Thursday 31 May 2018

Samyutta nikaya 35.15 ನವಪುರಾಣ ವಗ್ಗೋ

ನವಪುರಾಣ ವಗ್ಗೋ


35.15.1 ಕಮ್ಮನಿರೋಧ ಸುತ್ತಂ

146. ಭಿಕ್ಷುಗಳೇ, ನವೀನ (ಹೊಸ) ಕಮ್ಮಗಳ ಬಗ್ಗೆ ಹಾಗು ಹಳೆಯ ಕಮ್ಮಗಳ ಉಪದೇಶಿಸುತ್ತಿದ್ದೇನೆ, ಜೊತೆಗೆ ಕಮ್ಮ ನಿರೋಧದ ಬಗ್ಗೆ, ಕಮ್ಮ ನಿರೋಧಕ್ಕೆ ಒಯ್ಯುವ ಮಾರ್ಗದ ಬಗ್ಗೆಯೂ ಉಪದೇಶಿಸುತ್ತಿದ್ದೇನೆ, ತಾವೆಲ್ಲರೂ ಆಲಿಸಿರಿ, ಗಮನವಿಟ್ಟು ಆಲಿಸಿ ನೆನಪಿನಲ್ಲಿಟ್ಟುಕೊಳ್ಳಿ. ಯಾವುದು ಭಿಕ್ಷುಗಳೇ ಹಳೆಯ ಕಮ್ಮಗಳು? ಚಕ್ಷುವು ಹಳೆಯ ಕಮ್ಮವಾಗಿದೆ, (ಏಕೆಂದರೆ ಹಳೆಯ ಕಮ್ಮದ ಫಲವಾಗಿಯೇ) ಅದರಿಂದಾಗಿಯೇ ಸಿದ್ಧವಾಗಿದೆ, ರೂಪುಗೊಂಡಿದೆ, ಅದರ ಮೂಲವಾಗಿಯೇ ಇಚ್ಛೆಗಳು ವ್ಯಕ್ತವಾಗುತ್ತವೆ ಹಾಗು ವೇದನೆಗಳನ್ನು ಅನುಭವಿಸುತ್ತವೆ. ಕಿವಿಯು ಹಳೆಯ ಕಮ್ಮವಾಗಿದೆ, ಅದರಿಂದಾಗಿಯೇ ಸಿದ್ಧವಾಗಿದೆ, ರೂಪುಗೊಂಡಿದೆ, ಅದರ ಮೂಲಕವಾಗಿಯೇ ಇಚ್ಛೆಗಳು ವ್ಯಕ್ತವಾಗುತ್ತದೆ ಹಾಗು ವೇದನೆಗಳನ್ನು ಅನುಭವಿಸುತ್ತದೆ. ಮೂಗು... ಹಳೆಯ ಕಮ್ಮವಾಗಿದೆ... ನಾಲಿಗೆಯು... ದೇಹವು... ಮನಸ್ಸು ಹಳೆಯ ಕಮ್ಮವಾಗಿದೆ, ಅದರ ಫಲವಾಗಿಯೇ ಸಿದ್ಧವಾಗಿದೆ, ರೂಪುಗೊಂಡಿದೆ. ಅದರ ಮೂಲಕವಾಗಿಯೇ ಇಚ್ಛೆಗಳು ವ್ಯಕ್ತವಾಗುತ್ತದೆ ಹಾಗು ವೇದನೆಗಳನ್ನು ಅನುಭವಿಸುತ್ತವೆ. ಇದೇ ಹಳೆಯ (ಪುರಾಣ) ಕಮ್ಮವಾಗಿದೆ. ಮತ್ತೆ ಯಾವುದು ಭಿಕ್ಷುಗಳೇ ನವೀನ ಕಮ್ಮಗಳು (ನವಕಮ್ಮ)? ಯಾವುದೆಲ್ಲಾ ಕಮ್ಮಗಳು ಈಗ ಶರೀರದಿಂದ, ಮಾತಿನಿಂದ ಹಾಗು ಮನಸ್ಸಿನಿಂದ ನಡೆಯುತ್ತವೆಯೋ ಇವೆಲ್ಲಾ ನವಕಮ್ಮ (ನವೀನ ಕಮ್ಮ)ವಾಗಿದೆ. ಮತ್ತೆ ಯಾವುದು ಭಿಕ್ಷುಗಳೇ ಕಮ್ಮ ನಿರೋಧವು? ಕಾಯದಿಂದಾಗುವ ಕರ್ಮಗಳು, ವಾಚದಿಂದಾಗುವ ಕಮ್ಮಗಳು ಮತ್ತು ಮನಸ್ಸಿನಿಂದಾಗುವ ಕಮ್ಮಗಳು ನಿರೋಧ ಸಾಧಿಸಿ, ವಿಮುಕ್ತಿ ಹೊಂದುವುದೇ ಕಮ್ಮ ನಿರೋಧವಾಗಿದೆ. ಮತ್ತೆ ಯಾವುದು ಭಿಕ್ಷುಗಳೇ, ಕಮ್ಮ ನಿರೋಧಕ್ಕೆ ಒಯ್ಯುವ ಮಾರ್ಗ? ಅದೇ ಆರ್ಯರ ಅಷ್ಠಾಂಗಿಕ ಮಾರ್ಗ. ಅದೆಂದರೆ, ಸಮ್ಯಕ್ದೃಷ್ಟಿಕೋನ, ಸಮ್ಯಕ್ಸಂಕಲ್ಪ.... ಮತ್ತು ಸಮ್ಯಕ್ಸಮಾಧಿ. ಇದೇ ಭಿಕ್ಷುಗಳೇ, ಕಮ್ಮ ನಿರೋಧಕ್ಕೆ ಒಯ್ಯುವ ಮಾರ್ಗವಾಗಿದೆ. ಹೀಗೆ ಭಿಕ್ಷುಗಳೇ, ನಾನು ಪುರಾಣ (ಹಳೆಯ) ಕಮ್ಮವನ್ನು ಬೋಧಿಸಿದ್ದೇನೆ ಹಾಗು ನವೀನ (ಹೊಸ) ಕಮ್ಮವನ್ನು ಬೋಧಿಸಿದ್ದೇನೆ ಹಾಗೆಯೇ ಕರ್ಮನಿರೋಧವನ್ನು, ಅದರೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸಿದ್ದೇನೆ. ಭಿಕ್ಷುಗಳೇ, ಓರ್ವ ಕರುಣಾಮಯಿ ಗುರುವು ಅನುಕಂಪದಿಂದ ಕ್ಷೇಮದಿಂದ ಏನೆಲ್ಲಾ ತನ್ನ ಶಿಷ್ಯರಿಗೆ ಮಾಡಬಹುದೋ, ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇದೇ ವೃಕ್ಷದ ಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ, ಧ್ಯಾನಿಗಳಾಗಿ ಧ್ಯಾನಿಸಿರಿ. ಭಿಕ್ಷುಗಳೇ ನಿರ್ಲಕ್ಷರಾಗದಿರಿ, ಇಲ್ಲದಿದ್ದಲ್ಲಿ ಪಶ್ಚಾತ್ತಾಪಕ್ಕೆ ಗುರಿಯಾಗುವಿರಿ. ಇದೇ ನಿಮಗೆ ನನ್ನ ಅನುಶಾಸನವಾಗಿದೆ.


