Thursday 22 March 2018

samyutta nikaya 6. ಅವಿಜ್ಜಾವಗ್ಗೋ


6. ಅವಿಜ್ಜಾವಗ್ಗೋ
35.6.1. ಅವಿಜ್ಜಾಪಹಾನ ಸುತ್ತಂ (ಅಜ್ಞಾನವನ್ನು ವಜರ್ಿಸುವುದರ ಸುತ್ತ)

                53. ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿ ಅನಾಥಪಿಂಡಿಕನ ಜೇತವನದ ವಿಹಾರದಲ್ಲಿ ವಾಸಿಸುತ್ತಿದ್ದಾಗ, ಒಬ್ಬ ಭಿಕ್ಖುವು ಭಗವಾನರ ಬಳಿಗೆ ಬಂದು ಪೂಜಿಸಿ ಒಂದೆಡೆ ಕುಳಿತನು. ನಂತರ ಆತನು ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು: ಭಗವಾನ್, ಏನನ್ನು ದಶರ್ಿಸುವುದರಿಂದ ಹಾಗು ಏನನ್ನು ಅರಿಯುವುದರಿಂದಾಗಿ ಅವಿದ್ಯೆಯು ದೂರಾಗಿ ನಿಜವಿದ್ಯೆಯು ಉದಯಿಸುವುದು? ಭಿಕ್ಷು ಯಾವಾಗ ಒಬ್ಬನು ಕಣ್ಣನ್ನು ಅನಿತ್ಯವೆಂದು ದಶರ್ಿಸಿದಾಗ ಹಾಗು ಅರಿತಾಗ ಆತನಲ್ಲಿ ಅವಿದ್ಯೆಯು ವಜರ್ಿಸಲ್ಪಡುವುದು ಹಾಗು ನಿಜ ವಿದ್ಯೆಯು ಉದಯಿಸುವುದು. ಅದೇರೀತಿಯಲ್ಲಿ ಯಾವಾಗ ಒಬ್ಬನು ರೂಪಗಳಲ್ಲಿ ಅನಿತ್ಯತೆಯನ್ನು ದಶರ್ಿಸಿದಾಗ ಹಾಗು ಅರಿತಾಗ ಆತನಲ್ಲಿ ಅವಿದ್ಯೆಯು ವಜರ್ಿತವಾಗಿ, ವಿದ್ಯೆಯು ಉದಯಿಸುತ್ತದೆ. ಅದೇರೀತಿಯಲ್ಲಿ ಚಕ್ಷುವಿಞ್ಞಾನವನ್ನು.... ಚಕ್ಷು ಸಂಸ್ಪರ್ಶವನ್ನು... ಸಂಸ್ಪಶ್ದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳಲ್ಲಿ ಅನಿತ್ಯತೆಯನ್ನು ದಶರ್ಿಸಿದಾಗ ಹಾಗು ಅನಿತ್ಯತೆಯನ್ನು ಅರಿತಾಗ ಆತನಲ್ಲಿ ಅವಿದ್ಯೆಯು ವಜರ್ಿತವಾಗಿ ನಿಜ ವಿದ್ಯೆಯು ಉದಯಿಸುವುದು. ಅದೇರೀತಿಯಲ್ಲಿ ಕಿವಿಯನ್ನು.... ಮೂಗನ್ನು.... ನಾಲಿಗೆಯನ್ನು.... ಕಾಯವನ್ನು.... ಮನಸ್ಸನ್ನು ಅನಿತ್ಯವೆಂದು ದಶರ್ಿಸಿದಾಗ ಹಾಗು ಅರಿತಾಗ ಆತನಲ್ಲಿ ಅವಿದ್ಯೆಯು ವಜರ್ಿಸಲ್ಪಡುವುದು ಹಾಗು ನಿಜವಿದ್ಯೆಯು ಉದಯಿಸುವುದು. ಅದೇರೀತಿಯಲ್ಲಿ ಯಾವಾಗ ಒಬ್ಬನು ಮಾನಸಿಕ ವಸ್ತುಗಳನ್ನು (ಧಮ್ಮ) ದಶರ್ಿಸಿದಾಗ ಹಾಗು ಅನಿತ್ಯತೆಯನ್ನು ಅರಿತಾಗ ಆತನಲ್ಲಿ ಅವಿದ್ಯೆಯು ವಜರ್ಿತವಾಗಿ ವಿದ್ಯೆಯು ಉದಯಿಸುವುದು. ಅದೇರೀತಿಯಲ್ಲಿ ಮನೋವಿಞ್ಞಾನವನ್ನು... ಮನೋಸಂಸರ್ಶವನ್ನು.... ವೇದನೆಗಳಲ್ಲಿ ಅನಿತ್ಯವನ್ನು ದಶರ್ಿಸಿದಾಗ ಹಾಗು ಅರಿತಾಗ ಆತನಲ್ಲಿ ಅವಿದ್ಯೆಯು ವಜರ್ಿಸಲ್ಪಡುವುದು ಹಾಗು ವಿದ್ಯೆಯು ಉದಯಿಸುವುದು. ಭಿಕ್ಷುಗಳೇ, ಒಬ್ಬನು ಹೀಗೆ ಅರಿತಾಗ ಮತ್ತು ಹೀಗೆ ದಶರ್ಿಸಿದಾಗ ಆತನಲ್ಲಿ ಅಜ್ಞಾನವು (ಅವಿದ್ಯೆಯು) ವಜರ್ಿಸಲ್ಪಟ್ಟು ವಿದ್ಯೆಯು (ಪ್ರಜ್ಞಾ) ಉದಯಿಸುವುದು.
35.6.2. ಸಂಯೋಜನ ಪಹಾನ ಸುತ್ತಂ

