Thursday 17 May 2018

Samyutta nikaya 35.10 ಸಳವಗ್ಗೋ (ಆರರ ವರ್ಗ)

ಸಳವಗ್ಗೋ (ಆರರ ವರ್ಗ)

35.10.1. ಅದಂತ ಅಂಗುತ್ತ ಸುತ್ತಂ (ಅದಂತ ಅರಕ್ಷಿತ)

94. ಸಾವತ್ಥಿಯಲ್ಲಿ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ಇವು ಸ್ಪರ್ಶದ ಆರು ಆಧಾರಗಳು. ಆದರೆ ಇವು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಇವು ಅಪಾರ ದುಃಖ ತರುವುದು. ಯಾವುದವು ಆರು? ಚಕ್ಷು (ಕಣ್ಣು) ಭಿಕ್ಷುಗಳೆ, ಸ್ಪರ್ಶದ ಆಧಾರವಾಗಿದೆ. ಇದನ್ನು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಅಪಾರ ದುಃಖ ತುರುವುದ. ಕಿವಿ ಭಿಕ್ಷುಗಳೇ, ಸ್ಪರ್ಶದ ಆಧಾರವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ಭಿಕ್ಷುಗಳೇ ಸ್ಪರ್ಶದ ಆಧಾರವಾಗಿದೆ. ಇದನ್ನು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಅಪಾರ ದುಃಖ ತರುವುದು. ಇವೇ ಭಿಕ್ಷುಗಳೇ, ಸ್ಪರ್ಶದ ಆರು ಆಧಾರಗಳು. ಇವು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಇವು ದುಃಖವನ್ನು ತರುವುವು.
ಭಿಕ್ಷುಗಳೇ, ಸ್ಪರ್ಶದ ಆರು ಆಧರಗಳಿವೆ. ಇವನ್ನು ಪಳಗಿಸದೆ ಹೋದರೆ, ಪಹರೆ ಮಾಡದೆ ಹೋದರೆ, ರಕ್ಷಿಸದೆ ಹೋದರೆ, ನಿಯಂತ್ರಿಸದೆ ಹೋದರೆ ಅಪಾರ ದುಃಖವನ್ನು ನೀಡುವುವು. ಯಾವುವು ಭಿಕ್ಷುಗಳೇ ಆ ಆರು? ಚಕ್ಷು ಭಿಕ್ಷುಗಳೇ, ಸ್ಪರ್ಶದ ಆಧಾರವಾಗಿದೆ, ಇದನ್ನು ಚೆನ್ನಾಗಿ ಪಳಗಿಸಿದರೆ, ಚೆನ್ನಾಗಿ ಪಹರೆ ಮಾಡಿದರೆ, ಚೆನ್ನಾಗಿ ರಕ್ಷಿಸಿದರೆ, ಚೆನ್ನಾಗಿ ನಿಯಂತ್ರಿಸಿದರೆ ಅಪಾರ ಸುಖವನ್ನು ನೀಡುವುದು. ಕಿವಿ ಭಿಕ್ಷುಗಳೇ, ಸ್ಪರ್ಶದ ಆಧಾರವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ಇವನ್ನು ಚೆನ್ನಾಗಿ ಪಳಗಿಸಿದರೆ, ಪಹರೆ ಮಾಡಿದರೆ, ಚೆನ್ನಾಗಿ ರಕ್ಷಿಸಿದರೆ, ಚೆನ್ನಾಗಿ ನಿಯಂತ್ರಿಸಿದರೆ ಅಪಾರ ಸುಖವನ್ನು ನೀಡುವುದು. ಇದೇ ಭಿಕ್ಷುಗಳೇ ಆ ಆರು ಸ್ಪರ್ಶದ ಆಧಾರಗಳು. ಇವನ್ನು ಚೆನ್ನಾಗಿ ಪಳಗಿಸಿದರೆ... ಅಪಾರ ಸುಖವು ಸಿಗುವುದು. ಹೀಗೆ ನುಡಿದ ನಂತರ ಭಗವಾನರು ಹೀಗೆ ಮತ್ತೆ ಮುಂದುವರೆಸಿದರು:
ಕೇವಲ ಆರು ಸ್ಪರ್ಶದ ಆಧಾರಗಳಷ್ಟೇ ಭಿಕ್ಷುಗಳೇ,
ಅಸಂಯಮಿತನಾದರೆ ದುಃಖಕ್ಕೆ ಗುರಿಯಾಗುತ್ತಾನೆ.
ಯಾರಿಗೆ ನಿಯಂತ್ರಿಸುವುದು ಬರುವುದೋ
ವಿಹರಿಸುವರು ಅವರು ಶ್ರದ್ಧೆಯುಳ್ಳವರಾಗಿ ಅನಸ್ರವರಾಗಿ.
ರೂಪಗಳ ದರ್ಶನವು ಮನೋರಮವು,
ರೂಪಗಳ ದರ್ಶನವು ಅಮನೋರಮವೂ ಸಹಾ
ಮನೋರಮವಾದ ರಾಗಪಥವನ್ನು ದೂರಿಕರಿಸು
ನನ್ನ ಮನವನ್ನು ಪ್ರದೋಷ ಮಾಡುತ್ತಿರುವೆನೆಂದು ಯೋಚಿಸಬೇಡ.
ಶಬ್ದಗಳಲ್ಲಿ ಪ್ರಿಯಾ ಅಪ್ರಿಯಗಳನ್ನು ಆಲಿಸಿ,
ಪ್ರಿಯವಾದ ಶಬ್ದಗಳಲ್ಲಿ ಪುಳಕಿತನಾಗದಿರು
ಗಡುಸಾದ ಅಪ್ರಿಯ ಶಬ್ದಗಳಲ್ಲಿ ದ್ವೇಷವನ್ನು ದೂರೀಕರಿಸು
ಇದು ಮನಸ್ಸನ್ನು ಪ್ರದೋಷಗೊಳಿಸುತ್ತದೆ ಎಂದು ಯೋಚಿಸಬೇಡ.
ಸುರಭಿಯುತವಾದ, ಮನೋರಮವಾದ ಗಂಧವನ್ನು ಅಘ್ರಾಣಿಸಿ,
ಹಾಗೆಯೇ ಅಶುಚಿಯಾದ ಕೊಳಕನ್ನು ಮೂಸಿ,
ದುನರ್ಾತದಲ್ಲಿ ದ್ವೇಷವನ್ನು ದೂರೀಕರಿಸಿ
ಸುಗಂಧಗಳಲ್ಲಿ ಆಸೆಯಿಡದಿರು.
ಸಿಹಿಯಾದ ಸ್ವಾದಿಷ್ಟಕರ ಭೋಜನಗಳ ರುಚಿ ಆಸ್ವಾದಿಸುತ್ತ
ಕೆಲವೊಮ್ಮೆ ಒಳ್ಳೆಯದಲ್ಲದ ಕಹಿಯನ್ನು ಸೇವಿಸಬೇಕಾಗುತ್ತದೆ
ಸ್ವಾದಿಷ್ಟಗಳಲ್ಲಿ ಸುಖಿಸಬೇಡ
ಕಹಿ ತಿಂಡಿಗಳಲ್ಲಿ ದ್ವೇಷವು ತಾಳಬೇಡ.
ಪ್ರಿಯವಾದ ಸ್ಪರ್ಶಗಳಲ್ಲಿ ಪುಳಕಿತನಾಗದಿರು,
ನೋವಿನ ಸ್ಪರ್ಶಗಳಲ್ಲಿ ಕಂಪಿತನಾಗದಿರು,
ಪ್ರಿಯಾ, ಅಪ್ರಿಯ ಸ್ಪರ್ಶಗಳಲ್ಲಿ ಉಪೇಕ್ಷೆಯನ್ನು ತಾಳು
ಯಾವುದರಿಂದಲೂ ಆಕಷರ್ಿತನಾಗದಿರು ಹಾಗೆಯೇ ಅಸಹ್ಯವೂ ತಾಳದಿರು.
ಪ್ರಾಪಂಚಿಕ ಗ್ರಹಿಕೆಗಳ ನರರು
ಪ್ರಾಪಂಚಿಕ ಉತ್ಕಟಗಳಲ್ಲಿಯೇ ಮಗ್ನರಾಗಿರುವರು
ಗೃಹಸ್ಥನನ್ನಾಗಿಸುವ ಸರ್ವ ಮನಸ್ಥಿತಿಗಳನ್ನು ದೂರೀಕರಿಸಿ
ತ್ಯಾಗದ ಮಾರ್ಗದಲ್ಲಿರುವಂತಾಗಲಿ.
ಯಾವಾಗ ಹೀಗೆ ಮನಸ್ಸು ಆರರಲ್ಲಿ ಅಭಿವೃದ್ಧಿ
ಹೊಂದುವುದೋ ಆಗ ಸ್ಪಶರ್ಿಸಿದರೂ ಸಹಾ
ಚಿತ್ತವು ಸ್ವಲ್ಪವೂ ಅಲುಗಾಡದು,
ರಾಗದ್ವೇಷಗಳನ್ನು ಜಯಿಸಿ ಭಿಕ್ಷುಗಳೇ ಜನ್ಮ ಮರಣದಿಂದ ಆಚೆಹೋಗಿರಿ.

