Saturday 2 June 2018

Samyutta nikaya 36.2 ರಹೋಗತ ವಗ್ಗೋ

ರಹೋಗತ ವಗ್ಗೋ

36.2.1 ರಹೋಗತ ಸುತ್ತಂ (ಏಕಾಂಗಿಯ ಸುತ್ತ)


259. ಒಬ್ಬ ಭಿಕ್ಷುವು ಭಗವಾನರಲ್ಲಿಗೆ ಬಂದನು. ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ನುಡಿದನು: ಭಂತೆ, ನಾನು ಏಕಾಂತತೆಯಲ್ಲಿ ಒಬ್ಬನೇ ಇದ್ದಾಗ, ಒಂದು ಚಿಂತನೆಯು ನನ್ನ ಮನಸ್ಸಿನಲ್ಲಿ ಉದಯಿಸಿತು. ಭಗವಾನರಿಂದ ಮೂರುಬಗೆಯ ವೇದನೆಗಳು ಉಂಟಾಗುತ್ತವೆ; ಸುಖವೇದನೆ, ದುಃಖವೇದನೆ ಮತ್ತು ಅದುಃಖ-ಅಸುಖ ವೇದನೆ. ಈ ಮೂರು ವೇದನೆಗಳು ಭಗವಾನರಿಂದ ನುಡಿಯಲ್ಪಟ್ಟಿವೆ. ಆದರೆ ಭಗವಾನರು ಹೀಗೂ ನುಡಿದಿದ್ದಾರೆ: ಯಾವುದೆಲ್ಲವನ್ನು ಅನುಭವಿಸುತ್ತೇವೆಯೋ ಅವೆಲ್ಲವೂ ದುಃಖದಲ್ಲಿ ಮಿಳಿತವಾಗುತ್ತವೆ. ಯಾವ ಅರ್ಥದಲ್ಲಿ ಭಗವಾನರು ಈ ಹೇಳಿಕೆಯನ್ನು ನೀಡಿದ್ದಾರೆ?
ಸಾಧು, ಸಾಧು ಭಿಕ್ಷು, ಈ ಮೂರು ವೇದನೆಗಳು ನನ್ನಿಂದ ನುಡಿಯಲ್ಪಟ್ಟಿವೆ. ಅವೆಂದರೆ: ಸುಖವೇದನೆ, ದುಃಖವೇದನೆ ಮತ್ತು ತಟಸ್ಥ ವೇದನೆ. ಈ ಮೂರು ವೇದನೆಗಳು ನನ್ನಿಂದ ನುಡಿಯಲ್ಪಟ್ಟಿವೆ ಮತ್ತು ನಾನು ಹೀಗೂ ನುಡಿದಿರುವೆ: ಯಾವುದೆಲ್ಲವೂ ಅನುಭವಿಸುವೆವೋ ಅವೆಲ್ಲವೂ ದುಃಖದಲ್ಲಿ ಸೇರುತ್ತವೆ. ಆ ಹೇಳಿಕೆಯು ಸಂಖಾರಗಳ ಅನಿತ್ಯತೆಯ ಸಂಬಂಧದಿಂದಾಗ ಹೇಳಲ್ಪಟ್ಟಿದೆ. ಸಂಖಾರಗಳ ನಾಶದ ಸಂಬಂಧದಿಂದಾಗಿ ಹೇಳಲ್ಪಟ್ಟಿವೆ. ಸಂಖಾರಗಳ ಅಳಿವಿನ ಸಂಬಂಧದಿಂದಾಗಿ ನುಡಿಯಲ್ಪಟ್ಟಿವೆ. ಸಂಖಾರ ವಿರಾಗ ಧಮ್ಮದಿಂದಾಗಿ ನುಡಿಯಲ್ಪಟ್ಟಿವೆ.... ಸಂಖಾರಗಳ ನಿರೋಧ ಸಂಬಂಧದಿಂದಾಗಿ... ಸಂಖಾರಗಳ ಪರಿವರ್ತನೆಯ ನಿಯಮದಿಂದಾಗಿ ನುಡಿಯಲ್ಪಟ್ಟಿವೆ.
ನಂತರ ಭಿಕ್ಷುಗಳೇ, ನಾನು ಸಂಖಾರಗಳ ನಿರೋಧವನ್ನು ಕ್ರಮಾಗತವಾಗಿ ಬೋಧಿಸಿರುವೆನು. ಯಾರು ಪ್ರಥಮ ಝಾನವನ್ನು ಪ್ರಾಪ್ತಿಮಾಡಿರುವನೋ, ಆತನ ವಚನ (ವಾಣಿಯು) ನಿರೋಧವಾಗುವುದು. ಯಾರು ದ್ವಿತೀಯ ಝಾನ ಪ್ರಾಪ್ತಿಮಾಡಿರುವನೋ ವಿತರ್ಕ ಹಾಗು ವಿಚಾರವು ನಿರೋಧಗೊಳ್ಳುತ್ತದೆ. ಯಾರು ತೃತೀಯ ಝಾನ ಪ್ರಾಪ್ತಿಮಾಡಿರುತ್ತಾನರೋ ಪೀತಿ (ಆನಂದ) ನಿರೋಧಗೊಳ್ಳುತ್ತದೆ. ಯಾರು ಚತುರ್ಥ ಝಾನವನ್ನು ಪ್ರಾಪ್ತಿಮಾಡುವನೋ ಅವರ ಉಸಿರಾಟವು ನಿರೋಧಗೊಳ್ಳುತ್ತದೆ ಮತ್ತು ಯಾರು ಆಕಾಶನಂಚಾಯತನವನ್ನು ಪ್ರಾಪ್ತಿಮಾಡಿರುವರೊ ಅವರಲ್ಲಿ ರೂಪಗಳ ಸಂಜ್ಞೆಯು ನಿರೋಧಗೊಳ್ಳುತ್ತದೆ. ಯಾರು ವಿಞ್ಞಾಣನಂಚಾಯತನವನ್ನು ಪ್ರಾಪ್ತಿಮಾಡಿರುವರೋ ಅವರಲ್ಲ ಆಕಾಶಸಂಚಾಯತನದ ಸಂಜ್ಞೆಯು ನಿರೋಧಗೊಳ್ಳುತ್ತದೆ. ಯಾರು ಅಕಿಂಚಾಯತನವನ್ನು ಪ್ರಾಪ್ತಿಮಾಡಿರುವರೋ ಅವರಲ್ಲಿ ವಿಞ್ಞಾಣನಂಚಾಯತನದ ಸಂಜ್ಞೆಯು ನಿರೋಧಗೊಳ್ಳುತ್ತದೆ. ಯಾರು ನೇವಸಞ್ಞಾನಾಸಞ್ಞಾಯತನ ಪ್ರಾಪ್ತಿಮಾಡಿರುವರೋ ಅವರಲ್ಲಿ ಅಕಿಂಚಯತನಸಂಜ್ಞೆಯು ನಿರೋಧಗೊಳ್ಳುತ್ತದೆ. ಯಾರು ಸಂಜ್ಞಾವೇದನಾ ನಿರೋಧ ಪ್ರಾಪ್ತಿಮಾಡಿರುವರೋ ಅವರಲ್ಲಿ ಸಂಜ್ಞೆಗಳು ಹಾಗು ವೇದನೆಗಳು ನಿರೋಧಗೊಳ್ಳುತ್ತವೆ ಮತ್ತು ಯಾವ ಭಿಕ್ಷುವಿನ ಅಸವಗಳು ನಾಶವಾಗಿವೆಯೋ ಅಂತಹವನಲ್ಲಿ ರಾಗವು, ದ್ವೇಷವು ಮತ್ತು ಮೋಹವು ನಿರೋಧಗೊಂಡಿರುತ್ತದೆ.
ನಂತರ ಭಿಕ್ಷುಗಳೇ, ನಾನು ಸಂಖಾರಗಳ ಕ್ರಮಾಗತ ನಿಮರ್ೂಲನೆಯನ್ನು ಬೋಧಿಸಿರುವೆನು. ಹೇಗೆಂದರೆ, ಯಾರು ಪ್ರಥಮ ಝಾನವನ್ನು ಪ್ರಾಪ್ತಿರುವರೋ ಅವರ ವಾಚಾವು ಶಾಂತವಾಗುತ್ತದೆ. ಯಾರು ದ್ವಿತೀಯ ಝಾನವನ್ನು ಪ್ರಾಪ್ತಿಮಾಡಿರುವರೋ ಅವರ ವಿತರ್ಕವಿಚಾರಗಳು ಶಾಂತವಾಗುವುದು... ಯಾರಲ್ಲಿ ಸಂಜ್ಞಾವೇದನಾ ನಿರೋಧವಾಗಿದೆಯೋ ಅವರಲ್ಲಿ ಸಂಜ್ಞಾವು ಮತ್ತು ನಿರೋಧವು ಶಾಂತವಾಗುತ್ತದೆ. ಯಾವ ಭಿಕ್ಷುವಿನಲ್ಲಿ ಆಸವಗಳು ನಾಶವಾಗಿವೆಯೋ ಅಂತಹವನಲ್ಲಿ ರಾಗವು, ದ್ವೇಷವು ಮತ್ತು ಮೋಹವು ಶಾಂತವಾಗುತ್ತವೆ. ಭಿಕ್ಷುವೇ, ಆರುಬಗೆಯ ಪ್ರಶಾಂತತೆಗಳಿವೆ. ಪ್ರಥಮ ಝಾನದಲ್ಲಿ ವಾಚಾವು ಪ್ರಶಾಂತವಾಗುತ್ತದೆ. ದ್ವಿತೀಯ ಧ್ಯಾನದಲ್ಲಿ ವಿಚಾರವಿತರ್ಕಗಳು ಪ್ರಶಾಂತವಗುತ್ತವೆ. ತೃತೀಯ ಧ್ಯಾನದಲ್ಲಿ ಆನಂದವು (ಪೀತಿ) ಪ್ರಶಾಂತವಾಗುತ್ತದೆ. ಚತುರ್ಥ ಧ್ಯಾನದಲ್ಲಿ ಉಸಿರಾಟವು ಪ್ರಶಾಂತವಾಗುತ್ತದೆ. ಯಾರು ಸಂಜ್ಞಾವೇದನಾ ನಿರೋಧ ಪ್ರಾಪ್ತಿಮಾಡುವರೋ ಅಂತಹವರಲ್ಲಿ ಸಂಜ್ಞೆಗಳು ಮತ್ತು ವೇದನೆಗಳು ಪ್ರಶಾಂತವಾಗುತ್ತವೆ. ಯಾವ ಖೀಣಾಸವ ಭಿಕ್ಷುವಿನಲ್ಲಿ ರಾಗ, ದ್ವೇಷ ಮತ್ತು ಮೋಹವು ಪ್ರಶಾಂತವಾಗುತ್ತದೆ.


