Thursday 17 May 2018

Samyutta nikaya 35.12 ಲೋಕಕಾಮಗುಣ ವಗ್ಗೋ

ಲೋಕಕಾಮಗುಣ ವಗ್ಗೋ

35.12.1 ಪಠಮ ಮಾರಪಾಸ ಸುತ್ತಂ (ಪ್ರಥಮ ಮಾರಪಾಶ ಸುತ್ತ)

114. ಭಿಕ್ಷುಗಳೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಇವುಗಳಲ್ಲಿ ಆನಂದವನ್ನು ಹುಡುಕಾಡಿದರೆ, ಇವನ್ನು ಸ್ವಾಗತಿಸಿದರೆ, ಇವಕ್ಕೆ ಅಂಟಿಕೊಂಡರೆ, ಅಂತಹ ಭಿಕ್ಷುವಿಗೆ ಮಾರನ ಕ್ಷೇತ್ರಕ್ಕೆ ಪ್ರವೇಶಿಸಿದವನೆಂದು, ಮಾರನ ಬಲಕ್ಕೆ ವಶನಾಗಿರುವವನು ಎಂದು ಹಾಗೂ ಮಾರನ ಬಂಧನಕ್ಕೆ ಬದ್ದೃನಾಗಿರುವವನೆಂದು, ಪಾಪಿಯ ಇಚ್ಛೆಯಂತೆ ಆಡುತ್ತಿದ್ದಾನೆಂದು ಕರೆಯುತ್ತಾರೆ. ಭಿಕ್ಷುಗಳೇ, ಇಲ್ಲಿ ಕಿವಿಯಿಂದ ಗ್ರಹಿಸಬಹುದಾದ ಶಬ್ದಗಳಿವೆ... ಮೂಗಿನಿಂದ ಗ್ರಹಿಸಬಹುದಾದ ವಾಸನೆಗಳಿವೆ... ಇಚ್ಛೆಯಂತೆ ಆಡುತ್ತಿದ್ದಾನೆಂದು ಕರೆಯುತ್ತಾರೆ.
ಇಲ್ಲಿ ಭಿಕ್ಷುಗಳೇ, ಜಿಹ್ವೆಯಿಂದ ಗ್ರಹಿಸಬಹುದಾದಂತಹ ವಾಸನೆಗಳಿವೆ. ಅವು ಇಷ್ಟವನ್ನುಂಟುಮಾಡುವವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ರಂಜನಿಯವಾದದ್ದು ಆಗಿದೆ. ಭಿಕ್ಷುವೇನಾದರೂ ಇವುಗಳಲ್ಲಿ ಆನಂದವನ್ನು ಹುಡುಕಾಡಿದರೆ, ಇವನ್ನು ಸ್ವಾಗತಿಸಿದರೆ, ಇವಕ್ಕೆ ಅಂಟಿಕೊಂಡರೆ ಅಂತಹ ಭಿಕ್ಷುವಿಗೆ ಮಾರನ ಕ್ಷೇತ್ರಕ್ಕೆ ಪ್ರವೇಶಿಸಿದವನೆಂದು, ಮಾರನ ಬಲಕ್ಕೆ ವಶನಾಗಿರುವನೆಂದು, ಮಾರನ ಬಂಧನಕ್ಕೆ ಬದ್ಧನಾಗಿರುವನೆಂದು, ಮಾರನ ಇಚ್ಛೆಯಂತೆ ಆಡುತ್ತಿದ್ದಾನೆಂದು ಹೇಳುತ್ತಾರೆ....
ಇಲ್ಲಿ ಭಿಕ್ಷುಗಳೇ, ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮ (ಮಾನಸಿಕ ವಿಷಯಗಳಿವೆ) ಗಳಿವೆ. ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ರಂಜನಿಯವು ಆಗಿದೆ. ಭಿಕ್ಷುವೇನಾದರೂ ಇವುಗಳಲ್ಲಿ ಆನಂದವನ್ನು ಹುಡುಕಾಡಿದರೆ, ಇವನ್ನು ಸ್ವಾಗತಿಸಿದರೆ ಇವಕ್ಕೆ ಅಂಟಿಕೊಂಡರೆ ಅಂತಹ ಭಿಕ್ಷುವಿಗೆ ಮಾರನ ಬಲಕ್ಕೆ ವಶವಾಗಿರುವನೆಂದು, ಮಾರನ ಕ್ಷೇತ್ರ ಪ್ರವೇಶಿಸಿದವನೆಂದು, ಮಾರನ ಇಚ್ಛೆಯಂತೆ ಆಡುತ್ತಿರುವನೆಂದು ಹೇಳುತ್ತಾರೆ.
ಭಿಕ್ಷುಗಳೇ, ಇಲ್ಲಿ ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಇಷ್ಟವನ್ನುಂಟು ಮಾಡುವವು, ಒಪ್ಪುವಂತಹವು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿ, ಪ್ರಲೋಭಕಾರಿ, ರಂಜನಿಯವಾದುದು. ಆದರೂ ಭಿಕ್ಷುವು ಇಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವಕ್ಕೆ ಅಂಟಿದಿದ್ದರೆ, ಆತನು ಮಾರನ ವಲಯಕ್ಕೆ ಪ್ರವೇಶಿಸಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ವಶವಾಗಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ಬಂಧನಕ್ಕೆ ಬದ್ಧನಾಗಿಲ್ಲ ಎನ್ನುತ್ತಾರೆ. ಪಾಪಿಯ ಇಚ್ಛೆಯಂತೆ ಆಡುತ್ತಿಲ್ಲ ಎನ್ನುತ್ತಾರೆ...
ಭಿಕ್ಷುಗಳೇ, ಇಲ್ಲಿ ಜಿಹ್ವೆಯಿಂದ ಗ್ರಹಿಸಬಹುದಾದಂತಹ ವಿಷಯಗಳಿವೆ, ಅವು ಆಸೆ ಹುಟ್ಟಿಸುವಂತಹವು, ಒಪ್ಪುವಂತಹವು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಆದರೂ ಸಹಾ ಭಿಕ್ಷುಗಳು ಇಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವಕ್ಕೆ ಅಂಟಿದಿದ್ದರೆ, ಆತನು ಮಾರನ ವಲಯಕ್ಕೆ ಪ್ರವೇಶಿಸಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ವಶವಾಗಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ಬಂಧನಕ್ಕೆ ಬದ್ಧನಾಗಿಲ್ಲ ಎನ್ನುತ್ತಾರೆ. ಪಾಪಿಯ ಇಚ್ಛೆಯಂತೆ ಆಡುತ್ತಿಲ್ಲ ಎನ್ನುತ್ತಾರೆ...
ಭಿಕ್ಷುಗಳೇ, ಇಲ್ಲಿ ಮನಸ್ಸಿನಿಂದ ಗ್ರಹಿಸಬಹುದಾದಂತಹ ವಿಷಯಗಳಿವೆ. ಅವು ಆಸೆ ಹುಟ್ಟಿಸುವಂತಹುದು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಆದರೂ ಸಹಾ ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವಕ್ಕೆ ಅಂಟಿದಿದ್ದರೆ, ಆತನು ಮಾರನ ವಲಯಕ್ಕೆ ಪ್ರವೇಶಿಸಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ವಶವಾಗಿಲ್ಲ ಎನ್ನುತ್ತಾರೆ. ಆತನಿಗೆ ಮಾರನ ಬಂಧನಕ್ಕೆ ಬದ್ಧನಾಗಿಲ್ಲ ಎನ್ನುತ್ತಾರೆ. ಪಾಪಿಯ ಇಚ್ಛೆಯಂತೆ ಆಡುತ್ತಿಲ್ಲ ಎನ್ನುತ್ತಾರೆ.


35.12.2 ದುತಿಯ ಮಾರಪಾಸ ಸುತ್ತಂ (ದ್ವಿತೀಯ ಮಾರಪಾಶ ಸುತ್ತ)

