೊಂಡು, ನೀರಿನ ಸಸ್ಯಗಳನ್ನು ಹಾರವಾಗಿ ಹಾಕಿಕೊಂಡು, ನೀರಿನಲ್ಲಿ ಮುಳುಗಿ, ಅದ್ದಿಹೋಗಿ ನಂತರ ಪವಿತ್ರ ಅಗ್ನಿಗೆ ಪೂಜೆ ಸಲ್ಲಿಸುತ್ತಾ, ತಾವು ಸತ್ತಿರುವ ವ್ಯಕ್ತಿಗೆ ಮಾರ್ಗದಶರ್ಿತವಾಗಿರುವರೆಂದು, ಪರಲೋಕದ ಉದ್ದಕ್ಕೂ ದಾರಿದೀಪವಾಗಿರುವರೆಂದು ಆತನಿಗೆ ಸ್ವರ್ಗ ಸಿಗುವ ಹಾಗೆ ಮಾಡುವರೆಂದು ಹೇಳಿಕೊಳ್ಳುತ್ತಾರೆ. ಆದರೆ ಭಗವಾನರು, ಅರಹಂತರು, ಸಮ್ಮಾಸಂಬುದ್ಧರಾಗಿರುವ ತಾವು ಮಾತ್ರವೇ ಸಾವಿನ ನಂತರದ ವಿಷಯಗಳನ್ನು ತಿಳಿಸಲು ಅತ್ಯಂತ ಅರ್ಹರಾಗಿರುವರೆಂದು ನಾನು ಭಾವಿಸುತ್ತೇನೆ. ಇಡೀ ಲೋಕವೆಲ್ಲವೂ ಸಾವಿನ ನಂತರ ಸ್ವರ್ಗ ಸುಗತಿಯನ್ನು ಪಡೆಯುವುದೇ?
ಓ ಗ್ರಾಮೀಣಿಯೇ (ಮುಖಂಡನೇ), ಇದಕ್ಕೆ ಸಂಬಂಧಪಟ್ಟಂತೆ ನಾನು ನಿನಗೆ ಪ್ರಶ್ನಿಸುವೆ, ನಿನಗೆ ಸರಿಯೆನಿಸುವಂತೆ ಉತ್ತರಿಸು. ಇದರ ಬಗ್ಗೆ ಏನೆಂದು ಯೋಚಿಸುವೆ ಗ್ರಾಮೀಣಿಯೇ, ಇಲ್ಲಿ ಒಬ್ಬನು ಜೀವಹತ್ಯೆಗಳನ್ನು ಮಾಡುತ್ತಾ, ಕಳ್ಳತನ ಮಾಡುತ್ತ, ಅನೈತಿಕ ಮಿಥ್ಯಾಚಾರ ಮಾಡುತ್ತ, ಸುಳ್ಳುಗಾರನಾಗಿ, ಚಾಡಿಕೋರನಾಗಿ, ಕಠೋರವಾಗಿ ಮಾತನಾಡುತ್ತ, ವ್ಯರ್ಥ ಹರಟೆಗಳಲ್ಲಿ ತೊಡಗುತ್ತಾ, ದುರಾಸೆ ಉಳ್ಳವನಾಗಿ, ದ್ವೇಷಿಯಾಗಿ ಹಾಗು ಮಿಥ್ಯಾದೃಷ್ಟಿಗಳಿಂದ ಕೂಡಿದವನಾಗಿದ್ದರೆ, ಅಂತಹವನಿಗೆ ಜನರು ಗುಂಪುಗೂಡಿ, ಸಭೆಸೇರಿ, ಆತನಿಗಾಗಿ ಪ್ರಾಥರ್ಿಸುತ್ತ, ಶ್ಲೋಕಗಳನ್ನು ಹಾಡುತ್ತ ಹೀಗೆ ಹೇಳುತ್ತಾರೆ: ಈ ಮನುಷ್ಯನು ಸಾವಿನ ನಂತರ ಸ್ವರ್ಗ ಲೋಕವನ್ನು, ಸುಗತಿಯನ್ನು ಹೊಂದಲಿ. ಈಗ ಹೇಳು ಗ್ರಾಮೀಣಿಯೇ, ಅಪಾರ ಜನರ ಪ್ರಾರ್ಥನೆಗಳಿಂದ, ಅವರ ಶ್ಲೋಕಗಳಿಂದ, ಅವರ ಪ್ರದಕ್ಷಿಣೆಗಳಿಂದ, ಇತ್ಯಾದಿಗಳ ಗೌರವದಿಂದಾಗಿ, ಸಾವಿನ ನಂತರ ಆತನಿಗೆ ಸ್ವರ್ಗವು ಸಿಗುವುದೇ? - ಇಲ್ಲ ಭಂತೆ.
ಗ್ರಾಮೀಣಿಯೇ, ಒಬ್ಬ ವ್ಯಕ್ತಿಯು ಬೃಹತ್ತಾದ ಬಂಡೆಯನ್ನು ಆಳವಾದ ಕೊಳದೊಳಕ್ಕೆ ಎಸೆಯುತ್ತಾನೆ ಎಂದಿಟ್ಟುಕೋ, ನಂತರ ಅಪಾರ ಸಮೂಹದ ಜನರು ಆ ಕೊಳವನ್ನು ಸುತ್ತುವರೆದು ಪ್ರದಕ್ಷಿಣೆ ಮಾಡಿ ಪ್ರಾಥರ್ಿಸುತ್ತಾ ಹೀಗೆ ಉದ್ಗರಿಸಿದರೆ ಓ ಬೃಹತ್ ಬಂಡೆಯೇ ಎದ್ದೇಳು, ಓ ಒಳ್ಳೆಯ ಬಂಡೆಯೇ ಎದ್ದು ಹೊರಗೆ ಬಾ, ನೆಲಕ್ಕೆ ಬಾ. ಈಗ ಹೇಳು ಗ್ರಾಮೀಣಿಯೇ, ಅವರ ಸ್ನಾನ ಶುಚಿತ್ವದ ಫಲದಿಂದಾಗಿ, ಪ್ರಾರ್ಥನೆಯ ಫಲವಾಗಿ ಆ ಬೃಹತ್ ಬಂಡೆಯು ಹೊರಬರುವುದೇ, ನೆಲದ ಮೇಲೆ ಬರುವುದೇ? - ಇಲ್ಲ ಭಂತೆ. - ಅದೇರೀತಿಯಾಗಿ ಗ್ರಾಮೀಣಿಯೇ, ಒಬ್ಬ ವ್ಯಕ್ತಿಯು ಹತ್ಯೆಗೈಯುತ್ತಾ, ಕಳ್ಳತನ ಮಾಡುತ್ತಾ, ಮಿಥ್ಯಾದೃಷ್ಟಿಯಿಂದ ಕೂಡಿದ್ದು ಸತ್ತಿದ್ದರೆ, ಹೀಗೆ ಅಪಾರ ಸಮೂಹದ ಜನರು ಸಭೆಸೇರಿ, ಪ್ರದಕ್ಷಿಣೆ ಮಾಡುತ್ತಾ, ಅಪಾರ ಶ್ಲೋಕಗಳಿಂದ ಎಷ್ಟೇ ಪ್ರಾರ್ಥನೆ ಮಾಡಿದರೂ ಸಾವಿನ ನಂತರ ಆ ವ್ಯಕ್ತಿಯು ದುರ್ಗತಿ ಸೇರಿ, ನಿರಯ ನರಕಗಳಂತಹ ಸ್ಥಾನ ತಲುಪುತ್ತಾನೆ.
ಗ್ರಾಮೀಣಿಯೇ, ಇದರ ಬಗ್ಗೆ ಹೇಗೆ ಯೋಚಿಸುವೆ? ಇಲ್ಲಿ ಒಬ್ಬನು ಜೀವಹತ್ಯೆಯಿಂದ ವಿರತನಾಗಿ, ಕಳ್ಳತನ ಮಾಡದವನಾಗಿ, ಅನೈತಿಕ ಲೈಂಗಿಕತೆಯಲ್ಲಿ ಸೇರದವನಾಗಿ, ಸತ್ಯವಾದಿಯಾಗಿ, ಐಕ್ಯತೆಯ, ಮೈತ್ರಿಯ ಮಾತುಗಳನ್ನು ಆಡುವವನಾಗಿ, ವ್ಯರ್ಥ ಹರಟೆಯಲ್ಲಿ ತೊಡಗದವನಾಗಿ, ದುರಾಸೆಯಿಲ್ಲದವನಾಗಿ, ದ್ವೇಷಿ ಅಲ್ಲದವನಾಗಿ, ಮಿಥ್ಯಾದೃಷ್ಟಿ ಇಲ್ಲದವನಾಗಿದ್ದರೆ, ಅಂತಹ ವ್ಯಕ್ತಿಯನ್ನು ಜನರು ಸುತ್ತುವರೆದು, ಗುಂಪುಗೂಡಿ ಶ್ಲೋಕ ಪಠಿಸುತ್ತ, ಪ್ರದಕ್ಷಿಣೆ ಮಾಡುತ್ತಾ, ಪ್ರಾಥರ್ಿಸುತ್ತಾ ಹೀಗೆ ಹೇಳುತ್ತಾರೆ: ಈ ವ್ಯಕ್ತಿಯು ಸಾವಿನ ನಂತರ ನರಕಕ್ಕೆ ಹೋಗಲಿ, ಈತನಿಗೆ ನಿರಯವು ಸಿಗಲಿ, ದುರ್ಗತಿಗಳಲ್ಲಿ ಬೀಳಲಿ. ಈಗ ಗ್ರಾಮೀಣಿಯೇ, ಇದರ ಬಗ್ಗೆ ಏನೆಂದು ಹೇಳುವೆ? ಅವರ ಶ್ಲೋಕ, ಪ್ರದಕ್ಷಿಣೆ, ಪ್ರಾರ್ಥನೆಯಿಂದಾಗಿ ಆ ವ್ಯಕ್ತಿಗೆ ದುರ್ಗತಿ ಅಥವಾ ನರಕ ನಿರಯಗಳು ಸಿಗುವವೇ? - ಇಲ್ಲ ಭಂತೆ.
ಗ್ರಾಮೀಣಿಯೇ, ಒಂದುವೇಳೆ ಒಬ್ಬನು ತುಪ್ಪದ ಅಥವಾ ಎಣ್ಣೆಯ ಮಡಿಕೆಯನ್ನು ಆಳವಾದ ಕೊಳದಲ್ಲಿ ಮುಳುಗಿಸಿ ಒಡೆಯುತ್ತಾನೆ. ಆ ಮಡಿಕೆಯ ಚೂರುಗಳೆಲ್ಲಾ ಮುಳುಗುವುವು ಹಾಗು ಎಣ್ಣೆ ಮತ್ತು ತುಪ್ಪವು ಮೇಲ್ಭಾಗಕ್ಕೆ ಬರುವುವು. ಆಗೊಂದು ವೇಳೆ ಜನರ ಗುಂಪು ಅಲ್ಲಿಗೆ ಆಗಮಿಸಿ ಸಭೆಸೇರಿ ಶ್ಲೋಕಗಳನ್ನು ಉಚ್ಚರಿಸುತ್ತಾ, ಪ್ರಾಥರ್ಿಸುತ್ತಾ, ಪ್ರದಕ್ಷಿಣೆಗಳನ್ನು ಮಾಡುತ್ತ ಹೀಗೆ ಹೇಳುವರು: ಓ ಎಣ್ಣೆ, ತುಪ್ಪವೇ, ಮುಳುಗು, ತಳಕ್ಕೆ ಹೋಗು. ಇದರ ಬಗ್ಗೆ ಏನೆಂದು ಹೇಳುವೆ ಗ್ರಾಮೀಣಿಯೇ, ಬಹುಜನರ ಪ್ರಾರ್ಥನೆಯಿಂದಾಗಲಿ, ಪ್ರದಕ್ಷಿಣೆಯಿಂದಾಗಲಿ, ಶ್ಲೋಕಗಳಿಂದಾಗಲಿ ಎಣ್ಣೆ ಅಥವಾ ತುಪ್ಪವು ಕೆಳಕ್ಕೆ ಹೋಯಿತೆ? - ಇಲ್ಲ ಭಂತೆ.
ಅದೇರೀತಯಾಗಿ ಗ್ರಾಮೀಣಿಯೇ, ಯಾರು ಜೀವಹತ್ಯೆ ಮಾಡುವುದಿಲ್ಲವೋ, ಕಳ್ಳತನ ಮಾಡುವುದಿಲ್ಲವೋ... ಸಮ್ಯಕ್ ದೃಷ್ಟಿಕೋನವನ್ನು ಹೊಂದಿರುವನೋ ಅಂತಹವನ ಬಗ್ಗೆ ಸಾವಿರಾರು ಜನರು ಪ್ರಾಥರ್ಿಸಿದರೂ, ಪ್ರದಕ್ಷಿಣೆ ಮಾಡಿದರೂ ಸಹಾ ಆತನ ಸ್ವರ್ಗಪ್ರಾಪ್ತಿಯನ್ನು ತಪ್ಪಿಸಲಾಗದು. ಹೀಗೆ ಭಗವಾನರು ನುಡಿದ ನಂತರ, ಅಸಿಬಂಧಕಪುತ್ತ ಗ್ರಾಮೀಣಿಯು ಆನಂದಿತನಾಗಿ ಹೀಗೆ ಹೇಳಿದನು: ಭವ್ಯವಾಗಿದೆ ಭಗವಾನ್.... ಭಗವಾನರು ಇಂದಿನಿಂದ ನಾನು ತಮ್ಮಲ್ಲಿ ಶರಣು ಹೋಗುತ್ತೇನೆ. ಜೀವನಪರ್ಯಂತ ನಾನು ತಮ್ಮ ಉಪಾಸಕನೆಂದು ಪರಿಗಣಿಸಲಿ.


7. ಖೇತ್ತೊಪಮ ಸುತ್ತಂ

359. ಒಮ್ಮೆ ಭಗವಾನರು ನಳಂದದ ಪಾವಾರಿಕದ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಅಸಿಬಂದಕಪುತ್ತ ಗ್ರಾಮೀಣಿಯು ಭಗವಾನರು ಇರುವಲ್ಲಿಗೆ ಬಂದು, ವಂದಿಸಿ ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಹೀಗೆ ಕೇಳಿದನು: ಭಗವಾನ್, ತಾವು ಸರ್ವಜೀವಿಗಳ ಬಗ್ಗೆ ಸರ್ವ ಪ್ರಾಣಿಗಳ ಬಗ್ಗೆ ಅನುಕಂಪೆಯಿಂದಿರುವಿರಾ? ಹೌದು ಗ್ರಾಮೀಣಿಯೇ, ತಥಾಗತರು ಸರ್ವಜೀವಿಗಳ ಬಗ್ಗೆ ಅನುಕಂಪೆಯಿಂದಿರುವರು. ಹಾಗಾದರೆ ಏತಕ್ಕಾಗಿ ಭಗವಾನರು ಹಲವರಿಗೆ ವಿಸ್ತಾರವಾಗಿಯೂ, ಇನ್ನು ಹಲವರಿಗೆ ಅವಿಸ್ತಾರವಾಗಿಯೂ ಬೋಧಿಸುವರು? ಹಾಗಾದರೆ ಗ್ರಾಮೀಣಿಯೇ, ಇದಕ್ಕೆ ಸಂಬಂಧಿಸಿದಂತೆ ಪ್ರಶ್ನಿಸುವೆನು, ನಿನಗೆ ಸರಿಯೆನಿಸಿದ್ದನ್ನು ಉತ್ತರಿಸು. ಇಲ್ಲಿ ರೈತನೊಬ್ಬನ ಬಳಿಯಲ್ಲಿ ಮೂರು ಹೊಲಗಳಿವೆ. ಒಂದು ಉತ್ಕೃಷ್ಟವಾದುದು, ಇನ್ನೊಂದು ಮಧ್ಯಮಮಟ್ಟದ್ದು ಮತ್ತು ಕೊನೆಯದು ತುಚ್ಛಮಟ್ಟದ್ದು, ಒರಟಾಗಿರುವಂತಹುದು, ಲವಣಮಯ, ಕೆಟ್ಟನೆಲವಾಗಿರುವುದು. ಇವುಗಳಲ್ಲಿ ರೈತನು ಬೀಜವನ್ನು ಬಿತ್ತಲು ಇಚ್ಛಿಸಿದರೆ ಯಾವುದರಲ್ಲಿ ಬಿತ್ತುವನು?
ಭಗವಾನ್, ಇಲ್ಲಿ ರೈತನು ಬಿತ್ತಲು ಇಚ್ಛಿಸಿದರೆ ಉತ್ಕೃಷ್ಟವಾದ ಹೊಲದಲ್ಲಿಯೇ ಬಿತ್ತಲು ಇಚ್ಛಿಸುವನು. ಅಲ್ಲಿ ಆತನು ಬಿತ್ತಿದ ನಂತರವೇ ಆತನು ಮಧ್ಯಮ ಮಟ್ಟದ ಹೊಲದಲ್ಲಿ ಬಿತ್ತುವನು. ಅಲ್ಲಿಯೂ ಬಿತ್ತಿದ ನಂತರವೇ ಆತನು ಒರಟಾದ ತುಚ್ಛ ಹೊಲದಲ್ಲಿ ಬಿತ್ತಬಹುದು ಅಥವಾ ಬಿತ್ತದೆಯೂ ಇರಬಹುದು. ಏಕೆಂದರೆ ಕನಿಷ್ಠಪಕ್ಷ ದನಕರುಗಳಿಗೆ ಆಹಾರಕ್ಕಾಗಿಯಾದರೂ ಸಹಾಯಕ್ಕೆ ಬರುವುದೆಂದು ಹಾಗೆ ಮಾಡುವನು.
ಗ್ರಾಮೀಣಿಯೇ, ಇದೇರೀತಿಯಲ್ಲಿಯೇ ನನಗೆ ಭಿಕ್ಷುಗಳು ಹಾಗು ಭಿಕ್ಷುಣಿಯರೇ ಹೊಲವಾಗಿದ್ದಾರೆ. ನಾನು ಆದಿಯಲ್ಲಿ ಒಳಿತನ್ನುಂಟುಮಾಡುವ ಧಮ್ಮವನ್ನು ಬೋಧಿಸುತ್ತೇನೆ, ಮಧ್ಯದಲ್ಲಿ ಒಳಿತನ್ನುಂಟುಮಾಡುವ ಧಮ್ಮವನ್ನು ಬೋಧಿಸುತ್ತೇನೆ ಹಾಗೆಯೇ ಅಂತ್ಯದಲ್ಲಿಯು ಒಳಿತನ್ನುಂಟುಮಾಡುವ ಧಮ್ಮವನ್ನು ಬೋಧಿಸುವೆನು. ಸರಿಯಾದ ಅರ್ಥದಲ್ಲಿ ಹಾಗು ಸರಿಯಾದ ವಾಕ್ಯದಿಂದ ಕೂಡಿದ ಧಮ್ಮವನ್ನು ಬೋಧಿಸುವೆನು. ಪರಿಶುದ್ಧವಾಗಿರುವ ಹಾಗು ಪರಿಪೂರ್ಣವಾಗಿರುವ ಪವಿತ್ರ ಜೀವನವನ್ನು ನಾನು ಅನಾವರಣ ಮಾಡುತ್ತೇನೆ. ಏಕೆಂದರೆ ಅವರು ಸಹಾ ನನ್ನೊಂದಿಗೆ ತಮ್ಮ ದ್ವೀಪದಂತೆ ವಾಸಿಸುವರು. ಏತಕ್ಕಾಗಿ? ಏತಕ್ಕೆಂದರೆ, ನಾನೇ ಅವರಿಗೆ ದ್ವೀಪದಂತೆ, ವಾಸಸ್ಥಾನದಂತೆ, ರಕ್ಷಣೆಯಂತೆ ಹಾಗು ಶರಣು ಎಂಬಂತೆ ವಿಹರಿಸುತ್ತಾರೆ.
ಗ್ರಾಮೀಣಿಯೇ, ನಂತರ ಇಲ್ಲಿ ಮಧ್ಯಮ ಗುಣಮಟ್ಟವೆಂದರೆ, ಉಪಾಸಕ ಹಾಗು ಉಪಾಸಿಕೆಯರೇ ಆಗಿದ್ದಾರೆ. ಅವರಿಗೂ ನಾನು ಆದಿಯಲ್ಲಿ ಒಳಿತನ್ನುಂಟುಮಾಡುವ, ಮಧ್ಯದಲ್ಲಿ ಒಳಿತನ್ನುಂಟುಮಾಡುವ ಹಾಗು ಅಂತ್ಯದಲ್ಲಿ ಒಳಿತನ್ನುಂಟುಮಾಡುವ ಧಮ್ಮವನ್ನು ಬೋಧಿಸುತ್ತೇನೆ. ಸರಿಯಾದ ಅರ್ಥಯುಕ್ತ ಹಾಗು ಯೋಗ್ಯ ವಾಕ್ಯಯುತವಾಗಿ ವಿವರಿಸುತ್ತೇನೆ. ಅವರಿಗೆ ಪರಿಶುದ್ಧವಾಗಿರುವ ಹಾಗು ಪರಿಪೂರ್ಣವಾಗಿರುವ ಪವಿತ್ರ ಜೀವನವನ್ನೇ ತೆರೆದಿಡುತ್ತಿದ್ದೇನೆ. ಏತಕ್ಕಾಗಿ? ಏಕೆಂದರೆ, ಅವರು ನನ್ನೊಂದಿಗೆ ಅವರ ದ್ವೀಪದಂತೆ, ಅವರ ಆಶ್ರಯತಾಣದಂತೆ, ನನ್ನನ್ನೇ ರಕ್ಷಕನಂತೆ, ನನ್ನನ್ನೇ ಶರಣು ಎಂಬಂತೆ ಭಾವಿಸಿ ವಾಸಿಸುತ್ತಾರೆ.
ಗ್ರಾಮೀಣಿಯೇ, ನಂತರ ಹೇಗೆ ರೈತನಿಗೆ ಒರಟಾದ ತುಚ್ಛ ಹೊಲ, ಕೆಟ್ಟ ಲವಣಯುಕ್ತ ಬರಡು ಭೂಮಿಯೋ ಹಾಗೆಯೇ ಇತರ ಬಣಗಳು ಸನ್ಯಾಸಿಗಳು, ಬ್ರಾಹ್ಮಣರು, ಪರಿವ್ರಾಜಕರು ಧಮ್ಮವರಿಯುವುದರಲ್ಲಿ ಅತಿ ದುರ್ಬಲವಾಗಿರುತ್ತಾರೆ. ಆದರೂ ಸಹಾ ನಾನು ಅವರಿಗೆ ಆದಿಯಲ್ಲಿ ಕಲ್ಯಾಣಕಾರಿಯಾದ, ಮಧ್ಯದಲ್ಲಿ ಕಲ್ಯಾಣಕಾರಿಯಾದ ಹಾಗು ಅಂತ್ಯದಲ್ಲಿ ಕಲ್ಯಾಣಕಾರಿಯಾದ ಧಮ್ಮವನ್ನೇ ಬೋಧಿಸುತ್ತಿದ್ದೇನೆ. ಅಕ್ಷರ ಹಾಗು ಅರ್ಥದ ಸಹಿತ, ಪರಿಶುದ್ಧವಾದ, ಪರಿಪೂರ್ಣವಾಗಿರುವ ಪವಿತ್ರ ಜೀವನವನ್ನು ತೆಗೆದಿಡುತ್ತಿದ್ದೇನೆ. ಏತಕ್ಕಾಗಿ? ಏಕೆಂದರೆ ಅವರು ಕೇವಲ ಒಂದು ವಾಕ್ಯವನ್ನಾಗಲಿ, ಅರ್ಥಮಾಡಿಕೊಂಡರೇ ಅದರಿಂದಾಗಿ ಅವರಿಗೆ ಬಹುಕಾಲ ಹಿತ ಹಾಗು ಸುಖ ದೊರೆಯುವುದು.
ಗ್ರಾಮೀಣಿಯೇ, ಇಲ್ಲಿ ಒಬ್ಬನ ಹತ್ತಿರ ಮೂರು ನೀರಿನ ಬಿಂದಿಗೆಗಳಿರುತ್ತವೆ. ಒಂದನೆಯದು ಬಿರುಕಿಲ್ಲದಂತಹುದು, ಅದರಲ್ಲಿ ನೀರು ಯಾವುದೇ ರೀತಿಯಲ್ಲಿ ಸ್ರವಿಕೆಯಾಗುವುದಿಲ್ಲ. ಅದನ್ನು ಮೊದಲು ತುಂಬಿದ ಬಳಿಕ, ಆತನು ಬಿರುಕಿಲ್ಲದ, ಆದರೆ ಸೂಕ್ಷ್ಮವಾಗಿ ನೀರು ಸ್ರವಿಕೆಯಾಗುವ ಬಿಂದಿಗೆಯಲ್ಲಿ ನೀರು ಸಂಗ್ರಹಿಸುತ್ತಾನೆ. ಕೊನೆಯಲ್ಲಿ ಬಿರುಕಿರುವ, ನೀರು ಸ್ರವಿಕೆಯಾಗುವ ಬಿಂದಿಗೆಯಲ್ಲಿ ನೀರು ಸಂಗ್ರಹಿಸುತ್ತಾನೆ. ಏಕೆಂದರೆ ಪಾತ್ರೆಗಳನ್ನು ತೊಳೆಯಲು ಸಹಾಕವಾಗಬಹುದೆಂದು ಹಾಗೆ ಮಾಡುತ್ತಾನೆ.
ಗ್ರಾಮೀಣಿಯೇ, ಸ್ರವಿಕೆಯಾಗದ ಬಿರುಕಿಲ್ಲದ ಬಿಂದಿಗೆಯಂತೆ, ಹಾಗೆಯೇ ನನಗೆ ಭಿಕ್ಷು ಭಿಕ್ಷುಣಿಯರು ಇದ್ದಾರೆ. ಅವರಿಗೆ ನಾನು ಆದಿಯಲ್ಲಿ ಕಲ್ಯಾಣಕಾರಿಯಾದ, ಮಧ್ಯದಲ್ಲಿ ಕಲ್ಯಾಣಕಾರಿಯಾದ ಹಾಗು ಅಂತ್ಯದಲ್ಲಿ ಕಲ್ಯಾಣಕಾರಿಯಾದ ಧಮ್ಮವನ್ನು ಅಕ್ಷರ ಹಾಗು ಅರ್ಥಸಹಿತವಾಗಿ ಬೋಧಿಸುತ್ತೇನೆ. ಪರಿಶುದ್ಧವಾದ ಹಾಗು ಪರಿಪೂರ್ಣವಾದ ಪವಿತ್ರ ಜೀವನವನ್ನು ನಾನು ಅನಾವರಣಗೊಳಿಸುತ್ತೇನೆ. ಏತಕ್ಕಾಗಿ? ಏಕೆಂದರೆ, ಅವರು ನನ್ನೊಂದಿಗೆ ಆಶ್ರಯ ದ್ವೀಪದಂತೆ ವಾಸಿಸುತ್ತಾರೆ, ಆಶ್ರಯತಾಣದಂತೆ, ರಕ್ಷಕನಂತೆ ಹಾಗು ನನ್ನನ್ನು ಪರಮ ಶರಣು ಎಂಬಂತೆ ಜೀವಿಸುತ್ತಾರೆ.
ನಂತರ ಗ್ರಾಮೀಣಿಯೇ, ಸ್ರವಿಕೆಯಾಗುವ, ಆದರೆ ಬಿರುಕಿಲ್ಲದ ಬಿಂದಿಗೆಯಂತೆ ನನಗೆ ಉಪಾಸಕ ಹಾಗು ಉಪಾಸಿಕೆಯರು ಇದ್ದಾರೆ. ಅವರಿಗೆ ಆದಿಯಲ್ಲಿ ಕಲ್ಯಾಣಕಾರಿಯಾದ, ಮಧ್ಯದಲ್ಲಿ ಕಲ್ಯಾಣಕಾರಿಯಾದ ಹಾಗು ಅಂತ್ಯದಲ್ಲಿ ಕಲ್ಯಾಣಕಾರಿಯಾದ ಧಮ್ಮವನ್ನು ಅಕ್ಷರ ಹಾಗು ಅರ್ಥಸಹಿತವಾಗಿ ಬೋಧಿಸುತ್ತೇನೆ. ಪರಿಶುದ್ಧವಾದ ಹಾಗು ಪರಿಪೂರ್ಣವಾದ ಪವಿತ್ರ ಜೀವನವನ್ನು ತೆರೆದಿಡುತ್ತೇನೆ. ಏತಕ್ಕಾಗಿ? ಏಕೆಂದರೆ, ಅವರು ನನ್ನಲ್ಲಿ ಆಶ್ರಯ ದ್ವೀಪದಂತೆ ವಾಸಿಸುತ್ತಾರೆ, ಆಶ್ರಯತಾಣದಂತೆ, ರಕ್ಷಕನಂತೆ ಹಾಗು ನನ್ನನ್ನೇ ಪರಮ ಶರಣು ಎಂಬಂತೆ ಜೀವಿಸುತ್ತಾರೆ.
ನಂತರ ಗ್ರಾಮೀಣಿಯೇ, ಸ್ರವಿಕೆಯಾಗುವ ಹಾಗು ಬಿರುಕಿರುವ ಬಿಂದಿಗೆಯಂತೆ ನನಗೆ ಪರ ಬಣಗಳ ಸನ್ಯಾಸಿಗಳು, ಪರಿವ್ರಾಜಕರು ಇತ್ಯಾದಿಗಳು ಆಗಿದ್ದಾರೆ. ಆದರೂ ಸಹಾ ನಾನು ಅವರಿಗೆ ಆದಿಯಲ್ಲಿ ಕಲ್ಯಾಣಕಾರಿಯಾದ, ಮಧ್ಯದಲ್ಲಿ ಕಲ್ಯಾಣಕಾರಿಯಾದ ಹಾಗು ಅಂತ್ಯದಲ್ಲಿ ಕಲ್ಯಾಣಕಾರಿಯಾದ ಧಮ್ಮವನ್ನು ಅಕ್ಷರ ಹಾಗು ಅರ್ಥಸಹಿತವಾಗಿ ಬೋಧಿಸುತ್ತೇನೆ. ಪರಿಶುದ್ಧವಾದ ಹಾಗು ಪರಿಪೂರ್ಣವಾದ ಪವಿತ್ರ ಜೀವನವನ್ನು ತೆರೆದಿಡುತ್ತೇನೆ. ಏತಕ್ಕಾಗಿ? ಏಕೆಂದರೆ, ಅವರು ನನ್ನ ಬೋಧನೆಯಲ್ಲಿನ ಒಂದು ವಾಕ್ಯವನ್ನು ಅರ್ಥಮಾಡಿಕೊಂಡರೂ ಸಹಾ ಅವರಿಗೆ ದೀರ್ಘಕಾಲ ಸುಖವು ಹಾಗು ಕ್ಷೇಮ ಉಂಟಾಗುವುದರಿಂದಾಗಿ. ಇದನ್ನು ಆಲಿಸಿದ ಅಸಿಬಂಧಕಪುತ್ತನು ಭಗವಾನರಿಗೆ ಶ್ಲಾಘನೆ ಮಾಡಿದನು. ಭವ್ಯವಾಗಿದೆ ಭಂತೆ.... ಇಂದಿನಿಂದ ಭಗವಾನರು ನನಗೆ ಜೀವನಪರ್ಯಂತ ಹಿಂಬಾಲಿಸುವ ಉಪಾಸಕನೆಂದು ಪರಿಗಣಿಸಲಿ.


