Thursday 17 May 2018

samyutta nikaya 35.8. ಗಿಲಾನ ವಗ್ಗೋ (ರೋಗಿ ವರ್ಗ)

35.8.1. ಗಿಲಾನ ವಗ್ಗೋ (ರೋಗಿ ವರ್ಗ)

74. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಒಬ್ಬ ಭಿಕ್ಷುವು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ನುಡಿದನು: ಭಂತೆ, ಇಂತಿಂಥ ವಿಹಾರದಲ್ಲಿ ಹೊಸತಾಗಿ ಸಂಘ ಸೇರಿದ, ಅಖ್ಯಾತಿಯ ಭಿಕ್ಷುವು ರೋಗಿಯಾಗಿದ್ದಾನೆ, ತೀವ್ರತೆಗೆ ಗುರಿಯಾಗಿದ್ದಾನೆ, ನರಳುತ್ತಿದ್ದಾನೆ, ಭಗವಾನರು ಕರುಣೆಯಿಂದ ಅಲ್ಲಿಗೆ ಭೇಟಿ ನೀಡಿದರೆ ಒಳಿತಾಗುವುದು.

ಆಗ ಭಗವಾನರು ಹೊಸತಾಗಿ ಸಂಘ ಸೇರಿದ ಹಾಗು ಅಖ್ಯಾತಿ ಅಂದರೆ ಅಷ್ಟಾಗಿ ಪ್ರಸಿದ್ಧಿಯಿಲ್ಲದ ಎಂಬ ಪದಗಳು ಕೇಳುತ್ತಲೇ ಭಗವಾನರು ದಯೆಯಿಂದ ಆತನನ್ನು ಕಾಣಲು ಹೊರಟರು. ದೂರದಲ್ಲಿ ಭಗವಾನರು ಬರುತ್ತಿರುವುದನ್ನು ಕಂಡಂತಹ ಭಿಕ್ಷುವು ಏಳಲು ಯತ್ನಿಸಿದನು. ಆಗ ಭಗವಾನರು ಹೀಗೆ ನುಡಿದರು: ಸಾಕು, ಸಾಕು ಭಿಕ್ಖುವೇ, ಅಲುಗಾಡದಿರು, ಹಾಸಿಗೆಯಲ್ಲಿ ಹಾಗೆಯೇ ಇರುವಂತಾಗು. ಇಲ್ಲೇ ಆಸನಗಳು ಸಿದ್ಧವಾಗಿವೆ, ನಾನಿಲ್ಲೇ ಕುಳಿತುಕೊಳ್ಳುವೆನು. ನಂತರ ಭಗವಾನರು ಆ ರೋಗಿ ಭಿಕ್ಷುವಿಗೆ ಸಮೀಪದಲ್ಲಿದ್ದಂತಹ ಆಸನದಲ್ಲಿ ಕುಳಿತು ಹೀಗೆ ಪ್ರಶ್ನಿಸಿದರು: ಭಿಕ್ಷುವೇ, ನೀನು ಸಹಿಸಿಕೊಳ್ಳುತ್ತಿದ್ದೆಯೇ, ಹಾಗು ಗುಣಮುಖವಾಗುತ್ತಿರುವೆ ಎಂದು ನಂಬುತ್ತಿದ್ದೇನೆ. ನಿನ್ನಲ್ಲಿ ಅಪ್ರಿಯ ವೇದನೆಗಳು ಕ್ಷೀಣವಾಗುತ್ತಾ ಇವೆ ಹಾಗು ವೃದ್ಧಿಯಾಗುತ್ತಿಲ್ಲ ಎಂದು ನಂಬುತ್ತಿರುವೆ. ಕ್ಷೀಣವಾಗುತ್ತಿರುವುದು ಸ್ಪಷ್ಟವಾಗಿದೆಯೇ?

ಭಂತೆ, ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ, ನಾನು ಗುಣಮುಖನಾಗುತ್ತಿಲ್ಲ, ಪ್ರಬಲವಾದ ನೋವಿನ ವೇದನೆಗಳು ವೃದ್ಧಿಯಾಗುತ್ತಲೇ ಇವೆ, ಕ್ಷೀಣವಾಗುತ್ತಿಲ್ಲ. ಇದೇರೀತಿ ಸ್ಪಷ್ಟವಾಗುತ್ತಿದೆ.
ಹಾಗಾದರೆ ಭಿಕ್ಷುವೇ, ನೀನು ಪಶ್ಚಾತ್ತಾಪದಿಂದ, ಚಿಂತೆಯಿಂದ ತೊಂದರೆಗೀಡಾಗುತ್ತಿಲ್ಲ ಎಂದು ನಂಬುತ್ತೇನೆ.
ನಿಜಕ್ಕೂ ಭಂತೆ, ನಾನು ಅಪಾರ ಪಶ್ಚಾತ್ತಾಪದಿಂದ ಹಾಗು ಚಿಂತೆಯಿಂದ ಕೂಡಿರುವೆನು.
ಭಿಕ್ಖುವೇ, ನೀನು ಶೀಲಕ್ಕೆ ಸಂಬಂಧಿಸಿದ ಪಶ್ಚಾತ್ತಾಪದಲ್ಲಿ ಕೂಡಿಲ್ಲವೆಂದು ನಂಬುತ್ತೇನೆ.
ಇಲ್ಲ ಭಂತೆ, ಶೀಲಕ್ಕೆ ಸಂಬಂಧಿಸಿದಂತೆ ನನ್ನಲ್ಲಿ ಪಶ್ಚಾತ್ತಾಪವಿಲ್ಲ.
ಹಾಗಾದರೆ ಭಿಕ್ಷುವೇ, ಶೀಲಕ್ಕೆ ಸಂಬಂಧಿಸಿದಂತೆ ಪಶ್ಚಾತ್ತಾಪವಿಲ್ಲದಿದ್ದರೆ ಮತ್ಯಾವುದರಿಮದಾಗಿ ಪಶ್ಚಾತ್ತಾಪ ಚಿಂತೆಗಳೂ ಉಂಟಾಗುತ್ತಿವೆ.
ಭಂತೆ, ಭಗವಾನರಿಂದ ಬೋಧಿಸಲ್ಪಟ್ಟಂತಹ ಧಮ್ಮವು ಕೇವಲ ಶೀಲದ ಪರಿಶುದ್ಧಿಗೆ ಅಲ್ಲವೆಂದು ನಾನು ಅರಿತಿರುವೆ.
ಓ ಭಿಕ್ಷುವೇ, ನನ್ನಿಂದ ಬೋಧಿಸಲ್ಪಟ್ಟಂತಹ ಧಮ್ಮವು ಕೇವಲ ಶೀಲ ವಿಶುದ್ಧಿಗಾಗಿ ಅಲ್ಲವೆಂದು ತಿಳಿದಿರುವ ನೀನು ಮಾತ್ಯಾವುದಕ್ಕಾಗಿ ಎಂದು ತಿಳಿದಿರುವೆ?
ಭಂತೆ, ಭಗವಾನರಿಂದ ಬೋಧಿಸಲ್ಪಟ್ಟಂತಹ ಧಮ್ಮವು ರಾಗರಹಿತನಾಗಿ ವಿರಾಗಿಯಾಗುವುದು ಎಂದು ನಾನು ಅರ್ಥ ಮಾಡಿಕೊಂಡಿರುವೆನು.