35.15.2 ಅನಿಚ್ಚ ನಿಬ್ಬಾನಸಪ್ಪಾಯ ಸುತ್ತಂ (ನಿಬ್ಬಾಣ ಪ್ರಾಪ್ತಿಗೆ ಸೂಕ್ತವಾದ ಸುತ್ತ)

147. ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಗೆ ಯಾವುದು ಸೂಕ್ತವೋ ಅದನ್ನು ಉಪದೇಶಿಸುತ್ತಿದ್ದೇನೆ, ಅದನ್ನು ಗಮನವಿಟ್ಟು ಆಲಿಸಿರಿ. ಮತ್ತೆ ಭಿಕ್ಷುಗಳೇ ನಿಬ್ಬಾಣ ಪ್ರಾಪ್ತಿಗೆ ಸೂಕ್ತವಾದ ವಿಧಾನ ಯಾವುದು? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಕ್ಷುವನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಆತನು ರೂಪಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಚಕ್ಷುವಿಞ್ಞಾಣವನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಚಕ್ಷುಸಂಸ್ಪರ್ಶವನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಚಕ್ಷುಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಆತನು ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಧಮ್ಮಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಮನೋವಿಞ್ಞಾಣವನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಮನೋಸಂಸ್ಪರ್ಶಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಮನೋಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳನ್ನು ಅನಿತ್ಯವೆಂದು ದಶರ್ಿಸುತ್ತಾನೆ. ಇವೇ ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಮಾಡಲು ಸೂಕ್ತವಾದ ವಿಧಾನವಾಗಿದೆ.

35.15.3 ದುಃಖ ನಿಬ್ಬಾನಸಪ್ಪಾಯ ಸುತ್ತಂ

148. ಭಿಕ್ಷುಗಳೇ, ನಿಬ್ಬಾಣಪ್ರಾಪ್ತಿಗಾಗಿ ಸೂಕ್ತವಾದ ವಿಧಾನವನ್ನು ಉಪದೇಶಿಸುತ್ತಿದ್ದೇನೆ. ತಾವು ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಗಾಗಿ ಸೂಕ್ತವಾದ ವಿಧಾನವು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಚಕ್ಷುವಿನಲ್ಲಿ ದುಃಖವನ್ನು ದಶರ್ಿಸುತ್ತಾನೆ. ಚಕ್ಷುವಿಞ್ಞಾಣದಲ್ಲಿ... ಚಕ್ಷುಸಂಸ್ಪರ್ಶದಲ್ಲಿ... ದುಃಖವನ್ನು ದಶರ್ಿಸುತ್ತಾನೆ. ಚಕ್ಷುಸಂಸ್ಪರ್ಶಗಳಲ್ಲಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳಲ್ಲಿ ದುಃಖವನ್ನು ದಶರ್ಿಸುತ್ತಾನೆ. ಕಿವಿಯಲ್ಲಿ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ದುಃಖವನ್ನು ದಶರ್ಿಸುತ್ತಾನೆ. ಮಾನಸಿಕ ವಿಷಯಗಳಲ್ಲಿ ದುಃಖವನ್ನು ದಶರ್ಿಸುತ್ತಾನೆ. ಮನೋವಿಞ್ಞಾಣದಲ್ಲಿ... ಮನೋಸಂಸ್ಪರ್ಶಗಳಲ್ಲಿ... ಅದರಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳಲ್ಲಿ ದುಃಖವನ್ನು ದಶರ್ಿಸುತ್ತಾನೆ. ಇದೇ ಭಿಕ್ಷುಗಳೇ, ನಿಬ್ಬಾಣಪ್ರಾಪ್ತಿಗಾಗಿ ಇರುವಂತಹ ಸೂಕ್ತ ವಿಧಾನವಾಗಿದೆ.


35.15.4 ಅನತ್ತ ನಿಬ್ಬಾನಸಪ್ಪಾಯ ಸುತ್ತಂ

149. ಭಿಕ್ಷುಗಳೇ, ನಿಬ್ಬಾಣಪ್ರಾಪ್ತಿಗಾಗಿ ಸೂಕ್ತವಾದ ವಿಧಾನವನ್ನು ಉಪದೇಶಿಸುತ್ತಿದ್ದೇನೆ. ತಾವು ಗಮನವಿಟ್ಟು ಆಲಿಸಿರಿ. ಯಾವುದು ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಗಾಗಿ ಸೂಕ್ತವಾದ ವಿಧಾನವು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಚಕ್ಷುವಿನಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಚಕ್ಷುವಿಞ್ಞಾಣದಲ್ಲಿ... ಚಕ್ಷುಸಂಸ್ಪರ್ಶದಲ್ಲಿ... ಅನಾತ್ಮವನ್ನು ದಶರ್ಿಸುತ್ತಾನೆ. ಚಕ್ಷುಸಂಸ್ಪರ್ಶಗಳಲ್ಲಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಕಿವಿಯಲ್ಲಿ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಮಾನಸಿಕ ವಿಷಯಗಳಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಮನೋವಿಞ್ಞಾಣದಲ್ಲಿ... ಮನೋಸಂಸ್ಪರ್ಶಗಳಲ್ಲಿ... ಅದರಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆಗಳು, ಅಪ್ರಿಯವೇದನೆಗಳು, ತಟಸ್ಥ ವೇದನೆಗಳಲ್ಲಿ ಅನಾತ್ಮವನ್ನು ದಶರ್ಿಸುತ್ತಾನೆ. ಇದೇ ಭಿಕ್ಷುಗಳೇ, ನಿಬ್ಬಾಣಪ್ರಾಪ್ತಿಗಾಗಿ ಇರುವಂತಹ ಸೂಕ್ತ ವಿಧಾನವಾಗಿದೆ.