8. ಸಂಖಧಮ ಸುತ್ತಂ

360. ಒಮ್ಮೆ ಭಗವಾನರು ನಳಂದದ ಪಾವರಿಕ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಅಸಿಬಂದಕಪುತ್ತ ಗ್ರಾಮೀಣಿಯು ಭಗವಾನರ ಸಮೀಪಕ್ಕೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ಆಗ ಅಸಿಬಂದಕಪುತ್ತ ಗ್ರಾಮೀಣಿಯು ನಿಗಂಠನಾಥಪುತ್ತನ ಗೃಹಸ್ಥ ಶಿಷ್ಯನಾಗಿದ್ದನು. ಗ್ರಾಮೀಣಿಯೇ, ನಿಗಂಠನಾಥಪುತ್ತನು ತನ್ನ ಶಿಷ್ಯರಿಗೆ ಯಾವರೀತಿಯ ಧಮ್ಮವನ್ನು ಉಪದೇಶಿಸುತ್ತಾನೆ. ಭಂತೆ, ನಿಗಂಠನಾಥಪುತ್ತನು ತನ್ನ ಶಿಷ್ಯರಿಗೆ ಹೀಗೆ ಉಪದೇಶಿಸುತ್ತಾನೆ: ಯಾರೇ ಆಗಲಿ ಜೀವಹತ್ಯೆಯನ್ನು ಮಾಡಿದರೆ ಅಪಾಯ ಲೋಕಕ್ಕೆ, ನರಕಕ್ಕೆ ಹೋಗುತ್ತಾನೆ. ಯಾರೇ ಆಗಲಿ, ಕೊಡದಿದ್ದುದನ್ನು ತೆಗೆದುಕೊಂಡರೆ ಅಪಾಯ ಲೋಕಕ್ಕೆ, ನರಕಕ್ಕೆ ಹೋಗುತ್ತಾನೆ. ಯಾರೇ ಆಗಲಿ ಲೈಂಗಿಕ ಅನಾಚಾರವನ್ನು ಮಾಡಿದರೆ ಅಪಾಯ ಲೋಕಕ್ಕೆ, ನರಕಕ್ಕೆ ಹೋಗುತ್ತಾನೆ. ಸುಳ್ಳನ್ನು ಹೇಳಿದರೆ ಅಪಾಯ ಲೋಕಕ್ಕೆ, ನರಕಕ್ಕೆ ಹೋಗುತ್ತಾನೆ. ಒಬ್ಬನು ಸಾಮಾನ್ಯವಾಗಿ ವ್ಯವಹರಿಸುವ (ಜೀವಿಸುವ) ರೀತಿಯಲ್ಲೆ ಪುನರ್ಜನ್ಮ ಪಡೆಯುತ್ತಾನೆ. ಹೀಗೆ ಭಂತೆ ನಿಗಂಠನಾಥಪುತ್ತರು ತಮ್ಮ ಶಿಷ್ಯರಿಗೆ ಬೋಧಿಸುವರು.
ಆದರೆ ಗ್ರಾಮೀಣಿಯೇ, ನಿಗಂಠನಾಥಪುತ್ತರ ಪ್ರಕಾರವೇ ಒಬ್ಬನು ತಾನು ವ್ಯವಹರಿಸುವ, ಜೀವಿಸುವ ರೀತಿಯಲ್ಲಿ ಪುನರ್ಜನ್ಮ ಪಡೆಯುವುದಾದರೆ ಯಾರು ಸಹಾ ದುರ್ಗತಿ ಹೊಂದಲಾರರು. ನಿರಯ ಅಥವಾ ನರಕಕ್ಕೆ ಹೋಗಲಾರರು. ಇದರ ಬಗ್ಗೆ ನೀನೇನು ಹೇಳುವೆ ಗ್ರಾಮೀಣಿಯೇ? ಒಬ್ಬನ ವೃತ್ತಿಯನ್ನು ತೆಗೆದುಕೊಳೋಣ, ಆತನು ಜೀವಹತ್ಯೆ ಮಾಡುತ್ತಾನೆ ಹಾಗೆಯೇ ಇನ್ನೊಂದು ಸಂದರ್ಭಗಳನ್ನು ಹೋಲಿಸಿದರೆ ಹಗಲೇ ಆಗಲಿ ರಾತ್ರಿಯೇ ಆಗಲಿ ಆತನು ಜೀವಹತ್ಯೆಗಳಲ್ಲಿ ತೊಡಗುವನೊ ಅಥವಾ ಸಾಧಾರಣ ಸ್ಥಿತಿಯಲ್ಲೇ ಹಾಗೆ ಮಾಡದೆ ಹೆಚ್ಚು ಇರುವನೋ? ಭಗವಾನ್, ಜೀವಹತ್ಯೆಗಳನ್ನು ಮಾಡುವ ಸಂದರ್ಭಗಳು ಮಾಡದೆ ಇರುವ ಸಂದರ್ಭಕ್ಕಿಂತ ಅತಿ ಕಡಿಮೆಯೇ ಇರುತ್ತವೆ.
ಆದ್ದರಿಂದ ಗ್ರಾಮೀಣಿಯೇ, ನಿಗಂಠನಾಥಪುತ್ತರ ಪ್ರಕಾರ ಸಾಮಾನ್ಯವಾಗಿ ಜೀವಿಸುವ ರೀತಿಯಲ್ಲೇ ಪುನರ್ಜನ್ಮ ಪಡೆಯುವುದಾದರೆ ಯಾರೂ ಸಹಾ ದುರ್ಗತಿಗೆ ಅಥವಾ ನಿರಯಕ್ಕೆ ಹೋಗಲಾರರು.
ಇದರ ಬಗ್ಗೆ ನೀನು ಹೇಗೆ ಯೋಚಿಸುವೆ ಗ್ರಾಮೀಣಿಯೇ, ಒಬ್ಬ ವ್ಯಕ್ತಿಯು ಕೊಡದೆ ಇದ್ದುದನ್ನು ತೆಗೆದುಕೊಳ್ಳುತ್ತಾನೆ... ಅನೈತಿಕ ಮಿಥ್ಯಾಚಾರದ ಜೀವನ ಮಾಡುತ್ತಾನೆ... ಸುಳ್ಳನ್ನು ಹೇಳುತ್ತಾನೆ... ಇವನ್ನೆಲ್ಲಾ ಬೇರೊಂದು ಸಂದರ್ಭಕ್ಕೆ ಹೋಲಿಸಿದಾಗ ದಿನವಾಗಲಿ, ರಾತ್ರಿಯೇ ಆಗಲಿ ಯಾವುದನ್ನು ಹೆಚ್ಚುಬಾರಿ ಮಾಡುತ್ತಾನೆ. ಈ ರೀತಿಯ ಕೆಟ್ಟ ಕಾರ್ಯಗಳಲ್ಲಿ ಹೆಚ್ಚುಬಾರಿ ತೊಡಗುತ್ತಾನೋ ಅಥವಾ ಹಾಗೆಲ್ಲಾ ಮಾಡದೆ ಇರುವ ಕಾರ್ಯಗಳು (ಸುಳ್ಳು) ಹೆಚ್ಚುಬಾರಿ ಪುನರಾವತರ್ಿತ ಮಾಡುವನೋ.
ಭಂತೆ, ಸುಳ್ಳು ಹೇಳುವ ವ್ಯಕ್ತಿಯ ಸಂದರ್ಭಗಳನ್ನು ಅವಲೋಕಿಸಿದರೆ ಆತನ ಹಗಲನ್ನು ಹಾಗು ರಾತ್ರಿಯನ್ನು ಹಾಗೆಯೇ ವಿವಿಧ ಸಂದರ್ಭಗಳನ್ನು ಅವಲೋಕಿಸಿದಾಗ ಆತನು ಸುಳ್ಳು ಹೇಳುವ ಸಂದರ್ಭಕ್ಕಿಂತ ಸುಳ್ಳು ಹೇಳದೆ ಇರುವ ಸಂದರ್ಭವೇ ಹೆಚ್ಚಾಗಿರುತ್ತದೆ.
ಹೀಗಾಗಿ ಗ್ರಾಮೀಣಿಯೇ, ಒಬ್ಬನು ಹೇಗೆ ಜೀವಿಸುತ್ತಾನೋ ಹಾಗೆಯೇ ಪುನರ್ಜನ್ಮ ದೊರೆಯುವುದಾದರೆ ಆಗ ನಿಗಂಠನಾಥಪುತ್ತರ ಸಿದ್ಧಾಂತದಂತೆಯೇ ಯಾರೊಬ್ಬರೂ ಸಹಾ ದುರ್ಗತಿಗಾಗಲಿ ಅಥವಾ ನರಕಕ್ಕಾಗಲಿ ಹೋಗಲಾರರು.
ಗ್ರಾಮೀಣಿಯೇ, ಇಲ್ಲಿ ಕೆಲವು ಗುರುಗಳು ಈ ರೀತಿಯ ಸಿದ್ಧಾಂತವನ್ನು ಹೊಂದಿರುತ್ತಾರೆ: ಯಾರು ಜೀವಹತ್ಯೆ ಮಾಡುವರೋ... ಯಾರು ಕೊಡದಿದ್ದುದನ್ನು ಸ್ವೀಕರಿಸುವರೋ... ಯಾರು ಅನೈತಿಕ ಸಂಬಂಧಗಳನ್ನು ಹೊಂದಿರುತ್ತಾರೋ... ಯಾರು ಸುಳ್ಳನ್ನು ಹೇಳುವರೋ... ಅವರು ದುರ್ಗತಿಗೆ ಅಥವಾ ನರಕಕ್ಕೆ ಸೇರುತ್ತಾರೆ. ಆಗ ಶಿಷ್ಯನು ಆ ಗುರುವಿನ ಮೇಲೆ ಪೂರ್ಣ ವಿಶ್ವಾಸವನ್ನು ಹೊಂದುತ್ತಾನೆ. ಆಗ ಆತನಿಗೆ ಹೀಗೆ ಅನಿಸುತ್ತದೆ, ನನ್ನ ಗುರುಗಳು ಈ ಬಗೆಯ ಸಿದ್ಧಾಂತವನ್ನು ಹೊಂದಿದ್ದಾರೆ: ಯಾರಾದರೂ ಜೀವಹತ್ಯೆ ಮಾಡಿದರೆ ನರಕಕ್ಕೆ ಹೋಗುವರು. ಈಗ ನಾನು ಪ್ರಾಣಿ ಹತ್ಯೆಗಳನ್ನು ಮಾಡಿದ್ದೇನೆ. ಹೀಗಾಗಿ ನಾನು ನರಕಕ್ಕೆ ನಿಗದಿತನಾಗಿದ್ದೇನೆ. ಈ ರೀತಿಯಾಗಿ ಆತನು ದೃಷ್ಟಿಕೋನವನ್ನು ಹೊಂದುತ್ತಾನೆ. ಆತನು ಅಂತಹ ದೃಷ್ಟಿಕೋನವನ್ನು ಬಿಡದಿದ್ದರೆ, ಪರಿವರ್ತನೆಯಾಗದಿದ್ದರೆ, ತನ್ನ ಕೆಟ್ಟ ಕರ್ಮಗಳಿಗೆ ತಕ್ಕಂತೆ ನರಕವನ್ನು ಪಡೆಯುತ್ತಾನೆ.
ಆತನಿಗೆ ಹೀಗೆ ಅನಿಸುತ್ತದೆ. ನನ್ನ ಗುರುಗಳು ಈ ಬಗೆಯ ಸಿದ್ಧಾಂತವನ್ನು ಹೊಂದಿದ್ದಾರೆ ಯಾರಾದರೂ ಕಳ್ಳತನ ಮಾಡಿದರೆ ದುರ್ಗತಿಗೆ ಅಥವಾ ನರಕಕ್ಕೆ ಹೋಗುವರು. ಹೀಗೆ ಆತನು ದೃಷ್ಟಿಕೋನವನ್ನು ಪಡೆಯುತ್ತಾನೆ. ಆತನು ಆ ದೃಷ್ಟಿಕೋನವನ್ನು ಬಿಡದಿದ್ದರೆ ತನ್ನ ಪಾಪಕ್ಕೆ ತಕ್ಕಂತೆ ನರಕದಲ್ಲಿ ಬೀಳುತ್ತಾನೆ.
ಆದರೆ ಇಲ್ಲಿ ಗ್ರಾಮೀಣಿಯೇ, ತಥಾಗತರು ಲೋಕದಲ್ಲಿ ಉದಯಿಸುತ್ತಾರೆ. ಅವರು ಅರಹಂತರು, ಸಮ್ಮಾಸಂಬುದ್ಧರು ವಿದ್ಯಾಚರಣಸಂಪನ್ನರು, ಸುಗತರು, ಸರ್ವ ಲೋಕಗಳನ್ನು ಬಲ್ಲವರು, ಅನುತ್ತರ ಧಮ್ಮಸಾರಥಿಯು, ದೇವತೆಗಳಿಗೆ ಹಾಗು ಮಾನವರಿಗೆ ಗುರುವು, ಬುದ್ಧರು ಹಾಗು ಭಗವಾನರು ಆಗಿದ್ದಾರೆ. ಅವರು ನಾನಾರೀತಿಯಲ್ಲಿ ಜೀವಹತ್ಯೆಗಳನ್ನು ಖಂಡಿಸಿದ್ದಾರೆ. ಜೀವಹತ್ಯೆಯಿಂದ ವಿರತರಾಗಿ ಎಂದು ಉಪದೇಶಿಸಿದ್ದಾರೆ. ಹಾಗೆಯೇ ಅವರು ಕಳ್ಳತನವನ್ನು ಖಂಡಿಸಿದ್ದಾರೆ, ಕೊಡದಿದ್ದುದನ್ನು ಸ್ವೀಕರಿಸಬೇಡಿ ಎಂದು ಉಪದೇಶಿಸಿದ್ದಾರೆ. ಹಾಗೆಯೇ ಅನೈತಿಕ ಸಂಬಂಧಗಳನ್ನು ಖಂಡಿಸಿದ್ದಾರೆ, ಅನೈತಿಕ ಮಿಥ್ಯಾಚಾರ ಮಾಡದಿರಿ ಎಂದು ಉಪದೇಶಿಸಿದ್ದಾರೆ. ಹಾಗೆಯೇ ಅವರು ಸುಳ್ಳನ್ನು ಖಂಡಿಸಿದ್ದಾರೆ, ಸುಳ್ಳಿನಿಂದ ವಿರತರಾಗಿ ಎಂದು ಉಪದೇಶಿಸಿದ್ದಾರೆ.
ನಂತರ ಇಲ್ಲಿ ಶಿಷ್ಯನು ಗುರುವಿನ ಮೇಲೆ ಪೂರ್ಣವಾಗಿ ವಿಶ್ವಾಸ ಹೊಂದಿ ಹೀಗೆ ಚಿಂತನೆ ಮಾಡುತ್ತಾನೆ. ಭಗವಾನರು ನಾನಾರೀತಿಯಲ್ಲಿ ಜೀವಹತ್ಯೆಗಳನ್ನು ಖಂಡಿಸಿದ್ದಾರೆ. ನಾನು ಹಲವಾರು ಬಾರಿ ಪ್ರಾಣಿಹತ್ಯೆಗಳನ್ನು ಮಾಡಿದ್ದೇನೆ, ಅದು ಸರಿಯಲ್ಲ, ಅದು ಒಳ್ಳೆಯದಲ್ಲ. ಆದರೆ ನಾನು ಈಗ ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ. ಈ ಕ್ಷಣದಿಂದ ನಾನು ಈ ಬಗೆಯ ಪಾಪಕೃತ್ಯಗಳನ್ನು ಮಾಡಲಾರೆ. ಹೀಗೆ ಚಿಂತನೆ, ಸಂಕಲ್ಪ ಮಾಡಿದ ಆತನು ಜೀವಹತ್ಯೆಗಳನ್ನು ತೊರೆಯುತ್ತಾನೆ. ಈ ರೀತಿಯಾಗಿ ಆತನು ಪಾಪದಿಂದ ವಿರತನಾಗುತ್ತಾನೆ. ಹೀಗೆ ಆತನು ಪಾಪದಿಂದ ಪಾರಾಗುತ್ತಾನೆ.
ಆತನು ಹೀಗೆ ಚಿಂತನೆ ಮಾಡುತ್ತಾನೆ: ಭಗವಾನರು ನಾನಾವಿಧವಾಗಿ ಕಳ್ಳತನವನ್ನು ಖಂಡಿಸಿದ್ದಾರೆ, ಹಾಗು ಹೀಗೆ ನುಡಿದಿದ್ದಾರೆ: ಕೊಡದಿದ್ದುದನ್ನು ಸ್ವೀಕರಿಸದಿರಿ. ಆದರೆ ನಾನು ಹಲವಾರುಬಾರಿ ಕೊಡದೆ ಇದ್ದುದನ್ನು ತೆಗೆದುಕೊಂಡುಬಿಟ್ಟಿದ್ದೇನೆ, ಅದು ಸರಿಯಲ್ಲ, ಅದು ಒಳ್ಳೆಯದಲ್ಲ. ಆದರೆ ಇದಕ್ಕಾಗಿ ನಾನು ಪಶ್ಚಾತ್ತಾಪಪಡುವೆ. ಈ ಕ್ಷಣದಿಂದ ಹಾಗೆ ಮಾಡಲಾರೆ. ಹೀಗೆ ಚಿಂತನೆ ಮಾಡಿ, ಸಂಕಲ್ಪ ಮಾಡಿ, ಆತನು ಕೊಡದೆ ಇದ್ದುದನ್ನು ಸ್ವೀಕರಿಸಲಾರ. ಹೀಗೆ ಪಾಪಕೃತ್ಯಗಳನ್ನು ತೊರೆಯುತ್ತಾನೆ, ಹೀಗೆ ಪಾಪದಿಂದ ವಿರತನಾಗುತ್ತಾನೆ.
ಆತನು ಹೀಗೆ ಚಿಂತನೆ ಮಾಡುತ್ತಾನೆ: ಭಗವಾನರು ಹಲವಾರು ರೀತಿಯಲ್ಲಿ ಅನೈತಿಕ ಸಂಬಂಧಗಳನ್ನು ಖಂಡಿಸಿದ್ದಾರೆ. ಅನೈತಿಕ ಮಿಥ್ಯಾಚಾರದಿಂದ ವಿರತರಾಗಿ ಎಂದು ಉಪದೇಶಿಸಿದ್ದಾರೆ. ನಾನು ಹಲವಾರುಬಾರಿ ಅನೈತಿಕ ಲೈಂಗಿಕತೆಯಲ್ಲಿ ತೊಡಗಿದ್ದೇನೆ. ಅದು ಸರಿಯಲ್ಲ, ಅದು ಒಳ್ಳೆಯದಲ್ಲ. ಇದಕ್ಕಾಗಿ ನಾನು ಪಶ್ಚಾತ್ತಾಪಡುತ್ತೇನೆ. ಈ ಕ್ಷಣದಿಂದ ಈ ಬಗೆಯ ಪಾಪಕೃತ್ಯವು ನನ್ನಿಂದ ಸಾದ್ಯವಾಗದು. ಹೀಗೆ ಚಿಂತನೆ ಮಾಡಿ, ಹೀಗೆ ಸಂಕಲ್ಪಿಸಿ ಆತನು ಅನೈತಿಕ ಸಂಬಂಧಗಳನ್ನು ತೊರೆಯುತ್ತಾನೆ, ಮುಂದೆಯೂ ಪಾಪವಾಗದಂತೆ ನಿಯಂತ್ರಿಸಿಕೊಳ್ಳುತ್ತಾನೆ. ಹೀಗೆ ಆತನು ಪಾಪಕೃತ್ಯಗಳನ್ನು ತೊರೆಯುತ್ತಾನೆ. ಹೀಗೆ ಪಾಪದಿಂದ ಪಾರಾಗುತ್ತಾನೆ.
ಆತನು ಹೀಗೆ ಚಿಂತನೆ ಮಾಡುತ್ತಾನೆ: ಭಗವಾನರು ನಾನಾರೀತಿಯಲ್ಲಿ ಸುಳ್ಳು ಹೇಳುವಿಕೆಯನ್ನು ಹೀಗೆ ಖಂಡಿಸಿದ್ದಾರೆ: ನಿಮ್ಮ ಸಂಭಾಷಣೆಯಿಂದ ಸುಳ್ಳನ್ನು ತೊರೆಯಿರಿ. ನಾನು ಹಲವಾರುಬಾರಿ ಸುಳ್ಳನ್ನು ನುಡಿಸಿದ್ದೇನೆ. ಅದು ಸರಿಯಲ್ಲ, ಅದು ಒಳ್ಳೆಯದಲ್ಲ. ಆದರೆ ಅದಕ್ಕಾಗಿ ನಾನು ಈಗ ಪಶ್ಚಾತ್ತಾಪಪಡುತ್ತಿದ್ದೇನೆ. ಈ ಕ್ಷಣದಿಂದ ಈ ಬಗೆಯ ಪಾಪವು ನನ್ನಿಂದ ಆಗದು ಎಂದು ಚಿಂತನೆ ಮಾಡಿ, ಸಂಕಲ್ಪ ಮಾಡುತ್ತಾನೆ, ನಿಯಂತ್ರಿಸುತ್ತಾನೆ. ಹೀಗೆ ಆತನು ಸುಳ್ಳಿನಿಂದ ವಿರತನಾಗುತ್ತಾನೆ, ಸುಳ್ಳಿನಿಂದ ಪಾರಾಗುತ್ತಾನೆ.
ಹೀಗೆ ಜೀವಹತ್ಯೆಗಳನ್ನು ಮಾಡುವುದನ್ನು ತೊರೆದು, ಜೀವಹತ್ಯೆಗಳಿಂದ ವಿರತನಾಗಿ ಕಳ್ಳತನವನ್ನು ತೊರೆದು, ಕೊಡದಿದ್ದು ಸ್ವೀಕರಿಸಿದೆ, ಅನೈತಿಕ ಸಂಬಂಧಗಳನ್ನು ತೊರೆದು, ಅಂತಹುದರಲ್ಲಿ ಆನಂದಿಸದೆ, ಸುಳ್ಳನ್ನು ತೊರೆದು, ಸುಳ್ಳಿನಿಂದ ವಿರತನಾಗಿ, ಚಾಡಿತನವನ್ನು ತೊರೆದು, ಚಾಡಿಯಿಂದ ವಿರತನಾಗಿ, ಕಠಿಣವಾದ ಮಾತುಗಳನ್ನು ತೊರೆದು ಅದರಿಂದ ವಿರತನಾಗಿ, ವ್ಯರ್ಥವಾದ ಹರಟೆಯನ್ನು ತೊರೆದು, ಅದರಿಂದ ವಿರತನಾಗಿ, ದುರಾಸೆಯಿಂದ ವಿರತನಾಗಿ, ದುರಾಸೆಯಿಂದ ಮಿಥ್ಯಾದೃಷ್ಟಿಗಳನ್ನು ವಿರತನಾಗುತ್ತಾನೆ, ಸಮ್ಯಕ್ ದೃಷ್ಟಿಕೋನ ಹೊಂದುತ್ತಾನೆ.
ನಂತರ ಗ್ರಾಮೀಣಿಯೇ, ಯಾವ ಆರ್ಯ ಶಿಷ್ಯನು ದುರಾಸೆಯಿಂದ, ದೂರವಿರುವನೋ, ದ್ವೇಷದಿಂದ ದೂರವಿರುವನೋ, ಗೊಂದಲರಹಿತನೋ, ಸ್ಪಷ್ಟವಾಗಿ ಅರಿಯುವಂತಹವನೋ, ಸದಾ ಜಾಗರೂಕನೋ, ಅಂತಹವನು ಒಂದು ದಿಕ್ಕಿನಲ್ಲಿ ಮೈತ್ರಿಯನ್ನು ಪ್ರಸರಿಸುತ್ತಾ ವಿಹರಿಸುತ್ತಾನೆ. ಹಾಗೆಯೇ ಎರಡನೆಯ ದಿಕ್ಕಿನಲ್ಲೂ ಮೈತ್ರಿಯನ್ನು ಪ್ರಸರಿಸುತ್ತಾ ವಿಹರಿಸುತ್ತಾನೆ. ಹಾಗೆಯೇ ಮೂರನೆಯ ದಿಕ್ಕಿನಲ್ಲಿ, ನಾಲ್ಕನೆಯ ದಿಕ್ಕಿನಲ್ಲಿ, ಮೇಲೆ, ಕೆಳಗೆ, ಸುತ್ತಲೂ, ಎಲ್ಲೆಲ್ಲೂ ಮೈತ್ರಿಯನ್ನು ಪ್ರಸರಿಸುತ್ತಾನೆ. ಪರರನ್ನೆಲ್ಲಾ ತನ್ನಂತೆಯೇ ಭಾವಿಸಿ ಇಡೀ ಬ್ರಹ್ಮಾಂಡದಲ್ಲಿ ಮೈತ್ರಿಯನ್ನು ಹರಡುತ್ತಾನೆ. ಆತನ ಮೈತ್ರಿಯು ಅಪರಿಮಿತವಾದುದು, ಉನ್ನತವಾದುದು, ಅಳತೆಗೆ ಮೀರಿದ್ದು, ದ್ವೇಷರಹಿತವಾದುದು, ಹಗೆತನರಹಿತವಾದುದು. ಹೇಗೆ ಬಲಿಷ್ಠ ಶಂಖ ಊದುವವನು ಅತಿ ಸುಲಭವಾಗಿ ನಾಲ್ಕು ದಿಕ್ಕುಗಳಲ್ಲು ತನ್ನ ಸಂದೇಶಗಳನ್ನು, ಸಂಕೇತಗಳನ್ನು ತಲುಪಿಸಿಬಿಡುವನೋ ಹಾಗೆಯೇ ಮೈತ್ರಿಯನ್ನು ಪ್ರಸರಿಸುತ್ತಾ ಮೈತ್ರಿಯಿಂದ ಆಧಾರಿತವಾದ ಚಿತ್ತವಿಮುಕ್ತಿಯನ್ನು ಪಡೆಯುತ್ತಾನೆ. ಈ ರೀತಿಯಾಗಿ ಮೈತ್ರಿಯನ್ನು ವಿಕಾಸಿಸುತ್ತಾನೆ. ಯಾವುದೇ ಪರಿಮಿತ ಕರ್ಮವು ಉಳಿಯಲಾರದು, ಮುಂದುವರೆಯಲಾರದು.
ಅದೇರೀತಿಯಲ್ಲಿ ಆತನು ಒಂದು ದಿಕ್ಕಿನಲ್ಲಿ ಕರುಣೆಯನ್ನು ಪ್ರಸರಿಸುತ್ತಾನೆ. ಅದೇರೀತಿಯಲ್ಲಿ ಆತನು ಒಂದು ದಿಕ್ಕಿನಲ್ಲಿ ಮುದಿತವನ್ನು ಪ್ರಸರಿಸುತ್ತಾನೆ. ಅದೇರೀತಿಯಲ್ಲಿ ಆತನು ಒಂದು ದಿಕ್ಕಿನಲ್ಲಿ ಉಪೇಕ್ಖಾ (ಉಪೇಕ್ಷೆ/ಸಮಚಿತ್ತತೆ) ವನ್ನು ಪ್ರಸರಿಸುತ್ತಾನೆ. ಹೀಗೆ ಎರಡನೆಯ ದಿಕ್ಕಿನಲ್ಲೂ ಉಪೇಕ್ಖಾ ಪ್ರಸರಿಸುತ್ತಾ ವಿಹರಿಸುತ್ತಾನೆ. ಹಾಗೆಯೇ ಮೂರನೆಯ ದಿಕ್ಕಿನಲ್ಲೂ, ನಾಲ್ಕನೆಯ ದಿಕ್ಕಿನಲ್ಲೂ, ಮೇಲೆ, ಕೆಳಗೆ, ಸುತ್ತಲೂ ಎಲ್ಲೆಲ್ಲೂ ಸಮಚಿತ್ತತೆ ಪ್ರಸರಿಸುತ್ತಾನೆ. ಸಮಚಿತ್ತತೆಯಿಂದ ಇಡೀ ಬ್ರಹ್ಮಾಂಡವನ್ನು ಆವರಿಸುತ್ತಾನೆ. ಆತನ ಸಮಚಿತ್ತತೆ ಅಪರಿಮಿತವಾದುದು, ಉನ್ನತವಾದುದು, ಅಳತೆ ಮೀರಿದ್ದು, ರಾಗ-ದ್ವೇಷರಹಿತವಾದುದು. ಹೇಗೆ ಬಲಿಷ್ಠ ಶಂಖ ಊದುವವನು ಅತಿ ಸುಲಭವಾಗಿ ನಾಲ್ಕು ದಿಕ್ಕುಗಳಲ್ಲೂ ತನ್ನ ಸಂದೇಶಗಳನ್ನು, ಸಂಕೇತಗಳನ್ನು ತಲುಪಿಸಿಬಿಡುವನೋ ಹಾಗೆಯೇ ಉಪೇಕ್ಖಾವನ್ನು ಪ್ರಸರಿಸುತ್ತಾ, ಉಪೇಕ್ಖಾದಿಂದ ಆವೃತವಾದ ಚಿತ್ತವಿಮುಕ್ತಿಯನ್ನು ಪಡೆಯುತ್ತಾನೆ. ಈ ರೀತಿಯಾಗಿ ಉಪೇಕ್ಖಾ ವಿಕಾಸಿಸುತ್ತಾನೆ. ಆಗ ಅಲ್ಲಿ ಯಾವುದೇ ಪರಿಮಿತ ಕರ್ಮವು ಉಳಿಯಲಾರದು ಹಾಗು ಮುಂದುವರೆಯಲಾರದು. ಹೀಗೆ ಭಗವಾನರು ನುಡಿದ ನಂತರ ಅಸಿಖಂದಕಪುತ್ತನು ಹೀಗೆ ಶ್ಲಾಘಿಸಿದನು: ಭವ್ಯವಾಗಿದೆ ಭಂತೆ.... ಇಂದಿನಿಂದ ನಾನು ಜೀವನಪರ್ಯಂತ ತಮ್ಮ ಉಪಾಸಕನಾಗುವೆನು, ನನ್ನನ್ನು ಹಾಗೆಯೇ ಪರಿಗಣಿಸಲಿ.




