Wednesday 6 June 2018

Samyutta nikaya 38.ಜಮ್ಬುಖಾದಕ ಸಂಯುತ್ತಂ

38 ಜಮ್ಬುಖಾದಕ ಸಂಯುತ್ತಂ


1. ನಿಬ್ಬಾಣಪಞ್ಞಾ ಸುತ್ತಂ (ನಿಬ್ಬಾಣದ ಬಗ್ಗೆ ಪ್ರಶ್ನೆ)

314. ಒಮ್ಮೆ ಆಯುಷ್ಮಂತರಾದ ಸಾರಿಪುತ್ತರು ಮಗಧದ ನಾಲಕಗ್ರಾಮದಲ್ಲಿ ವಿಹರಿಸುತ್ತಿದ್ದರು. ಆಗ ಪರಿವ್ರಾಜಕನಾದ ಜಂಬುಖಾದಕನು ಸಾರಿಪುತ್ತರ ಬಳಿಗೆ ಬಂದನು. ನಂತರ ಸಾರಿಪುತ್ತರ ಬಳಿಯಲ್ಲಿ ಪರಸ್ಪರ ಉಭಯ ಕುಶಲೋಪರಿಯನ್ನು ಹಂಚಿಕೊಂಡರು. ಕುಶಲವನ್ನು ವಿಚಾರಿಸಿದ ನಂತರ ಒಂದೆಡೆ ಕುಳಿತುಕೊಂಡು ಪರಿವ್ರಾಜಕ ಜಂಬುಖಾದಕರು ಆಯುಷ್ಮಂತರಾದ ಸಾರಿಪುತ್ರರೊಂದಿಗೆ ಹೀಗೆ ಹೇಳಿದರು:
ಆಯುಷ್ಮಂತರಾದ ಸಾರಿಪುತ್ತರೇ, ನಿಬ್ಬಾನ, ನಿಬ್ಬಾನ ಎಂದು ಕರೆಯುತ್ತಾರಲ್ಲ, ಯಾವುದಕ್ಕಾಗಿ ನಿಬ್ಬಾಣವೆಂದು ಹೇಳುವರು? - ಮಿತ್ರನೇ, ರಾಗಕ್ಷಯ, ದ್ವೇಷಕ್ಷಯ ಹಾಗು ಮೋಹಕ್ಷಯವೇ ನಿಬ್ಬಾಣವಾಗಿದೆ. - ಆದರೆ ಆಯುಷ್ಮಂತರೇ, ಯಾವುದಾದರು ಮಾರ್ಗವು ನಿಬ್ಬಾಣದ ಸಾಕ್ಷಾತ್ಕಾರಕ್ಕಾಗಿ ಇದೆಯೇ? - ಹೌದು, ಮಿತ್ರನೇ, ನಿಬ್ಬಾಣದ ಸಾಕ್ಷಾತ್ಕಾರಕ್ಕಾಗಿ ಮಾರ್ಗವಿದೆ. - ಆಯುಷ್ಮಂತರೇ, ನಿಬ್ಬಾಣದ ಸಾಕ್ಷಾತ್ಕಾರಕ್ಕಾಗಿ ಇರುವ ಆ ಮಾರ್ಗವು ಯಾವುದು? - ಮಿತ್ರ, ಆ ಮಾರ್ಗವೇ ಆರ್ಯರ ಅಷ್ಠಾಂಗಿಕ ಮಾರ್ಗ. ಅದೆಂದರೆ: ಸಮ್ಮಾದೃಷ್ಠಿಕೋನ, ಸಮ್ಮಾಸಂಕಲ್ಪ, ಸಮ್ಮಾವಾಚಾ (ಸಂಭಾಷಣೆ), ಸಮ್ಮಾಕಮ್ಮ (ಕರ್ಮ), ಸಮ್ಮಾಜೀವನ, ಸಮ್ಮಾವ್ಯಾಯಾಮ, ಸಮ್ಮಾಸ್ಮೃತಿ ಹಾಗು ಸಮ್ಮಾಸಮಾಧಿಯನ್ನು ಒಳಗೊಂಡಿದೆ. ಇದೇ ಮಿತ್ರನೇ ಆ ಮಾರ್ಗ, ನಿಬ್ಬಾಣದ ಸಾಕ್ಷಾತ್ಕಾರಕ್ಕಿರುವ ಮಾರ್ಗ ಇದೇ ಆಗಿದೆ. ಉತ್ಕೃಷ್ಟವಾದ ಮಾರ್ಗ ಆಯುಷ್ಮಂತರೇ, ನಿಬ್ಬಾಣದ ಸಾಕ್ಷಾತ್ಕಾರಕ್ಕಾಗಿ ಅತ್ಯುತ್ತಮವಾದ ಮಾರ್ಗ. ಆಯುಷ್ಮಂತರೇ, ಜಾಗ್ರತೆಯಿಂದ ಶ್ರಮಿಸುವವರಿಗೆ ಇಷ್ಟು ಸಾಕಾಗಿದೆ.

2. ಅರಹತ್ತಪಞ್ಞಾ ಸುತ್ತಂ (ಅರಹತ್ವದ ಬಗ್ಗೆ ಪ್ರಶ್ನೆ)