                54. ಒಮ್ಮೆ ಭಗವಾನರು ಶ್ರಾವಸ್ತಿಯ ಅನಾಥಪಿಂಡಿಕನ ಜೇತವನದಲ್ಲಿ ವಾಸಿಸುತ್ತಿದ್ದರು. ಆಗ ಒಬ್ಬ ಭಿಕ್ಷುವು ಭಗವಾನರ ಬಳಿಗೆ ಆಗಮಿಸಿ ಪೂಜಿಸಿ ಒಂದೆಡೆ ಕುಳಿತನು. ಹಾಗೆ ಕುಳಿತ ಭಿಕ್ಷುವು ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು: ಭಗವಾನ್
ಸಂಯೋಜನಗಳನ್ನು (ಬಂಧನಗಳು/ಸಂಕೋಲೆಗಳು) ಕತ್ತರಿಸಲ್ಪಡುವುದನ್ನು (ವಜರ್ಿಸುವುದನ್ನು) ಹೇಗೆ ಭಿಕ್ಷುವು ಅರಿಯುತ್ತಾನೆ ಹಾಗು ಹೇಗೆ ದಶರ್ಿಸುತ್ತಾನೆ? ಭಿಕ್ಷುವೇ, ಇಲ್ಲಿ ಯಾವಾಗ ಒಬ್ಬನು ಚಕ್ಷುವನ್ನು... ರೂಪಗಳನ್ನು... ಚಕ್ಷುವಿಞ್ಞಾನವನ್ನು... ಚಕ್ಷುಸಂಸ್ಪರ್ಶವನ್ನು ಹಾಗು ಸಂಸ್ಪರ್ಶಗಳಿಂದ ಉದಯಿಸುವಂತಹ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ಪ್ರಿಯಾಪ್ರಿಯಗಳಲ್ಲದ ವೇದನೆಗಳನ್ನು ಅನಿತ್ಯವೆಂದು ಅರಿತಾಗ, ಅನಿತ್ಯವೆಂದು ದಶರ್ಿಸಿದಾಗ ಸಂಕೋಲೆಗಳು ಕತ್ತರಿಸಲ್ಪಡುತ್ತವೆ. ಅದೇರೀತಿಯಾಗಿ ಕಿವಿಯನ್ನು.... ಮೂಗನ್ನು.... ನಾಲಿಗೆಯನ್ನು.... ದೇಹವನ್ನು.... ಮನಸ್ಸನ್ನು.... ಧಮ್ಮವನ್ನು (ಮನೋವಸ್ತುಗಳು)... ಮನೋವಿಞ್ಞಾನ... ಮನೋಸಂಸ್ಪರ್ಶವನ್ನು... ಮನೋಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯ, ಅಪ್ರಿಯ, ಪ್ರಿಯಾಪ್ರಿಯವಲ್ಲದ ಸಂವೇದನೆಗಳನ್ನು ಅನಿತ್ಯವೆಂದು ದಶರ್ಿಸಿದಾಗ, ಅನಿತ್ಯವೆಂದು ಅರಿತಾಗ ಸಂಕೋಲೆಗಳು ಕತ್ತರಿಸಲ್ಪಡುತ್ತವೆ. ಭಿಕ್ಷುಗಳೇ, ಹೀಗೆ ದಶರ್ಿಸುವುದರಿಂದ ಹಾಗು ಅರಿಯುವುದರಿಂದಾಗಿ ಬಂದನಗಳು (ಸಂಯೋಜನೆಗಳು) ಇಲ್ಲವಾಗುತ್ತವೆ, ಕತ್ತರಿಸಲ್ಪಡುತ್ತವೆ.
35.6.3. ಸಂಯೋಜನ ಸಮುಗ್ಘಾತ ಸುತ್ತಂ