9. ಕುಲ ಸುತ್ತಂ

361. ಒಮ್ಮೆ ಭಗವಾನರು ಕೋಸಲರ ಜೊತೆಗೆ ಅಪಾರ ಸಂಖ್ಯೆಯ ಭಿಕ್ಷುಗಳೊಡನೆ ಸಂಚರಿಸುತ್ತ ನಳಂದಕ್ಕೆ ಬಂದರು. ಅಲ್ಲಿ ಅವರು ಪಾವಾರಿಕದ ಆಮ್ರವನದಲ್ಲಿ ತಂಗಿದ್ದರು.
ಆ ಸಮಯದಲ್ಲಿ ನಳಂದವು ಭಾರಿ ಕ್ಷಾಮವನ್ನು ಅನುಭವಿಸುತ್ತಿತ್ತು. ಅಪಾರ ಆಹಾರ ಕೊರತೆ, ಬೆಳೆಗಳೆಲ್ಲ ರೋಗಕ್ಕೆ ತುತ್ತಾಗಿದ್ದವು, ಹುಲ್ಲಾಗಿ ಪರಿವರ್ತನೆಯಾಗಿದ್ದವು. ಆ ಸಮಯದಲ್ಲಿ ನಿಗಂಠನಾಥಪುತ್ತನು ತನ್ನ ಅಪಾರ ನಿಗಂಠರ ಗೃಹಸ್ಥ ಶಿಷ್ಯನಾಗಿದ್ದನು. ಆತನು ನಿಗಂಠನಾಥಪುತ್ತರಿಗೆ ವಂದಿಸಿ ಒಂದೆಡೆ ಕುಳಿತನು. ಆಗ ನಿಗಂಠನಾಥಪುತ್ತನು ಆತನಿಗೆ ಹೀಗೆ ಕೇಳಿದನು: ಬಾ ಗ್ರಾಮೀಣಿ, ನೀನು ಗೋತಮರ ಸಿದ್ಧಾಂತದ ಬಗ್ಗೆ ನಿಂದನೆಯನ್ನು ಮಾಡು, ಆಗ ನಿನ್ನ ಬಗ್ಗೆ ಖ್ಯಾತಿಯು ಹೀಗೆ ಹರಡುತ್ತದೆ: ಅಸಿಬಂದಕಪುತ್ತ ಗ್ರಾಮಿಣಿಯು ಸಮಣ ಗೋತಮರ ಸಿದ್ಧಾಂತವನ್ನು ಖಂಡಿಸಿದ್ದಾನೆ. ಹೀಗಾಗಿ ಆತನು ಬಲಿಷ್ಠ ಹಾಗು ಬಲಾಢ್ಯನಾಗಿದ್ದಾನೆ.
ಆದರೆ ಭಂತೆ, ಹೇಗೆತಾನೆ ಸಮಣ ಗೋತಮರಂತನ ಪರಾಕ್ರಮಿ ಹಾಗು ಬಲಿಷ್ಠರನ್ನು ನಾನು ಖಂಡಿಸಲು ಸಾಧ್ಯವಾಗುತ್ತದೆ? ಹೋಗು ಗ್ರಾಮೀಣಿಯೇ, ಸಮಣ ಗೋತಮರ ಬಳಿಗೆ ಹೋಗಿ ಹೀಗೆ ಪ್ರಶ್ನಿಸು: ಭಂತೆ, ಭಗವಾನರು ಕುಲಗಳ ಬಗ್ಗೆ ಸಹಾನುಭೂತಿಯನ್ನು ಹಲವಾರು ರೀತಿಯಲ್ಲಿ ಇಟ್ಟಿರುವಿರಿಯಲ್ಲವೆ? ಕುಲಗಳ ರಕ್ಷಣೆಯ ಬಗ್ಗೆ, ಕುಲಗಳ ಬಗ್ಗೆ ಅನುಕಂಪೆಯನ್ನು ಹಾಗು ಸ್ತುತಿಯನ್ನು ಮಾಡುತ್ತಿರುವಿರಿ ಅಲ್ಲವೇ? ಆಗ ಗೋತಮರು ಹೌದು ಗ್ರಾಮೀಣಿಯೇ, ನಾನು ಕುಲಗಳ ಬಗ್ಗೆ ಹಲವಾರು ರೀತಿಯಲ್ಲಿ ರಕ್ಷಣೆ, ಅನುಕಂಪೆ, ಸ್ತುತಿಗಳನ್ನು ಮಾಡುತ್ತಿರುವೆನು ಎಂದು ಹೇಳಿದರೆ ಆಗ ನೀನು ಅವರಿಗೆ ಹೀಗೆ ಕೇಳಬೇಕು: ಹಾಗಾದರೆ ಭಂತೆ, ಏತಕ್ಕಾಗಿ ನೀವು ಅಪಾರ ಸಂಖ್ಯೆಯುಳ್ಳ ಭಿಕ್ಷು ಸಂಘದ ಸಮೇತ ಕ್ಷಾಮವಿರುವಲ್ಲಿ, ಬೆಳೆಗಳು ಹಾಳಾಗಿರುವಲ್ಲಿ, ಬೆಳೆಗಳು ಹುಲ್ಲಾಗಿರುವಲ್ಲಿ ಏತಕ್ಕೆ ಹೋಗುವಿರಿ? ಭಗವಾನರು ಕುಲಗಳ ನಾಶಕ್ಕಾಗಿ ಅಭ್ಯಾಸಿಸುತ್ತಿರುವರೇ? ಕುಟುಂಬಗಳ ನಾಶಕ್ಕಾಗಿ, ಕುಲಗಳು ಇನ್ನಿಲ್ಲದಂತೆ ಮಾಡಲು ಹೀಗೆ ಹೋಗುತ್ತಿರುವರೋ? ಎಂದು ವಾದಿಸಬೇಕು. ಯಾವಾಗ ಸಮಣ ಗೋತಮರು ಹೀಗೆ ನಿನ್ನಿಂದ ಇಕ್ಕಟ್ಟಿಗೆ ಸಿಲುಕಿದಾಗ, ದ್ವಂದ್ವಕ್ಕೆ ಸಿಲುಕಿದಾಗ ಆಗ ಅವರು ಬಿಸಿ ತುಪ್ಪದಂತೆ ನುಂಗಲೂ ಆಗದೆ, ಉಗುಳಲೂ ಆಗದಂತೆ ಆಗಿಬಿಡುತ್ತಾರೆ. ಸರಿ ಭಂತೆ ಎಂದು ಅಸಿಬಂಧಕಪುತ್ತ ಗ್ರಾಮೀನಿಯು ಉತ್ತರಿಸಿ ತನ್ನ ಆಸನದಿಂದ ಎದ್ದು ನಿಗಂಠನಾಥಪುತ್ತರಿಗೆ ವಂದಿಸಿ, ಭಗವಾನರು ಇದ್ದಲ್ಲಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತು ಹೀಗೆ ಪ್ರಶ್ನಸಿದನು.
ಭಂತೆ, ತಾವು ಕುಲಗಳ ಸಹಾನುಭೂತಿಯ ಬಗ್ಗೆ ಹಲವಾರು ರೀತಿಯಲ್ಲಿ ಸ್ತುತಿಸಿರುವಿರಿಯಲ್ಲವೆ. ಕುಲಗಳ ರಕ್ಷಣೆಗಾಗಿ, ಕುಲಗಳ ಮೇಲಿನ ಅನುಕಂಪೆಯ ಬಗ್ಗೆ ಹಲವಾರು ರೀತಿ ಹೇಳಿರುವಿರಲ್ಲವೆ? ಹೌದು ಗ್ರಾಮೀಣಿಯೇ, ತಥಾಗತರು ಕುಲಗಳ ಅನುಕಂಪೆ, ಸಹಾನುಭೂತಿ, ಅದರ ರಕ್ಷಣೆಯ ಬಗ್ಗೆ ಹಲವಾರು ರೀತಿಯಲ್ಲಿ ಸ್ತುತಿಸಿದ್ದೇನೆ. ಹಾಗಾದರೆ ಭಂತೆ, ಏತಕ್ಕಾಗಿ ಭಗವಾನರು ಅಪಾರ ಭಿಕ್ಷು ಸಂಘದ ಸಮೇತ ಕ್ಷಾಮದ ಕಾಲದಲ್ಲಿ, ಆಹಾರ ಕೊರತೆ ಇರುವಂತಹ ಸಮಯದಲ್ಲಿ ಅಂತಹ ಸ್ಥಳಗಳಲ್ಲಿ ಬೆಳೆಗಳೆಲ್ಲಾ ಹುಲ್ಲಾಗಿ ನಾಶವಾಗಿರುವಂತೆಡೆಯಲ್ಲಿ ಏತಕ್ಕಾಗಿ ಭಿಕ್ಷುಗಳು ಹೋಗುತ್ತಿದ್ದಾರೆ. ಇದು ಕುಲಗಳ ನಾಶಕ್ಕಾಗಿಯೆ, ಕುಟುಂಬಗಳ ದುರಂತಕ್ಕಾಗಿಯೆ, ಕುಲಗಳು ಇನ್ನಿಲ್ಲದಂತೆ ಮಾಡಲು ಹೀಗೆ ಮಾಡುತ್ತಿರುವಿರಾ? ಗ್ರಾಮೀಣಿ, ನಾನು 91 ಕಲ್ಪಗಳಷ್ಟು ಹಿಂದಿನದೆಲ್ಲಾ ನೆನಪಿಸಿಕೊಂಡಿದ್ದೇನೆ. ಆದರೆ ಇಡೀ 91 ಕಲ್ಪಗಳಷ್ಟು ಕಾಲದಲ್ಲಿ ಎಲ್ಲಿಯೂ ಆಹಾರ ದಾನ ಮಾಡಿ ನಾಶವಾಗಿರುವುದನ್ನು ನಾನು ನೋಡಿಲ್ಲ, ಅಂತಹುದು ಎಂದಿಗೂ ಆಗಲಿಲ್ಲ. ಬದಲಾಗಿ ಅವರು ತಾವು ನೀಡಿರುವ ದಾನದಿಂದಾಗಿ, ಸತ್ಯದಿಂದಾಗಿ ಮತ್ತು ಧರ್ಮದಿಂದಾಗಿ ಅಪಾರ ಐಶ್ವರ್ಯವಂತರಾದರು. ಅಪಾರ ಆಸ್ತಿಗೆ ಒಡೆಯರಾದರು. ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಇತ್ಯಾದಿಗಳಿಗೆ ಒಡೆಯರಾದರು.  ಗ್ರಾಮೀಣಿಯೇ, ಕುಲಗಳ ನಾಶಕ್ಕಾಗಿ ಎಂಟು ಕಾರಣಗಳಿವೆ ಹಾಗು ಸ್ಥಿತಿಗಳಿವೆ. ಅವೆಂದರೆ: ರಾಜನಿಂದಾಗಿ ಕುಲಗಳ ನಾಶ, ಕಳ್ಳರಿಂದಾಗಿ ಕುಲನಾಶ, ಅಗ್ನಿಯಿಂದಾಗಿ ಕುಲಗಳ ನಾಶ, ನೀರಿನಿಂದಾಗಿ (ಪ್ರವಾಹ/ಮಳೆ) ಕುಲಗಳ ನಾಶ, ಎನ್ನನ್ನು ತಿರಸ್ಕೃತ ಮಾಡುತ್ತಿರುವೆ ಎಂದು ತಿಳಿಯದಿರುವುದು, ಕಾರ್ಯನಿರ್ವಹಣೆಯಲ್ಲಿ ವಿಫಲತೆ, ಕುಲದಲ್ಲಿನ ಒಬ್ಬನಿಂದ ಅಥವಾ ಹಲವರಿಂದಾಗಿ ಆಗುವ ದುಂದುವೆಚ್ಚ, ವ್ಯರ್ಥ ವೆಚ್ಚ, ಮೂರ್ಖತ್ವದಿಂದಾಗಿ ಕುಲನಾಶ ಹಾಗು ಅನಿತ್ಯತೆಯ ಕಾರಣದಿಂದಾಗಿ ಕುಲನಾಶ. ಇವೇ ಕುಲಗಳ ನಾಶಕ್ಕಾಗಿ ಇರುವಂತಹ 8 ಕಾರಣಗಳು ಹಾಗು ಸ್ಥಿತಿಗಳು. ಆದರೆ ಈ ರೀತಿಯ 8 ಪರಿಸ್ಥಿತಿಯು ಇದ್ದು ಕುಲಗಳು ನಾಶವಾಗಿರುವಾಗ, ಆಗುತ್ತಿರುವಾಗ ಯಾರಾದರೂ ನನ್ನಲ್ಲಿ ಹೀಗೆ ಕೇಳಬಹುದು. ಭಗವಾನರು ಕುಲಗಳ ನಾಶಕ್ಕಾಗಿ ಸಾಧಿಸುತ್ತಿರುವರು ಎಂದೆಲ್ಲಾ ಹೇಳಬಹುದು. ಆದರೆ ಅಂತಹ ವ್ಯಕ್ತಿಯು ತನ್ನ ಈ ದೃಷ್ಟಿಕೋನ ಹಾಗು ಮಿಥ್ಯಾ ಆರೋಪವನ್ನು ತೊರೆಯದಿದ್ದರೆ ಅಂತಹವನು ದುರ್ಗತಿಗೆ ಅಥವಾ ನಿರಯಕ್ಕೆ ಬೀಳುವನು. ಭಗವಾನರು ಹೀಗೆ ನುಡಿದಾಗ ಅಸಿಬಂಧಕಪುತ್ತನು ಭಗವಾನರಿಗೆ ಅಭಿನಂದಿಸಿದನು. ಭವ್ಯವಾಗಿದೆ ಭಂತೆ.... ಇಂದಿನಿಂದ ಜೀವನಪರ್ಯಂತ ನನ್ನನ್ನು ತಮ್ಮ ಹಿಂಬಾಲಕನೆಂದು ಪರಿಗಣಿಸಲಿ.



10. ಮಣಿಚೂಳಕ ಸುತ್ತಂ

362. ಒಮ್ಮೆ ಭಗವಾನರು ರಾಜಗೃಹದಲ್ಲಿ ವೇಳುವನದಲ್ಲಿರುವ ಅಳಿಲು ಧಾಮದಲ್ಲಿ ವಿಹರಿಸುತ್ತಿದ್ದರು. ಆ ಸಂದರ್ಭದಲ್ಲಿ ರಾಜನ ಸಮೂಹವು ಅರಮನೆಯಲ್ಲಿ ಕುಳಿತಿರುವಾಗ ಚಚರ್ೆಯೊಂದು ಎದ್ದಿತು. ಅದೆಂದರೆ, ಶಾಕ್ಯಪುತ್ರರ ಸಮಣರ ಸಮೂಹವೂ ಚಿನ್ನ ಹಾಗು ರಜತವನ್ನು (ಬೆಳ್ಳಿ) ಒಪ್ಪುತ್ತಾರೆ, ಸ್ವೀಕರಿಸುತ್ತಾರೆ, ಪಡೆಯುತ್ತಾರೆ.
ಆ ಸಂದರ್ಭದಲ್ಲಿ ಮಣಿಚೂಳಕನೆಂಬ ಗ್ರಾಮೀಣಿಯು ಸಭೆಯಲ್ಲಿ ಕುಳಿತಿದ್ದನು. ಆತನು ಆ ಸಭೆಗೆ ಹೀಗೆ ನುಡಿದನು: ಹಿರಿಯರ ಬಗ್ಗೆ ಹೀಗೆ ಹೇಳದಿರಿ, ಶಾಕ್ಯಪುತ್ರರ ಸಮಣರು ಚಿನ್ನವನ್ನಾಗಲಿ, ರಜತವನ್ನಾಗಲಿ ಸ್ವೀಕರಿಸಲಾರರು, ಒಪ್ಪಲಾರರು, ಪಡೆಯಲಾರರು. ಅವರು ಚಿನ್ನ-ಬೆಳ್ಳಿಗಳನ್ನೆಲ್ಲಾ ತ್ಯಜಿಸಿರುವವರಾಗಿದ್ದಾರೆ, ತೊರೆದವರಾಗಿದ್ದಾರೆ ಎಂದು ಹೇಳಿ ಆ ಸಭೆಯನ್ನು ಸಮಾಧಾನಗೊಳಿಸಿದನು. ನಂತರ ಮಣಿಚೂಳಕನು ಅಲ್ಲಿಂದೆದ್ದು ಭಗವಾನರಲ್ಲಿಗೆ ಬಂದನು. ಹಾಗು ವಂದಿಸಿ ಒಂದೆಡೆ ಕುಳಿತನು. ಅರಮನೆಯಲ್ಲಿ ನಡೆದುದನ್ನು ಸಂಕ್ಷಿಪ್ತವಾಗಿ ಭಗವಾನರಲ್ಲಿ ತಿಳಿಸಿದನು. ನಂತರ ಹೀಗೆ ಹೇಳಿದನು: ಭಗವಾನ್, ನಾನು ಹೀಗೆ ನುಡಿದುದರಲ್ಲಿ ಭಗವಾನರ ಸತ್ಯದ ಅಪಚಾರವಾಗಲಿ, ಭಗವಾನರು ಹೇಳಿದಂತೆಯೇ ಇದೆಯಲ್ಲವೆ? ಧಮ್ಮಕ್ಕೆ ಅನುಗುಣವಾಗಿಯೇ ಹೇಳಿದ್ದೇನೆಯಲ್ಲವೆ. ನನ್ನ ಹೇಳಿಕೆಯು ನಿವರ್ಿವಾದವಾಗಿದೆಯಲ್ಲವೆ? ಖಂಡಿತವಾಗಿ ಗ್ರಾಮೀಣಿಯೇ, ನೀನು ಹೇಳಿರುವದು ಸತ್ಯಕ್ಕೆ ಅನುಗುಣವಾಗಿದೆ. ನಾನು ಹೇಳಿರುವಂತೆಯೇ ಇದೆ ಹೊರತು ಅಪಚಾರವಾಗಿಲ್ಲ. ನಿನ್ನ ಹೇಳಿಕೆ ಧಮ್ಮಕ್ಕೆ ಅನುಗುಣವಾಗಿದೆ ಹಾಗು ನಿವರ್ಿವಾದವಾಗಿದೆ. ಏಕೆಂದರೆ ಗ್ರಾಮೀಣಿಯೇ ಶಾಕ್ಯಪುತ್ರರಾದ ಭಿಕ್ಷುಗಳು ಚಿನ್ನ-ಬೆಳ್ಳಿಗಳನ್ನು ಒಪ್ಪುವುದಿಲ್ಲ, ಸ್ವೀಕರಿಸುವುದಿಲ್ಲ, ಬದಲಾಗಿ ತೊರೆಯುತ್ತಾರೆ, ತ್ಯಜಿಸುತ್ತಾರೆ. ಯಾರೇ ಆಗಲಿ, ಚಿನ್ನ ಹಾಗು ರಜತವನ್ನು ಸ್ವೀಕರಿಸಬಲ್ಲವನಾದರೆ ಅಂತಹವನು ಪಂಚೇದ್ರಿಯಗಳ ಸುಖವನ್ನು ಸ್ವೀಕಾರ ಮಾಡುತ್ತಾರೆ. ಅಂತಹವನು ಶಾಕ್ಯಪುತ್ರರ ಚಾರಿತ್ರ್ಯವನ್ನು ಹೊಂದಿದವನಾಗಿರುವುದಿಲ್ಲ. ಶಾಕ್ಯಪುತ್ರರ ಹಿಂಬಾಲಕನೂ ಆಗಿರುವುದಿಲ್ಲ. ಮತ್ತೆ ಗ್ರಾಮೀಣಿಯೇ, ನಾನು ಇದನ್ನು ಹೇಳುತ್ತಿದ್ದೇನೆ. ಕಡ್ಡಿಹುಲ್ಲನ್ನು ಹುಡುಕುವವನಿಗೆ ಅಂತಹುದೇ ಹುಲ್ಲು ದೊರೆಯುತ್ತದೆ, ಮರದ ದಿಮ್ಮಿಯನ್ನು ಹುಡುಕುವವನಿಗೆ ಮರದ ದಿಮ್ಮಿಯು ದೊರೆಯುವುದು. ಅದೇರೀತಿ ಬಂಡಿಯನ್ನು ಹುಡುಕುವವನಿಗೆ ಬಂಡಿಯು ಸಿಗುವುದು, ಕೆಲಸಗಾರನನ್ನು ಹುಡುಕುವವನಿಗೆ ಕೆಲಸಗಾರನು ಸಿಗಬಹುದು. ಆದರೆ ರಜತವಾಗಲಿ ಸ್ವರ್ಣವಾಗಲಿ ಸ್ವೀಕಾರ ಮಾಡಲು ಅಥವಾ ಹುಡುಕಲು ಒಪ್ಪಿಗೆ ನೀಡುವುದಿಲ್ಲ. ಅಂತಹ ಯಾವ ವಿಧಾನವನ್ನು ನುಡಿಯುವುದಿಲ್ಲ.


11. ಭದ್ರಕ ಸುತ್ತಂ

363. ಒಮ್ಮೆ ಭಗವಾನರು ಮಲ್ಲರ ನಿಗಮವಾದ ಉರುವೇಲಕಪ್ಪದಲ್ಲಿ ನೆಲೆಸಿದ್ದರು. ಆಗ ಭದ್ರಕನೆಂಬ ಗ್ರಾಮೀಣಿಯು ಭಗವಾನರ ಬಳಿಗೆ ಬಮದನು. ಹಾಗೆ ಬಂದು ವಂದಿಸಿದನು ಹಾಗು ಗೌರವದಿಂದ ಒಂದೆಡೆ ಕುಳಿತನು. ನಂತರ ಹೀಗೆ ನುಡಿದನು: ಭಗವಾನರು ದುಃಖದ ಉದಯ ಹಾಗು ದುಃಖದ ಮರೆಯಾಗುವಿಕೆಯ ಬಗ್ಗೆ ಬೋಧಿಸಲಿ. ಗ್ರಾಮೀಣಿಯೇ, ನಾನು ಭೂತಕಾಲದ ಬಗೆಗಿನ ದುಃಖದ ಉದಯ ಹಾಗು ಮರೆಯಾಗುವಿಕೆಯ ಬಗ್ಗೆ ಭೂತಕಾಲದಲ್ಲಿ ಹೀಗಿತ್ತು ಎಂದು ಹೇಳಿದ್ದರೆ ದ್ವಂದ್ವ ಹಾಗು ಅನಿಧರ್ಾರ ನಿಮ್ಮಲ್ಲಿ ಉದಯಿಸಬಹುದು. ಹಾಗೆಯೇ ನಾನು ಭವಿಷ್ಯಕಾಲದ ಬಗ್ಗೆ ಭವಿಷ್ಯದಲ್ಲಿ ಹೀಗಿರುತ್ತದೆ ಎಂದು ಹೇಳಿದರೆ ದ್ವಂದ್ವ ಹಾಗು ಅದರ ಬಗ್ಗೆ ಅನಿಧರ್ಾರ ನಿಮ್ಮಲ್ಲಿ ಉಂಟಾಗುವುದು. ಅದರ ಬದಲಾಗಿ ಗ್ರಾಮೀಣಿಯೇ, ನಾನು ಇಲ್ಲಿ ಕುಳಿತಿರುವಂತೆಯೇ ಹಾಗು ನೀವು ಇಲ್ಲಿ ಕುಳಿತಿರುವಂತೆಯೇ ನಾನು ನಿಮಗೆ ದುಃಖದ ಸಮುದಯ ಹಾಗು ದುಃಖದ ನಿರೋಧ ಕಲಿಸುತ್ತೇನೆ. ನಾನು ನುಡಿಯುವೆನು ಗಮನವಿಟ್ಟು ಕೇಳಿ. ಹಾಗೇ ಆಗಲಿ ಭಂತೆ ಎಂದು ಭದ್ರಕ ಗ್ರಾಮೀಣಿಯು ಪ್ರತಿಕ್ರಿಯಿಸಿದನು. ಆಗ ಭಗವಾನರು ಹೀಗೆ ಕೇಳಿದರು:
ಇದರ ಬಗ್ಗೆ ಹೇಗೆ ಯೋಚಿಸುತ್ತೀಯೆ ಗ್ರಾಮೀಣಿಯೇ? ಉರುವೇಳಕಪ್ಪದ ನಿವಾಸಿಗಳಿಂದಾಗಿ ಶೋಕವಾಗಲಿ, ಪ್ರಲಾಪವಾಗಲಿ, ನೋವಾಗಲಿ, ಅಸುಖ ಮತ್ತು ನಿರಾಶೆಯು ನಿನ್ನಲ್ಲಿ ಉಂಟಾಗಿರಬಹುದಲ್ಲವೇ? ಉದಾಹರಿಸುವುದಾದರೆ ಅವರಲ್ಲಿ ಕೆಲವರಿಗೆ ಗಲ್ಲಿಗೇರಿಸಿದರೆ, ಬಂಧನಕ್ಕೆ ಒಳಗಾದರೆ, ದಂಡ ವಿಧಿಸಲ್ಪಟ್ಟರೆ ಅಥವಾ ಬಹಿಷ್ಕೃತರಾದರೆ ನಿನ್ನಲ್ಲಿ ದುಃಖವು ಉಂಟಾಗಿರಬಹುದಲ್ಲವೇ? ಹೌದು ಭಂತೆ, ಹಾಗೆ ಆಗಿದೆ, ಅಂತಹ ವ್ಯಕ್ತಿಗಳು ಇದ್ದಾರೆ. ಯಾವ ಕಾರಣಕ್ಕಾಗಿ ಗ್ರಾಮೀಣಿಯೇ, ಕೆಲವರನ್ನು ಗಲ್ಲಿಗೇರಿಸಿದರೆ, ಬಂಧನ ಮಾಡಿದರೆ, ದಂಡ ವಿಧಿಸಿದರೆ ಅಥವಾ ಬಹಿಷ್ಕೃತಗೊಳಿಸಿದರೆ ನಿನ್ನಲ್ಲಿ ದುಃಖ ಪ್ರಲಾಪಗಳು ಉಂಟಾಗುತ್ತವೆ. ಹಾಗೆಯೇ ಉಳಿದವರಿಗೆ ಹಾಗೆ ಮಾಡಿದ್ದರೂ ನಿನ್ನಲ್ಲಿ ಶೋಕ ಪ್ರಲಾಪಗಳು ಉಂಟಾಗಲಿಲ್ಲ. ಅಂತಹ ವ್ಯಕ್ತಿಗಳು ನಿನಗೆ ಪರಿಚಯವಿರಬೇಕಲ್ಲವೇ? ಹೌದು ಭಂತೆ, ಅಂತಹ ವ್ಯಕ್ತಿಗಳೂ ಇದ್ದಾರೆ. ಗ್ರಾಮೀಣಿಯೇ, ಯಾವ ಕಾರಣದಿಂದಾಗಿ ಉರುವೇಲಕಪ್ಪದಲ್ಲಿನ ಕೆಲವರಿಗೆ ಗಲ್ಲಿಗೇರಿಸಿದರೆ, ಬಂಧನ ಮಾಡಿಯೇ ಇನ್ನಿತರರ ಮೇಲೆ ಹಾಗೇಕೆ ಶೋಕ ಇತ್ಯಾದಿಗಳು ಉಂಟಾಗುವುದಿಲ್ಲ? ಭಗವಾನ್ ಉರುವೇಲಕಪ್ಪದ ಯಾರಿಗೆ ಗಲ್ಲು ಉಂಟಾಯಿತೋ ಅಥವಾ ಬಂಧನವಾಯಿತೋ ಅಥವಾ ದಂಡ ವಿಧಿಸಲಾಯಿತೋ ಅಥವಾ ಬಹಿಷ್ಕಾರವಾಯಿತೋ ಅವರ ಬಗ್ಗೆ ನನಗೆ ಶೋಕ ಪ್ರಲಾಪಗಳು ಉಂಟಾಗುವುದಕ್ಕೆ ಕಾರಣವೇನೆಂದರೆ ಆ ವ್ಯಕ್ತಿಗಳಲ್ಲಿ ನನಗೆ ಆಸಕ್ತಿಯಿದೆ, ಅಂಟುವಿಕೆಯಿದೆ, ಅವರನ್ನು ನಾನು ಇಷ್ಟಪಡುತ್ತೇನೆ. ಆದರೆ ಯಾರಲ್ಲಿ ನನಗೆ ಶೋಕ ಪ್ರಲಾಪಗಳು ಉಂಟಾಗಲಿಲ್ಲವೋ ಅಂತಹ ವ್ಯಕ್ತಿಗಳಲ್ಲಿ ನನಗೆ ಆಸಕ್ತಿಯಿಲ್ಲ, ಅಂಟುವಿಕೆಯಿಲ್ಲ ಅವರನ್ನೆಲ್ಲಾ ನಾನು ಇಷ್ಟಪಟ್ಟಿರಲಿಲ್ಲ. ಗ್ರಾಮೀಣಿಯೇ, ಈ ಸರಳ ತತ್ವದಿಂದಾಗಿಯೇ, ಈ ನೇರವಾಗಿ ಕಾಣುವ, ಅರ್ಥವಾಗುವ, ತಕ್ಷಣವೇ ಪ್ರಾಪ್ತಿಯಾಗುವ, ಈ ವಿಧಾನವನ್ನು ಭೂತಕಾಲಕ್ಕೂ ಹಾಗೆಯೇ ಭವಿಷ್ಯದ ಕಾಲಕ್ಕೂ ಅನ್ವಯ ಮಾಡಬಹುದು. ಹೇಗೆಂದರೆ, ಯಾವುದೇ ದುಃಖವು ಹಿಂದೆ ಉಂಟಾಗಿರಲಿ, ಅವೆಲ್ಲವೂ ಆಸೆಯಿಂದಲೇ (ಇಷ್ಟಪಡುವಿಕೆ) ಬೇರೂರಲ್ಪಟ್ಟಿದೆ. ಅದಕ್ಕೆಲ್ಲವೂ ಆಸೆಯೇ ಮೂಲವಾಗಿದೆ. ಆಸೆಯಿಂದಲೇ ದುಃಖ ಉದಯವಾಗುವುದು. ಹಾಗೆಯೇ ಯಾವುದೆಲ್ಲ ದುಃಖವು ಮುಂದೆ ಉಂಟಾಗುವುದು, ಅದೆಲ್ಲವೂ ಆಸೆಯಿಂದಲೇ (ಇಷ್ಟಪಡುವುದರಿಂದಲೇ/ಆಸಕ್ತಿ/ಅಂಟುವಿಕೆ) ಉಂಟಾಗುತ್ತದೆ. ಆಸೆಯೇ ಅದರ ಮೂಲ, ಆಸೆಯೇ ಅದರ ಬೇರು, ಅದರಿಂದಲೇ ಉಂಟಾಗುವಂತಹುದಾಗಿದೆ. ಇದು ಅದ್ಭುತ ಭಂತೆ, ಅತ್ಯಂತ ಆಶ್ಚರ್ಯಕರ ಭಂತೆ. ಭಗವಾನರಿಂದಾಗಿ ಎಷ್ಟು ಚೆನ್ನಾಗಿ ಸತ್ಯವು ಹೊಮ್ಮಿತು. ಯಾವುದೆಲ್ಲವೂ ದುಃಖ ಉದಯಿಸುವುದೋ ಅವೆಲ್ಲವೂ ಆಸೆಯಿಂದಲೇ ಬೇರೂರಲ್ಪಟ್ಟಿದೆ. ಆಸೆಯೇ ಅದರ ಮೂಲ, ಆಸೆಯೇ ಆಧಾರ. ಭಂತೆ ನನಗೆ ಚಿರವಾಸಿ ಎಂಬ ಬಾಲಕನಿದ್ದಾನೆ. ಆತನು ಹೊರಗಡೆ ವಾಸಮಾಡುತ್ತಿದ್ದಾನೆ. ನಾನು ಮುಂಜಾನೆಯೇ ಎದ್ದು ಮನುಷ್ಯನನ್ನು ಕಳುಹಿಸುತ್ತೇನೆ. ಹೋಗು ವ್ಯಕ್ತಿಯೇ, ಹೋಗಿ ಚಿರವಾಸಿ ಹೇಗಿರುವನು ತಿಳದುಬಾ. ಆ ವ್ಯಕ್ತಿಯು ಪುನಃ ಸಂದೇಶ ತರುವವರೆಗೂ ನಾನು ಒತ್ತಡಕ್ಕೆ ಒಳಗಾಗಿರುತ್ತೇನೆ. ಹಾಗೆಯೇ ನನ್ನ ಚಿರವಾಸಿಯು ಯಾವುದೇ ರೋಗಕ್ಕೆ ಒಳಗಾಗದೆಯಿರಲಿ ಎಂದು ಭರವಸೆ ತಾಳುತ್ತಿರುತ್ತೇನೆ.
ಗ್ರಾಮೀಣಿಯೇ, ಇದರ ಬಗ್ಗೆ ಹೇಗೆ ಯೋಚಿಸುವೆ? ಒಂದುವೇಳೆ ಚಿರವಾಸಿಗೆ ದಂಡವಿಧಿಸಿದರೆ, ಅಥವಾ ಬಂಧನಕ್ಕೆ ಒಳಪಡಿಸಿದರೆ ಅಥವಾ ಬಹಿಷ್ಕರಿಸಿದರೆ ಅಥವಾ ಗಲ್ಲಿಗೇರಿಸದರೆ ನಿನ್ನಲ್ಲಿ ಶೋಕ, ನೋವು, ನಿರಾಶೆ, ಪ್ರಲಾಪದಿಗಳು ಉಂಟಾಗುವುವು ಅಲ್ಲವೇ? ಭಗವಾನ್ ಒಂದುವೇಳೆ ಚಿರವಾಸಿಗೆ ದಂಡವಿಧಿಸಿದರೆ ಅಥವಾ ಬಂಧನಕ್ಕೆ  ಒಳಗಾದರೆ ಅಥವಾ ಬಹಿಷ್ಕರಿಸಿದರೆ ಅಥವಾ ಗಲ್ಲಿಗೇರಿಸಿದರೆ ಹೇಗೆತಾಎ ನನ್ನಲ್ಲಿ ಶೋಕ ಪ್ರಲಾಪಾದಿಗಳು ಉಂಟಾಗಲಾರವು? ಖಂಡಿತವಾಗಿ ಅತಿಯಾದ ಶೋಕ ಉಂಟಾಗಿ ನನ್ನ ಜೀವನವೇ ಅಸ್ತವ್ಯಸ್ತವಾಗಬಹುದು. ಇದೇರೀತಿಯಾಗಿ ಗ್ರಾಮೀಣಿಯೇ, ನೀನು ಅಥರ್ೈಸಿಕೊಳ್ಳಬೇಕು, ಯಾವುವೆಲ್ಲವೂ ದುಃಖ ಉದಯಿಸಿದರೆ ಅದರ ಮೂಲವು ಆಸೆಯೇ ಆಗಿರುತ್ತದೆ. ಆಸೆಯೇ ಅದರ ಮೂಲವಾಗಿರುತ್ತದೆ. ದುಃಖವು ಆಸೆಯಿಂದಲೇ ಬೇರೂರಲ್ಪಟ್ಟಿರುತ್ತದೆ.
ಇದರ ಬಗ್ಗೆ ಏನು ಯೋಚಿಸುವೆ ಗ್ರಾಮೀಣಿಯೇ? ಚಿರವಾಸಿಯ ತಾಯಿಯನ್ನು ನೋಡುವ ಅಥವಾ ಆಕೆಯ ಬಗ್ಗೆ ಕೇಳುವ ಮುನ್ನ ನಿನಗೆ ಆಕೆಯ ಬಗ್ಗೆ ಆಸೆಯಾಗಲಿ, ಆಸಕ್ತಿಯಾಗಲಿ, ಪ್ರೇಮವಾಗಲಿ ಇತ್ತೆ? ಇಲ್ಲ ಭಂತೆ ಹಾಗಾದರೆ ಗ್ರಾಮೀಣಿಯೇ ಆಕೆಯನ್ನು ನೋಡಿದ್ದರಿಮದಲೇ ಅಥವಾ ಆಕೆಯ ಕುರಿತು ಕೇಳಿದ್ದರಿಂದಲೇ ಆಕೆಯ ಬಗ್ಗೆ ಆಸೆಯು, ಆಸಕ್ತಿಯು ಹಾಗು ಪ್ರೇಮವು ನಿನ್ನಲ್ಲಿ ಉಂಟಾಯಿತು ಅಲ್ಲವೆ? ಹೌದು ಭಂತೆ ಇದರ ಕುರಿತು ಹೇಗೆ ಯೋಚಿಸುವೆ ಗ್ರಾಮೀಣಿಯೇ? ಒಂದುವೇಳೆ ಚಿರವಾಸಿಯ ತಾಯಿಗೆ ಗಲ್ಲು ನೀಡಿದರೆ, ಬಂಧನಕ್ಕೊಳಪಡಿಸಿದರೆ, ದಂಡ ವಿಧಿಸಿದರೆ ಅಥವಾ ಬಹಿಷ್ಕರಿಸಿದರೆ ನಿನ್ನಲ್ಲಿ ಶೋಕವು, ಪ್ರಲಾಪವು, ನೋವು, ದುಃಖವು ಎಲ್ಲಾ ಉದಯಿಸುವುದು ಅಲ್ಲವೇ? ಭಂತೆ, ಒಂದುವೇಳೆ ಚಿರವಾಸಿಯು ತಾಯಿಗೆ ಗಲ್ಲು ನೀಡಿದರೆ, ಬಂಧನಕ್ಕೆ ಒಳಪಡಿಸಿದರೆ, ದಂಡ ವಿಧಿಸಿದರೆ ಅಥವಾ ಬಹಿಷ್ಕರಿಸಿದರೆ ಹೇಗೆತಾನೆ ನನ್ನಲ್ಲಿ ದುಃಖವಾಗಲಿ, ಶೋಕವಾಗಿ, ಪ್ರಲಾಪವಾಗಲಿ ಉಂಟಾಗದೆ ಇರಲು ಸಾಧ್ಯ?
ಈ ರೀತಿಯಾಗಿಯೇ ಗ್ರಾಮೀಣಿಯೇ, ಇದನ್ನು ಹೀಗೆ ಅರ್ಥ ಮಾಡಿಕೊಳ್ಳುವುದು. ಹೇಗೆಂದರೆ ಯಾವುದೆಲ್ಲಾ ದುಃಖವು ಉದಯಿಸುತ್ತದೋ,
ಅದೆಲ್ಲವೂ ಆಸೆಯಿಂದ ಬೇರೂರಲ್ಪಟ್ಟಿರುತ್ತದೆ, ಆಸೆಯೇ ಅದರ ಮೂಲ, ದುಃಖಗಳಿಗೆಲ್ಲ ಆಸೆಯೇ ಕಾರಣ.


