Saturday 2 June 2018

Samyutta nikaya 37.1 ಮಾತುಗಾಮ ಸಂಯುತ್ತಂ

3. ಮಾತುಗಾಮ ಸಂಯುತ್ತಂ

1. ಪಠಮ ಪೇಯ್ಯಾಲ ವಗ್ಗೋ

1. ಮಾತುಗಾಮ ಸುತ್ತಂ (ಸ್ತ್ರೀಯರು ವಿಕರ್ಷಣೆ ಹಾಗು ಆಕರ್ಷಣೆಯಿಂದಿರುವುದು)

280. ಭಗವಾನರು ರಾಜಗೃಹದ ವೇಲುವನದಲ್ಲಿರುವ ಅಳಿಲು ಧಾಮದಲ್ಲಿ ತಂಗಿದ್ದಾಗ ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು: ಭಿಕ್ಖುಗಳೇ ಈ ಪಂಚ ಅಂಗಗಳಿಂದಾಗಿ ಸ್ತ್ರೀಯು ಪುರುಷನಿಗೆ ಆಕರ್ಷಣೀಯವಾಗಿ ಇರುವುದಿಲ್ಲ. ಯಾವುದವು ಐದು? ಸುಂದರ ರೂಪವಿಲ್ಲದಿರುವಿಕೆ, ಐಶ್ವರ್ಯವಿಲ್ಲದಿರುವಿಕೆ, ಶೀಲವಿಲ್ಲದಿರುವಿಕೆ, ಪರಿಶ್ರಮವಿಲ್ಲದಿರುವಿಕೆ (ಸೋಮಾರಿಯಾಗಿರುವಿಕೆ) ಹಾಗು ಮಕ್ಕಳನ್ನು ಹೆರದ ಬಂಜೆಯಾಗಿರುವಿಕೆ. ಹೀಗೆ ಸ್ತ್ರೀಯು ಈ ಪಂಚ ಅಂಗಗಳಿಂದಾಗಿ ಪುರುಷನಿಗೆ ವಿಕರ್ಷಣೆಯಾಗಿರುತ್ತಾಳೆ. ಹಾಗೆಯೇ ಭಿಕ್ಖುಗಳೇ, ಪಂಚ ಅಂಗಗಳಿಂದಾಗಿ ಸ್ತ್ರೀಯು ಪುರುಷನಿಗೆ ಆಕರ್ಷಣೀಯವಾಗಿ ಕಾಣಿಸುತ್ತಾಳೆ. ಯಾವುದವು ಐದು? ಸುಂದರಾಕೃತಿ ಹೊಂದಿರುವಿಕೆ, ಐಶ್ವರ್ಯವನ್ನು ಹೊಂದಿರುವಿಕೆ, ಶೀಲವಂತೆಯಾಗಿರುವಿಕೆ, ಸೋಮಾರಿಯಾಗಿರುವಿಕೆ ಶ್ರಮಿಯಾಗಿರುವಿಕೆ ಹಾಗು ಮಕ್ಕಳನ್ನು ಹೆರುವಿಕೆ. ಸ್ತ್ರೀಯು ಈ ಐದು ಅಂಗಗಳಿಂದಾಗಿ ಪೂರ್ಣವಾಗಿ ಪುರುಷನಿಗೆ ಆಕರ್ಷಣೀಯವಾಗಿ ಇರುತ್ತಾಳೆ.

2. ಪುರಿಸ ಸುತ್ತಂ (ಪುರುಷರು ವಿಕರ್ಷಣೆ ಹಾಗೂ ಆಕರ್ಷಣೆಯಿಂದಿರುವುದು)