ಸಾಧು, ಸಾಧು ಭಿಕ್ಷುವೇ, ನನ್ನಿಂದ ಬೋಧಿಸಲ್ಪಟ್ಟಂತಹ ಧಮ್ಮವು ರಾಗರಹಿತನಾಗಿ ವಿರಾಗದಲ್ಲಿ ಸ್ಥಾಪಿತವಾಗುವುದು ಎಂದು ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ. ಒಳ್ಳೆಯದು ಭಿಕ್ಷುವೇ, ಇದನ್ನು ಹೇಗೆ ಭಾವಿಸುವೆ? ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಅದೇರೀತಿಯಲ್ಲಿ ಕಿವಿಯು... ಮೂಗು... ನಾಲಿಗೆ... ಕಾಯ... ಮನಸ್ಸು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ಸುಖಕಾರಿಯೋ, ದುಃಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ದುಃಖಕಾರಿಯೋ, ವಿಪರಿಣಾಮ ಧಮ್ಮವುಳ್ಳದ್ದೋ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಈ ರೀತಿಯಾಗಿ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ಶ್ರೋತದಿಂದ... ಪ್ರಾಣದಿಂದ... ಜಿಹ್ವೆಯಿಂದ... ಕಾಯದಿಂದ... ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗಿಯಾಗುತ್ತಾನೆ. ವಿರಾಗಿಯಾದ್ದರಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿಞ್ಞಾನವು ಪಡೆಯುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯವು ಪೂರ್ಣಗೊಂಡಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇನ್ನು ಪುನರ್ಜನ್ಮವಿಲ್ಲ ಎಂದು.

ಇದನ್ನು ಆಲಿಸಿದಂತಹ ಭಿಕ್ಷುವು ಅಭಿನಂದನೆಯನ್ನು ಮಾಡಿದನು, ಆನಂದಿತನಾದನು. ಆ ಸುತ್ತವು ಮುಗಿಯುತ್ತಿದ್ದಂತೆಯೇ ಆತನಲ್ಲಿ ವಿರಜವೂ, ವಿಮಲವೂ ಆದಂತಹ ಧಮ್ಮಚಕ್ಷು ಉದಯಿಸಿತು. ಯಾವುದೆಲ್ಲಾ ಉದಯವಾಗುವ ಧಮ್ಮವುಳ್ಳದ್ದೋ ಅವೆಲ್ಲವೂ ನಿರೋಧ ಧಮ್ಮವನ್ನು ಹೊಂದುತ್ತವೆ ಎಂದು ಸ್ಪಷ್ಟವಾಗಿ ಅರಿತನು, ಸೋತಪನ್ನನಾದನು.

35.8.2. ದುತಿಯಾ ಗಿಲಾನ ಸುತ್ತಂ

75. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಒಬ್ಬ ಭಿಕ್ಷುವು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ನುಡಿದನು: ಭಂತೆ, ಇಂತಿಂಥ ವಿಹಾರದಲ್ಲಿ ಹೊಸತಾಗಿ ಸಂಘ ಸೇರಿದ, ಅಖ್ಯಾತಿಯ ಭಿಕ್ಷುವು ರೋಗಿಯಾಗಿದ್ದಾನೆ, ತೀವ್ರತೆಗೆ ಗುರಿಯಾಗಿದ್ದಾನೆ, ನರಳುತ್ತಿದ್ದಾನೆ, ಭಗವಾನರು ಕರುಣೆಯಿಂದ ಅಲ್ಲಿಗೆ ಭೇಟಿ ನೀಡಿದರೆ ಒಳಿತಾಗುವುದು.

