Thursday 17 May 2018

Samyutta nikaya 35.11 ಯೋಗಕ್ಖೇಮಿ ವಗ್ಗೋ

ಯೋಗಕ್ಖೇಮಿ ವಗ್ಗೋ

35.11.1 ಯೋಗಕ್ಖೇಮಿ ಸುತ್ತಂ (ಬಂಧನಗಳಿಂದ ಕ್ಷೇಮ ಸುತ್ತ)

104. ಶ್ರಾವಸ್ತಿಯಲ್ಲಿದ್ದಾಗ ಭಗವಾನರು ಈ ಸುತ್ತವನ್ನು ಪ್ರವಚಿಸಿದ್ದರು: ಭಿಕ್ಷುಗಳೇ, ನಾನು ನಿಮಗೆ ಬಂಧನಗಳಿಂದ ಮುಕ್ತವಾಗಿ ಕ್ಷೇಮವಾಗಿರುವಂತಹ ಧಮ್ಮವನ್ನು ಉಪದೇಶಿಸುತ್ತೇನೆ, ತಾವು ಗಮನವಿಟ್ಟು ಆಲಿಸಿ. ಯಾವುದು ಭಿಕ್ಷುಗಳೇ, ಈ ಯೋಗಕ್ಷೇಮ ಪರಿಯಾಯ ಹಾಗು ಧಮ್ಮಪರಿಯಾಯ? ಇಲ್ಲಿ ಭಿಕ್ಷುಗಳೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹ, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿ, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಆದರೆ ಇವೆಲ್ಲವೂ ತಥಾಗತರಿಂದ ವಜಿಸಲ್ಪಟ್ಟಿದೆ. ತಾಳೆಮರದ ಬುಡದಂತೆ ಕತ್ತರಿಸಿ ಹಾಕಲ್ಪಟ್ಟಿದೆ. ಮುಂದಿನ ಉದಯವಾಗದಂತೆ ಅಳಿಸಿಹಾಕಲ್ಪಟ್ಟಿದೆ. ಇವುಗಳ ವರ್ಜನೆಗಾಗಿ ಪರಿಶ್ರಮಿಸಬೇಕೆಂದು ಘೋಷಿಸಿದ್ದಾರೆ. ಆದ್ದರಿಂದ ತಥಾಗತರನ್ನು ಬಂಧನಗಳಿಂದ ಮುಕ್ತರಾಗಿ ಕ್ಷೇಮ ಸಾರುವಂತಹವರು (ಯೋಗಕ್ಷೇಮಿ) ಎಂದು ಕರೆಯುತ್ತಾರೆ. ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಹುದಾದಂತಹ ಶಬ್ದಗಳಿವೆ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ.... ಮನಸ್ಸಿನಿಂದ ಗ್ರಹಿಸಬಹುದಾದಂತಹ ಮಾನಸಿಕ ವಿಷಯಗಳಿವೆ (ಧಮ್ಮ). ಅವುಗಳು ಆಸೆ ಹುಟ್ಟಸುವಂತಹವು, ಪ್ರಿಯವಾದವು, ಒಪ್ಪುವಂತಹದು, ಇಂದ್ರೀಯ ಉದ್ರೇಕಕಾರಿ, ಪ್ರಲೋಭವನಕಾರಿಯು ಆಗಿವೆ. ಅವೆಲ್ಲವೂ ತಥಾಗತರಿಂದ ವಜರ್ಿಸಲ್ಪಟ್ಟಿವೆ. ತಾಳೆ ಮರದ ಬುಡದಂತೆ ಮತ್ತೆ ಬೆಳೆಯದಂತೆ ಕತ್ತರಿಸಿಹಾಕಲ್ಪಟ್ಟಿವೆ. ಭವಿಷ್ಯದಲ್ಲಿ ಉದಯಿಸದಂತೆ ಅಳಿಸಹಾಕಲ್ಪಟ್ಟಿದೆ. ಇವುಗಳ ವರ್ಜನೆಗಾಗಿ ಪರಿಶ್ರಮಿಸಬೇಕೆಂದು ಘೋಷಿಸಿದ್ದಾರೆ. ಆದ್ದರಿಂದಾಗಿ ತಥಾಗತರಿಂದ ಯೋಗಕ್ಷೇಮಿ ಎನ್ನುವುದು. ಇದೇ ಭಿಕ್ಷುಗಳೇ, ಯೋಗಕ್ಷೇಮ ಪರಿಯಾಯ ಹಾಗು ಧಮ್ಮ ಪರಿಯಾಯವಾಗಿದೆ.