35.15.5 ನಿಬ್ಬಾನಸಪ್ಪಾಯ ಪಟಿಪದಾ ಸುತ್ತಂ

150. ಭಿಕ್ಷುಗಳೇ, ನಿಬ್ಬಾಣ ಪ್ರಾಪ್ತಿಗಾಗಿ ಸೂಕ್ತವಾದ ವಿಧಾನವನ್ನು ಉಪದೇಶಿಸುತ್ತಿದ್ದೇನೆ. ತಾವು ಗಮನವಿಟ್ಟು ಆಲಿಸಿರಿ, ಯಾವುದು ಭಿಕ್ಷುಗಳೇ ನಿಬ್ಬಾಣ ಪ್ರಾಪ್ತಿಗಾಗಿ ಇರುವಂತಹ ಸೂಕ್ತವಾದ ವಿಧಾನವು? ನೀವು ಹೇಗೆ ಪರಿಗಣಿಸುವಿರಿ ಭಿಕ್ಷುಗಳೇ, ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅವು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ಪರಿವರ್ತನಿಯವೋ ಅಂತಹವನ್ನು ಇದು ನನ್ನದು, ಇದೇ ನಾನು ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಚಕ್ಷುವಿಞ್ಞಾಣ... ಚಕ್ಷುಸಂಸ್ಪರ್ಶ... ಅದರಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ಪರಿವರ್ತನಿಯವೋ ಅಂತಹವನ್ನು ಇದು ನನ್ನದು, ಇದೇ ನಾನು ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ. ಚಕ್ಷುವಿಞ್ಞಾನದಿಂದ... ಚಕ್ಷುಸಂಸ್ಪರ್ಶಗಳಿಂದ... ವೇದನೆಗಳಿಂದ ವಿಕಷರ್ಿತನಾಗುತ್ತಾನೆ... ವಿರಾಗ ಹೊಂದುತ್ತಾನೆ... ಕಿವಿಯು ನಿತ್ಯವೋ ಅಥವಾ ಅನಿತ್ಯವೋ?.... ಮೂಗು... ನಾಲಿಗೆ... ದೇಹ... ಮನಸ್ಸು... ಮನೋವಿಞ್ಞಾಣ... ಮನೋಸಂಸ್ಪರ್ಶಗಳು... ಅದರಿಂದ ಉಂಟಾಗುವ ವೇದನೆಗಳಿಂದ ವಿಕಷರ್ಿಸುತ್ತಾನೆ... ವಿರಾಗ ಹೊಂದುತ್ತಾನೆ... ವಿಮುಕ್ತಿ ಹೊಂದುತ್ತಾನೆ... ವಿಮುಕ್ತಿಜ್ಞಾನ ಹೊಂದುತ್ತಾನೆ. ಈ ಸ್ಥಿತಿಯು ಇನ್ನಿಲ್ಲ... ಎಂದು ಅರಿಯುತ್ತಾನೆ. ಇದೇ ಭಿಕ್ಷುಗಳೇ ನಿಬ್ಬಾಣಪ್ರಾಪ್ತಿಗಾಗಿ ಇರುವ ವಿಧಾನವಾಗಿದೆ.


35.15.6 ಅನ್ತೇವಾಸಿಕ ಸುತ್ತಂ (ಶಿಷ್ಯನ ಕುರಿತು ಸುತ್ತ)