36.2.2 ಪಠಮ ಆಕಾಸ ಸುತ್ತಂ (ಪ್ರಥಮ ಆಕಾಶ ಸುತ್ತ)

260. ಭಿಕ್ಷುಗಳೇ, ಆಕಾಶದಲ್ಲಿ ಹಲವಾರು ವಾತಗಳು (ವಾಯು) ಬೀಸುತ್ತವೆ. ಪಶ್ಚಿಮದಿಂದ ವಾಯು, ಪೂರ್ವದಿಂದ ವಾಯು, ಉತ್ತರದಿಂದ ವಾಯು, ದಕ್ಷಿಣದಿಂದ ವಾಯು, ಧೂಳಿನ ವಾಯು ಮತ್ತು ಧೂಳಿಲ್ಲದ ವಾಯು, ಶೀತವಾಯು, ಉಷ್ಣವಾಯು, ದುರ್ಬಲವಾಯು, ಬಲಿಷ್ಠ ವಾಯು. ಅದೇರೀತಿಯಲ್ಲಿ ಶರೀರದಲ್ಲಿಯೂ ಸಹಾ ಹಲವಾರು ವೇದನೆಗಳು ಉದಯಿಸುತ್ತವೆ, ಸುಖವೇದನೆಗಳು, ದುಃಖವೇದನೆಗಳು ಮತ್ತು ಅಸುಖ-ಅದುಃಖ ವೇದನೆಗಳು ಉದಯಿಸುತ್ತವೆ.
ಹೇಗೆ ಆಕಾಶದಲ್ಲಿ ಹಲವು ವೈವಿಧ್ಯ ವಾಯುಗಳಿವೆಯೋ
ಪೂರ್ವದ ಗಾಳಿ, ಪಶ್ಚಿಮದ ಗಾಳಿ, ಉತ್ತರ ಹಾಗು ದಕ್ಷಿಣದ ಗಾಳಿ
ಧೂಳಿನ ವಾಯು ಮತ್ತು ಧೂಳಿಲ್ಲದ ವಾಯು
ಕೆಲವೊಮ್ಮೆ ಶೀತಲ, ಕೆಲವೊಮ್ಮೆ ಉಷ್ಣ ವಾಯು
ದುರ್ಬಲವಾದುದು, ಹಾಗೆಯೇ ಬಲಿಷ್ಠ ವಾಯುಗಳು
ಹಲವಾರು ವಾಯಗುಳು ಬೀಸುತಿಹುದು.
ಹಾಗೆಯೇ ಕಾಯದಲ್ಲು ಹಲವಾರು ವೇದನೆಗಳು ಉದಯಿಸುವುವು
ಪ್ರಿಯವಾದವು, ಅಪ್ರಿಯವಾದವು ಹಾಗು
ಅದುಃಖ-ಅಸುಖವಾದವು.
ಆದರೆ ಯಾವಾಗ ಭಿಕ್ಷುವು ಉತ್ಸಾಹಿಯೋ
ಅಂತಹ ಸಂಪಜ್ಞನತೆಯಲ್ಲಿ ಪ್ರಮತ್ತನಾಗುವುದಿಲ್ಲ.
ನಂತರ ಆ ಜ್ಞಾನಿಯು ಪೂರ್ಣವಾಗಿ ಅರಿಯುತ್ತಾನೆ.
ವೇದನೆಗಳೆಲ್ಲವನು...
ಹೀಗೆ ವೇದನೆಗಳನ್ನು ಪೂರ್ಣವಾಗಿ ಅರ್ಥಮಾಡಿಕೊಂಡು
ಈ ಜೀವಿತದಲ್ಲೇ ಖೀಣಾಸ್ರವನಾಗುವನು
ಹೀಗೆ ಧಮ್ಮದ ನೆಲೆನಿಂತವನು
ಶರೀರಬೇದದ ನಂತರ ಗ್ರಹಿಕೆಗೆ ಸಿಗಲಾರನು.


36.2.3 ದುತಿಯ ಆಕಾಸ ಸುತ್ತಂ (ದ್ವಿತೀಯ ಆಕಾಶ ಸುತ್ತ)

261. ಭಿಕ್ಷುಗಳೇ, ಆಕಾಶದಲ್ಲಿ ಹಲವಾರು ವಾತಗಳು (ವಾಯು) ಬೀಸುತ್ತವೆ. ಪಶ್ಚಿಮದಿಂದ ವಾಯು, ಪೂರ್ವದಿಂದ ವಾಯು, ಉತ್ತರದಿಂದ ವಾಯು, ದಕ್ಷಿಣದಿಂದ ವಾಯು, ಧೂಳಿನ ವಾಯು ಮತ್ತು ಧೂಳಿಲ್ಲದ ವಾಯು, ಶೀತವಾಯು, ಉಷ್ಣವಾಯು, ದುರ್ಬಲವಾಯು, ಬಲಿಷ್ಠ ವಾಯು. ಅದೇರೀತಿಯಲ್ಲಿ ಶರೀರದಲ್ಲಿಯೂ ಸಹಾ ಹಲವಾರು ವೇದನೆಗಳು ಉದಯಿಸುತ್ತವೆ, ಸುಖವೇದನೆಗಳು, ದುಃಖವೇದನೆಗಳು ಮತ್ತು ಅಸುಖ-ಅದುಃಖ ವೇದನೆಗಳು ಉದಯಿಸುತ್ತವೆ.


