Saturday 2 June 2018

Samyutta nikaya 37.3 ಬಲ ವಗ್ಗೋ

3. ಬಲ ವಗ್ಗೋ

1. ವಿಸಾರದ ಸುತ್ತಂ

304. ಭಿಕ್ಷುಗಳೇ, ಐದು ಸ್ತ್ರೀಯ ಬಲವು, ಯಾವುದವು ಐದು? ಅವೆಂದರೆ: ರೂಪಬಲ, ಭೋಗ (ಐಶ್ವರ್ಯ) ಬಲ, ಜ್ಞಾತಿ (ಸಂಬಂಧಿಕರ) ಬಲ, ಮಕ್ಕಳ ಬಲ ಮತ್ತು ಶೀಲ ಬಲ. ಇದೇ ಭಿಕ್ಷುಗಳೇ, ಸ್ತ್ರೀಯರು ಹೊಂದಿರುವ ಐದು ಬಲಗಳು. ಈ ಐದು ಸ್ತ್ರೀಯರಿಗೆ ಶಕ್ತಿಯಾಗಿದೆ, ಶ್ರದ್ಧೆಯ ಮೂಲವಾಗಿದೆ.
2. ಪಸಯ್ಹ ಸುತ್ತಂ
305. ಭಿಕ್ಷುಗಳೇ, ಐದು ಸ್ತ್ರೀಯ ಬಲವು, ಯಾವುದವು ಐದು? ಅವೆಂದರೆ: ರೂಪಬಲ, ಭೋಗ (ಐಶ್ವರ್ಯ) ಬಲ, ಜ್ಞಾತಿ (ಸಂಬಂಧಿಕರ) ಬಲ, ಮಕ್ಕಳ ಬಲ ಮತ್ತು ಶೀಲ ಬಲ. ಇದೇ ಭಿಕ್ಷುಗಳೇ, ಸ್ತ್ರೀಯರು ಹೊಂದಿರುವ ಐದು ಬಲಗಳು. ಇದರಿಂದಾಗಿ ಅವರು ಗೃಹಕೃತ್ಯಗಳಲ್ಲಿ ಶ್ರದ್ಧೆಯಿಂದ ಕೂಡಿರುತ್ತಾರೆ.


3. ಅಭಿಭುಯ್ಯ ಸುತ್ತಂ

306. ಭಿಕ್ಷುಗಳೇ, ಐದು ಸ್ತ್ರೀಯ ಬಲವು, ಯಾವುದವು ಐದು? ಅವೆಂದರೆ: ರೂಪಬಲ, ಭೋಗ (ಐಶ್ವರ್ಯ) ಬಲ, ಜ್ಞಾತಿ (ಸಂಬಂಧಿಕರ) ಬಲ, ಮಕ್ಕಳ ಬಲ ಮತ್ತು ಶೀಲ ಬಲ. ಇದೇ ಭಿಕ್ಷುಗಳೇ, ಸ್ತ್ರೀಯರು ಹೊಂದಿರುವ ಐದು ಬಲಗಳು. ಈ ಐದು ಬಲಗಳಿಂದಾಗಿ ಸ್ತ್ರೀಯರು ತಮ್ಮ ಸ್ವಾಮಿಯನ್ನು ಧಮಿಸುತ್ತಾರೆ.