151. ಭಿಕ್ಷುಗಳೇ, ಬ್ರಹ್ಮಚರ್ಯ (ಧಮ್ಮ) ಜೀವನವು ಶಿಷ್ಯರ ರಹಿತವಾಗಿ ಹಾಗು ಆಚಾರ್ಯರ ರಹಿತವಾಗಿರಬೇಕು (ಗುರು ಇಲ್ಲದೆಯೇ). ಏಕೆಂದರೆ ಯಾವ ಭಿಕ್ಷುವು ಶಿಷ್ಯರನ್ನು ಹಾಗು ಆಚಾರ್ಯರನ್ನು ಹೊಂದಿರುತ್ತಾನೋ ಆತನು ದುಃಖದಲ್ಲಿರುತ್ತಾನೆ. ಆದರೆ ಯಾವ ಭಿಕ್ಷುವಿಗೆ ಶಿಷ್ಯರಿಲ್ಲವೋ ಹಾಗು ಗುರುವೂ ಇಲ್ಲವೊ ಆತನು ಸುಖಿಯಾಗಿರುತ್ತಾನೆ. ಮತ್ತೆ ಹೇಗೆ ಭಿಕ್ಷುಗಳೇ ಯಾವ ಭಿಕ್ಷುವಿಗೆ ಶಿಷ್ಯರು ಹಾಗು ಗುರುಗಳು ಇದ್ದಾಗ ದುಃಖದಲ್ಲಿರುತ್ತಾನೆ, ಸುಖಕರವಾಗಿರುವುದಿಲ್ಲ? ಭಿಕ್ಷುಗಳೇ, ಇಲ್ಲಿ ಯಾವಾಗ ಭಿಕ್ಷುವು ಕಣ್ಣಿನಿಂದ ರೂಪಗಳನ್ನು ನೋಡಿದಾಗ ಆತನಲ್ಲಿ ಅಕುಶಲ ಪಾಪಮಯವಾದ ಮಾನಸಿಕ ಸ್ಥಿತಿಗಳು ಉಂಟಾಗಬಹುದು, ಸಂಕೋಲೆಗಳಿಗೆ ಸಂಬಂಧಿಸಿದ ನೆನಪುಗಳು ಹಾಗು ಇಚ್ಛೆಗಳು ಉಂಟಾಗಬಹುದು. ಅಂತಹ ಯೋಚನೆಗಳು ಆತನಲ್ಲಿ ನೆಲೆಸಬಹುದು. ಹೀಗೆ ಅಕುಶಲವಾದ ಪಾಪಮಯವಾದ ಸ್ಥಿತಿಗಳು ಆತನಲ್ಲಿ ನೆಲೆಸಿದಾಗ ಆತನು ಶಿಷ್ಯರನ್ನು ಹೊಂದಿದವನು ಎಂದು ಕರೆಯಲ್ಪಡುತ್ತಾನೆ. ಅವು ಆತನಲ್ಲಿ ಆಕ್ರಮಿಸುವುದು, ಯಾವಾಗ ಅಕುಶಲ ಪಾಪಮಯ ಸ್ಥಿತಿಗಳು ಆತನಲ್ಲಿ ಆಕ್ರಮಿಸುವುದೋ ಆಗ ಆತನು ಆಚಾರ್ಯರನ್ನು (ಗುರುವನ್ನು) ಹೊಂದಿರುವವನು ಎಂದು ಕರೆಯಲ್ಪಡುತ್ತಾನೆ.
ಭಿಕ್ಷುಗಳೇ, ಮತ್ತೆ ಯಾವಾಗ ಭಿಕ್ಷುವು ಕಿವಿಯಿಂದ ಶಬ್ದವನ್ನು ಆಲಿಸಿದಾಗ... ಮೂಗಿನಿಂದ ವಾಸನೆಯನ್ನು ಗ್ರಹಿಸಿದಾಗ... ನಾಲಿಗೆಯಿಂದ ರಸವನ್ನು ಆಸ್ವಾದಿಸಿದಾಗ ಆತನಲ್ಲಿ ಅಕುಶಲ ಪಾಪಯುತ ಮಾನಸಿಕ ಸ್ಥಿತಿಗಳು, ಸಂಕೋಲೆಕಾರಿ ನೆನಪುಗಳು ಹಾಗು ಇಚ್ಛೆಗಳು ಉಂಟಾಗಬಹುದು. ಅಂತಹ ಸ್ಥಿತಿಗಳು ಆತನಲ್ಲಿ ನೆಲೆಸಬಹುದು. ಆಗ ಆತನಿಗೆ ಶಿಷ್ಯರನ್ನು ಹೊಂದಿದವನು ಎನ್ನುತ್ತಾರೆ. ಯಾವಾಗ ಅಕುಶಲ ಪಾಪಸ್ಥಿತಿಗಳು ಆತನಲ್ಲಿ ಆಕ್ರಮಿಸಿದಾಗ ಆಗ ಆತನು ಆಚಾರ್ಯರನ್ನು ಹೊಂದಿದವನು ಎನ್ನುತ್ತಾರೆ.