35.10.2. ಮಾಲುಕ್ಯ ಪುತ್ತ ಸುತ್ತಂ (ಮಾಲುಕ್ಯ ಪುತ್ರ ಸುತ್ತ)

95. ಭಗವಾನರು ರಾಜಗೃಹದಲ್ಲಿನ ವೇಳುವನದಲ್ಲಿನ ಅಳಿಲುಧಾಮದಲ್ಲಿದ್ದಾಗ ಪರಮಪೂಜ್ಯ ಮಾಲುಕ್ಯಪುತ್ತ ಭಗವಾನರ ಬಳಿಗೆ ಬಂದನು. ನಂತರ ಭಗವಾನರಿಗೆ ವಂದಿಸಿ, ಪೂಜಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೇಳಿದನು: ಭಗವಾನರು ಸಂಕ್ಷಿಪ್ತವಾಗಿ ಧಮ್ಮೋಪದೇಶ ನೀಡುವಂತಾಗಲಿ, ಅದರಿಂದಾಗಿ ನಾನು ಏಕಾಂಗಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ ಮತ್ತು ದೃಢತಾಪೂರ್ವಕವಾಗಿ ಶ್ರಮಿಸುವಂತಾಗಲಿ.
ಮಾಲುಕ್ಯಪುತ್ತ, ಈಗ ಇಲ್ಲಿ ಯಾವಾಗ ನಿನ್ನಂಥ ಭಿಕ್ಷುಗಳು ವೃದ್ಧರಾಗಿಯು, ವರ್ಷಗಳಿಂದ ಭಾರವಾಗಿರುವವರಾಗಿಯು, ಜೀವನದ ಸಂಜೆಯನ್ನು ಕಾಣುತ್ತಿದ್ದು ಸಹಾ ಸಂಕ್ಷಿಪ್ತವಾಗಿ ಧಮ್ಮವನ್ನು ಯಾಚಿಸುವಾಗ ಯುವಕರಿಗೆ ಏನೆಂದು ಹೇಳಲಿ?
ಭಗವಾನ್, ನಾವು ವೃದ್ಧನಾಗಿದ್ದೇನೆ, ವರ್ಷಗಳಿಂದ ಭಾರವಾಗಿದ್ದೇನೆ, ಜೀವನದ ಸಂಜೆಯಲ್ಲಿದ್ದೇನೆ, ಅಂತಿಮ ಕಾಲದಲ್ಲಿದ್ದೇನೆ. ಆದರೂ ಸಹಾ ಭಗವಾನರು ನನಗೆ ಸಂಕ್ಷಿಪ್ತವಾಗಿ ಬೋಧಿಸಲು, ಬಹುಶಃ ನನಗೆ ಭಗವಾನರ ಆ ನುಡಿಗಳು ಅರ್ಥವಾಗಬಹುದು. ಆ ಭಗವಾನರ ನುಡಿಗಳಿಗೆ ನಾನು ಉತ್ತರಾದಿಕಾರಿಯಾಗಬಹುದು.
ಆಯಿತು ಮಾಲುಕ್ಯಪುತ್ತ, ನಿನ್ನಲ್ಲಿ ಕಣ್ಣಿನಿಂದ ವೀಕ್ಷಿಸುವಂತಹ ಯಾವುದಾದರೂ ಆಸೆಯಿದೆಯೇ, ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ಕಿವಿಯಿಂದ ಕೇಳುವಂತಹ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ಮೂಗಿನಿಂದ ಆಘ್ರಾಣಿಸುವಂತ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ನಾಲಿಗೆಯಿಂದ ಆಸ್ವಾದಿಸುವಂತಹ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ಕಾಯದಿಂದ ಸ್ಪಶರ್ಿಸುವಂತಹ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನಿನ್ನಲ್ಲಿ ಮನಸ್ಸಿನಿಂದ ಗ್ರಹಿಸುವಂತಹ ಯಾವುದಾದರೂ ಆಸೆಯಿದೆಯೇ ಅಥವಾ ರಾಗವಿದೆಯೇ ಅಥವಾ ಪ್ರೇಮವಿದೆಯೇ? - ಇಲ್ಲ ಭಂತೆ.
ಮಾಲುಕ್ಯಪುತ್ತ, ನೋಡುವ, ಕೇಳುವ, ಗ್ರಹಿಸುವ ಹಾಗು ಅನುಭವಿಸುವಂತಹವುಗಳಲ್ಲಿ ಕೇವಲ ನೋಡಬೇಕು, ಕೇವಲ ಕೇಳಬೇಕು, ಕೇವಲ ಗ್ರಹಿಸಬೇಕು ಹಾಗು ಕೇವಲ ಅನುಭವಿಸಬೇಕು. ನಂತರ ಮಾಲುಕ್ಯಪುತ್ತ, ಯಾವಾಗ ನೋಡುವಾಗ, ಕೇಳುವಾಗ, ಅನುಭವಿಸುವಾಗ ಮತ್ತು ಗ್ರಹಿಸುವಾಗ ಕೇವಲ ನೋಡುವಿಕೆ, ಕೇವಲ ಕೇಳುವಿಕೆ, ಕೇವಲ ಅನುಭವಿಸುವಿಕೆ ಹಾಗು ಕೇವಲ ಗ್ರಹಿಸುವಿಕೆ ಇದ್ದಗ, ಆಗ ನೀನು ಅದರಲ್ಲಿರುವುದಿಲ್ಲ. ಯಾವಾಗ ನೀನು ಅದರಲ್ಲಿರುವುದಿಲ್ಲವೋ, ಆಗ ನೀನು ಅಲ್ಲಿರುವುದಿಲ್ಲ. ಆಗ ಮಾಲುಕ್ಯಪುತ್ತ ನೀನು ಇಲ್ಲಿಯೂ ಅಥವಾ ಅಲ್ಲಿಯೂ ಇರುವುದಿಲ್ಲ. ಅಥವಾ ಇವೆರಡರ ನಡುವೆಯೂ ಇರುವುದಿಲ್ಲ. ಇದೇ ದುಃಖದ ಅಂತ್ಯವಾಗಿದೆ.
ಭಂತೆ, ಭಗವಾನರ ಈ ಸಂಕ್ಷಿಪ್ತ ಧಮ್ಮವನ್ನು ವಿವರವಾಗಿ ಅರ್ಥ ಮಾಡಿಕೊಂಡಿರುವೆನು.
ರೂಪಗಳನ್ನು ಎಚ್ಚರಿಕೆ ಹೀನತೆಯಿಂದ ದಶರ್ಿಸಿದಾಗ, ಪ್ರಿಯವಾದ ನಿಮಿತ್ತವು (ಚಿಹ್ನೆ) ಮನಸ್ಸನ್ನು ಆಕ್ರಮಿಸುವುದು, ಚಿತ್ತದಲ್ಲಿ ಉದ್ರೇಕಗಳ ವೇದನೆಗಳು ಉಂಟಾಗುತ್ತವೆ. ಇದರಿಂದಾಗಿ ಅವುಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವನು.
ಹೀಗೆ ಅನೇಕ ರೂಪಗಳ ಬಗ್ಗೆ ಲೋಭಗಳು ಸಂಗ್ರಹವಾಗಿ, ದುಃಖಗಳು ಸಂಗ್ರಹಿಸವಾಗುವುದು. ಅಂತಹವನು ನಿಬ್ಬಾಣದಿಂದ ದೂರವಾಗಿರುತ್ತಾನೆ.
ಶಬ್ದಗಳನ್ನು ಎಚ್ಚರಿಕೆ ಹೀನತೆಯಿಂದ ಆಲಿಸಿದಾಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವದರ್ಿಸಿ, ಲೋಭಗಳು ಸಂಗ್ರಹವಾಗಿ, ದುಃಖಗಳು ಸಂಗ್ರಹಿತವಾಗುವುದು. ಅಂತಹವನು ನಿಬ್ಬಾಣದಿಂದ ದೂರವಾಗಿರುತ್ತಾನೆ.
ಗಂಧಗಳನ್ನು ಎಚ್ಚರಿಕೆ ಹೀನತೆಯಿಂದ ಆಘ್ರಾಣಿಸಿದಾಗ, ಪ್ರಿಯನಿಮಿತ್ತಗಳು ಮನಸ್ಸನ್ನು ಆಕ್ರಮಿಸುವುದು, ಅಸಂಖ್ಯಾತ ನಿಮಿತ್ತಗಳು ಹಾಗು ವೇದನೆಗಳು ಉತ್ಪನ್ನವಾಗಿ, ಲೋಭಗಳು ಸಂಗ್ರಹವಾಗಿ, ಪರಿಣಾಮವಾಗಿ ದುಃಖಗಳು ಸಂಗ್ರಹಿತವಾಗುವುದು. ಅಂತಹವರು ನಿಬ್ಬಾಣದಿಂದ ದೂರವೇ ಉಳಿಯುತ್ತಾರೆ.
ರಸಗಳನ್ನು (ಆಹಾರಗಳನ್ನ) ಎಚ್ಚರಿಕೆ ಹೀನತೆಯಿಂದ ಆಸ್ವಾದಿಸಿದಾಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ ವೇದನೆಗಳು ವಧರ್ಿಸಿ ಲೋಭಗಳು ಸಂಗ್ರಹವಾಗಿ ದುಃಖಗಳೂ ಸಹಾ ಸಂಗ್ರಹವಾಗುವುದು. ಅಂತಹವನು ನಿಬ್ಬಾಣದಿಂದ ದೂರವೇ ಉಳಿಯುತ್ತಾನೆ.
ಸಂಸ್ಪರ್ಶಗಳನ್ನು ಎಚ್ಚರಿಕೆ ಹೀನತೆಯಿಂದ ಅನುಭವಿಸಿದಾಗ, ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವಧರ್ಿಸಿ, ಲೋಭಗಳು ಸಂಗ್ರಹವಾಗುತ್ತವೆ. ಪರಿಣಾಮವಾಗಿ ದುಃಖಗಳು ಸಂಗ್ರಹವಾಗುವುದು. ಅಂತಹವನು ನಿಬ್ಬಾಣದಿಂದ ದೂರವೇ ಉಳಿಯುತ್ತಾನೆ.
