Saturday 2 June 2018

Samyutta nikaya 37.2 ದುತಿಯ ಪೇಯ್ಯಾಲ ವಗ್ಗೋ

2. ದುತಿಯ ಪೇಯ್ಯಾಲ ವಗ್ಗೋ

1. ಅಕ್ಕೋಧನ ಸುತ್ತಂ

294. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ಕ್ರೋಧವಿಲ್ಲದಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.


2. ಅನುಪನಾಹೀ ಸುತ್ತಂ

295. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ಕೋಪವಿಲ್ಲದಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.


3. ಅನಿಸ್ಸುಕೀ ಸುತ್ತಂ

296. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ಈಷರ್ೆಯಿಲ್ಲದಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.



4. ಅಮಚ್ಚರಿಯಂ ಸುತ್ತಂ

297. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ಸ್ವಾರ್ಥವಿಲ್ಲದಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.


5. ಅನತಿಚಾರಿ ಸುತ್ತಂ

298. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ವ್ಯಭಿಚಾರಯಿಲ್ಲದಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.


6.  ಸುಸೀಲಂ ಸುತ್ತಂ

299. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ಶೀಲವಂತೆಯಾಗಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.


7. ಬಹುಸ್ಸುತ ಸುತ್ತಂ

300. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ಬಹುಶ್ರುತಳಾಗಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.


8. ಆರದ್ದವೀರಿಯ ಸುತ್ತಂ

301. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ಧೃಢಪರಿಶ್ರಮ ಹೊಂದಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.



9. ಉಪಟ್ಠಿತಸ್ಸತಿ ಸುತ್ತಂ

302. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಐದು ಅಂಶಗಳಿಂದಾಗಿ ಸ್ತ್ರೀಯರು ಸುಗತಿಗೆ ಹೋಗುತ್ತಿರುವರು, ಸ್ವರ್ಗಕ್ಕೆ ಹೋಗುತ್ತಿರುವರು. ಯಾವುದವು ಐದು? ಅವೆಂದರೆ: ಶ್ರದ್ಧೆಯಿಂದ ಕೂಡಿರುವಿಕೆ, ಪಾಪಲಜ್ಜೆಯಿಂದ ಕೂಡಿರುವಿಕೆ, ಪಾಪಭೀತಿಯಿಂದ ಕೂಡಿರುವಿಕೆ, ಸ್ಮೃತಿಯ ಸ್ಥಾಪನೆ ಹೊಂದಿರುವಿಕೆ ಹಾಗು ಪ್ರಜ್ಞಾದಿಂದ ಕೂಡಿರುವಿಕೆ. ಈ ಐದು ಅಂಶಗಳಿಂದಾಗಿ ಅನುರುದ್ಧ ಮಾತೃವರ್ಗದವರು (ಸ್ತ್ರೀಯರು) ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ಹೊಂದುವರು.



10. ಪಞ್ಚಸೀಲ ಸುತ್ತಂ

303. ಆಗ ಪೂಜ್ಯ ಅನುರುದ್ಧರವರು ಭಗವಾನರ ಬಳಿಗೆ ಬಂದರು. ಭಗವಾನರನ್ನು ಅವರು ಪೂಜಿಸಿ, ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಇಂತೆಂದರು: ಭಂತೆ, ನಾನು ಮಾನವರಿಗೆ ಅತೀತವಾದ ಪರಿಶುದ್ಧವಾದ ದಿವ್ಯಚಕ್ಷುವಿನಿಂದ ಹೀಗೆ ನೋಡಿರುವೆನು, ಏನೆಂದರೆ: ಸ್ತ್ರೀಯರು ಸಾವಿನ ನಂತರ ಸುಗತಿಯನ್ನು ಹೊಂದುತ್ತಿರುವವರು, ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು. ಭಂತೆ, ಯಾವ ಅಂಶಗಳಿಂದಾಗಿ ಸ್ತ್ರೀಯರು ಸುಗತಿ ಹೊಂದುತ್ತಿರುವವರು ಹಾಗು ಸ್ವರ್ಗದಲ್ಲಿ ಪುನರ್ಜನ್ಮ ತಾಳುತ್ತಿರುವವರು?
ಅನುರುದ್ಧ, ಅವರು ಜೀವಹತ್ಯೆಯಿಂದ ವಿರತರಾಗಿದ್ದಾರೆ, ಕೊಡದಿದ್ದುದನ್ನು ತೆಗೆದುಕೊಳ್ಳುವುದರಿಂದ ವಿರತರಾಗಿದ್ದಾರೆ, ಅನೈತಿಕ ಕಾಮುಕತೆಯಿಂದ ವಿರತರಾಗಿದ್ದಾರೆ, ಸುಳ್ಳು ಹೇಳುವಿಕೆಯಿಂದ ಹಾಗು ಮಾದಕ ವಸ್ತುಗಳ ಸೇವೆನೆಯಿಂದ ವಿರತರಾಗಿ ಈ ಐದು ಧಮ್ಮಗಳಿಂದ ಕೂಡಿದ ಸ್ತ್ರೀಯರು ಮರಣದ ನಂತರ ಸುಗತಿಯನ್ನು, ಸ್ವರ್ಗವನ್ನು ತಲುಪುತ್ತಾರೆ.

ದುತಿಯ ಪೆಯ್ಯಾಲ ವಗ್ಗವು ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...