ಭಿಕ್ಷುಗಳೇ, ಮತ್ತೆ ಯಾವಾಗ ಭಿಕ್ಷುವು ಕಾಯದಿಂದ ಸ್ಪರ್ಶವನ್ನು ಗ್ರಹಿಸಿದಾಗ... ಮನಸ್ಸಿನಿಂದ ಧಮ್ಮವನ್ನು ಅರಿಯುವಾಗ ಪಾಪಯುತ ಅಕುಶಲ ಧಮ್ಮಗಳು, ಸಂಯೋಜನಕಾರಿ ನೆನಪುಗಳು ಹಾಗು ಇಚ್ಛೆಗಳು ಉಂಟಾಗುವುದು. ಅವು ಆತನಲ್ಲಿ ಆಕ್ರಮಿಸಬಹುದು, ನೆಲೆಸಬಹುದು. ಆಗ ಆತನನ್ನು ಶಿಷ್ಯರನ್ನು ಹೊಂದಿದವನು ಎನ್ನುತ್ತಾರೆ. ಯಾವಾಗ ಹೀಗೆ ಅಕುಶಲ ಪಾಪಸ್ಥಿತಿಗಳು ಆತನಲ್ಲಿ ಆಕ್ರಮಿಸಿದಾಗ ಆಗ ಆತನನ್ನು ಆಚಾರ್ಯರನ್ನು ಹೊಂದಿದನು ಎನ್ನುತ್ತಾರೆ. ಈ ರೀತಿಯಾಗಿ ಶಿಷ್ಯರನ್ನು ಹೊಂದಿರುವವನು ಹಾಗು ಗುರುವನ್ನು ಹೊಂದಿರುವವನು ದುಃಖದಿಂದ ವಾಸಿಸುತ್ತಾನೆ, ಸುಖದಿಂದಲ್ಲ.
ಭಿಕ್ಷುಗಳೇ, ಮತ್ತೆ ಯಾವರೀತಿಯಲ್ಲಿ ಶಿಷ್ಯರಿಲ್ಲದವನು ಹಾಗು ಗುರುವಿಲ್ಲದವನು ಸುಖವಾಗಿ ವಾಸಿಸುತ್ತಾನೆ? ಭಿಕ್ಷುಗಳೇ, ಇಲ್ಲಿ ಯಾವಾಗ ಭಿಕ್ಷುವು ರೂಪಗಳನ್ನು ವೀಕ್ಷಿಸುತ್ತಾನೋ ಆಗ ಆತನಲ್ಲಿ ಪಾಪಯುತವಾದ ಅಕುಶಲ ಧಮ್ಮವು ಉದಯಿಸುವುದಿಲ್ಲ. ಸಂಕೋಲೆಕಾರಿ ನೆನಪುಗಳು ಹಾಗು ಇಚ್ಛೆಗಳು ಉಂಟಾಗುವುದಿಲ್ಲ. ಅವೆಲ್ಲಾ ಆತನಲ್ಲಿ ನೆಲೆಸುವುದಿಲ್ಲ. ಏಕೆಂದರೆ ಪಾಪಯುತವಾದ ಅಕುಶಲಗಳು ಆತನನ್ನು ಆಕ್ರಮಿಸಲಾರವು. ಆತನು ಆಚಾರ್ಯನಿಲ್ಲದಿರುವವನು ಎಂದು ಕರೆಯಲ್ಪಡುತ್ತಾನೆ.
ಭಿಕ್ಷುಗಳೇ, ಮತ್ತೆ ಯಾವಾಗ ಭಿಕ್ಷುವು ಕಿವಿಯಿಂದ ಶಬ್ದಗಳನ್ನು ಕೇಳುತ್ತಾನೋ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಧಮ್ಮವನ್ನು ಗ್ರಹಿಸುತ್ತಾನೋ ಆಗ ಆತನಲ್ಲಿ ಪಾಪಯುತವಾದ ಅಕುಶಲ ಧಮ್ಮಗಳು, ಅತೀತಕ್ಕೆ ಸಂಬಂಧಿಸಿದಂತೆ ಸಂಕೋಲೆಕಾರಿ ನೆನಪುಗಳು ಹಾಗು ಇಚ್ಛೆಗಳು ಆತನಲ್ಲಿ ಉದಯಿಸಲಾರವು. ಹೀಗಾಗಿ ಆತನಿಗೆ ಶಿಷ್ಯರಿಲ್ಲದವನು ಎಂದು ಕರೆಯುತ್ತಾರೆ. ಹಾಗೆಯೇ ಆತನಲ್ಲಿ ಅಕುಶಲಗಳ ಸಮೂಹವು ಆಕ್ರಮಿಸುವುದಿಲ್ಲ. ಆಗ ಆತನನ್ನು ಆಚಾರ್ಯರಿಲ್ಲದವನು ಎನ್ನುತ್ತಾರೆ. ಭಿಕ್ಷುಗಳೇ, ಹೀಗೆ ಭಿಕ್ಷು ಶಿಷ್ಯರಹಿತನು ಹಾಗು ಗುರುರಹಿತನು ಎನ್ನುತ್ತಾರೆ. ಅಂತಹವನು ಸುಖವಾಗಿ ವಿಹರಿಸುವನು. ಭಿಕ್ಷುಗಳೇ, ಈ ಪವಿತ್ರ ಜೀವನವನ್ನು ಶಿಷ್ಯರಹಿತರಾಗಿಯೂ ಹಾಗು ಗುರುರಹಿತರಾಗಿಯೂ ಸುಖವಾಗಿ ಜೀವಿಸಬಲ್ಲೆವು ಹಾಗೂ ಯಾವ ಭಿಕ್ಷುವಿಗೆ ಗುರು ಮತ್ತು ಶಿಷ್ಯರು ಇಲ್ಲವೋ ಅಂತಹವನು ಸುಖವಾಗಿ ಕ್ಷೇಮವಾಗಿ ವಾಸಿಸಬಲ್ಲನು.