281. ಭಿಕ್ಖುಗಳೇ, ಈ ಪಂಚ ಅಂಗಗಳಿಂದಾಗಿ ಪುರುಷರು ಸ್ತ್ರೀಯರಿಗೆ ಆಕರ್ಷಣೀಯವಾಗಿ ಕಾಣಿಸಿಕೊಳ್ಳಲಾರರು. ಯಾವುದವು ಐದು? ಸುಂದರ ಆಕೃತಿಯಿಲ್ಲದಿರುವಿಕೆ, ಐಶ್ವರ್ಯವಿಲ್ಲದಿರುವಿಕೆ, ಶೀಲವಿಲ್ಲದಿರುವಿಕೆ, ಸೋಮಾರಿಯಾಗಿರುವಿಕೆ ಹಾಗು ಮಕ್ಕಳನ್ನು ನೀಡದಿರುವಿಕೆ. ಹೀಗೆ ಈ ಐದು ಅಂಗಗಳಿರುವ ಪುರುಷನು ಸ್ತ್ರೀಯರಿಗೆ ವಿಕರ್ಷಣೆ (ಆಕರ್ಷಣೆಯಿಲ್ಲದೆ) ಇರುತ್ತಾನೆ. ಭಿಕ್ಖುಗಳೇ, ಈ ಐದು ಅಂಗಗಳಿಂದ ಕೂಡಿರುವ ಪುರುಷನು ಸ್ತ್ರೀಯರಿಗೆ ಆಕರ್ಷಕನಾಗಿರುತ್ತಾನೆ. ಯವುದವು ಐದು? ಅವೆಂದರೆ, ಸುಂದರಾಕೃತಿ ಹೊಂದಿರುವಿಕೆ, ಐಶ್ವರ್ಯವನ್ನು ಹೊಂದಿರುವಿಕೆ, ಶೀಲವಂತನಾಗಿರುವಿಕೆ, ಸೋಮಾರಿಯಾಗಿರದೆ ಪರಿಶ್ರಮಿಯಾಗಿರುವಿಕೆ (ಕುಶಲ ಬುದ್ಧಿವಂತನಾಗಿರುವಿಕೆ) ಹಾಗು ಮಕ್ಕಳನ್ನು ನೀಡುವವನಾಗಿರುವಿಕೆ. ಈ ಐದು ಅಂಗಗಳಿಂದಾಗಿ ಪುರುಷನು ಸ್ತ್ರೀಯರಿಗೆ ಆಕರ್ಷಣೀಯವಾಗಿ ಕಾಣಿಸಿಕೊಳ್ಳುತ್ತಾನೆ.


3. ಅವೇಣಿಕದುಕ್ಖ ಸುತ್ತಂ (ಸ್ತ್ರೀಯರ ನಿದರ್ಿಷ್ಟ ದುಃಖಗಳು)