35.11.2 ಉಪಾದಾಯ ಸುತ್ತಂ (ಅಂಟುವಿಕೆಯ ಸುತ್ತ)


105. ಭಿಕ್ಷುಗಳೇ, ಯಾವಾಗ ಏನು ಇದ್ದಾಗ, ಯಾವುದಕ್ಕೆ ಅಂಟಿಕೊಂಡಾಗ ಸುಖವು ಹಾಗು ದುಃಖವು ಉದಯಿಸುವುದು?
ಭಂತೆ, ಭಗವಾನರ ಮೂಲದಿಂದಲೇ (ತಮ್ಮಿಂದಲೇ) ಧಮ್ಮವು ತಿಳಿಸಲ್ಪಟ್ಟಿದೆ...
ಚಕ್ಷುವಿನಿಂದಲೇ ಭಿಕ್ಷುಗಳೇ, ಯಾವಾಗ ಚಕ್ಷುವಿರುವುದೋ, ಕಣ್ಣಿಗೆ ಅಂಟಿಕೊಳ್ಳುವುದರಿಂದಾಗಿ ಸುಖವು ಹಾಗು ದುಃಖವು ಆಂತರ್ಯದಲ್ಲಿ ಉದಯಿಸುವುದು. ಯಾವಾಗ ಕಿವಿಯು ಇರುವುದೋ... ಯಾವಾಗ ಮನಸ್ಸಿರುವುದೋ, ಮನಸ್ಸಿಗೆ ಅಂಟುವದರಿಂದಾಗಿ ಸುಖವು ಹಾಗು ದುಃಖವು ಆಂತರ್ಯದಲ್ಲಿ ಉದಯಿಸುವುದು. ಯಾವರೀತಿ ಭಾವಿಸುವಿರಿ ಭಿಕ್ಷುಗಳೇ, ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ಪರಿವರ್ತನಿಯವೋ, ದುಃಖಕಾರಿಯೋ ಅವಕ್ಕೆ ಅಂಟಿಕೊಳ್ಳದಿದ್ದರೆ ಸುಖವಾಗಲಿ ಅಥವಾ ದುಃಖವಾಗಲಿ ಆಂತರ್ಯದಲ್ಲಿ ಉದಯಿಸುವುದೋ?
ಇಲ್ಲ ಭಂತೆ.
ಜಿಹ್ವೆಯು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯು ಪರಿವರ್ತನಕಾರಿಯೋ ಅವಕ್ಕೆ ಅಂಟದಿದ್ದರೆ (ಅನುಪಾದಾಯ) ಆಂತರ್ಯದಲ್ಲಿ ಸುಖ-ದುಃಖಗಳು ಉದಯಿಸುವುದೇ?
ಇಲ್ಲ ಭಂತೆ.
ಮನಸ್ಸು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯೋ, ಪರಿವರ್ತನಶೀಲವೋ ಅವಕ್ಕೆ ಅಂಟದಿದ್ದಾಗ ಆಂತರ್ಯದಲ್ಲಿ ಸುಖ-ದುಃಖಗಳು ಉಂಟಾಗುವುದೋ?
ಇಲ್ಲ ಭಂತೆ.
ಭಿಕ್ಷುಗಳೇ, ಹೀಗೆ ಆರ್ಯಶ್ರಾವಕನು ದಶರ್ಿಸಿದಾಗ ಚಕ್ಷುವಿನಿಂದ ವಿಕಷರ್ಿಸುತ್ತಾನೆ... ಮನಸ್ಸಿನಿಂದ ವಿಕಷರ್ಿಸುತ್ತಾನೆ. ವಿಕಷರ್ಿಸಿದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ, ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನವನ್ನು ಪಡೆಯುತ್ತಾನೆ. ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.11.3 ದುಃಖ ಸಮುದಯ ಸುತ್ತಂ (ದುಃಖಗಳ ಉದಯದ ಸುತ್ತ)