115. ಭಿಕ್ಷುಗಳೇ, ಚಕ್ಷುವಿಞ್ಞಾನದಿಂದ ಗ್ರಹಿಸಬಹುದಾದ ರೂಪಗಳು ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವೇನಾದರೂ ಅವುಗಳಲ್ಲಿ ಅನಂದಿಸಿದರೆ, ಸ್ವಾಗತಿಸಿದರೆ, ಅಂಟಿಕೊಂಡರೆ ಅಂತಹ ಭಿಕ್ಷುವಿಗೆ ರೂಪಗಳಿಗೆ ಬಂಧಿತನಾದ ಭಿಕ್ಷು ಎನ್ನುವರು. ಅಂತಹವ ಮಾರನ ವಲಯದಲ್ಲಿ ಪ್ರವೇಶಿಸಿರುತ್ತಾನೆ. ಅಂತಹವ ಮಾರನ ವಶದಲ್ಲಿದ್ದಾನೆ, ಮಾರನ ಬಿಗಿಪಾಶದಲ್ಲಿದ್ದಾನೆ. ಅಂತಹವ ಪಾಪಿಯ ಇಚ್ಛೆಯಂತೆ ಪ್ರವತರ್ಿಸುತ್ತಿದ್ದಾನೆ ಎನ್ನುತ್ತಾರೆ...
ಭಿಕ್ಷುಗಳೇ, ನಾಲಿಗೆಯ ವಿಞ್ಞಾನದಿಂದ ಗ್ರಹಿಸಬಹುದಾದ ರಸಗಳಿವೆ... ಮನೋವಿಞ್ಞಾನದಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಇಷ್ಟ ಹುಟ್ಟಿಸುವಂತಹುದು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಆದರೆ ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಅಂಟಿಕೊಂಡರೆ ಅಂತಹ ಭಿಕ್ಷುವಿಗೆ ಧಮ್ಮಗಳಿಗೆ ಮತ್ತು ಮನೋವಿಞ್ಞಾನಕ್ಕೆ ಬದ್ಧನಾಗಿರುವನೆಂದು, ಮಾರನ ಆವಾಸದಲ್ಲಿ ಪ್ರವೇಶಿಸಿರುವನೆಂದು, ಮಾರನ ವಶನಾಗಿರುವನೆಂದು, ಮಾರಪಾಶದಿಂದ ಬಿಗಿಗೊಳಿಸಲ್ಪಟ್ಟಿದ್ದಾನೆಂದು, ಮಾರ ಬಂಧನದಲ್ಲಿ ಬದ್ಧನಾಗಿರುವನೆಂದು ಹಾಗು ಪಾಪಿಯ ಇಚ್ಛೆಯಂತೆ ವತರ್ಿಸುವನೆಂದು ಕರೆಯುತ್ತಾರೆ.
ಭಿಕ್ಷುಗಳೇ, ಇಲ್ಲಿ ಚಕ್ಷುವಿಞ್ಞಾನದಿಂದ ಗ್ರಹಿಸಬಹುದಾದಂತಹ ರೂಪಗಳಿವೆ, ಅವು ಇಷ್ಟ ಹುಟ್ಟಿಸುವಂತಹುದು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾಇಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವುಗಳಲ್ಲಿ ಅಂಟದಿದ್ದರೆ, ಅಂತಹ ಭಿಕ್ಷುವಿಗೆ ಚಕ್ಷು ವಿಞ್ಞಾನದಿಂದ ಹಾಗು ರೂಪಗಳಿಂದ ಮುಕ್ತನಾದ ಭಿಕ್ಷುವೆನ್ನುತ್ತಾರೆ. ಅಂತಹವನಿಗೆ ಮಾರನ ಆವಾಸಕ್ಕೆ ಪ್ರವೇಶಿಸಿಲ್ಲ ಎನ್ನುತ್ತಾರೆ. ಅಂತಹವನು ಮಾರನಿಗೆ ವಶನಾಗಿಲ್ಲ, ಮಾರಪಾಶಕ್ಕೆ ಸಿಲುಕಿಲ್ಲ, ಮಾರ ಬಂಧನದಿಂದ ಮುಕ್ತನು, ಮಾರನ ಇಚ್ಛೆಯಂತೆ ವತರ್ಿಸದವನು ಎನ್ನುತ್ತಾರೆ...
ಭಿಕ್ಷುಗಳೇ, ಇಲ್ಲಿ ಜಿಹ್ವಾ ವಿಞ್ಞಾನದಿಂದ ಗ್ರಹಿಸಬಹುದಾದಂತಹ ರಸಗಳಿವೆ... ಮನೋವಿಞ್ಞಾನದಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ. ಅವು ಇಷ್ಟಪಡುವಂತಹುದು, ಒಪ್ಪುವಂತಹುದು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಆದರೆ ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಇವುಗಳಲ್ಲಿ ಅಂಟದಿದ್ದರೆ, ಅಂತಹ ಭಿಕ್ಷುವಿಗೆ ಮನೋವಿಞ್ಞಾನ ಹಾಗು ಧಮ್ಮಗಳಿಂದ ಮುಕ್ತನಾದ ಭಿಕ್ಷುವೆನ್ನುತ್ತಾರೆ. ಅಂತಹವನು ಮಾರನ ವಾಸಕ್ಕೆ ಪ್ರವೇಶಿಸಿಲ್ಲ, ಅಂತಹವನು ಮಾರನಿಗೆ ವಶನಾಗಿಲ್ಲ, ಮಾರಪಾಶಕ್ಕೆ ಸಿಲುಕಿಲ್ಲ, ಮಾರಬಂಧನದಿಂದ ಮುಕ್ತನು, ಪಾಪಿಯ ಇಚ್ಛೆಯಂತೆ ವತರ್ಿಸದವನು ಎನ್ನುತ್ತಾರೆ.