282. ಭಗವಾನರು ರಾಜಗೃಹದ ವೇಣುವನದ ಅಳಿಲುಧಾಮದಲ್ಲಿ ವಾಸಿಸುತ್ತಿದ್ದರು. ಭಗವಾನರು ಭಿಕ್ಖುಗಳೊಂದಿಗೆ ಇಂತೆಂದರು: ಭಿಕ್ಖುಗಳೇ, ಈ ಐದು ಅಸಮಾನ್ಯ ದುಃಖಗಳು ಕೇವಲ ಸ್ತ್ರೀಯರಿಗೆ ಮಾತ್ರ ಇರುವುದು ಹಾಗು ಅವರು ಇವನ್ನು ಪುರುಷರೊಂದಿಗೆ ಹಂಚಿಕೊಳ್ಳುವುದಿಲ್ಲ. ಭಿಕ್ಖುಗಳೇ, ಯಾವಾಗ ಸ್ತ್ರೀಯು ವಿವಾಹವಾಗಿ ತವರುಮನೆಯಿಂದ ವಿಯೋಗ ಹೊಂದಿತ್ತಾಳೋ, ಅದು ಆಕೆಯು ಅನುಭವಿಸುವ ಪ್ರಥಮ ದುಃಖವಾಗಿದೆ, ಅದನ್ನು ಪುರುಷರೊಂದಿಗೆ ಹಂಚಿಕೊಳ್ಳಲಾಗದು. ಮತ್ತೆ ಭಿಕ್ಖುಗಳೇ, ಸ್ತ್ರೀಯು ಋತುಗಳನ್ನು ಹೊಂದುತ್ತಾಳೆ, ಅದು ಆಕೆಯ ದ್ವಿತೀಯ ದುಃಖವಾಗಿದೆ, ಅದನ್ನು ಪುರುಷರೊಂದಿಗೆ ಹಂಚಿಕೊಳ್ಳಲಾಗದು. ಮತ್ತೆ ಭಿಕ್ಖುಗಳೇ, ಸ್ತ್ರೀಯು ಗಭರ್ಿಣಿಯಾಗುತ್ತಾಳೆ, ಇದು ಆಕೆಗೆ ಮೂರನೆಯ ದುಃಖವಾಗಿದೆ, ಇದು ಸಹಾ ಆಕೆ ಪುರುಷನೊಂದಿಗೆ ಹಂಚಿಕೊಳ್ಳಲಾಗದು. ಮತ್ತೆ ಭಿಕ್ಖುಗಳೇ, ಸ್ತ್ರೀಯು ಮಗುವಿಗೆ ಜನ್ಮ ನೀಡುತ್ತಾಳೆ, ಇದು ಆಕೆಯ ನಾಲ್ಕನೆಯ ದುಃಖವಾಗಿದೆ, ಇದು ಸಹಾ ಆಕೆ ಪುರುಷನೊಂದಿಗೆ ಹಂಚಿಕೊಳ್ಳಲಾಗದು. ಮತ್ತೆ ಭಿಕ್ಖುಗಳೇ, ಸ್ತ್ರೀಯು ಪುರುಷನಿಗೆ (ಪತಿಗೆ) ಪರಿಚಾರಕಳಾಗಿ ಸೇವೆ ಸಲ್ಲಿಸುತ್ತಿರುತ್ತಾಳೆ (ಅವಲಂಬಿತಳಾಗಿರುತ್ತಾಳೆ). ಈ ಐದನೆಯ ದುಃಖವನ್ನು ಸಹಾ ಆಕೆ ಪುರುಷನೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಇದೇ ಭಿಕ್ಖುಗಳೇ, ಸ್ತ್ರೀಯರು ಮಾತ್ರ ಅನುಭವಿಸುವ ಅಸಮಾನ್ಯ ದುಃಖಗಳಾಗಿವೆ. ಅವುಗಳನ್ನು ಅವರು ಪುರುಷರೊಂದಿಗೆ ಹಂಚಿಕೊಳ್ಳುವುದಿಲ್ಲ.


4. ತೀಹಿಧಮ್ಮೇಹಿ ಸುತ್ತಂ (ಸ್ತ್ರೀಯರ ಮೂರು ಧಮ್ಮಗಳ ಸುತ್ತ)

283. ಒಮ್ಮೆ ಭಗವಾನರು ರಾಜಗೃಹದ ವೇಣುವನದ ಅಳಿಲುಧಾಮದಲ್ಲಿ ತಂಗಿದ್ದಾಗ ಅವರು ಭಿಕ್ಖುಗಳೊಂದಿಗೆ ಹೀಗೆ ಹೇಳಿದರು: ಭಿಕ್ಖುಗಳೇ, ಈ ಮೂರು ವಿಷಯಗಳಿಂದಾಗಿ ಸ್ತ್ರೀಯರು ಮರಣದ ನಂತರ ಅಪಾಯ ಲೋಕಗಳಿಗೆ, ದುರ್ಗತಿಗೆ, ವಿನಿಪಾತ, ನಿರಯಕ್ಕೆ ತಲುಪುತ್ತಾರೆ. ಯಾವುದವು ಮೂರು? ಭಿಕ್ಖುಗಳೇ, ಇಲ್ಲಿ ಸ್ತ್ರೀಯು ಪೂವರ್ಾಹ್ನದಲ್ಲಿ ಕೃಷಣೆತೆಯ ಯೋಚನೆಗಳಿಂದ ಕೂಡಿರುತ್ತಾಳೆ. ಮಧ್ಯಾಹ್ನದ ನಂತರ ಈಷರ್ೆಯಿಂದ ಕೂಡಿರುತ್ತಾಳೆ, ಸಾಯಂಕಾಲದ ನಂತರ ಕಾಮದ ಯೋಚನೆಗಳಿಂದ ಕೂಡಿರುತ್ತಾಳೆ. ಇದೇ ಭಿಕ್ಖುಗಳೇ, ಈ ಮೂರು ಧಮ್ಮಗಳಿಂದಾಗಿ (ಮನೋವೃತ್ತಿಗಳಿಂದಾಗಿ) ಸ್ತ್ರೀಯರು ಅಂತಹ ಸ್ಥಿತಿಗಳಿರುವಾಗ ಮರಣ ಹೊಂದಿದರೆ ಅವರು ಮರಣದ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾಳೆ.