106. ಭಿಕ್ಷುಗಳೇ, ದುಃಖಗಳ ಉದಯ ಹಾಗು ಅಂತ್ಯದ ಬಗ್ಗೆ ಉಪದೇಶಿಸುತ್ತಿದ್ದೆನೆ, ಗಮನವಿಟ್ಟು ಆಲಿಸಿರಿ. ಭಿಕ್ಷುಗಳೇ, ದುಃಖ ಸಮುದಯ ಎಂದರೇನು? ಇಲ್ಲಿ ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಿ ಆಗುವುದು. ಸ್ಪರ್ಶದ ಅವಲಂಬನೆಯಿಂದಾಗಿ ವೇದನೆಗಳು ಉದಯಿಸುವುವು. ವೇದನೆಗಳಿಂದಾಗಿ ತೃಷ್ಣೆಯು ಉದಯಿಸುವುದು. ಹೀಗೆ ದುಃಖಗಳ ಸಮುದಯವು ಆಗುವುದು. ಇಲ್ಲಿ ಕಿವಿ ಹಾಗು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯಿಸುವುದು... ಮೂಗು ಹಾಗು ವಾಸನೆಗಳನ್ನು ಅವಲಂಬಿಸಿ... ನಾಲಿಗೆ ಹಾಗು ರಸಗಳನ್ನು... ದೇಹ ಮತ್ತು ಸ್ಪರ್ಶಗಳನ್ನು ಅವಲಂಬಿಸಿ ಕಾಯವಿಞ್ಞಾನ ಉದಯಿಸುವುದು... ಮನಸ್ಸು ಹಾಗು ಧಮ್ಮಗಳನ್ನು ಅವಲಂಬಿಸಿ ಮನೋವಿಞ್ಞಾನವು ಉದಯಿಸುವುದು. ಈ ಮೂರರ ಸಂಗಮವು ಸಂಸ್ಪರ್ಶದಲ್ಲಿ ಆಗುವುದು. ಸಂಸ್ಪರ್ಶದ ಅವಲಂಬನೆಯಿಂದಾಗಿ ತೃಷ್ಣೆಯು ಉಂಟಾಗುವುದು. ಇದೇ ದುಃಖಗಳ ಸಮುದಾಯವಾಗಿದೆ.
ಯಾವುದು ಭಿಕ್ಷುಗಳೇ, ದುಃಖದ ಅಂತ್ಯವು? ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಿ ಆಗುವುದು. ಸ್ಪರ್ಶವನ್ನು ಅವಲಂಬಿಸಿ ವೇದನೆಯು ಉಂಟಾಗುತ್ತದೆ. ವೇದನೆಗಳನ್ನು ಅವಲಂಬಿಸಿ ತೃಷ್ಣೆಯು ಉಂಟಾಗುತ್ತದೆ. ವಿರಾಗದಿಂದಾಗಿ ತೃಷ್ಣೆಯು ನಿಶ್ಶೇಷವಾಗಿ ಕ್ಷಯಿಸಿ ಉಪಾದಾನದ (ಅಂಟುವಿಕೆಯ) ನಿರೋಧವಾಗುತ್ತದೆ. ಉಪಾದಾನದ ನಿರೋಧದಿಂದಾಗಿ ಭವ (ಅಸ್ತಿತ್ವ) ನಿರೋಧವಾಗುತ್ತದೆ. ಭವನಿರೋಧದಿಂದ ಜನ್ಮನಿರೋಧವಾಗುತ್ತದೆ. ಜನ್ಮ ನಿರೋಧದಿಂದಾಗಿ ಶೋಕವು, ಜರಾವು, ಮರಣವು, ಪ್ರಲಾಪವು, ದುರ್ಮನಸ್ಸು ಇತ್ಯಾದಿಗಳೆಲ್ಲವೂ ನಿರೋಧವಾಗುತ್ತದೆ. ಈ ರೀತಿಯಾಗಿಯೇ ದುಃಖಖಂದವು ನಿರೋಧವಾಗುತ್ತದೆ. ಇದೇ ಭಿಕ್ಷುಗಳೇ, ದುಃಖಗಳ ಅಂತ್ಯವಾಗಿದೆ.