12. ರಾಸಿಯ ಸುತ್ತಂ

364. ರಾಸಿಯ ಗ್ರಾಮೀಣಿಯು ಭಗವಾನರ ಬಳಿಗೆ ಸಮೀಪಿಸಿ ವಂದಿಸಿದನು. ನಂತರ ಒಂದೆಡೆ ಕುಳಿತು ಹೀಗೆ ಹೇಳಿದನು: ಭಂತೆ, ನಾನು ಹೀಗೆ ಕೇಳಿದ್ದೇನೆ, ಏನೆಂದರೆ ಸಮಣ ಗೋತಮರು ಎಲ್ಲಾ ಬಗೆಯ ತಪಸ್ಸುಗಳನ್ನು ಟೀಕಿಸುವರು. ಅವರು ಒರಟಾಗಿ ಜೀವಿಸುತ್ತಿರುವ ತಾಪಸಿಗಳನ್ನು ಖಂಡಿಸುವರು ಹಾಗು ನಿಂದಿಸುವರು. ಭಂತೆ ಯಾರೆಲ್ಲಾ ಹೀಗೆ ಹೇಳುತ್ತಿರುವವರೋ ಅವರು ಭಗವಾನರನ್ನು ಮಿಥ್ಯವಾಗಿ ಬಿಂಬಿಸುತ್ತಿರುವವರೇ, ಸತ್ಯಕ್ಕೆ ಅಪಚಾರ ಮಾಡುತ್ತಿರುವವರೇ ಅಥವಾ ಅವರು ಧಮ್ಮಕ್ಕೆ ಅನುಸಾರವಾಗಿಯೇ ನುಡಿಯುತ್ತಿರುವರೇ? ಹೀಗಾಗಿ ಈ ತೆರೆದ ಟೀಕೆಯಿಂದಾಗಿ ಅಂತಹ ಪರಿಣಾಮವನ್ನು ಪಡೆಯುವುದಿಲ್ಲವೇ? ಗ್ರಾಮೀಣಿಯೇ, ಯಾರೆಲ್ಲಾ ಹೀಗೆ ನುಡಿಯುತ್ತಿರುವರೋ ಅವರು ನನ್ನನ್ನು ಸುಳ್ಳಿನಿಂದ ಮಿಥ್ಯವಾಗಿ ಬಿಂಬಿಸುತ್ತಿದ್ದಾರೆ.
ಗ್ರಾಮೀಣಿಯೇ, ಎರಡುಬಗೆಯ ಅತಿರೇಕಗಳಿವೆ. ಅವನ್ನು ಗೃಹವನ್ನು ತೊರೆದಂತಹ ಪರಮಾಥರ್ಿಯು ಅಳವಡಿಸಬಾರದು. ಅವೆಂದರೆ, ಇಂದ್ರೀಯ ಸುಖಾಭಿಲಾಷೆಗಳ ಹಿಂದೆ ಹೋಗುವುದು. ಅವು ಹೀನವಾದವು, ಅಸಹ್ಯಕರವಾದುದು, ಪ್ರಾಪಂಚಿಕವಾದವು, ಶ್ರೇಷ್ಠವಲ್ಲದ್ದು, ಅನರ್ಥಕಾರಿಯಾದುದು. ಮತ್ತೊಂದು ಯಾವುದೆಂದರೆ, ದೇಹದಂಡನೆ. ಅದು ನೋವು ತರುವಂತಹುದು, ಶ್ರೇಷ್ಠವಲ್ಲದ್ದು, ಅನರ್ಥಕಾರಿಯೂ ಆಗಿದೆ. ಈ ಎರಡು ಅತಿರೇಕಗಳನ್ನು ಮೀರಿದಂತಹ ಮಧ್ಯಮ ಮಾರ್ಗದಲ್ಲಿ ತಥಾಗತರು (ಶೋಧಿಸಿ, ಸಾಧಿಸಿ ಜೀವಿಸುತ್ತಿದ್ದಾರೆ) ಜ್ಞಾನೋದಯ ಸಾಧಿಸುತ್ತಾರೆ. ಈ ಮಹೋನ್ನತ ಮಧ್ಯಮ ಮಾರ್ಗವು ದರ್ಶನ ನೀಡುತ್ತದೆ, ಜ್ಞಾನವನ್ನು ನೀಡುತ್ತದೆ, ಶಾಂತಿಯನ್ನು ನೀಡುತ್ತದೆ, ಅಭಿಜ್ಞಾವನ್ನು ನೀಡುತ್ತದೆ, ಬೋಧಿಯನ್ನು ನೀಡುತ್ತದೆ ಹಾಗು ನಿಬ್ಬಾಣವನ್ನು ನೀಡುತ್ತದೆ. ಹೀಗೆ ದರ್ಶನ, ಜ್ಞಾನ, ಶಾಂತಿ, ಅಭಿಜ್ಞಾ, ಬೋಧಿ ಹಾಗು ನಿಬ್ಬಾಣ ನೀಡುವಂತಹ ಮಧ್ಯಮ ಮಾರ್ಗ ಯಾವುದು? ಅದೇ ಆರ್ಯರ ಅಷ್ಠಾಂಗ ಮಾರ್ಗ. ಅವೆಂದರೆ, ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಚಾ, ಸಮ್ಯಕ್ ಕರ್ಮ, ಸಮ್ಯಕ್ ಜೀವನ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಹಾಗು ಸಮ್ಯಕ್ ಸಮಾಧಿ. ಈ ಮಧ್ಯಮ ಮಾರ್ಗವು ತಥಾಗತರಿಗೆ ಜ್ಞಾನೋದಯವನ್ನು ನೀಡಿದೆ, ದರ್ಶನವನ್ನು, ಜ್ಞಾನ, ಶಾಂತಿ, ಸಂಬೋಧಿ ಹಾಗು ನಿಬ್ಬಾಣವನ್ನು ನೀಡಿದೆ.
ಗ್ರಾಮೀಣಿಯೇ, ಮೂರು ಬಗೆಯ ವ್ಯಕ್ತಿಗಳು ಈ ಲೋಕದಲ್ಲಿ ಇಂದ್ರೀಯ ಸುಖಭೋಗಗಳನ್ನು ಅನುಭವಿಸುತ್ತಾರೆ. ಯಾರವರು ಮೂರು ಬಗೆಯ ವ್ಯಕ್ತಿಗಳು? ಇಲ್ಲಿ ಗ್ರಾಮೀಣಿಯೇ, ಒಬ್ಬನು ಇಂದ್ರಿಯ ಸುಖ ಭೋಗಗಳನ್ನು ಅನುಭವಿಸುವುದಕ್ಕಾಗಿ, ಐಶ್ವರ್ಯ ಪ್ರಾಪ್ತಿಗಾಗಿ ಹಿಂಸಾಯುತ ಹಾಗು (ಅಧರ್ಮದ) ಅನ್ಯಾಯದ ಮಾರ್ಗವನ್ನು ಹಿಡಿಯುತ್ತಾನೆ. ಹೀಗೆ ಮಾಡಿಯು ಆತನು ಅದರಿಂದಾಗಿ ಸುಖಿಯಾಗಿ ಆನಂದವಾಗಿ ಇರಲಾರನು. ಹಾಗೆಯೇ ಆ ಐಶ್ವರ್ಯವಾಗಲಿ ಅಥವಾ ಸುಖಭೋಗ ಪರರಲ್ಲಿ ಹಂಚಿಕೊಳ್ಳಲಾರ, ದಾನವನ್ನು ಮಾಡಲಾರ, ಪುಣ್ಯವನ್ನು ಆಚರಿಸಲಾರ.
ಇಲ್ಲಿ ಗ್ರಾಮೀಣಿಯೇ, ಇನ್ನೊಬ್ಬನು ಇಂದ್ರಿಯ ಭೋಗಕ್ಕಾಗಿ ಅಧರ್ಮದ ಹಾಗು ಹಿಂಸಾಚಾರದ ಮಾರ್ಗವನ್ನು ಹಿಡಿಯುತ್ತಾನೆ. ಹಾಗೆ ಮಾಡಿಯೂ ಸಹಾ ಆತನು ತನ್ನನ್ನು ಸುಖವಾಗಿ ಇರುವಂತೆ ನೋಡಿಕೊಳ್ಳುತ್ತಾನೆ. ಆದರೆ ಈತನು ಸಹಾ ಐಶ್ವರ್ಯವಾಗಲಿ ಅಥವಾ ಸುಖಭೋಗವಾಗಲಿ ಪರರಲ್ಲಿ ಹಂಚಲಾರ, ದಾನವನ್ನು ಮಾಡಲಾರ, ಪುಣ್ಯವನ್ನು ಆಚರಿಸಲಾರ.
ನಂತರ ಗ್ರಾಮೀಣಿಯೇ, ಇಲ್ಲಿ ಮತ್ತೊಬ್ಬನು ಇಂದ್ರಿಯ ಭೋಗಕ್ಕಾಗಿ ಅಧರ್ಮದ ಹಾಗು ಹಿಂಸಾಚಾರದ ಮಾರ್ಗದಿಂದಾಗಿ ಐಶ್ವರ್ಯ ಗಳಿಸುತ್ತಾನೆ. ಹಾಗೆ ಮಾಡಿಯೂ ಸಹಾ ಆತನು ತನ್ನನ್ನು ಸುಖವಾಗಿ ಇರುವಂತೆ ನೋಡಿಕೊಳ್ಳುತ್ತಾನೆ, ಹಾಗೆಯೇ ಆತನು ಪರರಲ್ಲಿಯು (ಐಶ್ವರ್ಯ ಹಾಗು ಸುಖವನ್ನು) ಹಂಚಿಕೊಳ್ಳುತ್ತಾನೆ, ಪುಣ್ಯಕರ್ಮಗಳನ್ನು ಮಾಡುತ್ತಾನೆ.
ನಂತರ ಗ್ರಾಮೀಣಿಯೇ, ಇಲ್ಲಿ ಇಂದ್ರಿಯ ಸುಖಗಳಲ್ಲಿ ಆನಂದಿಸುವವನೊಬ್ಬನು ಐಶ್ವರ್ಯಕ್ಕಾಗಿ ಧಾಮರ್ಿಕವಾಗಿಯು ಹಾಗು ಅಧಾಮರ್ಿಕವಾಗಿಯು, ಹಿಂಸಾರಹಿತವಾಗಿಯು, ಹಿಂಸಾಸಹಿತವಾಗಿಯು ಇದ್ದು ಸಂಪಾದನೆ ಮಾಡುತ್ತಾನೆ. ಹೀಗೆ ಮಾಡಿಯು ಸಹಾ ಆತನು ಅದರಿಂದಾಗಿ ಸುಖಪಡಲಾರ, ಹಾಗೆಯೇ ಆತನು ಪರರಲ್ಲಿಯೂ ಹಂಚಲಾರ, ಪುಣ್ಯಕರ್ಮಗಳನ್ನು ಆಚರಿಸಲಾರನು.
ನಂತರ ಗ್ರಾಮೀಣಿಯೇ, ಇಲ್ಲಿ ಇಂದ್ರಿಯ ಸುಖಗಳಲ್ಲಿ ಆನಂದಿಸುವವನೊಬ್ಬನು ಐಶ್ವರ್ಯಕ್ಕಾಗಿ ಧಾಮರ್ಿಕವಾಗಿಯು ಹಾಗು ಅಧಾಮರ್ಿಕವಾಗಿಯು, ಹಿಂಸಾಯುತವಾಗಿಯು ಹಾಗು ಹಿಂಸಾರಹಿತವಾಗಿಯು ಇದ್ದು ಸಂಪಾದನೆ ಮಾಡುತ್ತಾನೆ. ಹೀಗೆ ಮಾಡಿಯೂ ಸಹಾ ಆತನು ತನ್ನನ್ನು ಸುಖಿಯಾಗಿರುವಂತೆ ನೋಡಿಕೊಳ್ಳುತ್ತಾನೆ. ಹಾಗೆಯೇ ಆತನು ಪರರಲ್ಲಿಯೂ ಹಂಚುತ್ತಾ, ಪುಣ್ಯಗಳನ್ನು ಆಚರಿಸುತ್ತಾನೆ.
ನಂತರ ಗ್ರಾಮೀಣಿಯೇ, ಇಲ್ಲೊಬ್ಬನು ಇಂದ್ರಿಯ ಸುಖಗಳಲ್ಲಿ ಆನಂದಿಸುತ್ತಾ ಐಶ್ವರ್ಯವನ್ನು ಧಾಮರ್ಿಕವಾಗಿ ಹಾಗು ಹಿಂಸಾರಹಿತವಾಗಿಯೇ ಸಂಪಾದಿಸುತ್ತಾನೆ. ಆದರೆ ಹಾಗೆ ಮಾಡಿಯೂ ಸಹಾ ಆತನು ತನ್ನನ್ನು ಸುಖಿಯಾಗಿಡಲಾರ ಹಾಗೆಯೇ ಪರರಿಗೆ ಹಂಚಲಾರ, ಪುಣ್ಯವನ್ನು ಆಚರಿಸಲಾರನು.
ನಂತರ ಗ್ರಾಮೀಣಿಯೇ, ಇಲ್ಲೊಬ್ಬನು ಇಂದ್ರೀಯ ಸುಖಗಳಲ್ಲಿ ಆನಂದಿಸುತ್ತಾ ಐಶ್ವರ್ಯವನ್ನು ಧಾಮರ್ಿಕವಾಗಿ ಹಾಗು ಹಿಂಸಾರಹಿತವಾಗಿಯೇ ಸಂಪಾದಿಸುತ್ತಾನೆ. ಹಾಗೆಯೇ ತನ್ನನ್ನು ಸುಖಿಯಾಗಿರುವಂತೆ ನೋಡಿಕೊಳ್ಳುತ್ತಾನೆ. ಆದರೆ ಪರರಿಗೆ ಹಂಚಲಾರ, ಹೀಗೆ ಪುಣ್ಯವನ್ನು ಆಚರಿಸಲಾರನು.
ನಂತರ ಗ್ರಾಮೀಣಿಯೇ, ಇಲ್ಲೊಬ್ಬನು ಇಂದ್ರಿಯ ಸುಖಗಳಲ್ಲಿ ಆನಂದಿಸುತ್ತಾ, ಐಶ್ವರ್ಯವನ್ನು ಧಾಮರ್ಿಕವಾಗಿ ಹಾಗು ಹಿಂಸಾರಹಿತವಾಗಿ ಸಂಪಾದಿಸುತ್ತಾನೆ. ಹೀಗೆ ಮಾಡುತ್ತಾ ಆತನು ತನ್ನನ್ನು ಸುಖಿಯಾಗಿರುವಂತೆ ನೋಡಿಕೊಳ್ಳುತ್ತಾನೆ. ಹಾಗೆಯೇ ಆತನು ಪರರಲ್ಲಿಯೂ ಹಂಚುತ್ತಾನೆ, ಪುಣ್ಯಗಳಿಕೆ ಮಾಡುತ್ತಾನೆ. ಆದರೆ ಆತನು ಐಶ್ವರ್ಯದ ಬಳಕೆ ಮಾಡುತ್ತಾ ಅದಕ್ಕೆ ಬಂಧಿತನಾಗುತ್ತಾನೆ, ಇಷ್ಟಪಡುತ್ತಾನೆ. ಅಂಧನಾಗಿ ಅದರಲ್ಲೇ ತಲ್ಲೀನನಾಗುತ್ತಾನೆ. ಅದರ ಅಪಾಯಗಳನ್ನು ಕಾಣಲಾರನು. ಹಾಗೆಯೇ ಅದರಿಂದ ಹೊರಬರುವಿಕೆಯನ್ನು ಅರಿಯಲಾರನು.
ನಂತರ ಗ್ರಾಮೀಣಿಯೇ, ಮತ್ತೊಬ್ಬನು ಇಂದ್ರೀಯ ಸುಖಗಳಲ್ಲಿ ತಲ್ಲೀನನಾಗಿದ್ದರೂ ಸಹಾ ಐಶ್ವರ್ಯವನ್ನು ಧಾಮರ್ಿಕವಾಗಿ ಹಾಗು ಹಿಂಸಾರಹಿತವಾಗಿಯೇ ಸಂಪಾದಿಸುತ್ತಾನೆ. ಹೀಗೆ ಮಾಡುತ್ತಾ ತನ್ನನ್ನು ಸುಖವಾಗಿರುವಂತೆ ನೋಡಿಕೊಳ್ಳುತ್ತಾನೆ. ಹಾಗೆಯೇ ಪರರಲ್ಲಿಯೂ ಹಂಚುತ್ತಾನೆ. ಹೀಗೆ ಮಾಡುತ್ತಾ ಪುಣ್ಯಾರ್ಚನೆ ಗಳಿಸುತ್ತಾನೆ. ಆದರೂ ಸಹಾ ಆತನು ಐಶ್ವರ್ಯ ಬಂಧಿತನಾಗಲಾರ, ಅದನ್ನೇ ಇಷ್ಟಪಡಲಾರ. ಹಾಗೆಯೇ ಅದರಲ್ಲೇ ತಲ್ಲೀನನಾಗಲಾರನು. ಆತನಿಗೆ ಐಶ್ವರ್ಯದ ಅಪಾಯದ ಅರಿವು ಇರುತ್ತದೆ. ಹಾಗೆಯೇ ಹೊರಬರುವ ಮಾರ್ಗವೂ ತಿಳಿದಿರುತ್ತದೆ.
ಅಲ್ಲ ಗ್ರಾಮೀಣಿಯೇ, ಯಾರು ಇಂದ್ರೀಯ ಭೋಗವನ್ನು ಅನುಭವಿಸುತ್ತಿರುವನೋ ಹಾಗು ಐಶ್ವರ್ಯವನ್ನು ಅಧಾಮರ್ಿಕವಾಗಿ ಹಾಗು ಹಿಂಸೆಯಿಂದ ಸಂಪಾದಿಸಿಯು ತನ್ನನ್ನು ಸುಖಿಯಾಗಿಡದೆ, ಹಾಗೆಯೇ ಪರರಲ್ಲಿ ಹಂಚಲಾರದವನು ಪುಣ್ಯಾರ್ಜನೆ ಮಾಡದವನು ಮೂರು ರೀತಿಯಲ್ಲಿ ಟೀಕೆಗೆ ಒಳಗಾಗುತ್ತಾನೆ. ಈತನು ಅನ್ಯಾಯದ ಹಾಗು ಹಿಂಸಾ ಮಾರ್ಗದಲ್ಲಿ ಸಂಪಾದಿಸುತ್ತಿದ್ದಾನೆ, ಇದು ಮೊದಲ ಟೀಕೆಯಾಗಿದೆ. ಈತನು ಸಂಪಾದಿಸಿಯು ತನ್ನನ್ನು ಸುಖಿಯಾಗಿಡುತ್ತಿಲ್ಲ ಹಾಗು ಸೌಖ್ಯದಲ್ಲಿ ಇಲ್ಲ, ಇದು ಎರಡನೆಯ ಟೀಕೆಯಾಗಿದೆ. ಈತನು ಪರರಲ್ಲಿ ಹಂಚಿಲ್ಲ, ಪುಣ್ಯವನ್ನು ಆಚರಿಸಿಲ್ಲ, ಇದು ಮೂರನೆಯ ಟೀಕೆಯಾಗಿದೆ. ಈ ಮೂರು ನೆಲೆಗಳ ಆಧಾರದ ಮೇಲೆ ಆತನಿಗೆ ಟೀಕಿಸುವರು.
ಅಲ್ಲಿ ಗ್ರಾಮೀಣಿಯೇ, ಯಾರು ಇಂದ್ರೀಯ ಭೋಗವನ್ನು ಅನುಭವಿಸುತ್ತಾ ಅದಕ್ಕಾಗಿ ಐಶ್ವರ್ಯವನ್ನು ಅಧಾಮರ್ಿಕವಾಗಿ ಹಾಗು ಹಿಂಸಾತ್ಮಕವಾಗಿ ಹುಡುಕಾಡುವನೋ ಅದರಿಂದಾಗಿ ತಾನು ಸುಖಿಯಾಗಿರುವಂತೆ ನೋಡಿಕೊಂಡರೂ ಪರರಿಗೆ ಹಂಚದೆ ಇರುವುದರಿಂದಾಗಿ ಎರಡು ರೀತಿಯಲ್ಲಿ ನಿಂದನೆಗೆ ಒಳಗಾಗುತ್ತಾನೆ. ಹಾಗು ಒಂದು ವಿಧವಾಗಿ ಪ್ರಶಂಸೆಗೆ ಪಾತ್ರನಾಗುತ್ತಾನೆ. ಆತನು ಹೀಗೆ ನಿಂದನೆಗೆ ಒಳಪಡುತ್ತಾನೆ. ಈತನು ಐಶ್ವರ್ಯವನ್ನು ಅಧಾಮರ್ಿಕವಾಗಿ ಹಾಗು ಹಿಂಸಾತ್ಮಕವಾಗಿ ಸಂಪಾದಿಸುತ್ತಾನೆ ಹಾಗು ಈತನು ಪರರಿಗೆ ಹಂಚಲಾರ, ಪುಣ್ಯಾರ್ಜನೆ ಮಾಡುವುದಿಲ್ಲ. ಹಾಗು ಆತನು ಪ್ರಶಂಸೆಗೆ ಹೀಗೆ ಒಳಗಾಗುತ್ತಾನೆ. ಆತನು ಹೇಗೆ ಸಂಪಾದಿಸಲಿ, ತನ್ನನ್ನು ಸುಖಿಯಾಗಿ ಹಾಗು ಸೌಖ್ಯವಾಗಿರುವಂತೆ ನೋಡಿಕೊಳ್ಳುತ್ತಾನೆ. ಹೀಗೆ ಇಂದ್ರಿಯ ಭೋಗಿಯು ಎರಡು ವಿಧದಲ್ಲಿ ಟೀಕಿಸಲ್ಪಟ್ಟು ಹಾಗು ಒಂದು ವಿಧದಲ್ಲಿ ಸ್ತುತಿಗೊಳ್ಳುತ್ತಾನೆ.
ಇಲ್ಲಿ ಗ್ರಾಮೀಣಿಯೇ, ಒಬ್ಬನು ಇಂದ್ರಿಯ ಭೋಗವನ್ನು ಅನುಭವಿಸುತ್ತಾ ಅದಕ್ಕಾಗಿ ಐಶ್ವರ್ಯವನ್ನು ಅಧಾಮರ್ಿಕವಾಗಿ ಹಾಗು ಹಿಂಸಾತ್ಮಕವಾಗಿ ಹುಡುಕಾಡುತ್ತಾ ತನ್ನನ್ನು ಸುಖಿಯಾಗಿ ಹಾಗು ಸೌಖ್ಯವಾಗಿರುವಂತೆ ನೋಡಿಕೊಂಡು ಹಾಗೆಯೇ ಪರರಲ್ಲಿಯೂ ಹಂಚುತ್ತಾ ಪುಣ್ಯವನ್ನು ಗಳಿಸುತ್ತಾನೆ. ಹೀಗಿರುವ ಆತನು ಒಂದು ನೆಲೆಯಲ್ಲಿ ಟೀಕೆಗೆ ಒಳಗಾದರೂ ಎರಡು ವಿಧದಲ್ಲಿ ಪ್ರಶಂಸೆಗೆ ಪಾತ್ರನಾಗುತ್ತಾನೆ. ಯಾವ ನೆಲೆಯಲ್ಲಿ ಆತನು ಆತನ ಟೀಕೆಗೆ ಗುರಿಯಾಗುತ್ತಾನೆ? ಆತನು ಐಶ್ವರ್ಯವನ್ನು ಅಧಾಮರ್ಿಕವಾಗಿ ಹಾಗು ಹಿಂಸಾತ್ಮಕವಾಗಿ ಸಂಪಾದಿಸುತ್ತಿದ್ದಾನೆ. ಈ ನೆಲೆಯಲ್ಲಿ ಆತನು ಟೀಕೆಗೆ ಗುರಿಯಾಗುತ್ತಾನೆ. ಹಾಗು ಯಾವ ಎರಡು ವಿಧದ ನೆಲೆಯಲ್ಲಿ ಆತನು ಪ್ರಶಂಸೆಗೆ ಪಾತ್ರನಾಗುತ್ತಾನೆ? ಆತನು ತನ್ನನ್ನು ಸುಖಿಯಾಗಿರುವಂತೆ ಹಾಗು ಸೌಖ್ಯವಾಗಿರುವಂತೆ ನೋಡಿಕೊಳ್ಳುತ್ತಿದ್ದಾನೆ ಇದು ಮೊದಲನೆಯದಾಗಿದೆ. ಆತನು ಹಂಚುತ್ತಾನೆ ಮತ್ತು ಪುಣ್ಯವನ್ನು ಗಳಿಸುತ್ತಾನೆ. ಇದು ಪ್ರಶಂಸೆಗೆ ಪಾತ್ರವಾಗಿರುವ ಎರಡನೆಯ ಆಧಾರವಾಗಿದೆ. ಹೀಗೆ ಎರಡು ವಿಧದಲ್ಲಿ ಪ್ರಶಂಸಿತನಾಗಿ ಹಾಗು ಒಂದು ವಿಧದಲ್ಲಿ ಟೀಕೆಗೆ ಒಳಗಾಗುವ ಇಂದ್ರೀಯ ಭೋಗಿಯು ಇರುತ್ತಾನೆ.
ಇಲ್ಲಿ ಗ್ರಾಮೀಣಿಯೇ, ಒಬ್ಬನು ಇಂದ್ರೀಯ ಭೋಗವನ್ನು ಅನುಭವಿಸುತ್ತಾ ಅದಕ್ಕಾಗಿ ಐಶ್ವರ್ಯವನ್ನು ಧಾಮರ್ಿಕವಾಗಿ ಹಾಗು ಅಧಾಮರ್ಿಕವಾಗಿಯು ಹಾಗೆಯೇ ಹಿಂಸಾತ್ಮಕವಾಗಿ ಹಾಗೆಯೇ ಅಹಿಂಸಾತ್ಮಕವಾಗಿ ಹುಡುಕಾಡುತ್ತಾ, ನಂತರ ತನ್ನನ್ನು ಸುಖಿಯಾಗಿಟ್ಟುಕೊಳ್ಳಲಾಗದೆ, ಸೌಖ್ಯವಾಗಿಟ್ಟುಕೊಳ್ಳಲಾಗದೆ, ಹಾಗೆಯೇ ಪರರಲ್ಲೂ ಹಂಚದೆ ಹೋದಾಗ, ಪುಣ್ಯವನ್ನು ಆಚರಿಸದೆ ಹೋದಾಗ ಆತನು ಒಂದು ನೆಲೆಯಲ್ಲಿ ಪ್ರಶಂಸಿತನಾಗುತ್ತಾನೆ ಹಾಗು ಮೂರು ನೆಲೆಗಳಲ್ಲಿ ಟೀಕೆಗೆ ಒಳಗಾಗುತ್ತಾನೆ. ಆತನು ಯಾವ ನೆಲೆಯಲ್ಲಿ ಪ್ರಶಂಸಿತನಾಗುತ್ತಾನೆ? ಆತನು ಐಶ್ವರ್ಯವನ್ನು ಧಾಮರ್ಿಕವಾಗಿಯು ಹಿಂಸೆಯಿಲ್ಲದೆಯು ಸಂಪಾದಿಸುತ್ತಾನೆ. ಹಾಗು ಯಾವ ಮೂರು ನೆಲೆಯಿಂದಾಗಿ ಖಂಡನೆಗೆ ಒಳಗಾಗುತ್ತಾನೆ? ಆತನು ಐಶ್ವರ್ಯವನ್ನು ಅಧಾಮರ್ಿಕವಾಗಿಯು ಹಾಗು ಹಿಂಸಾತ್ಮಕವಾಗಿಯು ಸಂಪಾದಿಸುವನು. ಇದು ಆತನ ಖಂಡನೆಗೆ ಮೊದಲ ನೆಲೆಯಾಗಿದೆ. ಆತನು ಈ ರೀತಿ ಸಂಪಾದಿಸುತ್ತಾ ತನ್ನನ್ನು ಸುಖಿಯಾಗಿ ಹಾಗು ಸೌಖ್ಯವಾಗಿ ಇಟ್ಟುಕೊಳ್ಳಲಾರದೆ ಹೋಗಿದ್ದಾನೆ. ಇದು ಆತನ ಖಂಡನೆಗೆ ಎರಡನೆಯ ನೆಲೆಯಾಗಿದೆ. ಆತನು ಪರರಲ್ಲಿ ಹಂಚದೆ ಹೋಗಿದ್ದಾನೆ, ಹಾಗು ಪುಣ್ಯವನ್ನು ಆಚರಿಸದೆ ಹೋಗಿದ್ದಾನೆ ಇದು ಖಂಡನೆಗೆ ಇರುವಂತಹ ಮೂರನೆಯ ನೆಲೆಯಾಗಿದೆ. ಈ ರೀತಿಯಾಗಿ ಇಂದ್ರೀಯ ಭೋಗಿಯು ಒಂದು ಬಗೆಯಲ್ಲಿ ಸ್ತುತಿಸಲ್ಪಟ್ಟು ಮೂರು ಬಗೆಯಲ್ಲಿ ಖಂಡಿಸಲ್ಪಡುತ್ತಾನೆ.
ನಂತರ ಗ್ರಾಮೀಣಿಯೇ, ಯಾರು ಇಂದ್ರೀಯ ಭೋಗಗಳನ್ನು ಅನುಭವಿಸುತ್ತಾ ಅದಕ್ಕಾಗಿ ಐಶ್ವರ್ಯವನ್ನು ಧಾಮರ್ಿಕವಾಗಿಯು ಹಾಗು ಅಧಾಮರ್ಿಕವಾಗಿಯು ಹಾಗು ಅಹಿಂಸಾತ್ಮಕವಾಗಿಯು ಸಂಪಾದಿಸುತ್ತಾನೋ ಅಂತಹವನು ಹೀಗೆ ಸಂಪಾದಿಸಿದ ನಂತರ ತನ್ನನ್ನು ಸುಖಿಯಾಗಿಟ್ಟುಕೊಳ್ಳವನು ಹಾಗು ಸೌಖ್ಯದಿಂದಿರುವವನು. ಆದರೆ ಆತನು ಪರರಲ್ಲಿ ಐಶ್ವರ್ಯ ಹಂಚಲಾರ, ಪುಣ್ಯವನ್ನು ಆಚರಿಸಲಾರನು. ಇಂತಹ ವ್ಯಕ್ತಿಯು ಎರಡು ನೆಲೆಗಳಲ್ಲಿ ಸ್ತುತಿ ಗಳಿಸುತ್ತಾನೆ ಹಾಗು ಎರಡು ವಿಧದಲ್ಲಿ ಖಂಡಿಸಲ್ಪಡುತ್ತಾನೆ. ಯಾವ ನೆಲೆಯಲ್ಲಿ ಆತನು ಎರಡು ವಿಧವಾಗಿ ಸ್ತುತಿ ಗಳಿಸುತ್ತಾನೆ. ಯಾವುವೆಂದರೆ: ಆತನು ಧಾಮರ್ಿಕವಾಗಿಯು ಐಶ್ವರ್ಯ ಗಳಿಸುತ್ತಾನೆ ಹಾಗು ಅಹಿಂಸಾತ್ಮಕವಾಗಿಯು ಐಶ್ವರ್ಯ ಗಳಿಸುತ್ತಾನೆ. ಇದೇ ಸ್ತುತಿಗಳಿಗೆ ಒಳಗಾಗುವ ಪ್ರಥಮ ನೆಲೆಯಾಗಿದೆ. ಸಂಪಾದಿಸಿದ ಐಶ್ವರ್ಯದಿಂದಾಗಿ ತನ್ನನ್ನು ಸುಖಿಯಾಗಿ ಹಾಗು ಸೌಖ್ಯದಿಂದ ಇರುತ್ತಾನೆ. ಇದೇ ಸ್ತುತಿಗಳಿಗೆ ಒಳಗಾಗುವ ದ್ವಿತೀಯ ನೆಲೆಯಾಗಿದೆ. ಆತನು ಯಾವ ಎರಡು ನೆಲೆಗಳಿಂದಾಗಿ ಖಂಡಿಸಲ್ಪಡುತ್ತಾನೆ? ಯಾವುವೆಂದರೆ: ಆತನು ಐಶ್ವರ್ಯವನ್ನು ಅಧಾಮರ್ಿಕವಾಗಿ ಹಾಗು ಹಿಂಸಾತ್ಮಕವಾಗಿ ಗಳಿಸುತ್ತಾನೆ. ಇದೇ ಆತನು ಖಂಡನೆಗೆ ಒಳಗಾಗುವ ಪ್ರಥಮ ನೆಲೆಯಾಗಿದೆ. ಆತನು ಪರರಲ್ಲಿ ಹಂಚಿಕೊಳ್ಳಲಾರ ಹಾಗು ಪುಣ್ಯಗಳನ್ನು ಆಚರಿಸಲಾರ. ಇದೇ ಆತನು ಖಂಡನೆಗೆ ಒಳಗಾಗುವ ದ್ವಿತೀಯ ನೆಲೆಯಾಗಿದೆ. ಹೀಗೆ ಇಂದ್ರೀಯ ಭೋಗಿಯೊಬ್ಬನು ಎರಡು ನೆಲೆಗಳಿಂದ ಸ್ತುತಿಗೆ ಒಳಗಾಗಿ ಎರಡು ವಿಧದಿಂದ ಖಂಡನೆಗೆ ಪಾತ್ರನಾಗುತ್ತಾನೆ.
ನಂತರ ಗ್ರಾಮೀಣಿಯೇ, ಯಾವ ಇಂದ್ರೀಯ ಭೋಗಿಯು ಐಶ್ವರ್ಯಕ್ಕಾಗಿ ಧಾಮರ್ಿಕವಾಗಿಯು ಹಾಗು ಅಧಾಮರ್ಿಕವಾಗಿಯು ಪ್ರವೃತ್ತನಾಗುತ್ತಾನೋ, ಹಿಂಸಾತ್ಮಕವಾಗಿ ಹಾಗು ಅಹಿಂಸಾತ್ಮಕವಾಗಿ ಪ್ರವೃತ್ತನಾಗುತ್ತಾನೋ ಆದರೆ ಹಾಗೆ ಸಂಪಾದಿಸಿದುದರಲ್ಲಿ ತನ್ನನ್ನು ಸುಖಿಯಾಗಿ ಹಾಗು ಸೌಖ್ಯದಿಂದಿರುವಂತೆ ನೋಡಿಕೊಳ್ಳುತ್ತಾನೋ, ಅಷ್ಟೇ ಅಲ್ಲದೆ ಪರರಲ್ಲಿಯು ಹಂಚಿಕೊಳ್ಳುವನೋ ಅಂತಹವನು ಮೂರು ವಿಧದಲ್ಲಿ ಸ್ತುತಿ ಗಳಿಸುವನು ಹಾಗು ಒಂದು ವಿಧದಲ್ಲಿ ಖಂಡನೆಗೆ ಪಾತ್ರನಾಗುವನು. ಆತನು ಯಾವ ಮೂರು ನೆಲೆಗಳಿಂದಾಗಿ ಸ್ತುತಿ ಗಳಿಸುವನು? ಆತನು ಧಾಮರ್ಿಕವಾಗಿ ಐಶ್ವರ್ಯ ಸಂಪಾದಿಸುವನು ಹಾಗು ಅಹಿಂಸಾತ್ಮಕವಾಗಿ ಐಶ್ವರ್ಯ ಸಂಪಾದಿಸುವನು. ಇದೇ ಆತನು ಗಳಿಸುವ ಪ್ರಥಮ ಸ್ತುತಿಯಾಗಿದೆ. ಆತನು ಸಂಪಾದಿಸಿದ ನಂತರ ತನ್ನನ್ನು ಸುಖಿಯಾಗಿ ಹಾಗು ಸೌಖ್ಯದಿಂದಿರುವಂತೆ ನೋಡಿಕೊಳ್ಳುತ್ತಾನೆ. ಇದು ಆತನು ಗಳಿಸುವ ದ್ವಿತೀಯ ಸ್ತುತಿಯಾಗಿದೆ. ಆತನು ಸಂಪಾದಿಸಿದ ನಂತರ ಪರರಲ್ಲಿ ಹಂಚಿಕೊಳ್ಳುತ್ತಾನೆ ಹಾಗು ಪುಣ್ಯಗಳನ್ನು ಆಚರಿಸುತ್ತಾನೆ. ಇದು ಆತನು ಗಳಿಸುವ ತೃತೀಯ ಸ್ತುತಿಯಾಗಿದೆ ಮತ್ತು ಆತನು ಯಾವ ನೆಲೆಯಿಂದಾಗಿ ಖಂಡಿಸಲ್ಪಡುತ್ತಾನೆ? ಆತನು ಅಧಾಮರ್ಿಕವಾಗಿಯು ಹಾಗು ಹಿಂಸಾತ್ಮಕವಾಗಿ ಐಶ್ವರ್ಯ ಗಳಿಸುತ್ತಾನೆ. ಇದೇ ಖಂಡನೆಗೆ ಪಾತ್ರನಾಗುವ ಒಂದು ನೆಲೆಯಾಗಿದೆ. ಹೀಗೆ ಇಂದ್ರೀಯ ಭೋಗಿಯೊಬ್ಬನು ಮೂರು ನೆಲೆಗಳಿಂದಾಗಿ ಸ್ತುತಿಸಲ್ಪಟ್ಟು, ಒಂದು ನೆಲೆಯಿಂದ ಖಂಡನೆಗೆ ಒಳಗಾಗುತ್ತಾನೆ.