ಮಾನಸಿಕ ವಿಷಯಗಳನ್ನು (ಧಮ್ಮಗಳನ್ನು) ಎಚ್ಚರಿಕೆ ಹೀನತೆಯಿಂದ ಗ್ರಹಿಸಿದಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವಧರ್ಿಸುವುವು. ಲೋಭಗಳು ಸಂಗ್ರಹವಾಗುತ್ತದೆ. ಪರಿಣಾಮವಾಗಿ ದುಃಖಗಳು ಸಂಗ್ರಹವಾಗುತ್ತದೆ. ಅಂತಹವರು ನಿಬ್ಬಾಣದಿಂದ ದೂರವೇ ಉಳಿಯುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ರೂಪಗಳನ್ನು ದಶರ್ಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಶಬ್ದಗಳನ್ನು ಆಲಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಗಂಧಗಳನ್ನು ಆಘ್ರಾಣಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಆಹಾರಗಳನ್ನು ಆಸ್ವಾದಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಸ್ಪರ್ಶಗಳನ್ನು ಅನುಭವಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಧಮ್ಮಗಳನ್ನು (ಮಾನಸಿಕ ವಿಷಯಗಳನ್ನು) ಗ್ರಹಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಭಂತೆ, ಭಗವಾನರ ಸಂಕ್ಷಿಪ್ತ ಬೋಧನೆಯ ವಿಸ್ತಾರತೆಯನ್ನು ನಾನು ಹೀಗೆ ಅರ್ಥಮಾಡಿಕೊಂಡಿರುವೆ.
ಸಾಧು, ಸಾಧು ಮಾಲುಕ್ಯಪುತ್ತ, ನನ್ನ ಸಂಕ್ಷಿಪ್ತ ಬೋಧನೆಯ ವಿಸ್ತಾರತೆ ಇದೇ ಆಗಿದೆ.
ರೂಪಗಳನ್ನು ಎಚ್ಚರಿಕೆ ಹೀನತೆಯಿಂದ ದಶರ್ಿಸಿದಾಗ, ಪ್ರಿಯವಾದ ನಿಮಿತ್ತವು (ಚಿಹ್ನೆ) ಮನಸ್ಸನ್ನು ಆಕ್ರಮಿಸುವುದು, ಚಿತ್ತದಲ್ಲಿ ಉದ್ರೇಕಗಳ ವೇದನೆಗಳು ಉಂಟಾಗುತ್ತವೆ. ಇದರಿಂದಾಗಿ ಅವುಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವನು.
ಹೀಗೆ ಅನೇಕ ರೂಪಗಳ ಬಗ್ಗೆ ಲೋಭಗಳು ಸಂಗ್ರಹವಾಗಿ, ದುಃಖಗಳು ಸಂಗ್ರಹಿಸವಾಗುವುದು. ಅಂತಹವನು ನಿಬ್ಬಾಣದಿಂದ ದೂರವಾಗಿರುತ್ತಾನೆ.
ಶಬ್ದಗಳನ್ನು ಎಚ್ಚರಿಕೆ ಹೀನತೆಯಿಂದ ಆಲಿಸಿದಾಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವದರ್ಿಸಿ, ಲೋಭಗಳು ಸಂಗ್ರಹವಾಗಿ, ದುಃಖಗಳು ಸಂಗ್ರಹಿತವಾಗುವುದು. ಅಂತಹವನು ನಿಬ್ಬಾಣದಿಂದ ದೂರವಾಗಿರುತ್ತಾನೆ.
ಗಂಧಗಳನ್ನು ಎಚ್ಚರಿಕೆ ಹೀನತೆಯಿಂದ ಆಘ್ರಾಣಿಸಿದಾಗ, ಪ್ರಿಯನಿಮಿತ್ತಗಳು ಮನಸ್ಸನ್ನು ಆಕ್ರಮಿಸುವುದು, ಅಸಂಖ್ಯಾತ ನಿಮ್ಮಿತ್ತಗಳು ಹಾಗು ವೇದನೆಗಳು ಉತ್ಪನ್ನವಗಿ, ಲೋಭಗಳು ಸಂಗ್ರಹವಾಗಿ, ಪರಿಣಾಮವಾಗಿ ದುಃಖಗಳು ಸಂಗ್ರಹಿತವಾಗುವುದು. ಅಂತಹವರು ನಿಬ್ಬಾಣದಿಂದ ದೂರವೇ ಉಳಿಯುತ್ತಾರೆ.
ರಸಗಳನ್ನು (ಆಹಾರಗಳನ್ನ) ಎಚ್ಚರಿಕೆ ಹೀನತೆಯಿಂದ ಆಸ್ವಾದಿಸಿದಾಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ ವೇದನೆಗಳು ವಧರ್ಿಸಿ ಲೋಭಗಳು ಸಂಗ್ರಹವಾಗಿ ದುಃಖಗಳೂ ಸಹಾ ಸಂಗ್ರಹವಾಗುವುದು. ಅಂತಹವನು ನಿಬ್ಬಾಣದಿಂದ ದೂರವೇ ಉಳಿಯುತ್ತಾನೆ.
ಸಂಸ್ಪರ್ಶಗಳನ್ನು ಎಚ್ಚರಿಕೆ ಹೀನತೆಯಿಂದ ಅನುಭವಿಸಿದಾಗ, ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವಧರ್ಿಸಿ, ಲೋಭಗಳು ಸಂಗ್ರಹವಾಗುತ್ತವೆ. ಪರಿಣಾಮವಾಗಿ ದುಃಖಗಳು ಸಂಗ್ರಹವಾಗುವುದು. ಅಂತಹವನು ನಿಬ್ಬಾಣದಿಂದ ದೂರವೇ ಉಳಿಯುತ್ತಾನೆ.
ಮಾನಸಿಕ ವಿಷಯಗಳನ್ನು (ಧಮ್ಮಗಳನ್ನು) ಎಚ್ಚರಿಕೆ ಹೀನತೆಯಿಂದ ಗ್ರಹಿಸಿದಗ ಪ್ರಿಯನಿಮಿತ್ತಗಳು ಚಿತ್ತವನ್ನು ಆಕ್ರಮಿಸಿ, ವೇದನೆಗಳು ವಧರ್ಿಸುವುವು. ಲೋಭಗಳು ಸಂಗ್ರಹವಾಗುತ್ತದೆ. ಪರಿಣಾಮವಾಗಿ ದುಃಖಗಳು ಸಂಗ್ರಹವಾಗುತ್ತದೆ. ಅಂತಹವರು ನಿಬ್ಬಾಣದಿಂದ ದೂರವೇ ಉಳಿಯುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ರೂಪಗಳನ್ನು ದಶರ್ಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಶಬ್ದಗಳನ್ನು ಆಲಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಗಂಧಗಳನ್ನು ಆಘ್ರಾಣಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಆಹಾರಗಳನ್ನು ಆಸ್ವಾದಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಸ್ಪರ್ಶಗಳನ್ನು ಅನುಭವಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಸ್ಮೃತಿಯಿಂದ ಯಥಾಭೂತವಾಗಿ ಧಮ್ಮಗಳನ್ನು (ಮಾನಸಿಕ ವಿಷಯಗಳನ್ನು) ಗ್ರಹಿಸಿದಾಗ ಒಬ್ಬನು ಉದ್ರೇಕಿತನಾಗುವುದಿಲ್ಲ. ಅಂತಹವನಲ್ಲಿ ವೇದನೆಗಳು ಕ್ಷೀಣಿಸುತ್ತವೆ. ಲೋಭವು ಇರಲಾರದು. ಪರಿಣಾಮವಾಗಿ ದುಃಖವೂ ಇಲ್ಲ, ಅಂತಹವು ನಿಬ್ಬಾಣಕ್ಕೆ ಹತ್ತಿರವಾಗಿರುತ್ತಾರೆ.
ಮಾಲುಕ್ಯಪುತ್ತ, ನನ್ನಿಂದ ಉಪದೇಶಿಸಲಾದ ಸಂಕ್ಷಿಪ್ತ ಉಪದೇಶಕ್ಕೆ ವಿಸ್ತಾರವಾದ ವಿವರಣೆಯನ್ನು ನೀನು ಅರಿತಿರುವೆ.
ಅದನ್ನು ಆಲಿಸಿದ ಆಯುಷ್ಮಂತ ಮಾಲುಕ್ಯಪುತ್ತನು ಆನಂದಿತನಾಗಿ ಎದ್ದು ಪುನಃ ವಂದಿಸಿ, ಪೂಜಿಸಿ, ಭಗವಾನರಿಗೆ ಪ್ರದಕ್ಷಿಣೆ ಅಪರ್ಿಸಿ ಅಲ್ಲಿಂದ ಹೊರಟನು.
ನಂತರ ಪೂಜ್ಯ ಮಾಲುಕ್ಯಪುತ್ತನು ಜನನಿಭಿಡತೆಯಿಂದ ದೂರಾಗಿ, ಏಕಾಂತತೆಯಲ್ಲಿ ವಾಸಿಸಿ, ಅಪ್ರಮತ್ತನಾಗಿ ಯಾವ ಉದ್ದೇಶಕ್ಕಾಗಿ ಕುಲಪುತ್ರರು ಗೃಹವನ್ನು ತೊರೆದು, ಶ್ರೇಷ್ಠ ಬ್ರಹ್ಮಚರ್ಯೆಯನ್ನು ಪಾಲಿಸುವರೋ, ಅಂತಹದನ್ನು ಪ್ರಾಪ್ತಿಮಾಡಿದನು. ನಂತರ ಜನ್ಮವು ನಾಶವಾಯಿತು, ಪವಿತ್ರವಾದ ಬ್ರಹ್ಮಚರ್ಯೆ ಪೂರ್ಣವಾಯಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇನ್ನಾವುದೇ ಇಚ್ಛೆ ಉಳಿದಿಲ್ಲ ಎಂದು ಅರಿತನು. ಮಾಲುಕ್ಯಪುತ್ತನು ಸಹಾ ಅರಹಂತರಲ್ಲಿ ಒಬ್ಬನಾದನು.