36.2.4 ಅಗಾರ ಸುತ್ತಂ (ಅತಿಥಿಗೃಹ ಸುತ್ತ)

262. ಭಿಕ್ಷುಗಳೇ, ಊಹಿಸಿ ಅಲ್ಲೊಂದು ಅತಿಥಿಗೃಹವಿದೆ, ಜನರು ಅಲ್ಲಿಗೆ ಪೂರ್ವದಿಂದ, ಪಶ್ಚಿಮದಿಂದ, ಉತ್ತರದಿಂದ, ದಕ್ಷಿಣದಿಂದ ಬಂದು ಅಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಕ್ಷತ್ರಿಯರು, ಬ್ರಾಹ್ಮಣರು, ವೈಶ್ಯರು ಮತ್ತು ಶೂದ್ರರು ಅಲ್ಲಿ ಬಂದು ನೆಲೆಸುತ್ತಾರೆ. ಹಾಗೆಯೇ ಭಿಕ್ಷುಗಳೇ, ಹಲವಾರು ವೇದನೆಗಳು ಶರೀರದಲ್ಲಿ ಉದಯಿಸುವುವು, ಪ್ರಿಯವಾದ ವೇದನೆಗಳು, ಅಪ್ರಿಯ ವೇದನೆಗಳು, ಪ್ರಿಯಾಪ್ರಿಯಗಳಲ್ಲದ ವೇದನೆಗಳು, ಆಮಿಷಯುಕ್ತ ಪ್ರಿಯ ವೇದನೆಗಳು, ಆಮಿಷಯುಕ್ತ ಅಪ್ರಿಯ ವೇದನೆಗಳು, ಆಮಿಶಯುಕ್ತ ತಟಸ್ಥ ವೇದನೆಗಳು, ನಿರಾಮಿಷವಾದ ಪ್ರಿಯವೇದನೆಗಳು, ನಿರಾಮಿಷವಾದ ಅಪ್ರಿಯ ವೇದನೆಗಳು ಹಾಗೂ ನಿರಾಮಿಷವಾದ ತಟಸ್ಥ ವೇದನೆಗಳು ಉದಯಿಸುತ್ತವೆ.


36.2.5 ಪಠಮ ಆನಂದ ಸುತ್ತಂ (ಪ್ರಥಮ ಆನಂದ ಸುತ್ತ)

263. ಆಗ ಆಯುಷ್ಮಂತ ಆನಂದರು ಭಗವಾನರು ಇದ್ದಲ್ಲಿಗೆ ಸಮೀಪಿಸಿದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಕೇಳಿದರು: ಭಂತೆ, ವೇದನೆ ಎಂದರೇನು? ವೇದನೆಗಳಿಗೆ ಉದಯ ಯಾವುದು? ವೇದನೆಗಳ ನಿರೋಧ ಯಾವುದು? ವೇದನೆಗಳ ನಿರೋಧದೆಡೆಗೆ ಸಾಗುವ ಮಾರ್ಗ ಯಾವುದು? ವೇದನೆಗಳ ಆಸ್ವಾದನೆ ಹೇಗೆ? ವೇದನೆಗಳ ಅಪಾಯವೇನು? ವೇದನೆಗಳಿಂದ ಬಿಡುಗಡೆ ಹೇಗೆ? - ಆನಂದ, ಮೂರು ವೇದನೆಗಳಿವೆ: ಸುಖವೇದನೆ, ದುಃಖವೇದನೆ ಮತ್ತು ಸುಖ-ದುಃಖಗಳಿಲ್ಲದ ವೇದನೆ. ಇವನ್ನೇ ವೇದನೆಗಳೆನ್ನುತ್ತಾರೆ. ಸ್ಪರ್ಶದ ಉದಯದಿಂದ ವೇದನೆಗಳ ಉದಯವಾಗುವುದು, ಸ್ಪರ್ಶದ ನಿರೋಧದಿಂದಾಗಿ ವೇದನೆಗಳ ನಿರೋಧವಾಗುವುದು, ಆರ್ಯ ಅಷ್ಠಾಂಗ ಮಾರ್ಗವೇ ವೇದನೆಗಳ ನಿರೋಧಕ್ಕಿರುವ ಮಾರ್ಗವಾಗಿದೆ. ಅದೆಂದರೆ: ಸಮ್ಯಕ್ದೃಷ್ಟಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕರ್ಮ, ಸಮ್ಯಕ್ ಜೀವನೋಪಾಯ, ಸಮ್ಯಕ್ಸ್ಮೃತಿ ಮತ್ತು ಸಮ್ಯಕ್ಸಮಾಧಿ. ಸುಖ ಹಾಗು ಸೋಮನಸ್ಸು (ಆನಂದ)ಗಳು ವೇದನೆಗಳನ್ನು ಅವಲಂಬಿಸಿಯೇ ಉದಯಿಸುತ್ತವೆ. ಇದೇ ವೇದನೆಗಳ ಆಸ್ವಾದನೆಯಾಗಿದೆ. ವೇದನೆಗಳು ಅನಿತ್ಯಕರವಾಗಿದೆ, ದುಃಖಕರವಾಗಿವೆ, ಪರಿವರ್ತನಶೀಲವಾಗಿವೆ. ಇದೇ ವೇದನೆಗಳ ಅಪಾಯವಾಗಿದೆ. ವೇದನೆಗಳ ಬಗೆಗಿನ ಆಸೆ ಹಾಗು ರಾಗಗಳ ವರ್ಜನೆ ಮತ್ತು ಪರಿತ್ಯಾಗವೇ ವೇದನೆಗಳಿಂದ ಬಿಡುಗಡೆಯಾಗಿದೆ. ಮತ್ತೆ ಆನಂದ ನಾನು ಕ್ರಮಾಗತ ಸಂಖಾರಗಳ ನಿರೋಧವನ್ನು ಬೋಧಿಸಿದ್ದೇನೆ. ಹೇಗೆಂದರೆ, ಪ್ರಥಮ ಝಾನದಲ್ಲಿ ವಾಚಾದ ನಿರೋಧವಾಗುವುದು, ದ್ವಿತೀಯ ಝಾನದಲ್ಲಿ ವಿತರ್ಕವಿಚಾರಗಳ ನಿರೋಧವಾಗುವುದು... ಸಂಜ್ಞೆವೇದನಾಯುತ ನಿರೋಧದಲ್ಲಿ ಸಂಜ್ಞೆ ಹಾಗು ವೇದನೆಗಳ ನಿರೋಧವಾಗುವುದು (ವಿವರಗಳಿಗೆ ರಹೋಗತ ಸುತ್ತವನ್ನು ಓದುವುದು) ಖೀಣಾಸ್ರವ ಭಿಕ್ಷುವಿನಲ್ಲಿ ರಾಗ, ದ್ವೇಷ ಮತ್ತು ಮೋಹಗಳ ನಿರೋಧವಾಗುವುದು. ಮತ್ತೆ ಆನಂದ, ನಾನು ಕ್ರಮಾಗತ ಸಂಖಾರಗಳ ನಿಮರ್ೂಲನೆಯನ್ನು ಬೋಧಿಸಿದ್ದೇನೆ. ಹೇಗೆಂದರೆ ಪ್ರಥಮ ಸಮಾಧಿಯಲ್ಲಿ ವಾಚಾದ ನಿಮರ್ೂಲನೆಯಾಗುವುದು (ಶಾಂತವಾಗುವುದು)... ಸನ್ಯಾವೇದಯಿತ ನಿರೋಧದಲ್ಲಿ ಸಂಜ್ಞೆಗಳ ಹಾಗು ವೇದನೆಗಳ ನಿಮರ್ೂಲನೆಯಾಗುವುದು. ಖೀಣಾಸ್ರವ ಭಿಕ್ಷುವಿನಲ್ಲಿ ರಾಗ, ದ್ವೇಷ ಮತ್ತು ಮೋಹದ ನಿಮರ್ೂಲನೆಯಾಗುವುದು. ಮತ್ತೆ ಭಿಕ್ಷುಗಳೇ ನಾನು ಕ್ರಮಾಗತ ಆರು ಬಗೆಯ ಪ್ರಶಾಂತತೆಗಳನ್ನು ತಿಳಿಸಿದ್ದೇನೆ. ಹೇಗೆಂದರೆ, ಪ್ರಥಮ ಸಮಾಧಿಯಲ್ಲಿ ವಾಚಾದ ಪ್ರಶಾಂತತೆಯಾಗುವುದು... ಸನ್ಯಾವೇದಯಿತಾ ನಿರೋಧದಲ್ಲಿ ಸಂಜ್ಞೆಗಳ ಮತ್ತು ವೇದನೆಗಳ ಪ್ರಶಾಂತತೆಯಾಗುವುದು ಹಾಗು ಖೀಣಾಸ್ರವ ಭಿಕ್ಷುವಿನಲ್ಲಿ ರಾಗದ, ದ್ವೇಷದ ಮತ್ತು ಮೋಹದ ಪ್ರಶಾಂತತೆಯಾಗುವುದು.