315. ಆಯುಷ್ಮಂತರಾದ ಸಾರಿಪುತ್ತರೇ, ಅರಹಂತತ್ವ, ಅರಹಂತತ್ವ ಎಂದು ಕರೆಯುತ್ತಾರಲ್ಲ, ಯಾವುದಕ್ಕಾಗಿ ಅರಹಂತತ್ವವೆಂದು ಹೇಳುವರು? - ಮಿತ್ರನೇ, ರಾಗಕ್ಷಯ, ದ್ವೇಷಕ್ಷಯ ಹಾಗು ಮೋಹಕ್ಷಯವೇ ಅರಹಂತತ್ವವಾಗಿದೆ. - ಆದರೆ ಆಯುಷ್ಮಂತರೇ, ಯಾವುದಾದರು ಮಾರ್ಗವು ಅರಹಂತತ್ವದ ಸಾಕ್ಷಾತ್ಕಾರಕ್ಕಾಗಿ ಇದೆಯೇ? - ಹೌದು, ಮಿತ್ರನೇ, ಅರಹಂತತ್ವದ ಸಾಕ್ಷಾತ್ಕಾರಕ್ಕಾಗಿ ಮಾರ್ಗವಿದೆ. - ಆಯುಷ್ಮಂತರೇ, ಅರಹಂತತ್ವದ ಸಾಕ್ಷಾತ್ಕಾರಕ್ಕಾಗಿ ಇರುವ ಆ ಮಾರ್ಗವು ಯಾವುದು? - ಮಿತ್ರ, ಆ ಮಾರ್ಗವೇ ಆರ್ಯರ ಅಷ್ಠಾಂಗಿಕ ಮಾರ್ಗ. ಅದೆಂದರೆ: ಸಮ್ಮಾದೃಷ್ಠಿಕೋನ, ಸಮ್ಮಾಸಂಕಲ್ಪ, ಸಮ್ಮಾವಾಚಾ (ಸಂಭಾಷಣೆ), ಸಮ್ಮಾಕಮ್ಮ (ಕರ್ಮ), ಸಮ್ಮಾಜೀವನ, ಸಮ್ಮಾವ್ಯಾಯಾಮ, ಸಮ್ಮಾಸ್ಮೃತಿ ಹಾಗು ಸಮ್ಮಾಸಮಾಧಿಯನ್ನು ಒಳಗೊಂಡಿದೆ. ಇದೇ ಮಿತ್ರನೇ ಆ ಮಾರ್ಗ, ಅರಹಂತತ್ವದ ಸಾಕ್ಷಾತ್ಕಾರಕ್ಕಿರುವ ಮಾರ್ಗ ಇದೇ ಆಗಿದೆ. ಉತ್ಕೃಷ್ಟವಾದ ಮಾರ್ಗ ಆಯುಷ್ಮಂತರೇ, ಅರಹಂತತ್ವದ ಸಾಕ್ಷಾತ್ಕಾರಕ್ಕಾಗಿ ಅತ್ಯುತ್ತಮವಾದ ಮಾರ್ಗ. ಆಯುಷ್ಮಂತರೇ, ಜಾಗ್ರತೆಯಿಂದ ಪರಿಶ್ರಮಶೀಲರಿಗೆ ಇದು ಸಾಕಾಗಿದೆ.


3. ಧಮ್ಮವಾದೀಪಞ್ಞಾ ಸುತ್ತಂ (ಧಮ್ಮ ಪ್ರತಿಪಾದಕ ಸುತ್ತ)
316. ಆಯುಷ್ಮಂತರಾದ ಸಾರಿಪುತ್ತರೇ, ಈ ಲೋಕದಲ್ಲಿ ಧಮ್ಮಪ್ರತಿಪಾದಕರು ಯಾರು? ಈ ಲೋಕದಲ್ಲಿ ಧಮ್ಮ ಆಚರಣೆಯಲ್ಲಿ ತಲ್ಲೀನರು ಯಾರು? ಈ ಲೋಕದಲ್ಲಿ ಅತ್ಯಂತ ಸೌಭಾಗ್ಯಶೀಲರು (ಸುಗತರು) ಯಾರು? - ಮಿತ್ರನೇ, ಯಾರು ರಾಗದ ವರ್ಜನೆಯನ್ನು, ದ್ವೇಷದ ವರ್ಜನೆಯನ್ನು ಹಾಗು ಮೋಹದ ವರ್ಜನೆಯನ್ನು ಬೋಧಿಸುತ್ತಿದ್ದಾರೋ ಅವರೇ ಧಮ್ಮದ ಪ್ರತಿಪಾದಕರಾಗಿದ್ದಾರೆ. ಹಾಗೆಯೇ ಯಾರು ರಾಗವರ್ಜನೆ, ದ್ವೇಷವರ್ಜನೆ ಹಾಗು ಮೋಹವರ್ಜನೆಯನ್ನು ಆಚರಣೆಯಲ್ಲಿ ತಂದಿದ್ದಾರೋ ಅವರೇ ಈ ಲೋಕದಲ್ಲಿ ಆಚರಣೆಸಂಪನ್ನರಾಗಿದ್ದಾರೆ. ಯಾರಲ್ಲಿ ಈ ರಾಗ, ದ್ವೇಷ ಹಾಗು ಮೋಹಗಳು ವಜರ್ಿತವಾಗಿವೆಯೋ, ತಾಳೆಯ ಬುಡದರೀತಿ ಬುಡಸಮೇತ ಕತ್ತರಿಸಲ್ಪಟ್ಟಿವೆಯೋ, ಅಂತಹವರು ಉತ್ಪನ್ನವಾಗುವುದಿಲ್ಲ, ಅಂತಹವರು ಭವಿಷ್ಯದಲ್ಲಿ ಉದಯಿಸುವಿಕೆಗೆ ಗುರಿಯಾಗುವುದಿಲ್ಲ. ಅವರೇ ಈ ಲೋಕದಲ್ಲಿ ಸೌಭಾಗ್ಯಶೀಲ (ಸುಗತರು) ರಾಗಿದ್ದಾರೆ.
ಆದರೆ ಮಿತ್ರನೇ, ಮಾರ್ಗವೇನಾದರೂ ಇದೆಯೇ? ರಾಗ, ದ್ವೇಷ ಹಾಗು ಮೋಹಗಳನ್ನು ತ್ಯಜಿಸುವಂತಹ ಮಾರ್ಗವು ಇದೆಯೇ? - ಇದೆ ಆಯುಷ್ಮಂತನೇ. ರಾಗ, ದ್ವೇಷ ಹಾಗು ಮೋಹಗಳನ್ನು ತ್ಯಜಿಸುವಂತಹ ಮಾರ್ಗವಿದೆ. - ಯಾವುದು ಮಿತ್ರನೇ? ರಾಗ, ದ್ವೇಷ ಹಾಗು ಮೋಹಗಳನ್ನು ತ್ಯಜಿಸುವಂತಹ ಮಾರ್ಗ. - ಅದೇ ಮಿತ್ರನೇ, ಆರ್ಯ ಅಷ್ಠಾಂಗಿಕ ಮಾರ್ಗ. ಅದೆಂದರೆ: ಸಮ್ಮಾದೃಷ್ಠಿಕೋನ, ಸಮ್ಮಾಸಂಕಲ್ಪ, ಸಮ್ಮಾವಾಚಾ (ಸಂಭಾಷಣೆ), ಸಮ್ಮಾಕಮ್ಮ (ಕರ್ಮ), ಸಮ್ಮಾಜೀವನ, ಸಮ್ಮಾವ್ಯಾಯಾಮ, ಸಮ್ಮಾಸ್ಮೃತಿ ಹಾಗು ಸಮ್ಮಾಸಮಾಧಿಯಾಗಿದೆ. ಈ ಮಾರ್ಗದಿಂದಲೇ ಓರ್ವನು ರಾಗ, ದ್ವೇಷ ಹಾಗು ಮೋಹಗಳಿಂದ ಮುಕ್ತನಾಗಬಹುದು. - ಆಯುಷ್ಮಂತರೇ, ಉತ್ಕಷ್ಟವಾದ ಮಾರ್ಗವಾಗಿದೆ. ರಾಗ, ದ್ವೇಷ ಹಾಗು ಮೋಹಗಳಿಂದ ಮುಕ್ತವಾಗಲು ಸವರ್ೊತ್ಕೃಷ್ಟವಾದ ಮಾರ್ಗವಾಗಿದೆ. ಸಾರಿಪುತ್ರರೇ, ಪರಿಶ್ರಮ ಪಡುವುದಕ್ಕಾಗಿ ಇದು ಸಾಕಾಗಿದೆ.