5. ಕೋಧನ ಸುತ್ತಂ (ಕ್ರೋಧದ ಸುತ್ತ)

284. ಒಮ್ಮೆ ಆಯುಷ್ಮಂತರಾದ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರಿಗೆ ವಂದಿಸಿದ ಅನುರುದ್ಧರವರು ಹೀಗೆ ಭಗವಾನರಲ್ಲಿ ಪ್ರಶ್ನಿಸಿದರು: ಭಂತೆ, ಸ್ತ್ರೀಯರು ಐದು ಅಂಶಗಳಿಂದ ಕೂಡಿದಾಗ ಅವರು ಮರಣದ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ. ಅಂತಹ ಅವನತಿಕಾರಕ ಯಾವ ಐದು ಅಂಶಗಳು ಅವರಲ್ಲಿರುತ್ತವೆ?
ಅನುರುದ್ಧ, ಅಂತಹ ಪಂಚ ಅಂಶಗಳಿವೆ, ಅದರಿಂದಾಗಿ ಸ್ತ್ರೀಯು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾಳೆ. ಆ ಐದು ಯಾವುವೆಂದರೆ: ಶ್ರದ್ಧೆಯಿಲ್ಲದಿರುವುದು (ತ್ರಿರತ್ನಗಳಲ್ಲಿ), ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿ ಇಲ್ಲದಿರುವಿಕೆ, ಕ್ರೋಧದಿಂದ ಕೂಡಿರುವಿಕೆ, ಕ್ಷೀಣ ಪ್ರಜ್ಞಳಾಗಿರುವಿಕೆ. ಇವೇ ಅನುರುದ್ಧ ಪಂಚ ಧಮ್ಮಗಳು. ಇವುಗಳ ಕಾರಣದಿಂದಾಗಿ ಸ್ತ್ರೀಯರು ಸಾವಿನನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು.


6. ಉಪನಾಹೀ ಸುತ್ತಂ (ಕೋಪ ಹಾಗು ತಪ್ಪು ಕಂಡುಹಿಡಿಯುವಿಕೆ)

285. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು. ಯಾವುದವು ಐದು? ಶ್ರದ್ಧೆಯಿಲ್ಲದಿರುವಿಕೆ, ಪಾಪಲಜ್ಜೆ ಇಲ್ಲದಿರುವಿಕೆ, ಪಾಪಭೀತಿ ಇಲ್ಲದಿರುವಿಕೆ, ತಪ್ಪು ಕಂಡುಹಿಡಿಯುವಿಕೆ ಹಾಗು ದುರ್ಬಲ ಪ್ರಜ್ಞೆ ಹೊಂದಿರುವಿಕೆ. ಇವೇ ಅನುರುದ್ಧ ಆ ಪಂಚ ಧಮ್ಮಗಳು. ಇವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.