36.2.6 ದುತಿಯ ಆನಂದ ಸುತ್ತಂ (ದ್ವಿತೀಯ ಆನಂದ ಸುತ್ತ)

264. ಆಗ ಆಯುಷ್ಮಂತ ಆನಂದರು ಭಗವಾನರ ಬಳಿಗೆ ಬಂದರು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತರು. ಆಗ ಒಂದೆಡೆ ಕುಳಿತಿದ್ದಂತಹ ಆನಂದರವರಿಗೆ ಭಗವಾನರು ಹೀಗೆ ಪ್ರಶ್ನಿಸಿದರು: ಆನಂದ, ವೇದನೆಗಳೆಂದರೇನು? ವೇದನೆಗಳ ಉದಯ ಹೇಗೆ? ವೇದನೆಗಳ ನಿರೋಧವೆಂದರೇನು? ವೇದನೆಗಳ ನಿರೋಧದೆಡೆಗೆ ಕೊಂಡೊಯ್ಯುವ ಮಾರ್ಗ ಯಾವುದು? ವೇದನೆಗಳ ಆಸ್ವಾದನೆ ಎಂದರೇನು? ವೇದನೆಗಳ ಅಪಾಯವೇನು? ವೇದನೆಗಳಿಂದ ಬಿಡುಗಡೆ ಹೇಗೆ? - ಭಂತೆ, ಧಮ್ಮವೆಲ್ಲವೂ ಭಗವಾನರ ಮೂಲಕವಾಗಿಯೇ ಬಂದಿದೆ. ಭಗವಾನರಿಂದ ಮಾರ್ಗದಶರ್ಿತವಾಗಿಯೇ ಬಂದಿದೆ. ಭಗವಾನರೇ ಈ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಸಾಧುವಾದುದು. ಭಗವಾನರು ಸ್ಪಷ್ಟಪಡಿಸಿದರೆ ಭಿಕ್ಖುಗಳು ನೆನಪಿಟ್ಟುಕೊಳ್ಳುವರು. - ಹಾಗಾದರೆ, ಕೇಳು ಆನಂದ, ನಾನು ವಿವರಿಸುವೆ. - ಆಯಿತು ಭಂತೆ ಎಂದು ಆನಂದರು ನುಡಿದರು. ಭಗವಾನರು ಉತ್ತರಿಸಿದರು: ಆನಂದ ಮೂರುಬಗೆಯ ವೇದನೆಗಳಿವೆ..... (ಎಲ್ಲಾ ಹಿಂದಿನ ಸುತ್ತದಂತೆಯೇ)......


36.2.7 ಪಠಮ ಸಮ್ಮಾಕುಲ ಸುತ್ತಂ (ಪ್ರಥಮ ಯೋಗ್ಯಕುಲ ಭಿಕ್ಷು ಸುತ್ತ)

265. ಆಗ ಯೋಗ್ಯ ಕುಲದ ಭಿಕ್ಷುವೊಬ್ಬನು ಭಗವಾನರು ಇದ್ದಲ್ಲಿಗೆ ಸಮೀಪಿಸಿದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೇಳಿದನು: ಭಂತೆ, ವೇದನೆ ಎಂದರೇನು? ವೇದನೆಗಳಿಗೆ ಉದಯ ಯಾವುದು? ವೇದನೆಗಳ ನಿರೋಧ ಯಾವುದು? ವೇದನೆಗಳ ನಿರೋಧದೆಡೆಗೆ ಸಾಗುವ ಮಾರ್ಗ ಯಾವುದು? ವೇದನೆಗಳ ಆಸ್ವಾದನೆ ಹೇಗೆ? ವೇದನೆಗಳ ಅಪಾಯವೇನು? ವೇದನೆಗಳಿಂದ ಬಿಡುಗಡೆ ಹೇಗೆ?
ಭಿಕ್ಷು ಮೂರು ವೇದನೆಗಳಿವೆ: ಸುಖವೇದನೆ, ದುಃಖವೇದನೆ ಮತ್ತು ಸುಖ-ದುಃಖಗಳಿಲ್ಲದ ವೇದನೆ. ಇವನ್ನೇ ವೇದನೆಗಳೆನ್ನುತ್ತಾರೆ. ಸ್ಪರ್ಶದ ಉದಯದಿಂದ ವೇದನೆಗಳ ಉದಯವಾಗುವುದು, ಸ್ಪರ್ಶದ ನಿರೋಧದಿಂದಾಗಿ ವೇದನೆಗಳ ನಿರೋಧವಾಗುವುದು, ಆರ್ಯ ಅಷ್ಠಾಂಗ ಮಾರ್ಗವೇ ವೇದನೆಗಳ ನಿರೋಧಕ್ಕಿರುವ ಮಾರ್ಗವಾಗಿದೆ. ಅದೆಂದರೆ: ಸಮ್ಯಕ್ದೃಷ್ಟಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕರ್ಮ, ಸಮ್ಯಕ್ ಜೀವನೋಪಾಯ, ಸಮ್ಯಕ್ಸ್ಮೃತಿ ಮತ್ತು ಸಮ್ಯಕ್ಸಮಾಧಿ. ಸುಖ ಹಾಗು ಸೋಮನಸ್ಸು (ಆನಂದ)ಗಳು ವೇದನೆಗಳನ್ನು ಅವಲಂಬಿಸಿಯೇ ಉದಯಿಸುತ್ತವೆ. ಇದೇ ವೇದನೆಗಳ ಆಸ್ವಾದನೆಯಾಗಿದೆ. ವೇದನೆಗಳು ಅನಿತ್ಯಕರವಾಗಿದೆ, ದುಃಖಕರವಾಗಿವೆ, ಪರಿವರ್ತನಶೀಲವಾಗಿವೆ. ಇದೇ ವೇದನೆಗಳ ಅಪಾಯವಾಗಿದೆ. ವೇದನೆಗಳ ಬಗೆಗಿನ ಆಸೆ ಹಾಗು ರಾಗಗಳ ವರ್ಜನೆ ಮತ್ತು ಪರಿತ್ಯಾಗವೇ ವೇದನೆಗಳಿಂದ ಬಿಡುಗಡೆಯಾಗಿದೆ. ಮತ್ತೆ ಆನಂದ ನಾನು ಕ್ರಮಾಗತ ಸಂಖಾರಗಳ ನಿರೋಧವನ್ನು ಬೋಧಿಸಿದ್ದೇನೆ. ಹೇಗೆಂದರೆ, ಪ್ರಥಮ ಝಾನದಲ್ಲಿ ವಾಚಾದ ನಿರೋಧವಾಗುವುದು, ದ್ವಿತೀಯ ಝಾನದಲ್ಲಿ ವಿತರ್ಕವಿಚಾರಗಳ ನಿರೋಧವಾಗುವುದು... ಸಂಜ್ಞೆವೇದನಾಯುತ ನಿರೋಧದಲ್ಲಿ ಸಂಜ್ಞೆ ಹಾಗು ವೇದನೆಗಳ ನಿರೋಧವಾಗುವುದು (ವಿವರಗಳಿಗೆ ರಹೋಗತ ಸುತ್ತವನ್ನು ಓದುವುದು) ಖೀಣಾಸ್ರವ ಭಿಕ್ಷುವಿನಲ್ಲಿ ರಾಗ, ದ್ವೇಷ ಮತ್ತು ಮೋಹಗಳ ನಿರೋಧವಾಗುವುದು. ಮತ್ತೆ ಆನಂದ, ನಾನು ಕ್ರಮಾಗತ ಸಂಖಾರಗಳ ನಿಮರ್ೂಲನೆಯನ್ನು ಬೋಧಿಸಿದ್ದೇನೆ. ಹೇಗೆಂದರೆ ಪ್ರಥಮ ಸಮಾಧಿಯಲ್ಲಿ ವಾಚಾದ ನಿಮರ್ೂಲನೆಯಾಗುವುದು (ಶಾಂತವಾಗುವುದು)... ಸನ್ಯಾವೇದಯಿತ ನಿರೋಧದಲ್ಲಿ ಸಂಜ್ಞೆಗಳ ಹಾಗು ವೇದನೆಗಳ ನಿಮರ್ೂಲನೆಯಾಗುವುದು. ಖೀಣಾಸ್ರವ ಭಿಕ್ಷುವಿನಲ್ಲಿ ರಾಗ, ದ್ವೇಷ ಮತ್ತು ಮೋಹದ ನಿಮರ್ೂಲನೆಯಾಗುವುದು. ಮತ್ತೆ ಭಿಕ್ಷುಗಳೇ ನಾನು ಕ್ರಮಾಗತ ಆರು ಬಗೆಯ ಪ್ರಶಾಂತತೆಗಳನ್ನು ತಿಳಿಸಿದ್ದೇನೆ. ಹೇಗೆಂದರೆ, ಪ್ರಥಮ ಸಮಾಧಿಯಲ್ಲಿ ವಾಚಾದ ಪ್ರಶಾಂತತೆಯಾಗುವುದು... ಸನ್ಯಾವೇದಯಿತಾ ನಿರೋಧದಲ್ಲಿ ಸಂಜ್ಞೆಗಳ ಮತ್ತು ವೇದನೆಗಳ ಪ್ರಶಾಂತತೆಯಾಗುವುದು ಹಾಗು ಖೀಣಾಸ್ರವ ಭಿಕ್ಷುವಿನಲ್ಲಿ ರಾಗದ, ದ್ವೇಷದ ಮತ್ತು ಮೋಹದ ಪ್ರಶಾಂತತೆಯಾಗುವುದು.