                55. ಭಂತೆ, ಯಾವರೀತಿ ಅರಿಯುವುದರಿಂದ, ಯಾವರೀತಿ ದಶರ್ಿಸುವುದರಿಂದ ಸಂಯೋಜನೆಗಳು ಬುಡಸಮೇತ ವಜರ್ಿಸಲ್ಪಡುದು? - ಭಿಕ್ಷು ಯಾವಾಗ ಒಬ್ಬನು ಚಕ್ಷುವನ್ನು.... ರೂಪಗಳನ್ನು.... ಚಕ್ಷುವಿಞ್ಞಾನವನ್ನು.... ಚಕ್ಷುಸಂಸ್ಪರ್ಶವನ್ನು.... ಚಕ್ಷು ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳನ್ನು, ಅನಾತ್ಮವೆಂದು (ನಾನು ಅಲ್ಲ, ನನ್ನದಲ್ಲ, ನನ್ನ ಆತ್ಮವಲ್ಲ) ದಶರ್ಿಸಿದಾಗ, ಅರಿತಾಗ ಆತನ ಸಂಯೋಜನೆಗಳು ಬುಡಸಮೇತ ಇಲ್ಲವಾಗುವುವು. ಅದೇರೀತಿಯಲ್ಲಿ ಭಿಕ್ಷುವೇ ಕಿವಿಯನ್ನು.... ಮೂಗನ್ನು.... ನಾಲಿಗೆಯನ್ನು.... ದೇಹವನ್ನು... ಮನಸ್ಸನ್ನು.... ಧಮ್ಮವನ್ನು.... ಮನೋವಿಞ್ಞಾನವನ್ನು.... ಮನೋಸಂಸ್ಪರ್ಶವನ್ನು.... ಮನೋಸಂಸ್ಪರ್ಶದಿಂದಾಗಿ ಉಂಟಾದ ವೇದನೆಗಳಾದ ಪ್ರಿಯ, ಅಪ್ರಿಯ, ಪ್ರಿಯಾಪ್ರಿಯಗಳಲ್ಲದ ಸಂವೇದನೆಗಳನ್ನು ಅನಾತ್ಮವೆಂದು ದಶರ್ಿಸಿದಾಗ, ಅನಾತ್ಮವೆಂದು ಅರಿತಾಗ ಸಂಕೋಲೆಗಳು ಕತ್ತರಿಸಲ್ಪಡುತ್ತವೆ. ಭಿಕ್ಷುಗಳೇ, ಹೀಗೆ ದಶರ್ಿಸುವಾಗ ಆತನ ಬಂಧನಗಳು ಬುಡಸಮೇತ ಇಲ್ಲವಾಗುವುವು.
35.6.4. ಆಸವ ಪಹಾನ ಸುತ್ತಂ