35.11.4 ಲೋಕ ಸಮುದಯ ಸುತ್ತ


107. ಭಿಕ್ಷುಗಳೇ, ಲೋಕದ ಉದಯ ಹಾಗು ಅಂತ್ಯವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ ಲೋಕದ ಉದಯವು? ಇಲ್ಲಿ ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುವುದು. ಈ ಮೂರರ ಸಂಗಮವು ಸ್ಪರ್ಶಗಳಲ್ಲಿ ಆಗುವುದು, ಸ್ಪರ್ಶವನ್ನು ಅವಲಂಬಿಸಿ ವೇದನೆಗಳು ಉಂಟಾಗುತ್ತವೆ. ವೇದನೆಗಳನ್ನು ಅವಲಂಬಿಸಿ ತೃಷ್ಣೆಯು ಉಂಟಾಗುತ್ತದೆ. ತೃಷ್ಣೆಯಿಂದಾಗಿ ಅಂಟುವಿಕೆ (ಉಪಾದಾನ) ಉದಯಿಸುತ್ತದೆ. ಅಂಟುವಿಕೆಯಿಂದಾಗಿ ಭವವೂ, ಭವದಿಂದ ಜನ್ಮವೂ, ಜನ್ಮವನ್ನು ಅವಲಂಬಿಸಿ ಜರಾಮರಣಗಳು ಶೋಕ ಪ್ರಲಾಪಗಳು ದುರ್ಮನಸ್ಸು ಇತ್ಯಾದಿಗಳು ಉದಯಿಸುತ್ತವೆ. ಹೀಗೆ ಲೋಕದ ಉದಯವಾಗುತ್ತದೆ, ಅದೇರೀತಿಯಲ್ಲಿ ಇಲ್ಲಿ ಕಿವಿ ಹಾಗು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯಿಸುವುದು.... ಮೂಗು ಹಾಗು ವಾಸನೆಗಳನ್ನು ಅವಲಂಬಿಸಿ... ನಾಲಿಗೆ ಹಾಗು ರಸಗಳನ್ನು... ದೇಹ ಮತ್ತು ಸ್ಪರ್ಶಗಳನ್ನು... ಮನಸ್ಸು ಹಾಗು ಧಮ್ಮಗಳನ್ನು (ಮಾನಸಿಕ ವಿಷಯ) ಅವಲಂಬಿಸಿ ಮನೋವಿಞ್ಞಾನವು ಉದಯಿಸುವುದು. ಈ ಮೂರರ ಸಂಗಮವು ಸ್ಪರ್ಶದಲ್ಲಾಗುವುದು. ಸ್ಪರ್ಶವನ್ನು ಅವಲಂಬಿಸಿ ವೇದನೆಗಳು ಉಂಟಾಗುತ್ತವೆ... ವೇದನೆಗಳನ್ನು ಅವಲಂಬಿಸಿ ತೃಷ್ಣೆಯು ಉಂಟಾಗುತ್ತದೆ. ತೃಷ್ಣೆಯಿಂದಾಗಿ ಅಂಟುವಿಕೆ (ಉಪಾದಾನ) ಉಂಟಾಗುತ್ತದೆ. ಅಂಟುವಿಕೆಯಿಂದ ಭವವೂ (ಅಸ್ತಿತ್ವ) ಭವದಿಂದ ಜನ್ಮವೂ ಜನ್ಮವನ್ನು ಅವಲಂಬಿಸಿ ಜರಾಮರಣಗಳು ಶೋಕ ಪ್ರಲಾಪಗಳು ದುರ್ಮನಸ್ಸು ಇತ್ಯಾದಿಗಳು ಉದಯಿಸುತ್ತವೆ. ಇದೇ ಭಿಕ್ಷುಗಳೇ ಲೋಕದ ಸಮುದಯವಾಗಿದೆ.
ಯಾವುದು ಭಿಕ್ಷುಗಳೇ ಲೋಕದ ಅಂತ್ಯವು? ಭಿಕ್ಷುಗಳೇ, ಇಲ್ಲಿ ಚಕ್ಷು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನ ಉಂಟಾಗುತ್ತದೆ. ಈ ಮೂರು ಸಹಾ ಸ್ಪರ್ಶದಲ್ಲಿ ಸಂಗಮವಾಗುವುದು. ಸ್ಪರ್ಶದಿಂದಾಗಿ ವೇದನೆಗಳು ಉಂಟಾಗುತ್ತವೆ. ವೇದನೆಗಳಿಂದಾಗಿ ತೃಷ್ಣೆ ಉಂಟಾಗುತ್ತದೆ. ವಿರಾಗದಿಂದಾಗಿ ತೃಷ್ಣೆಯು ನಿಶ್ಶೇಷವಾಗಿ ಕ್ಷಯಿಸಿ ಉಪದಾನದ (ಅಂಟುವಿಕೆಯ) ನಿರೋಧವಾಗುತ್ತದೆ. ಉಪಾದಾನದ ನಿರೋಧದಿಂದಾಗಿ ಭವದ (ಅಸ್ತಿತ್ವದ) ನಿರೋಧವಾಗುತ್ತದೆ. ಭವದ ನಿರೋಧದಿಂದಾಗಿ ಜನ್ಮದ ನಿರೋಧವಾಗುತ್ತದೆ. ಈ ರೀತಿಯಾಗಿ ದುಃಖರಾಶಿಯು ನಿರೋಧವಾಗುತ್ತದೆ. ಇವೇ ಭಿಕ್ಷುಗಳೇ, ಲೋಕದ ಅಂತ್ಯವಾಗಿದೆ.


35.11.5 ಸೆಯ್ಯೋಹಮಸ್ಮಿ ಸುತ್ತಂ (ಶ್ರೇಷ್ಠನು ನಾನೇ ಎಂಬ ಸುತ್ತ)