7. ಇಸ್ಸುಕೀ ಸುತ್ತಂ (ಈಷರ್ೆಯ ಸುತ್ತ)

286. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು. ಯಾವುದವು ಐದು? ಶ್ರದ್ಧೆಯಿಲ್ಲದಿರುವಿಕೆ, ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿಯಿಲ್ಲದಿರುವಿಕೆ, ಈಷರ್ೆ ಹೊಂದಿರುವಿಕೆ ಹಾಗು ದುರ್ಬಲ ಪ್ರಜ್ಞೆ ಹೊಂದಿರುವಿಕೆ. ಇವೇ ಅನುರುದ್ಧ ಆ ಪಂಚ ಧಮ್ಮಗಳು. ಇವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.


8. ಮಚ್ಚರೀ ಸುತ್ತಂ (ಸ್ವಾರ್ಥದ ಸುತ್ತ)

287. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು. ಯಾವುದವು ಐದು? ಶ್ರದ್ಧೆಯಿಲ್ಲದಿರುವಿಕೆ, ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿಯಿಲ್ಲದಿರುವಿಕೆ, ಸ್ವಾರ್ಥ (ಕೃಪಣತೆ) ಹೊಂದಿರುವಿಕೆ ಹಾಗು ದುರ್ಬಲ ಪ್ರಜ್ಞೆ ಹೊಂದಿರುವಿಕೆ. ಇವೇ ಅನುರುದ್ಧ ಆ ಪಂಚ ಧಮ್ಮಗಳು. ಇವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.


9. ಅತಿಚಾರಿ ಸುತ್ತಂ 

288. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು. ಯಾವುದವು ಐದು? ಶ್ರದ್ಧೆಯಿಲ್ಲದಿರುವಿಕೆ, ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿಯಿಲ್ಲದಿರುವಿಕೆ, ಅನೈತಿಕ ಸಂಬಂಧ ಹೊಂದಿರುವಿಕೆ ಹಾಗು ದುರ್ಬಲ ಪ್ರಜ್ಞೆ ಹೊಂದಿರುವಿಕೆ. ಇವೇ ಅನುರುದ್ಧ ಆ ಪಂಚ ಧಮ್ಮಗಳು. ಇವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.


10. ದುಸ್ಸೀಲ ಸುತ್ತಂ (ದುಶ್ಶೀಲ ಸುತ್ತ)

289. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು. ಯಾವುದವು ಐದು? ಶ್ರದ್ಧೆಯಿಲ್ಲದಿರುವಿಕೆ, ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿಯಿಲ್ಲದಿರುವಿಕೆ, ದುಶ್ಶೀಲತೆ ಹೊಂದಿರುವಿಕೆ ಹಾಗು ದುರ್ಬಲ ಪ್ರಜ್ಞೆ ಹೊಂದಿರುವಿಕೆ. ಇವೇ ಅನುರುದ್ಧ ಆ ಪಂಚ ಧಮ್ಮಗಳು. ಇವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.


11. ಅಪ್ಪಸ್ಸುತ ಸುತ್ತಂ (ಅಲ್ಪ ಜ್ಞಾನಿಗಳ ಸುತ್ತ)

290. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು. ಯಾವುದವು ಐದು? ಶ್ರದ್ಧೆಯಿಲ್ಲದಿರುವಿಕೆ, ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿಯಿಲ್ಲದಿರುವಿಕೆ, ಅಲ್ಪಜ್ಞಾನ ಹೊಂದಿರುವಿಕೆ ಹಾಗು ದುರ್ಬಲ ಪ್ರಜ್ಞೆ ಹೊಂದಿರುವಿಕೆ. ಇವೇ ಅನುರುದ್ಧ ಆ ಪಂಚ ಧಮ್ಮಗಳು. ಇವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.


12. ಕುಸೀತ ಸುತ್ತಂ (ಸೋಮಾರಿತನ)

291. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು. ಯಾವುದವು ಐದು? ಶ್ರದ್ಧೆಯಿಲ್ಲದಿರುವಿಕೆ, ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿಯಿಲ್ಲದಿರುವಿಕೆ, ಸೋಮಾರಿತನ ಹೊಂದಿರುವಿಕೆ ಹಾಗು ದುರ್ಬಲ ಪ್ರಜ್ಞೆ ಹೊಂದಿರುವಿಕೆ. ಇವೇ ಅನುರುದ್ಧ ಆ ಪಂಚ ಧಮ್ಮಗಳು. ಇವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.