4. ಏಕಸುತ್ತಂ

307. ಭಿಕ್ಷುಗಳೇ, ಪುರುಷನು ಶ್ರದ್ಧೆಯೊಂದರಿಂದಲೇ ಸ್ತ್ರೀಯ ಮೇಲೆ ಅಧಿಪತ್ಯ ನಡೆಸಬಲ್ಲ. ಯಾವುದದು ಅದ್ವಿತೀಯ ಶ್ರದ್ಧೆ. ಅದೆಂದರೆ, ತಾನೇ ಶ್ರೇಷ್ಠನೆಂಬ ಭಾವನೆ. ಭಿಕ್ಷುಗಳೇ, ಸ್ತ್ರೀಯು ತಾನೇ ಶ್ರೇಷ್ಠಳೆಂಬ ಭಾವನೆಯಿಂದ ಅಧಿಪತ್ಯಕ್ಕೆ ಒಳಗಾದರೆ ಆಕೆಯ ರೂಪ ಶ್ರದ್ಧೆಯಾಗಲಿ, ಐಶ್ವರ್ಯವಾಗಲಿ, ನೆಂಟರಾಗಲಿ, ಪುತ್ರರಾಗಲಿ ಅಥವಾ ಶೀಲದ ಬಲವಾಗಲಿ ರಕ್ಷಿತವಾಗುವುದಿಲ್ಲ.


5. ಅಂಗಸುತ್ತಂ

308. ಭಿಕ್ಷುಗಳೇ, ಸ್ತ್ರೀಯ ಐದು ಬಲಗಳು, ಯಾವುದವು ಐದು? ರೂಪಬಲ, ಐಶ್ವರ್ಯಬಲ, ನೆಂಟರಬಲ, ಮಕ್ಕಳ ಬಲ ಹಾಗು ಶೀಲದ ಬಲ. ಒಂದುವೇಳೆ ಭಿಕ್ಷುಗಳೇ, ಸ್ತ್ರೀಯು ರೂಪಬಲವನ್ನು ಹೊಂದಿರುತ್ತಾಳೆ ಆದರೆ ಐಶ್ವರ್ಯವನ್ನು ಹೊಂದಿರುವುದಿಲ್ಲ. ಹೀಗಾಗಿ ಆಕೆಯು ಅಸಂಪೂರ್ಣಳಾಗುತ್ತಾಳೆ. ಭಿಕ್ಷುಗಳೇ, ಅದೇರೀತಿ ಇಲ್ಲಿ ಸ್ತ್ರೀಯು ರೂಪಬಲದಿಂದಾಗಿ ಹಾಗು ಐಶ್ವರ್ಯಬಲದಿಂದಾಗಿ ಶ್ರದ್ಧೆ ಹೊಂದಿರುತ್ತಾಳೆ. ಆದರೆ ನೆಂಟರ ಬಲ ಆಕೆಗೆ ಇರುವುದಿಲ್ಲ, ಹೀಗಾಗಿ ಆಕೆಯ ಅಪರಿಪೂರ್ಣಳಾಗುತ್ತಾಳೆ. ಭಿಕ್ಷುಗಳೇ, ಅದೇರೀತಿ ಇಲ್ಲಿ ಸ್ತ್ರೀಯು ರೂಪಬಲದಿಂದಾಗಿ, ಐಶ್ವರ್ಯಬಲದಿಂದಾಗಿ, ನೆಂಟರ ಬಲದಿಂದಾಗಿ ಶ್ರದ್ಧೆಯಿಂದ ಕೂಡಿರುತ್ತಾಳೆ. ಆದರೆ ಮಕ್ಕಳ ಬಲವನ್ನು ಹೊಂದಿರುವುದಿಲ್ಲ. ಹೀಗಾಗಿ ಆಕೆಯು ಅಪರಿಪೂರ್ಣಳಾಗಿರುತ್ತಾಳೆ. ಅದೇರೀತಿ ಭಿಕ್ಷುಗಳೇ, ಇಲ್ಲಿ ಸ್ತ್ರೀಯು ರೂಪಬಲ, ಐಶ್ವರ್ಯಬಲ, ನೆಂಟರಬಲ ಹಾಗು ಮಕ್ಕಳ ಬಲವನ್ನು ಹೊಂದಿರುತ್ತಾಳೆ. ಆದರೆ ಶೀಲದ ಬಲ ಹೊಂದಿರುವುದಿಲ್ಲ. ಹೀಗಾಗಿ ಆಕೆಯು ಅಪರಿಪೂರ್ಣಳಾಗಿರುತ್ತಾಳೆ. ಆದ್ದರಿಂದ ಭಿಕ್ಷುಗಳೇ, ಯಾವಾಗ ಸ್ತ್ರೀಯು ರೂಪಬಲದಿಂದ, ಐಶ್ವರ್ಯ ಬಲದಿಂದ, ನೆಂಟರ ಬಲದಿಂದ, ಮಕ್ಕಳ ಬಲದಿಂದ ಹಾಗು ಶೀಲದ ಬಲದಿಂದ ಕೂಡಿರುತ್ತಾಳೋ ಆಗ ಆಕೆಯ ಪರಿಪೂರ್ಣಳಾಗಿರುತ್ತಾಳೆ, ಅಪಾರ ಶ್ರದ್ಧೆಯನ್ನು ಹೊಂದಿರುತ್ತಾಳೆ. ಭಿಕ್ಷುಗಳೇ, ಹೀಗೆ ಇವು ಐದು ಸ್ತ್ರೀಯರಿಗೆ ಬಲಗಳಾಗಿವೆ.