4. ಕಿಮತ್ಥಿಯ ಸುತ್ತಂ

317. ಆಯುಷ್ಮಂತರಾದ ಸಾರಿಪುತ್ತರೇ, ಗೋತಮ ಬುದ್ಧರಲ್ಲಿ ಶ್ರೇಷ್ಠವಾದ ಬ್ರಹ್ಮಚರ್ಯ ಜೀವನ ಮಾಡುವ ಉದ್ದೇಶವಾದರೂ ಯಾವುದು? - ಮಿತ್ರನೇ, ದುಃಖಗಳ ಸಮಗ್ರ ಜ್ಞಾನಕ್ಕಾಗಿ, ಬುದ್ಧ ಭಗವಾನರಲ್ಲಿ ಶ್ರೇಷ್ಠ ಬ್ರಹ್ಮಚರ್ಯದ ಜೀವನ ನಡೆಸುತ್ತಿದ್ದೇನೆ. - ಆದರೆ ಆಯುಷ್ಮಂತರೇ, ದುಃಖಗಳನ್ನು ಸಮಗ್ರವಾಗಿ ಅರಿಯುವಂತಹ ಮಾರ್ಗ ಯಾವುದಾದರು ಇದೆಯೇ?
ಇದೇ ಮಿತ್ರನೆ, ಅದೇ ಆರ್ಯ ಅಷ್ಠಾಂಗಿಕ ಮಾರ್ಗ. ಅದರಿಂದಾಗಿ ದುಃಖಗಳ ಸಮಗ್ರ ಜ್ಞಾನವು ಸಿಗುವುದು. ಅದರ ಮಾರ್ಗಗಳೆಂದರೆ: ಸಮ್ಮಾದೃಷ್ಠಿಕೋನ, ಸಮ್ಮಾಸಂಕಲ್ಪ, ಸಮ್ಮಾವಾಚಾ (ಸಂಭಾಷಣೆ), ಸಮ್ಮಾಕಮ್ಮ (ಕರ್ಮ), ಸಮ್ಮಾಜೀವನ, ಸಮ್ಮಾವ್ಯಾಯಾಮ, ಸಮ್ಮಾಸ್ಮೃತಿ ಹಾಗು ಸಮ್ಮಾಸಮಾಧಿಯಾಗಿದೆ. ಇದರಿಂದಾಗಿ ಒಬ್ಬನು ದುಃಖಗಳ ಸಮಗ್ರ ಜ್ಞಾನವನ್ನು ಅರಿಯಬಹುದಾಗಿದೆ. - ಆಯುಷ್ಮಂತರೇ, ಉತ್ಕಷ್ಟವಾದ ಮಾರ್ಗವಾಗಿದೆ, ದುಃಖಗಳನ್ನು ಸಮಗ್ರವಾಗಿ ಅರಿಯಲು ಇದು ಸಾಕಾಗುತ್ತದೆ.

5. ಅಸ್ಸಾಸಪ್ಪತ್ತ ಸುತ್ತಂ

318. ಆಯುಷ್ಮಂತರಾದ ಸಾರಿಪುತ್ತರೇ, ಸಮಾಧಾನ, ಸಮಾಧಾನ ಪಡೆಯುವಿಕೆ ಎನ್ನುತ್ತಾರಲ್ಲ, ಯಾರು ಸಮಾಧಾನ ಪಡೆದಿರುವವರು? ಆಯುಷ್ಮಂತರೇ, ಯಾವರೀತಿಯಲ್ಲಿ ಒಬ್ಬನು ಸಮಾಧಾನ ಪಡೆಯುತ್ತಾನೆ? - ಮಿತ್ರನೇ, ಯಾವಾಗ ಭಿಕ್ಖುವು ಉದಯ ಹಾಗು ವ್ಯಯಗಳನ್ನು (ಕ್ಷೀಣತೆಯನ್ನು) ಅರಿಯುತ್ತಾನೆಯೋ, ವಿಷಯಗಳ ಸಂತೃಪ್ತಿ, ಅವುಗಳ ಅಪಾಯ ಮತ್ತು ಆರು ಆಯತನಗಳ ಸ್ಮರ್ಶದಿಂದ ವಿಮುಖವಾಗುವುದನ್ನು ಅರಿಯುತ್ತಾನೆಯೋ ಈ ರೀತಿಯಾಗಿಯೇ ಆತನು ಸಮಾಧಾನ (ಶಾಂತತೆ) ಪ್ರಾಪ್ತಿಮಾಡಿಕೊಳ್ಳುವನು. - ಆದರೆ ಆಯುಷ್ಮಂತರೇ, ಈ ಸಮಾಧಾನ ಪ್ರಾಪ್ತಿಗೆ ಮಾರ್ಗವಿದೆಯೇ? - ಮಾರ್ಗವಿದೆ, ಅದೇ ಆರ್ಯ ಅಷ್ಠಾಂಗಿಕ ಮಾರ್ಗ.... ಅದರಿಂದಾಗಿ ಆತನು ಸಮಾಧಾನವನ್ನು ಸಾಕ್ಷಾತ್ಕರಿಸುತ್ತಾನೆ. - ಆಯುಷ್ಮಂತರೇ, ಈ ಮಾರ್ಗವು ಉತ್ಕಷ್ಟವಾಗಿದೆ, ಸಮಾಧಾನವನ್ನು ಪ್ರಾಪ್ತಿಮಾಡಲು ಇದು ನಿಜಕ್ಕೂ ಸಾಕಾಗುತ್ತದೆ.