108. ಭಿಕ್ಷುಗಳೇ, ಯಾವುದು ಅಸ್ತಿತ್ವದಲ್ಲಿರುವುದರಿಂದಾಗಿ, ಯಾವುದರ ಅಂಟುವಿಕೆಯಿಂದಾಗಿ, ಯಾವುದರ ಬದ್ಧತೆಯಿಂದಾಗಿ ನಾನು ಶ್ರೇಷ್ಠ ಅಥವಾ ನಾನು ಸರಿಸಮ ಅಥವಾ ನಾನು ನೀಚ ಎಂಬ ಯೋಚನೆಗಳು ಉಂಟಾಗುತ್ತವೆ.
ಭಗವಾನರ ಮೂಲವಾಗಿಯೇ ನಮಗೆ ಧಮ್ಮವು ಸಿಕ್ಕಿದೆ...
ಭಿಕ್ಷುಗಳೇ, ಯಾವಾಗ ಚಕ್ಷುವಿರುವುದೋ, ಚಕ್ಷುವಿಗೆ ಅಂಟುವಿಕೆಯಿರುವುದೋ, ಚಕ್ಷುವಿಗೆ ಬದ್ಧನಾಗಿರುವಿಕೆಯಿರುವುದೋ ಆಗ ನಾನೇ ಶ್ರೇಷ್ಠ ಅಥವಾ ನಾನೇ ಸರಿಸಮ ಅಥವಾ ನಾನೇ ನೀಚ ಎಂಬ ಯೋಚನೆಗಳು ಉಂಟಾಗುತ್ತವೆ. ನೀವು ಹೇಗೆ ಭಾವಿಸುವಿರಿ ಭಿಕ್ಷುಗಳೇ, ಚಕ್ಷುವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ಸುಖಕಾರಿಯೋ ಅಥವಾ ದುಃಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕರವೋ ಪರಿವರ್ತನೆಕಾರಿಯೋ ಅಂತಹವುಗಳಿಗೆ ಅಂಟದಿದ್ದರೆ ನಾನೇ ಶ್ರೇಷ್ಠ ಅಥವಾ ನಾನೇ ಸರಿಸಮ ಅಥವಾ ನಾನೇ ನೀಚ ಎಂಬ ಯೋಚನೆಗಳು ಬರುವವೇ?
ಇಲ್ಲ ಭಂತೆ.
ನೀವು ಹೇಗೆ ಭಾವಿಸುವಿರಿ ಭಿಕ್ಷುಗಳೇ, ಕಿವಿಯು... ಮೂಗು... ನಾಲಿಗೆಯು... ಕಾಯವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಮನಸ್ಸು ನಿತ್ಯವೊ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವುದೋ ಅಂತಹವುಗಳಿಗೆ ಅಂಟದಿದ್ದರೆ ನಾನೇ ಶ್ರೇಷ್ಠ ಅಥವಾ ನಾನೇ ಸರಿಸಮ ಅಥವಾ ನಾನೇ ನೀಚ ಎಂಬಂತಹ ಯೋಚನೆಗಳು ಉಂಟಾಗುವವೇ?
ಇಲ್ಲ ಭಂತೆ.
ಭಿಕ್ಷುಗಳೇ, ಹೀಗೆ ದಶರ್ಿಸಿದ ಆರ್ಯಶ್ರಾವಕ ಭಿಕ್ಷುವು ಚಕ್ಷುವಿನಿಂದ ವಿಕಷರ್ಿಸುತ್ತಾನೆ... ಮನಸ್ಸಿನಿಂದಲೂ ವಿಕಷರ್ಿಸುತ್ತಾನೆ. ವಿಕಷರ್ಿಸಿದ್ದರಿಂದಾಗಿ ವಿರಾಗ ಉಂಟಾಗುತ್ತದೆ. ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತನೆ. ವಿಮುಕ್ತ ಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು. ಇನ್ಯಾವ ಇಚ್ಛೆಯೂ ಇಲ್ಲ ಎಂದು ಅರಿಯುತ್ತಾನೆ.

35.11.6 ಸಂಯೋಜನಿಯ ಸುತ್ತಂ (ಸಂಕೋಲೆಗಳ ಸುತ್ತ)


109. ಭಿಕ್ಷುಗಳೇ, ನಾನು ಸಂಕೋಲೆಗಳನ್ನುಂಟುಮಾಡುವ ಹಾಗು ಸಂಕೋಲೆಗಳ ಬಗ್ಗೆ ಉಪದೇಶಿಸುತ್ತಿದ್ದೆನೆ. ಗಮನವಿಟ್ಟು ತಾವೆಲ್ಲರೂ ಆಲಿಸಿರಿ. ಯಾವುದು ಭಿಕ್ಷುಗಳೇ, ಸಂಕೋಲೆಯುಂಟುಮಾಡುವುದು ಹಾಗು ಸಂಕೋಲೆಗಳು? ಭಿಕ್ಷುಗಳೇ, ಚಕ್ಷು ಸಂಕೋಲೆಗಳನ್ನು ಉಂಟುಮಾಡುವಂತದ್ದಾಗಿದೆ. ಅದರಿಂದ ಉಂಟಾಗುವ ಆಸೆಗಳು ಹಾಗು ರಾಗಗಳೇ ಸಂಕೋಲೆಗಳಾಗಿವೆ. ಕಿವಿ... ಮೂಗು... ನಾಲಿಗೆ... ದೇಹ... ಮನಸ್ಸು ಸಂಕೋಲೆಕಾರಿಗಳಾಗಿವೆ ಹಾಗು ಅದರಿಂದ ಉಂಟಾಗುವ ಆಸೆಗಳು ಹಾಗು ರಾಗಗಳೇ ಸಂಕೋಲೆಗಳಾಗಿವೆ. ಇದೇ ಭಿಕ್ಷುಗಳೇ, ಸಂಕೋಲೆಕಾರಿ ಹಾಗು ಸಂಕೋಲೆಗಳಾಗಿವೆ.