6. ನಾಸೇನ್ತಿ ಸುತ್ತಂ

309. ಭಿಕ್ಷುಗಳೇ, ಸ್ತ್ರೀಯರಿಗೆ ಐದು ಬಲಗಳಿವೆ, ಯಾವುದವು? ಅವೆಂದರೆ: ರೂಪಬಲ, ಐಶ್ವರ್ಯಬಲ, ನೆಂಟರಬಲ, ಮಕ್ಕಳ ಬಲ ಹಾಗು ಶೀಲಬಲ. ಇವುಗಳಿಂದಾಗಿ ಆಕೆಯು ಶ್ರದ್ಧೆಯಿಂದಿರುತ್ತಾಳೆ. ಭಿಕ್ಷುಗಳೇ, ಯಾವ ಸ್ತ್ರೀಯು ರೂಪದಲ್ಲಿ ಶ್ರದ್ಧೆಯುಳ್ಳವಳಾಗಿ ಶೀಲದಲ್ಲಿ ಬಲಹೀನಳೋ ಇದು ಆಕೆಯ ಕುಲವನ್ನು ನಾಶಪಡಿಸುತ್ತದೆ ಹೊರತು ಸೌಗಂಧಮಯವಾಗಿಸುವುದಿಲ್ಲ. ಯಾವ ಸ್ತ್ರೀಯು ರೂಪಬಲ ಮತ್ತು ಐಶ್ವರ್ಯ ಬಲದಿಂದ ಕೂಡಿದ್ದು ಆದರೆ ಶೀಲಬಲದಿಂದ ಕೂಡಿಲ್ಲವಾದರೆ ಅದು ಆಕೆಯ ಕುಲವನ್ನು ನಾಶಮಾಡುತ್ತದೆ ಹೊರತು ಸೌಗಂಧಮಯವನ್ನಾಗಿಸುವುದಿಲ್ಲ. ಯಾವ ಸ್ತ್ರೀಯು ರೂಪಬಲ, ಐಶ್ವರ್ಯಬಲ ಹಾಗು ಪುತ್ರಬಲದಿಂದ ಕೂಡಿದ್ದು ಆದರೆ ಶೀಲದ ಬಲವಿಲ್ಲವಾದರೆ ಅದು ಆಕೆಯ ಕುಲವನ್ನು ನಾಶಪಡಿಸುತ್ತದೆ ಹೊರತು ಸೌಗಂಧಮಯವಾಗಿಸುವುದಿಲ್ಲ. ಹಾಗೆಯೇ ಯಾವ ಸ್ತ್ರೀಯು ರೂಪಬಲ, ಐಶ್ವರ್ಯಬಲ, ಪುತ್ರಬಲ ಹಾಗು ನೆಂಟರಬಲ ಹೊಂದಿದ್ದು ಆದರೆ ಶೀಲದ ಬಲವಿಲ್ಲವಾದರೆ ಅದು ಆಕೆಯ ಕುಲವನ್ನು ನಾಶಪಡಿಸುತ್ತದೆ ಹೊರತು ಸೌಗಂಧಮಯವಾಗಿಸುವುದಿಲ್ಲ. ಆದರೆ ಭಿಕ್ಷುಗಳೇ, ಯಾವ ಸ್ತ್ರೀಯು ಶೀಲಬಲವನ್ನು ಹೊಂದಿದ್ದು, ಆದರೆ ರೂಪಬಲ ಹೊಂದಿಲ್ಲದಿದ್ದರೂ ಅದು ಆಕೆಯ ಕುಲವನ್ನು ಸೌಗಂಧಮಯವನ್ನಾಗಿಸುತ್ತದೆ ಹೊರತು ನಾಶಮಾಡುವುದಿಲ್ಲ. ಹಾಗೆಯೇ ಯಾವ ಸ್ತ್ರೀಯು ಶೀಲಬಲವನ್ನು ಹೊಂದಿದ್ದು, ಐಶ್ವರ್ಯಬಲವನ್ನು ಹೊಂದಿಲ್ಲದಿದ್ದರೂ ಸಹಾ ಅದು ಆಕೆಯ ಕುಲವನ್ನು ಸೌಗಂಧಮಯವನ್ನಾಗಿಸುತ್ತದೆ ಹೊರತು ನಾಶಮಾಡುವುದಿಲ್ಲ. ಹಾಗೆಯೇ ಯಾವ ಸ್ತ್ರೀಯು ಶೀಲಬಲವನ್ನು ಹೊಂದಿದ್ದು, ನೆಂಟರಬಲವನ್ನು ಹೊಂದಿಲ್ಲದಿದ್ದರೂ ಸಹಾ ಅದು ಆಕೆಯ ಕುಲವನ್ನು ಸೌಗಂಧಮಯವನ್ನಾಗಿಸುತ್ತದೆ ಹೊರತು ನಾಶಮಾಡುವುದಿಲ್ಲ. ಹಾಗೆಯೇ ಯಾವ ಸ್ತ್ರೀಯು ಶೀಲಬಲವನ್ನು ಹೊಂದಿದ್ದು, ಪುತ್ರಬಲವಿಲ್ಲದಿದ್ದರೂ ಹೊಂದಿಲ್ಲದಿದ್ದರೂ ಸಹಾ ಅದು ಆಕೆಯ ಕುಲವನ್ನು ಸೌಗಂಧಮಯವನ್ನಾಗಿಸುತ್ತದೆ ಹೊರತು ನಾಶಮಾಡುವುದಿಲ್ಲ. ಭಿಕ್ಷುಗಳೇ, ಇವು ಐದು ಸ್ತ್ರೀಯ ಬಲಗಳಾಗಿವೆ.