36.2.8 ದುತಿಯ ಸಮ್ಮಾಕುಲ ಸುತ್ತಂ (ದ್ವಿತೀಯ ಯೋಗ್ಯ ಕುಲದ ಸುತ್ತ)

266. ಆಗ ಯೋಗ್ಯ ಕುಲದ ಭಿಕ್ಷುವೊಬ್ಬನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ಆಗ ಒಂದೆಡೆ ಕುಳಿತಿದ್ದಂತಹ ಯೋಗ್ಯ ಕುಲದ ಭಿಕ್ಷುವಿಗೆ ಭಗವಾನರು ಹೀಗೆ ಪ್ರಶ್ನಿಸಿದರು: ಭಿಕ್ಷುವೇ, ವೇದನೆಗಳೆಂದರೇನು? ವೇದನೆಗಳ ಉದಯ ಹೇಗೆ? ವೇದನೆಗಳ ನಿರೋಧವೆಂದರೇನು? ವೇದನೆಗಳ ನಿರೋಧದೆಡೆಗೆ ಕೊಂಡೊಯ್ಯುವ ಮಾರ್ಗ ಯಾವುದು? ವೇದನೆಗಳ ಆಸ್ವಾದನೆ ಎಂದರೇನು? ವೇದನೆಗಳ ಅಪಾಯವೇನು? ವೇದನೆಗಳಿಂದ ಬಿಡುಗಡೆ ಹೇಗೆ? - ಭಂತೆ, ಧಮ್ಮವೆಲ್ಲವೂ ಭಗವಾನರ ಮೂಲಕವಾಗಿಯೇ ಬಂದಿದೆ. ಭಗವಾನರಿಂದ ಮಾರ್ಗದಶರ್ಿತವಾಗಿಯೇ ಬಂದಿದೆ. ಭಗವಾನರೇ ಈ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಸಾಧುವಾದುದು. ಭಗವಾನರು ಸ್ಪಷ್ಟಪಡಿಸಿದರೆ ಭಿಕ್ಖುಗಳು ನೆನಪಿಟ್ಟುಕೊಳ್ಳುವರು. - ಹಾಗಾದರೆ, ಕೇಳು ಭಿಕ್ಷುವೇ, ನಾನು ವಿವರಿಸುವೆ. - ಆಯಿತು ಭಂತೆ ಎಂದು ಭಿಕ್ಷು ನುಡಿದನು. ಭಗವಾನರು ಉತ್ತರಿಸಿದರು: ಭಿಕ್ಷುವೇ, ಮೂರುಬಗೆಯ ವೇದನೆಗಳಿವೆ..... (ಎಲ್ಲಾ ಹಿಂದಿನ ಸುತ್ತದಂತೆಯೇ)......


36.2.9 ಪಞ್ಚಕಙ್ಗ ಸುತ್ತಂ (ಪಂಚಕಂಗ ಸುತ್ತ)