35.12.3 ಲೋಕನ್ತಗಮನ ಸುತ್ತಂ

116. ಭಿಕ್ಷುಗಳೇ, ನಾನು ಹೇಳುತ್ತಿದ್ದೇನೆ, ಲೋಕದ ಅಂತ್ಯವನ್ನು ಅರಿಯಲಾಗುವುದಿಲ್ಲ, ಕಾಣಲಾಗುವುದಿಲ್ಲ ಅಥವಾ ಪ್ರಯಾಣಿಸಲಾಗುವುದಿಲ್ಲ. ಆದರೂ ಭಿಕ್ಷುಗಳೇ, ಲೋಕದ ಅಂತ್ಯಕ್ಕೆ ತಲುಪದೆ ದುಃಖದ ಅಂತ್ಯವಿದೆ ಎಂದು ನಾನು ಘೋಷಿಸುವುದಿಲ್ಲ. ಹೀಗೆ ಭಗವಾನರು ಹೇಳಿದ ನಂತರ ಆಸನದಿಂದ ಎದ್ದು ತಮ್ಮ ವಾಸಸ್ಥಳದಲ್ಲಿ ಸೇರಿದರು. ಹೀಗೆ ಭಗವಾನರು ಹೊರಟನಂತರ ಭಿಕ್ಷುಗಳು ಹೀಗೆ ಯೋಚಿಸಿದರು: ಆಯುಷ್ಮಂತರೇ, ಈಗ ಭಗವಾನರು ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸಿ, ವಿಶ್ರಾಂತಿಗೆ ತೆರಳಿರುವರು. ಆದರೆ ವಿವರವಾಗಿ ವ್ಯಾಖ್ಯಾನಿಸಿಲ್ಲ. ಈಗ ಭಗವಾನರಿಂದ ಸಂಕ್ಷಿಪ್ತವಾಗಿ ಗಳಿಸಿರುವ ಈ ಧಮ್ಮವನ್ನು ವಿವರವಾಗಿ ತಿಳಿಸುವವರು ಯಾರು?
ಆಗ ಅವರು ನಿರ್ಧರಿಸಿದರು: ಆಯುಷ್ಮಂತ ಆನಂದರವರು ಶಾಸ್ತರಿಂದಲೇ ಪ್ರಶಂಸಿತರಾಗಿದ್ದಾರೆ. ಸಂಘದಲ್ಲಿರುವ ಜ್ಞಾನಿ ಸಹಬ್ರಹ್ಮಚಾರಿಗಳಿಂದಲೂ ಸಹಾ ಪ್ರಶಂಸಿತರಾಗಿರುವರು. ಖಂಡಿತವಾಗಿ ಆಯುಷ್ಮಂತ ಆನಂದರವರೇ ಇದರ ಅರ್ಥ ವಿವರವಾಗಿ ನುಡಿಯಲು ಸಮರ್ಥರಾಗಿರುವರು. ಹೀಗಾಗಿ ಅವರ ಬಳಿಗೆ ಹೋಗೋಣ ಹಾಗು ಅವರಿಂದ ವಿವರವಾದ ವಿವರಣೆ ಪಡೆಯೋಣ.
ನಂತರ ಅವರೆಲ್ಲ ಆಯುಷ್ಮಂತ ಆನಂದರ ಬಳಿಗೆ ಸಮೀಪಿಸಿದರು ಹಾಗು ಅವರಲ್ಲಿ ಕುಶಲ ಕ್ಷೇಮಗಳನ್ನು ವಿನಿಮಯಿಸಿಕೊಂಡರು. ನಂತರ ಒಂದೆಡೆ ಕುಳಿತರು. ಪೂಜ್ಯ ಆನಂದರವರು ವಿವರಿಸಲಿ ಎಂದರು.
ಆಗ ಆನಂದರವರು ಹೀಗೆ ವಿವರಿಸಿದರು: ಆಯುಷ್ಮಂತರೇ, ಇದು ಹೇಗೆಂದರೆ ಒಬ್ಬರು ಸಾರಯುಕ್ತವಾದ ಚೇಗುವನ್ನು (ಮರದ ಮದ್ಯದ ತಿರುಳು) ಪಡೆಯಲಿಚ್ಛಿಸುತ್ತಾ, ಹುಡುಕುತ್ತಾ, ಅಲೆದಾಡುತ್ತಾ, ಮರದ ಬಳಿಗೆ ಬಂದು ಆತನು ಮರದ ಸಾರವನ್ನು ಹುಡುಕುತ್ತಾ ಅವನ್ನು ರೆಂಬೆಗಳಲ್ಲಿ ಹಾಗು ಎಲೆಗಳಲ್ಲಿ ಹುಡುಕುತ್ತಾನೆ. ಹಾಗೆ ನೀವೂ ಸಹಾ ಹುಡುಕಲಿದ್ದೀರಿ. ಯಾವಾಗ ನೀವು ಭಗವಾನರಿಗೆ ಮುಖಾಮುಖಿಯಾದರೋ, ಆಗಲೇ ಭಗವಾನರ ಬಳಿಯಲ್ಲಿ ಕೇಳಬಹುದಿತ್ತು. ಅಲ್ಲಿ ಅಲಕ್ಷಿಸಿ ಇಲ್ಲಿ ಬಂದಿರುವಿರಿ. ಆದರೆ ಮಿತ್ರರೇ, ಭಗವಾನರು ಏನನ್ನೆಲ್ಲಾ ಅರಿಯಬೇಕೋ ಅದೆಲ್ಲವನ್ನು ಅರಿತಿದ್ದಾರೆ, ಯಾವುದೆಲ್ಲವನ್ನು ದಶರ್ಿಸಬೇಕೋ ಅವನ್ನೆಲ್ಲಾ ದಶರ್ಿಸಿದ್ದಾರೆ. ಪ್ರವರ್ತಕರು, ಅರ್ಥಕಾರಿಯನ್ನೇ ಬೋಧಿಸುವವರು, ಅಮರತ್ವಧಾತರೂ, ಧಮ್ಮಸ್ವಾಮಿಗಳು, ತಥಾಗತರೂ ಆಗಿದ್ದಾರೆ. ಹೀಗಾಗಿ ನೀವು ಆಗಲೇ ಪ್ರಶ್ನಿಸಬೇಕಿತ್ತು. ಅವರು ವಿವರಿಸುತ್ತಿದ್ದಂತೆಯೇ ನೀವು ನೆನಪಿನಲ್ಲಿಡಬೇಕಿತ್ತು.
ಖಂಡಿತವಾಗಿ ಆಯುಷ್ಮಂತ ಆನಂದರವರೇ, ಭಗವಾನರು ಯಾವುದೆಲ್ಲವನ್ನು ಅರಿಯಬೇಕೋ ಅವೆಲ್ಲವನ್ನು ಅರಿತಿದ್ದಾರೆ. ಯಾವುದೆಲ್ಲವೂ ದಶರ್ಿಸಬೇಕೋ ಅವೆಲ್ಲವನ್ನು ದಶರ್ಿಸಿದ್ದಾರೆ. ಅವರು ಚಕ್ಷುವಂತರು, ಜ್ಞಾನಸ್ವರೂಪಿಗಳು, ಧಮ್ಮಸ್ವರೂಪಿಗಳು, ಬ್ರಹ್ಮಸ್ವರೂಪಿಗಳು, ಕ್ರಿಯಾಶೀಲರು, ಪ್ರವರ್ತಕರೂ, ಅರ್ಥವನ್ನೇ ಉಪದೇಶಿಸುವವರು, ಅಮರತ್ವದ ಧಾತರೂ ಧಮ್ಮಸ್ವಾಮಿಗಳು, ತಥಾಗತರೂ ಆಗಿದ್ದಾರೆ. ನಾವು ಆಗಲೇ ಅರ್ಥ ವ್ಯಾಖ್ಯಾನವನ್ನು ಕೇಳಬೇಕಿತ್ತು ಹಾಗು ಆಲಿಸಿ ನೆನಪಿಡಬೇಕಿತ್ತು. ಅವರೂ ಆಯುಷ್ಮಂತ ಆನಂದರವರು ಶಾಸ್ತರಿಂದಲೇ ಪ್ರಶಂಸಿತರಾಗಿರುವಿರಿ ಹಾಗು ಜ್ಞಾನವುಳ್ಳ ಸಹ ಬ್ರಹ್ಮಚಾರಿಗಳಿಂದಲೂ ಸ್ತುತಿಗೆ ಒಳಗಾರಿರುವಿರಿ. ಹೀಗಾಗಿ ಭಗವಾನರಿಂದ ಬೋಧಿತವಾದ ಈ ಸಂಕ್ಷಿಪ್ತ ಸುತ್ತಕ್ಕೆ ತಾವೇ ಇದರ ಅರ್ಥವನ್ನು ವಿವರವಾಗಿ ತಿಳಿಸಬೇಕೆಂದು ಕೇಳಿಕೊಳ್ಳುತ್ತೇವೆ.