7. ಹೇತು ಸುತ್ತಂ (ಕಾರಣ)

310. ಭಿಕ್ಷುಗಳೇ, ಸ್ತ್ರೀಯರಿಗೆ ಐದು ಬಲಗಳಿವೆ, ಯಾವುದವು? ಅವೆಂದರೆ: ರೂಪಬಲ, ಐಶ್ವರ್ಯಬಲ, ನೆಂಟರಬಲ, ಮಕ್ಕಳ ಬಲ ಹಾಗು ಶೀಲಬಲ ಇವು ಆಕೆಯ ಬಲಗಳಾಗಿವೆ. ಭಿಕ್ಷುಗಳೇ, ಸ್ತ್ರೀಯು ರೂಪಬಲದಿಂದಾಗಲಿ, ಐಶ್ವರ್ಯ ಬಲದಿಂದಾಗಲಿ, ನೆಂಟರ ಬಲದಿಂದಾಗಲಿ, ಪುತ್ರಬಲದಿಂದಾಗಲಿ ಸಾವಿನ ನಂತರ ಸುಗತಿಗೆ, ಸ್ವರ್ಗಕ್ಕೆ ಹೋಗುವುದಿಲ್ಲ. ಆದರೆ ಭಿಕ್ಷುಗಳೇ, ಸ್ತ್ರೀಯು ಶೀಲಗಳ ಬಲದಿಂದಾಗಿ ಸಾವಿನ ನಂತರ ಸುಗತಿಯಲ್ಲಿ, ಸ್ವರ್ಗಲೋಕದಲ್ಲಿ ಉದಯಿಸುವಳು. ಇವೇ ಭಿಕ್ಷುಗಳೇ, ಸ್ತ್ರೀಯರ ಪಂಚಬಲಗಳಾಗಿವೆ.