ನಂತರ ಗ್ರಾಮೀಣಿಯೇ, ಯಾವ ಇಂದ್ರೀಯ ಭೋಗಿಯು ಐಶ್ವರ್ಯವನ್ನು ಧಾಮರ್ಿಕವಾಗಿ, ಅಹಿಂಸಾತ್ಮಕವಾಗಿ, ಸಂಪಾದಿಸಿಯು ತನ್ನನ್ನು ಸುಖಿಯಾಗಿ ಹಾಗು ಸೌಖ್ಯವಾಗಿ ಇಟ್ಟುಕೊಳ್ಳಲಾರನೋ ಮತ್ತು ಪರರಲ್ಲಿಯು ಹಂಚಿಕೊಳ್ಳಲಾರನೋ ಅಂತಹವನು ಒಂದು ನೆಲೆಯಲ್ಲಿ ಸ್ತುತಿಗೆ ಒಳಗಾಗಿ, ಎರಡು ನೆಲೆಗಳಲ್ಲಿ ಖಂಡನೆಗೆ ಪಾತ್ರನಾಗುತ್ತಾನೆ. ಮತ್ತೆ ಆತನು ಯಾವ ಒಂದು ನೆಲೆಯಿಂದ ಸ್ತುತಿಗೆ ಪಾತ್ರನಾಗುತ್ತಾನೆ? ಆತನು ಐಶ್ವರ್ಯವನ್ನು ಧಾಮರ್ಿಕವಾಗಿ ಹಿಂಸೆಯಿಲ್ಲದೆ ಸಂಪಾದಿಸುತ್ತಾನೆ. ಈ ಒಂದು ನೆಲೆಯಿಂದಾಗಿ ಆತನು ಸ್ತುತಿಗೆ ಒಳಗಾಗುತ್ತಾನೆ. ಮತ್ತು ಆತನು ಯಾವ ಎರಡು ನೆಲೆಗಳಿಂದಾಗಿ ಖಂಡನೆಗೆ ಒಳಗಾಗುತ್ತಾನೆ. ಆತನು ಧಾಮರ್ಿಕವಾಗಿ ಸಂಪಾದಿಸಿಯು ಸಹಾ ತನ್ನನ್ನು ಸುಖಿಯಾಗಿ ಸೌಖ್ಯವಾಗಿಟ್ಟುಕೊಳ್ಳುತ್ತಿಲ್ಲ, ಪುಣ್ಯವನ್ನು ಆಚರಿಸುತ್ತಿಲ್ಲ. ಈ ಎರಡನೇ ನೆಲೆಯಿಂದಲೂ ಆತನು ಖಂಡನೆಗೆ ಒಳಗಾಗುತ್ತಾನೆ. ಹೀಗೆ ಇಂದ್ರೀಯ ಭೋಗಿಯೊಬ್ಬನು ಒಂದು ನೆಲೆಯಿಂದ ಸ್ತುತಿಗೆ ಪಾತ್ರನಾಗಿ, ಎರಡು ನೆಲೆಯಿಂದ ಖಂಡನೆಗೆ ಒಳಗಾಗುತ್ತಾನೆ.
ನಂತರ ಗ್ರಾಮೀಣಿಯೇ, ಯಾವ ಇಂದ್ರೀಯ ಭೋಗಿಯು ಧಾಮರ್ಿಕವಾಗಿ ಹಾಗು ಹಿಂಸೆಯಿಲ್ಲದೆ ಐಶ್ವರ್ಯ ಸಂಪಾದಿಸಿ, ತನ್ನನ್ನು ಸುಖವಾಗಿಟ್ಟುಕೊಳ್ಳುತ್ತಾನೋ, ಸೌಖ್ಯದಿಂದಿರುತ್ತಾನೋ, ಆದರೆ ಪರರಲ್ಲಿ ಹಂಚಲಾರನೋ ಹಾಗು ಪುಣ್ಯವನ್ನು ಸಂಪಾದಿಸಲಾರನೋ ಅಂತಹವನು ಎರಡು ನೆಲೆಗಳಿಂದ ಸ್ತುತಿಗೆ ಪಾತ್ರನಾಗುತ್ತಾನೆ ಮತ್ತು ಒಂದು ನೆಲೆಯಿಂದ ಖಂಡನೆಗೆ ಗುರಿಯಾಗುತ್ತಾನೆ. ಯಾವ ಎರಡು ನೆಲೆಗಳಿಂದ ಆತನು ಸ್ತುತಿಗೆ ಪಾತ್ರನಾಗುತ್ತಾನೆ? ಆತನು ಐಶ್ವರ್ಯವನ್ನು ಧಾಮರ್ಿಕವಾಗಿ, ಹಿಂಸೆಯಿಲ್ಲದೆ ಸಂಪಾದಿಸುತ್ತಾನೆ. ಇದು ಸ್ತುತಿಯ ಪ್ರಥಮ ನೆಲೆಯಾಗಿದೆ. ಆತನು ತನ್ನನ್ನು ಸುಖಿಯಾಗಿರಿಸಿ ಮತ್ತು ಸೌಖ್ಯದಿಂದಿರುವಂತೆ ನೋಡಿಕೊಳ್ಳುತ್ತಾನೆ ಇದು ಸ್ತುತಿಯ ದ್ವಿತೀಯ ನೆಲೆಯಾಗಿದೆ ಮತ್ತು ಯಾವ ಒಂದು ನೆಲೆಯಿಂದಾಗಿ ಆತನು ಖಂಡನೆಗೆ ಪಾತ್ರನಾಗುತ್ತಾನೆ? ಆತನು ಪರರಲ್ಲಿ ಹಂಚಲಾರನು, ಪುಣ್ಯವನ್ನು ಆಚರಿಸುತ್ತಿಲ್ಲ. ಈ ಒಂದು ನೆಲೆಯಿಂದಾಗಿ ಆತನು ಖಂಡನೆಗೆ ಗುರಿಯಾಗುತ್ತಾನೆ. ಹೀಗೆ ಇಂದ್ರೀಯ ಭೋಗಿಯೊಬ್ಬನು ಎರಡು ನೆಲೆಗಳಿಂದ ಸ್ತುತಿಗೆ ಒಳಗಾಗಿ ಒಂದು ನೆಲೆಯಿಂದಾಗಿ ಖಂಡನೆಗೆ ಗುರಿಯಾಗುತ್ತಾನೆ.
ಮತ್ತೆ ಗ್ರಾಮೀಣಿಯೇ, ಯಾವ ಇಂದ್ರೀಯ ಭೋಗಿಯು ಐಶ್ವರ್ಯವನ್ನು ಧಾಮರ್ಿಕವಾಗಿ ಹಾಗು ಅಹಿಂಸಾತ್ಮಕವಾಗಿ ಸಂಪಾದಿಸುವನೋ ಅದರಿಂದಾಗಿ ತನ್ನನ್ನು ಸುಖಿಯಾಗಿ, ಸೌಖ್ಯವಾಗಿರುವಂತೆ ನೋಡಿಕೊಳ್ಳುತ್ತಿದ್ದಾನೋ, ಹಾಗೆಯೇ ಪರರಲ್ಲೂ ಹಂಚಿಕೊಳ್ಳುತ್ತಿದ್ದಾನೋ. ಆದರೆ ಐಶ್ವರ್ಯವನ್ನು ಬಳಸುತ್ತಲೇ ಅದಕ್ಕೆ ಬಂಧಿತನಾಗಿರುವನೋ, ಧನಮೋಹ ಪರವಶನಾಗಿರುವನೋ, ಅದರಲ್ಲೇ ಅಂಧನಾಗಿದ್ದಾನೋ ಧನದ ಅಪಾಯವನ್ನು ಅರಿಯಲಾರನೋ, ಅದರಿಂದ ವಿಮುಕ್ತಿಯನ್ನು ಅರಿಯಲಾರನೋ, ಅಂತಹವನು ಮೂರು ನೆಲೆಗಳಿಂದಾಗಿ ಪ್ರಶಂಸಿತನಾಗಿ, ಒಂದರಿಂದಾಗಿ ಖಂಡನೆಗೆ ಪಾತ್ರನಾಗುವನು. ಯಾವ ಮೂರು ನೆಲೆಗಳಿಂದಾಗಿ ಆತನು ಪ್ರಶಂಸಿತನಾಗುವನು? ಇವನು ಧಾಮರ್ಿಕವಾಗಿ ಹಾಗು ಅಹಿಂಸಾಯುತವಾಗಿ ಐಶ್ವರ್ಯವನ್ನು ಹುಡುಕುವನು ಇದು ಆತನ ಬಗೆಗಿನ ಪ್ರಥಮ ಸ್ತುತಿಯಾಗಿದೆ. ಇವನು ಸಂಪಾದನೆಯಿಂದಾಗಿ ತನ್ನನ್ನು ಸುಖಿಯಾಗಿ ಹಾಗು ಸೌಖ್ಯವಾಗಿರುವಂತೆ ನೋಡಿಕೊಳ್ಳುತ್ತಿದ್ದಾನೆ ಇದು ಆತನಿಗೆ ಸಿಗುವ ದ್ವಿತೀಯ ಸ್ತುತಿಯಾಗಿದೆ. ಈತನು ಪರರಲ್ಲಿ ಹಂಚಿಕೊಳ್ಳುತ್ತಾನೆ ಹಾಗು ಪುಣ್ಯಾಚರಣೆಗಳನ್ನು ಪಾಲಿಸುತ್ತಾನೆ. ಇದು ಆತನಿಗೆ ಸ್ತುತಿಸುವ ಮೂರನೆಯ ನೆಲೆಯಾಗಿದೆ ಮತ್ತು ಯಾವ ಒಂದು ನೆಲೆಯಿಂದಾಗಿ ಆತನು ಖಂಡನೆಗೆ ಒಳಗಾಗುತ್ತಾನೆ? ಈತನು ಐಶ್ವರ್ಯ ಬಳಸುತ್ತಲೇ ಅದಕ್ಕೆ ಬಂಧಿಯಾಗಿರುವನು. ಅಂಧನಾಗಿ ಧನಮೋಹಪರವಶನಾಗಿರುವನು, ಇವನು ಇದರಲ್ಲಿ ಅಪಾಯವನ್ನು ಕಾಣುತ್ತಿಲ್ಲ, ಹಾಗೆಯೇ ಪಾರಾಗುವ ಮಾರ್ಗವನ್ನು ಅರಿತಿಲ್ಲ ಈ ಒಂದು ನೆಲೆಯಿಂದಾಗಿ ಈತನು ಖಂಡನೆಗೆ ಪಾತ್ರನಾಗುತ್ತಾನೆ. ಹೀಗೆ ಇಂದ್ರೀಯ ಭೋಗಿಯೊಬ್ಬನು ಮೂರು ನೆಲೆಗಳಿಂದ ಪ್ರಶಂಸಿಸಲ್ಪಟ್ಟು, ಒಂದು ನೆಲೆಯಿಂದ ಖಂಡನೆಗೆ ಒಳಗಾಗುತ್ತಾನೆ.
ಮತ್ತೆ ಗ್ರಾಮೀಣಿಯೇ, ಯಾವ ಇಂದ್ರಿಯ ಭೋಗಿಯು ಐಶ್ವರ್ಯವನ್ನು ಧಾಮರ್ಿಕವಾಗಿ, ಹಿಂಸೆಯಿಲ್ಲದೆ ಸಂಪಾದಿಸುತ್ತಾನೋ, ಸಂಪಾದಿಸುವಂತಹ ಐಶ್ವರ್ಯದಿಂದ ತನ್ನನ್ನು ಸುಖವಾಗಿ ಹಾಗು ಸೌಖ್ಯವಾಗಿ ಇಟ್ಟುಕೊಳ್ಳುವನೋ ಹಾಗೆಯೇ ಪರರಲ್ಲಿ ಹಂಚುವನೋ ಹಾಗು ಪುಣ್ಯಗಳನ್ನು ಆಚರಿಸುವನೋ, ಹಾಗೆಯೇ ಐಶ್ವರ್ಯಕ್ಕೆ ಬಂಧಿತನಾಗದೆ ಬಳಸುತ್ತಾನೋ, ಐಶ್ವರ್ಯಮೋಹಿಯು ಅಲ್ಲವೋ, ಐಶ್ವರ್ಯದಿಂದಾಗಿ ಅಂಧನಾಗುವುದಿಲ್ಲವೋ, ಐಶ್ವರ್ಯದಲ್ಲಿ ಅಪಾಯವನ್ನು ಕಾಣುವನೋ, ಅದರಿಂದಾಗಿ ಪಾರಾಗುವ ಬಗ್ಗೆಯು ತಿಳಿದಿರುವವನೋ, ಅಂತಹವನು ನಾಲ್ಕು ನೆಲೆಗಳಿಂದ ಪ್ರಶಂಸಿತನಾಗುತ್ತಾನೆ. ಯಾವ ನಾಲ್ಕು ನೆಲೆಗಳಿಂದ ಆತನು ಪ್ರಶಂಸಿತನಾಗುತ್ತಾನೆ. ಇವನು ಐಶ್ವರ್ಯವನ್ನು ಧಾಮರ್ಿಕವಾಗಿ ಹಾಗು ಅಹಿಂಸಾತ್ಮಕವಾಗಿ ಸಂಪಾದಿಸುತ್ತಾನೆ ಇದು ಪ್ರಶಂಸೆಯ ಮೊದಲನೇ ನೆಲೆಯಾಗಿದೆ. ಆತನು ತನ್ನನ್ನು ಸುಖಿಯಾಗಿರುವಂತೆ ಹಾಗು ಸೌಖ್ಯವಾಗಿರುವಂತೆ ನೋಡಿಕೊಳ್ಳುತ್ತಾನೆ ಇದು ಪ್ರಶಂಸೆಯ ಎರಡನೆಯ ನೆಲೆಯಾಗಿದೆ. ಆತನು ಪರರಲ್ಲಿ ಹಂಚುತ್ತಾನೆ ಮತ್ತು ಪುಣ್ಯಗಳನ್ನು ಆಚರಿಸುತ್ತಾನೆ ಇದು ಪ್ರಶಂಸೆಯ ಮೂರನೆಯ ನೆಲೆಯಾಗಿದೆ. ಆತನು ಐಶ್ವರ್ಯಕ್ಕೆ ಬಂಧಿತನಾಗದೆ ಬಳಸುತ್ತಿದ್ದಾನೆ, ಧನಮೋಹವಿಲ್ಲದೆ, ಧನಾಂಧತೆಯಿಲ್ಲದೆ, ಧನದ ಅಪಾಯ ಕಾಣುವವನಾಗಿ, ಅದರಿಂದಾಗಿ ಮುಕ್ತನಾಗುವ ಮಾರ್ಗವನ್ನು ತಿಳಿದು ಬಳಸುವವನಾಗಿದ್ದಾನೆ ಇದು ಆತನ ಪ್ರಶಂಸೆಗೆ ನಾಲ್ಕನೆಯ ನೆಲೆಯಾಗಿದೆ. ಹೀಗೆ ಇಂದ್ರಿಯ ಭೋಗಿಯೊಬ್ಬನು ನಾಲ್ಕು ವಿಧಗಳಿಂದಾಗಿ ಪ್ರಶಂಸಿತನಾಗುತ್ತಾನೆ.
ಗ್ರಾಮೀಣಿಯೇ, ಲೋಕದಲ್ಲಿ ಮೂರುವಿಧದ ಕಡು ತಪಸ್ವಿಗಳಿದ್ದಾರೆ, ಯಾರವರು? ಗ್ರಾಮೀಣಿಯೇ, ಇಲ್ಲಿ ಕೆಲವರು ಶ್ರದ್ಧೆಯಿಂದಾಗಿ ಗೃಹಜೀವನ ತೊರೆದು, ಅನಗಾರಿಕರಾಗಿ (ಗೃಹವಿಲ್ಲದವರಾಗಿ) ಕಡುತಪಸ್ವಿಗಳ ಜೀವನ ಆಯ್ಕೆ ಮಾಡುತ್ತಾರೆ. ಆಗ ಅವರ ಚಿಂತನೆಯು ಹೀಗೆ ಇರುತ್ತದೆ. ಬಹುಶಃ ನಾನು ಕುಶಲಧಮ್ಮವನ್ನು (ಸ್ಥಿತಿ) ಪ್ರಾಪ್ತಿಮಾಡಬಹುದು, ಬಹುಶಃ ನಾನು ಮಾನವಾತೀತ ಧಮ್ಮವನ್ನು, ಜ್ಞಾನದರ್ಶನದ ಸಾಕ್ಷಾತ್ಕಾರವನ್ನು ಪ್ರಾಪ್ತಿಮಾಡಬಹುದು. ಹೀಗೆ ತನ್ನನ್ನು ಸ್ಫೂತರ್ಿಗೊಳಿಸುತ್ತಾ ತನ್ನನ್ನು ಪರಿಶ್ರಮದಲ್ಲಿ ತೊಡಗಿಸುತ್ತಾ ತಪಸ್ಸಿನಲ್ಲಿ ತೊಡಗಿಸಬಹುದು. ಆದರೂ ಸಹಾ ಆತನು ಕುಶಲ ಧಮ್ಮವನ್ನು (ಸ್ಥಿತಿ/ಸಮಾಧಿ) ಸಿದ್ಧಿಸದೆ ಹೋಗಬಹುದು. ಹಾಗೆಯೇ ಮಾನವಾತೀತ ಧಮ್ಮವಾದ ಜ್ಞಾನದರ್ಶನದ ಸಾಕ್ಷಾತ್ಕಾರವನ್ನು ಗಳಿಸದೆ ಹೋಗಬಹುದು.
ಮತ್ತೆ ಗ್ರಾಮೀಣಿಯೇ, ಕೆಲವರು ಶ್ರದ್ಧೆಯಿಂದಾಗಿ ಗೃಹಜೀವನವನ್ನು ತೊರೆದು ಗೃಹರಹಿತರಾಗಿ ಇದ್ದು ಕಡುತಪಸ್ವಿಗಳ ಜೀವನ ಆಯ್ಕೆಮಾಡುತ್ತಾರೆ. ಹೀಗೆ ದೃಢ ಸಾಧನೆಯಿಂದಾಗಿ ಕುಶಲ ಧಮ್ಮವನ್ನು (ಸಮಾಧಿ ಸ್ಥಿತಿ) ಸಿದ್ಧಿಸಬಹುದು. ಆದರೂ ಅವರು ಸಹಾ ಮಾನವಾತೀತ ಧಮ್ಮವಾದ ಜ್ಞಾನದರ್ಶನದ ಸಾಕ್ಷಾತ್ಕಾರವನ್ನು ಗಳಿಸದೆ ಹೋಗಬಹುದು.
ಮತ್ತೆ ಗ್ರಾಮೀಣಿಯೇ, ಕೆಲವರು ಶ್ರದ್ಧೆಯಿಂದಾಗಿ ಗೃಹಸ್ಥ ಜೀವನವನ್ನು ತೊರೆದು ಗೃಹರಹಿತರಾಗಿ ಇದ್ದು, ಕಡು ತಪಸ್ವಿಗಳ ಜೀವನ ಆಯ್ಕೆ ಮಾಡುತ್ತಾರೆ. ಹೀಗೆಯೇ ದೃಢಸಾಧನೆಯಿಂದ ಅವರು ಕುಶಲ ಧಮ್ಮವನ್ನು ಸಿದ್ಧಿಸುತ್ತಾರೆ. ಹಾಗೆಯೇ ಅವರು ಮಾವನಾತೀತ ಧಮ್ಮವಾದ ಜ್ಞಾನದರ್ಶನದ ಸಾಕ್ಷಾತ್ಕಾರವನ್ನು ಸಹಾ ಗಳಿಸುವರು.
ಮತ್ತೆ ಗ್ರಾಮೀಣಿಯೇ, ಯಾವ ಕಡುತಪಸ್ವಿಗಳಾದ ಅವರು ಕುಶಲ ಸ್ಥಿತಿಗಳನ್ನು (ಸಮಾಧಿ ಧಮ್ಮವನ್ನು) ಗಳಿಸದ ಹಾಗೆಯೇ ಮಾನವಾತೀತವಾದ ಜ್ಞಾನದರ್ಶನವನ್ನು ಗಳಿಸದ ಅವರು ಮೂರು ನೆಲೆಗಳಿಂದ ಖಂಡನೆಗೆ ಪಾತ್ರರಾಗುತ್ತಾರೆ. ಯಾವುವವು ಆ ಮೂರು ಖಂಡನೆಗಳು? ಅವೆಂದರೆ: ಈತನು ತನ್ನನ್ನು ಒತ್ತಡಕ್ಕೆ ಗುರಿಯಾಗಿಸಿ ಪರಿತಾಪವನ್ನು ಹೆಚ್ಚಿಸಿಕೊಂಡಿದ್ದಾನೆ ಇದೇ ಪ್ರಥಮ ಖಂಡನೆಯಾಗಿದೆ. ಈತನು ಕುಶಲಧಮ್ಮವನ್ನು (ಸಮಾಧಿ ಸ್ಥಿತಿಯನ್ನು) ಸಹಾ ಸಿದ್ಧಿಸಿಲ್ಲ ಇದೇ ದ್ವಿತೀಯ ಖಂಡನೆಯಾಗಿದೆ. ಈತನೂ ಮಾನವಾತೀತವಾದ ಜ್ಞಾನದರ್ಶನವನ್ನು ಸಾಕ್ಷಾತ್ಕರಿಸಲಿಲ್ಲ. ಇದೇ ತೃತೀಯ ಖಂಡನೆಯಾಗಿದೆ. ಹೀಗೆ ಮೂರು ವಿಧದಿಂದಾಗಿ ಕಡುತಪಸ್ವಿಗಳು ಖಂಡನೆಗೆ ಗುರಿಯಾಗುತ್ತಾರೆ.
ಮತ್ತೆ ಗ್ರಾಮೀಣಿಯೇ, ಯಾವ ಕಡುತಪಸ್ವಿಗಳಾದ ಅವರು ತಮ್ಮನ್ನು ಒತ್ತಡಕ್ಕೆ ಹಾಗು ಕಠಿಣ ಜೀವನಕ್ಕೆ ತೊಡಗಿಸಿದರೂ, ಕುಶಲ ಸ್ಥಿತಿಗಳನ್ನು ಸಿದ್ಧಿಸುತ್ತಾರೆ. ಆದರೂ ಮಾನತೀತವಾದ ಜ್ಞಾನದರ್ಶನ ಸಾಕ್ಷಾತ್ಕಾರಗಳನ್ನು ಸಿದ್ಧಿಸದೆ ಹೋಗುತ್ತಾರೆ. ಅಂತಹವರು ಎರಡು ನೆಲೆಗಳಿಂದಾಗಿ ಖಂಡನೆಗೆ ಒಳಗಾದರೂ ಸಹಾ ಒಂದು ನೆಲೆಯಿಂದಾಗಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಯಾವ ಎರಡು ನೆಲೆಗಳಿಂದಾಗಿ ಅವರು ಖಂಡನೆಗೆ ಗುರಿಯಾಗುತ್ತಾರೆ? ಈತನು ತನ್ನನ್ನು ಪರಿತಾಪಕ್ಕೆ ಗುರಿಯಾಗಿಸಿ ಕಠಿಣ ಜೀವನದಲ್ಲಿ ತೊಡಗಿಸಿದ್ದಾನೆ ಇದೇ ಪ್ರಥಮ ಖಂಡನೆಯಾಗಿದೆ. ಈತನು ಮಾತವಾತೀತವಾದ ಜ್ಞಾನದರ್ಶನದ ಸಾಕ್ಷಾತ್ಕಾರ ಮಾಡಿಲ್ಲ ಇದೇ ದ್ವಿತೀಯ ಖಂಡನೆಯಾಗಿದೆ. ಹಾಗಾದರೆ ಯಾವುದರಿಂದಾಗಿ ಆತನು ಪ್ರಶಂಸೆಗೆ ಪಾತ್ರನಾಗುತ್ತಾನೆ? ಈತನು ಕುಶಲ ಸ್ಥಿತಿಗಳನ್ನು ಸಿದ್ಧಿಗೊಳಿಸಿದ್ದಾನೆ (ಸಮಾಧಿಪ್ರಾಪ್ತಿ), ಈ ಒಂದು ನೆಲೆಯಿಂದಾಗಿ ಆತನು ಪ್ರಶಂಸೆಗೆ ಪಾತ್ರನಾಗುತ್ತಾನೆ. ಹೀಗೆ ಕಡುತಾಪಸಿಗಳು ಎರಡು ನೆಲೆಯಿಂದಾಗಿ ಖಂಡನೆಗೆ ಗುರಿಯಾಗಿ, ಒಂದು ನೆಲೆಯಿಂದಾಗಿ ಪ್ರಶಂಸೆಗೆ ಪಾತ್ರರಾಗುತ್ತಾರೆ.
ಮತ್ತೆ ಗ್ರಾಮೀಣಿಯೇ, ಯಾವ ಕಡುತಪಸ್ವಿಗಳಾದ ಅವರು ತಮ್ಮನ್ನು ಒತ್ತಡಕ್ಕೆ ಹಾಗು ಕಠಿಣ ಜೀವನಕ್ಕೆ ತೊಡಗಿಸಿದರೂ, ಕುಶಲ ಸ್ಥಿತಿಗಳನ್ನು ಸಿದ್ಧಿಸುತ್ತಾರೆ ಹಾಗು ಮಾನವಾತೀತವಾದ ಆರ್ಯರ ಜ್ಞಾನದರ್ಶನ ಸಾಕ್ಷಾತ್ಕಾರವನ್ನು ಮಾಡುತ್ತಾರೆ. ಅಂತಹವರು ಒಂದು ನೆಲೆಯಿಂದಾಗಿ ಖಂಡನೆಗೆ ಗಿರಿಯಾದರೂ ಎರಡು ನೆಲೆಗಳಿಂದಾಗಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಯಾವ ನೆಲೆಯಿಂದಾಗಿ ಆತನು ಖಂಡನೆಗೆ ಗುರಿಯಾಗುತ್ತಾನೆ? ಆತನು ತನ್ನನ್ನು ಒತ್ತಡಕ್ಕೆ ಗುರಿಯಾಗಿಸಿ ಪರಿತಾಪಗೊಳಿಸಿದ್ದಾನೆ ಈ ಒಂದು ನೆಲೆಯಿಂದಾಗಿ ಖಂಡನೆಗೆ ಗುರಿಯಾಗುತ್ತಾನೆ. ಹಾಗು ಯಾವ ಎರಡು ನೆಲೆಗಳಿಂದಾಗಿ ಆತನು ಪ್ರಶಂಸೆಗೆ ಪಾತ್ರನಾಗುತ್ತಾನೆ? ಅವನು ಕುಶಲ ಸ್ಥಿತಿಗಳನ್ನು (ಸಮಾಧಿ) ಸಿದ್ಧಿಸಿದ್ದಾನೆ ಇದೇ ಪ್ರಶಂಸೆಯ ಪ್ರಥಮ ನೆಲೆಯಾಗಿದೆ. ಆತನು ಮಾನವಾತೀತವಾದ ಆರ್ಯರ ಜ್ಞಾನದರ್ಶನದ ಸಾಕ್ಷಾತ್ಕಾರ ಮಾಡಿದ್ದಾನೆ ಇದೇ ಪ್ರಶಂಸೆಯ ದ್ವಿತೀಯ ನೆಲೆಯಾಗಿದೆ. ಹೀಗೆ ಕಡುತಾಪಸಿಗಳು ಒಂದು ನೆಲೆಯಿಂದಾಗಿ ಖಂಡನೆಗೆ ಗುರಿಯಾಗಿ ಎರಡು ನೆಲೆಗಳಿಂದಾಗಿ ಪ್ರಶಂಸೆಗೆ ಪಾತ್ರರಾಗುತ್ತಾರೆ.
ಮೂರು ವಿಧದ ಮರೆಯಾಗುವಿಕೆಯಿದೆ ಗ್ರಾಮೀಣಿಯೇ? ಅವು ನೇರವಾಗಿ ಕಾಣುವಂತಹುದು, ತಕ್ಷಣವೇ ಪರಿಣಾಮ ತೋರುವಂತಹುದು, ಬಂದು ಪರೀಕ್ಷಿಸಿ ಎಂದು ಆಹ್ವಾನಿಸುವಂತಹುದು, ಅನ್ವಯಿಸುವಂತಹುದು, ಜ್ಞಾನಿಗಳಾದ ಅವರಲ್ಲಿ ಅನುಭವಕ್ಕೆ ಬಂದಿರುವಂತಹುದು, ಯಾವುವು? ಇಲ್ಲಿ ಒಬ್ಬನು ರಾಗಯುಕ್ತನಾಗಿ ಆ ರಾಗದ ಕಾರಣದಿಂದಾಗಿ ತನ್ನನ್ನು ನೋವಿಗೆ ಗುರಿಯಾಗಿಸಿಕೊಳ್ಳುತ್ತಾನೆ, ಪರರನ್ನು ನೋವಿಗೆ ಗುರಿಯಾಗಿಸುತ್ತಾನೆ, ಎಲ್ಲರ ನೋವಿಗೆ ಕಾರಣನಾಗುತ್ತಾನೆ. ಆದರೆ ಯಾವಾಗ ಆತನು ರಾಗವನ್ನು ತೊಡೆದುಹಾಕುವನೋ ಆಗ ಆತನು ತನ್ನ ನೋವಿಗೆ ಸಂಕಲ್ಪಿಸುವುದಿಲ್ಲ, ಹಾಗೆಯೇ ಪರರ ನೋವಿಗೂ ಸಂಕಲ್ಪಿಸುವುದಿಲ್ಲ, ಎಲ್ಲರ ನೋವಿಗೂ ಸಂಕಲ್ಪಿಸುವುದಿಲ್ಲ. ಹೀಗೆ ಈ ರೀತಿಯ ಮರೆಯಾಗುವಿಕೆಯನ್ನು ನೇರವಾಗಿ ದಶರ್ಿಸಬಹುದು, ಕಾಲವಿಳಂಬವಿಲ್ಲದೆ ಕಾಣಬಹುದು, ಪರರನ್ನು ಬನ್ನಿ ಪರೀಕ್ಷಿಸಿ ಎಂದು ಆಹ್ವಾನಿಸಬಹುದು, ಅನ್ವಯಿಸಬಹುದು, ಜ್ಞಾನಿಗಳಾದ ಪ್ರತಿಯೊಬ್ಬರೂ ಅನುಭವಿಸಬಹುದಾಗಿದೆ. ಅದೇರೀತಿಯಲ್ಲಿ ಯಾರಾದರೊಬ್ಬನು ದ್ವೇಷಯುಕ್ತನಾಗಿರುವಾಗ, ತನ್ನ ನೋವಿಗೆ ಸಂಕಲ್ಪಿಸುತ್ತಾನೆ, ಪರರ ನೋವಿಗೂ ಸಂಕಲ್ಪಿಸುತ್ತಾನೆ, ಎಲ್ಲರ ನೋವಿಗೂ ಸಂಕಲ್ಪಿಸುತ್ತಾನೆ. ಆದರೆ ಯಾವಾಗ ದ್ವೇಷವು ಪರಿತ್ಯಜಿಸಲ್ಪಡುವುದು, ಆಗ ಆತನು ತನ್ನ ನೋವಿಗೆ ಸಂಕಲ್ಪಿಸುವುದಿಲ್ಲ, ಪರರ ನೋವಿಗೂ ಸಂಕಲ್ಪಿಸುವುದಿಲ್ಲ, ಎಲ್ಲರ ನೋವಿಗೂ ಸಂಕಲ್ಪಿಸುವುದಿಲ್ಲ. ಹೀಗೆ ಈ ರೀತಿಯಾಗಿ ಮರೆಯಾಗುವಿಕೆಯನ್ನು ನೇರವಾಗಿ ಕಾಣಬಹುದು, ಕಾಲವಿಳಂಬವಿಲ್ಲದೆ ಪರಿಣಾಮ ಗಮನಿಸಬಹುದು, ಎಲ್ಲರನ್ನು ಬನ್ನಿ ಹಾಗು ಪರೀಕ್ಷಿಸಿ ಎಂದು ಆಹ್ವಾನಿಸಬಹುದು, ಅನ್ವಯಿಸಬಹುದು, ಜ್ಞಾನಿಯಾದ ಪ್ರತಿಯೊಬ್ಬರಿಂದಲೂ, ಅನುಭವಿಸುವಂತಹುದು. ಅದೇರೀತಿಯಾಗಿ ಇಲ್ಲಿ ಒಬ್ಬನು ಮೋಹಯುಕ್ತನಾಗಿದ್ದಾಗ, ಆ ಮೋಹದ ಕಾರಣದಿಂದಾಗಿ ತನ್ನನ್ನು ನೋವಿಗೆ ಗುರಿಯಾಗಿಸುವ ಸಂಕಲ್ಪಗಳನ್ನು ಮಾಡುತ್ತಾನೆ. ಪರರಿಗೂ ನೋವು ತರುವ ಸಂಕಲ್ಪ ಮಾಡುತ್ತಾನೆ.  ಎಲ್ಲರಿಗೂ ನೋವು ತರುವ ಸಂಕಲ್ಪ ಮಾಡುತ್ತಾನೆ. ಆದರೆ ಯಾವಾಗ ಆತನಲ್ಲಿ ಮೋಹವು ಮರೆಯಾಗುವುದೋ ಆತನು ತನ್ನನ್ನು ನೋವುಗೊಳಿಸುವಂತೆ ಸಂಕಲ್ಪಿಸಲಾರನು, ಪರರನ್ನು ನೋವುಗೊಳಿಸುವಂತೆ ಸಂಕಲ್ಪಿಸಲಾರನು, ಎಲ್ಲರಿಗೂ ನೋವು ಉಂಟಾಗುವಂತೆ ಸಂಕಲ್ಪಿಸಲಾರನು. ಈ ರೀತಿಯಾಗಿ ಮರೆಯಾಗುವಿಕೆಯನ್ನು ನೇರವಾಗಿ ದಶರ್ಿಸಬಹುದು, ಕಾಲವಿಳಂಬವಿಲ್ಲದೆ ಕಾಣಬಹುದು, ಪರರಿಗೂ ಬನ್ನಿ ಪರೀಕ್ಷಿಸಿ ಎಂದು ಆಹ್ವಾನಿಸಬಹುದು, ಅನ್ವಯಿಸುವಂತಹುದು. ಜ್ಞಾನಿಯಾದ ಪ್ರತಿಯೊಬ್ಬನಿಂದಲೂ ಅನುಭಿಸಲ್ಪಡಬಹುದಾಗಿದೆ. ಹೀಗೆ ಇದೇ ಗ್ರಾಮೀಣಿಯೇ, ಮೂರು ವಿಧವಾದ ಮರೆಯಾಗುವಿಕೆಯಾಗಿದೆ. ಇವು ನೇರವಾಗಿ ದಶರ್ಿಸಬಹುದಾಗಿದೆ, ಕಾಲವಿಳಂಬವಿಲ್ಲದೆ ಫಲಕಾರಿಯಾಗಿದೆ. ಎಲ್ಲರನ್ನೂ ಬನ್ನಿ ಪರೀಕ್ಷಿಸಿ ಎಂದು ಆಹ್ವಾನಿಸಬಹುದಾಗಿದೆ, ಅನ್ವಯಿಸುವಂತಹದ್ದಾಗಿದೆ. ಜ್ಞಾನಿಗಳಾದ ಪ್ರತಿಯೊಬ್ಬರಿಂದಲೂ ಅನುಭವಿಸಬಹುದಾಗಿದೆ.
ಯಾವಾಗ ಭಗವಾನರು ಹೀಗೆ ಹೇಳಿದರೊ ಆಗ ರಾಸಿಯ ಗ್ರಾಮೀಣಿಯು ಹೀಗೆ ನುಡಿದನು: ಭವ್ಯವಾದುದು ಭಂತೆ, ಅದ್ಭುತವಾದುದು.... ಇಂದಿನಿಂದ ನನ್ನನ್ನು ಜೀವನಪರ್ಯಂತದ ಉಪಾಸಕನೆಂದು ಭಗವಾನರು ಪರಿಗಣಿಸಲಿ.