35.10.3. ಪರಿಹಾನ ಧಮ್ಮ ಸುತ್ತಂ (ಕ್ಷೀಣಿಸುವಿಕೆಯ ಧಮ್ಮ ಸುತ್ತ)

96. ಭಿಕ್ಷುಗಳೇ, ಪರಿಹಾನ ಧಮ್ಮವನ್ನು (ಕ್ಷೀಣಿಸುವಿಕೆ) ಉಪದೇಶಿಸುತ್ತಿದ್ದೇನೆ ಹಾಗು ಅಪರಿಹಾನ ಧಮ್ಮವನ್ನು (ವೃದ್ಧಿಸುವಿಕೆ) ಉಪದೇಶಿಸುತ್ತಿದ್ದೇನೆ ಹಾಗು ಆರು ಇಂದ್ರೀಯಗಳಲ್ಲಿ ಪ್ರಾವಿಣ್ಯತೆಯ ಬಗ್ಗೆಯು ಉಪದೇಶಿಸುತ್ತಿದ್ದೇನೆ ತಾವು ಆಲಿಸಿ. ಭಿಕ್ಷುಗಳೇ, ಯಾವುದು ಕ್ಷೀಣಿಸುವಿಕೆಯ ಧಮ್ಮ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಕಣ್ಣಿನಿಂದ ರೂಪವನ್ನು ನೋಡುತ್ತಾನೆ, ಆಗ ಆತನಲ್ಲಿ ಅಕುಶಲ ಪಾಪಯುತ ಮನಸ್ಥಿತಿಗಳು ಉಂಟಾಗುತ್ತವೆ. ಅಂತಹುದೆ ನೆನಪುಗಳು ಮರುಕಳಿಸುತ್ತದೆ ಮತ್ತು ಸಂಯೋಜನೆಗಳಿಗೆ ಸಂಪರ್ಕಗೊಳಿಸುವ ಇಚ್ಛೆಗಳು ಉಂಟಾಗುತ್ತವೆ. ಭಿಕ್ಷು ಏನಾದರೂ ಅವನ್ನು ಸಹಿಸಿಕೊಂಡರೆ, ಅವನ್ನು ವಜರ್ಿಸದಿದ್ದರೆ, ದೂರೀಕರಿಸದಿದ್ದರೆ, ಅವುಗಳ ಅಂತ್ಯಮಾಡದೆ ಹೋದರೆ, ಅವುಗಳನ್ನು ಅಳಿಸಿಹಾಕದಿದ್ದರೆ ಆತನು ಹೀಗೆ ಅರ್ಥಮಾಡಿಕೊಳ್ಳಬೇಕು. ನಾನು ಕುಶಲ ಸ್ಥಿತಿಗಳಿಂದ ಕ್ಷಯಿಸಿ ಹೋಗುತ್ತಿದ್ದೇನೆ. ಇದನ್ನೇ ಭಗವಾನರು ಕ್ಷಯಿಸುವಿಕೆ ಎನ್ನುವರು ಎಂದು. ಮತ್ತೆ ಭಿಕ್ಷುಗಳೇ, ಯಾವಾಗ ಭಿಕ್ಷುವು ಕಿವಿಯಿಂದ ಶಬ್ದವನ್ನು ಆಲಿಸಿದಾಗ... ಮೂಗಿನಿಂದ.... ಇದನ್ನೇ ಕ್ಷಯಿಸುವಿಕೆ ಎನ್ನುವರು.
ಭಿಕ್ಷುಗಳೇ, ಮತ್ತೆ ಭಿಕ್ಷುವು ಜಿಹ್ವೆಯಿಂದ ರಸಗಳನ್ನು ಆಸ್ವಾದಿಸುವಾಗ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಸಂಪಕರ್ಿಸುವಾಗ ಆತನಲ್ಲಿ ಅಕುಶಲವಾದ ಪಾಪಯುತ ಮನಸ್ಥಿತಿಗಳು ಉಂಟಾಗುತ್ತವೆ. ಅಂತಹುದೆ ನೆನಪುಗಳು ಮರುಕಳಿಸುತ್ತವೆ ಮತ್ತು ಸಂಯೋಜನೆಗಳಿಗೆ ಸಂಪರ್ಕಗೊಳಿಸುವ ಇಚ್ಛೆಗಳು ಉಂಟಾಗುತ್ತವೆ. ಭಿಕ್ಷು ಏನಾದರೂ ಅವನ್ನು ಸಹಿಸಿಕೊಂಡರೆ, ಅವನ್ನು ವಜರ್ಿಸದಿದ್ದರೆ, ದೂರೀಕರಿಸದಿದ್ದರೆ, ಅವುಗಳ ಅಂತ್ಯಮಾಡದೆ ಹೋದರೆ, ಅವುಗಳನ್ನು ಅಳಿಸಿಹಾಕದಿದ್ದರೆ ಆತನು ಹೀಗೆ ಅರ್ಥಮಾಡಿಕೊಳ್ಳಬೇಕು. ನಾನು ಕುಶಲ ಸ್ಥಿತಿಗಳಿಂದ ಕ್ಷಯಿಸಿ ಹೋಗುತ್ತಿದ್ದೇನೆ. ಇದನ್ನೇ ಭಗವಾನರು ಕ್ಷಯಿಸುವಿಕೆ (ಪರಿಹಾನ) ಎನ್ನುವರು ಎಂದು. ಭಿಕ್ಷುಗಳೇ, ಈ ರೀತಿಯಾಗಿ ಒಬ್ಬನು ಕ್ಷಯಿಸುವಿಕೆಗೆ ಗುರಿಯಾಗುತ್ತಾನೆ.
ಭಿಕ್ಷುಗಳೇ, ಯಾವುದು ಅಪರಿಹಾನ ಧಮ್ಮ (ಅಕ್ಷಯಿಸುವಿಕೆ) ಇಲ್ಲಿ ಭಿಕ್ಷುಗಳೇ, ಭಿಕ್ಷುವು ಕಣ್ಣಿನಿಂದ ರೂಪಗಳನ್ನು ನೋಡುತ್ತಾನೆ. ಆಗ ಆತನಲ್ಲಿ ಅಕುಶಲವಾದ ಪಾಪಯುತ ಮನಸ್ಥಿತಿಗಳು, ನೆನಪುಗಳು, ಪಾಪ ಇಚ್ಚೆಗಳು, ಸಂಯೋಜಕಾರಿ ಯೋಚನೆಗಳು ಉಂಟಾಗಬಹುದು. ಆದರೆ ಭಿಕ್ಷುವು ಅವನ್ನು ಸಹಿಸುವುದಿಲ್ಲ. ವಜರ್ಿಸುತ್ತಾನೆ, ದೂರೀಕರಿಸುತ್ತಾನೆ, ಅವುಗಳ ಅಂತ್ಯಮಾಡುತ್ತಾನೆ, ಅಳಿಸಿಹಾಕುತ್ತಾನೆ. ಆಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ನಾನು ಕುಶಲ ಚಿತ್ತಗಳಿಂದ ಕುಶಲ ಸ್ಥಿತಿಗಳಿಂದ ಕ್ಷಯಿಸಿ ಹೋಗುತ್ತಿಲ್ಲ. ಇದನ್ನೇ ಭಗವಾನರು ಅಪರಿಹಾನ (ಅಕ್ಷಯಿಸುವಿಕೆ) ಎನ್ನುವರು. ಮತ್ತೆ ಭಿಕ್ಷುಗಳೇ, ಭಿಕ್ಷುವು ಕಿವಿಯಿಂದ ಶಬ್ದಗಳನ್ನು... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು (ಧಮ್ಮ) ಆತನಲ್ಲಿ ಅಕುಶಲವಾದ... ವಜರ್ಿಸುತ್ತಾನೆ... ದೂರೀಕರಿಸುತ್ತಾನೆ... ನಾನು ಕುಶಲ ಚಿತ್ತಗಳಿಂದ (ಸ್ಥಿತಿಗಳಿಂದ) ಕ್ಷಯಿಸಿಹೋಗುತ್ತಿಲ್ಲ ಎಂದು ಅರ್ಥಮಾಡಿಕೊಳ್ಳುತ್ತಾನೆ... ಇದನ್ನೇ ಭಗವಾನರು ಅಪರಿಹಾನ ಧಮ್ಮ ಎನ್ನುತ್ತಾರೆ.
ಭಿಕ್ಷುಗಳೇ, ಮತ್ತೆ ಆರು ಇಂದ್ರಿಯಗಳಲ್ಲಿ ಕ್ಷೇತ್ರ ಪ್ರಾವಿಣ್ಯತೆ ಹೇಗೆ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಕ್ಷುವಿನಿಂದ ರೂಪಗಳನ್ನು ನೋಡಿದಾಗಲೂ ಆತನಲ್ಲಿ ಅಕುಶಲ ಚಿತ್ತಗಳು ಉದಯಿಸಲಾರವು. ಅದಕ್ಕೆ ಸಂಬಂಧಪಟ್ಟಂತಹ ಯಾವುದೇ ನೆನಪುಗಳು, ಸಂಯೋಜನಕಾರಿ ಇಚ್ಛೆಗಳು ಉಂಟಾಗಲಾರವು. ಆಗ ಭಿಕ್ಷುವು ಹೀಗೆ ಅರ್ಥಮಾಡಿಕೊಳ್ಳುತ್ತಾನೆ, ಇಂದ್ರೀಯ ಆಧಾರಗಳು ಪ್ರಾವಿಣ್ಯತೆಯನ್ನು ಪಡೆದಿವೆ, ಇವನ್ನೇ ಚಕ್ಷು ಇಂದ್ರೀಯ ಕ್ಷೇತ್ರದಲ್ಲಿ ಪ್ರಾವಿಣ್ಯತೆ ಎಂದು ಭಗವಾನರು ಹೇಳುವರು. ಇದೇರೀತಿಯಾಗಿ ಭಿಕ್ಷುವು ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳು ಸಂಪರ್ಕವಾದಾಗಲೂ ಆತನಲ್ಲಿ ಅಕುಶಲ ಚಿತ್ತಗಳು ಉದಯಿಸಲಾರವು. ಅದಕ್ಕೆ ಸಂಬಂಧಪಟ್ಟಂತಹ ಯಾವುದೇ ನೆನಪುಗಳು, ಸಂಯೋಜನಕಾರಿ ಇಚ್ಛೆಗಳು ಉಂಟಾಗಲಾರವು. ಆಗ ಭಿಕ್ಷುವು ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ಈ ಇಂದ್ರೀಯ ಕ್ಷೇತ್ರವು ಪ್ರಾವಿಣ್ಯತೆ ಗಳಿಸಿದೆ. ಹೀಗೆಂದು ಭಗವಾನರು ನುಡಿದಿದ್ದರೆ. ಇದೇ ಭಿಕ್ಷುಗಳೇ, ಆರು ಇಂದ್ರೀಯಗಳ ಪ್ರಾವಿಣ್ಯತೆಯಾಗಿದೆ.