8. ಠಾನ ಸುತ್ತಂ

311. ಭಿಕ್ಷುಗಳೇ, ಪುಣ್ಯಶಾಲಿಗಳಲ್ಲದ ಸ್ತ್ರೀಯರಿಗೆ ಅತಿ ದುರ್ಲಭವಾದ ಐದು ಪ್ರಾಪ್ತಿಗಳಾಗಿವೆ, ಯಾವುದವು? ಭಿಕ್ಷುಗಳೇ, ಯಾವ ಸ್ತ್ರೀಯು ಪುಣ್ಯಶಾಲಿಯಲ್ಲವೋ ಆಕೆಯು ಯೋಗ್ಯವಾದ ಕುಲದಲ್ಲಿ ಅಪರೂಪವಾಗಿ ಹುಟ್ಟುತ್ತಾಳೆ. ಇದು ಮೊದಲನೆಯದು. ಹಾಗೆಯೇ ಪುಣ್ಯಶಾಲಿಯಲ್ಲದ ಸ್ತ್ರೀಯು ಅಪರೂಪವಾಗಿ ಉತ್ತಮ ಕುಲದಲ್ಲಿ ವಧುವಾಗಿ ಸೇರುವಳು, ಇದು ಎರಡನೆಯದು. ಹಾಗೆಯೇ ಪುಣ್ಯಶಾಲಿಯಲ್ಲದ ಸ್ತ್ರೀಯು ಅಪರೂಪವಾಗಿ ವಿರೋಧಿಗಳಿಲ್ಲದೆ (ಗಂಡನ ಮನೆಯಲ್ಲಿ) ನೆಲೆಸುತ್ತಾಳೆ. ಇದು ತೃತೀಯ ದುರ್ಲಭವಾದ ಪ್ರಾಪ್ತಿಯಾಗಿದೆ. ಯಾವ ಸ್ತ್ರೀಯು ಉತ್ತಮ ಕುಲದಲ್ಲಿ ಹುಟ್ಟಿ, ಉತ್ತಮ ಕುಲದಲ್ಲಿ ಸೇರಿ, ವಿರೋಧಿಗಳಿಲ್ಲದೆ ಇರುವ ಆಕೆಯು ಪುತ್ರನಿಗೆ ಜನ್ಮ ನೀಡುತ್ತಾಳೆ. ಭಿಕ್ಷುಗಳೇ, ಇದು ಪುಣ್ಯಶಾಲಿಗಳಲ್ಲದ ಸ್ತ್ರೀಯರಿಗೆ ದುರ್ಲಭವಾದ ನಾಲ್ಕನೆಯ ಪ್ರಾಪ್ತಿಯಾಗಿದೆ. ಯೋಗ್ಯ ಕುಲದಲ್ಲಿ ಹುಟ್ಟಿದ, ಯೋಗ್ಯ ಕುಲದಲ್ಲಿ ಸೇರಿದ, ವಿರೋಧಿಗಳಿಲ್ಲದೆ ಇರುವ, ಪುತ್ರವತಿಯಾಗಿರುವ ಆಕೆಗೆ ಸಮಾನ ಸ್ವಾಮಿತ್ವ (ಅಧಿಕಾರ) ಸಿಗುವುದು. ಇದು