ಹಾಗಾದರೆ ಆಯುಷ್ಮಂತರೇ, ಗಮನವಿಟ್ಟು ಆಲಿಸಿರಿ ನಾನು ತಿಳಿಸುವೆನು.
ಸರಿ ಆಯುಷ್ಮಂತರೇ ಎಂದು ಭಿಕ್ಖುಗಳು ಪುನರುಚ್ಛರಿಸಿದರು. ನಂತರ ಆಯುಷ್ಮಂತ ಆನಂದರು ಹೀಗೆ ವಿವರಿಸತೊಡಗಿದರು.
ಆಯುಷ್ಮಂತರೇ, ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸಿ ಭಗವಾನರು ಆಸನದಿಂದ ಎದ್ದು ತಮ್ಮ ನಿವಾಸಕ್ಕೆ ಹೊರಟರು. ಬೋಧನೆ ಹೀಗಿತ್ತು ಅಲ್ಲವೇ? ಭಿಕ್ಷುಗಳೇ, ಲೋಕದ ಅಂತ್ಯವನ್ನು ಅರಿಯಲಾಗುವುದಿಲ್ಲ, ಕಾಣಲಾಗುವುದಿಲ್ಲ, ಪ್ರಯಾಣದಿಂದ ತಲುಪಲಾಗುವುದಿಲ್ಲ. ಆದರೂ ಭಿಕ್ಷುಗಳೇ, ಲೋಕದ ಅಂತ್ಯವನ್ನು ತಲುಪಲಾಗದೆ ದುಃಖದ ಅಂತ್ಯವನ್ನು ಮಾಡಲಾಗುವುದಿಲ್ಲ. ಇದರ ವಿಸ್ತಾರವಾದ ಅರ್ಥವು ಹೀಗೆ ಬರುವುದು. ಈ ಲೋಕದಲ್ಲಿ ಲೋಕಸಂಜ್ಞೆ (ಗ್ರಹಿಕೆ) ಒಂದಿದೆ. (ಲೋಕದ ಬಗ್ಗೆ ಗ್ರಹಿಸುವವರು). ಹಾಗೆಯೇ ಲೋಕಮಾನಿಯೊಂದಿದೆ (ಲೋಕದ ಬಗ್ಗೆ ಅಳತೆ ಮಾಡುವವರು). ಹೀಗೆಂದು ಆರ್ಯರ ವಿನಯದಲ್ಲಿ ಹೇಳಲಾಗಿದೆ. ಮತ್ತೆ ಇಲ್ಲಿ ಭಿಕ್ಷುಗಳೇ, ಯಾವುದು ಲೋಕಸನ್ಯಾ ಹಾಗು ಲೋಕಮಾನಿಯ? ಇಲ್ಲಿ ಚಕ್ಷುವಿನಿಂದ ಲೋಕದ ಗ್ರಹಿಕೆಯಾಗುವುದು ಹಾಗು ಲೋಕದ ಅಳತೆಯಾಗುವುದು. ಅದೇರೀತಿ ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಲೋಕದ ಬಗ್ಗೆ ಗ್ರಹಿಸುವವರು ಹಾಗು ಲೋಕವನ್ನು ಅಳತೆ ಮಾಡುತ್ತಾರೆ. ಹೀಗೆ ಇದನ್ನು ಆರ್ಯರ ವಿನಯದಲ್ಲಿ ಹೇಳಲಾಗುತ್ತದೆ.
ಆಯುಷ್ಮಂತರೇ, ಯಾವಾಗ ಭಗವಾನರು ಆಸನದಿಂದೆದ್ದು ವಾಸಸ್ಥಳಕ್ಕೆ ಹೋಗುವ ಮುನ್ನ ಇದನ್ನು ಸಂಕ್ಷಿಪ್ತವಾಗಿ ಹೇಳಿದರು. ಆದರೆ ವಿಸ್ತಾರವಾಗಿ ಹೇಳಲಿಲ್ಲ. ಹೇಗೆಂದರೆ: ಭಿಕ್ಷುಗಳೇ, ನಾನು ನುಡಿಯುತ್ತಿದ್ದೇನೆ, ಲೋಕದ ಅಂತ್ಯವನ್ನು ಅರಿಯಲಾಗುವುದಿಲ್ಲ, ಕಾಣಲಾಗುವುದಿಲ್ಲ ಮತ್ತು ತಲುಪಲಾಗುವುದಿಲ್ಲ. ಆದರೂ ಭಿಕ್ಷುಗಳೇ, ನಾನು ಹೇಳುತ್ತಿದ್ದೇನೆ, ಲೋಕದ ಅಂತ್ಯವನ್ನು ತಲುಪಲಾಗದೆ ದುಃಖದ ಅಂತ್ಯವನ್ನು ಮಾಡಲಾಗುವುದಿಲ್ಲ. ಭಿಕ್ಷುಗಳೇ ಸಾರಾಂಶವನ್ನು ನಾನು ಹೀಗೆ ನುಡಿದಿದ್ದೇನೆ. ಆದರೂ ನಿಮಗೆ ಸಮಾಧಾನವಾಗಿಲ್ಲದಿದ್ದರೆ ಭಗವಾನರ ಬಳಿಯಲ್ಲಿ ವಿವರಣೆಯನ್ನು ಪಡೆಯೋಣ. ಹೇಗೆ ಭಗವಾನರು ನುಡಿಯುವರೋ ಹಾಗೆಯೇ ನೆನಪಿಡಿ.
ಹಾಗೇ ಆಗಲಿ ಆಯುಷ್ಮಂತರೇ ಹೀಗೆ ನುಡಿದ ಆ ಭಿಕ್ಷುಗಳೆಲ್ಲಾ ಅಲ್ಲಿಂದ ಎದ್ದು ಭಗವಾನರ ಬಳಿಯಲ್ಲಿ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತು ನಡೆದ ವೃತ್ತಾಂತವನ್ನೆಲ್ಲಾ ತಿಳಿಸಿದರು. ಹಾಗು ಹೀಗೆ ಮುಂದುವರಿಸಿದರು: ಭಂತೆ, ನಂತರ ನಾವು ಆನಂದರವನ್ನು ಭೇಟಿ ಮಾಡಿದಾಗ ಈ ರೀತಿಯಾಗಿ ಅವರು ಉತ್ತರಿಸಿದ್ದಾರೆ.
ಭಿಕ್ಷುಗಳೇ, ಆನಂದರವರು ಪಂಡಿತರಾಗಿದ್ದಾರೆ, ಮಹಾಪ್ರಜ್ಞಾವಂತರಾಗಿದ್ದಾರೆ, ನೀವು ನನಗೂ ಸಹಾ ಇದರ ವಿಸ್ತಾರ ಧಮ್ಮವನ್ನು ಕೇಳಿದ್ದಕ್ಕೆ ನಾವು ಸಹಾ ಇದೇ ವಿಧದಲ್ಲಿ ವಿವರಿಸುತ್ತಿದ್ದೆನು. ಇದೇ ಅರ್ಥದಲ್ಲಿ ತಿಳಿಸುತ್ತಿದ್ದೆನು. ನೀವು ಇದನ್ನೇ ಚೆನ್ನಾಗಿ ನೆನಪಿಡಿರಿ.