6. ಪರಮಸ್ಸಾಸಪ್ಪತ್ತ ಸುತ್ತಂ

319. ಆಯುಷ್ಮಂತರಾದ ಸಾರಿಪುತ್ತರೇ, ಪರಮ ಸಮಾಧಾನ, ಪರಮ ಸಮಾಧಾನ ಪಡೆಯುವಿಕೆ ಎನ್ನುವರಲ್ಲ, ಯಾರು ಪರಮ ಸಮಾಧಾನ ಪಡೆದಿರುವವರು? ಆಯುಷ್ಮಂತರೇ, ಯಾವರೀತಿಯಲ್ಲಿ ಒಬ್ಬನು ಪರಮ ಸಮಾಧಾನ ಪಡೆಯುತ್ತಾನೆ? - ಮಿತ್ರನೇ, ಯಾವಾಗ ಭಿಕ್ಖುವು ಉದಯ ಹಾಗು ವ್ಯಯಗಳನ್ನು (ಕ್ಷಣಿಕತೆಗಳು) ಅರಿಯುತ್ತಾನೆಯೋ ವಿಷಯಗಳ ಸಂತೃಪ್ತಿ, ಅವುಗಳ ಅಪಾಯ ಮತ್ತು ಆರು ಇಂದ್ರಿಯ ಆಧಾರಗಳ ಸ್ಪರ್ಶದಿಂದ ವಿಮುಖವಾಗುವುದನ್ನು ಅರಿಯುತ್ತಾನೆ. ಈ ರೀತಿಯಾಗಿಯೇ ಆತನು ಪರಮಶಾಂತತೆ (ಸಮಾಧಾನ) ಪ್ರಾಪ್ತಿಮಾಡಿಕೊಳ್ಳುವನು. - ಆದರೆ ಆಯುಷ್ಮಂತರೇ, ಈ ಪರಮ ಸಮಾಧಾನ ಪ್ರಾಪ್ತಿಗೆ ಮಾರ್ಗವಿದೆಯೇ? - ಮಾರ್ಗವಿದೆ, ಅದೇ ಆರ್ಯ ಅಷ್ಠಾಂಗಿಕ ಮಾರ್ಗ.... ಅದರಿಂದಾಗಿ ಆತನು ಪರಮ ಸಮಾಧಾನವನ್ನು ಸಾಕ್ಷಾತ್ಕರಿಸುತ್ತಾನೆ. - ಆಯುಷ್ಮಂತರೇ, ಈ ಮಾರ್ಗವು ಉತ್ಕಷ್ಟವಾಗಿದೆ, ಪರಮ ಸಮಾಧಾನವನ್ನು ಪ್ರಾಪ್ತಿಮಾಡಲು ಇದು ನಿಜಕ್ಕೂ ಸಾಕಾಗುತ್ತದೆ.


7. ವೇದನಾಪಞ್ಞಾ ಸುತ್ತಂ

320. ಆಯುಷ್ಮಂತರಾದ ಸಾರಿಪುತ್ತರೇ, ವೇದನೆ ವೇದನೆ ಎನ್ನುತ್ತಾರಲ್ಲ, ಈಗ ವೇದನೆ ಎಂದರೇನು? - ಮಿತ್ರನೇ, ಮೂರು ವೇದನೆಗಳಿವೆ, ಯಾವುದವು ಮೂರು? ಸುಖವೇದನೆ, ದುಃಖವೇದನೆ ಮತ್ತು ಅದುಕ್ಖ-ಅಸುಖ ವೇದನೆಗಳು, ಇವೇ ಆ ಮೂರು ವೇದನೆಗಳು. - ಆದರೆ ಆಯುಷ್ಮಂತರೇ, ಈ ಮೂರು ವೇದನೆಗಳನ್ನು ಪೂರ್ಣವಾಗಿ ಅರಿಯಲು ಮಾರ್ಗವಿದೆಯೇ? - ಮಿತ್ರನೇ, ಮಾರ್ಗವಿದೆ, ಅದೇ ಆರ್ಯ ಅಷ್ಠಾಂಗಿಕ ಮಾರ್ಗ.... ಅದರಿಂದಾಗಿ ಆತನು ವೇದನೆಗಳನ್ನು (ವೇದನೆಗೆ ಅತೀತವನ್ನು) ಸಾಕ್ಷಾತ್ಕರಿಸುತ್ತಾನೆ. - ಆಯುಷ್ಮಂತರೇ, ಈ ಮಾರ್ಗವು ಉತ್ಕಷ್ಟವಾಗಿದೆ, ಪರಮ ಸಮಾಧಾನವನ್ನು ಪ್ರಾಪ್ತಿಮಾಡಲು ಇದು ನಿಜಕ್ಕೂ ಸಾಕಾಗುತ್ತದೆ.