13. ಪಾಟಲಿಯ ಸುತ್ತಂ

365. ಒಮ್ಮೆ ಭಗವಾನರು ಕೋಲಿಯರ ಉತ್ತರವೆಂಬ ಹೆಸರಿನ ನಿಗಮದಲ್ಲಿ ಕೋಲಿಯರೊಡನೆ ವಾಸಿಸುತ್ತಿದ್ದರು.  ಆಗ ಪಾಟಲಿಯ ಎಂಬ ಗ್ರಾಮೀಣಿಯು ಭಗವಾನರು ಇರುವಲ್ಲಿಗೆ ಬಂದನು. ಆತನು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತು ಹೀಗೆ ಕೇಳಿದನು: ಭಗವಾನ್, ನಾನು ಹೀಗೆ ಕೇಳಿದ್ದೇನೆ, ಸಮಣ ಗೋತಮರು ಮಾಯಾವಿದ್ಯೆಗಳನ್ನು ಬಲ್ಲರು ಎಂದು. ಭಂತೆ ಯಾರು ಹೀಗೆ ನುಡಿಯುತ್ತಿರುವರೋ ಅವರು ಭಗವಾನರನ್ನು ತಪ್ಪಾಗಿ ಅಥರ್ೈಸುತ್ತಿಲ್ಲವಷ್ಟೆ. ಏನು ಅವರು ಧಮ್ಮಕ್ಕೆ ಅನುಸಾರವಾಗಿ ನುಡಿಯುತ್ತಿರುವರೋ, ಈ ಬಗೆಯ ಹೇಳಿಕೆಯಿಂದ ಟೀಕೆಗೆ ಅವಕಾಶ ನೀಡುತ್ತಿದ್ದಾರೆಯೇ? ನಾನು ಭಗವಾನರಿಗೆ ಅಪಾರ್ಥವಾಗುವುದನ್ನು ಬಯಸುವುದಿಲ್ಲ. ಹೀಗಾಗಿ ಕೇಳುತ್ತಿದ್ದೇನೆ. ಓ ಗ್ರಾಮೀಣಿಯೇ, ಯಾರು ನನಗೆ ಮಾಯಾವಿದ್ಯೆಗಳನ್ನು ಬಲ್ಲರು ಎಂದು ಹೇಳುತ್ತಿರುವವರೋ ಅವರು ತಪ್ಪಾಗಿ ಅಥರ್ೈಸುತ್ತಿಲ್ಲ. ಅವರು ಧಮ್ಮಕ್ಕೆ ಅನುಸಾರವಾಗಿಯೇ ವಿವರಿಸುತ್ತಿದಾರೆ. ಈ ಬಗೆಯ ಹೇಳಿಕೆ ಟೀಕೆಗೆ ಅವಕಾಶ ನೀಡದು. ಹಾಗಾದರೆ ಭಂತೆ, ಈ ಹಿಂದೆ ಕೆಲವು ಸಮಣ ಬ್ರಾಹ್ಮಣರು ಸಮಣ ಗೋತಮರು ಮಾಯಾವಿದ್ಯೆಗಳನ್ನು ಬಲ್ಲರು ಎಂದು ಹೇಳಿದ್ದನ್ನು ಕೇಳಿ ನಾವು ನಂಬಲಿಲ್ಲ. ನಿಜಕ್ಕೂ ಸಮಣ ಗೋತಮರು ಮಾಯಾವಿ ಆಗಿದ್ದರೆ! ಗ್ರಾಮೀಣಿಯೇ, ಯಾರು ನಾನು ಮಾಯಾಜ್ಞನೆಂದು ಹೇಳುತ್ತಿರುವವರೋ ಅವರು ನನಗೆ ಮಾಯಾವಿ ಎಂದು ಕರೆಯುತ್ತಿರುವವರೇ? ಹೌದು ಭಗವಾನರೇ, ಹೌದು ಸುಗತರೇ. ಹಾಗಾದರೆ, ಗ್ರಾಮೀಣಿಯೇ, ಇದರ ಕುರಿತು ಪ್ರಶ್ನಿಸುವೆ, ನಿನಗೆ ಸರಿ ತೋಚಿದಂತೆ ಉತ್ತರಿಸು.
ಇದರ ಬಗ್ಗೆ ಏನನ್ನು ಯೋಚಿಸುವೆ ಗ್ರಾಮೀಣಿಯೇ? ನಿನಗೆ ಕೋಲಿಯರ ಸ್ವಾರ್ಥಪರತೆ ಹಾಗು ಇಳಿಬೀಳುವಿಕೆಯ ಶಿರ ವಸ್ತ್ರವಿನ್ಯಾಸಗಳು ತಿಳಿದಿರಬೇಕಲ್ಲವೇ? ಹೌದು, ಭಗವಾನ್ ತಿಳಿದಿದೆ.  ಓ ಗ್ರಾಮೀಣಿಯೇ, ನಿನಗೆ ತಿಳಿದಿರುವಂತೆ ಇಳಿಬೀಳುವಿಕೆಯ ಕರವಸ್ತ್ರಧಾರಿಗಳಾದ, ಸ್ವಾಥರ್ಿಗಳಾದ ಕೋಲಿಯರ ಕಾರ್ಯವೇನು? ಭಗವಾನ್ ಅವರ ಕಾರ್ಯವೇ ಕೋಲಿಯ ಕಳ್ಳರನ್ನು ಹಿಡಿಯುವುದು ಹಾಗು ಕೋಲಿಯರ ಸಂದೇಶಗಳನ್ನು ತಲುಪಿಸುವುದು. ನಿನಗೆ ತಿಳಿದಿರುವಂತೆ ಗ್ರಾಮೀಣಿಯೇ, ಈ ಇಳಿಜಾರುವಿಕೆ ಶಿರವಸ್ತ್ರ ವಿನ್ಯಾಸವುಳ್ಳ ಸ್ವಾರ್ಥ ಕೋಲಿಯರು ಶೀಲವಂತರೋ ಅಥವಾ ದುಶ್ಶೀಲರೋ? ಭಗವಾನ್, ನನಗೆ ತಿಳಿದಿರುವಂತೆ ಅವರು ದುಶ್ಶೀಲರಾಗಿದ್ದಾರೆ. ದುಶ್ಚಾರಿತ್ರ್ಯವುಳ್ಳವರಾಗಿದ್ದಾರೆ. ಈ ಜಗತ್ತಿನಲ್ಲಿನ ದುಶ್ಶೀಲರಲ್ಲಿ ಅವರು ಸಹಾ ಸೇರುತ್ತಾರೆ. ಗ್ರಾಮೀಣಿಯೇ, ಈಗ ಒಬ್ಬನು ಹೀಗೆ ಹೇಳುತ್ತಾನೆ: ಪಾಟಲಿಯನಿಗೆ ಜಾರುಗೆಯ ಶಿರವಸ್ತ್ರ ಧರಿಸುವ ಕೋಲಿಯರ ಸ್ವಾರ್ಥಪರತೆ ತಿಳಿದಿದೆ, ಇಂತಹ ಕೋಲಿಯರು ದುಶ್ಶೀಲರಾಗಿರುತ್ತಾರೆ. ಇವರ ಬಗ್ಗೆ ತಿಳಿದ ಪಾಟಲಿಯ ಸಹಾ ದುಶ್ಶೀಲನು ಆಗಿದ್ದಾನೆ, ದುಶ್ಚರಿತನಾಗಿದಾನೆ. ಹೀಗೆ ಒಬ್ಬನು ಹೇಳಬಲ್ಲವನಾದರೆ ಆತನು ಸ್ಪಷ್ಟವಾಗಿ, ಸತ್ಯವಾಗಿ ಹೇಳುವವನಾಗಿರುತ್ತಾನೆಯೋ? ಇಲ್ಲ ಭಂತೆ, ನಾನಂತು ಕೋಲಿಯರಿಗಿಂತ ವಿಭಿನ್ನನಾಗಿದ್ದೇನೆ. ಅವರಂತೆ ನಾನಿಲ್ಲ, ನನ್ನ ಚಾರಿತ್ರ್ಯವು ಸಹಾ ಶುದ್ಧವಾಗಿದೆ. ಹಾಗೆಯೇ ಗ್ರಾಮೀಣಿಯೇ ಇಲ್ಲೊಬ್ಬ ಹೀಗೆ ಹೇಳುತ್ತಾನೆ: ಪಾಟಲಿಯನಿಗೆ ಚಾರುಗೆ ಶಿರವಸ್ತ್ರಧಾರಿಗಳಾದ ಕೋಲಿಯರ ಬಗ್ಗೆ ತಿಳಿದಿದೆ, ಅವರೆಲ್ಲ ದುಶ್ಶೀಲರು. ಆದರೆ ಪಾಟಲಿಯ ಮಾತ್ರ ದುಶ್ಶೀಲನಲ್ಲ, ಚರಿತ್ರಹೀನನಲ್ಲ ಎಂದು ಹೇಳುವುದು ಹೇಗೆ ಸತ್ಯವೋ ಹಾಗೆಯೇ ತಥಾಗತರು ಮಾಯಾವಿದ್ಯೆ (ಅತೀಂದ್ರಿಯ ವಿದ್ಯೆಗಳು/ಪರರ ಮೋಸಗಳ ಬಗ್ಗೆ ಸ್ಪಷ್ಟವಾಗಿ ತಿಳಿದಿರುವುದು) ಬಲ್ಲರು (ಮಾಯಜ್ಞ), ಆದರೆ ತಥಾಗತರು ಮಾಯಾವಿಯಲ್ಲ (ಮೋಸ ಮಾಡುವವರಲ್ಲ). ಓ ಗ್ರಾಮೀಣಿಯೇ, ನನಗೆ ಮಾಯೆ ತಿಳಿದಿದೆ, ಹಾಗೆಯೇ ಮಾಯಾವಿಗಳ ಬಗ್ಗೆಯೂ ತಿಳಿದಿದೆ. ಹೇಗೆ ಮಾಯಾವಿಗಳು ತಮ್ಮ ಕೆಟ್ಟ ಕೃತ್ಯಗಳಿಂದಾಗಿ ಸಾವಿನ ನಂತರ ದುರ್ಗತಿಗೆ ಸೇರುತ್ತಾರೆ, ಯಾವ ಯಾವ ದುರ್ಗತಿಯಲ್ಲಿ ಬೀಳುತ್ತಾರೆ ಎಂದು ತಿಳಿದಿದೆ.
ಓ ಗ್ರಾಮೀಣಿಯೇ, ಜೀವಹತ್ಯೆ, ಜೀವಹತ್ಯೆಯ ಪರಿಣಾಮಗಳನ್ನು ನಾನು ಅರಿತಿದ್ದೇನೆ, ಹೇಗೆ ಒಬ್ಬ ಜೀವಹತ್ಯೆ ಮಾಡುತ್ತಾನೆ ಹಾಗು ಸಾವಿನ ನಂತರದಲ್ಲಿ ಆತನು ಹೇಗೆ ಅದರ ಪರಿಣಾಮವಾಗಿ ದುರ್ಗತಿಯಲ್ಲಿ ಬೀಳುವನು, ವಿನಿಪಾತದಲ್ಲಿ ನಿರಯದಲ್ಲಿ ಉದಯಿಸುವನು ಎಂದೆಲ್ಲಾ ತಿಳಿದಿದೆ. ಅದೇರೀತಿ ಗ್ರಾಮೀಣಿಯೇ, ಕೊಡದಿದ್ದುದನ್ನು ಸ್ವೀಕರಿಸುವವನು... ಕಾಮಗಳಲ್ಲಿ ಮಿಥ್ಯಾಚರ ಮಾಡುವವನು... ಸುಳ್ಳಾಡುವಿಕೆಯಿಂದ... ಕಟು ಸಂಭಾಷಣೆಯಿಂದ... ವ್ಯರ್ಥ ಹರಟೆಯಿಂದ... ದುರಾಸೆಯಿಂದ... ಹಗೆತನದಿಂದ... ಮಿಥ್ಯಾದೃಷ್ಟಿಯಿಂದಾಗಿ... ಆಗುವಂತಹ ಪರಿಣಾಮಗಳನ್ನು ಬಲ್ಲೆನು. ಇವುಗಳಿಂದಾಗಿ ಅವರೆಲ್ಲ ಸಾವಿನ ನಂತರ ದುರ್ಗತಿ, ವಿನಿಪಾತ, ನಿರಯಗಳಲ್ಲಿ ಹುಟ್ಟುವರು.
ಗ್ರಾಮೀಣಿಯೇ, ಇಲ್ಲಿ ಕೆಲವು ಸಮಣ ಬ್ರಾಹ್ಮಣರು ಈ ಬಗೆಯ ದೃಷ್ಟಿಯನ್ನು ಹೊಂದಿದ್ದಾರೆ. ಏನೆಂದರೆ, ಯಾರು ಜೀವಹತ್ಯೆಯನ್ನು ಮಾಡುವನೋ ಆತನು ಈ ಜೀವಿತದಲ್ಲೇ ಅದರ ಪರಿಣಾಮಗಳಾದ ನೋವು-ದುಃಖಗಳನ್ನು ಅನುಭವಿಸುವನು. ಹಾಗೆಯೇ ಯಾರು ಕೊಡದಿದ್ದುದನ್ನು ಸ್ವೀಕರಿಸುವನೋ... ಅನೈತಿಕ ಕಾಮುಕತೆಯಲ್ಲಿ ನಿರತನೋ, ಸುಳ್ಳು ಹೇಳುವನೋ.... ಇವರೆಲ್ಲರೂ ನೋವು ಹಾಗು ದುಃಖಗಳನ್ನು ಈ ಜೀವಿತದಲ್ಲೇ ಅನುಭವಿಸುವರು. ಹೀಗೆ ಕೆಲವು ಸಮಣ ಬ್ರಾಹ್ಮಣರು ದೃಷ್ಟಿಕೋನವನ್ನು ಹೊಂದಿದ್ದಾರೆ.
ಇಲ್ಲಿ ಗ್ರಾಮೀಣಿಯೇ, ಒಬ್ಬನು ಸ್ನಾನ ಮಾಡಲ್ಪಟ್ಟು ಹಾರಗಳಿಂದ ಅಲಂಕೃತನಾಗಿ, ಶೃಂಗರಿಸಲ್ಪಟ್ಟು ಆತನ ಕೂದಲು, ಗಡ್ಡವೆಲ್ಲಾ ಸುಂದರವಾಗಿ ಕತ್ತರಿಸಲ್ಪಟ್ಟು ರಾಜನಂತೆ ಸ್ತ್ರೀಯೊಂದಿಗೆ ಇಂದ್ರೀಯಸುಖಗಳಲ್ಲಿ ತಲ್ಲೀನನಾಗಿರುತ್ತಾನೆ. ಆಗ ಯಾರೋ ಒಬ್ಬನು ಆತನ ಬಗ್ಗೆ ಹೀಗೆ ಕೇಳುತ್ತಾರೆ: ಅಯ್ಯಾ! ಈ ಮಾನವ ಹೀಗೆ ಶೃಂಗರಿಸಲ್ಪಟ್ಟು ರಾಜನಂತೆ ವೈಭೋಗದಿಂದ ಇರುವನಲ್ಲ, ಈತನು ಅಂತಹ ಯಾವ ಸಾಧನೆಯನ್ನು ಮಾಡಿದ್ದಾನೆ? ಆಗ ಅವರು ಹೀಗೆ ಉತ್ತರಿಸುತ್ತಾರೆ: ಅಯ್ಯಾ, ಈ ಮಾನವನು ರಾಜನ ಶತ್ರುವನ್ನು ಕೊಂದಿದ್ದಾನೆ. ಅದರಿಂದಾಗಿ ರಾಜನು ಸಂತೋಷಿತನಾಗಿ ಹೀಗೆ ಅನುಗ್ರಹ ತೋರಿದ್ದಾನೆ. ಆದ್ದರಿಂದಲೇ ಆತನು ಹೀಗೆ ರಾಜನಂತೆ ಶೃಂಗರಿಸಲ್ಪಟ್ಟು ಹಾರದಿಂದ ಅಲಂಕೃತನಾಗಿ, ಸ್ತ್ರೀಯರೊಂದಿಗೆ ಸುಖಿಸುತ್ತಾನೆ.
ನಂತರ ಗ್ರಾಮೀಣಿಯೇ, ಇಲ್ಲಿ ಒಬ್ಬನಿಗೆ ಕೈಗಳನ್ನು ಹಿಂಬದಿಗೆ ಹಗ್ಗದಿಂದ ಗಟ್ಟಿಯಾಗಿ ಕಟ್ಟಿಹಾಕಿ, ಆತನ ತಲೆಯನ್ನು ಬೋಳಿಸಿ, ಆತನಿಗೆ ಬೀದಿಯಿಂದ ಬೀದಿಗೆ, ಚೌಕದಿಂದ ಚೌಕಕ್ಕೆ ಎಳೆದಾಡುತ್ತಾ, ಅಶುಭಸೂಚಕ ನಗಾರಿಯನ್ನು ಬಾರಿಸುತ್ತ ದಕ್ಷಿಣ ದ್ವಾರದ ಮೂಲಕ ಕರೆದೊಯ್ದು, ನಗರದ ದಕ್ಷಿಣದಲ್ಲಿ ಶಿರಚ್ಛೇದನ ಮಾಡುತ್ತಾರೆ. ಆತನ ಬಗ್ಗೆ ಯಾರಾದರೂ ಹೀಗೆ ಕೇಳುತ್ತಾರೆ: ಅಯ್ಯಾ, ಈ ಮನುಷ್ಯ ಮಾಡಿರುವುದಾದರೂ ಏನನ್ನು, ಏತಕ್ಕಾಗಿ ಈತನ ಕೈಗಳನ್ನು ಹಿಂದಕ್ಕೆ ಕಟ್ಟಿ... ಶಿರಚ್ಛೇದನ ಮಾಡುತ್ತಿರುವಿರಿ? ಅವರು ಉತ್ತರಿಸುತ್ತಾರೆ: ಸಜ್ಜನರೇ, ಈ ಮನುಷ್ಯ ರಾಜನ ಶತ್ರುವಾಗಿದ್ದಾನೆ, ಈತನು ಪುರುಷನ ಅಥವಾ ಸ್ತ್ರೀಯ ಪ್ರಾಣವನ್ನು ತೆಗೆದಿದ್ದಾನೆ. ಆದ್ದರಿಂದಲೇ ಅಧಿಕಾರಿಗಳಿಂದ ಈ ರೀತಿ ಬಂಧಿತನಾಗಿ, ಈ ಬಗೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.
ಯಾವರೀತಿ ಯೋಚಿಸುವೆ ಗ್ರಾಮೀಣಿಯೇ, ಇಂತಹ ಸನ್ನಿವೇಶವನ್ನು ನೀನು ಎಂದಾದರೂ ನೋಡಿರಬೇಕು ಅಥವಾ ಕೇಳಿರಬೇಕು ಅಲ್ಲವೇ? ಖಂಡಿತವಾಗಿಯೂ ನೋಡಿದ್ದೇನೆ ಭಂತೆ, ಕೇಳಿದ್ದೇನೆ ಸಹಾ, ಮುಂದೆಯೂ ಸಹಾ ಕೇಳಬಹುದು. ಹಾಗಾದರೆ ಗ್ರಾಮೀಣಿಯೇ, ಯಾವ ಸಮಣ ಬ್ರಾಹ್ಮಣರು ಈ ಬಗೆಯ ದೃಷ್ಟಿಕೋನವನ್ನು ಇಟ್ಟುಕೊಂಡು ಹೀಗೆ ಹೇಳುತ್ತಾರೆ? ಯಾರೇ ಆಗಲಿ, ಪ್ರಾಣವನ್ನು ತೆಗೆದರೆ ಅವರು ಇಲ್ಲಿಯೇ, ಈಗಲೇ ನೋವಿನ ಅಥವಾ ದುಃಖದ ಅನುಭವವನ್ನು ಪಡೆಯುತ್ತಾರೆ. ಹೇಳು ಗ್ರಾಮೀಣಿಯೇ, ಅವರು ಹೇಳುವುದು ಸತ್ಯವೋ ಅಥವಾ ಮಿಥ್ಯವೋ? ಮಿಥ್ಯ ಭಂತೆ. ಹಾಗಾದರೆ ಈ ರೀತಿ ಸುಳ್ಳು ಹೇಳುವವರು ಶೀಲವಂತರೋ ಅಥವಾ ದುಶ್ಶೀಲರೋ? ದುಶ್ಶೀಲರು ಭಂತೆ. ಹಾಗಾದರೆ ಈ ಬಗೆಯ ದುಶ್ಶೀಲರು ಸಮ್ಯಕ್ ಆಚರಣೆಯವರೋ ಅಥವಾ ಮಿಥ್ಯಾಚರಣೆಯುಳ್ಳವರೋ? ಮಿಥ್ಯಾಚರಣೆಯುಳ್ಳವರು ಭಂತೆ. ಹಾಗಾದರೆ ಈ ಬಗೆಯ ಮಿಥ್ಯಾಚರಣೆಯುಳ್ಳವರು ಮಿಥ್ಯಾದೃಷ್ಟಿ ಹೊಂದಿರುವರೋ ಅಥವಾ ಸಮ್ಯಕ್ದೃಷ್ಟಿ ಹೊಂದಿರುವವರೋ? ಮಿಥ್ಯಾದೃಷ್ಟಿ ಭಂತೆ. ಯಾರು ಮಿಥ್ಯಾದೃಷ್ಟಿ ಹೊಂದಿದವರೋ ಅಂಥಹವರಲ್ಲಿ ಶ್ರದ್ಧೆ ಇಡಬಹುದೇ? ಇಲ್ಲ ಭಂತೆ, ಇಡಲಾಗದು.
ನಂತರ ಗ್ರಾಮೀಣಿಯೇ, ಇಲ್ಲೊಬ್ಬ ಸ್ನಾನದಿಂದ ಶುಚಿಯಾಗಿ, ಅಲಂಕೃತನಾಗಿ, ತಲೆಕೂದಲು ಹಾಗು ಗಡ್ಡದಿಂದ ಸುಂದರವಾಗಿ ಕಾಣಿಸಲ್ಪಟ್ಟ ರಾಜನಂತೆ ಸ್ತ್ರೀಯರೊಂದಿಗೆ ಸುತ್ತುವರೆಯಲ್ಪಟ್ಟಾಗ ಕೆಲವರು ಆತನ ಬಗ್ಗೆ ಹೀಗೆ ಕೇಳುತ್ತಾರೆ: ಅಯ್ಯ, ಈ ಮನುಷ್ಯ ಅಂತಹದ್ದೇನು ಮಾಡಿದ್ದಾನೆ, ಅದರಿಂದಾಗಿ ಆತನು ಶುಚಿ ಶೃಂಗಾರ ಹಾಗು ಸ್ತ್ರೀಯರೊಂದಿಗೆ ರಾಜನಂತೆ ಕಾಣುತ್ತಾನೆ? ಆಗ ಅವರು ಹೀಗೆ ಉತ್ತರಿಸುತ್ತಾರೆ. ಅಯ್ಯ, ಈ ವ್ಯಕ್ತಿಯು ರಾಜನ ಶತ್ರುವನ್ನು ಕೊಂದು ರತ್ನವನ್ನು ಕದ್ದಿದ್ದಾನೆ.  ಇದರಿಂದಾಗಿ ರಾಜನು ಸಂಪ್ರೀತನಾಗಿ ಆತನಿಗೆ ಈ ಬಗೆಯ ಉಡುಗೊರೆಗಳನ್ನು ನೀಡಿದ್ದಾನೆ. ಆದ್ದರಿಂದಲೇ... ಈ ಬಗೆಯಲ್ಲಿ ರಾಜನಂತೆ ಸ್ತ್ರೀಯರಿಂದ ಸುತ್ತುವರೆಯಲ್ಪಟ್ಟಿದ್ದಾನೆ.
ನಂತರ ಗ್ರಾಮೀಣಿಯೇ, ಇಲ್ಲೊಬ್ಬನಿಗೆ ಕೈಗಳನ್ನು ಹಿಂದಕ್ಕೆ ಬಲಯುತವಾಗಿ ಹಗ್ಗದಿಂದ ಕಟ್ಟಿಹಾಕಿ, ಆತನ ತಲೆಯನ್ನು ಬೋಳಿಸಿ, ಆತನಿಗೆ ಬೀದಿಯಿಂದ ಬೀದಿಗೆ ಎಳೆದಾಡುತ್ತಾ, ಚೌಕದಿಂದ ಚೌಕಕ್ಕೆ ಎಳೆದಾಡುತ್ತಾ, ಅಶುಭ ಸೂಚಕ ವಾದ್ಯಗಳಿಂದ ಮದ್ದಳೆಗಳನ್ನು ಬಾರಿಸಿಕೊಂಡು ನಗರದ ದಕ್ಷಿಣದ ದಿಕ್ಕಿನ ಅಂಚಿಗೆ ದಕ್ಷಿಣಾಭಿಮುಖವಾಗಿ ಕರೆದೊಯ್ದು ಅಲ್ಲಿ ಆತನ ಶಿರಚ್ಛೇದನ ಮಾಡುತ್ತಾರೆ. ಆಗ ಅಲ್ಲಿರುವವನೊಬ್ಬನು ಹೀಗೆ ಕೇಳುವನು: ಅಯ್ಯ ಏತಕ್ಕಾಗಿ ಈ ವ್ಯಕ್ತಿಯನ್ನು ಹೀಗೆ ಕೈಗಳನ್ನು ಬಲಯುವವಾದ ಹಗ್ಗದಿಂದ ಹಿಂದಕ್ಕೆ ಕಟ್ಟಿಹಾಕಿ ದಕ್ಷಿಣಾಭಿಮುಖವಾಗಿ ಎಳೆತಂದು... ಶಿರಚ್ಛೇದನ ಮಾಡಲಾಗಿದೆ? ಆಗ ಅವರು ಉತ್ತರಿಸುವರು: ಅಯ್ಯಾ, ಈ ವ್ಯಕ್ತಿಯು ರಾಜನ ಶತ್ರುವಾಗಿದ್ದಾನೆ. ಈತನು ಹಳ್ಳಿಯಿಂದ ಅಥವಾ ಕಾಡಿನಿಂದ ಏನನ್ನೋ ಕದ್ದಿದ್ದಾನೆ. ಈತನು ಚೋರನಾಗಿದ್ದಾನೆ. ಆದ್ದರಿಂದಲೇ ಆಳುವವರು ಈತನಿಗೆ ಹೀಗೆ ಬಂಧಿಸಿ, ಈ ಬಗೆಯಲ್ಲಿ ಶಿಕ್ಷೆಯನ್ನು ನೀಡಿದ್ದಾರೆ. ಈಗ ಯಾವರೀತಿ ಯೋಚಿಸುವೆ ಗ್ರಾಮೀಣಿಯೇ, ನೀನು ಈ ಬಗೆಯ ವಿದ್ಯಮಾನಗಳನ್ನು ನೋಡಿರುವೆ ಅಥವಾ ಕೇಳಿರುವೆಯಲ್ಲವೆ? ಭಂತೆ, ಈ ಬಗೆಯವುಗಳನ್ನು ನಾನು ನೋಡಿರುವೆನು ಹಾಗು ಕೇಳಿರುವೆನು ಹಾಗು ಕೇಳುತ್ತಲೇ ಇರುವೆನು. ಹಾಗಾದರೆ ಗ್ರಾಮೀಣಿಯೇ, ಯಾವ ಸಮಣ ಬ್ರಾಹ್ಮಣರು ಕೊಡದಿದ್ದುದನ್ನು ಸ್ವೀಕರಿಸುವವನು ಇಲ್ಲಿಯೇ ಈಗಲೇ ನೋವು ಹಾಗು ದುಃಖಗಳನ್ನು ಅನುಭವಿಸುವನು ಎಂದು ಪ್ರತಿಪಾದಿಸುವವರು ಸುಳ್ಳನ್ನು ಹೇಳುತ್ತಿರುವರೋ ಅಥವಾ ಸತ್ಯವನ್ನು ನುಡಿಯುತ್ತಿರುವರೋ... ಅಂತಹವರಲ್ಲಿ ಶ್ರದ್ಧೆಯಿಡುವುದು ಯೋಗ್ಯವೋ? ಇಲ್ಲ ಭಂತೆ.
ಮತ್ತೆ ಗ್ರಾಮೀಣಿಯೇ, ಇಲ್ಲಿ ಒಬ್ಬನು ಸ್ನಾನಮಾಡಿ, ಹೂಹಾರಗಳಿಂದ ಅಲಂಕೃತಗೊಳಿಸಿ, ಕೂದಲು ಗಡ್ಡ ಕತ್ತರಿಸಿ ಅಲಂಕೃತನಾಗಿ ಸ್ತ್ರೀಯರೊಂದಿಗೆ ರಾಜನಂತೆ ಸುಖಯೋಗಗಳಲ್ಲಿರುವಂತೆ ಕಾಣಿಸಿಕೊಂಡಾಗ ಆತನ ಬಗ್ಗೆ ಯಾರದರೂ ಹೀಗೆ ಕೇಳುತ್ತಾರೆ: ಅಯ್ಯಾ, ಈ ಮನುಷ್ಯನು ಅಂತಹದ್ದೇನನ್ನು ಮಾಡಿದ್ದಾನೆ. ಅದರ ಫಲವಾಗಿ ಹೀಗೆ... ರಾಜನಂತೆ ಸುಖಿಸುತ್ತಿದ್ದಾನೆ. ಆಗ ಅವರು ಹೀಗೆ ಉತ್ತರಿಸುತ್ತಾರೆ: ಮಾನ್ಯರೇ, ಈ ಮನುಷ್ಯನು ರಾಜನ ಶತ್ರುಗಳ ಸ್ತ್ರೀಯರ ಶೀಲವನ್ನು ಹರಣಮಾಡಿದ್ದಾನೆ, ಆ ಕಾರಣಕ್ಕಾಗಿ ರಾಜನು ಹೀಗೆ ಪ್ರಸನ್ನನಾಗಿ ಹೀಗೆ ಕೃಪೆ ತೋರಿದ್ದಾನೆ... ಆದ್ದರಿಂದ ರಾಜನಂತೆ ಸುಖಭೋಗಗಳಲ್ಲಿ ತಲ್ಲೀನನಾಗಿದ್ದಾನೆ.