35.15.7 ಕಿಮತ್ಥಿಯ ಬ್ರಹ್ಮಚರಿಯ ಸುತ್ತಂ (ಬ್ರಹ್ಮಚರ್ಯೆ ಜೀವನದ ಉದ್ದೇಶದ ಸುತ್ತ)

152. ಭಿಕ್ಷುಗಳೇ, ಅನ್ಯತೀರ್ಥಕರ ಪರಿವ್ರಾಜಕರು ನಿಮ್ಮನ್ನು ಹೀಗೆ ಪ್ರಶ್ನಿಸಬಹುದು. ಸಮಣಗೋತಮರ ಬಳಿಯಲ್ಲಿ ನಡೆಸುವ ಬ್ರಹ್ಮಚರ್ಯೆ (ಶ್ರೇಷ್ಠ) ಜೀವನದ ಉದ್ದೇಶವಾದರೂ ಏನು? ಹೀಗೆ ಪ್ರಶ್ನಿಸಿದಾಗ ನೀವು ಆ ಪರಿವ್ರಾಜಕರಿಗೆ ಹೀಗೆ ಉತ್ತರಿಸಬೇಕು: ಮಿತ್ರರೇ, ದುಃಖದ ಸಮಗ್ರ ಅರಿವಿಗಾಗಿ ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯ ಜೀವನ ನಡೆಸುತ್ತಿದ್ದೇವೆ. ಆಗ ಭಿಕ್ಷುಗಳೇ, ಅ ಪರಿವ್ರಾಜಕರು ನಿಮ್ಮನ್ನು ಹೀಗೆ ಕೇಳಬಹುದು ಆಯುಷ್ಮಂತರೇ, ಯಾವರೀತಿಯ ದುಃಖ ಸಮಗ್ರ ಅರಿವಿಗಾಗಿ ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯೆ ಜೀವನ ನಡೆಸುತ್ತಿರುವಿರಿ ಆಗ ನೀವು ಹೀಗೆ ಉತ್ತರಿಸಬೇಕು: ಮಿತ್ರರೇ, ಚಕ್ಷು ದುಃಖಕರವಾಗಿದೆ. ಈ ಬಗೆಯ ಸ್ಪಷ್ಟತೆಯುಳ್ಳ ಸಮಗ್ರ ಅರಿವಿಗಾಗಿ (ಪರಿಜ್ಞಯ) ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯ ಜೀವನವನ್ನು ನಡೆಸುತ್ತಿದ್ದೇವೆ. ರೂಪಗಳು ದುಃಖಕರ... ಚಕ್ಷು ವಿಞ್ಞಾನವು ದುಃಖಕರ... ಚಕ್ಷುಸಂಸ್ಪರ್ಶವು ದುಃಖಕರ... ಚಕ್ಷುಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಮತ್ತು ತಟಸ್ಥ ವೇದನೆಗಳು ದುಃಖಕರ. ಈ ಬಗೆಯ ಸ್ಪಷ್ಟತೆಯನ್ನು ಸಮಗ್ರ ಅರಿವಿಗಾಗಿ ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯೆಯ ಜೀವನವನ್ನು ನಡೆಸುತ್ತಿದ್ದೇವೆ. ಹಾಗೆಯೇ ಕಿವಿಯು ದುಃಖಕರ... ಮೂಗು ದುಃಖಕರ... ನಾಲಿಗೆಯು ದುಃಖಕರ... ಕಾಯವು ದುಃಖಕರ... ಮನಸ್ಸು ದುಃಖಕರ... ಮಾನಸಿಕ ವಿಷಯಗಳು ದುಃಖಕರ... ಮನೋವಿಞ್ಞಾನವು ದುಃಖಕರ... ಮನೋಸಂಸ್ಪರ್ಶವು ದುಃಖಕರ... ಮನೋಸಂಸ್ಪರ್ಶದಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ದುಃಖಕರ. ಈ ಬಗೆಯ ಸ್ಪಷ್ಟತೆಯ ಸಮಗ್ರ ಅರಿವಿಗಾಗಿ ನಾವು ಭಗವಾನರ ಬಳಿಯಲ್ಲಿ ಬ್ರಹ್ಮಚರ್ಯೆಯ ಶ್ರೇಷ್ಠ ಜೀವನವನ್ನು ನಡೆಸುತ್ತಿದ್ದೇವೆ. ಆ ರೀತಿಯ ಪ್ರಶ್ನೆಯು ಬಂದಾಗ ಹೀಗೆ ಈ ವಿಧದಲ್ಲಿ ಉತ್ತರಿಸಬೇಕು ಭಿಕ್ಷುಗಳೇ.