35.11.7 ಉಪಾದಾನಿಯ ಸುತ್ತಂ (ಅಂಟುಕಾರಿ ಸುತ್ತ)

110. ಭಿಕ್ಷುಗಳೇ, ನಾನು ಅಂಟುವಂತಹ ವಿಷಯಗಳು ಹಾಗು ಅಂಟುವಿಕೆ ಬಗ್ಗೆ ಧಮ್ಮವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಮತ್ತೆ ಭಿಕ್ಷುಗಳೇ, ಯಾವುವು ಅಂಟುವಂತಹ ವಿಷಯಗಳು ಹಾಗು ಅಂಟುವಿಕೆ? ಚಕ್ಷು ಭಿಕ್ಷುಗಳೇ ಅಂಟುವಂತ ವಿಷಯವಾಗಿದೆ ಹಾಗು ಆಸೆ ಮತ್ತು ರಾಗಗಳೇ ಅಂಟುವಿಕೆಯಾಗಿದೆ. ಕಿವಿಯು ಭಿಕ್ಷುಗಳೇ, ಅಂಟುವಂತ ವಿಷಯವಾಗಿದೆ ಹಾಗು ಆಸೆ ಮತ್ತು ರಾಗಗಳೇ ಅಂಟುವಿಕೆಯಾಗಿದೆ. ಕಿವಿಯು ಭಿಕ್ಷುಗಳೇ, ಅಂಟುವಂತ ವಿಷಯವಾಗಿದೆ ಹಾಗು ಆಸೆ ಮತ್ತು ರಾಗಗಳೇ ಅಂಟುವಿಕೆಯಾಗಿದೆ. ಮೂಗು... ನಾಲಿಗೆ... ದೇಹ... ಮನಸ್ಸು ಅಂಟುವಂತಹ ವಿಷಯವಾಗಿದೆ. ಆಸೆ ಹಾಗು ರಾಗಗಳೇ ಅಂಟುವಿಕೆಯಾಗಿದೆ. ಹೀಗೆ ಇವನ್ನು ಅಂಟುವಂತಹ ವಿಷಯಗಳು ಹಾಗು ಅಂಟುವಿಕೆ ಎನ್ನುವರು.

35.11.8 ಅಜ್ಝತ್ತಿಕಾಯತನ ಪರಿಜಾನನ ಸುತ್ತಂ


111. ಭಿಕ್ಷುಗಳೇ, ಚಕ್ಷುವನ್ನು ನೇರವಾರಿ ಅರಿಯದೆ, ಅದರ ಬಗ್ಗೆ ಪರಿಪೂರ್ಣವಾದ ಜ್ಞಾನವು ಇಲ್ಲದೆ, ಚಕ್ಷುವಿನ ಬಗ್ಗೆ ವಿರಾಗವಿಲ್ಲದೆ ಹಾಗು ವಿಕರ್ಷಣೆಯಿಲ್ಲದೆ, ಅದನ್ನು ವಜರ್ಿಸಲು ತಿಳಿಯದೆ ದುಃಖಕ್ಷಯ ಸಾಧ್ಯವಿಲ್ಲ. ಹಾಗೆಯೇ ಕಿವಿಯನ್ನು ನೇರವಾಗಿ ಅರಿಯದೆ ಅದರ ಬಗ್ಗೆ ಪರಿಪೂರ್ಣವಾದ ಜ್ಞಾನವು ಇಲ್ಲದೆ, ಚಕ್ಷುವಿನ ಬಗ್ಗೆ ವಿರಾಗವಿಲ್ಲದೆ ಹಾಗು ವಿಕರ್ಷಣೆಯಿಲ್ಲದೆ ಅದನ್ನು ವಜರ್ಿಸಲು ತಿಳಿಯದೆ, ದುಃಖಕ್ಷಯ ಸಾಧ್ಯವಿಲ್ಲ. ಹಾಗೆಯೇ ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ನೇರವಾಗಿ ಅರಿಯದೆ ಅದರ ಬಗ್ಗೆ ಪರಿಪೂರ್ಣವಾದ ಜ್ಞಾನವೂ ಇಲ್ಲದೆ, ಮನಸ್ಸಿನ ಬಗ್ಗೆ ವಿರಾಗವಿಲ್ಲದೆ ಹಾಗು ವಿಕರ್ಷಣೆಯಿಲ್ಲದೆ, ಅವನ್ನು ವಜರ್ಿಸಲು ತಿಳಿಯದೆ ದುಃಖಕ್ಷಯ ಸಾಧ್ಯವಿಲ್ಲ.