ಆಗ ಭಗವಾನರು ಹೊಸತಾಗಿ ಸಂಘ ಸೇರಿದ ಹಾಗು ಅಖ್ಯಾತಿ ಅಂದರೆ ಅಷ್ಟಾಗಿ ಪ್ರಸಿದ್ಧಿಯಿಲ್ಲದ ಎಂಬ ಪದಗಳು ಕೇಳುತ್ತಲೇ ಭಗವಾನರು ದಯೆಯಿಂದ ಆತನನ್ನು ಕಾಣಲು ಹೊರಟರು. ದೂರದಲ್ಲಿ ಭಗವಾನರು ಬರುತ್ತಿರುವುದನ್ನು ಕಂಡಂತಹ ಭಿಕ್ಷುವು ಏಳಲು ಯತ್ನಿಸಿದನು. ಆಗ ಭಗವಾನರು ಹೀಗೆ ನುಡಿದರು: ಸಾಕು, ಸಾಕು ಭಿಕ್ಖುವೇ, ಅಲುಗಾಡದಿರು, ಹಾಸಿಗೆಯಲ್ಲಿ ಹಾಗೆಯೇ ಇರುವಂತಾಗು. ಇಲ್ಲೇ ಆಸನಗಳು ಸಿದ್ಧವಾಗಿವೆ, ನಾನಿಲ್ಲೇ ಕುಳಿತುಕೊಳ್ಳುವೆನು. ನಂತರ ಭಗವಾನರು ಆ ರೋಗಿ ಭಿಕ್ಷುವಿಗೆ ಸಮೀಪದಲ್ಲಿದ್ದಂತಹ ಆಸನದಲ್ಲಿ ಕುಳಿತು ಹೀಗೆ ಪ್ರಶ್ನಿಸಿದರು: ಭಿಕ್ಷುವೇ, ನೀನು ಸಹಿಸಿಕೊಳ್ಳುತ್ತಿದ್ದೆಯೇ, ಹಾಗು ಗುಣಮುಖವಾಗುತ್ತಿರುವೆ ಎಂದು ನಂಬುತ್ತಿದ್ದೇನೆ. ನಿನ್ನಲ್ಲಿ ಅಪ್ರಿಯ ವೇದನೆಗಳು ಕ್ಷೀಣವಾಗುತ್ತಾ ಇವೆ ಹಾಗು ವೃದ್ಧಿಯಾಗುತ್ತಿಲ್ಲ ಎಂದು ನಂಬುತ್ತಿರುವೆ. ಕ್ಷೀಣವಾಗುತ್ತಿರುವುದು ಸ್ಪಷ್ಟವಾಗಿದೆಯೇ?
ಭಂತೆ, ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ, ನಾನು ಗುಣಮುಖನಾಗುತ್ತಿಲ್ಲ, ಪ್ರಬಲವಾದ ನೋವಿನ ವೇದನೆಗಳು ವೃದ್ಧಿಯಾಗುತ್ತಲೇ ಇವೆ, ಕ್ಷೀಣವಾಗುತ್ತಿಲ್ಲ. ಇದೇರೀತಿ ಸ್ಪಷ್ಟವಾಗುತ್ತಿದೆ.
ಭಿಕ್ಷುವೇ, ನಿನ್ನಲ್ಲಿ ಸಂಶಯವಾಗಲಿ ಅಥವಾ ಪಶ್ಚಾತ್ತಾಪವಾಗಲಿ ಇದೆಯೇ? - ಹೌದು ಭಂತೆ, ನನ್ನಲ್ಲಿ ಸಂಶಯಗಳು ಹಾಗು ಪಶ್ಚಾತ್ತಾಪಗಳು ಇವೆ.
ಭಿಕ್ಷುವೇ, ಶೀಲದ ಕಾರಣಕ್ಕಾಗಿ, ನಿನ್ನಲ್ಲಿ ಪಶ್ಚಾತ್ತಾಪವಿದೆಯೇ? ಇಲ್ಲ ಭಂತೆ, ಭಗವಾನರ ಬೋಧನೆಯು ಕೇವಲ ಶೀಲ ವಿಶುದ್ಧಿಗಾಗಿಯೇ ಅಲ್ಲವಲ್ಲ.
ಭಿಕ್ಷುವೇ, ನನ್ನ ಬೋಧನೆಯ ಸಾರವು ಶೀಲವಿಶುದ್ದಿಯಲ್ಲದೆ, ಉಳಿದ ಸಾರವೇನು? - ಭಗವಾನ್ ತಮ್ಮ ಬೋಧನೆಯ ಸಾರವು ಉಪಾದಿಯಿಲ್ಲದ ನಿಬ್ಬಾಣ ಎಂದು ನಾನು ಅರ್ಥ ಮಾಡಿಕೊಂಡಿರುವೆನು.
ಸಾಧು ಸಾಧು ಭಿಕ್ಷುವೇ, ಉಪಾದಿಯಿಲ್ಲದ ನಿಬ್ಬಾಣವೇ ಧಮ್ಮದ ಗುರಿಯೆಂದು ಅರಿತಿರುವುದು ಸಾಧುಕರವಾಗಿದೆ. ಖಂಡಿತವಾಗಿ ಅನುಪಾದಿ ನಿಬ್ಬಾಣವೇ ಧಮ್ಮದ ಸಾರವಾಗಿದೆ. ಭಿಕ್ಷುವೇ, ಇದು ಹೇಗೆ ಭಾವಿಸುವೆ? ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಅದೇರೀತಿಯಲ್ಲಿ ಕಿವಿಯು... ಮೂಗು... ನಾಲಿಗೆ... ಕಾಯ... ಮನಸ್ಸು... ಮನೋವಿಞ್ಞಾನ... ಮನೋಸಂಸ್ಪರ್ಶ... ಅದರಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ತಟಸ್ಥ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ಸುಖಕಾರಿಯೋ, ದುಃಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ದುಃಖಕಾರಿಯೋ, ವಿಪರಿಣಾಮ ಧಮ್ಮವುಳ್ಳದ್ದೋ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಈ ರೀತಿಯಾಗಿ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಮದ ವಿಕಷರ್ಿತನಾಗುತ್ತಾನೆ. ಹಾಗೆಯೇ ಮನೋವಿಞ್ಞಾನ... ಮನೋಸಂಸ್ಪರ್ಶ... ಅವುಗಳಿಂದ ಉಂಟಾಗುವ ಮನೋವೇದನೆಗಳಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನವು ಸಿಗುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯವು ಪೂರ್ಣಗೊಂಡಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇನ್ನು ಪುನರ್ಜನ್ಮವಿಲ್ಲ ಎಂಬ ಜ್ಞಾನವು ಸಿಗುವುದು.
ಹೀಗೆ ಭಗವಾನರು ಬೋಧನೆ ನೀಡಿದಾಗ ಆ ಭಿಕ್ಷುವು ಭಗವಾನರ ಬೋಧನೆಯಿಂದಾಗಿ ಆನಂದದಿಂದ ತೇಲಿಹೋದನು. ಹಾಗೆಯೇ ಈ ಬೋಧನೆಯು ಪೂರ್ಣಗೊಳ್ಳುತ್ತಿದ್ದಂತೆಯೇ ಆ ಭಿಕ್ಷುವಿನ ಚಿತ್ತವು ಆಸವಗಳಿಂದ ಮುಕ್ತವಾಯಿತು. ಅನುಪಾದ ವಿಮುಕ್ತಿಯನ್ನು ಪಡೆದನು.