8. ಆಸವಪಞ್ಞಾ ಸುತ್ತಂ

321. ಆಯುಷ್ಮಂತರಾದ ಸಾರಿಪುತ್ತರೇ, ಆಸವ, ಆಸವ ಎನ್ನುತ್ತಾರಲ್ಲ, ಆಯುಷ್ಮಂತ ಸಾರಿಪುತ್ತರೇ, ಯಾವುದನ್ನು ಆಸವ ಎನ್ನುತ್ತಾರೆ? - ಮಿತ್ರನೇ, ಮೂರು ವಿಧದ ಆಸವಗಳಿವೆ, ಆಯುಷ್ಮಂತನೇ, ಅವೆಂದರೆ: ಕಾಮಾಸವ, ಭವಾಸವ ಹಾಗು ಅವಿದ್ಯಾಸವ. ಇವೇ ಮಿತ್ರನೇ ಮೂರು ಆಸವಗಳು. - ಆಯುಷ್ಮಂತರೇ, ಈ ಆಸವಗಳನ್ನು ವಜರ್ಿಸಲು ಮಾರ್ಗ ಯಾವುದಾದರೂ ಇದೆಯೇ? - ಇದೇ ಮಿತ್ರನೆ, ಅದೇ ಆರ್ಯ ಅಷ್ಠಾಂಗಿಕ ಮಾರ್ಗ. ಅದರ ಮಾರ್ಗಗಳೆಂದರೆ: ಸಮ್ಮಾದೃಷ್ಠಿಕೋನ, ಸಮ್ಮಾಸಂಕಲ್ಪ, ಸಮ್ಮಾವಾಚಾ (ಸಂಭಾಷಣೆ), ಸಮ್ಮಾಕಮ್ಮ (ಕರ್ಮ), ಸಮ್ಮಾಜೀವನ, ಸಮ್ಮಾವ್ಯಾಯಾಮ, ಸಮ್ಮಾಸ್ಮೃತಿ ಹಾಗು ಸಮ್ಮಾಸಮಾಧಿಯಾಗಿದೆ. ಅದರಿಂದಾಗಿ ಆತನು ಆಸವಗಳನ್ನು ಪೂರ್ಣವಾಗಿ ನಾಶಮಾಡಬಹುದು. - ಆಯುಷ್ಮಂತರೇ, ಈ ಮಾರ್ಗವು ಉತ್ಕಷ್ಟವಾಗಿದೆ, ಪರಮ ಸಮಾಧಾನವನ್ನು ಪ್ರಾಪ್ತಿಮಾಡಲು ಇದು ನಿಜಕ್ಕೂ ಸಾಕಾಗುತ್ತದೆ.


9. ಅವಿಜ್ಜಾಪಞ್ಞಾ ಸುತ್ತಂ

322. ಆಯುಷ್ಮಂತರಾದ ಸಾರಿಪುತ್ತರೇ, ಅವಿದ್ಯೆ ಅವಿದ್ಯೆ ಎಂದು ಕರೆಯುತ್ತಿರುವರಲ್ಲ, ಯಾವುದಕ್ಕೆ ಅವಿದ್ಯೆ (ಅವಿಜ್ಜಾ) ಎಂದು ಈಗ ಕರೆಯುವರು? - ಓಹ್ ಮಿತ್ರನೇ, ದುಃಖವನ್ನು ಅರಿಯದಿರುವಿಕೆ, ದುಃಖದ ಮೂಲವನ್ನು ಅರಿಯದಿರುವಿಕೆ, ದುಃಖ ನಿರೋಧವನ್ನು ಅರಿಯದಿರುವಿಕೆ ಮತ್ತು ದುಃಖ ನಿರೋಧ ಮಾರ್ಗವನ್ನು ಅರಿಯದಿರುವಿಕೆ ಇದೇ ಅವಿದ್ಯೆಯಾಗಿದೆ. - ಆದರೆ ಮಿತ್ರನೇ, ಈ ಅವಿದ್ಯೆಯನ್ನು ತೊರೆದು ಬದಲು ಮಾರ್ಗವಿದೆಯಲ್ಲವೆ? - ಹೌದು ಮಿತ್ರನೇ ಮಾರ್ಗವಿದೆ. ಅದೇ ಆರ್ಯ ಅಷ್ಠಾಂಗಿಕ ಮಾರ್ಗ. ಅದರಲ್ಲಿ ಸಮ್ಯಕ್ದೃಷ್ಠಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕಮ್ಮ ಸಮ್ಯಕ್ಜೀವನ, ಸಮ್ಯಕ್ವ್ಯಾಯಾಮ, ಸಮ್ಯಕ್ಸ್ಮೃತಿ ಹಾಗು ಸಮ್ಯಕ್ಸಮಾಧಿಯಾಗಿದೆ. ಇದೇ ಮಿತ್ರನೇ ಆ ಮಹಾಮಗ್ಗ. ಅದರಿಂದಾಗಿ ಅವಿದ್ಯೆಯನ್ನೆಲ್ಲಾ ವಜರ್ಿಸಬಹುದು. - ಆಯುಷ್ಮಂತರೇ, ಈ ಮಾರ್ಗವು ಉತ್ಕಷ್ಟವಾಗಿದೆ, ಅವಿದ್ಯೆಯನ್ನು ಪೂರ್ಣವಾಗ ವಜರ್ಿಸುವುದಕ್ಕೆ ಇದು ಸಾಕಾಗುತ್ತದೆ.


