Thursday 31 May 2018

Samyutta nikaya 35.16 ನಂದಿಕ್ಖಯ ವಗ್ಗೋ (ಆನಂದಕ್ಷಯ ವರ್ಗ)

ನಂದಿಕ್ಖಯ ವಗ್ಗೋ (ಆನಂದಕ್ಷಯ ವರ್ಗ)


35:16:1 ಅಜ್ಝತ್ತನನ್ಧಿಕ್ಖಯ ಸುತ್ತಂ

156. ಭಿಕ್ಷುಗಳೇ, ಅನಿತ್ಯವಾಗಿರುವ ಚಕ್ಷುವನ್ನು ಭಿಕ್ಷುವು ಅನಿತ್ಯವೆಂದು ದಶರ್ಿಸಿದರೆ, ಅದೇ ಆತನ ಸಮ್ಯಕ್ ದೃಷ್ಟಿಕೋನವಾಗಿದೆ. ಹೀಗೆ ಸಮಂಜಸವಾಗಿ ದಶರ್ಿಸಿದಾಗ ಆತನಿ ವಿಕರ್ಷಣೆಯನ್ನು ಅನುಭವಿಸುತ್ತಾನೆ. ಆನಂದದ ಕ್ಷಯದಿಂದ (ನಾಶದಿಂದ) ರಾಗಕ್ಷಯವು ಅನುಭವಿಸುತ್ತಾನೆ. ಅದೇರೀತಿ ರಾಗಕ್ಷಯದಿಂದಾಗಿ ಆನಂದದ ಕ್ಷಯವನ್ನು ಹೊಂದುತ್ತಾನೆ. ಹೀಗೆ ಆನಂದ ಹಾಗು ರಾಗ ಕ್ಷಯಗಳಿಂದ ವಿಮುಕ್ತನಾಗುತ್ತಾನೆ. ಭಿಕ್ಷುಗಳೇ, ಭಿಕ್ಷುವು ಕಿವಿಯನ್ನು... ನಾಸಿಕವನ್ನು... ನಾಲಿಗೆಯನ್ನು... ಕಾಯವನ್ನು... ಮನಸ್ಸನ್ನು ಅನಿತ್ಯವೆಂದು ದಶರ್ಿಸಿದಾಗ, ಸಮಂಜಸವಾಗಿ ದಶರ್ಿಸಿದಾಗ ಆತನು ವಿಕರ್ಷಣೆಯನ್ನು ಅನುಭವಿಸುತ್ತಾನೆ. ಆನಂದದ ಕ್ಷಯದಿಂದ ರಾಗಕ್ಷಯವು, ರಾಗದ ಕ್ಷಯದಿಂದ ಆನಂದದ ಕ್ಷಯವು ಉಂಟಾಗಿ ಆನಂದ ಹಾಗು ರಾಗ ಎರಡರಿಂದಲೂ ವಿಮುಕ್ತನೆಂದು ಕರೆಯಲ್ಪಡುತ್ತಾನೆ.

35:16:2 ಬಾಹಿರ ಆನಂದ ಕ್ಷಯ ಸುತ್ತಂ

157. ಭಿಕ್ಷುಗಳೇ, ಅನಿತ್ಯವಾಗಿರುವ ರೂಪಗಳನ್ನು ಭಿಕ್ಷುವು ಅನಿತ್ಯವೆಂದು ದಶರ್ಿಸಿದರೆ ಅದೇ ಆತನ ಸಮ್ಯಕ್ದೃಷ್ಟಿ ಆಗಿರುತ್ತದೆ. ಹೀಗೆ ಸಮಂಜಸವಾಗಿ ದಶರ್ಿಸಿದಾಗ ಆತನು ವಿಕರ್ಷಣೆಯನ್ನು ಹೊಂದುತ್ತಾನೆ. ಹೀಗೆ ಆನಂದದ ನಾಶದಿಂದ ರಾಗದ ನಾಶವು, ರಾಗದ ನಾಶದಿಂದ ಆನಂದದ ನಾಶವು ಉಂಟಾಗುತ್ತದೆ. ಹೀಗೆ ಆನಂದ ಹಾಗು ರಾಗದ ನಾಶಗಳಿಂದ ಸುವಿಮುಕ್ತನಾಗುತ್ತಾನೆ. ಭಿಕ್ಷುಗಳೇ, ಶಬ್ದಗಳನ್ನು... ಗಂಧವನ್ನು... ರುಚಿಸ್ವಾದಗಳನ್ನು... ಸ್ಪರ್ಶಗಳನ್ನು... ಧಮ್ಮಗಳನ್ನು (ಮಾನಸಿಕ ವಿಷಯಗಳನ್ನು ಅನಿತ್ಯವೆಂದು ದಶರ್ಿಸಿದಾಗ ಅದೇ ಅವನ ಸಮ್ಮಾದೃಷ್ಟಿಯಾಗುತ್ತದೆ. ಹೀಗೆ ಸಮಂಜಸವಾಗಿ ದಶರ್ಿಸಿದಾಗ ಆತನು ವಿಷರ್ಕಣೆಯನ್ನು ಹೊಂದುತ್ತಾನೆ. ಹೀಗೆ ಆನಂದದ ನಾಶದಿಂದ, ರಾಗದ ನಾಶವೂ, ರಾಗದ ನಾಶದಿಂದ ಆನಂದದ ನಾಶವು ಆಗುತ್ತದೆ. ಹೀಗೆ ಆನಂದ ಮತ್ತು ರಾಗದ ನಾಶಗಳಿಂದ ಆತನು ವಿಮುಕ್ತನೆಂದು ಕರೆಯಲ್ಪಡುತ್ತಾನೆ.