ಮತ್ತೆ ಗ್ರಾಮೀಣಿಯೇ, ಇಲ್ಲಿ ಒಬ್ಬನಗೆ ಆತನ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ ಆತನ ತಲೆಯನ್ನು ಬೋಳಿಸಿ, ಬೀದಿಯಿಂದ ಬೀದಿಗೆ, ಚೌಕದಿಂದ ಚೌಕಕ್ಕೆ ಎಳೆದಾಡುತ್ತಾ, ಅಶುಭಸೂಚಕ ವಾದ್ಯಗಳನ್ನು ಬಾರಿಸುತ್ತ, ನಗರದ ದಕ್ಷಿಣ ದಿಕ್ಕಿನತ್ತ ಸಾಗುತ್ತ ದಕ್ಷಿಣ ದಿಕ್ಕಿನ ಕೊನೆಗೆ ಆತನ ಶಿರಚ್ಛೇದನ ಮಾಡಲಾಗುತ್ತದೆ. ಆಗ ಯಾರಾದರೊಬ್ಬ ಆತನ ಬಗ್ಗೆ ಹೀಗೆ ಕೇಳುತ್ತಾರೆ... ಅಯ್ಯಾ, ಈ ಮನುಷ್ಯ ಅಂತಹದೇನನ್ನು ಮಾಡಿದ್ದಾನೆ. ಆತನಿಗೆ ಹೀಗೆ ಕೈಕಟ್ಟಿ ಬೀದಿಗಳಲ್ಲಿ ಎಳೆದಾಡುತ್ತಾ, ದಕ್ಷಿಣದ ಕೊನೆಯಲ್ಲಿ ಶಿರಚ್ಛೇದನ ಮಾಡಲಾಗುತ್ತಿದೆ... ಆಗ ಅವರು ಹೀಗೆ ಉತ್ತರಿಸುವರು: ಅಯ್ಯಾ, ಈ ಮನುಷ್ಯ ಉತ್ತಮ ವಂಶಸ್ಥರ ಸ್ತ್ರಿಯರಿಗೆ ಹಾಗು ಹುಡುಗಿಯರಿಗೆ ಅಪವಿತ್ರಗೊಳಿಸಿದ್ದಾನೆ, ಆದ್ದರಿಂದ ಆಡಳಿತಗಾರರು ಹೀಗೆ ಆತನಿಗೆ ಬಂಧಿಸಿ ಈ ಬಗೆಯಲ್ಲಿ ಶಿಕ್ಷಿಸುತ್ತಿದ್ದಾರೆ. ಈಗ ಹೇಳು ಗ್ರಾಮೀಣಿಯೇ, ಇಂತಹ ವಿಷಯಗಳನ್ನು ನೀನು ಕೇಳಿರಬೇಕಲ್ಲವೇ? ನಾನು ನೋಡಿದ್ದೇನೆ ಮತ್ತು ಕೇಳಿದ್ದೇನೆ ಭಂತೆ ಮತ್ತು ಮುಂದೆಯೂ ಕೇಳಲಿರುವೆನು. ಈಗ ಹೇಳು ಗ್ರಾಮೀಣಿಯೆ, ಯಾವ ಸಮಣ ಬ್ರಾಹ್ಮಣರು ಹೀಗೆ ಪ್ರತಿಪಾದಿಸುವರೋ ಯಾರಾದರೂ ಅನೈತಿಕವಾಗಿ ಕಾಮತೃಷ್ಣೆಯಲ್ಲಿ ತೊಡಗಿದರೆ ಅವರೆಲ್ಲಾ ಇಲ್ಲಿಯೇ ಹಾಗು ಈಗಲೇ ದುಃಖ ಅನುಭವಿಸುತ್ತಾರೆ ಅವರು ನಿಜವನ್ನೇ ನುಡಿಯುತ್ತಿರುವವರೇ ಅಥವಾ ಸುಳ್ಳನ್ನು ನುಡಿಯುತ್ತಿರುವವರೇ?... ಅಂತಹ ಮಿಥ್ಯಾದೃಷ್ಟಿ ಹೊಂದಿರುವವರಲ್ಲಿ ಶ್ರದ್ದೆಯನ್ನು ಇಡುವುದು ಸಮಂಜಸವೇ? ಇಲ್ಲ ಭಂತೆ.
ಇಲ್ಲಿ ಗ್ರಾಮೀಣಿಯೇ, ಯಾರಾದರೊಬ್ಬನು ಶುಚಿಗೊಂಡು, ಹೂಹಾರಗಳಿಂದ, ವಸ್ತ್ರಾಭರಣಗಳಿಂದ ಅಲಂಕೃತನಾಗಿ ಕೂದಲನ್ನು ಹಾಗು ಗಡ್ಡವನ್ನು ಅಲಂಕೃತಗೊಳಿಸಿದವನಾಗಿ, ಸ್ತ್ರೀಯರೊಂದಿಗೆ ರಾಜನಂತೆ ಸುಖಭೋಗಗಳೊಂದಿಗೆ ಇರುವುದನ್ನು ಕಂಡು ಒಬ್ಬನು ಹೀಗೆ ಕೇಳುತ್ತಾನೆ: ಅಯ್ಯಾ, ಈ ಮನುಷ್ಯ ಅಂತಹ ಏನನ್ನು ಮಾಡಿದ್ದಾನೆ, ಅದರಿಂದಾಗಿ ಹೀಗೆ ವೈಭೋಗದಲ್ಲಿ ತಲ್ಲೀನನಾಗಿದ್ದಾನೆ? ಅವರು ಆಗ ಹೀಗೆ ಉತ್ತರಿಸುವರು: ಅಯ್ಯಾ, ಈ ಮನುಷ್ಯ ರಾಜನನ್ನು ತನ್ನ ಸುಳ್ಳಿನ ಕಂತೆಯಿಂದ, ಮಿಥ್ಯಾವಾಚಾದಿಂದಾಗಿ ರಂಜಿಸಿದ್ದಾನೆ. ಆ ಕಾರಣಕ್ಕಾಗಿ ರಾಜನು ಪ್ರಸನ್ನನಾಗಿ ಆತನಿಗೆ ಹಲವಾರು ಉಡುಗೊರೆಗಳನ್ನು ಹಾಗು ಈ ಸುಖಭೋಗಗಳನ್ನೆಲ್ಲಾ ದಯಪಾಲಿಸಿದ್ದಾನೆ. ಆದ್ದರಿಂದಲೇ ಈತನು ಹೀಗೆ ರಾಜನಂತೆ ಸುಖಭೋಗಗಳಲ್ಲಿ ತಲ್ಲೀನನಾಗಿದ್ದಾನೆ.
ನಂತರ ಗ್ರಾಮೀಣಿಯೇ, ಇಲ್ಲಿ ಒಬ್ಬನಿಗೆ ಆತನ ಕೈಗಳನ್ನು ಬಲವಾದ ಹಗ್ಗದಿಂದ ಗಟ್ಟಿಯಾಗಿ ಕಟ್ಟಿಹಾಕಿ ಆತನ ತಲೆಯನ್ನು ಬೋಳಿಸಿ ಆತನನ್ನು ಬೀದಿಯಿಂದ ಬೀದಿಗೆ, ಚೌಕದಿಂದ ಚೌಕಕ್ಕೆ ಎಳೆದಾಡುತ್ತಾ, ಅಶುಭಕಾರಕ ವಾದ್ಯಗಳನ್ನು ಬಾರಿಸುತ್ತ ಆತನನ್ನು ನಗರದ ದಕ್ಷಿಣಾಭಿಮುಖವಾಗಿ ಕರೆದೊಯ್ದು, ನಗರದ ದಕ್ಷಿಣದ ಕೊನೆಯಲ್ಲಿ ಆತನ ಶಿರಚ್ಛೇದನ ಮಾಡಲಾಗುತ್ತದೆ. ಅದನ್ನು ವೀಕ್ಷಿಸಿದ ಒಬ್ಬನು ಹೀಗೆ ಕೇಳುತ್ತಾನೆ: ಅಯ್ಯಾ, ಈ ಮನುಷ್ಯ ಅಂತಹದ್ದೇನನ್ನು ಮಾಡಿದ್ದಾನೆ. ಆತನಿಗೆ ಹೀಗೆ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ... ಶಿರಚ್ಛೇದನ ಮಾಡಲಾಗುತ್ತಿದೆ? ಆಗ ಆತನು ಹೀಗೆ ಉತ್ತರಿಸುವನು: ಅಯ್ಯಾ, ಈ ಮನುಷ್ಯ ತನ್ನ ಸುಳ್ಳಿನಿಂದಾಗಿ, ತನ್ನ ಮಿಥ್ಯಾವಾಚಾದಿಂದಾಗಿ ಇಂತಹ ಗೃಹಸ್ಥನ ಅಥವಾ ಇಂತಹ ಗೃಹಸ್ಥನ ಪುತ್ರನಿಗೆ ಹಾಳು ಮಾಡಿದ್ದಾನೆ, ಅವರಿಗೆ ದುರ್ಗತಿ ತಂದಿದ್ದಾನೆ. ಆದ್ದರಿಂದಲೇ ರಾಜರು ಆತನಿಗೆ ಬಂಧಿಸಿ ಈ ಬಗೆಯ ಶಿಕ್ಷೆಯನ್ನು ನೀಡಿದ್ದಾರೆ. ಈಗ ಹೇಗೆ ಯೋಚಿಸುವೆ ಗ್ರಾಮೀಣಿಯೇ, ಇಂತಹ ವಿಷಯಗಳನ್ನು ನೀನು ನೋಡಿರಬಹುದು ಅಥವಾ ಕೇಳಿರಬಹುದಲ್ಲವೇ? ಹೌದು ಭಂತೆ, ಇಂತಹವುಗಳನ್ನು ನಾನು ನೋಡಿರುವೆನು, ಕೇಳಿರುವೆನು ಹಾಗು ಮತ್ತಷ್ಟು ಕೇಳುವೆನು. ಇಲ್ಲಿ ಗ್ರಾಮೀಣಿಯೇ, ಯಾವ ಸಮಣ ಬ್ರಾಹ್ಮಣರು ಹೀಗೆ ಯಾರಾದರೂ ಸುಳ್ಳು ಹೇಳಿದರೆ ಅವರು ಇಲ್ಲಿಯೇ ಹಾಗು ಈಗಲೇ ದುಃಖ ನೋವುಗಳನ್ನು ಅನುಭವಿಸುವರು ಎಂದು ಪ್ರತಿಪಾದಿಸುವವರು ಸತ್ಯವನ್ನು ನುಡಿಯುತ್ತಿದ್ದಾರೆಯೇ ಅಥವಾ ಮಿಥ್ಯವನ್ನು ನುಡಿಯುತ್ತಿದ್ದಾರೆಯೇ?.... ಈ ಬಗೆಯ ಮಿಥ್ಯಾದೃಷ್ಟಿಯನ್ನು ಹೊಂದಿರುವವರಲ್ಲಿ ಶ್ರದ್ಧೆಯನ್ನು ಇಡಬಹುದೆ? ಇಲ್ಲ ಭಂತೆ.
ಆಶ್ಚರ್ಯಕರ ಭಂತೆ! ಅದ್ಭುತ ಭಂತೆ! ಭಗವಾನ್ ನನ್ನಲ್ಲಿ ವಿಶ್ರಾಮಗೃಹ ಒಂದಿದೆ. ಅದರಲ್ಲಿ ಮಂಚಗಳಿವೆ, ಆಸನಗಳಿವೆ, ಉದಕದ ಬಿಂದಿಗೆಗಳಿವೆ, ತೈಲವುಳ್ಳ ದೀಪಗಳಿವೆ. ಯಾವಾಗಲಾದರೂ ಯಾವುದಾದರೂ ಸಮಣ ಬ್ರಾಹ್ಮಣನು ಅಲ್ಲಿಗೆ ಬಂದರೆ ವಿಶ್ರಮಿಸಬಹುದು. ಆಗ ಅಲ್ಲಿ ನಾನು ನನ್ನ ಯಥಾಶಕ್ತಿಗೆ ಅನುಸಾರವಾಗಿ, ಯಥಾಬಲಕ್ಕೆ ಅನುಸಾರವಾಗಿ ಹಂಚಿಕೊಳ್ಳುವೆನು. ಭಗವಾನ್, ಈ ಹಿಂದೆ ವಿಭಿನ್ನ ದೃಷ್ಟಿಕೋನವುಳ್ಳ, ವಿಭಿನ್ನ ನಂಬಿಕೆಯುಳ್ಳವರ, ವಿಭಿನ್ನ ಆಯ್ಕೆಯುಳ್ಳವರಾಗಿದ್ದಂತಹ ನಾಲ್ಕು ಗುರುಗಳು ಆ ವಿಶ್ರಾಮ ಧಾಮದಲ್ಲಿ ವಿಶ್ರಮಿಸಿದ್ದರು.
ಒಬ್ಬ ಗುರುವು (ಮೊದಲನೇ ಗುರುವು) ಈ ಬಗೆಯ ದೃಷ್ಟಿಕೋನ ಹಾಗು ಸಿದ್ಧಾಂತವನ್ನು ಹೊಂದಿರುತ್ತಾನೆ: ದಾನವನ್ನು ನೀಡದಿರುವುದು, ಯಾವುದನ್ನು ನೀಡದಿರುವುದು. ಏಕೆಂದರೆ ಒಳ್ಳೆಯ ಹಾಗು ಕೆಟ್ಟ ಕಾರ್ಯಗಳಿಗೆ ಫಲವೇ ಇಲ್ಲ; ಈ ಲೋಕವಿಲ್ಲ, ಫರಲೋಕವೇ ಇಲ್ಲ; ತಾಯಿಯಿಲ್ಲ, ತಂದೆಯಿಲ್ಲ, ತಕ್ಷಣವೇ ಜನಿಸುವಂತಹ ಜೀವಿಗಳಿಲ್ಲ; ಸರಿಯಾದ ಹಾದಿಯಲ್ಲಿ ಸಾಗುತ್ತಿರುವ ಸಮಣ ಬ್ರಾಹ್ಮಣರಿಲ್ಲ. ಅಭಿಜ್ಞಾದಿಂದಾಗಿ ನೇರವಾದ ಜ್ಞಾನ ಪಡೆದಂತಹ ಹಾಗು ಅದರಿಂದಾಗಿ ಸರ್ವಲೋಕಗಳನ್ನು ಅರಿತು ಪರಿರಿಗೆ ಅವನ್ನೆಲ್ಲಾ ಹೇಳುವ ಅಭಿಜ್ಞಾಸಂಪನ್ನರಿಲ್ಲ.
ಹಾಗೆಯೇ ಇನ್ನೊಬ್ಬ ಗುರುವು (ಎರಡನೇ ಗುರುವು) ಈ ಬಗೆಯ ಸಿದ್ಧಾಂತವನ್ನು ಹಾಗು ದೃಷ್ಟಿಕೋನಗಳನ್ನು ಹೊಂದಿರುತ್ತಾನೆ; ನೀಡುವುದರಿಂದಾಗಿ, ಅಪರ್ಿಸುವುದರಿಂದಾಗಿ ಹಾಗು ಯಾವುದೆಲ್ಲವನ್ನು ದಾನದಿಂದ ಸಮಪರ್ಿಸಲಾಗಿದೆಯೋ, ಅವೆಲ್ಲ ಪುಣ್ಯಗಳಿಗೆ ಫಲವಿದೆ. ಹಾಗೆಯೇ ಕೆಟ್ಟ ಕಾರ್ಯಗಳಿಗೂ ಫಲವಿದೆ. ಈ ಲೋಕವಿದೆ. ಹಾಗೆಯೇ ಪರಲೋಕವೂ ಇದೆ. ತಕ್ಷಣವೇ ಪುನರ್ಜನ್ಮ ಪಡೆಯುವಂತಹ ಜೀವಿಗಳೂ ಇವೆ. ಯೋಗ್ಯವಾದ ಜೀವನ ನಡೆಸುವಂತಹ ಸಮಣ ಬ್ರಾಹ್ಮಣರೂ ಇದ್ದಾರೆ. ಈ ಲೋಕವನ್ನು ಹಾಗು ಪರಲೋಕವನ್ನು ನೇರವಾಗಿ ಅರಿಯುವಂತಹ ಹಾಗು ಪರರಿಗೂ ತಿಳಿಸುವಂತಹ ಅಭಿಜ್ಞಾಸಂಪನ್ನರೂ ಇದ್ದಾರೆ.
ಹಾಗೆಯೇ ಇನ್ನೊಬ್ಬ ಗುರುವು (ಮೂರನೇ ಗುರುವು) ಈ ಬಗೆಯ ಸಿದ್ಧಾಂತವನ್ನು ಹಾಗು ದೃಷ್ಟಿಕೋನಗಳನ್ನು ಹೊಂದಿರುತ್ತಾನೆ: ಒಬ್ಬನು ಕಾರ್ಯತತ್ಪರನಾಗಿ ಅಥವಾ ಪರರಲ್ಲೂ ಕ್ರಿಯಾಶೀಲತೆನ್ನುಂಟು ಮಾಡಿ, ಹೇಗೆಂದರೆ ಒಬ್ಬನು ವಿಲಾಂಗತೆನ್ನುಂಟು ಮಾಡಿ, ಅಥವಾ ಪರರು ವಿಕಲಾಂಗರಾಗುವಂತೆ ಮಾಡಿ, ಹಾಗೆಯೇ ಒಬ್ಬನು ಚಿತ್ರಹಿಂಸೆಯನ್ನು ನೀಡಿ, ಅಥವಾ ಚಿತ್ರಹಿಂಸೆಯನ್ನು ಮಾಡುವಂತೆ ಪ್ರೇರೇಪಿಸಿ, ಹಾಗೆಯೇ ಒಬ್ಬನು ದುಃಖಕ್ಕೆ ಗುರಿಯಾಗಿಸಿ ಅಥವಾ ಪರಿರಿಗೂ ದುಃಖಕ್ಕೆ ಗುರಿಯಾಗಿಸಿ, ಹಾಗೆಯೇ ಒಬ್ಬನು ಪರರಿಗೆ ದಮಿಸಿ, ಹಾಗೆಯೇ ಇತರರು ಪರರನ್ನು ದಮಿಸುವಂತೆ ಮಾಡಿ, ಹಾಗೆಯೇ ಒಬ್ಬನು ಪರರಿಗೆ ಬೆದರಿಕೆಹಾಗಿ ಹಾಗೆಯೇ ಇತರರು ಪರರನ್ನು ಬೆದರಿಸುವಂತೆ ಮಾಡಿ, ಹಾಗೆಯೇ ಒಬ್ಬನು ಜೀವಹತ್ಯೆಯನ್ನು ಮಾಡಿ, ಕೊಡದಿದ್ದುದನ್ನು ಅಪಹರಿಸಿ, ಮನೆಗಳನ್ನು ಹೊಡೆದು ಐಶ್ವರ್ಯವನ್ನು ದೋಚಿ, ಕನ್ನಹಾಕಿ, ಹೆದ್ದಾರಿಗಳಲ್ಲಿ ದರೋಡೆ ಮಾಡಿ, ಪರರ ಪತ್ನಿಯರನ್ನು ಮಲೀನ ಮಾಡಿ, ಸುಳ್ಳು ಹೇಳುತ್ತಾ ಹೀಗೆ ಆತನಂದ ಆಗದ ಪಾಪವೇ ಇಲ್ಲ ಎಂಬಂತೆ ವತರ್ಿಸಿ, ಹಾಗೆಯೇ ಅತಿ ಚೂಪಾದ ಗರಗರ ತಿರುಗುವ ಚಕ್ರದಿಂದ ಭೂಮಿಯಲ್ಲಿರುವ ಎಲ್ಲಾ ಜೀವಿಗಳನ್ನು ಹತ್ಯೆಗೈದು ಅವರನ್ನೆಲ್ಲಾ ಒಂದು ಬೃಹತ್ ಮಾಂಸದ ರಾಶಿಯಂತೆ ಹರಡಿದರೂ ಸಹಾ ಆತನಿಗೆ ಯಾವ ಪಾಪದ ಪರಿಣಾಮವೂ ಸಿಗುವುದಿಲ್ಲ. ಹೀಗೆಯೇ ಆತನು ಗಂಗಾನದಿಯ ದಕ್ಷಿಣ ದಡದ ಉದ್ದಕ್ಕೂ ಹತ್ಯೆಗಳನ್ನು ಮಾಡುತ್ತಾ, ಅಂಗಗಳನ್ನು ಕತ್ತರಿಸುತ್ತಾ, ಪರರಿಗೂ ಹೀಗೆಯೇ ಪ್ರೇರೇಪಿಸುತ್ತಾ, ತಾನು ಚಿಂತ್ರಹಿಂಸೆ ನೀಡುತ್ತಾ ಪರರಿಗೂ ಹಾಗೆಯೇ ಪ್ರೇರೇಪಿಸುತ್ತಾ ಇನ್ನಿಲ್ಲದ ಪಾಪ ಮಾಡಿದರೂ ಸಹಾ ಆತನಿಗೆ ಯಾವ ಪಾಪವೂ ಇಲ್ಲ. ಹಾಗೆಯೇ ಪಾಪದ ಪರಿಣಾಮವೂ ಇಲ್ಲ. ಅದೇರೀತಿಯಲ್ಲಿ ಗಂಗಾತೀರದ ಉತ್ತರದ ದಡದಲ್ಲಿ ತಾನು ದಾನಗಳನ್ನು ನೀಡುತ್ತಾ, ಪರರಿಗೂ ಹಾಗೆಯೇ ಪ್ರೋತ್ಸಾಹಿಸುತ್ತಾ, ತಾನು ಉಡುಗೊರೆಗಳನ್ನು ನೀಡುತ್ತಾ, ಅದೇರೀತಿಯಲ್ಲಿ ಪರರೂ ಉಡುಗೊರೆಗಳನ್ನು ನೀಡುವಂತೆ ಪ್ರೋತ್ಸಾಹಿಸುತ್ತಾ, ಹೀಗೆಯೇ ನಡೆದುಕೊಂಡು ಬಂದರೂ ಸಹಾ ಆತನಿಗೆ ಯಾವ ಪುಣ್ಯವಿಲ್ಲ, ಹಾಗೆಯೇ ಯಾವುದೇ ಪುಣ್ಯದ ಫಲವೂ ಸಿಗಲಾರದರು. ದಾನದಿಂದಾಗಲಿ, ಸಂಯಮದಿಂದಾಗಲಿ, ನಿಗ್ರಹದಿಂದಾಗಲಿ, ಸತ್ಯಪಾಲನೆಯಿಂದಾಗಲಿ, ಯಾವುದೇ ಪುಣ್ಯವಿಲ್ಲ, ಹಾಗೆಯೇ ಯಾವುದೇ ಪುಣ್ಯಫಲವಿಲ್ಲ.
ಹಾಗೆಯೇ ಇನ್ನೊಬ್ಬ (ನಾಲ್ಕನೆಯ) ಗುರುವು ಈ ಬಗೆಯ ದೃಷ್ಟಿಕೋನವನ್ನು ಹಾಗು ಸಿದ್ಧಾಂತವನ್ನು ಹೊಂದಿದ್ದನು ಅದೆಂದರೆ: ಒಬ್ಬನು ಕಾರ್ಯತತ್ಪರನಾಗಿ ಹಾಗೆಯೇ ಪರರೂ ಕಾರ್ಯಶೀಲರಾಗುವಂತೆ ಮಾಡುತ್ತಾನೆ. ಹೇಗೆಂದರೆ ಒಬ್ಬನು ಅಂಗಚ್ಛೇದನ ಮಾಡುತ್ತಾ, ಹಾಗೆಯೇ ಪರರೂ ಅಂಗಚ್ಛೇದನ ಮಾಡುವಂತೆ ಪ್ರೇರೇಪಿಸುತ್ತಿದ್ದಾನೆ.... ಹೀಗೆ ಆತನು ಅನೇಕ ಪಾಪಗಳನ್ನು ಮಾಡುತ್ತಾನೆ. ಅವು ಪಾಪವೇ. ಹಾಗೆಯೇ ಆತನು ಅತಿ ಚೂಪಾದ ಗರಗರ ತಿರುಗುವ ಚಕ್ರದಿಂದ ಗಂಗಾನದಿಯ ದಕ್ಷಿಣ ತೀರದ ಉದ್ದಕ್ಕೂ ಸಂಹರಿಸುತ್ತಾ ಹೋದಾಗ ಆತನದು ಪಾಪವಾಗುತ್ತದೆ. ಹಾಗೆಯೇ ಆ ಪಾಪದ ಪರಿಣಾಮವೂ ಇದೆ. ಹೀಗೆ ಗಂಗಾನದಿಯ ದಕ್ಷಿಣ ತೀರದ ಉದ್ದಕ್ಕೂ ಅಂಗಚ್ಛೇದನ ಮಾಡುತ್ತಾ, ಚಿತ್ರಹಿಂಸೆ ನೀಡುತ್ತಾ, ಪರರಿಗೂ ಹೀಗೆಯೇ ಪ್ರೋತ್ಸಾಹಿಸುತ್ತಾ ಹೋದಾಗ ಆತನದು ಪಾಪವಾಗುತ್ತದೆ. ಹಾಗು ಆ ಪಾಪಗಳಿಗೆಲ್ಲಾ ಪರಿಣಾಮಗಳು ಇರುತ್ತವೆ. ಅದೇರೀತಿಯಲ್ಲಿ ಇನ್ನೊಬ್ಬನು ಗಂಗಾನದಿಯ ಉತ್ತರದ ದಡದ ಉದ್ದಕ್ಕೂ ದಾನಮಾಡುತ್ತಾ, ಉಡುಗೊರೆಗಳನ್ನು ನೀಡುತ್ತಾ, ಪರರಿಗೂ ಹೀಗೆಯೇ ಪ್ರೋತ್ಸಾಹಿಸುತ್ತಾ ಹೋದಾಗ ಆತನದು ಪುಣ್ಯವಾಗುತ್ತದೆ. ಹಾಗು ಆ ಪುಣ್ಯಕ್ಕೆ ಪರಿಣಾಮವೂ ಸಹಾ ಇರುತ್ತದೆ. ದಾನದಿಂದ, ಸಂಯಮದಿಂದ, ನಿಗ್ರಹದಿಂದ ಹಾಗು ಸತ್ಯ ಪರಿಪಾಲನೆಯಿಂದ ಒಬ್ಬನು ಪುಣ್ಯವನ್ನು ಪಡೆಯುತ್ತಾನೆ. ಹಾಗೆಯೇ ಪುಣ್ಯದ ಪರಿಣಾಮಗಳನ್ನು ಪಡೆಯುತ್ತಾನೆ.
ಭಂತೆ, ಆಗ ನನ್ನಲ್ಲಿ ಸಂದೇಹವೂ, ಅನಧರ್ಾರವೂ ಉಂಟಾಯಿತು: ಈ ಸಮಣ ಬ್ರಾಹ್ಮಣರಲ್ಲಿ ಯಾರು ಸತ್ಯ ನುಡಿಯುತ್ತಿದ್ದಾರೆ ಹಾಗು ಯಾರು ಸುಳ್ಳು ಹೇಳುತ್ತಿದ್ದಾರೆ?
ಓ ಗ್ರಾಮೀಣಿಯೆ, ನಿನ್ನ ಸಂದೇಹವೂ, ನಿನ್ನ ಅನಿಧರ್ಾರತೆಯು ಸಮಂಜಸವಾಗಿಯೇ ಇದೆ. ಏಕೆಂದರೆ ಈ ವಿಷಯವಸ್ತುವೇ ಹಾಗಿದೆ. ಓ ಭಗವಾನ್ ನಾನು ತಮ್ಮಲ್ಲಿ ಈ ಬಗೆಯ ಶ್ರದ್ಧೆಯನ್ನು ಹೊಂದಿದ್ದೇನೆ: ಭಗವಾನರು ಈ ಬಗೆಯ ಧಮ್ಮಕೋವಿದರೆಂದರೆ ನನ್ನ ಸಂದೇಹಗಳು ಹಾಗು ದ್ವಂದ್ವ ಅನಿಧರ್ಾರತೆಗಳೆಲ್ಲವನ್ನು ಭಗವಾನರ ಧಮ್ಮ ಆಲಿಸಿದಾಗ ಅವೆಲ್ಲ ಪರಿತ್ಯಜಿಸಲ್ಪಡುತ್ತವೆ.
ಇದೇ ಗ್ರಾಮೀಣಿಯೇ, ಅಂತಹ ಧಮ್ಮ ಸಮಾಧಿಯಿದೆ, ನೀನು ಆ ಸಮಾಧಿಸ್ಥ ಚಿತ್ತವನ್ನು ಸಾಧಿಸಿದರೆ ನಿನ್ನ ಅನಿಧರ್ಾರ ಹಾಗು ಸಂದೇಹಗಳು ತೊಡೆದುಹೋಗುವುವು. ಮತ್ತೆ ಗ್ರಾಮೀಣಿಯೆ, ಯಾವುದದು ಧಮ್ಮ ಸಮಾಧಿಯು? ಇಲ್ಲಿ ಗ್ರಾಮೀಣಿಯೇ, ಆರ್ಯಶ್ರಾವಕನು ಜೀವಹತ್ಯೆಗಳನ್ನು ತೊರೆದು, ಜೀವಹತ್ಯೆಗಳಿಂದ ವಿರತನಾಗುತ್ತಾನೆ. ಹಾಗೆಯೇ ಕೊಡೆದೆ ಇದ್ದುದನ್ನು ತೆಗೆದುಕೊಳ್ಳದೆ, ಕಳ್ಳತನದಿಂದ ವಿರತನಾಗುತ್ತಾನೆ, ಹಾಗೆಯೇ ಅನೈತಿಕ ಕಾಮುಕತೆಗಳನ್ನು ತೊರೆದು ಅವುಗಳಿಂದಲೂ ವಿರತನಾಗುತ್ತಾನೆ. ಹಾಗೆಯೇ ಸುಳ್ಳು ಹೇಳುವುದನ್ನು ಬಿಟ್ಟು, ಸುಳ್ಳು ಹೇಳುವುದರಿಂದ ವಿರತನಾಗುತ್ತಾನೆ. ಹಾಗೆಯೇ ಬೇಧ ಮಾಡುವ ಮಾತುಗಳನ್ನು ಆಡದೆ, ಚಾಡಿಯಿಂದ ವಿರತನಾಗುತ್ತಾನೆ. ಹಾಗೆಯೇ ಕಟುವಾಕ್ಯಗಳನ್ನು ತೊರೆದು ಕಟುವಾಕ್ಯ (ಅಪ್ರಿಯನುಡಿ) ಗಳಿಂದ ವಿರತನಾಗುತ್ತಾನೆ. ಹಾಗೆಯೇ ಸೋಮಾರಿತನದ ಹರಟೆಗಳನ್ನು ತೊರೆದವನಾಗಿ ಸೋಮಾರಿತನದ ಹರಟೆಗಳಿಂದ ವಿರತನಾಗುತ್ತಾನೆ. ಹಾಗೆಯೇ ದುರಾಸೆಗಳನ್ನು ತೊರೆದು, ದುರಾಸೆಗಳಿಂದ ವಿರತನಾಗುತ್ತಾನೆ. ಹಾಗೆಯೇ ಹಗೆತನವನ್ನು ತೊರೆದು, ಹಗೆತನಗಳಿಂದ ವಿರತನಾಗುತ್ತಾನೆ. ಹಾಗೆಯೇ ಮಿಥ್ಯಾದೃಷ್ಟಿಗಳನ್ನು ತೊರೆದು, ಮಿಥ್ಯಾದೃಷ್ಟಿಗಳಿಂದ ವಿರತನಾಗಿ, ಸಮ್ಯಕ್ ದೃಷ್ಟಿಕೋನದವನಾಗುತ್ತಾನೆ.