267. ಆಗ ಬಡಗಿಯವನಾದ ಪಂಚಕಂಗನು ಆಯುಷ್ಮಂತ ಉದಾಯಿಯವರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೇಳಿದನು: ಆಯುಷ್ಮಂತ ಉದಾಯಿಯವರೇ, ಭಗವಾನರಿಂದ ಎಷ್ಟು ವಿಧದ ವೇದನೆಗಳು ಹೇಳಲ್ಪಟ್ಟಿವೆ? - ಬಡಗಿ ಪಂಚಕಂಗನೇ, ಭಗವಾನರಿಂದ ಮೂರು ವಿಧದ ವೇದನೆಗಳು ನುಡಿಯಲ್ಪಟ್ಟಿವೆ. ಅವೆಂದರೆ: ಪ್ರಿಯವಾದ ವೇದನೆ, ಅಪ್ರಿಯವಾದ ವೇದನೆ ಮತ್ತು ಪ್ರಿಯಾಪ್ರಿಯವಲ್ಲದ (ತಟಸ್ಥ) ವೇದನೆ. ಯಾವಾಗ ಹೀಗೆ ಉದಾಯಿಯವರು ನುಡಿದರೋ, ಆಗ ಬಡಗಿ ಪಂಚಕಂಗನು ಆಯುಷ್ಮಂತ ಉದಾಯಿಯವರಿಗೆ ಹೀಗೆ ನುಡಿದನು: ಭಗವಾನರು ಮೂರು ವಿಧದ ವೇದನೆಗಳನ್ನು ನುಡಿಯಲಿಲ್ಲ. ಅವರು ಕೇವಲ ಎರಡು ವೇದನೆಗಳನ್ನು ನುಡಿದಿದ್ದಾರೆ. ಅವೆಂದರೆ: ಸುಖವೇದನೆ ಮತ್ತು ದುಃಖವೇದನೆ. ಹಾಗೂ ಅಸುಖ-ಅದುಃಖ ವೇದನೆಯು ಶಾಂತಸುಖವಾಗಿದ್ದರಿಂದಾಗಿ ಅದೂ ಸಹ ಸುಖವೇದನೆಯಲ್ಲಿ ಸೇರುತ್ತದೆ. ಆಗ ಎರಡನೆಯಬಾರಿ ಮತ್ತು ಮೂರನೆಯಬಾರಿ ಉದಾಯಿಯವರು ಹಿಂದಿನಂತೆ ನುಡಿದರು. ಬಡಗಿ ಪಂಚಕಂಗನು ಸಹಾ ಎರಡನೆಯಬಾರಿ ಮತ್ತು ಮೂರನೆಯಬಾರಿ ಹಿಂದಿನಂತೆಯೇ ನುಡಿದನು. ಆಗ ಅಸಂತುಷ್ಟರಾದ ಉದಾಯಿಯವರನ್ನು ಬಡಗಿಯಾಗಲಿ ಅಥವಾ ಬಡಗಿಯನ್ನು ಉದಾಯಿಯಾಗಲಿ ಸಂತೃಪ್ತಗೊಳಿಸಲಾಗಲಿಲ್ಲ. ಆದರೆ ಭಂತೆ ಆನಂದರು ಈ ಸಂಭಾಷಣೆಯನ್ನು ಕೇಳಿದರು. ನಂತರ ಅವರು ಭಗವಾನರ ಬಳಿಗೆ ಬಂದರು. ನಂತರ ವಂದಿಸಿ ಒಂದೆಡೆ ಕುಳಿತರು. ಆಯುಷ್ಮಂತ ಉದಾಯಿ ಹಾಗು ಪಂಚಕಂಗನ ಸಂಭಾಷಣೆಯನ್ನು ವಿವರಿಸಿದರು. ಇದನ್ನು ಆಲಿಸಿದಂತಹ ಭಗವಾನರು ಹೀಗೆ ನುಡಿದರು:
ಆನಂದ, ಬಡಗಿ ಪಂಚಕಂಗನು ಹೇಳಿದ್ದನ್ನು ಭಿಕ್ಷು ಉದಾಯಿಯು ಒಪ್ಪದಿದ್ದುದು, ಹಾಗೆಯೇ ಆಯುಷ್ಮಂತ ಉದಾಯಿ ಹೇಳಿದ್ದನ್ನು ಬಡಗಿ ಪಂಚಕಂಗ ಒಪ್ಪದಿದ್ದುದು ನಿಜವಾದ ಪ್ರತಿಪಾದನೆಯ ವಿಧಾನವಾಗಿದೆ. ನಾನು ಎರಡು ವಿಧದ ವೇದನೆಗಳಿವೆ ಎಂದು ನುಡಿದದ್ದು, ಒಂದು ವಿಧದ (ವಗರ್ಿಕರಣದ) ಪ್ರತಿಪಾದನೆಯಾಗಿದೆ. ನಾನು ಮೂರು ವಿಧದ ವೇದನೆಗಳಿವೆ ಎಂದು ನುಡಿದದ್ದು, ಇನ್ನೊಂದು ವಿಧದ (ವಗರ್ಿಕರಣದ) ಪ್ರತಿಪಾದನೆಯಾಗಿದೆ. ಹಾಗೆಯೇ ನಾನು ಐದು ವಿಧದ ವೇದನೆಗಳಿವೆ... ಆರು ವಿಧದ ವೇದನೆಗಳಿವೆ... ಹದಿನೆಂಟು ವಿಧದ ವೇದನೆಗಳಿವೆ... ಮೂವತ್ತಾರು ವಿಧದ ವೇದನೆಗಳಿವೆ. ಎಂದು ನುಡಿದದ್ದು ಮತ್ತೊಂದು ವಿಧದ ವಗರ್ಿಕರಣದ ಪ್ರತಿಪಾದನೆಯಾಗಿದೆ. ಹಾಗೆಯೇ ನಾನು 108 ವಿಧದ ವೇದನೆಗಳಿವೆ ಎಂದು ನುಡಿದದ್ದು ಬೇರೆ ವಿಧದ ವಗರ್ಿಕರಣದ ನಿರೂಪಣೆಯಾಗಿದೆ. ಹೀಗೆ ಆನಂದ ಧಮ್ಮವು ನನ್ನಿಂದ ವಿವಿಧಬಗೆಯಲ್ಲಿ ಸೂಚಿಸಲಾಗಿದೆ.
ಯಾವಾಗ ಧಮ್ಮವು ನನ್ನಿಂದ ಹಲವಾರು ವಿಧಾನಗಳಲ್ಲಿ ನಿರೂಪಿಸಲ್ಪಡುವುದೋ, ಆಗ ಬೇರೆಯವರು ನುಡಿದದ್ದನ್ನು ಕೆಲವರು ಒಪ್ಪಿಕೊಳ್ಳಲು, ಸ್ವಾಗತಿಸಲು, ಸಮ್ಮತಿಸಲು ಸಾಧ್ಯವಿಲ್ಲವೆಂದು ನಿರೀಕ್ಷಿಸಲಾಗಿದೆ. ತಮ್ಮ ದೃಷ್ಟಿಕೋನಕ್ಕೆ ಹಠವಿದ್ದವರು ಮಾತಿನ ಚೂರಿಗಳಿಂದ ಪರಸ್ಪರ ಚುಚ್ಚಿಕೊಳ್ಳುವರು. ಆದರೆ ಯಾವಾಗ ಧಮ್ಮವು ನನ್ನಿಂದ ಹಲವಾರು ವಿಧದಲ್ಲಿ ನಿರೂಪಿಸಲ್ಪಟ್ಟಿದೆಯೋ ಆಗ ಸತ್ಯಕ್ಕೆ ವಿಚರಶೀಲತೆಗೆ ಗೌರವಿಸುವವರಿಂದ ಸತ್ಯವನ್ನು ಒಪ್ಪುವ, ಸ್ವಾಗತಿಸುವ ಮತ್ತು ಸಮ್ಮತಿಸುವುದು ಸಾಧ್ಯವೆಂದು ಹಾಗೆಯೇ ಪರರು ಹೇಳುವ ಸತ್ಯವನ್ನು ಸ್ವಾಗತಿಸುವ ಮೂಲಕ ಅವರು ಸೌಹಾರ್ದತೆಯಿಂದ ಪರಸ್ಪರ ಮೆಚ್ಚುಗೆಯಿಂದ ವಿವಾದವಿಲ್ಲದೆ ಹಾಲುನೀರಿನಂತೆ ಮಿಶ್ರಿತರಾಗುತ್ತಾರೆ. ಪರಸ್ಪರರನ್ನು ದಯೆಯ ದೃಷ್ಟಿಯಿಂದ ನೋಡುವರು.