35.10.4. ಪಮಾದ ವಿಹಾರಿ ಸುತ್ತಂ (ಪ್ರಮಾದ ವಿಹಾರಿ ಸುತ್ತ)

97. ಭಿಕ್ಷುಗಳೇ, ಪ್ರಮಾದ ವಿಹಾರಿಯ ಬಗ್ಗೆ (ನಿರ್ಲಕ್ಷದಿಂದ ವಾಸಿಸುವವನ ಬಗ್ಗೆ) ಹಾಗು ಅಪ್ರಮಾದ ವಿಹಾರಿಯ ಬಗ್ಗೆ ಬೋಧಿಸುತ್ತೇನೆ. ತಾವೆಲ್ಲರೂ ಆಲಿಸಿರಿ, ಮತ್ತೆ ಹೇಗೆ ಭಿಕ್ಷುಗಳೇ, ಒಬ್ಬನು ಪ್ರಮಾದವಾಗಿ (ನಿರ್ಲಕ್ಷವಾಗಿ) ಹೇಗೆ ಜೀವಿಸುತ್ತಿರುವನು? ಇಲ್ಲಿ ಆತನು ಕಣ್ಣನ್ನು ನಿಯಂತ್ರದಲ್ಲಿರಿಸುವುದಿಲ್ಲ. ಆಗ ಚಕ್ಷುವಿಞ್ಞಾನದ ಮೂಲಕವಾಗಿ ಆತನ ಚಿತ್ತವು ರೂಪಗಳಿಂದ ಕಲುಷಿತವಾಗುತ್ತದೆ. ಹೀಗೆ ಕಲುಶಿತಗೊಂಡ ಚಿತ್ತವು ಪ್ರಮೋದ (ಸಂತೋಷ) ಪಡುವುದಿಲ್ಲ. ಪ್ರಮೋದವಿಲ್ಲದ್ದರಿಂದಾಗಿ ಪ್ರೀತಿ (ಆನಂದ)ವು ಉಂಟಾಗುವುದಿಲ್ಲ. ಆನಂದಿವಿಲ್ಲದೆ ಪಸ್ಸದ್ಧಿ (ಪ್ರಶಾಂತತೆ) ಉದಯಿಸುವುದಿಲ್ಲ. ಪ್ರಶಾಂತತೆಯ ಅಭಾವದಿಂದ ದುಃಖವು ಉಂಟಾಗುತ್ತದೆ. ದುಃಖದಲ್ಲಿರುವ ಚಿತ್ತವು ಸಮಾಧಿಯಲ್ಲಿರುವುದಿಲ್ಲ. ಈ ರೀತಿಯಾಗಿ ಸಮಾಹಿತವಲ್ಲದ ಚಿತ್ತದಲ್ಲಿ ಧಮ್ಮ (ಸತ್ಯ) ಗೋಚರವಾಗುವುದಿಲ್ಲ. ಹೀಗೆ ಆತನು ನಿರ್ಲಕ್ಷನಾಗಿ (ಪ್ರಮಾದದಿಂದ) ಜೀವಿಸುತ್ತಾನೆ. ಅದೇರೀತಿ ಇಲ್ಲಿ ಒಬ್ಬನು ಕಿವಿಯಲ್ಲಿ ಅಸಂಯಮಿಯಾಗಿರುತ್ತಾನೆ... ಮೂಗಿನಲ್ಲಿ ಅಸಂಯಮಿಯಾಗಿರುತ್ತಾನೆ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಅಸಂಯಮಿಯಾಗಿರುತ್ತಾನೆ. ಆತನ ಚಿತ್ತವು ಧಮ್ಮದಿಂದ (ಮಾನಸಿಕ ವಿಷಯಗಳಿಂದ) ಕಲುಶಿತವಾಗುತ್ತದೆ. ಹೀಗೆ ಕಲುಶಿತಗೊಂಡ ಚಿತ್ತವು ಪ್ರಮೋದ ತಾಳುವುದಿಲ್ಲ. ಪ್ರಮೋದವಿಲ್ಲದಿದ್ದರಿಂದಾಗಿ ಆನಂದಪಡುವುದಿಲ್ಲ. ಆನಂದವಿಲ್ಲದೆ ಪ್ರಶಾಂತತೆ ಉಂಟಾಗುವುದಿಲ್ಲ. ಪ್ರಶಾಂತತೆಯ ಅಭಾವದಿಂದಾಗಿ ದುಃಖವಿರುತ್ತದೆ. ದುಃಖದಲ್ಲಿರುವ ಚಿತ್ತವು ಸಮಾಧಿಯಲ್ಲಿರುವುದಿಲ್ಲ. ಹೀಗೆ ಸಮಾಹಿತವಲ್ಲದ ಚಿತ್ತಕ್ಕೆ ಸತ್ಯ ಗೋಚರವಾಗದು. ಹೀಗೆ ಆತನು ನಿರ್ಲಕ್ಷನಾಗಿ ಜೀವಿಸುವವನಾಗುತ್ತಾನೆ.
ಭಿಕ್ಷುಗಳೇ, ಮತ್ತೆ ಹೇಗೆ ಒಬ್ಬನು ಅಪ್ರಮತ್ತನಾಗಿ (ಜಾಗರೂಕನಾಗಿ) ಜೀವಿಸುತ್ತಾನೆ (ವಿಹರಿಸುತ್ತಾನೆ). ಇಲ್ಲಿ ಒಬ್ಬನು ಚಕ್ಷುವಿನಲ್ಲಿ ಸಂಯಮಿತನಾಗಿರುತ್ತಾನೆ. ಹೀಗಾಗಿ ಚಕ್ಷುವಿಞ್ಞಾನದ ಮೂಲಕವಾಗಿ ರೂಪಗಳನ್ನು ಕಂಡು ಕಲುಶಿತನಾಗುವುದಿಲ್ಲ. ಹೀಗೆ ಕಲುಷಿತವಲ್ಲದ ಚಿತ್ತವು ಪ್ರಮೋದವನ್ನು ತಾಳುತ್ತದೆ. ಪ್ರಮೋದದಿಂದಾಗಿ ಆನಂದವು ಉದಯಿಸುವುದು. ಆನಂದಯುತ ಚಿತ್ತದಿಂದ ಪ್ರಶಾಂತತೆಯು ಆತನ ಕಾಯದಲ್ಲಿ ನೆಲೆಸುತ್ತದೆ. ಈ ಬಗೆಯ ಕಾಯ ಪ್ರಶಾಂತತೆಯಿಂದ ಸುಖವು ಉದಯಿಸುತ್ತದೆ. ಸುಖದಿಂದ ಆವೃತವಾದ ಚಿತ್ತ ಸಮಾಧಿಯನ್ನು ಪಡೆಯುತ್ತದೆ. ಹೀಗೆ ಸಮಾಹಿತವಾದ ಚಿತ್ತವು ಧಮ್ಮವನ್ನು ದಶರ್ಿಸುತ್ತದೆ. ಹೀಗೆ ಧಮ್ಮವನ್ನು ದಶರ್ಿಸಿಕೊಂಡವ ಅಪ್ರಮತ್ತ ವಿಹಾರಿ (ಜಾಗರೂಕತೆಯಲ್ಲಿ ವಾಸಿಸುವ) ಎಂದು ಕರೆಯಲ್ಪಡುತ್ತಾನೆ. ಮತ್ತೆ ಭಿಕ್ಷುಗಳೇ, ಇಲ್ಲಿ ಒಬ್ಬನು ಕಿವಿಯಲ್ಲಿ ಸಂಯಮಿತನಾಗುತ್ತಾನೆ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಸಂಯಮಿತನಾಗುತ್ತಾನೆ. ಹೀಗಾಗಿ ಮನೋವಿಞ್ಞಾನದ ಮೂಲಕವಾಗಿ ಮಾನಸಿಕ ವಿಷಯಗಳನ್ನು ಸಂಪಕರ್ಿಸಿದಾಗ ಆತನ ಚಿತ್ತವು ಕಲುಶಿತವಾಗುವುದಿಲ್ಲ. ಹೀಗೆ ಕಲುಶಿತವಲ್ಲದ ಚಿತ್ತವು ಪ್ರಮೋದನವನ್ನು ತಾಳುತ್ತದೆ. ಪ್ರಮೋದದಿಂದ ಆನಂದವು, ಆನಂದದಿಂದ ಕಾಯ ಪ್ರಶಾಂತತೆಯು, ಕಾಯ ಪ್ರಶಾಂತತೆಯಿಂದ ಸುಖವು ಆವೃತವಾಗುತ್ತದೆ. ಸುಖದಿಂದ ಆವೃತವಾದ ಚಿತ್ತವು ಸಮಾಧಿಯನ್ನು ಹೊಂದುತ್ತದೆ. ಹೀಗೆ ಸಮಾಹಿತವಾದ ಚಿತ್ತ ಧಮ್ಮವನ್ನು ದಶರ್ಿಸುತ್ತದೆ. ಹೀಗೆ ಧಮ್ಮವನ್ನು ದಶರ್ಿಸಿಕೊಂಡವ ಅಪ್ರಮತ್ತ ವಿಹಾರಿ ಎಂದು ಕರೆಯಲ್ಪಡುತ್ತಾನೆ.