35.12.4 ಕಾಮಗುಣ ಸುತ್ತಂ

117. ಭಿಕ್ಷುಗಳೇ, ಸಮ್ಮಾಸಂಬೋಧಿ ಪ್ರಾಪ್ತಿಗೆ ಮುನ್ನ ನಾನಿನ್ನೂ ಬೋಧಿಸತ್ವನಾಗಿದ್ದಾಗ, ಸಮ್ಮಾಸಂಬುದ್ಧನಾಗುವ ಮುನ್ನ ನನ್ನಲ್ಲಿ ಈ ಬಗೆಯ ಯೋಚನೆಗಳು ಉಂಟಾದವು. ಈ ಹಿಂದೆ ಐದು ಇಂದ್ರೀಯಗಳ ಮೂಲಕ ಅನುಭವಿಸಿದ ಸುಖಗಳೆಲ್ಲ ಹೊರಟುಹೋಗಿವೆ, ನಿರೋಧಗೊಂಡಿವೆ ಹಾಗು ಬದಲಾಗಿವೆ. ಆದರೂ ಭೂತದಲ್ಲಿಯೇ ಹೆಚ್ಚು ಹರಿಯುತ್ತಿದೆ, ವರ್ತಮಾನ ಹಾಗು ಭವಿಷ್ಯದಲ್ಲಿ ಕಡಿಮೆ ಅಲೆದಾಡುತ್ತಿದೆ. ನನ್ನ ಮನಸ್ಸಿನಲ್ಲಿ ಅವುಗಳ ಗುರುತುಗಳು ಹಾಗೇ ಉಳಿದಿವೆ. ಆದ್ದರಿಂದ ನನ್ನ ಕ್ಷೇಮಕ್ಕಾಗಿ ನನ್ನ ಮನಸ್ಸನ್ನು ಅಪ್ರಮತ್ತವಾಗಿ ಹಾಗು ಜಾಗರೂಕವಾಗಿ ರಕ್ಷಿಸಬೇಕಾಗಿದೆ.
ಆದ್ದರಿಂದ ಭಿಕ್ಷುಗಳೇ, ನಿಮ್ಮ ಮನಸ್ಸಿನಲ್ಲಿಯು ಸಹಾ ನೀವು ಬಿಟ್ಟಂತಹ ಐದು ಇಂದ್ರೀಯಗಳ ಸುಖಭೋಗಗಳ ಛಾಯೆ ಅಥವಾ ಗುರುತುಗಳು ಉಳಿದಿರಬಹುದು. ಅವು ವರ್ತಮಾನ ಹಾಗು ಭವಿಷ್ಯಕ್ಕಿಂತ ಹೆಚ್ಚಾಗಿ ಕಾಡಬಹುದು. ಆದ್ದರಿಂದ ಭಿಕ್ಷುಗಳೇ, ನಿಮ್ಮ ಕ್ಷೇಮಕ್ಕಾಗಿ ಹೊಂದಿಕೆಯಾಗಿ, ಅಪ್ರಮತ್ತರಾಗಿ ಸಾಧಿಸಿರಿ. ಜಾಗರೂಕರಾಗಿ ಈ ಐದು ಇಂದ್ರೀಯಗಳ ಬಗ್ಗೆ ಚಿತ್ತರಕ್ಷಣೆಯನ್ನು ಮಾಡಿಕೊಳ್ಳಿರಿ. ನೀವು ಭೌತಿಕವಾಗಿ ತ್ಯಾಗ ಮಾಡಿದ್ದರೂ ಸಹಾ ಅವುಗಳ ಛಾಯೆ ಅಥವಾ ಗುರುತುಗಳು ನಿಮ್ಮ ಮನದಲ್ಲಿರುತ್ತವೆ.
ಆದ್ದರಿಂದ ಭಿಕ್ಷುಗಳೇ, ಆ ಆಧಾರವನ್ನು ಅರ್ಥಮಾಡಿಕೊಳ್ಳಿರಿ. ಎಲ್ಲಿ ಕಣ್ಣುಗಳು ನಿರೋಧವಾಗಿದೆಯೋ ಮತ್ತು ರೂಪಗಳ ಗ್ರಹಿಕೆಯು ಅಳಿಸಿಹೋಗಿದೆಯೋ ಆ ಆಧಾರವನ್ನು ಅರ್ಥಮಾಡಿಕೊಳ್ಳಿರಿ. ಎಲ್ಲಿ ಕಿವಿಯು ನಿರೋಧವಾಗಿದೆಯೋ ಮತ್ತು ಶಬ್ದಗಳ ಗ್ರಹಿಕೆಯು ಅಳಿಸಿಹೋಗಿದೆಯೋ ಆ ಆಧಾರವನ್ನು ಅರ್ಥಮಾಡಿಕೊಳ್ಳಿರಿ.... ಎಲ್ಲ ಮನಸ್ಸು ನಿರೋಧವಾಗಿದೆಯೋ ಮತ್ತು ಧಮ್ಮದ ಸಂಜ್ಞೆಯು ಮರೆಯಾಗಿದೆಯೋ ಆ ಆಧಾರವನ್ನು ಅಥರ್ೈಸಿಕೊಳ್ಳಿರಿ.
ಈ ರೀತಿಯಾಗಿ ನುಡಿದ ನಂತರ ಭಗವಾನರು ತಮ್ಮ ಆಸನದಿಂದೆದ್ದು ವಾಸಸ್ಥಾನಕ್ಕೆ ಹೊರಟರು. ಹೀಗೆ ಹೀಗೆ ಭಗವಾನರು ಹೊರಟನಂತರ ಭಿಕ್ಷುಗಳು ಹೀಗೆ ಯೋಚಿಸಿದರು: ಆಯುಷ್ಮಂತರೇ, ಈಗ ಭಗವಾನರು ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸಿ, ವಿಶ್ರಾಂತಿಗೆ ತೆರಳಿರುವರು. ಆದರೆ ವಿವರವಾಗಿ ವ್ಯಾಖ್ಯಾನಿಸಿಲ್ಲ. ಈಗ ಭಗವಾನರಿಂದ ಸಂಕ್ಷಿಪ್ತವಾಗಿ ಗಳಿಸಿರುವ ಈ ಧಮ್ಮವನ್ನು ವಿವರವಾಗಿ ತಿಳಿಸುವವರು ಯಾರು?
ಆಗ ಅವರು ನಿರ್ಧರಿಸಿದರು: ಆಯುಷ್ಮಂತ ಆನಂದರವರು ಶಾಸ್ತರಿಂದಲೇ ಪ್ರಶಂಸಿತರಾಗಿದ್ದಾರೆ. ಸಂಘದಲ್ಲಿರುವ ಜ್ಞಾನಿ ಸಹಬ್ರಹ್ಮಚಾರಿಗಳಿಂದಲೂ ಸಹಾ ಪ್ರಶಂಸಿತರಾಗಿರುವರು. ಖಂಡಿತವಾಗಿ ಆಯುಷ್ಮಂತ ಆನಂದರವರೇ ಇದರ ಅರ್ಥ ವಿವರವಾಗಿ ನುಡಿಯಲು ಸಮರ್ಥರಾಗಿರುವರು. ಹೀಗಾಗಿ ಅವರ ಬಳಿಗೆ ಹೋಗೋಣ ಹಾಗು ಅವರಿಂದ ವಿವರವಾದ ವಿವರಣೆ ಪಡೆಯೋಣ.
ನಂತರ ಅವರೆಲ್ಲ ಆಯುಷ್ಮಂತ ಆನಂದರ ಬಳಿಗೆ ಸಮೀಪಿಸಿದರು ಹಾಗು ಅವರಲ್ಲಿ ಕುಶಲ ಕ್ಷೇಮಗಳನ್ನು ವಿನಿಮಯಿಸಿಕೊಂಡರು. ನಂತರ ಒಂದೆಡೆ ಕುಳಿತರು. ಪೂಜ್ಯ ಆನಂದರವರು ವಿವರಿಸಲಿ ಎಂದರು.
ಮಿತ್ರರೇ, ಯಾವಾಗ ಭಗವಾನರು ಸುತ್ತವನ್ನು ಸಂಕ್ಷಿಪ್ತವಾಗಿ ಹೇಳಿ, ವಿವರವಾಗಿ ಉಪದೇಶಿಸಿದ ಆ ಬೋಧನ ಸಾರಾಂಶವು ಹೀಗಿದೆಯಲ್ಲವೇ? ಆದ್ದರಿಂದ ಭಿಕ್ಷುಗಳೇ, ಆ ಆಧಾರವನ್ನು ಅರ್ಥಮಾಡಿಕೊಳ್ಳಿರಿ. ಎಲ್ಲ ಕಣ್ಣುಗಳು ಹಾಗು ರೂಪಗಳೂ ನಿರೋಧವಾಗುತ್ತದೊ... ಆ ಆಧಾರಗಳನ್ನು ಅರ್ಥಮಾಡಿಕೊಳ್ಳಿರಿ. ಎಲ್ಲಿ ಮನಸ್ಸು ಹಾಗು ಧಮ್ಮಗಳು ನಿರೋಧಗೊಳ್ಳುತ್ತದೋ ಆ ಆಧಾರಗಳನ್ನು ಅರ್ಥಮಾಡಿಕೊಳ್ಳಿರಿ. ನಾನು ಈ ವಿವರಣೆಯ ಸಾರಾಂಶವನ್ನು ಹೀಗೆ ಅರ್ಥಮಾಡಿಕೊಂಡಿದ್ದೇನೆ. ಹೀಗೆಂದು ಭಗವಾನರು ಆರು ಇಂದ್ರೀಯ ಆಯತನಗಳ ಆಧಾರಗಳ ಬಗ್ಗೆ ಹೀಗೆ ವಿವರಿಸಿದ್ದಾರೆ.