ನಂತರ ಗ್ರಾಮೀಣಿಯೇ, ಅಂತಹ ಆರ್ಯಶ್ರಾವಕನು ದುರಾಸೆಯಿಂದ ದೂರನಾಗಿ, ಹಗೆತನದಿಂದ ದೂರಾಗಿ, ಗೊಂದಲವಿಲ್ಲದವನಾಗಿ, ಸ್ಪಷ್ಟವಾದ ಅರಿವುಳ್ಳವನಾಗಿ, ಸದಾ ಸ್ಮೃತಿವಂತನಾಗಿ ಒಂದು ದಿಕ್ಕಿನಲ್ಲಿ ಮೈತ್ರಿಯುತ ಚಿತ್ತವನ್ನು ಪ್ರಸರಿಸುತ್ತಾನೆ. ಅದೇರೀತಿಯಲ್ಲಿ ಎರಡನೆಯ ದಿಕ್ಕಿನಲ್ಲಿ, ಮೂರನೆಯ ದಿಕ್ಕಿನಲ್ಲಿ ಮತ್ತು ನಾಲ್ಕನೆಯ ದಿಕ್ಕಿನಲ್ಲಿ, ಹಾಗೆಯೇ ಮೇಲೆ ಕೆಳಗೆ, ಸುತ್ತಲು ಹಾಗು ಎಲ್ಲೆಲ್ಲು, ಮೈತ್ರಿಯನ್ನು ಪ್ರಸರಿಸುತ್ತಾನೆ. ಸರ್ವರಲ್ಲೂ ತನ್ನನ್ನೇ ಕಾಣುತ್ತಾ ಇಡೀ ಜಗತ್ತಿನಲ್ಲೆಲ್ಲಾ ಇಡೀ ಲೋಕಗಳಲ್ಲೆಲ್ಲಾ ದ್ವೇಷರಹಿತವಾದ, ಹಗೆತನರಹಿತವಾದ ವಿಪುಲವಾದ, ವಿಶಾಲವಾದ, ಉನ್ನತವಾದ, ಅಪರಿಮಿತವಾದ ಮೈತ್ರಿಚಿತ್ತವನ್ನು ಹರಿಸುತ್ತಾನೆ. ನಂತರ ಆತನು ಹೀಗೆ ಚಿಂತೆ ಆರಂಭಿಸುತ್ತಾನೆ. ಈ ಗುರುವು ಇಂತಹ ಸಿದ್ಧಾಂತವನ್ನು ಹಾಗು ದೃಷ್ಟಿಕೋನವನ್ನು ಹಿಡಿದಿಟ್ಟುಕೊಂಡಿರುವನು ಅದೆಂದರೆ: ಯಾವುದೇ ದಾನವಿಲ್ಲ, ಯಾವುದೇ ಆತಿಥ್ಯವಿಲ್ಲ... ಅಭಿಜ್ಞಾ, ಸಂಪನ್ನರಾದ ಸಮಣ ಬ್ರಾಹ್ಮಣರೇ ಇಲ್ಲ... ಈ ಗುರುವಿನ ಈ ನುಡಿಗಳು ಸತ್ಯವಾಗಿದ್ದರೂ ನನಗದು ನಿವರ್ಿವಾದವಾಗಿ ಪರಿಗಣಿಸಲ್ಪಡುವುದು. ಹೇಗೆಂದರೆ ನಾನು ಯಾರಿಗೂ ಚಂಚಲತೆಯಿಂದಾಗಲಿ ಅಥವಾ ದೃಢತೆಯಿಂದಾಗಲೀ ದಮಿಸಲಿಲ್ಲ. ಹೀಗೆ ಎರಡು ವಿಧದಲ್ಲು ನಾನು ಮಂಗಳಕರವಾದುದನ್ನೇ ಮಾಡಿದ್ದೇನೆ. ಏಕೆಂದರೆ ನಾನು ಶಾರೀರಿಕವಾಗಿ, ವಾಚಿಕವಾಗಿ ಮತ್ತು ಮಾನಸಿಕವಾಗಿ ನಿಯಂತ್ರಿತನಾಗಿದ್ದೇನೆ. ಹೀಗಾಗಿ ಮರಣದ ನಂತರವೂ ನಾನು ಸುಗತಿಯಲ್ಲೇ ಹುಟ್ಟುವೆನು. ಈ ಬಗೆಯ ಚಿಂತನೆಯಿಂದ ಆತನಲ್ಲಿ ಆನಂದವು ಉಕ್ಕಿಹರಿಯವುದು. ಆನಂದದಿಂದಾಗಿ ಚಿತ್ತವು ಉನ್ನತಿಗೇರಿ ಕಾಯವು ಪ್ರಸನ್ನವಾಗುವುದು. ಕಾಯದ ಪ್ರಸನ್ನತೆಯಿಂದಾಗಿ ಸುಖವು ಉಂಟಾಗುವುದು. ಸುಖದ ಮನಸ್ಸು ಸಮಾಧಿಸ್ಥವಾಗುವುದು. ಹೀಗೆ ಗ್ರಾಮೀಣಿಯೇ, ಧಮ್ಮದ ಸಮಾಧಿಯಿರುತ್ತದೆ. ಈ ಬಗೆಯ ಸಮಾಧಿಯನ್ನು ನೀನು ಹೊಂದಿರುವಾಗ ಅನಿಧರ್ಾರಗಳನ್ನು ಹಾಗು ಸಂಶಯಗಳನ್ನು ತೊರೆಯುತ್ತೀಯೇ.
ನಂತರ ಗ್ರಾಮೀಣಿಯೇ, ಯಾವ ಆರ್ಯಶ್ರಾವಕನು ಹೀಗೆ ದುರಾಸೆಯಿಂದ ಮುಕ್ತನಾಗಿ, ದ್ವೇಷದಿಂದ ಮುಕ್ತನಾಗಿ, ಗೊಂದಲವಿಲ್ಲದೆ, ಸ್ಪಷ್ಟ ಅರಿವಿನಿಂದ, ಸದಾ ಸ್ಮೃತಿವಂತನಾಗಿ, ಒಂದು ದಿಕ್ಕಿನೆಡೆಗೆ ದ್ವೇಷವಿಲ್ಲದೆ ಮೆತ್ತಾಭಾವನೆಯನ್ನು ಹರಡುತ್ತಾನೆ... ನಂತರ ಹೀಗೆ ಚಿಂತನೆ ಮಾಡುತ್ತಾನೆ: ಯಾವ ಗುರುಗಳು ದಾನಕ್ಕೆ ಫಲವಿದೆ, ಅರ್ಪಣೆಗೆ ಫಲವಿದೆ... ಅಭಿಜ್ಞಾಸಂಪನ್ನರಾದ ಸಮಣ ಬ್ರಾಹ್ಮಣರಿದ್ದಾರೆ ಎಂದು ಹೇಳುವರೋ ಒಂದುವೇಳೆ ಆ ಗುರುಗಳ ನುಡಿಯೇ ನಿಜವಾಗಿದ್ದರೆ, ನನಗದು ನಿವರ್ಿವಾದ ಅಂಶವಾಗುತ್ತದೆ. ಹೇಗೆಂದರೆ ನಾನು ಯಾರಿಗೂ ಹಿಂಸೆಯನ್ನಾಗಲಿ, ದೌರ್ಜನ್ಯವಾಗಲಿ ಮಾಡಿಲ್ಲ. ಚಂಚಲತೆಯಿಂದಾಗಲಿ ಅಥವಾ ದೃಢತೆಯಿಂದಾಗಲಿ ನನ್ನಿಂದ ಯಾರ ದಮನವೂ ಆಗಿಲ್ಲ. ಹೀಗೆ ಎರಡು ವಿಧದಲ್ಲಿಯು ನಾನು ಕುಶಲವನ್ನೇ ಹೊಂದಿರುವೆನು. ಏಕೆಂದರೆ ನಾನು ಕಾಯದಿಂದ, ಮಾತಿನಿಂದ ಹಾಗು ಮನಸ್ಸಿನಿಂದ ನಿಯಂತ್ರಿತನಾಗಿರುವೆನು ಮತ್ತು ಹೀಗಾಗಿ ಸಾವಿನ ನಂತರ ನಾನು ಸುಗತಿಯಲ್ಲಿ ಜನಸುವೆನು. ಹೀಗೆ ಆತನಲ್ಲಿ ಪ್ರಮೋದವು ಉಂಟಾಗುವುದು. ಪ್ರಮೋದದಿಂದ ಆನಂದವು ಉಂಟಾಗುವುದು. ಆನಂದದಿಂದ ಕಾಯವು ಪ್ರಶಾಂತವಾಗುವುದು. ಹೀಗೆ ಪ್ರಶಾಂತಕಾಯದಿಂದ ಸುಖವು ಉಂಟಾಗುವುದು. ಯಾವ ಮನಸ್ಸು ಸುಖದಿಂದ ಕೂಡಿದೆಯೋ ಅದು ಸಮಾಧಿಸ್ಥವಾಗುವುದು. ಗ್ರಾಮೀಣಿಯೇ, ಧಮ್ಮದ ಸಮಾಧಿಯಿರುವುದು. ನೀನು ಹೀಗೆ ಸಮಾಧಿ ಗಳಿಸಿದರೆ, ನಿನ್ನಲ್ಲಿ ಸಂಶಯಗಳು ಹಾಗು ಅನಿಧರ್ಾರಗಳು ತೊರೆಯಲ್ಪಡುತ್ತವೆ.
ನಂತರ ಗ್ರಾಮೀಣಿಯೇ, ಆ ಆರ್ಯಶ್ರಾವಕನು ದುರಾಸೆಗಳಿಂದ ದೂರವಾಗಿ, ದ್ವೇಷಗಳಿಂದ ದೂರವಾಗಿ, ಗೊಂದಲಗಳಿಂದ ದೂರವಾಗಿ, ಸ್ಪಷ್ಟವಾದ ಅರಿವಿನಿಂದ, ಸದಾ ಸ್ಮೃತಿವಂತನಾಗಿ, ಮೈತ್ರಿಯುತ ಚಿತ್ತಭಾವನೆಯಿಂದ ಒಂದು ದಿಕ್ಕಿನತ್ತ ಚಿತ್ತವನ್ನು ಹರಿಸುತ್ತಾನೆ... ನಂತರ ಆತನು ಹೀಗೆ ಚಿಂತನೆಯನ್ನು ಮಾಡುತ್ತಾನೆ: ಈ ಗುರುವು ಇಂತಹ ಸಿದ್ಧಾಂತವನ್ನು ಹಾಗು ದೃಷ್ಟಿಕೋನವನ್ನು ಹೊಂದಿದ್ದಾನೆ; ಹೇಗೆಂದರೆ ಯಾವಾಗ ಒಬ್ಬನು ಎಷ್ಟೇ ದಾನಗಳನ್ನು ನೀಡಿದರೂ... ಅಂತಹ ದಾನಗಳಿಂದಾಗಲಿ, ಧಮ್ಮದಿಂದಾಗಲಿ, ನಿಗ್ರಹದಿಂದಾಗಲಿ, ಸತ್ಯಪಾಲನೆಯಿಂದಾಗಲಿ ಯಾವುದೇ ಪುಣ್ಯವಿಲ್ಲ.  ಹಾಗೆಯೇ ಪುಣ್ಯಗಳ ಪರಿಣಾಮಗಳೂ ಇಲ್ಲ. ಈ ಗುರುವಿನ ಮಾತು ನಿಜವೇ ಆಗಿದ್ದರೂ ನನಗೆ ನಿವರ್ಿವಾದವೇ ಆಗಿರುತ್ತದೆ. ಹೇಗೆಂದರೆ ನಾನು ಚಂಚಲತೆಯಿಂದಾಗಲಿ ಅಥವಾ ದೃಢತೆಯಿಂದಾಗಲಿ ಯಾರಿಗೂ ದಮಿಸಿಲ್ಲ. ಹೀಗಾಗಿ ನಾನು ಎರಡು ರೀತಿಯಲ್ಲೂ ಮಂಗಳವನ್ನೇ ಸಾಧಿಸಿದ್ದೇನೆ. ಹೇಗೆಂದರೆ ನಾನು ಶಾರೀರಿಕವಾಗಿ ಸಂಯಮದಿಂದ್ದೇನೆ. ವಾಚಾದಲ್ಲೂ ಹಾಗು ಮನಸ್ಸಿನಲ್ಲೂ ಸಹಾ ಸಂಯಮದಿಂದ್ದೇನೆ. ಹೀಗಾಗಿ ಶರೀರ ವಿಘಟಿತವಾಗಿ ಸಾವಿನಂತರ ನಾನು ಸುಗತಿಯಲ್ಲೇ ಸ್ವರ್ಗದಲ್ಲೇ ಹುಟ್ಟುವೆನು. ಹೀಗೆ ಆತನು ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಪ್ರಮೋದವು ಉದಯಿಸುತ್ತದೆ. ಪ್ರಮೋದದಿಂದ ಆನಂದವು ಉದಯಿಸುತ್ತದೆ. ಯಾವಾಗ ಮನಸ್ಸು ಆನಂದದಿಂದ ಉನ್ನತವಾಗಿರುವುದೋ ಆಗ ಶರೀರವು ಪ್ರಶಾಂತವಾಗುವುದು. ಶರೀರದ ಪ್ರಶಾಂತತೆಯಿಂದಾಗಿ, ಸುಖವು ಉದಯಿಸುವದು. ಸುಖಯುತ ಮನಸ್ಸಿನ ಉದಯದಿಂದ ಸಮಾಧಿಯು ಸ್ಥಾಪಿತವಾಗುವುದು. ಹೀಗೆ ಗ್ರಾಮೀಣಿಯೇ, ಧಮ್ಮದ ಸಮಾಧಿಯು ಸಿಗುವುದು. ನೀನು ಅಂತಹ ಸಮಾಧಿಯನ್ನು ಪಡೆಯುವೆಯಾದರೆ ನಿನ್ನಲ್ಲಿ ಅನಿಧರ್ಾರಗಳು, ದ್ವಂದ್ವಗಳು ಹಾಗು ಸಂಶಯಗಳು ತೊರೆದುಹೋಗುವುವು.
ನಂತರ ಗ್ರಾಮೀಣಿಯೇ, ಆ ಆರ್ಯಶ್ರಾವಕನು ಹೀಗೆ ದುರಾಸೆಯಿಂದ ದೂರವಾಗಿ, ದ್ವೇಷದಿಂದ ದೂರನಾಗಿ, ಗೊಂದಲಗಳಿಂದ ದೂರವಾಗಿ, ಸ್ಪಷ್ಟವಾದ ಅರಿವಿನಿಂದ, ಸದಾ ಸ್ಮೃತಿವಂತನಾಗಿ, ಮೈತ್ರಿಯುತ ಚಿತ್ತಭಾವನೆಯಿಂದ ಒಂದು ದಿಕ್ಕಿನತ್ತ ಹರಿಸುತ್ತಾನೆ... ನಂತರ ಆತನು ಹೀಗೆ ಚಿಂತನೆಯನ್ನು ಮಾಡುತ್ತಾನೆ: ಈ ಗುರುವು ಇಂತಹ ಸಿದ್ಧಾಂತವನ್ನು ಹಾಗು ದೃಷ್ಟಿಕೋನವನ್ನು ಹೊಂದಿದ್ದಾನೆ. ಹೇಗೆಂದರೆ ಯಾವಾಗ ಒಬ್ಬನು ಕಾರ್ಯತತ್ಪರನಾದರೆ ಹಾಗೆಯೇ ಪರರಿಗೂ ಪ್ರೇರೇಪಿಸುತ್ತಾನೆ... ದಾನದಿಂದ, ದಮನದಿಂದ, ನಿಗ್ರಹದಿಂದ, ಸತ್ಯಚಾಲನೆಯಿಂದ ಪುಣ್ಯವಿದೆ. ಹಾಗೆಯೇ ಪುಣ್ಯಗಳ ಫಲವಿದೆ. ಹೀಗೆ ಈ ಗುರುವಿನ ನುಡಿಗಳು ಸತ್ಯವೇ ಆಗಿದ್ದರೆ ಆಗಲೂ ನನಗೆ ನಿವರ್ಿವಾದವಾಗಿಯೇ ಮಂಗಳಕರವಾಗುವುದು. ಹೇಗೆಂದರೆ ನಾನು ಚಂಚಲತೆಯಿಂದಾಗಲಿ ಅಥವಾ ದೃಢತೆಯಿಂದಾಗಲಿ ಯಾರಿಗೂ ದಮಿಸಿಲ್ಲ. ಹೀಗೆ ಎರಡು ವಿಧದಲ್ಲಿಯೂ ನನಗೆ ಮಂಗಳವಾಗುವುದು. ಹೇಗೆಂದರೆ ನಾನು ಕಾಯದಿಂದ ವಾಚಾದಿಂದ ಹಾಗೂ ಮನಸ್ಸಿನಂದ ನಿಗ್ರಹದಿಂದ್ದೇನೆ. ಹೀಗಾಗಿ ಶರೀರ ವಿಘಟಿತವಾಗಿ ಸಾವಿನ ನಂತರ ನಾನು ಸುಗತಿಯಲ್ಲಿ ಜನಸುವೆನು ಅಥವಾ ಸ್ವರ್ಗದಲ್ಲೇ ಜನಿಸುವೆನು. ಹೀಗೆ ಆತನು ಚಿಂತನೆಯನ್ನು ತ್ಯಾಗದ ಅನುಸ್ಮೃತಿಯನ್ನು ಮಾಡುತ್ತಿರುವಾಗ ಆತನಲ್ಲಿ ಪ್ರಮೋದವು ಉಂಟಾಗುತ್ತದೆ. ಪ್ರಮೋದದಿಂದಾಗಿ ಆನಂದವು ಉದಯಿಸುವುದು, ಆನಂದದಿಂದಾಗ ಕಾಯವು ಪ್ರಶಾಂತವಾಗುವುದು. ಪ್ರಶಾಂತವಾದ ಕಾಯದಿಂದಾಗಿ ಸುಖವು ಉದಯಿಸುವುದು. ಯಾವ ಚಿತ್ತವು ಸುಖದಿಂದ ಕೂಡಿದೆಯೋ ಅದು ಸಮಾಧಿಸ್ಥವಾಗುವುದು. ಹೀಗೆ ಗ್ರಾಮೀಣಿಯೇ, ಧಮ್ಮದಿಂದ ಸಮಾಧಿಯು ಲಭಿಸುವುದು. ಹೀಗೆ ನೀನು ಚಿತ್ತ ಏಕಾಗ್ರತೆಯನ್ನು ಸಾಧಿಸಿದಾಗ ನೀನು ದ್ವಂದ್ವಗಳನ್ನು, ಸಂಶಯಗಳನ್ನು ತೊರೆಯುವೆ.
ನಂತರ ಗ್ರಾಮೀಣಿಯೇ, ಆ ಆರ್ಯಶ್ರಾವಕನು ಹೀಗೆ ದುರಾಸೆಯಿಂದ ದೂರವಾಗುತ್ತಾನೆ. ದ್ವೇಷದಿಂದ ದೂರವಾಗುತ್ತಾನೆ. ಗೊಂದಲರಹಿತನಾಗುತಾನೆ, ಸ್ಪಷ್ಟ ಅರಿವುಳ್ಳವನಾಗಿ ಸದಾ ಸ್ಮೃತಿವಂತನಾಗಿ, ಮೈತ್ರಿಯಿಂದ... ಕರುಣೆಯಿಂದ ಕೂಡಿ... ಮುದಿತಾದಿಂದ... ಸಮಚಿತ್ತತೆಯಿಂದ ಒಂದು ದಿಕ್ಕಿನತ್ತ ಚಿತ್ತವನ್ನು ಹರಿಸಿ ನೆಲೆಸುತ್ತಾನೆ. ಅದೇರೀತಿಯಲ್ಲಿ ಎರಡನೇ ದಿಕ್ಕಿನತ್ತ, ಮೂರನೇ ದಿಕ್ಕಿನತ್ತ ಮತ್ತು ನಾಲ್ಕನೆಯ ದಿಕ್ಕಿನತ್ತ ಹೀಗೆಯೇ ಊದ್ರ್ವ ದಕ್ಕಿನತ್ತ, ಅದೋದಿಕ್ಕಿನತ್ತ, ಸುತ್ತಲು ಮತ್ತು ಎಲ್ಲೆಲ್ಲೂ ಹೀಗೆ ಇಡೀ ಬ್ರಹ್ಮಾಂಡವೆಲ್ಲ ಸಮಚಿತ್ತತೆಯನ್ನು ಹರಡಿ ನೆಲೆಸುತ್ತಾನೆ. ಈ ಬಗೆಯ ವಿಪುಲವಾದ, ಪರಮೋನ್ನತವಾದ, ಅಪರಿಮಿತವಾದ, ದ್ವೇಷರಹಿತವಾದ, ಹಗೆತನರಹಿತವಾದ, ಬ್ರಹ್ಮವಿಹಾರದಲ್ಲಿ ನೆಲೆಸುತ್ತಾನೆ. ನಂತರ ಆತನು ಹೀಗೆ ಚಿಂತನೆಯನ್ನು ಮಾಡುತ್ತಾನೆ: ಈ ಗುರುವು ಇಂತಹ ಸಿದ್ಧಾಂತವನ್ನು ಮತ್ತು ದೃಷ್ಟಿಕೋನವನ್ನು ಹಿಡಿದಿಟ್ಟುಕೊಂಡಿರುವನು. ನೀಡುವಂತಹದೇನು ಇಲ್ಲ, ಅಪರ್ಿಸುವಂತಹದೇನು ಇಲ್ಲ... ಅಭಜ್ಞಾಸಂಪನ್ನರಾಗಿ ಈ ಲೋಕದ ಬಗ್ಗೆಯಾಗಲಿ ಅಥವಾ ಪರಲೋಕದ ಬಗ್ಗೆಯಾಗಲಿ ನೇರವಾಗಿ ಅರಿತಿರುವಂತಹರ್ಯಾರು ಇಲ್ಲ. ಈ ಗುರುವಿನ ನುಡಿಗಳು ಸತ್ಯವೇ ಆಗಿದ್ದರೂ ನನಗೆ ಯಾವ ನಷ್ಟವೂಇಲ್ಲ. ಏಕೆಂದರೆ ನಾನು ತ್ರಿಕರಣಪೂರ್ವಕವಾಗಿ ನಿಗ್ರಹದಿಂದಿದ್ದೇನೆ. ಒಂದುವೇಳೆ ಸುಗತಿಯಿದ್ದರೂ ಖಂಡಿತವಾಗಿಯೂ ನಾನು ಅಲ್ಲೇ ಜನಸುವೆನು ಎಂದು ಚಿಂತನೆ ಮಾಡುತ್ತಾ ಆತನಲ್ಲಿ ಪ್ರಮೋದವು... ಅದರಿಂದಾಗಿ ಆನಂದವು... ಅದರಿಂದಾಗಿ ಪ್ರಶಾಂತತೆಯು... ಅದರಿಂದಾಗಿ ಸುಖವು... ಅದರಿಂದಾಗಿ ಸಮಾಧಿಯು ಸಿಗುವುದು. ಹೀಗೆ ನೀನು ಚಿತ್ತಸಮಾಧಿಯನ್ನು ಸಾಧಿಸಿದಾಗ ನೀನು ದ್ವಂದ್ವಗಳನ್ನು ಸಂಶಯಗಳನ್ನು ತೊರೆಯುವೆ.
ನಂತರ ಗ್ರಾಮೀಣಿಯೇ, ಆ ಆರ್ಯರ್ಶರಾವಕನು ದುರಾಸೆಯಿಂದ ಮುಕ್ತನಾಗಿ, ದ್ವೇಷದಿಂದ ದೂರನಾಗಿ, ಗೊಂದಲವಿಲ್ಲದೆ, ಸ್ವಚ್ಛ ಅರಿವುಳ್ಳವಾಗಿ, ಸದಾ ಸ್ಮೃತಿವಂತನಾಗಿ, ಒಂದು ದಿಕ್ಕಿನತ್ತ ಕರುಣೆಯನ್ನು ಪ್ರಸರಿಸುತ್ತಾನೆ... ಮುದಿತಾವನ್ನು ಪ್ರಸರಿಸುತ್ತಾನೆ... ಸಮಚಿತ್ತತೆಯನ್ನು (ಉಪೇಕ್ಖಾ) ಪ್ರಸರಿಸುತ್ತಾನೆ. ಮನದಲ್ಲಿ ಯಾವುದೇ ದ್ವೇಷವಿಲ್ಲದೆ, ಯಾವುದೇ ವಿರೋಧಭಾಸವಿಲ್ಲದೆ ನೆಲೆಸುತ್ತಾನೆ. ನಂತರ ಆತನು ಹೀಗೆ ಚಿಂತನೆ ಮಾಡುತ್ತಾನೆ. ಈ ಗುರುವು ಇಂತಹ ಸಿದ್ಧಾಂತವನ್ನು ಹಾಗು ದೃಷ್ಟಿಯನ್ನು ಹೊಂದಿದ್ದಾನೆ: ದಾನಕ್ಕೆ ಫಲವಿದೆ, ಅರ್ಪಣೆಗೆ ಫಲವಿದೆ... ಈ ಲೋಕ ಹಾಗು ಪರಲೋಕವನ್ನು ಬಲ್ಲಂತಹ ಅಭಿಜ್ಞಸಂಪನ್ನರು ಇದ್ದಾರೆ... ಇದೇ ಗ್ರಾಮೀಣಿಯೇ, ಧಮ್ಮದ ಸಮಾಧಿಯಾಗಿದೆ. ಇಂತಹ ಸಮಾಧಿಯನ್ನು ನೀನು ಪಡೆದೆಯಾದರೆ ನೀನು ದ್ವಂದ್ವಗಳನ್ನು ಮೀರಿಹೋಗುವೆ. ಆಗ ಆತನು ಹೀಗೆ ಯೋಚಿಸುತ್ತಾನೆ: ಈ ಗುರುವು ಇಂತಹ ಸಿದ್ಧಾಂತವನ್ನು ಹಾಗು ದೃಷ್ಟಿಕೋನವನ್ನು ಹೊಂದಿದ್ದಾನೆ: ಹೇಗೆಂದರೆ, ಒಬ್ಬನು ತಾನು ಕಾರ್ಯತತ್ಪರನಾದಂತೆಯೇ ಪರರನ್ನು ಉತ್ತೇಜಿಸುತ್ತಾನೆ... ದಾನದಿಂದಾಗಲಿ, ದಮನದಿಂದಾಗಲಿ, ನಿಗ್ರಹದಿಂದಾಗಲಿ, ಸತ್ಯಪಾಲನೆಯಿಂದಾಗಲಿ ಪುಣ್ಯವಿಲ್ಲ ಹಾಗು ಆ ಪುಣ್ಯದ ಯಾವುದೇ ಪರಿಣಾಮವೂ ಇಲ್ಲ.... ಇದೇ ಗ್ರಾಮೀಣಿಯೇ, ಧಮ್ಮದ ಸಮಾಧಿಯಾಗಿದೆ, ನೀನು ಈ ಸಮಾಧಿಯನ್ನು ಪಡೆದೆಯಾದರೆ ಅನಿಧರ್ಾರ ಅಥವಾ ಸಂಶಯಗಳನ್ನು ತೊರೆದುಬಿಡುವೆ.
ಆತನು ಹೀಗೆ ಚಿಂತನೆ ಮಾಡುತ್ತಾನೆ: ಈ ಗುರುವು ಇಂತಹ ಸಿದ್ಧಾಂತವನ್ನು ಮತ್ತು ದೃಷ್ಟಿಯನ್ನು ಹೊಂದಿದ್ದಾನೆ. ಯಾವಾಗ ಒಬ್ಬನು ಕಾರ್ಯತತ್ಪರನಾಗುವನೋ ಅಥವಾ ಪರರನ್ನು ಪ್ರೇರೇಪಣೆ ಮಾಡುತ್ತಾನೋ... ದಾನದಿಂದ, ದಮನದಿಂದ, ನಿಗ್ರಹದಿಂದ, ಸತ್ಯಪಾಲನೆಯಿಂದ ಪುಣ್ಯವಿದೆ ಹಾಗು ಆ ಪುಣ್ಯಕ್ಕೆ ಫಲವೂ ಇದೆ. ಈ ಗುರುವಿನ ಮಾತು ಸತ್ಯವಾಗುವ ಹಾಗಿದ್ದರೆ, ನನಗಂತು ನಿವರ್ಿವಾದವಾಗಿ ಪರಿಣಮಿಸುವುದು. ಏಕೆಂದರೆ ನಾನು ಚಂಚಲತೆಯಿಂದಾಗಲಿ ಅಥವಾ ದೃಢತೆಯಿಂದಾಗಲಿ ಯಾರಿಗೂ ದಮಿಸಿಲ್ಲ. ನಾನು ಎರಡರ ರೀತಿಯಲ್ಲೂ ಮಂಗಳಕರವಾಗಿಯೇ ಇದ್ದೇನೆ. ನಾನು ಕಾಯದಿಂದ, ವಾಚಾದಿಂದ ಹಾಗು ಮನಸ್ಸಿನಿಂದ ನಿಯಂತ್ರಣದಿಂದಿರುವೆನು ಹಾಗು ಶರೀರವು ವಿಘಟಿತವಾದ ನಂತರ ನಾನು ಸುಗತಿಯಲ್ಲೇ ಜನಿಸುವೆನು ಹಾಗು ಸ್ವರ್ಗದಲ್ಲೇ ಉಗಮಿಸುವೆನು. ಈ ರೀತಿಯಾಗಿ ಚಿಂತನೆ ಮಾಡಿದ್ದರಿಂದಾಗಿ ಆತನಲ್ಲಿ ಪ್ರಮೋದವು ಉಂಟಾಗುವುದು, ಆನಂದವು ಉಂಟಾಗುವುದು, ಆನಂದದಿಂದಾಗಿ ಪ್ರಶಾಂತತೆಯು, ಪ್ರಶಾಂತತೆಯಿಂದಾಗಿ ಸುಖವು, ಸುಖದಿಂದಾಗಿ ಸಮಾಧಿಯು ಲಭಿಸುವುದು. ಇದೇ ಗ್ರಾಮೀಣಿಯೇ, ಧಮ್ಮದ ಸಮಾಧಿಯಾಗಿದೆ. ನೀನು ಹೀಗೆ ಚಿತ್ತ ಏಕಾಗ್ರತೆಯನ್ನು ಪಡೆದೆಯಾದರೆ ನೀನು ಸಂಶಯಗಳನ್ನು ದಾಟಿ ಹೋಗುವೆ.
ಯಾವಾಗ ಹೀಗೆ ಹೇಳಲ್ಪಟ್ಟಿತೋ, ಆ ಪಾಟಲಿಯ ಗ್ರಾಮೀಣಿಯು ಭಗವಾನರಿಗೆ ಹೀಗೆ ನುಡಿದನು: ಅದ್ಭುತ ಭಂತೆ, ಪರಮ ಅದ್ಭುತ ಭಂತೆ. ಇಂದಿನಂದ ನಾನು ಭಗವಾನರಲ್ಲಿ ಪ್ರಾಣ ಇರುವವರೆಗೂ ತಮ್ಮ ಹಿಂಬಾಲಕನೆಂದು ಪರಿಗಣಿಸಲಿ.
ಗ್ರಾಮೀಣ ಸಂಯುಕ್ತವು ಸಮಾಪ್ತಿಯಾಯಿತು.

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...