                56. ಭಂತೆ, ಯಾವರೀತಿಯಲ್ಲಿ ಅರಿಯುವುದರಿಂದಾಗಿ, ಯಾವರೀತಿಯಲ್ಲಿ ದಶರ್ಿಸುವುದರಿಂದಾಗಿ ಅವುಗಳೆಲ್ಲವೂ ವಜರ್ಿತವಾಗುವುವು? (ಉತ್ತರ ಹಿಂದಿನ ಸುತ್ತದಂತೆಯೇ....)
35.6.5. ಆಸವ ಸಮುಗ್ಘಾತ ಸುತ್ತಂ
                57. ಭಂತೆ, ಯಾವರೀತಿಯಲ್ಲಿ ಅರಿಯುವುದರಿಂದಾಗಿ, ಯಾವರೀತಿಯಲ್ಲಿ ದಶರ್ಿಸುವುದರಿಂದಾಗಿ ಆಸವಗಳೆಲ್ಲವೂ ಬುಡಸಮೇತ ಇನ್ನಿಲ್ಲವಾಗುವುವು? (ಉತ್ತರ ಹಿಂದಿನ ಸುತ್ತದಂತೆಯೇ....)
35.6.6. ಅನುಸಯ ಪಹಾನ ಸುತ್ತಂ
                58. ಭಂತೆ, ಯಾವರೀತಿಯಲ್ಲಿ ಅರಿಯುವುದರಿಂದಾಗಿ, ಯಾವರೀತಿಯಲ್ಲಿ ದಶರ್ಿಸುವುದರಿಂದಾಗಿ ಸುಪ್ತಪ್ರವೃತ್ತಿಗಳೆಲ್ಲವು (ಅನುಶಯ) ವಜರ್ಿತವಾಗುವುವು? (ಉತ್ತರ ಹಿಂದಿನ ಸುತ್ತದಂತೆಯೇ....)
35.6.7. ಅನುಸಯ ಸಮುಗ್ಘಾತ ಸುತ್ತಂ
                59. ಭಂತೆ, ಯಾವರೀತಿಯಲ್ಲಿ ಅರಿಯುವುದರಿಂದಾಗಿ, ಯಾವರೀತಿಯಲ್ಲಿ ದಶರ್ಿಸುವುದರಿಂದಾಗಿ ಸುಪ್ತಪ್ರವೃತ್ತಿಗಳೆಲ್ಲವು (ಅನುಶಯ) ಬುಡಸಹಿತ ಇನ್ನಿಲ್ಲವಾಗುವುವು? (ಉತ್ತರ ಹಿಂದಿನ ಸುತ್ತದಂತೆಯೇ....)
35.6.8. ಸಬ್ಬುಪಾದಾನ ಪರಿಞ್ಞಾ ಸುತ್ತಂ