35.10.5. ಸಂವರ ಸುತ್ತಂ (ಸಂಯಮ ಸುತ್ತ)

98. ಭಿಕ್ಷುಗಳೇ, ಸಂಯಮದ ಬಗ್ಗೆ ಹಾಗೂ ಅಸಂಯಮದ ಬಗ್ಗೆ ಉಪದೇಶಿಸುತ್ತಿದ್ದೇನೆ, ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಭಿಕ್ಷುಗಳೇ, ಯಾವರೀತಿ ಅಸಂಯಮಿ ಆಗುತ್ತಾನೆ? ಭಿಕ್ಷುಗಳೇ, ಚಕ್ಷುವಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷ ನೀಡುವಂತಹವು. ಇದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದವನ್ನು ಹುಡುಕಿದರೆ, ಸ್ವಾಗತಿಸಿದರೆ, ಅವಕ್ಕೆ ಅಂಟಿಕೊಂಡರೆ, ಆಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ: ನಾನು ಕುಶಲ ಸ್ಥಿತಿಗಳಿಂದ ಶಿಥಿಲವಾಗುತ್ತಿದ್ದೇನೆ, ಇದನ್ನು ಹೀಗೆ ಭಗವಾನರು ಸಹಾ ಹೇಳಿರುವರು.
ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಲ್ಲಂತಹ ಶಬ್ದಗಳಿರುತ್ತವೆ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಲ್ಲಂತಹ ಧಮ್ಮವಾಗಿರುತ್ತದೆ (ಮಾನಸಿಕ ವಿಷಯಗಳು). ಅವು ಆಸೆ ಹುಟ್ಟುಸುವಂತಹುದು, ಪ್ರಿಯವಾದವು, ಒಪ್ಪುವಂತಹವು, ಸಂತೋಷ ನೀಡುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದವನ್ನು ಹುಡುಕಿದರೆ, ಸ್ವಾಗತಿಸಿದರೆ, ಅವಕ್ಕೆ ಅಂಟಿಕೊಂಡರೆ ಆಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ: ನಾನು ಕುಶಲ ಸ್ಥಿತಿಗಳಿಂದ ಶಿಥಿಲವಾಗುತ್ತಿದ್ದೇನೆ, ಭಗವಾನರು ಹೀಗೆಯೇ ನುಡಿದಿದ್ದಾರೆ. ಹೀಗೆ ಭಿಕ್ಷುಗಳೇ, ಅಸಂಯಮಿಯಾಗುತ್ತಾನೆ.
ಮತ್ತೆ ಭಿಕ್ಷುಗಳೇ, ಹೇಗೆ ಸಂಯಮಿ ಆಗಿರುತ್ತಾನೆ? ಭಿಕ್ಷುಗಳೇ, ಇಲ್ಲಿ ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿರುತ್ತವೆ, ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತದೆ. ಭಿಕ್ಷುವು ಅವುಗಳಲ್ಲಿ ಆನಂದವನ್ನು ಹುಡುಕದಿದ್ದರೆ, ಸ್ವಾಗತಿಸದಿದ್ದರೆ, ಅಂಟಿಕೊಳ್ಳದಿದ್ದರೆ ಆತನು ಹೀಗೆ ಅರ್ಥಮಾಡಿಕೊಳ್ಳಬೇಕು: ನಾನು ಕುಶಲ ಸ್ಥಿತಿಗಳಿಂದ ಶಿಥಿಲವಾಗುತ್ತಿಲ್ಲ, ಹೀಗೆ ಇದು ಭಗವಾನರಿಂದಲೂ ಹೇಳಲ್ಪಟ್ಟಿದೆ. ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಹುದಾದಂತಹ ಶಬ್ದಗಳಿವೆ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಮಾನಸಿಕ ವಿಷಯಗಳಿರುತ್ತದೆ. ಅವು ಆಸೆಯನ್ನು ಹುಟ್ಟಿಸುವಂತಹುದು. ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭವನಕಾರಿಯು ಆಗಿರುತ್ತದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದ ಹುಡುಕದಿದ್ದರೆ ಅವನ್ನು ಸ್ವಾಗತಿಸದಿದ್ದರೆ, ಅವಕ್ಕೆ ಅಂಟದಿದ್ದರೆ, ಆತನು ಹೀಗೆ ಅವನ್ನು ಅರ್ಥಮಾಡಿಕೊಳ್ಳಬೇಕು. ನಾನು ಕುಶಲ ಸ್ಥಿತಿಗಳಿಂದ ಶಿಥಿಲವಾಗುತ್ತಿಲ್ಲ. ಹೀಗೆಂದು ಭಗವಾನರಿಂದ ಘೋಷಿಸಲ್ಪಟ್ಟಿದೆ. ಭಿಕ್ಷುಗಳೇ, ಹೀಗೆ ಸಂಯಮವು ಇರುತ್ತದೆ.

35.10.6. ಸಮಾಧಿ ಸುತ್ತಂ (ಸಮಾಧಿ ಸುತ್ತ)

99. ಭಿಕ್ಷುಗಳೇ, ಸಮಾಧಿಯನ್ನು ಅಭಿವೃದ್ಧಿಗೊಳಿಸಿರಿ. ಯಾವ ಭಿಕ್ಷುವು ಸಮಾಹಿತನಾಗಿರುತ್ತಾನೋ ಅಂತಹವನು ಯಥಾಭೂತವಾಗಿ ಅರಿಯುವಂತಹವನು ಆಗಿರುತ್ತಾನೆ. ಭಿಕ್ಷುಗಳೇ, ಯಾವುದನ್ನು ಆತನು ಯಥಾಭೂತವಾಗಿ ಅರಿಯುತ್ತಾನೆ? ಆತನು ಚಕ್ಷುವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ, ಆತನು ರೂಪಗಳನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷುವಿಞ್ಞಾನವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷುಸಂಸ್ಪರ್ಶವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷು ಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿಯುತ್ತಾನೆ.... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಧಮ್ಮಗಳನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಮನೋಸಂಸ್ಪರ್ಶವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿಯುತ್ತಾನೆ. ಆದ್ದರಿಂದ ಸಮಾಧಿಯನ್ನು ಅಭಿವೃದ್ಧಿಗೊಳಿಸಿ ಭಿಕ್ಷುಗಳೇ, ಸಮಾಹಿತವಾದ ಚಿತ್ತವನ್ನು ಯಥಾಭೂತವಾಗಿ ಅರಿಯುತ್ತದೆ.


35.10.7. ಪಟಿಸಲ್ಲಾನ ಸುತ್ತಂ (ಏಕಾಂತತೆಯ ಸೂತ್ರ)

100. ಏಕಾಂತತೆಯಲ್ಲಿ ತೊಡಗಿ ಶ್ರಮಿಸಿರಿ ಭಿಕ್ಷುಗಳೇ, ಏಕೆಂದರೆ ಏಕಾಂತತೆಯಲ್ಲಿ ತೊಡಗಿದ ಭಿಕ್ಷುವು ವಿಷಯಗಳನ್ನು ಯಥಾಭೂತವಾಗಿ ಅರಿಯುತ್ತಾನೆ... ಭಿಕ್ಷುಗಳೇ, ಯಾವುದನ್ನು ಆತನು ಯಥಾಭೂತವಾಗಿ ಅರಿಯುತ್ತಾನೆ? ಆತನು ಚಕ್ಷುವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ, ಆತನು ರೂಪಗಳನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷುವಿಞ್ಞಾನವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷುಸಂಸ್ಪರ್ಶವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಚಕ್ಷು ಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿಯುತ್ತಾನೆ.... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಧಮ್ಮಗಳನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಮನೋಸಂಸ್ಪರ್ಶವನ್ನು ಅನಿತ್ಯವೆಂದು ಯಥಾಭೂತವಾಗಿ ಅರಿಯುತ್ತಾನೆ. ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ಅರಿಯುತ್ತಾನೆ. ಆದ್ದರಿಂದ ಏಕಾಂತತೆಯನ್ನು ಅಭ್ಯಸಿಸಿ ಭಿಕ್ಷುಗಳೇ, ಏಕಾಂತತೆಯ ಚಿತ್ತವು ಯಥಾಭೂತವಾಗಿ ಅರಿಯುತ್ತದೆ.