35.11.9 ಬಾಹಿರಾಯತನ ಪರಿಜಾನನ ಸುತ್ತಂ 

(ಇಂದ್ರೀಯಗಳಿಗೆ ಸಂಪಕರ್ಿಸುವ ಬಾಹ್ಯ ವಸ್ತುಗಳ ಜ್ಞಾನದ ಸುತ್ತ)
112. ಭಿಕ್ಷುಗಳೇ, ರೂಪಗಳನ್ನು ನೇರವಾಗಿ ಅರಿಯದೆ ಅವುಗಳ ಬಗ್ಗೆ ಪರಿಪೂರ್ಣವಾದ ಜ್ಞಾನವೂ ಇಲ್ಲದೆ ಅವುಗಳ ಬಗ್ಗೆ ವಿರಾಗವಿಲ್ಲದೆ, ವಿಕರ್ಷಣೆಯಿಲ್ಲದೆ, ಅವನ್ನು ವಜರ್ಿಸಲು ತಿಳಿಯದೆ ದುಃಖಕ್ಷಯವು ಸಾಧ್ಯವಿಲ್ಲ. ಅದೇರೀತಿ ಭಿಕ್ಷುಗಳೇ, ಶಬ್ದಗಳನ್ನು... ವಾಸನೆಗಳನ್ನು... ರುಚಿಯನ್ನು... ಸ್ಪರ್ಶವನ್ನು... ಮಾನಸಿಕ ವಿಷಯಗಳನ್ನು (ಧಮ್ಮವನ್ನು) ನೇರವಾಗಿ ಅರಿಯದೆ, ಅವುಗಳ ಬಗ್ಗೆ ಪರಿಪೂರ್ಣವಾದ ಜ್ಞಾನವೂ ಇಲ್ಲದೆ ಅವುಗಳ ಬಗ್ಗೆ ವಿರಾಗವಿಲ್ಲದೆ, ವಿಕರ್ಷಣೆಯಿಲ್ಲದೆ, ಅವನ್ನು ವಜರ್ಿಸಲು ತಿಳಿಯದೆ ದುಃಖಕ್ಷಯವು ಸಾಧ್ಯವಿಲ್ಲ.

35.11.10 ಉಪಸ್ಸುತಿ ಸುತ್ತಂ (ಉಪಶ್ರುತಿ ಸುತ್ತ)