13. ಮುಟ್ಠಸ್ಸತಿ ಸುತ್ತಂ (ಸ್ಮೃತಿಹೀನತೆ)

292. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಲ್ಲಿ ಹುಟ್ಟುವರು. ಯಾವುದವು ಐದು? ಶ್ರದ್ಧೆಯಿಲ್ಲದಿರುವಿಕೆ, ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿಯಿಲ್ಲದಿರುವಿಕೆ, ಸ್ಮೃತಿಹೀನತೆ ಹೊಂದಿರುವಿಕೆ ಹಾಗು ದುರ್ಬಲ ಪ್ರಜ್ಞೆ ಹೊಂದಿರುವಿಕೆ. ಇವೇ ಅನುರುದ್ಧ ಆ ಪಂಚ ಧಮ್ಮಗಳು. ಇವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.


14. ಪಞ್ಞವೇರ ಸುತ್ತಂ (ಪಂಚಶೀಲ ಇಲ್ಲದಿರುವಿಕೆ)

293. ಐದು ಧಮ್ಮಗಳಿವೆ ಅನುರುದ್ಧ, ಅವುಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ ಹಾಗು ನಿರಯಗಳಗೆ ಹೋಗುವರು. ಅವೆಂದರೆ: ಇಲ್ಲಿ ಸ್ತ್ರೀಯರು ಪ್ರಾಣಗಳನ್ನು ತೆಗೆಯುವರು, ಕೊಡದಿದ್ದುದನ್ನು ತೆಗೆದುಕೊಳ್ಳುವರು, ಅನೈತಿಕ ಸಂಬಂಧ ಹೊಂದುವರು, ಸುಳ್ಳು ಹೇಳುವರು ಹಾಗು ಮದ್ಯಪಾನ ಮಾಡುವರು. ಈ ಐದು ಧಮ್ಮಗಳಿಂದಾಗಿ ಸ್ತ್ರೀಯರು ಸಾವಿನ ನಂತರ ಅಪಾಯ, ದುರ್ಗತಿ, ವಿನಿಪಾತ, ನಿರಯಗಳಲ್ಲಿ ಉದಯಿಸುತ್ತಾರೆ.

ಪ್ರಥಮ ಪೇಯ್ಯಾಲಯ ವರ್ಗ ಮುಗಿಯಿತು.





ಇದರಲ್ಲಿ - ಸ್ತ್ರೀಯರು (ಮಾತೃಸ್ವರೂಪಿಯರು), ಪುರುಷರು, ನಿದರ್ಿಷ್ಟ ದುಃಖಗಳು, ಮೂರು ಧಮ್ಮಗಳು, ಕೋಧ, ತಪ್ಪು ಕಂಡುಹಿಡಿಯುವಿಕೆ), ಈಷರ್ೆ, ಸ್ವಾರ್ಥ, ಈಷರ್ೆ, ದುಶ್ಶೀಲತೆ, ಅಲ್ಪಜ್ಞತೆ, ಸೋಮಾರಿತನ, ಸ್ಮೃತಿಹೀನತೆ, ಪಂಚಶೀಲವಿಲ್ಲದಿರುವಿಕೆ, ಇವೆಲ್ಲದರ ಬಗ್ಗೆ ವಿವರಿಸಲಾಗಿದೆ.

ಇದರಲ್ಲಿ - ಅಕ್ಕೋಧನ, ಅನುಪಾನಾಹಿ, ಅನಿಸ್ಸುತೀ, ಅಮಚ್ಚರಿ, ಅನತಿಚಾರಿ, ಸೀಲನಾ ಚ ಬಹುಸ್ಸುತೋ, ವಿರಿಯಾಂ, ಸತಿಸೀಲಗಳ ಬಗ್ಗೆ ಪ್ರಕಾಶಿಲ್ಪಟ್ಟಿದೆ

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...