ಪುಣ್ಯಶಾಲಿಯಲ್ಲದ ಸ್ತ್ರೀಗೆ ಅತಿ ದುರ್ಲಭವಾದ ಪ್ರಾಪ್ತಿಯಾಗಿದೆ. ಇದೇ ಭಿಕ್ಷುಗಳೇ, ಪುಣ್ಯವತಿಯರಲ್ಲದ ಸ್ತ್ರೀಯರಿಗೆ ಸಿಗುವಂತಹ ಐದು ದುರ್ಲಭವಾದ ಪ್ರಾಪ್ತಿಗಳು.
ಭಿಕ್ಷುಗಳೇ, ಪುಣ್ಯಶಾಲಿಯಾದ ಸ್ತ್ರೀಯರಿಗೆ ಸುಲಭವಾಗಿ ಸಿಗುವಂತಹ ಐದು ಪ್ರಾಪ್ತಿಗಳು, ಯಾವುದವು? ಯೋಗ್ಯ ಕುಲದಲ್ಲಿ ಜನಿಸುವುದು ಮೊದಲನೆಯದು. ಯೋಗ್ಯ ಕುಲದಲ್ಲಿ ಸೇರುವುದು ಎರಡನೆಯದು. ಯಾವುದೇ ವಿರೋಧಿಗಳಿಲ್ಲದೆ ಪತಿ ಮನೆಯಲ್ಲಿ ಜೀವಿಸುವುದು ಮೂರನೆಯದು. ಯಾವ ಸ್ತ್ರೀಯು ಯೋಗ್ಯ ಕುಲದಲ್ಲಿ ಜನಿಸಿ, ಯೋಗ್ಯ ಕುಲದಲ್ಲಿ ಸೇರಿ, ವಿರೋಧಿಗಳಿಲ್ಲದೆ ಜೀವಿಸಿ ಪುತ್ರವತಿಯಾಗುತ್ತಾಳೆ ಇದು ನಾಲ್ಕನೆಯ ಪ್ರಾಪ್ತಿಯಾಗಿದೆ. ಯಾವ ಸ್ತ್ರೀಯು ಸುಲಭವಾಗಿ ಯೋಗ್ಯ ಕುಲದಲ್ಲಿ ಜನಿಸಿ, ಯೋಗ್ಯ ಕುಲದಲ್ಲಿ ಸೇರಿ, ವಿರೋಧಿಗಳಿಲ್ಲದೆ ಜೀವಿಸುತ್ತ ಪುತ್ರ ಪ್ರಾಪ್ತಿಯಾಗಿರುವ ಆಕೆಗೆ ಸಮಾನ ಸ್ವಾಮಿತ್ವ (ಅಧಿಕಾರ) ಸಿಗುವುದು. ಇದು ಐದನೆಯ ಸುಲಭ ಪ್ರಾಪ್ತಿಯಾಗಿದೆ. ಇದೇ ಭಿಕ್ಷುಗಳೇ, ಪುಣ್ಯಶಾಲಿ ಸ್ತ್ರೀಯರಿಗೆ ಸುಲಭವಾಗಿ ಲಭಿಸುವಂತಹ ಐದು ಪ್ರಾಪ್ತಿಗಳಾಗಿವೆ.