35.8.3. ರಾಧ ಅನಿಚ್ಚ ಸುತ್ತಂ


76. ಆಗ ಆಯುಷ್ಮಂತ ರಾಧನು ಭಗವಾನರ ಬಳಿಗೆ ಬಂದನು.... ಭಂತೆ, ನನಗೆ ಭಗವಾನರು ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸುತವಂತಾಗಲಿ, ಅದನ್ನು ಭಗವಾನರಿಂದ ಆಲಿಸಿ, ಏಕಾಂತದಲ್ಲಿ ನೆಲೆಸಿ, ಏಕಾಂತವಾಸಿಯಾಗಿ, ಅಪ್ರಮತ್ತನಾಗಿ, ಪರಿಶ್ರಮಿಯಾಗಿ, ಉತ್ಸಾಹಿಯಾಗಿ, ದೃಢಪೂರ್ವಕವಾಗಿ ಸಾಧಿಸುವಂತಾಗಲಿ.

ರಾಧ, ನೀವು ಯಾವುದೆಲ್ಲವೂ ಅನಿತ್ಯವೋ ಅವೆಲ್ಲದರ ಬಗ್ಗೆ ನೀನು ಆಸೆಗಳನ್ನು ವಜರ್ಿಸಬೇಕು. ಯಾವುದು ಅನಿತ್ಯವು? ಚಕ್ಷುವು ಅನಿತ್ಯವಾಗಿದೆ. ಅದರ ಬಗೆಗಿನ ಆಸೆಯನ್ನು ವಜರ್ಿಸು... ರೂಪಗಳು ಅನಿತ್ಯವಾಗಿವೆ... ಚಕ್ಷುವಿಞ್ಞಾನವು ಅನಿತ್ಯವಾಗಿದೆ... ಚಕ್ಷು ಸಂಸ್ಪರ್ಶವು ಅನಿತ್ಯವಾಗಿದೆ... ಚಕ್ಷುವಿನಿಂದ ಉಂಟಾದ ವೇದನೆಗಳು ಅನಿತ್ಯವಾಗಿವೆ... ಅದನ್ನೆಲ್ಲಾ ವಜರ್ಿಸು. ಹಾಗೆಯೇ ಕಿವಿಯು ಅನಿತ್ಯವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ಅನಿತ್ಯವಾಗಿದೆ. ಮಾನಸಿಕ ವಿಷಯಗಳು ಅನಿತ್ಯವಾಗಿವೆ... ಮನೋವಿಞ್ಞಾನ, ಮನೋಸಂಸ್ಪರ್ಶ... ಮನೋವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ಅನಿತ್ಯವಾಗಿವೆ. ಇವುಗಳ ಬಗೆಗಿನ ಆಸೆಗಳನ್ನೆಲ್ಲಾ ವಜರ್ಿಸಬೇಕು. ಹೀಗೆ ರಾಧ, ನೀನು ಯಾವೆಲ್ಲವೂ ಅನಿತ್ಯಕಾರಕವೋ, ಅವುಗಳ ಬಗೆಗೆಲ್ಲಾ ಆಸೆಗಳನ್ನು ವಜರ್ಿಸಬೇಕು.

35.8.4. ರಾಧ ದುಃಖ ಸುತ್ತಂ


77. ರಾಧ, ಯಾವುದೆಲ್ಲವೂ ದುಃಖಕಾರಿಯೋ, ಅವುಗಳೆಲ್ಲದರ ಮೇಲಿನ ಆಸೆಗಳನ್ನು ನೀನು ವಜರ್ಿಸಬೇಕು; ರಾಧ ಯಾವೆಲ್ಲವೂ ದುಃಖಕಾರಿಯು? ರಾಧ, ಚಕ್ಷು ದುಃಖಕಾರಿಯು, ಅದರ ಬಗೆಗಿನ ಆಸೆಗಳನ್ನು ವಜರ್ಿಸುವಂತಾಗು. ರೂಪ ದುಃಖಕಾರಿ.... ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಚಕ್ಷು ಸಂವೇದನೆಗಳು... ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು ದುಃಖಕಾರಿ... ಮನೋವಿಷಯಗಳು (ಧಮ್ಮ) ದುಃಖಕಾರಿ... ಮನೋವಿಞ್ಞಾನ... ಮನೋಸಂಸ್ಪರ್ಶ... ಮನೋವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ದುಃಖಕರವಾಗಿವೆ. ಇವುಗಳ ಬಗೆಗಿನ ಆಸೆಗಳೆಲ್ಲವನ್ನು ವಜರ್ಿಸಬೇಕು.

35.8.5. ರಾಧ ಅನತ್ತ ಸುತ್ತಂ


78. ರಾಧ, ಯಾವುದೆಲ್ಲವೂ ಅನಾತ್ಮಕಾರಿಯೋ ಅವುಗಳೆಲ್ಲದರ ಆಸೆಗಳನ್ನು ವಜರ್ಿಸಬೇಕು. ರಾಧ, ಯಾವೆಲ್ಲವು ಅನಾತ್ಮಕಾರಿ? ರಾಧ, ಚಕ್ಷು ಅನಾತ್ಮವಾಗಿದೆ... ರೂಪಗಳು ಅನಾತ್ಮವಾಗಿದೆ... ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಚಕ್ಷುವೇದನೆಗಳು... ಕಿವಿ... ಮೂಗು... ನಾಲಿಗೆ... ದೇಹ... ಮನಸ್ಸು... ಧಮ್ಮ... ಮನೋವಿಞ್ಞಾನ... ಮನೋಸಂಸ್ಪರ್ಶ... ಮನೋವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ಅನಾತ್ಮವಾಗಿವೆ. ಇವುಗಳ ಬಗೆಗಿನ ಆಸೆಗಳನ್ನು ವಜರ್ಿಸಬೇಕು.