35.10.8. ಪಠಮ ನ ತುಮ್ಹಾಕಂ ಸುತ್ತಂ (ಪ್ರಥಮ ನಿಮ್ಮದಲ್ಲದ ಸುತ್ತ)

101. ಭಿಕ್ಷುಗಳೇ, ಯಾವುದೆಲ್ಲವೂ ನಿಮ್ಮದಲ್ಲವೋ ಅವನ್ನು ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ, ಆಗ ನಿಮಗೆ ಭವಿಷ್ಯದಲ್ಲಿ ಹಿತವು ಸುಖವು ಲಭಿಸುತ್ತದೆ. ಮತ್ತೆ ಭಿಕ್ಷುಗಳೇ, ಯಾವುವು ನಿಮ್ಮದಲ್ಲ? ಈ ಚಕ್ಷುಗಳು ನಿಮ್ಮವಲ್ಲ ವಜರ್ಿಸಿರಿ. ಈ ರೂಪಗಳೂ ನಿಮ್ಮದಲ್ಲ ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ ಆಗ ನಿಮಗೆ ಹಿತವೂ ಸುಖವೂ ಲಭಿಸುತ್ತದೆ. ಹಾಗೆಯೇ ಚಕ್ಷುವಿಞ್ಞಾಣ ನಿಮ್ಮದಲ್ಲ ವಜರ್ಿಸಿರಿ... ಚಕ್ಷುಸಂಸ್ಪರ್ಶ... ಚಕ್ಷುಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ನಿಮ್ಮದಲ್ಲ ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ ಅಗ ಹಿತವೂ ಸುಖವೂ ಉಂಟಾಗುತ್ತದೆ. ಕಿವಿಯು ನಿಮ್ಮದಲ್ಲ ವಜರ್ಿಸಿರಿ... ಮೂಗು ನಿಮ್ಮದಲ್ಲ ವಜರ್ಿಸಿರಿ... ಮೂಗಿನ ಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ನಿಮ್ಮದಲ್ಲ ವಜಿಸಿರಿ. ಯಾವಾಗ ನೀವು ವಜರ್ಿಸುವಿರೋ ಆಗ ದೀರ್ಘಕಾಲ ಹಿತವೂ ಸುಖವೂ ಲಭಿಸುತ್ತದೆ.
ಜಿಹ್ವೆ ನಿಮ್ಮದಲ್ಲ, ಅದನ್ನು ತೊರೆಯಿರಿ, ಅದನ್ನು ತೊರೆದಾಗ ಹಿತವೂ ಸುಖವೂ ಲಭಿಸುತ್ತದೆ. ರಸಗಳು ನಿಮ್ಮದಲ್ಲ ಅವನ್ನು ತೊರೆಯಿರಿ. ಅವನ್ನು ತೊರೆದಾಗ ಹಿತವೂ ಸುಖವೂ ಲಭಿಸುತ್ತದೆ... ಜಿಹ್ವಾವಿಞ್ಞಾವು ನಿಮ್ಮದಲ್ಲ ತೊರೆಯಿರಿ... ಜಿಹ್ವಾಸಂಸ್ಪರ್ಶವು ನಿಮ್ಮದಲ್ಲ... ಜಿಹ್ವಾಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಸುಖ, ದುಃಖ ಹಾಗು ತಟಸ್ಥ ವೇದನೆಗಳು ನಿಮ್ಮದಲ್ಲ ತೊರೆಯಿರಿ. ಯಾವಾಗ ನೀವು ತೊರೆಯುವಿರೋ ಆಗ ಹಿತವೂ ಸುಖವೂ ಲಭಿಸುವುದು. ದೇಹವೂ ನಿಮ್ಮದಲ್ಲ... ವೇದನೆಗಳು ನಿಮ್ಮದಲ್ಲ... ಯಾವಾಗ ನೀವು ತೊರೆಯುವಿರೊ ಆಗ ಹಿತವೂ ಸುಖವೂ ಲಭಿಸುವುದು. ಈ ಮನಸ್ಸು ನಿಮ್ಮದಲ್ಲ, ಅವನ್ನು ವಜರ್ಿಸಿರಿ. ಹೀಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು. ಈ ಧಮ್ಮಗಳು (ಮನೋ ವಿಷಯಗಳು) ನಿಮ್ಮದಲ್ಲ... ಮನೋವಿಞ್ಞಾಣ... ಮನೋಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ನಿಮ್ಮದಲ್ಲ ಅವನ್ನು ವಜರ್ಿಸಿರಿ. ಹೀಗೆ ವಜರ್ಿಸಿದಾಗ ಸುಖವೂ ಹಿತವೂ ಲಭಿಸುತ್ತದೆ.
ಭಿಕ್ಷುಗಳೇ, ಜನರು ಹುಲ್ಲನ್ನು, ಕಟ್ಟಿಗೆಗಳನ್ನು, ಕೊಂಬೆಗಳನ್ನು ಹಾಗು ಎಲೆ ಗೊಂಚಲುಗಳನ್ನು ಜೇತವನದ ಮೂಲೆಯಲ್ಲಿಟ್ಟು ಸುಟ್ಟುಹಾಕಿದರೆ ಅಥವಾ ಅವರ ಇಷ್ಟಬಂದಹಾಗೆ ಮಾಡತೊಡಗಿದರೆ ನೀವು ಈ ರೀತಿ ಯೋಚಿಸುವಿರಾ? ಜನರು ನಮ್ಮನ್ನು ಎತ್ತಿಕೊಂಡು ಹೋಗುತ್ತಿದ್ದಾರೆ, ನಮ್ಮನ್ನು ದಹಿಸುತ್ತಿದ್ದಾರೆ, ನಮ್ಮನ್ನು ಇಷ್ಟಬಂದಹಾಗೆ ಮಾಡುತ್ತಿದ್ದಾರೆ.
ಇಲ್ಲ ಭಂತೆ.
ಯಾವ ಕಾರಣಕ್ಕಾಗಿ?
ಏಕೆಂದರೆ ಅಲ್ಲಿ ಆತ್ಮವಾಗಲಿ (ತಾನಾಗಲಿ) ಅಥವಾ ಆತ್ಮಕ್ಕೆ ಸೇರಿದ್ದಾಗಲಿ (ತನ್ನದಾಗಲಿ) ಇಲ್ಲ.
ಅದೇರೀತಿಯಾಗಿ ಭಿಕ್ಷುಗಳೇ, ಚಕ್ಷುವು ನಿಮ್ಮದಲ್ಲ ವಜರ್ಿಸಿರಿ. ಹಾಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು. ರೂಪವು ನಿಮ್ಮದಲ್ಲ... ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳು ನಿಮ್ಮದಲ್ಲ, ಅವನ್ನೆಲ್ಲಾ ವಜರ್ಿಸಿರಿ. ಹೀಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು.


35.10.9. ದುತಿಯಾ ನ ತುಮ್ಹಾಕಂ ಸುತ್ತಂ (ದ್ವಿತೀಯ ನಿಮ್ಮದಲ್ಲದ ಸುತ್ತ)

102. ಭಿಕ್ಷುಗಳೇ, ಯಾವುದೆಲ್ಲವೂ ನಿಮ್ಮದಲ್ಲವೋ ಅವನ್ನು ದಶರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ, ಆಗ ನಿಮಗೆ ಭವಿಷ್ಯದಲ್ಲಿ ಹಿತವು ಸುಖವು ಲಭಿಸುತ್ತದೆ. ಮತ್ತೆ ಭಿಕ್ಷುಗಳೇ, ಯಾವುವು ನಿಮ್ಮದಲ್ಲ? ಈ ಚಕ್ಷುಗಳು ನಿಮ್ಮವಲ್ಲ ವಜರ್ಿಸಿರಿ. ಈ ರೂಪಗಳೂ ನಿಮ್ಮದಲ್ಲ ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ ಆಗ ನಿಮಗೆ ಹಿತವೂ ಸುಖವೂ ಲಭಿಸುತ್ತದೆ. ಹಾಗೆಯೇ ಚಕ್ಷುವಿಞ್ಞಾಣ ನಿಮ್ಮದಲ್ಲ ವಜರ್ಿಸಿರಿ... ಚಕ್ಷುಸಂಸ್ಪರ್ಶ... ಚಕ್ಷುಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ನಿಮ್ಮದಲ್ಲ ವಜರ್ಿಸಿರಿ. ಯಾವಾಗ ನೀವು ವಜರ್ಿಸುವಿರೋ ಅಗ ಹಿತವೂ ಸುಖವೂ ಉಂಟಾಗುತ್ತದೆ. ಕಿವಿಯು ನಿಮ್ಮದಲ್ಲ ವಜರ್ಿಸಿರಿ... ಮೂಗು ನಿಮ್ಮದಲ್ಲ ವಜರ್ಿಸಿರಿ... ಮೂಗಿನ ಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳು ನಿಮ್ಮದಲ್ಲ ವಜಿಸಿರಿ. ಯಾವಾಗ ನೀವು ವಜರ್ಿಸುವಿರೋ ಆಗ ದೀರ್ಘಕಾಲ ಹಿತವೂ ಸುಖವೂ ಲಭಿಸುತ್ತದೆ. ಜಿಹ್ವೆ ನಿಮ್ಮದಲ್ಲ, ಅದನ್ನು ತೊರೆಯಿರಿ, ಅದನ್ನು ತೊರೆದಾಗ ಹಿತವೂ ಸುಖವೂ ಲಭಿಸುತ್ತದೆ. ರಸಗಳು ನಿಮ್ಮದಲ್ಲ ಅವನ್ನು ತೊರೆಯಿರಿ. ಅವನ್ನು ತೊರೆದಾಗ ಹಿತವೂ ಸುಖವೂ ಲಭಿಸುತ್ತದೆ... ಜಿಹ್ವಾವಿಞ್ಞಾವು ನಿಮ್ಮದಲ್ಲ ತೊರೆಯಿರಿ... ಜಿಹ್ವಾಸಂಸ್ಪರ್ಶವು ನಿಮ್ಮದಲ್ಲ... ಜಿಹ್ವಾಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಸುಖ, ದುಃಖ ಹಾಗು ತಟಸ್ಥ ವೇದನೆಗಳು ನಿಮ್ಮದಲ್ಲ ತೊರೆಯಿರಿ. ಯಾವಾಗ ನೀವು ತೊರೆಯುವಿರೋ ಆಗ ಹಿತವೂ ಸುಖವೂ ಲಭಿಸುವುದು. ದೇಹವೂ ನಿಮ್ಮದಲ್ಲ... ವೇದನೆಗಳು ನಿಮ್ಮದಲ್ಲ... ಯಾವಾಗ ನೀವು ತೊರೆಯುವಿರೊ ಆಗ ಹಿತವೂ ಸುಖವೂ ಲಭಿಸುವುದು. ಈ ಮನಸ್ಸು ನಿಮ್ಮದಲ್ಲ, ಅವನ್ನು ವಜರ್ಿಸಿರಿ. ಹೀಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು. ಈ ಧಮ್ಮಗಳು (ಮನೋ ವಿಷಯಗಳು) ನಿಮ್ಮದಲ್ಲ... ಮನೋವಿಞ್ಞಾಣ... ಮನೋಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ನಿಮ್ಮದಲ್ಲ ಅವನ್ನು ವಜರ್ಿಸಿರಿ. ಹೀಗೆ ವಜರ್ಿಸಿದಾಗ ಸುಖವೂ ಹಿತವೂ ಲಭಿಸುತ್ತದೆ. ಅದೇರೀತಿಯಾಗಿ ಭಿಕ್ಷುಗಳೇ, ಚಕ್ಷುವು ನಿಮ್ಮದಲ್ಲ ವಜರ್ಿಸಿರಿ. ಹಾಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು. ರೂಪವು ನಿಮ್ಮದಲ್ಲ... ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳು ನಿಮ್ಮದಲ್ಲ, ಅವನ್ನೆಲ್ಲಾ ವಜರ್ಿಸಿರಿ. ಹೀಗೆ ವಜರ್ಿಸಿದಾಗ ಹಿತವೂ ಸುಖವೂ ಲಭಿಸುವುದು.