ಆನಂದ ಐದು ವಿಧದ ಇಂದ್ರೀಯ ಸುಖಗಳಿವೆ. ಯಾವುದು ಅವು ಐದು? ಕಣ್ಣಿನಿಂದ ಗ್ರಹಿಸಲ್ಪಡುವ ದೃಶ್ಯಗಳು, ಅವು ಆಸೆ ಹುಟ್ಟಿಸುವಂತಹುದು ಪ್ರಿಯವಾದವು, ಒಪ್ಪುವಂತಹವು, ಇಂದ್ರೀಯ ಉದ್ರೇಕಕಾರಿ, ಪ್ರಲೋಭನಕಾರಿ ಆಗಿವೆ. ಹಾಗೆಯೇ ಕಿವಿಯಿಂದ ಗ್ರಹಿಸಬಹುದಾದ ಶಬ್ದಗಳು... ಮೂಗಿನಿಂದ ಗ್ರಹಿಸಬಹುದಾದ ಗಂಧಗಳು... ನಾಲಿಗೆಯಿಂದ ಗ್ರಹಿಸಬಹುದಾದ ರಸಗಳು... ಕಾಯದಿಂದ ಗ್ರಹಿಸಬಹುದಾದ ಸ್ಪರ್ಶಗಳು ಮತ್ತು ಮನಸ್ಸಿನಿಂದ ಗ್ರಹಿಸಬಹುದಾದ ಮಾನಸಿಕ ವಿಷಯಗಳು. ಅವು ಆಸೆ ಹುಟ್ಟಿಸುವಂತಹುದು, ಒಪ್ಪುವಂತಹದು, ಪ್ರಿಯವಾದುದು, ಇಂದ್ರೀಯ ಉದ್ರೇಕಕಾರಿಯು ಮತ್ತು ಪ್ರಲೋಭನಕಾರಿಯು ಆಗಿದೆ. ಈ ಐದು ಇಂದ್ರೀಯಗಳಿಗೆ ಅವಲಂಬಿತವಾಗಿ ಸಿಗುವ ಸುಖ ಹಾಗು ಅಸುಖಕ್ಕೆ ಇಂದ್ರೀಯ ಸುಖಗಳು ಎನ್ನುತ್ತಾರೆ. ಕೆಲವರು ಹೇಳಬಹುದು, ಇದೇ ಪರಮಸುಖವೆಂದು. ಆದರೆ ಅವರ ಹೇಳಿಕೆಗೆ ನಾನು ಒಪ್ಪಲಾರೆನು. ಏಕೆ? ಏಕೆಂದರೆ ಇನ್ನೊಂದು ಬಗೆಯ ಸುಖವಿದೆ, ಅದು ಈ ಇಂದ್ರೀಯ ಸುಖಕ್ಕಿಂತಲೂ ಪರಮಶ್ರೇಷ್ಠವಾಗಿದೆ ಹಾಗು ಉದಾತ್ತವಾದ ಸುಖವಾಗಿದೆ ಮತ್ತು ಯಾವುದು ಆ ಸುಖವು? ಆನಂದ, ಇಲ್ಲಿ ಇಂದ್ರೀಯ ಸುಖಗಳಿಂದ ದೂರಾಗಿ ಅಕುಶಲ ಮಾನಸಿಕ ಸ್ಥಿತಿಗಳಿಂದ ದೂರಾಗಿ, ಭಿಕ್ಷುವು ಪ್ರಥಮ ಝಾನವನ್ನು ಪ್ರವೇಶಿಸುತ್ತಿದ್ದಾನೆ ಮತ್ತು ಆ ಸ್ಥಿತಿಯಲ್ಲಿ ವಿಹರಿಸುತ್ತಾನೆ. ಆ ಸಮಾಧಿಯಲ್ಲಿ ವಿತರ್ಕ, ವಿಚಾರ, ಆನಂದ, ಸುಖ ಮತ್ತು ಏಕಾಗ್ರತೆಯು ಸಮಾಧಿಯ ಅಂಗಗಳಾಗಿರುತ್ತವೆ. ಇದು ಹಿಂದಿನ ಇಂದ್ರೀಯ ಸುಖಗಳಿಗಿಂತ ಉದಾತ್ತವೂ ಹಾಗು ಉತ್ಕೃಷ್ಟವು ಆಗಿದೆ.
ಕೆಲವರು ಹೇಳಬಹುದು: ಇದೇ ಜೀವಿಗಳು ಅನುಭವಿಸಬಹುದಾದ ಪರಮಸುಖ ಹಾಗು ಆನಂದವೆಂದು. ಆದರೆ ನಾನು ಒಪ್ಪಲಾರೆನು. ಏಕೆ? ಏಕೆಂದರೆ ಇನ್ನೊಂದು ವಿಧದ ಸುಖವು ಇದಕ್ಕಿಂತ ಉತ್ತಮವಾಗಿರುವುದರಿಂದಾಗಿ. ಯಾವುದದು ಇದಕ್ಕಿಂತ ಉತ್ತಮವಾದ ಸುಖವು? ಆನಂದ, ಇಲ್ಲಿ ಪೀತಿಯನ್ನು (ಆನಂದವನ್ನು) ದಾಟಿ ಭಿಕ್ಷುವು ಸಮಚಿತ್ತತೆಯಿಂದಾಗಿ ಸ್ಮೃತಿಯಿಂದ ಮತ್ತು ಸ್ಪಷ್ಟವಾದ ಅರಿವಿನಿಂದ ಕೂಡಿರುವ ತೃತೀಯ ಧ್ಯಾನವಾಗಿದೆ. ಧ್ಯಾನಕ್ಕೆ ಆರ್ಯರು ಸುಖವಾಗಿ ವಿಹರಿಸುವತಹ ಸ್ಮೃತಿವಂತ ಹಾಗು ಸಮಚಿತ್ತತೆಯುಳ್ಳವನು ಎನ್ನುತ್ತಾರೆ. ಇದು ಇನ್ನೊಂದು ಬಗೆಯ ಸುಖವಾಗಿದ್ದು, ಹಿಂದಿನ ಸುಖಗಳಿಗಿಂತ ಉತ್ತಮವಾದುದು ಹಾಗು ಉದಾತ್ತವಾದುದು ಆಗಿದೆ.
ಕೆಲವರು ಹೇಳಬಹುದು, ಇದೇ ಜೀವಿಗಳು ಅನುಭವಿಸಬಹುದಾದಂತಹ ಪರಮಸುಖ ಮತ್ತು ಆನಂದವಾಗಿದೆ. ಆದರೆ ನಾನು ಒಪ್ಪಲಾರೆನು ಏಕೆ? ಏಕೆಂದರೆ ಇನ್ನೊಂದು ವಿಧದ ಸುಖವಿದೆ ಅದು ಇದಕ್ಕಿಂತ ಉತ್ತವಾಗಿರುವುದರಿಂದಾಗಿ. ಯಾವುದದು ಇದಕ್ಕಿಂತ ಉತ್ತಮವಾದ ಸುಖವು? ಆನಂದ, ಇಲ್ಲಿ ಸುಖವನ್ನು ಮತ್ತು ನೋವನ್ನು ವಜರ್ಿಸಿ ಹಿಂದಿನ ಎಲ್ಲಾಬಗೆಯ ಆನಂದಗಳನ್ನು, ಸುಖಗಳನ್ನು ಮೀರಿ ಅವನು ಚತುರ್ಥ ಸಮಾಧಿ ಪ್ರಾಪ್ತಿಮಡುತ್ತಾನೆ. ಅದು ನೋವಿನಿಂದಲೂ ಇಲ್ಲ, ಸುಖದಿಂದಲೂ ಇಲ್ಲ. ಆ ಸ್ಥಿತಿಯಲ್ಲಿ ಸ್ಮೃತಿಯ ಉಪೇಕ್ಷೆಯಿಂದ ಪರಿಶುದ್ಧವಾಗುವುದು. ಈ ಸುಖವು ಹಿಂದಿನ ಎಲ್ಲಾ ಸುಖಗಳಿಗಿಂತ ಉನ್ನತ ಸುಖವು ಹಾಗು ಉತ್ಕೃಷ್ಟವು ಆಗಿದೆ.
ಕೆಲವರು ಹೇಳಬಹುದು, ಇದೇ ಜೀವಿಗಳು ಅನುಭವಿಸಬಹುದಾದಂತಹ ಪರಮಸುಖ ಮತ್ತು ಆನಂದ ಎಂದು. ಆದರೆ ನಾನು ಒಪ್ಪಲಾರೆನು. ಏಕೆ? ಏಕೆಂದರೆ ಇನ್ನೊಂದು ವಿಧದ ಸುಖವಿದೆ ಅದು ಇದಕ್ಕಿಂತ ಉತ್ಕೃಷ್ಟವಾದುದು ಮತ್ತು ಉದಾತ್ತವಾದುದು ಆಗಿದೆ. ಯಾವುದದು ಅಂತಹ ಸುಖವು? ಆನಂದ, ಇಲ್ಲಿ ಎಲ್ಲಾ ಬಗೆಯ ರೂಪಸಂಜ್ಞೆಗಳನ್ನು ದಾಟಿಹೋಗಿ, ಇಂದ್ರೀಯ ಸ್ಪರ್ಶಗಳ ಗ್ರಾಹ್ಯಗಳನ್ನು ದಾಟಿಹೋಗಿ ವೈವಿಧ್ಯತೆಗಳ ಕಡೆಗೆ ಗಮನನೀಡದೆ, ಆಕಾಶವು ಅನಂತ ಎಂದು ಉದಾತ್ತ ಸ್ಥಿತಿಯಲ್ಲಿರುತ್ತಾನೆ. ಇದೇ ಆ ಇನ್ನೊಂದು ಬಗೆಯ ಸುಖವಾಗಿದ್ದು, ಇದು ಹಿಂದಿನ ಎಲ್ಲಾ ಸುಖಗಳಿಗಿಂತ ಉನ್ನತವಾದದ್ದು ಹಾಗು ಉತ್ಕೃಷ್ಟವಾಗಿದೆ.