35.8.6. ಪಠಮ ಅವಿಜ್ಞಾಪಹಾನ ಸುತ್ತಂ

79. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಒಬ್ಬ ಭಿಕ್ಷುವು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತುಕೊಂಡನು. ಹೀಗೆ ಕುಳಿತುಕೊಂಡ ಆತನು ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು: ಭಂತೆ, ಯಾವ ಏಕ ಧಮ್ಮವನ್ನು ಭಿಕ್ಷುವು ದೂರೀಕರಿಸಿದರೆ ಅವಿದ್ಯೆಯು (ಅಜ್ಞಾನವು) ದೂರವಾಗುತ್ತದೆ ಹಾಗು ವಿದ್ಯೆಯು (ಪ್ರಜ್ಞೆ) ಉದಯಿಸುವುದು? ಅಂತಹ ಧಮ್ಮವಿದೆಯೇ?
ಭಿಕ್ಷುವೇ, ಅಂತಹ ಒಂದು ಧಮ್ಮವಿದೆ. ಆ ಏಕಧಮ್ಮವನ್ನು ದೂರೀಕರಿಸಿದರೆ ಅವಿದ್ಯೆಯು ದೂರವಾಗುತ್ತದೆ ಹಾಗು ವಿದ್ಯೆಯು ಉದಯಿಸುವುದು.
ಭಗವಾನ್ ಯಾವುದದು ಏಕಧಮ್ಮ, ಅದನ್ನು ದೂರೀಕರಿಸಿದಾಗ ಅವಿದ್ಯೆಯು ದೂರವಾಗುವುದು ಹಾಗು ವಿದ್ಯೆಯು ಉದಯಿಸುವುದು?
ಅವಿದ್ಯೆಯೇ ಆ ಧಮ್ಮವಾಗಿದೆ ಭಿಕ್ಷುವೇ. ಅದನ್ನು ದೂರೀಕರಿಸಿದಾಗ ವಿದ್ಯೆಯು ಉದಯಿಸುವುದು.
ಭಂತೆ, ಆದರೆ ಆತನಿಂದ ಹೇಗೆ ವೀಕ್ಷಿಸಿದಾಗ ಅವಿದ್ಯೆಯು ದೂರವಾಗುವುದು ಹಾಗು ವಿದ್ಯೆಯು ಉದಯವಾಗುವುದು? ಹೇಗೆ ಆತನಿಗೆ ಇದು ಗೊತ್ತಾಗುವುದು?
ಭಿಕ್ಷು, ಯಾವಾಗ ಭಿಕ್ಷುವು ಕಣ್ಣನ್ನು ಅನಿತ್ಯವೆಂದು ನೋಡಿದಾಗ ಹಾಗು ಅರಿತಾಗ ಅವಿದ್ಯೆಯು ವಜರ್ಿತವಾಗುವುದು, ವಿದ್ಯೆಯು ಉದಯವಾಗುವುದು. ಯಾವಾಗ ಭಿಕ್ಷುವು ರೂಪಗಳನ್ನು ಅನಿತ್ಯವೆಂದು ಅರಿತಾಗ ಹಾಗು ದಶರ್ಿಸಿದಾಗ ಆತನಲ್ಲಿ ಅವಿದ್ಯೆಯು ವಜರ್ಿತವಾಗುವುದು ಹಾಗು ವಿದ್ಯೆಯು ಉದಯವಾಗುವುದು. ಯಾವಾಗ ಭಿಕ್ಷುವು ಚಕ್ಷುವಿಞ್ಞಾನವನ್ನು... ಚಕ್ಷು ಸಂಸ್ಪರ್ಶವನ್ನು... ಚಕ್ಷುವೇದನೆಗಳಾದ ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿತಾಗ ಹಾಗು ದಶರ್ಿಸಿದಾಗ ಆತನಲ್ಲಿ ಅವಿದ್ಯೆಯು ವಜರ್ಿತವಾಗುವುದು, ವಿದ್ಯೆಯು ಉದಯವಾಗುವುದು, ಯಾವಾಗ ಭಿಕ್ಷುವು ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಧಮ್ಮವನ್ನು... ಮನೋವಿಞ್ಞಾನವನ್ನು... ಮನೋಸಂಸ್ಪರ್ಶವನ್ನು... ಮನೋವೇದನೆಗಳನ್ನು ಅನಿತ್ಯವೆಂದು ದಶರ್ಿಸಿದಾಗ, ಅರಿತಾಗ ಆತನಲ್ಲಿ ಅವಿದ್ಯೆಯು ದೂರವಾಗುವುದು ಹಾಗು ವಿದ್ಯೆಯು ಉದಯವಾಗುವುದು. ಈ ರೀತಿಯಾಗಿ ಭಿಕ್ಷುವೇ ಭಿಕ್ಷುವು ವೀಕ್ಷಿಸಿದಾಗ ಹಾಗು ಅರಿತಾಗ ಆತನಲ್ಲಿನ ಅವಿದ್ಯೆಯು ದೂರವಾಗುತ್ತದೆ ಹಾಗು ಆತನಲ್ಲಿ ವಿದ್ಯೆಯು ಉದಯವಾಗುವುದು.