                60. ಭಿಕ್ಷುಗಳೇ, ಎಲ್ಲಾ ಉಪಾದಾನಗಳ (ಅಂಟುವಿಕೆಗಳ) ಪರಿಪೂರ್ಣ ಜ್ಞಾನವನ್ನು (ಪರಿಞ್ಞಾ) ಉಪದೇಶಿಸುತ್ತಿದ್ದೇನೆ, ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ ಉಪಾದಾನಗಳ ಬಗ್ಗೆ ಪರಿಞ್ಞಾವು? ಭಿಕ್ಷುಗಳೇ, ಕಣ್ಣು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾಣ ಉದಯಿಸುತ್ತದೆ. ಮೂರರ ಸಮ್ಮಿಲನವು ಸ್ಪರ್ಶದಿಂದ ಆಗುವುದು. ಇದೇ ಸ್ಪರ್ಶದ ಅವಲಂಬನೆಯಿಂದಾಗಿ ವೇದನೆಗಳು ಉದಯಿಸುತ್ತವೆ... ಇವನ್ನು ದಶರ್ಿಸಿದಂತಹ ಆರ್ಯಶ್ರಾವಕನು ಕಣ್ಣಿನಿಂದ ವಿಕಷರ್ಿಸುತ್ತಾನೆ.
ಹೀಗೆ ವಿಕಷರ್ಿತನಾದ್ದರಿಂದಾಗಿ ವಿರಾಗಿಯಾಗುತ್ತಾನೆ, ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾಗಿ ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ಉಪಾದಾನವು (ಅಂಟುವಿಕೆಯು) ನನ್ನಿಂದ ಪರಿಪೂರ್ಣವಾಗಿ ಅರ್ಥಮಾಡಲ್ಪಟ್ಟಿದೆ ಇದೇರೀತಿಯಾಗಿ  ಕಿವಿಯನ್ನು ಹಾಗು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯಿಸುತ್ತವೆ. ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ಹಾಗು ಧಮ್ಮವನ್ನು (ಮನೋವಸ್ತು) ಅವಲಂಬಿಸಿ ಮನೋವಿಞ್ಞಾನವು ಉದಯಿಸುತ್ತದೆ. ಮೂರರ ಸಮ್ಮಿಲನವು ಸ್ಪರ್ಶದಿಂದಾಗಿ ಆಗುವುದು. ಸ್ಪರ್ಶದ ಅವಲಂಬನೆಯಿಂದಾಗಿ ವೇದನೆಗಳು ಉದಯಿಸುವುವು. ಇದನ್ನೆಲ್ಲಾ ಸ್ಪಷ್ಟವಾಗಿ ಅರಿಯುತ್ತಿರುವ ಆರ್ಯಶ್ರಾವಕನು ಮನಸ್ಸಿನಿಂದಾಗಿ ವಿಕಷರ್ಿತನಾಗುತ್ತಾನೆ. ಧಮ್ಮಗಳಿಂದ (ಮನೋವಸ್ತುಗಳಿಂದ) ವಿಕಷರ್ಿತನಾಗುತ್ತಾನೆ. ಮನೋವಿಞ್ಞಾನದಿಂದ ವಿಕಷರ್ಿತನಾಗುತ್ತಾನೆ. ಮನೋಸ್ಪರ್ಶಗಳಿಂದ ಉಂಟಾಗುವ ಮನೋವೇದನೆಗಳಿಂದ ವಿಕಷರ್ಿತನಾಗುತ್ತಾನೆ. ಹೀಗೆ ವಿಕಷರ್ಿತನಾದ್ದರಿಂದಾಗಿ ಆತನು ವಿರಾಗಿಯಾಗುತ್ತಾನೆ. ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದ ಆತನಲ್ಲಿ ಅರಿವು ಉಂಟಾಗುತ್ತದೆ; ಉಪಾದಾನ (ಅಂಟುವಿಕೆ)ಯನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗುತ್ತಿದೆ. ಇದೇ ಭಿಕ್ಷುಗಳೇ ಉಪಾದಾನವನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವ ಧಮ್ಮವಾಗಿದೆ.
35.6.9. ಪಠಮ ಸಬ್ಬುಪಾದಾನ ಪರಿಯಾದಾನ ಸುತ್ತಂ