10. ತಣ್ಹಾಪಞ್ಞಾ ಸುತ್ತಂ

323. ಆಯುಷ್ಮಂತರಾದ ಸಾರಿಪುತ್ತರೇ, ತೃಷ್ಣೆ, ತೃಷ್ಣೆ ಎಂದು ಕರೆಯುತ್ತಾರಲ್ಲ, ಯಾವುದದು ತೃಷ್ಣೆ? - ಮಿತ್ರನೇ, ಇಲ್ಲಿ ಮೂರು ತೃಷ್ಣೆಗಳಿವೆ. ಅವೆಂದರೆ: ಕಾಮತೃಷ್ಣೆ, ಭವತೃಷ್ಣೆ ಮತ್ತು ವಿಭವತೃಷ್ಣೆ. ಇವೇ ಮೂರು ರೀತಿಯ ತೃಷ್ಣೆಗಳಾಗಿವೆ. - ಆದರೆ ಆಯುಷ್ಮಂತರೇ, ಈ ತೃಷ್ಣೆಗಳನ್ನು ಪೂರ್ಣವಾಗಿ ವಜರ್ಿಸುವುದಕ್ಕಾಗಿ ಮಾರ್ಗವಿದೆಯೇ? ಇದೇ ಮಿತ್ರನೇ, ಮಾರ್ಗವಿದೆ. - ಯಾವುದು ಆಯುಷ್ಮಂತರೇ, ಆಗ ಮಾರ್ಗ? - ಮಿತ್ರನೇ, ಅದೇ ಆರ್ಯ ಅಷ್ಠಾಂಗಿಕ ಮಾರ್ಗ. ಅದೇ ಆರ್ಯ ಅಷ್ಠಾಂಗಿಕ ಮಾರ್ಗ. ಅದರಲ್ಲಿ ಸಮ್ಯಕ್ದೃಷ್ಠಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕಮ್ಮ ಸಮ್ಯಕ್ಜೀವನ, ಸಮ್ಯಕ್ವ್ಯಾಯಾಮ, ಸಮ್ಯಕ್ಸ್ಮೃತಿ ಹಾಗು ಸಮ್ಯಕ್ಸಮಾಧಿ. - ಆಯುಷ್ಮಂತರೇ, ಈ ಮಾರ್ಗವು ಉತ್ಕಷ್ಟವಾಗಿದೆ, ತೃಷ್ಣೆಯನ್ನು ಪೂರ್ಣವಾಗಿ ವಜರ್ಿಸಬಹುದಾಗಿದೆ.


11. ಒಘಪಞ್ಞಾ ಸುತ್ತಂ

324. ಆಯುಷ್ಮಂತರಾದ ಸಾರಿಪುತ್ತರೇ, ಪ್ರವಾಹ, ಪ್ರವಾಹ ಎನ್ನುತ್ತಾರಲ್ಲ, ಯಾವುದಕ್ಕೆ ಪ್ರವಾಹ ಎನ್ನುವರು? - ಮಿತ್ರನೇ, ನಾಲ್ಕುವಿಧದ ಪ್ರವಾಹಗಳಿವೆ. ಅವೆಂದರೆ: ಕಾಮೋಪೋ (ಕಾಮದ ಪ್ರವಾಹ), ಭವೋಪೋ (ಭವದ ಪ್ರವಾಹ), ದಿಟೋಪೋ (ದೃಷ್ಟಿಕೋನಗಳ ಪ್ರವಾಹ) ಮತ್ತು ಅವಿಜ್ಜೋಪೋ (ಅವಿದ್ಯೆಯ ಪ್ರವಾಹ). - ಆದರೆ ಆಯುಷ್ಮಂತರೇ, ಈ ಪ್ರವಾಹಗಳಿಂದಾಗಿ ಪೂರ್ಣವಾಗಿ ಪಾರಾಗಲು ಮಾರ್ಗವು ಇದೆಯೇ? - ಹೌದು ಇದೆ, ಈ ಪ್ರವಾಹಗಳಿಂದ ಪೂರ್ಣವಾಗಿ ಪಾರಾಗಲು ಮಾರ್ಗವಿದೆ. - ಯಾವುದದು? - ಅದೇ ಆರ್ಯ ಅಷ್ಠಾಂಗಿಕ ಮಾರ್ಗ. ಅದರಲ್ಲಿ ಸಮ್ಯಕ್ದೃಷ್ಠಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕಮ್ಮ ಸಮ್ಯಕ್ಜೀವನ, ಸಮ್ಯಕ್ವ್ಯಾಯಾಮ, ಸಮ್ಯಕ್ಸ್ಮೃತಿ ಹಾಗು ಸಮ್ಯಕ್ಸಮಾಧಿ. ಇವೆಲ್ಲವೂ ಇರುವಂತಹ ಈ ಮಾರ್ಗದಿಂದಾಗಿ ಪ್ರವಾಹವನ್ನು ದಾಟಬಹುದಾಗಿದೆ. - ಆಯುಷ್ಮಂತರೇ, ಈ ಮಾರ್ಗವು ಉತ್ಕಷ್ಟವಾಗಿದೆ, ಈ ಮಾರ್ಗದಿಂದ ಎಲ್ಲಾ ಪ್ರವಾಹಗಳನ್ನು ಪೂರ್ಣವಾಗಿ ತೊಡೆಯಬಹುದಾಗಿದೆ (ದಾಟಬಹುದಾಗಿದೆ).


12. ಉಪದಾನಪಞ್ಞಾ ಸುತ್ತಂ

325. ಆಯುಷ್ಮಂತರಾದ ಸಾರಿಪುತ್ತರೇ, ಅಂಟುವಿಕೆ, ಅಂಟುವಿಕೆ ಎನ್ನುತ್ತಾರಲ್ಲ, ಯಾವುದಕ್ಕೆ ಅಂಟುವಿಕೆ ಎನ್ನುವರು? - ಮಿತ್ರನೇ, ನಾಲ್ಕುವಿಧದ ಅಂಟುವಿಕೆಗಳಿವೆ. ಕಾಮಪದಾನಂ (ಕಾಮಗಳಿಗೆ ಅಂಟುವಿಕೆ), ದಿಟ್ಠುಪದಾನಂ (ದೃಷ್ಟಿಕೋನಗಳಿಗೆ ಅಂಟುವಿಕೆ), ಸೀಲಬ್ಬತುಪಾದಾನಂ (ಮೌಢ್ಯ ಆಚರಣೆಗಳಿಗೆ ಅಂಟುವಿಕೆ), ಆತ್ತವಾದುಪಾದಾನಂ (ಆತ್ಮವಾದಕ್ಕೆ [ಸ್ವಯಂಗೆ] ಅಂಟುವಿಕೆ). - ಆದರೆ ಅಯುಷ್ಮಂತರೇ, ಈ ಅಂಟುವಿಕೆಗಳಿಂದ ಪಾರಾಗಲು ಯಾವುದಾದರೂ ಮಾರ್ಗವಿದೆಯೇ? - ಹೌದು, ಮಿತ್ತನೇ ಇದೆ, ಈ ಅಂಟುವಿಕೆಗಳಿಂದ ಪಾರಾಗಲು ಮಾರ್ಗವಿದೆ. - ಆಯುಷ್ಮಂತರೇ, ಯಾವುದದು ಮಾರ್ಗ? - ಅದೇ ಆರ್ಯ ಅಷ್ಠಾಂಗಿಕ ಮಾರ್ಗ. ಅದರಲ್ಲಿ ಸಮ್ಯಕ್ದೃಷ್ಠಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕಮ್ಮ ಸಮ್ಯಕ್ಜೀವನ, ಸಮ್ಯಕ್ವ್ಯಾಯಾಮ, ಸಮ್ಯಕ್ಸ್ಮೃತಿ ಹಾಗು ಸಮ್ಯಕ್ಸಮಾಧಿ. ಇವೆಲ್ಲವೂ ಇರುವಂತಹ ಈ ಮಹತ್ತರ ಮಾರ್ಗದಿಂದಾಗಿ ಅಂಟುವಿಕೆಗಳಿಂದ ಪಾರಾಗಬಹುದಾಗಿದೆ. - ಆಯುಷ್ಮಂತರೇ, ಈ ಮಾರ್ಗವು ಉತ್ಕಷ್ಟವಾಗಿದೆ, ಇದರಿಂದ ಎಲ್ಲಾ ಅಂಟುವಿಕೆಗಳನ್ನು ಪೂರ್ಣವಾಗಿ ತೊರೆಯಬಹುದಾಗಿದೆ.