35:16:3 ಅಜ್ಝತ ಅನಿಚ್ಚನನ್ದಿಕ್ಷಯ ಸುತ್ತಂ (ಆಂತರ್ಯದ ಅನಿತ್ಯ ಆನಂದ ಕ್ಷಯ ಸುತ್ತ)

158. ಭಿಕ್ಷುಗಳೇ, ಚಕ್ಷುವಿನತ್ತ ಯೋಗ್ಯವಾಗಿ ಗಮನಹರಿಸಿರಿ. ಚಕ್ಷುವಿನ ಅನಿತ್ಯವನ್ನು ಯಥಾಭೂತವಾಗಿ ಗ್ರಹಿಸಿರಿ. ಯಾವಾಗ ಭಿಕ್ಷುವು ಯೋಗ್ಯವಾಗಿ ಚಕ್ಷುವಿನತ್ತ ಗಮನಹರಿಸುವನೋ ಆಗ ಆತನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ. ಆನಂದದ ಕ್ಷಯದಿಂದ ರಾಗದ ಕ್ಷಯವಾಗುವುದು. ರಾಗದ ಕ್ಷಯದಿಂದ ಆನಂದದ ಕ್ಷಯವಾಗುವುದು. ರಾಗದ ಹಾಗು ಆನಂದದ ನಾಶದಿಂದ ಚಿತ್ತವು ಸುವಿಮುಕ್ತವಾಗುವುದು. ಭಿಕ್ಷುಗಳೇ, ಕಿವಿಯತ್ತ ಯೋಗ್ಯವಾಗಿ ಗಮನಹರಿಸಿರಿ... ನಾಸಿಕದತ್ತ... ಜಿಹ್ವೆಯತ್ತ ಯೋಗ್ಯವಾಗಿ ಗಮನಹರಿಸಿರಿ. ಜಿಹ್ವಯ ಅನಿತ್ಯತೆಯನ್ನು ಯಥಾಭೂತವಾಗಿ ದಶರ್ಿಸಿರಿ, ಜಿಹ್ವೆಯನ್ನು ಯಾರು ಯೋಗ್ಯವಾಗಿ ಗಮನಸಿರುವರೋ ಅವರು ಜಿಹ್ವೆಯಿಂದ ವಿಕಷರ್ಿತರಾಗುತ್ತಾರೆ. ಹೀಗೆ ಆನಂದದ ಕ್ಷಯದಿಂದ ರಾಗದ ಕ್ಷಯವಾಗುವುದು, ರಾಗದ ಕ್ಷಯದಿಂದಾಗಿ ಆನಂದದ ಕ್ಷಯವಾಗುವುದು. ಹೀಗೆ ಆನಂದ ಮತ್ತು ರಾಗದ ನಾಶದಿಂದಾಗಿ ಚಿತ್ತವು ಸುವಿಮುಕ್ತವಾಯಿತು ಎನ್ನುತ್ತಾರೆ. ಭಿಕ್ಷುಗಳೇ, ಕಾಯ... ಮನಸ್ಸು ಅದರತ್ತ ಯೋಗ್ಯವಾಗಿ ಗಮನಹರಿಸಿರಿ. ಮನಸ್ಸಿನ ಅನಿತ್ಯವನ್ನು ಯಥಾಭೂತವಾಗಿ ಅರಿಯಿರಿ. ಯಾವಾಗ ಭಿಕ್ಷುವು ಚಿತ್ತದತ್ತ ಯೋಗ್ಯವಾಗಿ ಗಮನಹರಿಸುತ್ತಾನೆಯೋ ಆಗ ಆತನು ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ. ಹೀಗೆ ಆನಂದದ ಕ್ಷಯದಿಂದ ರಾಗದ ಕ್ಷಯವೂ, ರಾಗದ ಕ್ಷಯದಿಂದ ಆನಂದದ ಕ್ಷಯವೂ ಉಂಟಾಗುತ್ತದೆ. ಹೀಗೆ ರಾಗದ ಹಾಗು ಆನಂದದ ನಾಶದಿಂದಾಗಿ ಆತನ ಚಿತ್ತವು ವಿಮುಕ್ತವಾಗುವುದು ಎನ್ನುತ್ತಾರೆ.