35.10.10. ಉದ್ದಕ ಸುತ್ತಂ (ಉದ್ದಕರಾಮಪುತ್ತರ ಬಗ್ಗೆ ಸುತ್ತ) (ಉದಕ ಸುತ್ತ)

103. ಭಿಕ್ಷುಗಳೇ, ಹೀಗೆ ಉದ್ದಕರಾಮಪುತ್ತರು ಘೋಷಿಸುತ್ತಿದ್ದರು: ಇದೇ ಖಂಡಿತವಾಗಿ ಜ್ಞಾನ ಪ್ರಾವಿಣ್ಯತೆ (ವೇದಗೂ) ಇದೇ ಖಂಡಿತವಾಗಿಯು ಸರ್ವಜಿನತೆ (ಸಾರ್ವತ್ರಿಕ ವಿಜಯಶಾಲಿ). ಇದೇ ಖಂಡಿತವಾಗಿ ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುವಿಕೆ. ಭಿಕ್ಷುಗಳೇ, ಉದ್ದಕರಾಮಪುತ್ತರು ಜ್ಞಾನ ಪ್ರಾವಿಣ್ಯತೆಯನ್ನು ಪಡೆಯದಿದ್ದರೂ ತಾನು ಜ್ಞಾನ ಪ್ರಾವೀಣ್ಯನೆಂದು ಘೋಷಿಸಿಕೊಳ್ಳುತ್ತಿದ್ದರು. ಹಾಗೆಯೇ ಅವರು ಸರ್ವವನ್ನು ಜಯಿಸದಿದ್ದರೂ ತಾನು ಸರ್ವವನ್ನು ಜಯಿಸಿದ್ದೇನೆ (ಜಿನತೆ) ಅವರು ಗಡ್ಡೆಗಳ ಮೂಲದ ಬಗ್ಗೆ ಶ್ರಮಿಸದಿದ್ದರೂ ತಾನು ಮಾಡಿರುವೆ ಎಂದು ಘೋಷಿಸುತ್ತಿದ್ದರು. ಆದರೆ ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸರಿಯಾಗಿ ಹೀಗೆ ಘೋಷಿಸಬಹುದು: ಇದೇ ಖಂಡಿತವಾಗಿ ಜ್ಞಾನ ಪ್ರಾವೀಣ್ಯತೆ, ಇದೇ ಖಂಡಿತವಾಗಿ ಸರ್ವಜಿನತೆ, ಇದೇ ಖಂಡಿತವಾಗಿ ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುವಿಕೆ.
ಮತ್ತೆ ಹೇಗೆ ಭಿಕ್ಷುಗಳೇ, ಒಬ್ಬನು ಜ್ಞಾನ ಪ್ರಾವೀಣ್ಯತೆಯನ್ನು ಹೊಂದುತ್ತಾನೆ? ಯಾವಾಗ ಭಿಕ್ಷುವು ಆರು ಇಂದ್ರೀಯ ಆಧಾರಗಳ ಬಗ್ಗೆ ಅವುಗಳ ಉದಯವನ್ನು, ಅವುಗಲ ಅಳಿಯುವಿಕೆಯನ್ನು, ಅವುಗಳ ಆಸ್ವಾದನೆಯನ್ನು, ಅವುಗಳ ಅಪಾಯವನ್ನು ಹಾಗು ಅವುಗಳ ಬಿಡುಗಡೆಯನ್ನು ಯಥಾಭೂತವಾಗಿಯೇ ಅರಿಯುತ್ತಾನೆ. ಈ ವಿಧದಲ್ಲಿ ಒಬ್ಬನು ಜ್ಞಾನದಲ್ಲಿ ಪ್ರಾವೀಣ್ಯತೆಯನ್ನು ಹೊಂದುತ್ತಾನೆ.
ಮತ್ತೆ ಹೇಗೆ ಭಿಕ್ಷುಗಳೇ, ಒಬ್ಬನು ಸರ್ವಜಿನತೆ ಹೊಂದುತ್ತಾನೆ? ಯಾವಾಗ ಭಿಕ್ಷುವು ಆರು ಇಂದ್ರೀಯ ಆಧಾರಗಳ ಉದಯವನ್ನು, ಅಳಿಯುವಿಕೆಯನ್ನು, ಆಸ್ವಾದನೆಯನ್ನು, ಅಪಾಯವನ್ನು ಹಾಗು ಅದರಿಂದಾಗಿ ಬಿಡುಗಡೆಯನ್ನು ಅರಿತು ಅಂಟದೆ ಇರುವುದರಿಂದಾಗಿ ಅಂತಹ ಭಿಕ್ಷುವು ಸರ್ವಜಿನನೆಂದು ಕರೆಯಲ್ಪಡುತ್ತಾನೆ.
ಮತ್ತೆ ಹೇಗೆ ಭಿಕ್ಷುಗಳೇ, ಭಿಕ್ಷುವೊಬ್ಬನು ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುತ್ತಾನೆ? ಭಿಕ್ಷುಗಳೇ, ಇಲ್ಲಿ ಗಡ್ಡೆಯೆಂದರೆ ನಾಲ್ಕು ಧಾತುಗಳ ಶರೀರವಾಗಿದೆ. ಮಾತಪಿತರಿಂದಾಗಿ ಉದಯಿಸಿ, ಆಹಾರದಿಂದ ದ್ರಾಡ್ಯತೆಯು ಪಡೆದು ಅನಿತ್ಯತೆಗೆ, ಉಜ್ಜುವಿಕೆಗೆ, ಮುಗಿಯುವಿಕೆಗೆ ನಾಶಕ್ಕೆ ಗುರಿಯಾಗುತ್ತದೆ. ಗಡ್ಡೆಯ ಮೂಲವೆಂದರೆ ತೃಷ್ಣೆಯಾಗಿದೆ. ಯಾವಾಗ ಭಿಕ್ಷುವಿನಿಂದ ತೃಷ್ಣೆಯು ಪರಿತ್ಯಾಗವಾಗುತ್ತದೋ, ಬೇರುಗಳನ್ನು ಕತ್ತರಿಸಿ ಹಾಕಲ್ಪಟ್ಟಿದೆಯೋ, ತಾಳೆಯ ಮರದ ಬುಡದಂತೆ ಮುಂದೆ ಉದಯಿಸದಂತೆ ಕತ್ತರಿಲ್ಪಡುತ್ತದೋ, ಅಂತಹ ಭಿಕ್ಷುವು ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುತ್ತಾನೆ.
ಭಿಕ್ಷುಗಳೇ, ಉದ್ದಕ ರಾಮಪುತ್ರರು ತಾವು ಜ್ಞಾನದ ಪ್ರಾವೀಣ್ಯತೆಯನ್ನು ಹೊಂದದಿದ್ದರೂ ಹೀಗೆ ಘೋಷಿಸಿದ್ದರು, ಇದೇ ಖಂಡಿತವಾಗಿ ಜ್ಞಾನ ಪ್ರಾವೀಣ್ಯತೆ, ಇದೇ ಖಂಡಿತವಾಗಿ ಸರ್ವಜಿನತೆ, ಇದೇ ಖಂಡಿತವಾಗಿ ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುವಿಕೆ.... ಆದರೆ ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸರಿಯಾಗಿ ಹೀಗೆ ಘೋಷಿಸಬಹುದು. ಇದೇ ಖಂಡಿತವಾಗಿ ಜ್ಞಾನ ಪ್ರಾವೀಣ್ಯತೆ, ಇದೇ ಖಂಡಿತವಾಗಿ ಸರ್ವಜಿನತೆ, ಇದೇ ಖಂಡಿತವಾಗಿ ಈ ಹಿಂದೆ ಮಾಡದಿದ್ದ ಗಡ್ಡೆಗಳ ಮೂಲವನ್ನು ಕತ್ತರಿಸುವಿಕೆ....
ಹತ್ತನೆಯ ಸಳವರ್ಗ ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...