9. ಪಞ್ಞಸೀಲ ವಿಸಾರದ ಸುತ್ತಂ

312. ಭಿಕ್ಷುಗಳೇ, ಈ ಐದರಿಂದಾಗಿ ಸ್ತ್ರೀಯು ಗೃಹಕೃತ್ಯಗಳಲ್ಲಿ ಅತ್ಯಂತ ಶ್ರದ್ಧಾಯುತವಾಗಿ ಇರುತ್ತಾಲೆ. ಯಾವುದವು ಐದು? ಅವೆಂದರೆ: ಇಲ್ಲಿ ಆಕೆಯು ಜೀವಹತ್ಯೆಯಿಂದ ವಿರತಳಾಗಿರುತ್ತಾಳೆ. ಕೊಡದಿದ್ದುದನ್ನು ತೆಗೆದುಕೊಳ್ಳುವುದರಿಂದಾಗಿ ವಿರತಳಾಗಿರುತ್ತಾಳೆ. ಕಾಮಗಳ ಅನೈತಿಕತೆಯಲ್ಲಿ ವಿರತಳಾಗಿರುತ್ತಾಳೆ. ಸುಳ್ಳು ಹೇಳುವುದರಲ್ಲಿ ವಿರತಳಾಗಿರುತ್ತಾಳೆ. ಸುರ, ಮರಯ ಮೊದಲಾದ ಪ್ರಮಾದವನ್ನುಂಟುಮಾಡುವ ಮದ್ಯಪಾನಿಯಗಳಿಂದ ವಿರತಳಾಗಿರುತ್ತಾಳೆ. ಇವೇ ಭಿಕ್ಷುಗಳೇ, ಐದು ಧಮ್ಮಗಳು. ಅವುಗಳಿಂದಾಗಿ ಸ್ತ್ರೀಯು ಗೃಹಕೃತ್ಯಗಳಲ್ಲಿ ಅತ್ಯಂತ ಶ್ರದ್ಧಾವಂತಳಾಗಿ ಜೀವಿಸುತ್ತಾಳೆ, ಕೌಸಲ್ಯಯುತೆ (ವಿಶಾರದೆ) ಯಾಗಿ ಜೀವಿಸುತ್ತಾಳೆ.


10. ವಡ್ಡಿಸುತ್ತಂ

313. ಭಿಕ್ಷುಗಳೇ, ಈ ಐದರಿಂದಾಗಿ ವರ್ಧಮಾನ ಕುಲದಲ್ಲಿ ಜನಿಸಿರುವ ಸ್ತ್ರೀಯ ವರ್ಧನೆಯಾಗುವುದು. ಯಾವುದವು ವಧರ್ಿಸುವಂತಹ ಪಂಚ ವರ್ಧಕ ಕ್ಷೇತ್ರಗಳು. ಅವೆಂದರೆ: ಆಕೆಯು ಶ್ರದ್ಧೆಯಲ್ಲಿ ವಧರ್ಿತಳಾಗುವಳು, ಶೀಲದಲ್ಲಿ ವಧರ್ಿತಳಾಗುವಳು, ಬಹುಶ್ರುತದಲ್ಲಿ (ಕಲಿಕೆಯಲ್ಲಿ) ವಧರ್ಿತಳಾಗುವಳು, ತ್ಯಾಗದಲ್ಲಿ ವಧರ್ಿತಳಾಗುವಳು, ಪ್ರಜ್ಞಾಶೀಲತೆಯಲ್ಲಿ ವಧರ್ಿತಗಳಾಗುವಳು. ಇವೇ ಭಿಕ್ಷುಗಳೇ, ಪಂಚ ವರ್ಧಮಾನಗಳು. ಇದರಿಂದಾಗಿ ಆರ್ಯಶ್ರಾವಕ ಸ್ತ್ರೀಯ ವರ್ಧನೆಯಾಗುವುದು. ಇದರಿಂದಾಗಿ ಆಕೆಯು ಸಾರವಾದುದನ್ನು ಹೊಂದುವಳು. ಈ ದೇಹದಲ್ಲೇ ಅತ್ಯುನ್ನತವಾದುದನ್ನು ಹೊಂದುವಳು. ಯಾವಾಗ ಇಲ್ಲಿ ಶ್ರದ್ಧೆಯು, ಶೀಲವು ವಧರ್ಿಸುವುದೋ ಹಾಗೆಯೇ ಪ್ರಜ್ಞಾ, ತ್ಯಾಗ, ಕಲಿಕೆಗಳು ವಧರ್ಿಸುವುದೋ ಅಂತಹ ಶೀಲವತಿ ಉಪಾಸಿಕೆಯು ಇಲ್ಲಿಯೇ ಸಾರವಾದುದನ್ನು ತನ್ನಲ್ಲೇ ಪ್ರಾಪ್ತಿಮಾಡಿಕೊಳ್ಳುವಳು.

ಮಾತುಗಾಮ ಸಂಯುತ್ತವು ಸಮಾಪ್ತಿಯಾಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...