ಆಯುಷ್ಮಂತರೇ, ಯಾವಾಗ ಭಗವಾನರು ತಮ್ಮ ಆಸನದಿಂದೆದ್ದು ತಮ್ಮ ವಿಹಾರಕ್ಕೆ ಮರಳಿದರೋ ಅದಕ್ಕೆ ಮುಂಚೆ ಪ್ರವಚಿಸಿದ್ದಂತಹ ವಿವರವಿಲ್ಲದ ಸಾರಾಂಶವನ್ನು ತಿಳಿಸಿದ್ದರೋ ಅವರ ವಿವರಣೆಯನ್ನು ನಾನು ನಿಮಗೆ ತಿಳಿಸಿದ್ದೇನೆ. ಈಗ ಮಿತ್ರರೇ, ನೀವು ಬಯಸಿದ್ದಲ್ಲಿ ಭಗವಾನರನ್ನು ದಶರ್ಿಸಿ ಅವರಲ್ಲಿಯೇ ವಿವರವನ್ನು ಕೇಳಿರಿ. ಹೇಗೆ ಭಗವಾನರು ವಿವರಿಸುವೋ ಹಾಗೆಯೇ ಅವನ್ನು ನೆನಪಿಡಿ.
ಆಯಿತು ಆಯುಷ್ಮಂತರೇ ಎಂದು ಭಿಕ್ಷುಗಳು ವಂದಿಸಿ, ತಮ್ಮ ಆಸನದಿಂದ ಎದ್ದು ಭಗವಾನರಲ್ಲಿಗೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ವಿವರವನ್ನೆಲ್ಲಾ ನುಡಿದರು ಹಾಗು ಹೀಗೆ ಹೇಳಿದರು: ನಂತರ ಭಂತೆ, ನಾವು ಆಯುಷ್ಮಂತ ಆನಂದರವರ ಬಳಿಗೆ ಹೋಗಿ ಅರ್ಥವಿವರಣೆಯನ್ನು ಕೇಳಿದೆವು. ಆಯುಷ್ಮಂತ ಆನಂದರವರು ನಮಗೆ ಈ ವಿಧದಲ್ಲಿ ಅರ್ಥವನ್ನು ಈ ವಾಕ್ಯಗಳಲ್ಲಿ, ಈ ರೀತಿಯಲ್ಲಿ ವಿವರಿಸಿದರು.
ಭಿಕ್ಷುಗಳೇ, ಆಯುಷ್ಮಂತ ಆನಂದರವರು ಪಂಡಿತರಾಗಿದ್ದಾರೆ. ಆಯುಷ್ಮಂತ ಆನಂದರವರು ಮಹಾ ಪ್ರಜ್ಞಾರಾಗಿದ್ದಾರೆ. ನೀವು ನನ್ನಲ್ಲಿಯು ಇದರ ಅರ್ಥ ವಿವರಣೆಯನ್ನು ಕೇಳಿದ್ದರೆ ನಾನು ಸಹಾ ಇದೇರೀತಿಯಲ್ಲಿ ವಿತರಿಸುತ್ತಿದ್ದೆನು. ಇದರ ಅರ್ಥವು ಹೀಗೆಯೇ ಇದೆ ಮತ್ತು ನೀವು ಹೀಗೆಯೇ ಇದನ್ನು ನೆನಪಿಡಿರಿ.

35.12.5 ಸಕ್ಕಪಞ್ಞ ಸುತ್ತಂ (ಸಕ್ಕನ ಪ್ರಶ್ನೆಯ ಸುತ್ತ)

118. ಒಮ್ಮೆ ಭಗವಾನರು ರಾಜಗೃಹದ ಗೃದ್ದಕೂಟ ಪರ್ವತದಲ್ಲಿ ವಿಹರಿಸುತ್ತಿದ್ದರು. ಆಗ ದೇವತೆಗಳ ಒಡೆಯ ಸಕ್ಕನು ಭಗವಾನರ ಬಳಿಗೆ ಸಮೀಪಿಸಿದನು. ಭಗವಾನರಿಗೆ ಮನಃಪೂರ್ವಕವಾಗಿ ವಂದಿಸಿ ಒಂದೆಡೆ ನಿಂತನು ಹಾಗು ಹೀಗೆ ಪ್ರಶ್ನಿಸಿದನು:  ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ.
ಓ ದೇವತೆಗಳ ಒಡೆಯನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ...
ಓ ದೇವತೆಗಳ ಒಡೆಯನೆ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ.
ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ದೇವತೆಗಳೊಡೆಯ ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು.
ಓ ದೇವತೆಗಳ ಒಡೆಯನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ.
ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ದೇವತೆಗಳ ಒಡೆಯನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.12.6 ಪಂಚಸಿಖ ಸುತ್ತಂ

119. ಒಮ್ಮೆ ಭಗವಾನರು ರಾಜಗೃಹದ ಗೃದ್ದಕೂಟ ಪರ್ವತದಲ್ಲಿ ವಿಹರಿಸುತ್ತಿದ್ದರು. ಆಗ ಪಞ್ಞಸಿಖ (ಪಂಚಸಿಖ)ನೆಂಬ ಗಂಧರ್ವ ಪುತ್ರನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ನಿಂತನು. ನಂತರ ಭಗವಾನರಲ್ಲಿ ಹೀಗೆ ಪ್ರಶ್ನಿಸಿದನು: ಭಂತೆ ಯಾವ ಕಾರಣದಿಂದ ಹಾಗು ಯಾವ ಬೆಂಬಲದಿಂದಾಗಿ ಹಲವಾರು ಜೀವಿಗಳು ಇದೇ ಜನ್ಮದಲ್ಲಿ ಇಲ್ಲೇ ನಿಬ್ಬಾಣ ಪಡೆಯುವುದಿಲ್ಲ ಹಾಗು ಹಲವಾರು ಜೀವಿಗಳು ಇದೇ ಜನ್ಮದಲ್ಲಿ ಇಲ್ಲೇ ನಿಬ್ಬಾಣವನ್ನು ಪಡೆಯಬಲ್ಲವು?
ಓ ಪಂಚಸಿಖ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ...
ಓ ಪಂಚಸಿಖ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ.
ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ದೇವತೆಗಳೊಡೆಯ ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು.
ಓ ಪಂಚಸಿಖ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ.
ಪಂಚಸಿಖ, ಇದೇ ಕಾರಣದಿಂದ ಇದೇ ಬೆಂಬಲದಿಂದಾಗಿ ಹಲವಾರು ಜೀವಿಗಳು ಇದೇ ಜನ್ಮದಲ್ಲಿ ಇಲ್ಲೇ ನಿಬ್ಬಾಣ ಪ್ರಾಪ್ತಿಮಾಡುವರು.