35.15.8 ಅತ್ಥಿನುಖೋಪರಿಯಾಯ ಸುತ್ತಂ (ವಿಧಾನವಿದೆ ಎಂಬ ಸುತ್ತ)

153. ಭಿಕ್ಷುಗಳೇ, ಶ್ರದ್ಧೆಯನ್ನು ಹೊರತುಪಡಿಸಿ, ವೈಯಕ್ತಿಕ ಅಭಿರುಚಿಯನ್ನು ಹೊರತುಪಡಿಸಿ, ಅನ್ಯರಿಂದ ಆಲಿಸುವಿಕೆಯನ್ನು ಹೊರತುಪಡಿಸಿ, ವಿತರ್ಕದಿಂದಾದ ಚಿಂತನೆಯನ್ನು ಹೊರತುಪಡಿಸಿ, ಚಿಂತನೆಯ ನಂತರ ಉಂಟಾದ ದೃಷ್ಟಿಕೋನದ ಸ್ವೀಕಾರವನ್ನು ಹೊರತುಪಡಿಸಿ, ಇನ್ಯಾವುದಾದರೂ ನೇರ ವಿವರಣೆಯ ಸ್ಪಷ್ಟೀಕರಣದ ವಿಧಾನವಿದೆಯೇ? ಅದರಿಂದಾಗಿ ವಿಮುಕ್ತಿ ಜ್ಞಾನವಾದ ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪಾಲಿಸಿಯಾಯಿತು, ಮಾಡಬೇಕಾದುದನ್ನು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂಬುದನ್ನು ಸ್ಪಷ್ಟೀಕರಿಸಬಹುದೇ? - ಭಂತೆ, ಭಗವಂತರ ಮೂಲಕವಾಗಿಯೇ ನಮಗೆ ಧಮ್ಮವು ದೊರೆತಿದೆ, ಭಗವಂತರೇ, ನಮಗೆ ಮಾರ್ಗದಶರ್ಿ, ಭಗವಾನರೇ ನಮ್ಮ ಅವಲಂಬನೆ. ಹೀಗಾಗಿ ಭಗವಾನರೇ ಇದನ್ನು ಸ್ಪಷ್ಟೀಪಡಿಸಿದರೆ ಅದನ್ನು ಆಲಿಸಿ ಭಿಕ್ಷುಗಳು ನೆನಪಿನಲ್ಲಿಟ್ಟುಕೊಳ್ಳುವರೇ - ಹಾಗಾದರೆ ಗಮನವಿಟ್ಟು ಆಲಿಸಿರಿ, ಭಿಕ್ಷುಗಳೇ ನಾನು ವಿವರಿಸುವೆನು. - ಆಯಿತು ಭಂತೆ. ನಂತರ ಭಗವಾನರು ಹೀಗೆ ನುಡಿದರು: ಅಂಥಹದ್ದೊಂದು ವಿಧಾನವಿದೆ ಭಿಕ್ಷುಗಳೇ, ಅದು ಶ್ರದ್ಧೆಯನ್ನು ಹೊರತುಪಡಿಸಿ, ಅನ್ಯರಿಂದ ಆಲಿಸುವಿಕೆಯನ್ನು ಹೊರತುಪಡಿಸಿ, ವಿತರ್ಕ... ದೃಷ್ಟಿಕೋನದ... ನೇರವಿವರಣೆಯ ಸ್ಪಷ್ಟವಾದ ವಿಧಾನವಿದೆ. ಅದರಿಂದಾಗಿ ವಿಮುಕ್ತಿ ಜ್ಞಾನವಾದ ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪಾಲಿಸಿಯಾಯಿತು, ಮಾಡಬೇಕಾದುದನ್ನು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂಬುದನ್ನು ನೇರವಾಗಿ ಸ್ಪಷ್ಟವಾಗಿ ಅರಿಯಬಹುದು.
ಯಾವುದು ಭಿಕ್ಷುಗಳೇ, ಆ ಸ್ಪಷ್ಟವಾದ ವಿವರಣೆ? ಅದು ಶ್ರದ್ಧೆಯಿಂದ ಹೊರತಾದದ್ದು... ದೃಷ್ಟಿಕೋನದ ಸ್ವೀಕಾರಕ್ಕೂ ಹೊರತಾದದ್ದು, ವಿಮುಕ್ತಿಜ್ಞಾನವಾದ ಜನ್ಮವು ನಾಶವಾಯಿತು... ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ ಮತ್ತು ಯಾವುದು ಅದು ವಿವರಣೆ? ಭಿಕ್ಷುಗಳೇ, ಇಲ್ಲಿ ಕಣ್ಣಿನಿಂದ ರೂಪವನ್ನು ನೋಡಿದಾಗ ಆಂತರ್ಯದಲ್ಲಿ ರಾಗವಿದೆ, ದ್ವೇಷವಿದೆ ಅಥವಾ ಮೋಹವಿದೆ ಎಂಬುದನ್ನು ಅರಿಯಬಹುದು. ಆಗ ಭಿಕ್ಷುವು ಅರ್ಥಮಾಡಿಕೊಳ್ಳುತ್ತಾನೆ. ಆಂತರ್ಯದಲ್ಲಿ ರಾಗವಿದೆ, ದ್ವೇಷವಿದೆ ಮತ್ತು ಮೋಹವಿದೆ ಅಥವಾ ರಾಗವಿಲ್ಲ, ದ್ವೇಷವಿಲ್ಲ ಮತ್ತು ಮೋಹವಿಲ್ಲ ಎಂದು ಅರಿಯುತ್ತಾನೆ. ಈಗ ಹೇಳಿ ಭಿಕ್ಷುಗಳೇ, ಈ ರೀತಿಯ ಅರ್ಥಮಾಡಿಕೊಳ್ಳುವಿಕೆಯು ಶ್ರದ್ಧೆಯಿಂದ ಆಗಿದೆ. ವೈಯಕ್ತಿಕ ಅಭಿರುಚಿಯಿಂದ ಬಂದಿರುವುದೇ ಅಥವಾ ಶ್ರವಣದಿಂದ ಬಂದಿರುವುದೇ ಅಥವಾ ತರ್ಕದ ಫಲಿತಾಂಶವೇ ಅಥವಾ ದೃಷ್ಟಿಕೋನದ ಸ್ವೀಕಾರದಿಂದ ಬಂದಿರುವುದೇ? - ಇಲ್ಲ ಭಂತೆ. ಇವು ಪ್ರಜ್ಞಾದಿಂದ ದಶರ್ಿಸಿ ಬಂದಿರುವುದಲ್ಲವೇ? - ಹೌದು ಭಂತೆ. - ಇದೇ ಭಿಕ್ಷುಗಳೇ, ಹೀಗೆ ನೇರವಾಗಿ ಸ್ಪಷ್ಟೀಕರಣದಿಂದ ಭಿಕ್ಷುವು ವಿಮುಕ್ತಿಜ್ಞಾನವನ್ನು ಹೀಗೆ ಹೊಂದುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪಾಲಿಸಿಯಾಯಿತು, ಮಾಡಬೇಕಾದುದನ್ನು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.
ಮತ್ತೆ ಭಿಕ್ಷುಗಳೇ, ಕಿವಿಯಿಂದ ಶಬ್ದಗಳನ್ನು ಆಲಿಸಿದಾಗ... ನಾಸಿಕದಿಂದ ಗಂಧವನ್ನು ಆಘ್ರಾಣಿಸಿದಾಗ... ನಾಲಿಗೆಯಿಂದ ರುಚಿಯನ್ನು ಆಸ್ವಾದಿಸಿದಾಗ... ಕಾಯದಿಂದ ಸ್ಪಶರ್ಿಸಿದಾಗ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಅರಿಯುವಾಗ ಆಂತರ್ಯದಲ್ಲಿ ರಾಗವು, ದ್ವೇಷವು ಅಥವಾ ಮೋಹವು ಉದಯಿಸಿದಾಗ ಆಂತರ್ಯದಲ್ಲಿ ರಾಗವಿದೆ, ದ್ವೇಷವಿದೆ ಅಥವಾ ಮೋಹವಿದೆ ಎಂದು ಅರಿಯುತ್ತಾನೆ ಅಥವಾ ಆಂತರ್ಯದಲ್ಲಿ ರಾಗವಿಲ್ಲದಿದ್ದಾಗ, ದ್ವೇಷವಿಲ್ಲದಿದ್ದಾಗ, ಮೋಹವಿಲ್ಲದಿದ್ದಾಗ ಆಂತರ್ಯದಲ್ಲಿ ರಾಗವಿಲ್ಲ, ದ್ವೇಷವಿಲ್ಲ ಮತ್ತು ಮೋಹವಿಲ್ಲ ಎಂದು ಅರಿಯುತ್ತಾನೆ. ಇದು ಹೀಗಿರುವಾಗ ಈ ರೀತಿಯ ಅರ್ಥಮಾಡಿಕೊಳ್ಳುವಿಕೆಯು ಶ್ರದ್ಧೆಯಿಂದ ಉದಯಿಸಿತೆ ಅಥವಾ ವೈಯಕ್ತಿಕ ಅಭಿರುಚಿಯಿಂದ ಬಂದಿರುವುದೇ ಅಥವಾ ಶ್ರವಣದಿಂದ ಬಂದಿರುವುದೇ ಅಥವಾ ತರ್ಕದ ಫಲಿತಾಂಶವೇ ಅಥವಾ ದೃಷ್ಟಿಕೋನದ ಸ್ವೀಕಾರದಿಂದ ಬಂದಿರುವುದೇ? - ಇಲ್ಲ ಭಂತೆ. - ಭಿಕ್ಷುಗಳೇ ಹೀಗೆ ನೇರವಾಗಿ ಸ್ಷಷ್ಟೀಕರಣದಿಂದ ಭಿಕ್ಷುವು ವಿಮುಕ್ತಿಜ್ಞಾನವನ್ನು ಹೀಗೆ ಹೊಂದುತ್ತಾನೆ. ಜನ್ಮವು ನಾಶವಾಯಿತು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.15.9 ಇಂದ್ರೀಯ ಸಂಪನ್ನ ಸುತ್ತಂ