35.8.7. ದುತಿಯಾ ಅವಿಜ್ಞಾಪಹಾನ ಸುತ್ತಂ


80.  ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಒಬ್ಬ ಭಿಕ್ಷುವು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತುಕೊಂಡನು. ಹೀಗೆ ಕುಳಿತುಕೊಂಡ ಆತನು ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು: ಭಂತೆ, ಯಾವ ಏಕ ಧಮ್ಮವನ್ನು ಭಿಕ್ಷುವು ದೂರೀಕರಿಸಿದರೆ ಅವಿದ್ಯೆಯು (ಅಜ್ಞಾನವು) ದೂರವಾಗುತ್ತದೆ ಹಾಗು ವಿದ್ಯೆಯು (ಪ್ರಜ್ಞೆ) ಉದಯಿಸುವುದು? ಅಂತಹ ಧಮ್ಮವಿದೆಯೇ?
ಭಿಕ್ಷುವೇ, ಅಂತಹ ಒಂದು ಧಮ್ಮವಿದೆ. ಆ ಏಕಧಮ್ಮವನ್ನು ದೂರೀಕರಿಸಿದರೆ ಅವಿದ್ಯೆಯು ದೂರವಾಗುತ್ತದೆ ಹಾಗು ವಿದ್ಯೆಯು ಉದಯಿಸುವುದು.
ಭಗವಾನ್ ಯಾವುದದು ಏಕಧಮ್ಮ, ಅದನ್ನು ದೂರೀಕರಿಸಿದಾಗ ಅವಿದ್ಯೆಯು ದೂರವಾಗುವುದು ಹಾಗು ವಿದ್ಯೆಯು ಉದಯಿಸುವುದು?
ಅವಿದ್ಯೆಯೇ ಆ ಧಮ್ಮವಾಗಿದೆ ಭಿಕ್ಷುವೇ. ಅದನ್ನು ದೂರೀಕರಿಸಿದಾಗ ವಿದ್ಯೆಯು ಉದಯಿಸುವುದು.
ಭಗವಾನ್, ಆದರೆ ಭಿಕ್ಷುವು ಹೇಗೆ ದಶರ್ಿಸಿದಾಗ, ಅವಿದ್ಯೆಯು ದೂರವಾಗುವುದು ಹಾಗು ಅವಿದ್ಯೆಯು ಉದಯವಾಗುವುದು?
ಭಿಕ್ಷುವೇ, ಇಲ್ಲಿ ಭಿಕ್ಷುವೊಬ್ಬನು ಹೀಗೆ ಕೇಳಲ್ಪಡುತ್ತಾನೆ. ಏನೆಂದರೆ, ಇಲ್ಲಿ ಯಾವುದು ಅಂಟಿಕೊಳ್ಳುವುದಕ್ಕೆ ಅರ್ಹವಲ್ಲ ಹೀಗೆ ಆತನು ಕೇಳಿ ಹಾಗು ಅದರ ಬಗ್ಗೆ ಚಿಂತನೆ ನಡೆಸಿ ನೇರವಾಗಿ ಎಲ್ಲವನ್ನು (ಧಮ್ಮವನ್ನು) ಅರಿಯುತ್ತಾನೆ. ನೇರವಾಗಿ ಎಲ್ಲವನ್ನು ಅರಿಯುತ್ತಾ, ಪ್ರತಿಯೊಂದರ ಬಗ್ಗೆಯು ಪೂರ್ಣವಾಗಿ ಅರಿಯುತ್ತಾನೆ, ಎಲ್ಲವನ್ನು ಪೂರ್ಣವಾಗಿ ಅರಿಯುತ್ತಾ, ಎಲ್ಲಾ ನಿಮಿತ್ತಗಳನ್ನು ವಿಭಿನ್ನವಾಗಿ ಕಾಣುತ್ತಾನೆ. ಹೇಗೆಂದರೆ ಆತನು ಕಣ್ಣನ್ನು ವಿಭಿನ್ನವಾಗಿ ದಶರ್ಿಸುತ್ತಾನೆ... ಚಕ್ಷು ವಿಞ್ಞಾನವನ್ನು... ಚಕ್ಷುಸಂಸ್ಪರ್ಶವನ್ನು... ಚಕ್ಷುವೇದನೆಗಳನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ಕಾಯವನ್ನು... ಮನಸ್ಸನ್ನು... ಧಮ್ಮವನ್ನು... ಮನೋವಿಞ್ಞಾನವನ್ನು... ಮನೋಸಂಸ್ಪರ್ಶವನ್ನು... ಮನೋವೇದನೆಗಳನ್ನು... ವಿಭಿನ್ನವಾಗಿ ದಶರ್ಿಸುತ್ತಾನೆ. ಯಾವಾಗ ಹೀಗೆ ಈ ಎಲ್ಲವನ್ನು ವಿಭಿನ್ನವಾಗಿ ದಶರ್ಿಸುತ್ತಾರೆಯೋ ಆಗ ಆತನಲ್ಲಿ ಅವಿದ್ಯೆಯು ತೊಡೆದು ಹೋಗುವುದು ಹಾಗು ವಿದ್ಯೆಯು ಉದಯಿಸುವುದು.