35.12.7 ಸಾರಿಪುತ್ತ ಸದ್ದಿವಿಹಾರಿಕ ಸುತ್ತಂ

120. ಒಮ್ಮೆ ಆಯುಷ್ಮಂತ ಸಾರಿಪುತ್ರರು ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಭಿಕ್ಷುವೊಬ್ಬನು   ಆಯುಷ್ಮಂತ ಸಾರಿಪುತ್ರರ ಬಳಿಗೆ ಸಮೀಪಿಸಿದನು, ಅವರಿಗೆ ವಂದಿಸಿ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತನು. ನಂತರ ಸಾರಿಪುತ್ರರಿಗೆ ಹೀಗೆ ಹೇಳಿದನು: ಆಯುಷ್ಮಂತ ಸಾರಿಪುತ್ರರೇ, ನನ್ನೊಂದಿಗೆ ವಾಸಿಸುತ್ತಿದ್ದಂತಹ ಭಿಕ್ಷುವೊಬ್ಬನು ಭಿಕ್ಖುಶಿಕ್ಷಣವನ್ನು ತ್ಯಜಿಸಿ ತನ್ನ ಹಿಂದಿನ ಹೀನವಾದ ಜೀವನಕ್ಕೆ ಹಿಂತಿರುಗಿದ್ದಾನೆ.
ಅದು ಹೀಗೆಯೇ ಆಯುಷ್ಮಂತನೇ, ಯಾವಾಗ ಒಬ್ಬನು ಇಂದ್ರಿಯ ದ್ವಾರಗಳನ್ನು ರಕ್ಷಿಸದಿದ್ದರೆ, ಮಿತಹಾರಿಯಲ್ಲದಿದ್ದರೆ, ಜಾಗೃತೆಗೆ ಆಸಕ್ತಿ ತೋರದಿದ್ದರೆ, ಹಾಗೇ ಆಗುವುದು. ಯಾವ ಭಿಕ್ಷುವು ಇಂದ್ರೀಯಗಳ ರಕ್ಷಣೆ ಮಾಡುವುದಿಲ್ಲವೋ ಆಹಾರದಲ್ಲಿ ಮಿತಿ ಅರಿತಿಲ್ಲವೋ ಜಾಗ್ರತೆಯಲ್ಲಿ ನಿರ್ಲಕ್ಷನೋ ಅಂತಹವನು ಜೀವನವಿಡೀ ಪರಿಶುದ್ಧ ಜೀವನ ನಡೆಸುವುದು ಅಸಾಧ್ಯವಾಗಿದೆ. ಆದರೆ ಆಯುಷ್ಮಂತನೇ, ಯಾವ ಭಿಕ್ಷುವು ಇಂದ್ರೀಯ ದ್ವಾರಗಳನ್ನು ರಕ್ಷಿಸುತ್ತಾನೋ ಆಹಾರದಲ್ಲಿ ಮಿತಿಯಿರುವನೋ, ಜಾಗೃತಿಯಲ್ಲಿ ನಿಷ್ಠನೋ, ಅಂತಹವನಿಗೆ ಪವಿತ್ರ ಜೀವನವನ್ನು ನಡೆಸುವುದು ಸಾಧ್ಯವಿದೆ.
ಮತ್ತೆ ಹೇಗೆ ಆಯುಷ್ಮಂತನೇ, ಒಬ್ಬನು ಇಂದ್ರೀಯ ದ್ವಾರಗಳನ್ನು ರಕ್ಷಿಸುತ್ತಾನೆ, ಪಹರೆಯಿಡುತ್ತಾನೆ? ಇಲ್ಲಿ ಕಣ್ಣಿನಿಂದ ರೂಪಗಳನ್ನು ನೋಡಿ, ಭಿಕ್ಷುವು ಅದರ ಸಂಕೇತಗಳನ್ನಾಗಲಿ ಅಥವಾ ವಿವರ ವಿಶೇಷಣಗಳನ್ನಾಗಲಿ ಗುರುತಿಸಲು ಹೋಗುವುದಿಲ್ಲ. ಏಕೆಂದರೆ ಆತನೇನಾದರೂ ಚಕ್ಷು ಇಂದ್ರೀಯವನ್ನು ಅನಿಯಂತ್ರಿತವಾಗಿ ಬಿಟ್ಟರೆ, ಕೆಟ್ಟ ಅಕುಶಲ ಸ್ಥಿತಿಗಳ (ದುರಾಸೆ ಹಗೆತನ ಇತ್ಯಾದಿ) ಆತನಲ್ಲಿ ಆಕ್ರಮಿಸಬಹುದು. ಆತನು ಅದರ ನಿಯಂತ್ರಣವನ್ನು ಅಭ್ಯಸಿಸುತ್ತಾನೆ. ಹೀಗೆ ಆತನು ಕಣ್ಣನ್ನು ನಿಯಂತ್ರಿಸುತ್ತಾನೆ. ಅದೇರೀತಿಯಾಗಿ ಯಾವಾಗ ಕಿವಿಯಿಂದ ಶಬ್ದಗಳನ್ನು ಆಲಿಸುತ್ತಾನೋ... ಮೂಗಿನಿಂದ ವಾಸನೆಗಳನ್ನು ಗ್ರಹಿಸುತ್ತಾನೆ... ನಾಲಿಗೆಯಿಂದ ರುಚಿಗಳನ್ನು ಗ್ರಹಿಸುತ್ತಾನೋ... ದೇಹದಿಂದ ಸ್ಪರ್ಶಗಳನ್ನು ಗ್ರಹಿಸುತ್ತಾನೋ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಗ್ರಹಿಸುತ್ತಾನೋ ಆಗ ಭಿಕ್ಷುವು ಅವುಗಳ ಸಂಕೇತಗಳನ್ನಾಗಲಿ ಅಥವಾ ವಿವರ ವಿಶೇಷಣೆಗಳನ್ನಾಗಲಿ ಗುರುತಿಸುವುದಿಲ್ಲ. ಏಕೆಂದರೆ ಆತನ ಮನೋ ಇಂದ್ರಿಯವು ಅನಿಯಂತ್ರಿತವಾದರೆ ಕೆಟ್ಟ ಅಕುಶಲ ಸ್ಥಿತಿಗಳಾದ ದುರಾಸೆ, ಹಗೆತನ ಇತ್ಯಾದಿಗಳು ಆತನಲ್ಲಿ ಆಕ್ರಮಿಸಬಹುದು. ಆತನು ನಿಯಂತ್ರಣದ ಮಾರ್ಗವನ್ನು ಅಭ್ಯಸಿಸುತ್ತಾನೆ. ತನ್ನ ಮನಸ್ಸನ್ನು ಚೆನ್ನಾಗಿ ರಕ್ಷಣೆ ಮಾಡುತ್ತಾನೆ. ಈ ರೀತಿಯಾಗಿ ಮಿತ್ರನೇ, ಒಬ್ಬನು ಇಂದ್ರೀಯ ದ್ವಾರಗಳನ್ನು ರಕ್ಷಿಸುತ್ತಾನೆ.
ಮತ್ತೆ ಹೇಗೆ ಆಯುಷ್ಮಂತನೇ, ಒಬ್ಬನು ಭೋಜನದಲ್ಲಿ ಮಿತಿಯಿಂದಿರುತ್ತಾನೆ? ಆತನು ಜಾಗ್ರತೆಯಿಂದ ಈ ರೀತಿ ಚಿಂತನೆ ಮಾಡುತ್ತಾನೆ. ಈ ಭೋಜನವು ಮೋಜಿಗಾಗಿ ಅಲ್ಲ, ಮತ್ತೇರಿಸುವುದಕ್ಕಾಗಿಯೂ ಅಲ್ಲ. ಶಾರೀರಿಕ ಸೌಂದರ್ಯ ಆಕರ್ಷಣೆಗಾಗಿಯೂ ಅಲ್ಲ. ಆದರೆ ಕೇವಲ ಭೌತಿಕ ಶರೀರದ ಬೆಂಬಲ ಹಾಗು ಸುವ್ಯವಸ್ಥೆಗೆ, ಅಸುಖದ ಅಂತ್ಯಕ್ಕಾಗಿ, ಬ್ರಹ್ಮಚರ್ಯೆಯ ಸಹಾಯಕ್ಕಾಗಿ ಎಂದ ತಿಳಿಯುತ್ತಾನೆ ಹಾಗು ಹೀಗೆ ನಿರ್ಧರಿಸುತ್ತಾನೆ. ಹೀಗೆ ನಾನು ಹಳೆಯ ವೇದನೆಗಳನ್ನು ಕ್ಷೀಣಿಸುತ್ತೇನೆ ಹಾಗು ನವವೇದನೆಗಳನ್ನು ಉದಯಿಸಲು ಅವಕಾಶ ನೀಡಲಾರೆ, ಹೀಗೆ ನಾನು ಆರೋಗ್ಯಕರನು, ಕಳಂಕರಹಿತನೂ ಮತ್ತು ಸುಖಿಯಾಗಿ ಜೀವಿಸುವೆನು. ಈ ರೀತಿಯಾಗಿ ಮಿತ್ರನೆ, ಒಬ್ಬನು ಆಹಾರದಲ್ಲಿ ಮಿತಿಯಿಂದ ಇರುತ್ತಾನೆ.
ಮತ್ತೆ ಹೇಗೆ ಆಯುಷ್ಮಂತನೇ, ಒಬ್ಬನು ಜಾಗರೂಕತೆಯಲ್ಲಿ ನಿಷ್ಠನಾಗುತ್ತಾನೆ. ಇಲ್ಲಿ ಭಿಕ್ಷುವು ಹಗಲಿನಲ್ಲಿ, ನಡೆದಾಡುವಾಗಲೇ ಆಗಲಿ, ಕುಳಿತಿರುವಾಗಲೇ ಆಗಲಿ, ತನ್ನ ಮನಸ್ಸಿನಲ್ಲಿ ಆವೃತವಾಗಿರುವ ತಡೆಯುಂಟುಮಾಡುವ ಕ್ಷೊಭಾ ಸ್ಥಿತಿಗಳಿಂದ ಮನಸ್ಸನ್ನು ಪರಿಶುದ್ಧಿಗೊಳಿಸುತ್ತಾನೆ ಹಾಗು ರಾತ್ರಿಯ ಪ್ರಥಮ ಯಾಮದಲ್ಲಿ (ಸಂಜೆ 6 ರಿಂದ 10) ನಡಿಗೆಯ ಧ್ಯಾನದಲ್ಲಿಯಾಗಲಿ, ಕುಳಿತು ಧ್ಯಾನಿಸುವಾಗಾಗಲಿ, ತನ್ನ ಮನಸ್ಸನ್ನು ಶುದ್ಧಿಗೊಳಿಸುತ್ತಾನೆ. ಹಾಗೆಯೇ ರಾತ್ರಿಯ ದ್ವಿತೀಯ ಯಾಮದಲ್ಲಿ ಆತನು ಸಿಂಹಶಯ್ಯೆಯಲ್ಲಿ ಮಲಗಿ ಪೂರ್ಣವಾಗ ಜಾಗೃತೆಯಿಂದಿರುತ್ತಾ ಸ್ಮೃತಿವಂತನಾಗಿ, ಸಂಪಜನ್ಯನಾಗಿ (ಅರಿವಿನಿಂದ ಕೂಡಿದ ಎಚ್ಚರಿಕೆ) ಮತ್ತೆ ಮೇಲೇಳುವ ಸಮಯವನ್ನು ನಿಗದಿಮಾಡುತ್ತಾ ನಿದ್ರಿಸುತ್ತಾನೆ. ನಂತರ ಅಂತಿಮ ಯಾಮದಲ್ಲಿ (ರಾತ್ರಿ 2 ರಿಂದ 6) ಎದ್ದು ಚಂಕ್ರಮಣ ಧ್ಯಾನವನ್ನು ಅಭ್ಯಸಿಸುತ್ತಾ ತನ್ನ ಮನಸ್ಸನ್ನು ಶುದ್ಧಿಗೊಳಿಸುತ್ತಾನೆ, ತಡೆಗಳಿಂದ ಮುಕ್ತನಾಗುತ್ತಾನೆ. ಈ ರೀತಿಯಾಗಿ ಮಿತ್ರನೇ, ಒಬ್ಬನು ಜಾಗ್ರತೆಗೆ ನಿಷ್ಠನಾಗುತ್ತಾನೆ. ಆದ್ದರಿಂದಾಗಿ ಮಿತ್ರನೇ, ನೀವು ಹೀಗೆ ನಿಮ್ಮನ್ನು ಸುಶಿಕ್ಷಿತಗೊಳಿಸಬೇಕು. ಹೇಗೆಂದರೆ, ನಾವು ಇಂದ್ರೀಯಗಳನ್ನು ರಕ್ಷಿಸುತ್ತೇನೆ. ಆಹಾರದಲ್ಲಿ ಮಿತಿಯನ್ನು ಹೊಂದುತ್ತೇವೆ, ಜಾಗೃತಿ ಸ್ಥಾಪನೆಯಲ್ಲಿ ನಿಷ್ಠರಾಗಿರುತ್ತೇವೆ. ಹೀಗೆ ಆಯುಷ್ಮಂತರೇ, ನೀವು ನಿಮ್ಮನ್ನು ಸುಶಿಕ್ಷಿತಗೊಳಿಸಬೇಕು.