154. ಆಗ ಭಿಕ್ಷುವೊಬ್ಬನು ಭಗವಾನರ ಬಳಿಗೆ ಸಮೀಪಿಸಿದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು: ಭಂತೆ, ಇಂದ್ರೀಯ ಸಂಪನ್ನ, ಇಂದ್ರೀಯ ಸಂಪನ್ನ ಎನ್ನುತ್ತಾರಲ್ಲ, ಯಾವ ವಿಧವಾಗಿ ಭಂತೆ ಒಬ್ಬನು ಇಂದ್ರೀಯಸಂಪನ್ನನಾಗುತ್ತಾನೆ?
ಇಲ್ಲಿ ಭಿಕ್ಷುವು ಚಕ್ಷು ಇಂದ್ರೀಯದ ಉದಯ ಹಾಗು ವ್ಯಯ (ಅಳಿಯುವಿಕೆ)ದಲ್ಲಿ (ಉದಯಬ್ಬಯಾನುಪ್ಪಸ್ಸಿ) ವಿಪಸ್ಸನ ಸಾಧಿಸಿದಾಗ ಚಕ್ಷು ಇಂದ್ರೀಯದಲ್ಲಿ ವಿಕಷರ್ಿತನಾಗುತ್ತನೆ... ಶ್ರೋತ ಇಂದ್ರೀಯದಿಂದ... ಜಿಹ್ವೇಂದ್ರಿಯದಿಂದ ವಿಕಷರ್ಿತನಾಗುತ್ತಾನೆ... ಕಾಯೇಂದ್ರಿಯದಿಂದ... ಮನೀಂದ್ರೀಯದಿಂದ ವಿಕಷರ್ಿತನಾಗುತ್ತಾನೆ. ವಿಕರ್ಷಣೆಯಿಂದ ವಿರಾಗ ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿಜ್ಞಾನ ಹೊಂದುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ. ಈ ರೀತಿಯಾಗಿ ಭಿಕ್ಷು ಇಂದ್ರೀಯ ಸಂಪನ್ನನಾಗುತ್ತಾನೆ.


35.15.10 ಧಮ್ಮಕಥಿಕ ಪುಚ್ಚ ಸುತ್ತಂ (ಧರ್ಮ ಬೋಧಿಸುವವನ ಸುತ್ತ)

155. ಭಿಕ್ಷುವೊಬ್ಬನು ಭಗವಾನರ ಬಳಿಗೆ ಸಮೀಪಿಸಿದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು: ಭಂತೆ, ಧಮ್ಮಕಥಿಕ (ಧಮ್ಮವನ್ನು ಬೋಧಿಸುವವ) ಧಮ್ಮಕಥಿಕ ಎನ್ನುತ್ತಾರಲ್ಲ ಯಾವ ವಿಧದಲ್ಲಿ ಒಬ್ಬನು ಧಮ್ಮಕಥಿಕನಾಗುತ್ತಾನೆ?
ಭಿಕ್ಷು, ಧಮ್ಮ ಬೋಧಿಸುವವನು ಚಕ್ಷುವಿನ ವಿಕರ್ಷಣೆಗೆ (ನಿಟ್ಟಿದ) ಗುರಿಯಾಗಿರಿಸಿ ಬೋಧಿಸಿದರೆ ವಿರಾಗವನ್ನು (ವೈರಾಗ್ಯ) ಗುರಿಯಗಿಸಿ ಬೋಧಿಸಿದದರೆ ಮತ್ತು ನಿರೋಧವನ್ನು (ನಿಲ್ಲಿಸುವಿಕೆ/ಅಂಟದಿರುವಿಕೆ/ಉದಯಿಸದಿರುವಿಕೆ) ಗುರಿಯಾಗಿರಿಸಿ ಬೋಧಿಸಿದರೆ ಅಂತಹವನು ಧಮ್ಮಕಥಿಕನಾಗುತ್ತಾನೆ (ಧಮ್ಮಬೋಧಕ). ಹಾಗೆಯೇ ಒಬ್ಬನು ಚಕ್ಷುವಿನ ವಿಕರ್ಷಣೆ, ವಿರಾಗ, ನಿರೋಧದೆಡೆಗೆ ಅಭ್ಯಸಿಸುವವನಾದರೆ, ಅಂತಹ ಗುರಿಯನ್ನಿರಿಸಿ ಸಾಧನೆ ಮಾಡುವವನಾಗಿದ್ದರೆ ಆತನು ಭಿಕ್ಷು ಎಂದು ಕರೆಯಲ್ಪಡುತ್ತಾನೆ. ಆತನು ಧಮ್ಮಕ್ಕೆ ಅನುಸಾರವಾಗಿಯೇ ಸಾಧಿಸುತ್ತಿದ್ದಾನೆ. ಹೀಗೆ ಆತನು ಚಕ್ಷುವಿನಿಂದ ವಿಕರ್ಷಣೆ ಹೊಂದಿ, ವಿರಾಗಹೊಂದಿ, ನಿರೋಧ ಸಾಧಿಸಿದರೆ ಅಂತಹವನು ದಿಟ್ಠಧಮ್ಮನಿಬ್ಬಾನಪನ್ನೋ ಭಿಕ್ಷು (ಅಂಟುವಿಕೆಯಿಂದ ವಿಮುಕ್ತನಾದ ಭಿಕ್ಷು) ಎನ್ನುತ್ತಾರೆ. ಅಂತಹವನು ಈ ಜನ್ಮದಲ್ಲೇ ನಿಬ್ಬಾಣ ಪಡೆಯುತ್ತಾನೆ. ಅದೇರೀತಿ ಧಮ್ಮಕಥಿಕನು ಕಿವಿ... ಮೂಗು... ನಾಲಿಗೆ... ಕಾಯ... ಮನಸ್ಸಿನ ವಿಕರ್ಷಣೆ, ವಿರಾಗಕ್ಕೆ, ನಿರೋಧಕ್ಕೆ ಬೋಧಿಸಿದರೆ ಆತನು ಧಮ್ಮಕಥಿಕನಾಗುತ್ತಾನೆ. ಅಂತಹವನ್ನು ಸಾಧಿಸುವವನು ನಿಜವಾದ ಭಿಕ್ಷು ಎನಿಸುತ್ತಾನೆ. ಹೀಗೆ ಎಲ್ಲದರಿಂದ ವಿಕರ್ಷಣೆ, ವಿರಾಗ, ನಿರೋಧ ಹೊಂದಿದವನು ದಿಟ್ಟಧಮ್ಮನಿಬ್ಬಾನಪನ್ನೋ ಭಿಕ್ಷು ಎನ್ನುತ್ತಾರೆ. ಅಂತಹವನು ಈ ಜನ್ಮದಲ್ಲೇ ನಿಬ್ಬಾಣ ಸಾಧಿಸುತ್ತಾನೆ.
ಇಲ್ಲಿಗೆ ನವಪುರಾಣ ವರ್ಗ ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...