ಕೆಲವರು ಹೇಳಬಹುದು, ಇದೇ ಜೀವಿಗಳು ಅನುಭವಿಸಬಹುದಾದಂತಹ ಪರಮಸುಖ ಮತ್ತು ಆನಂದ ಎಂದು. ಆದರೆ ನಾನು ಒಪ್ಪಲಾರೆನು. ಏಕೆ? ಏಕೆಂದರೆ ಇನ್ನೊಂದು ವಿಧದ ಸುಖವಿದೆ ಅದು ಇದಕ್ಕಿಂತ ಉತ್ಕೃಷ್ಟವಾದುದು ಮತ್ತು ಉದಾತ್ತವಾದುದು ಆಗಿದೆ. ಯಾವುದದು ಅಂತಹ ಸುಖವು? ಆನಂದ, ಇಲ್ಲಿ ಆಕಾಶನಂಚಾಯತನವನ್ನು ಪೂರ್ಣವಾಗಿ ಅತಿಕ್ರಮಿಸಿ ಭಿಕ್ಷುವು ಅನಂತವಿಞ್ಞಾಣ ಎಂಬ ಆಧಾರದಲ್ಲಿ ಪ್ರವೇಶಿಸಿ ನೆಲೆಗೊಳ್ಳುತ್ತಾನೆ. ಇದೇ ಹಿಂದಿನ ಸುಖಗಳಿಂದ ಬೇರೆಯಾದದ್ದು ಹಾಗು ಉನ್ನತವೂ ಆಗಿದೆ.
ಕೆಲವರು ಹೇಳಬಹುದು, ಇದೇ ಜೀವಿಗಳು ಅನುಭವಿಸಬಹುದಾದಂತಹ ಪರಮಸುಖ ಮತ್ತು ಆನಂದ ಎಂದು. ಆದರೆ ನಾನು ಒಪ್ಪಲಾರೆನು. ಏಕೆ? ಏಕೆಂದರೆ ಇನ್ನೊಂದು ವಿಧದ ಸುಖವಿದೆ ಅದು ಇದಕ್ಕಿಂತ ಉತ್ಕೃಷ್ಟವಾದುದು ಮತ್ತು ಉದಾತ್ತವಾದುದು ಆಗಿದೆ. ಯಾವುದದು ಅಂತಹ ಸುಖವು? ಆನಂದ, ಇಲ್ಲಿ ಅನಂತವಿಞ್ಞಾನಾಯತನವನ್ನು ಪೂರ್ಣವಾಗಿ ಅತಿಕ್ರಮಿಸಿ, ಅಕಿಂಚಾಯತನ (ಏನೂ ಇಲ್ಲ) ಎಂಬ ಸ್ಥಿತಿಯನ್ನು ಪ್ರವೇಶಿಸಿ ವಿಹರಿಸುತ್ತಾನೆ. ಇದು ಹಿಂದಿನದಕ್ಕಿಂತ ಇನ್ನೂ ಉತ್ತಮವಾದ ಸುಖವಾಗಿದ್ದು ಹಾಗು ಉತ್ಕೃಷ್ಟವಾದ ಸುಖವಾಗಿದೆ.
ಕೆಲವರು ಹೇಳಬಹುದು, ಇದೇ ಜೀವಿಗಳು ಅನುಭವಿಸಬಹುದಾದಂತಹ ಪರಮಸುಖ ಮತ್ತು ಆನಂದ ಎಂದು. ಆದರೆ ನಾನು ಒಪ್ಪಲಾರೆನು. ಏಕೆ? ಏಕೆಂದರೆ ಇನ್ನೊಂದು ವಿಧದ ಸುಖವಿದೆ ಅದು ಇದಕ್ಕಿಂತ ಉತ್ಕೃಷ್ಟವಾದುದು ಮತ್ತು ಉದಾತ್ತವಾದುದು ಆಗಿದೆ. ಯಾವುದದು ಅಂತಹ ಸುಖವು? ಆನಂದ, ಇಲ್ಲಿ ಅಕಿಂಚಾಯತನವನ್ನು ಪೂರ್ಣವಾಗಿ ಅತಿಕ್ರಮಿಸಿ ನೇವಸಞ್ಞಾನಾಸಞ್ಞಾಯತನ (ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ) ಎಂಬ ಸ್ಥಿತಿಯನ್ನು ಪ್ರವೇಶಿಸಿ ವಿಹರಿಸುತ್ತಾನೆ. ಇದು ಹಿಂದಿನದಕ್ಕಿಂತ ಇನ್ನೂ ಉತ್ತಮವಾದ ಸುಖವಾಗಿದ್ದು ಹಾಗು ಉತ್ಕೃಷ್ಟವಾದ ಸುಖವಾಗಿದೆ.
ಕೆಲವರು ಹೇಳಬಹುದು, ಇದೇ ಜೀವಿಗಳು ಅನುಭವಿಸಬಹುದಾದಂತಹ ಪರಮಸುಖ ಮತ್ತು ಆನಂದ ಎಂದು. ಆದರೆ ನಾನು ಒಪ್ಪಲಾರೆನು. ಏಕೆ? ಏಕೆಂದರೆ ಇನ್ನೊಂದು ವಿಧದ ಸುಖವಿದೆ ಅದು ಇದಕ್ಕಿಂತ ಉತ್ಕೃಷ್ಟವಾದುದು ಮತ್ತು ಉದಾತ್ತವಾದುದು ಆಗಿದೆ. ಯಾವುದದು ಅಂತಹ ಸುಖವು? ಆನಂದ, ಇಲ್ಲಿ ಧ್ಯಾನಿಯು ಪೂರ್ಣವಾಗಿ ನೇವಸಞ್ಞಾನಾಸಞ್ಞಾಯತನವನ್ನು ಅತಿಕ್ರಮಿಸಿ ಸಞ್ಞಾವೇದಯುತ ನಿರೋಧ ಎಂಬ ಸ್ಥಿತಿ ಪ್ರವೇಶಿಸಿ ವಿಹರಿಸುತ್ತಾನೆ. ಇದು ಹಿಂದಿನ ಎಲ್ಲಾಬಗೆಯ ಸುಖಗಳಿಗಿಂತ ಉತ್ಕೃಷ್ಟವಾದುದು ಹಾಗು ಉದಾತ್ತವಾದುದು ಆಗಿದೆ.
ಈಗ ಇದು ಸಾಧ್ಯವಿದೆ ಆನಂದ, ಪರಪಂಗಡಗಳ ತೀರ್ಥಂಕರರು ಹೀಗೆ ಕೇಳಬಹುದು, ಸಮಣ ಗೋತಮರು ಸಂಜ್ಞೆ ಮತ್ತು ವೇದನೆಗಳ ನಿರೋಧದ ಬಗ್ಗೆ ಪ್ರತಿಪಾದಿಸುತ್ತಾರೆ. ಆದರೂ ಸಞ್ಞಾವೇದಯುತ ನಿರೋಧವನ್ನು ಸುಖದಲ್ಲಿ ಒಂದೆಂದು ಒಳಗೂಡಿಸುತ್ತಿದ್ದಾರೆ ಇದು ಹೇಗೆ? ಎಂದು. ಹೀಗೆ ಪರತೀರ್ಥಂಕರರು ಪ್ರಶ್ನಿಸಿದರೆ ನೀವು ಹೀಗೆ ಉತ್ತರಿಸಬೇಕು: ಆಯುಷ್ಮಂತನೇ, ಭಗವಾನರು ವೇದನೆಗಳಲ್ಲಿ ಅಡಕವಾಗುವ ಸುಖಗಳಷ್ಟೇ ತಿಳಿಸಿಲ್ಲ. ಆಯುಷ್ಮಂತನೇ, ಬದಲಾಗಿ ಎಲ್ಲೆಲ್ಲಿ ಮತ್ತು ಯಾವರೀತಿಯಲ್ಲಿ ಸುಖವು ಸಿಗುವುದೋ ಅವೆಲ್ಲವನ್ನು ಭಗವಾನರು ಸುಖದಲ್ಲಿ ಒಳಗೂಡಿಸುತ್ತಾರೆ ಎಂದು.



36.2.10 ಭಿಕ್ಷು ಸುತ್ತಂ (ಭಿಕ್ಷು ಸುತ್ತ)

268. ಭಿಕ್ಷುಗಳೇ, ನಾನು ಎರಡು ವಿಧ ವೇದನೆಗಳನ್ನು ಒಂದು ವಗರ್ಿಕರಣದಲ್ಲಿ ವಿವರಿಸಿರುವೆನು...... ಹೀಗೆ ಭಿಕ್ಷುಗಳೇ, ಧಮ್ಮವು ನಾನಾರೀತಿಯಲ್ಲಿ ನನ್ನಿಂದ ವಿವರಿಸಲ್ಪಟ್ಟಿದೆ (ಎಲ್ಲವೂ ಹಿಂದಿನ ಸುತ್ತದಂತೆಯೇ).
ಇಲ್ಲಿಗೆ ಮೂರನೆಯ ರಹೋಗತವರ್ಗ ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...