                61. ಭಿಕ್ಷುಗಳೇ, ಸರ್ವ ಉಪಾದಾನಗಳನ್ನು ಇನ್ನಿಲ್ಲದಂತೆ ಮಾಡುವ ಧಮ್ಮವನ್ನು ಉಪದೇಶಿಸುತ್ತಿದ್ದೇನೆ. ಗಮನವಿಟ್ಟು ಆಲಿಸಿ, ಯಾವುದು ಭಿಕ್ಷುಗಳೇ, ಸರ್ವ ಉಪಾದಾನಗಳನ್ನು ಇನ್ನಿಲ್ಲದಂತೆ ಮಾಡುವ ಧಮ್ಮ? ಭಿಕ್ಷುಗಳೇ, ಇಲ್ಲಿ ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಮೂರರ ಸಮ್ಮಿಲನ ಸ್ಪರ್ಶದಿಂದಾಗಿ ಆಗುವುವು. ಸ್ಪರ್ಶದ ಅವಲಂಬನೆಯಿಂದಾಗಿ ವೇದನೆಗಳು ಉದಯಿಸುವುವು. ಇದನ್ನೆಲ್ಲಾ ಸ್ಪಷ್ಟವಾಗಿ ಅರಿಯುತ್ತಿರುವ ಆರ್ಯಶ್ರಾವಕ ಭಿಕ್ಷುವು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ. ರೂಪಗಳಿಂದ ವಿಕಷರ್ಿತನಾಗುತ್ತಾನೆ... ಚಕ್ಷುವಿಞ್ಞಾನದಿಂದ... ಚಕ್ಷುಸಂಸ್ಪರ್ಶಗಳಿಂದ... ಚಕ್ಷು ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ಹೀಗೆ ವಿಕಷರ್ಿತನಾದ್ದರಿಂದಾಗಿ ಆತನು ವಿರಾಗಿಯಾಗುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ಆತನಲ್ಲಿ ಅರಿವು ಉಂಟಾಗುತ್ತದೆ: ಸರ್ವ ಉಪಾದಾನಗಳು ಇನ್ನಿಲ್ಲದಂತೆ ಆಗುತ್ತಿವೆ. ಅದೇರೀತಿಯಲ್ಲಿ ಕಿವಿ... ಮೂಗು... ನಾಲಿಗೆ... ದೇಹ... ಮನಸ್ಸು.... ಮತ್ತು ಧಮ್ಮವನ್ನು ಅವಲಂಬಿಸಿ ಮನೋವಿಞ್ಞಾನವು ಉದಯಿಸುತ್ತದೆ. ವೇದನೆಗಳಿಂದ ವಿಕಷರ್ಿತನಾಗುತ್ತಾನೆ... ವಿರಾಗಿಯಾಗುತ್ತಾನೆ... ವಿಮುಕ್ತನಾಗುತ್ತಾನೆ. ಇವೇ ಸರ್ವ ಉಪಾದಾನಗಳನ್ನು ಇನ್ನಿಲ್ಲದಂತೆ  ಮಾಡುತ್ತವೆ. ಇವೇ ಭಿಕ್ಷುಗಳೇ, ಉಪಾದಾನಗಳನ್ನು ಇನ್ನಿಲ್ಲದಂತೆ ಮಾಡುವ ವಿಧಾನವಾಗಿದೆ.
35.6.10. ದುತಿಯ ಸಬ್ಬುಪಾದಾನ ಪರಿಯಾದಾನ ಸುತ್ತಂ

                62. ಭಿಕ್ಷುಗಳೇ, ಸರ್ವ ಉಪಾದಾನಗಳು ನಿಶ್ಶೇಷವಾಗಿ ಇನ್ನಿಲ್ಲವಾಗುವಿಕೆಯ ಧಮ್ಮವನ್ನು ಉಪದೇಶಿಸುತ್ತಿದ್ದೇನೆ. ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ, ಸರ್ವ ಉಪಾದಾನಗಳು ನಿಶ್ಶೇಷವಾಗಿ ಇನ್ನಿಲ್ಲವಾಗುವಿಕೆಯ ಧಮ್ಮ? ಭಿಕ್ಷುಗಳೇ, ಇದನ್ನು ಹೇಗೆ ಭಾವಿಸುವಿರಿ? ಚಕ್ಷು ನಿತ್ಯವೋ ಅಥವಾ ಅನಿತ್ಯವೋ?

                ಅನಿತ್ಯ ಭಂತೆ.

                ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?