113. ಒಮ್ಮೆ ಭಗವಾನರು ತಮ್ಮ ಬಂಧುಗಳೊಡನೆ ಇಟ್ಟಿಕೆಗಳ ಗೃಹದಲ್ಲಿ ತಂಗಿದ್ದರು. ಆಗ ಭಗವಾನರು ಈ ಧಮ್ಮವನ್ನು ಪುನರುಚ್ಛರಿಸಿದರು. ಚಕ್ಷು ಮತ್ತು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಿ ಆಗುವುದು. ಸ್ಪರ್ಶದಿಂದಾಗಿ ವೇದನೆಗಳು ಉಂಟಾಗುವುವು. ವೇದನೆಗಳಿಂದಾಗಿ ತೃಷ್ಣೆಯು ಉಂಟಾಗುವುದು. ತೃಷ್ಣೆಯಿಂದಾಗಿ ಭವವು, ಭವದಿಂದ ಜನ್ಮವು, ಜನ್ಮದಿಂದ ಜರಾಮರಣ, ಶೋಕಪ್ರಲಾಪ, ಪಶ್ಚಾತ್ತಾಪ ಇತರೆ ದುಃಖಕ್ಖಂದವು ಉದಯಿಸುವುದು. ಅದೇರೀತಿ ಕಿವಿ ಹಾಗು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯಿಸುತ್ತದೆ... ಮೂಗು ಮತ್ತು ವಾಸನೆಗಳನ್ನು ಅವಲಂಬಿಸಿ... ನಾಲಿಗೆ ಮತ್ತು ರುಚಿಗಳನ್ನು... ದೇಹ ಮತ್ತು ಸ್ಪರ್ಶಗಳನ್ನು... ಮನಸ್ಸು ಮತ್ತು ಧಮ್ಮಗಳನ್ನು ಅವಲಂಬಿಸಿ ಮನೋವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಾಗುವುದು. ಸ್ಪರ್ಶದಿಂದಾಗಿ ವೇದನೆಗಳು ಉಂಟಾಗುವುದು, ವೇದನೆಗಳಿಂದ ತೃಷ್ಣೆಯು ಉಂಟಾಗುವುದು, ತೃಷ್ಣೆಯಿಂದಾಗಿ ಭವವೂ, ಭವದಿಂದ ಜನ್ಮವೂ, ಜನ್ಮದಿಂದ ಜರಾ-ಮರಣ, ಶೋಕ ಪ್ರಲಾಪ, ಪಶ್ಚಾತ್ತಾಪ ಇತರೆ ದುಃಖರಾಶಿಯು ಉಂಟಾಗುವುದು. ಈ ರೀತಿಯಾಗಿ ದುಃಖಖಂದವು ಉದಯಿಸುವುದು.
ಚಕ್ಷು ಮತ್ತು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುತ್ತದೆ. ಈ ಮೂರರ ಸಂಗಮವು ಸ್ಪರ್ಶದಲ್ಲಾಗುವುದು. ಸ್ಪರ್ಶದಿಂದ ವೇದನೆಗಳು ಉಂಟಾಗುವುವು. ವೇದನೆಗಳಿಂದ ತೃಷ್ಣೆಯು ಉದಯಿಸುವುದು. ವಿರಾಗದಿಂದಾಗಿ ತೃಷ್ಣೆಯು ನಿಶ್ಶೇಷವಾಗಿ ನಿರೋಧವಾಗುವುದು. ಹೀಗೆ ತೃಷ್ಣೆಯ ನಿರೋಧದಿಂದಾಗಿ ಅಂಟುವಿಕೆಯ ನಿರೋಧವಾಗುವುದು. ಅಂಟುವಿಕೆಯ ನಿರೋಧದಿಂದಾಗಿ ಭವದ (ಅಸ್ತಿತ್ವ/ಸಂಭವಿಸುವಿಕೆ) ನಿರೋಧವಾಗುವುದು. ಭವದ ನಿರೋಧದಿಂದಾಗಿ ಜನ್ಮದ ನಿರೋಧವಾಗುವುದು. ಜನ್ಮದ ನಿರೋಧದಿಂದ ಜರಾಮರಣ, ಶೋಕ, ಪ್ರಲಾಪ, ಪಶ್ಚಾತ್ತಾಪ, ಇತರೆ ದುಃಖಕ್ಖಂದವು ನಿರೋಧವಾಗುವುದು. ಅದೇರೀತಿಯಲ್ಲಿ ಕಿವಿ ಮತ್ತು ಶಬ್ದಗಳನ್ನು ಅವಲಂಬಿಸಿ ಶ್ರೋತವಿಞ್ಞಾನವು ಉದಯವಾಗುವುದು. ಮೂಗು ಮತ್ತು ವಾಸನೆಗಳನ್ನು ಅವಲಂಬಿಸಿ... ನಾಲಿಗೆ ಮತ್ತ ರಸಗಳನ್ನು ಅವಲಂಬಿಸಿ... ದೇಹ ಮತ್ತು ಸ್ಪರ್ಶಗಳನ್ನು ಅವಲಂಬಿಸಿ... ಮನಸ್ಸು ಮತ್ತು ಧಮ್ಮಗಳನ್ನು ಅವಲಂಬಿಸಿ ಮನೋವಿಞ್ಞಾನವು ಉದಯವಾಗುವುದು. ಈ ಮೂರರ ಸಂಗಮವು ಸ್ಪರ್ಶದಲ್ಲಿ ಆಗುವುದು. ಸ್ಪರ್ಶವನ್ನು ಅವಲಂಬಿಸಿ ವೇದನೆಗಳು ಉಂಟಾಗುವುವು ವೇದನೆಗಳನ್ನು ಅವಲಂಬಿಸಿ ತೃಷ್ಣೆಯು ಉಂಟಾಗುವುದು, ವಿರಾಗವನ್ನು ಅವಲಂಬಿಸಿ ತೃಷ್ಣೆಯು ನಿಶ್ಶೇಷವಾಗಿ ನಿರೋಧವಾಗಿ ಉಪಾದಾನದ (ಅಂಟುವಿಕೆಯ) ನಿರೋಧವಾಗುವುದು. ಉಪಾದಾನದ ನಿರೋಧದಿಂದಾಗಿ ಭವದ ನಿರೋಧವಾಗುವುದು. ಭವದ ನಿರೋಧದಿಂದಾಗಿ ಜನ್ಮದ ನಿರೋಧವಾಗುವುದು. ಜನ್ಮದ ನಿರೋಧದಿಂದಗಿ ಜರಾಮರಣ ಶೋಕ ಪ್ರಲಾಪ, ಪಶ್ಚಾತ್ತಾಪ ಇತರೆಗಳು ನಿರೋಧವಾಗುವುದು. ಈ ವಿಧವಾಗಿ ದುಃಖಖಂದವು ನಿರೋಧವಾಗುವುದು.
ಆ ಸಮಯದಲ್ಲಿ ಭಿಕ್ಷುವೊಬ್ಬನು ಭಗವಾನರ ಈ ಬೋಧನೆಯನ್ನು ಆಲಿಸಿದನು. ಭಗವಾನರು ಆ ಭಿಕ್ಷುವನ್ನು ಗಮನಿಸಿ, ಭಿಕ್ಷುವೇ, ಈ ಸುತ್ತವನ್ನು ಆಲಿಸಿದೆಯಾ? - ಹೌದು ಭಂತೆ. - ಭಿಕ್ಷು, ಈ ಸುತ್ತವನ್ನು ಕಲಿಯುವಂತಾಗು. ಈ ಸುತ್ತ ಪ್ರಾವೀಣ್ಯತೆಯನ್ನು ಪಡೆ ಹಾಗು ನೆನಪಿನಲ್ಲಿ ಇಡುವಂತಾಗು. ಈ ಸುತ್ತದಲ್ಲಿ ಅಪಾರ ಅರ್ಥವಿದೆ ಹಾಗು ಬ್ರಹ್ಮಚರ್ಯದ ಮೂಲತತ್ವಗಳನ್ನು ಒಳಗೊಂಡಿದೆ.
ಇಲ್ಲಿಗೆ ಹನ್ನೊಂದನೆಯ ಯೋಗಕ್ಷೇಮ ವಗ್ಗ ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...