35.8.8. ಸಮ್ಬಹುಲ ಭಿಕ್ಷು ಸುತ್ತಂ


81.  ಬಹುಸಂಖ್ಯಾತ ಭಿಕ್ಷುಗಳು ಭಗವಾನರ ಬಳಿಗೆ ಬಂದರು. ವಂದಿಸಿ ಎಲ್ಲರೂ ಕುಳಿತರು, ನಂತರ ಅವರಲ್ಲಿ ಒಬ್ಬನು ಹೀಗೆ ಕೇಳಿದನು: ಭಗವಾನ್, ಪರಪಂಥಿಯು ಪರಿವ್ರಾಜಕರು ಈ ರೀತಿಯಾಗಿ ಪ್ರಶ್ನಿಸಿದ್ದರು: ಆಯುಷ್ಮಂತರೇ, ಯಾವ ಉದ್ದೇಶದಿಂದ ಸಮಣ ಗೋತಮರ ಬಳಿಯಲ್ಲಿ ಬ್ರಹ್ಮಚರ್ಯ ಜೀವನವನ್ನು ಆಚರಿಸುತ್ತಿರುವಿರಿ? ನಾವು ಹೀಗೆ ಕೇಳಲ್ಪಟ್ಟಾಗ ಭಂತೆ, ನಾನು ಆ ಪರಿವ್ರಾಜಕರಿಗೆ ಹೀಗೆ ಉತ್ತರಿಸಿದೆವು: ಆಯುಷ್ಮಂತರೇ, ದುಃಖದ ಬಗೆಗಿನ ಪರಿಪೂರ್ಣ ಅರಿವಿನಿಂದಾಗಿ ಭಗವಾನರಲ್ಲಿ ನಾವು ಬ್ರಹ್ಮಚರ್ಯವು ಶ್ರೇಷ್ಠ ಜೀವನ ನಡೆಸುತಿಹೆವು. ಭಗವಾನ್, ನಾವು ಹೀಗೆ ಹೇಳಿ ಭಗವಾನರಂತೆಯೇ ಹೇಳಿರುವೆವೆ? ನಾವು ತಪ್ಪಾಗಿ ಅಥರ್ೈಸಿಲ್ಲವಷ್ಟೇ? ಧಮ್ಮಕ್ಕೆ ಅನುಸಾರವಾಗಿ ಅಥರ್ೈಸಿರುವೆವೆ? ತಪ್ಪಾಗಿ ಅಥರ್ೈಸಿಲ್ಲವಷ್ಟೇ? ನಮ್ಮ ಹೇಳಿಕೆಯು ಟೀಕೆಗಳಿಗೆ ಆಸ್ವಾದ ನೀಡುವುದಿಲ್ಲ ತಾನೇ?

ಓಹ್, ಭಿಕ್ಷುಗಳೇ, ನೀವು ನಾನು ಹೇಳುವಂತೆಯೇ ನುಡಿದಿದ್ದೀರಿ, ತಪ್ಪಾಗಿ ಅಥರ್ೈಸಲಿಲ್ಲ. ನೀವು ಧಮ್ಮಕ್ಕೆ ಅನುಸಾರವಾಗಿಯೇ ನುಡಿದಿರುವಿರಿ. ತಪ್ಪಾಗಿ ಅಥರ್ೈಸಲಿಲ್ಲ. ನೀವು ಟೀಕೆಗಳಿಗೆ ಆಸ್ವಾದ ನೀಡದಂತೆಯೇ ಉತ್ತರಿಸುವಿರಿ. ಏಕೆಂದರೆ ಭಿಕ್ಷುಗಳೇ, ದುಃಖಗಳ ಪರಿಪೂರ್ಣ ಅರಿವಿಗಾಗಿಯೇ ನೀವು ನನ್ನಲ್ಲಿ ಶ್ರೇಷ್ಠ ಬ್ರಹ್ಮಚರ್ಯೆಯ ಜೀವನ ನಡೆಸುತ್ತಿರುವಿರಿ. ಆದರೆ ಭಿಕ್ಷುಗಳೇ, ನಿಮಗೆ ಪರಪಂಥೀಯ ಪರಿವ್ರಾಜಕರು ಹೀಗೆ ಕೇಳಬಹುದು: ಸಮಣ ಗೋತಮರ ಶಾಸನದಲ್ಲಿ ಪರಿಪೂರ್ಣವಾಗಿ ದುಃಖವನ್ನು ನೀವು ಹೇಗೆ ಅರಿತಿರುವಿರಿ? ಆಗ ನೀವು ಈ ರೀತಿಯಾಗಿ ಉತ್ತರಿಸಬೇಕು: ಮಿತ್ರರೇ, ಕಣ್ಣುಗಳು ದುಃಖಕರವಾಗಿವೆ... ರೂಪಗಳು ದುಃಖಕರವಾಗಿವೆ... ಚಕ್ಷು ವಿಞ್ಞಾನವು ದುಃಖಕರವಾಗಿದೆ... ಚಕ್ಷುಸಂಸ್ಪರ್ಶ ದುಃಖಕರವಾಗಿದೆ... ಅದರಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ದುಃಖಕರವಾಗಿದೆ. ಅದೇರೀತಿ ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು... ಧಮ್ಮ... ಮನೋವಿಞ್ಞಾನ... ಮನೋಸಂಸ್ಪಶ್... ಅದರಿಂದಾಗಿ ಉಂಟಾಗುವ ಮನೋ ಪ್ರಿಯವೇದನೆ, ಮನೋ ಅಪ್ರಿಯವೇದನೆ, ಮನೋ ತಟಸ್ಥವೇದನೆಗಳು ಸಹಾ ದುಃಖಕರವಾಗಿವೆ. ಹೀಗೆ ಮಿತ್ರರೇ, ನಾವು ಶ್ರೇಷ್ಠರಾದ ಭಗವಾನ್ ಬುದ್ಧರಿಂದ ದುಃಖವನ್ನು ಸ್ಪಷ್ಟವಾಗಿ ಅರಿತಿಹೆವು ಹಾಗು ಶ್ರೇಷ್ಠವಾದ ಬ್ರಹ್ಮಚರ್ಯೆ ಜೀವನ ಮಾಡುತಿಹೆವು. ಈ ರೀತಿಯಾಗಿ ಭಿಕ್ಷುಗಳೇ, ನೀವು ಪರಪಂಥೀಯರಾದ ಪರಿವ್ರಾಜಕರು ಪ್ರಶ್ನಿಸಿದಾಗ ಉತ್ತರಿಸಬೇಕು.