                ದುಃಖಕಾರಿ ಭಂತೆ.

                ಯಾವುದು ಅನಿತ್ಯವೋ, ದುಃಖದಂತಹ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?

                ಇಲ್ಲ ಭಂತೆ.

                ರೂಪಗಳು... ಚಕ್ಷು ವಿಞ್ಞಾನವು ನಿತ್ಯವೋ ಅಥವಾ ಅನಿತ್ಯವೋ?

                ಅನಿತ್ಯ ಭಂತೆ.

                ಚಕ್ಷುಸಂಸ್ಪರ್ಶ ನಿತ್ಯವೋ ಅಥವಾ ಅನಿತ್ಯವೋ?

                ಅನಿತ್ಯ ಭಂತೆ.

ಯಾವ ಚಕ್ಷು ಸಂಸ್ಪರ್ಶದಿಂದಾಗಿ ಉದಯಿಸಿದಂತಹ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ಪ್ರಿಯಾಪ್ರಿಯವಲ್ಲದ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?

                ಅನಿತ್ಯ ಭಂತೆ.

                ಕಿವಿ... ಮೂಗು... ನಾಲಿಗೆ... ಕಾಯ... ಮನಸ್ಸು... ಮಾನಸಿಕ ವಸ್ತುಗಳು (ಧಮ್ಮ)... ಮನೋವಿಞ್ಞಾನ... ಮನೋಸಂಸ್ಪರ್ಶ... ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ತಟಸ್ಥ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?

                ಅನಿತ್ಯ ಭಂತೆ.        

                ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?

                ದುಃಖಕಾರಿ ಭಂತೆ.

                ಯಾವುದು ದುಃಖಕಾರಿಯೋ ವಿಪರಿಣಾಮ ಧಮ್ಮವುಳ್ಳದ್ದೋ ಅದನ್ನು ಇದು ನನ್ನದು, ಇದು ನಾನು, ಇದೇ ನನ್ನ ಆತ್ಮವೆಂದು ಪರಿಗಣಿಸಬಹುದೆ?

                ಇಲ್ಲ ಭಂತೆ.

                ಭಿಕ್ಷುಗಳೇ, ಯಾವಾಗ ಆರ್ಯಶ್ರಾವಕನು ಹೀಗೆ ಇವನ್ನು ದಶರ್ಿಸುವನೋ ಆಗ ಆತನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ರೂಪಗಳಿಂದ ವಿಕಷರ್ಿತನಾಗುತ್ತಾನೆ, ಚಕ್ಷುವಿಞ್ಞಾನದಿಂದ ವಿಕಷರ್ಿತನಾಗುತ್ತಾನೆ, ಚಕ್ಷುಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ, ಚಕ್ಷುಸಂಸ್ಪರ್ಶಗಳಿಂದ ಉದಯಿಸುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯವಲ್ಲದ ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ಅದೇರೀತಿಯಲ್ಲಿ ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ... ಮನೋವಿಞ್ಞಾನದಿಂದ... ಮನೋಸಂಸ್ಪರ್ಶದಿಂದ... ಮನೋವೇದನೆಗಳಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದ ವಿರಾಗ ಹೊಂದುತ್ತಾನೆ. ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತಿ ಜ್ಞಾನವನ್ನು ಹೊಂದುತ್ತಾನೆ

. ಜನ್ಮವು ನಾಶವಾಯಿತು (ಕ್ಷೀಣವಾಯಿತು), ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು. ಮುಂದೆ ಜನ್ಮವಿಲ್ಲ ಎಂದು ಅರಿಯುತ್ತಾನೆ. ಭಿಕ್ಷುಗಳೇ, ಇದೇ ಸರ್ವ ಉಪಾದಾನಗಳು ನಿಶ್ಶೇಷವಾಗಿ ಇನ್ನಿಲ್ಲವಾಗುವಿಕೆಯ ಧಮ್ಮವು.

ಆರನೆಯ ಅವಿದ್ಯೆವರ್ಗವು ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...