35.12.8 ರಾಹುಲೋವಾದ ಸುತ್ತಂ (ರಾಹುಲನಿಗೆ ಬುದ್ಧಿವಾದ)

121. ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಭಗವಾನರು ಏಕಾಂತದಿಂದ ಎದ್ದನಂತರ ಅವರ ಮನಸ್ಸಿನಲ್ಲಿ ಈ ಬಗೆಯ ಯೋಚನೆ ಉಂಟಾಯಿತು: ರಾಹುಲನಲ್ಲಿ ವಿಮುಕ್ತಿ ಪಕ್ವತೆ ಸಿದ್ಧವಾಗಿದೆ, ಆತನಿಗೆ ಉಳಿದ ಆಸವಗಳು ನಾಶವಾಗುವಂತೆ ಮಾಡಬೇಕು. ನಂತರ ಮುಂಜಾನೆ ಭಗವಾನರು ವಸ್ತ್ರ ಸರಿಪಡಿಸಿಕೊಂಡು, ಚೀವರ ಹಾಗು ಪಿಂಡಪಾತ್ರೆಯನ್ನು ತೆಗೆದುಕೊಂಡು, ಶ್ರಾವಸ್ಥಿಯ ಕಡೆಗೆ ಹೊರಟರು. ನಂತರ ಅವರು ಆಹಾರವನ್ನು ಸೇವಿಸಿದ ನಂತರ ಆಯುಷ್ಮಂತ ರಾಹುಲನಿಗೆ ಹೀಗೆ ನುಡಿದರು: ರಾಹುಲ ಅನ್ದವನಕ್ಕೆ ಹೋಗೋಣ, ಕುಳಿತುಕೊಳ್ಳಲು ವಸ್ತ್ರವನ್ನು ತೆಗೆದುಕೋ? ಆಯಿತು ಭಂತೆ ಎನ್ನುತ್ತಾ ಕುಳಿತುಕೊಳ್ಳಲು ವಸ್ತ್ರ ತೆಗೆದುಕೊಂಡು ಭಗವಾನರನ್ನು ಅತಿ ಸನಿಹದಿಂದ ಹಿಂಬಾಲಿಸಿದನು.
ಅದೇ ಸಮಯದಲ್ಲಿ ಸಹಸ್ರಾರು ದೇವತೆಗಳು ಸಹಾ ಭಗವಾನರನ್ನು ಹಿಂಬಾಲಿಸುತ್ತಿದ್ದರು. ಅವರು ಸಹಾ ಹೀಗೆ ಯೋಚಿಸುತ್ತಿದ್ದರು. ಇಂದು ಭಗವಾನರು ಆಯುಷ್ಮಂತ ರಾಹುಲರಲ್ಲಿ ಮತ್ತಷ್ಟು ಆಸವಗಳು ನಾಶವಾಗುವಂತೆ ಮಾರ್ಗದರ್ಶನ ನೀಡುತ್ತಾರೆ. ನಂತರ ಭಗವಾನರು ಅಂಧವನವನ್ನು ಪ್ರವೇಶಿಸಿದರು. ನಂತರ ವೃಕ್ಷವೊಂದರ ಕೆಳಗೆ ಆಸೀನರಾದರು. ರಾಹುಲರು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ಆಗ ಭಗವಾನರು ಆತನೊಂದಿಗೆ ಹೀಗೆ ಸಂಭಾಷಣೆ ಆರಂಭಿಸಿದರು:
ರಾಹುಲ ನೀನು ಯಾವರೀತಿ ಭಾವಿಸುವೆ, ಕಣ್ಣು ಅನಿತ್ಯವೋ ಅಥವಾ ನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಚಕ್ಷುವಿಞ್ಞಾನ ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಚಕ್ಷು ಸಂಸ್ಪರ್ಶವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವ ಚಕ್ಷುಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ವಿಞ್ಞಾನಗಳಾಗಲಿ ಅವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಜಿಹ್ವೆಯು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಜಿಹ್ವಾವಿಞ್ಞಾನವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಜಿಹ್ವಾಸಂಸ್ಪರ್ಶವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಮತ್ತೆ ಜಿಹ್ವಾ ಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಮನಸ್ಸು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಧಮ್ಮವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಮನೋವಿಞ್ಞಾನವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಮನೋಸಂಸ್ಪರ್ಶವು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವ ಮನೋಸಂಸ್ಪರ್ಶಗಳಿಂದ ಉದಯಿಸುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ ದುಃಖಕಾರಿಯೋ ಪರಿವರ್ತನಿಯ ಧಮ್ಮದ್ದೋ ಅವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರಾಹುಲ, ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿಸುತ್ತಾನೆ, ರೂಪಗಳಿಂದ ವಿಕಷರ್ಿಸುತ್ತಾನೆ, ಚಕ್ಷುವಿಞ್ಞಾನಗಳಿಂದ ವಿಕಷರ್ಿಸುತ್ತಾನೆ, ಚಕ್ಷುಸಂಸ್ಪರ್ಶಗಳಿಂದ ವಿಕಷರ್ಿಸುತ್ತಾನೆ, ಹಾಗೆಯೇ ಚಕ್ಷುಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ಅವುಗಳೆಲ್ಲದರಿಂದಾಗಿ ವಿಕಷರ್ಿಸುತ್ತಾನೆ... ಜಿಹ್ವೆಯಿಂದ ವಿಕಷರ್ಿತನಾಗುತ್ತಾನೆ, ರಸಗಳಿಂದ ವಿಕಷರ್ಿತನಾಗುತ್ತಾನೆ. ಜಿಹ್ವಾವಿಞ್ಞಾನದಿಂದ ವಿಕಷರ್ಿತನಾಗುತ್ತಾನೆ, ಜಿಹ್ವಾಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ, ಜಿಹ್ವಾಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ಅವುಗಳೆಲ್ಲದರಿಂದ ವಿಕಷರ್ಿಸುತ್ತಾನೆ...
ಆತನು ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ, ಧಮ್ಮಗಳಿಂದ ವಿಕಷರ್ಿತನಾಗುತ್ತಾನೆ, ಮನೋವಿಞ್ಞಾನಗಳಿಂದ ವಿಕಷರ್ಿತನಾಗುತ್ತಾನೆ, ಮನೋಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ, ಮನೋಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾಗಲಿ, ಸಂಜ್ಞೆಗಳಾಗಲಿ, ಸಂಖಾರಗಳಾಗಲಿ, ವಿಞ್ಞಾನಗಳಾಗಲಿ ಅವುಗಳೆಲ್ಲದರಿಂದ ವಿಕಷರ್ಿತನಾಗುತ್ತಾನೆ. ವಿಕರ್ಷಣೆಯಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತಿ ಜ್ಞಾನವನ್ನು ಹೊಂದುತ್ತಾನೆ. ಜನ್ಮವು ಕ್ಷಯಿಸಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.
ಹೀಗೆ ಭಗವಾನರು ಉಪದೇಶಿಸಿದರು: ಅಯುಷ್ಮಂತ ರಾಹುಲರು ಭಗವಾನರ ಬೋಧನೆಗೆ ಆನಂದಿತರಾದರು. ಈ ಸುತ್ತವು ಪ್ರವಚಿಸುತ್ತಿದ್ದಂತೆಯೇ ಆಯುಷ್ಮಂತ ರಾಹುಲರ ಚಿತ್ತವೂ ಆಸವಗಳಿಂದ ಮುಕ್ತವಾಗಿ ಆಸವರಹಿತರಾದರು. ಜೊತೆಗೆ ಸಹಸ್ರಾರು ದೇವತೆಗಳ ಮನಸ್ಸಿನಲ್ಲಿ ವಿರಜವಾದ, ವಿಮಲವಾದ ಧಮ್ಮಚಕ್ಷುವು ಉದಯವಾಯಿತು. ಯಾವುದೆಲ್ಲವೂ ಸಮುದಯ (ಉದಯ) ಧಮ್ಮವನ್ನು ಹೊಂದಿದೆಯೋ ಅವೆಲ್ಲವೂ ನಿರೋಧ ಧಮ್ಮವನ್ನು ಹೊಂದಿವೆ.

35.12.9 ಸಂಯೋಜನಿಯ ಧಮ್ಮ ಸುತ್ತಂ (ಸಂಕೋಲೆಕಾರಿ ಸುತ್ತ)

122. ಸಂಕೋಲೆಕಾರಿಗಳ ಧಮ್ಮವನ್ನು ಉಪದೇಶಿಸುತ್ತಿದ್ದೇನೆ. ಭಿಕ್ಷುಗಳೇ, ತಾವೆಲ್ಲರೂ ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ ಸಂಯೋಜನಕಾರಿ (ಸಂಕೋಲೆಕಾರಿ) ಧಮ್ಮ ಹಾಗು ಯಾವುದು ಸಂಯೋಜನೆಗಳು (ಸಂಕೋಲೆಗಳು)? ಇಲ್ಲಿ ಭಿಕ್ಷುಗಳೇ, ಚಕ್ಷುವಿಞ್ಞಾನದಿಂದ ಗ್ರಹಿಸುವ ರೂಪಗಳು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಇಂದ್ರೀಯ ಉದ್ರೇಕಕಾರಿ, ಪ್ರಲೋಭನಕಾರಿಯು, ಸಂತೋಷಕಾರಿಯು ಆಗಿವೆ. ಇವೇ ಸಂಯೋಜನಕಾರಿಯಾಗಿವೆ. ಇವುಗಳ ಬಗ್ಗೆ ಆಸೆ ಹಾಗು ರಾಗಗಳೇ ಸಂಯೋಜನವಾಗಿವೆ.... ಜಿಹ್ವಾವಿಞ್ಞಾಣದಿಂದ... ಮನೋವಿಞ್ಞಾಣದಿಂದ ಗ್ರಹಿಸುವ ಧಮ್ಮಗಳು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಇವನ್ನೇ ಸಂಯೋಜನಕಾರಿ ಧಮ್ಮವೆನ್ನುತ್ತಾರೆ. ಇವುಗಳಿಂದ ಉದಯಿಸುವ ಆಸೆ ಹಾಗು ರಾಗಗಳೇ ಸಂಯೋಜನಗಳಾಗಿವೆ. (ಈ ಸುತ್ತವು 109ನೇ ಸುತ್ತದಂತೆಯೇ ಭಾಗಶಃ ಇರುತ್ತದೆ.)

35.12.10 ಉಪಾದಾನಿಯ ಧಮ್ಮ ಸುತ್ತಂ (ಅಂಟುಕಾರಿ ವಿಷಯಗಳ ಸುತ್ತ)

123. ಅಂಟುಕಾರಿ ವಿಷಯಗಳ ಧಮ್ಮವನ್ನು ಉಪದೇಶಿಸುತ್ತೇನೆ. ಭಿಕ್ಷುಗಳೇ, ಹಾಗೆಯೇ ಅಂಟುವಿಕೆಯ ಬಗ್ಗೆಯು ತಾವು ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ ಅಂಟುಕಾರಿ ವಿಷಯಗಳು? ಇಲ್ಲಿ ಚಕ್ಷುವಿಞ್ಞಾನದಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿ ಹಾಗು ಪ್ರಲೋಭನೆಕಾರಿಯು ಆಗಿವೆ. ಇವನ್ನೇ ಅಂಟುಕಾರಿ ವಿಷಯಗಳೆನ್ನುತ್ತಾರೆ. ಇವುಗಳಿಂದಾಗಿ ಉಂಟಾಗುವ ಆಸೆ ಹಾಗು ರಾಗಗಳೇ ಅಂಟುವಿಕೆಯಾಗಿದೆ... ಭಿಕ್ಷುಗಳೇ, ಜಿಹ್ವಾವಿಞ್ಞಾಣದಿಂದ ಗ್ರಹಿಸಬಹುದಾದ ರಸಗಳಿವೆ... ಭಿಕ್ಷುಗಳೇ, ಮನೋವಿಞ್ಞಾನದಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ. ಅದು ಇಷ್ಟಪಡುವಂತಹವು, ಪ್ರಿಯವಾದವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು ಹಾಗು ಪ್ರಲೋಭನಕಾರಿಯು ಆಗಿವೆ. ಇವನ್ನೇ ಭಿಕ್ಷುಗಳೇ, ಅಂಟುಕಾರಿ ವಿಷಯಗಳೆನ್ನುತ್ತಾರೆ. ಇವುಗಳಿಂದ ಉದಯಿಸುವಂತಹ ಆಸೆ ಹಾಗು ರಾಗಗಳೇ ಅಂಟುವಿಕೆಯಾಗಿವೆ.
ಇಲ್ಲಿಗೆ 12ನೆಯದಾದ ಲೋಕಕಾಮಗುಣ ವಗ್ಗವು ಮುಗಿಯಿತು.

.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...