35.8.9. ಲೋಕ ಪಞ್ಞಾ ಸುತ್ತಂ

82. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಭಿಕ್ಷುವೊಬ್ಬನು ಭಗವಾನರ ಬಳಿಬಂದು, ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು: ಭಗವಾನ್, ಲೋಕ ಲೋಕ ಎನ್ನುತ್ತಾರಲ್ಲ, ಯಾವರೀತಿಯಲ್ಲಿ ಲೋಕ ಎನ್ನುತ್ತೇವೆ?
ಭಿಕ್ಷುವೇ, ವಿಘಟನಿಯವಾಗುವುದರಿಂದಾಗಿ ಇವನ್ನು ಲೋಕ ಎನ್ನುತ್ತೇವೆ ಮತ್ತು ಏನು ವಿಘಟಿತವಾಗುತ್ತವೆ? ಭಿಕ್ಷುವೇ, ಚಕ್ಷು ವಿಘಟಿತವಾಗುವುದು, ರೂಪಗಳು ವಿಘಟಿತವಾಗುತ್ತವೆ, ಚಕ್ಷು ಸಂಸ್ಪರ್ಶವು ವಿಘಟಿತವಾಗುತ್ತವೆ. ಚಕ್ಷುವಿಞ್ಞಾನ ವಿಘಟಿತವಾಗುತ್ತದೆ. ಚಕ್ಷು ವೇದನೆಗಳು ವಿಘಟಿತವಾಗುತ್ತದೆ. ಅದೇರೀತಿಯಲ್ಲಿ ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು... ಧಮ್ಮ... ಮನೋವಿಞ್ಞಾನ... ಮನೋಸಂಸ್ಪರ್ಶ... ಮನೋಪ್ರಿಯವೇದನೆ... ಮನೋ ಅಪ್ರಿಯವೇದನೆ... ಮನೋ ತಟಸ್ಥವೇದನೆಗಳು ಇವೆಲ್ಲವೂ ವಿಘಟಿತವಾಗುತ್ತವೆ. ಆದ್ದರಿಂದಾಗಿ ಇದನ್ನು ಲೋಕ ಎನ್ನುತ್ತೇವೆ.

35.8.10. ಫಗ್ಗುನ ಪಞ್ಞಾ ಸುತ್ತಂ


83. ಆಗ ಆಯುಷ್ಮಂತ ಫಗ್ಗುನ ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಕೇಳಿದರು: ಭಂತೆ, ಯಾವುದಾದರೂ ಚಕ್ಷುವಿದೆಯೇ, ಅದರಿಂದಾಗಿ ಅತೀತದ ಬುದ್ಧರ ಪರಿನಿಬ್ಬಾಣ, ಸರ್ವ ದುಃಖಗಳಿಂದ ಮುಕ್ತರಾಗುವುದು. ಪ್ರಪಂಚದ ಪ್ರಸರಣದಿಂದ ಕತ್ತರಿಸಲ್ಪಟ್ಟು, ಜನ್ಮಗಳಿಂದ ಪಾರಾಗಿರುವುದು, ಉತ್ಪತ್ತಿಗಳನ್ನು ಕತ್ತರಿಸಿದ್ದು ಅರಿಯಬಹುದೇ? ಭಂತೆ, ಯಾವುದಾದರೂ ಕಿವಿಯಿದೆಯೆ, ಅದರಿಂದಾಗಿ ಅತೀತ ಬುದ್ಧರ ಪರಿನಿಬ್ಬಾಣ, ಪ್ರಸರಣದಿಂದ ಕತ್ತರಿಸಲ್ಪಟ್ಟಿದ್ದು, ಜನ್ಮಗಳಿಂದ ಪಾರಾಗಿರುವುದು, ಉತ್ಪತ್ತಿಗಳ ಪ್ರವಾಹವನ್ನು ಕತ್ತರಿಸಿದ್ದು, ಸರ್ವ ದುಃಖಗಳಿಂದ ಮುಕ್ತರಾಗಿರುವುದು ಅರಿಯಬಹುದೇ? ಭಂತೆ ಯಾವುದಾದರೂ ಮೂಗಿದೆಯೇ... ನಾಲಿಗೆಯಿದೆಯೇ... ದೇಹವಿದೆಯೇ... ಮನಸ್ಸಿದೆಯೇ ಅದರಿಂದಾಗಿ ಅತೀತರ ಬುದ್ಧರ ಪರಿನಿಬ್ಬಾನ, ಪ್ರಪಂಚದ ಪ್ರಸರಣದಿಂದ ಕತ್ತರಿಸಲ್ಪಟ್ಟು, ಉತ್ಪತ್ತಿಗಳನ್ನು ಕತ್ತರಿಸಿ, ಜನ್ಮಗಳಿಂದ ಪಾರಾಗಿ, ಸರ್ವ ದುಃಖಗಳಿಂದ ಮುಕ್ತರಾಗಬಹುದು, ಅರಿಯಬಹುದು.
ಇಲ್ಲ ಫಗ್ಗುನ, ಅತೀತ ಬುದ್ಧರ ಪರಿನಿಬ್ಬಾಣವನ್ನು, ಪ್ರಪಂಚದ ಪ್ರಸರಣದಿಂದ ಕತ್ತರಿಸಲ್ಪಟ್ಟಿದ್ದು, ಉತ್ಪತ್ತಿಗಳ ರಾಶಿಯನ್ನು ಕತ್ತರಿಸಲ್ಪಟ್ಟಿದ್ದು, ಪ್ರಪಂಚದ ಸುತ್ತಾಟವನ್ನು ಅಂತ್ಯಗೊಳಿಸಿದ್ದು ಮತ್ತು ಸರ್ವ ದುಃಖಗಳಿಂದ ಪಾರಾಗಿರುವುದನ್ನು ವಿವರಿಸಲು ಯಾವುದೇ ಕಣ್ಣಿಲ್ಲ... ಕಿವಿಯಿಲ್ಲ... ಮೂಗಿಲ್ಲ... ನಾಲಿಗೆಯಿಲ್ಲ... ದೇಹವಿಲ್ಲ... ಮನಸ್ಸಿಲ್ಲ ಎಂದರು.
ಇಲ್ಲಿಗೆ ಗಿಲಾನ ವಗ್ಗ ಸಮಾಪ್ತಿಯಾಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...