13. ಭವಪನ್ಹಾ ಸುತ್ತಂ

326. ಆಯುಷ್ಮಂತರಾದ ಸಾರಿಪುತ್ತರೇ, ಭವ, ಭವ (ಅಸ್ತಿತ್ವ) ಎನ್ನುತ್ತಾರಲ್ಲ, ಯಾವುದದು ಅಸ್ತಿತ್ವ (ಭವ)? - ಮಿತ್ರನೇ, ಮೂರುಬಗೆಯ ಭವಗಳಿವೆ. ಅವೆಂದರೆ: ಕಾಮಭವ (ಇಂದ್ರೀಯ ಕ್ಷೇತ್ರದಲ್ಲಿ ಅಸ್ತಿತ್ವ), ರೂಪಭವ (ಆಕಾರದ [ಧ್ಯಾನದ] ಕ್ಷೇತ್ರದ ಅಸ್ತಿತ್ವ), ಅರೂಪಭವ (ಆಕಾರರಹಿತ [ಧ್ಯಾನದ] (ನಿಗರ್ುಣ, ನಿರಾಕಾರ) ಕ್ಷೇತ್ರದ ಅಸ್ತಿತ್ವ. - ಆದರೆ ಮಿತ್ರನೇ, ಈ ಅಸ್ತಿತ್ವಗಳ ಪೂರ್ಣ ಜ್ಞಾನವಾಗುವಂತಹ ಯಾವುದಾದರೂ ಮಾರ್ಗವಿದೆಯೇ? - ಇದೇ ಮಿತ್ರನೇ, ಈ ಅಸ್ತಿತ್ವಗಳ ಪೂರ್ಣ ಅರಿವುಗಳು ಆಗುವಂತಹ ಮಾರ್ಗವಿದೆ. - ಯಾವುದದು? - ಅದೇ ಆರ್ಯ ಅಷ್ಠಾಂಗ ಮಾರ್ಗ. ಅದರಲ್ಲಿ ಸಮ್ಯಕ್ದೃಷ್ಠಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕಮ್ಮ ಸಮ್ಯಕ್ಜೀವನ, ಸಮ್ಯಕ್ವ್ಯಾಯಾಮ, ಸಮ್ಯಕ್ಸ್ಮೃತಿ ಹಾಗು ಸಮ್ಯಕ್ಸಮಾಧಿ. ಇವುಗಳನ್ನು ಒಳಗೊಂಡ ಈ ಆರ್ಯ ಅಷ್ಠಾಂಗ ಮಾರ್ಗದಿಂದಾಗಿ ಭವದ ಪರಿಜ್ಞಾನವಾಗುವುದು. - ಉತ್ಕೃಷ್ಟ ಆಯುಷ್ಮಂತರೇ, ಖಂಡಿತವಾಗಿ ಈ ಮಾರ್ಗದಿಂದಾಗಿ ಈ ಭವಗಳಿಂದ ಪಾರಾಗಬಹುದಾಗಿದೆ.


14. ದುಃಖಪಞ್ಞಾ ಸುತ್ತಂ

327. ಆಯುಷ್ಮಂತರಾದ ಸಾರಿಪುತ್ತರೇ, ದುಃಖ, ದುಃಖ ಎನ್ನುತ್ತಾರಲ್ಲ, ಯಾವುದು ದುಃಖ. ಮಿತ್ರನೇ, ಮೂರುಬಗೆಯ ದುಃಖಗಳಿವೆ. ದುಃಖದುಃಖಂತ (ನೋವಿನ ದುಃಖ), ಸಂಖಾರದುಃಖ (ಶೋಕ) ಮತ್ತು ವಿಪರಿಣಾಮ (ಬದಲಾವಣೆಯಿಂದಾಗುವ) ದುಃಖ. - ಆಯುಷ್ಮಂತರೇ, ಈ ಮೂರುಬಗೆಯ ದುಃಖಗಳನ್ನು ಅರಿಯುವಂತಹ (ಪರಿಜ್ಞಾನ) ಮಾರ್ಗವಿದೆಯೇ? - ಇದೇ ಮಿತ್ರನೇ, ಅದೇ ಆರ್ಯ ಅಷ್ಠಾಂಗ ಮಾರ್ಗ. ಅದರಲ್ಲಿ ಸಮ್ಯಕ್ದೃಷ್ಠಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕಮ್ಮ ಸಮ್ಯಕ್ಜೀವನ, ಸಮ್ಯಕ್ವ್ಯಾಯಾಮ, ಸಮ್ಯಕ್ಸ್ಮೃತಿ ಹಾಗು ಸಮ್ಯಕ್ಸಮಾಧಿ.  ಇದರಿಂದಾಗಿ ದುಃಖಗಳನ್ನು ಅರಿಯಬಹುದಾಗಿದೆ. - ಉತ್ಕೃಷ್ಟ ಆಯುಷ್ಮಂತರೇ, ಖಂಡಿತವಾಗಿಯೂ ಈ ಮಾರ್ಗದಿಂದಾಗಿ ದುಃಖಗಳನ್ನು ಅರಿತು ಅವುಗಳಿಂದ ಪಾರಾಗಬಹುದಾಗಿದೆ.


15. ಸಕ್ಕಾಯಪನ್ಹೊ ಸುತ್ತಂ

328. ಆಯುಷ್ಮಂತರಾದ ಸಾರಿಪುತ್ತರೇ, ವ್ಯಕ್ತಿತ್ವ (ಸಕ್ಕಾಯೋ) ವ್ಯಕ್ತಿತ್ವ ಎನ್ನುತ್ತಾರಲ್ಲ, ಏನಿದು ವ್ಯಕ್ತಿತ್ವ? - ಮಿತ್ರನೇ, ಐದುವಿಧದ ಖಂಧಗಳಿಗೆ ಅಂಟಿಕೊಂಡಿರುವಿಕೆಗೆ (ಅದನ್ನೇ, ತಾನು, ತನ್ನದು, ತನ್ನ ಆತ್ಮ ಎಂದು ಭಾವಿಸುವುದು). ವ್ಯಕ್ತಿತ್ವ ಎಂದು ಭಗವಾನರು ನುಡಿದಿರುವುದು. ಅವೆಂದರೆ: ರೂಪಖಂಧ (ದೇಹ)ಕ್ಕೆ ಅಂಟಿರುವುದು, ವೇದನಾ (ಸಂವೇದನೆಗಳು/ಭಾವಾವೇಶಗಳು) ಖಂಧಕ್ಕೆ ಅಂಟಿರುವುದು. ಸನ್ಯಾಖಂಧಕ್ಕೆ (ಗ್ರಹಿಕೆಗಳ ರಾಶಿಗೆ) ಅಂಟಿರುವುದು. ಸಂಖಾರ ಖಂಧಗಳಿಗೆ (ಐಚ್ಛಿಕ ರಚನೆಗಳಿಗೆ) ಅಂಟಿರುವಿಕೆ, ವಿಞ್ಞಾನಖಂಧಗಳಿಗೆ (ಅರಿಯುವಿಕೆಯ ರಾಶಿಗೆ) ಅಂಟಿರುವಿಕೆ. ಈ ಐದು ಖಂಧಗಳಿಗೆ ಅಂಟಿರುವಿಕೆಗೆ ಸಕ್ಕಾಯವೆಂದು ಭಗವಾನರು ತಿಳಿಸಿರುವರು. - ಆದರೆ ಆಯುಷ್ಮಂತರೇ, ಈ ಪಂಚಖಂಧಗಳ ಪೂರ್ಣ ಪರಿಜ್ಞಾನಕ್ಕೆ ಮಾರ್ಗವಿದೆಯೇ? - ಖಂಡಿತ ಇದೆ, ಅದರಿಂದಾಗಿ ಈ ಪಂಚಖಂಧಗಳನ್ನು ಪೂರ್ಣವಾಗಿ ಅರಿಯಬಹುದು. ಯಾವುದದು? - ಅದೇ ಆರ್ಯರ ಅಷ್ಠಾಂಗಮಾರ್ಗ. ಅದೆಂದರೆ: ಸಮ್ಯಕ್ದೃಷ್ಠಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕಮ್ಮ ಸಮ್ಯಕ್ಜೀವನ, ಸಮ್ಯಕ್ವ್ಯಾಯಾಮ, ಸಮ್ಯಕ್ಸ್ಮೃತಿ ಹಾಗು ಸಮ್ಯಕ್ಸಮಾಧಿ. ಈ ಮಾರ್ಗದಿಂದಾಗಿ ಪಂಚಖಂಧಗಳ ಪೂರ್ಣ ಪರಿಜ್ಞಾನವಾಗುವುದು. - ಉತ್ಕೃಷ್ಟ ಆಯುಷ್ಮಂತರೇ, ಖಂಡಿತವಾಗಿಯೂ ಈ ಮಾರ್ಗದಿಂದಾಗಿ ದುಃಖಗಳನ್ನು ಅರಿತು ಅವುಗಳಿಂದ ಪಾರಾಗಬಹುದಾಗಿದೆ.

16. ದುಕ್ಖರಪಞ್ಞಾ ಸುತ್ತಂ

329. ಆಯುಷ್ಮಂತರಾದ ಸಾರಿಪುತ್ತರೇ, ಭಗವಾನರ ಈ ಧಮ್ಮವಿನಯದಲ್ಲಿ ಅತಿ ದುಷ್ಕರವಾದುದು ಯಾವುದು? - ಪ್ರವಜ್ರ್ಯ (ಪಬ್ಬಜ್ಜ) ಸ್ವೀಕರಿಸುವುದು ದುಷ್ಕರವಾಗಿದೆ. - ಆದರೆ ಆಯುಷ್ಮಂತರೇ, ಪ್ರವಜ್ರ್ಯ ಸ್ವೀಕಾರದ ಬಳಿಕ ದುಷ್ಟಕವಾವುದು? - ಪಬ್ಬಜ್ಜದಲ್ಲಿಯೇ ಆನಂದಿಸುವುದೇ ಇದಕ್ಕಿಂತ ದುಷ್ಕರವಾಗಿದೆ. - ಅದರಲ್ಲಿ ಆನಂದಿಸುವುದಕ್ಕಿಂತ ದುಷ್ಕರವಾದುದು ಯಾವುದು? - ಧಮ್ಮಕ್ಕೆ ಅನುಸಾರವಾಗಿ ಆಚರಿಸುವುದೇ ಇದಕ್ಕಿಂತ ದುಷ್ಕರವಾಗಿದೆ. - ಆದರೆ ಆಯುಷ್ಮಂತರೇ, ಯಾರು ಧಮ್ಮಾನುಸಾರವಾಗಿ ಆಚರಣೆಯಲ್ಲಿರುವರೋ ಅವರಿಗೆ ಅರಹತ್ವ ಪ್ರಾಪ್ತಿಯಲ್ಲಿ ಹೆಚ್ಚುಕಾಲ ತೆಗೆದುಕೊಳ್ಳುವುದೇ? - ಇಲ್ಲ ಮಿತ್ರನೇ.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...