35:16:4 ಬಾಹಿರ ಅನಿಚ್ಚನನ್ದಿಕ್ಷಯ ಸುತ್ತಂ (ಬಾಹ್ಯ ಅನಿತ್ಯ ಆನಂದ ಕ್ಷಯ ಸುತ್ತ)

159. ಭಿಕ್ಷುಗಳೇ, ರೂಪಗಳನ್ನು ಯೋಗ್ಯವಾಗಿ ಗಮನಹರಿಸಿರಿ. ರೂಪಗಳ ಅನಿತ್ಯವನ್ನು ಯಥಾಭೂತವಾಗಿ ದಶರ್ಿಸಿರಿ. ಯಾವ ಭಿಕ್ಷುವು ರೂಪಗಳನ್ನು ಯಥಾಭೂತವಾಗಿ ದಶರ್ಿಸುತ್ತಾನೋ ಅನಿತ್ಯವನ್ನು ಅರಿಯುತ್ತಾನೋ ಆತನು ರೂಪಗಳಿಂದ ವಿಕಷರ್ಿಸುತ್ತಾನೆ. ಹೀಗೆ ಆನಂದ ಕ್ಷಯದಿಂದ ರಾಗದ ಕ್ಷಯವೂ, ರಾಗದ ಕ್ಷಯದಿಂದ ಆನಂದದ ಕ್ಷಯವೂ ಉಂಟಾಗುತ್ತದೆ. ಹೀಗೆ ರಾಗ ಮತ್ತು ಆನಂದದ ಕ್ಷಯದಿಂದ ಚಿತ್ತವು ಸುವಿಮುಕ್ತವಾಯಿತು ಎನ್ನುತ್ತಾರೆ. ಭಿಕ್ಷುಗಳೇ, ಶಬ್ದಗಳನ್ನು... ಗಂಧಗಳನ್ನು... ರಸಗಳನ್ನು... ಸ್ಪರ್ಶಗಳನ್ನು... ಧಮ್ಮಗಳನ್ನು ಯೋಗ್ಯವಾಗಿ ಗಮನಹರಿಸಿರಿ. ಧಮ್ಮಗಳು ಅನಿತ್ಯವೆಂದು ಯಥಾಭೂತವಾಗಿ ಗಮನಹರಿಸಿದಾಗ ಆತನು ಧಮ್ಮಗಳಿಂದ ವಿಕಷರ್ಿತನಾಗುತ್ತಾನೆ. ಹೀಗೆ ಆನಂದದ ಕ್ಷಯದಿಂದ ರಾಗದ ಕ್ಷಯವಾಗುವುದು. ರಾಗದ ಕ್ಷಯದಿಂದ ಆನಂದದ ಕ್ಷಯವಾಗುವುದು. ಆನಂದ ಹಾಗು ರಾಗದ ನಾಶದಿಂದ ಚಿತ್ತವು ಸುವಿಮುಕ್ತವಾಯಿತು ಎನ್ನುತ್ತಾರೆ.


35:16:5 ಜೀವಕ ಅಂಬವನ ಸಮಾಧಿ ಸುತ್ತಂ (ಜೀವಕನ ಆಮ್ರವನ ಸಮಾಧಿ ಸುತ್ತ)

160. ಒಮ್ಮೆ ಭಗವಾನರು ರಾಜಗೃಹದಲ್ಲಿರುವ ಜೀವಕನ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಭಗವಾನರು ಭಿಕ್ಷುಗಳನ್ನು ಕುರಿತು ಹೀಗೆ ಸಂಬೋಧಿಸಿದರು. ಭಿಕ್ಷುಗಳೇ, ಸಮಾಧಿಯನ್ನು ಅಭಿವೃದ್ಧಿಗೊಳಿಸಿ. ಸಮಾಹಿತವಾದ ಚಿತ್ತಕ್ಕೆ ಯಥಾಭೂತವಾಗಿ ಎಲ್ಲವೂ ವ್ಯಕ್ತವಾಗುವುದು. ಯಾವೆಲ್ಲವೂ ಯಥಾಭೂತವಾಗಿ ಸಮಾಹಿತವಾದ ಚಿತ್ತಕ್ಕೆ ವ್ಯಕ್ತವಾಗುವುದು? ಚಕ್ಷುವು ಆತನಿಗೆ ಯಥಾಭೂತವಾಗಿ ಅನಿತ್ಯವೆಂದು ವ್ಯಕ್ತವಾಗುವುದು. ರೂಪಗಳು ಆತನಿಗೆ ಯಥಾಭೂತವಾಗಿ ಅನಿತ್ಯವೆಂದು ವ್ಯಕ್ತವಾಗುವುದು. ಚಕ್ಷುವಿಞ್ಞಾಣ... ಚಕ್ಷುಸಂಸ್ಪರ್ಶ... ಚಕ್ಷುಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯ, ಅಪ್ರಿಯ, ಪ್ರಿಯಾಪ್ರಿಯಗಳಲ್ಲದ ವೇದನೆಗಳೆಲ್ಲವೂ ಯಥಾಭೂತವಾಗಿ ಅನಿತ್ಯವೆಂದು ಆತನಿಗೆ ವ್ಯಕ್ತವಾಗುವುದು. ಧಮ್ಮವು ಅನಿತ್ಯವೆಂದು ಯಥಾಭೂತವಾಗಿ ವ್ಯಕ್ತವಾಗುವುದು... ಮನೋಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳೆಲ್ಲವೂ ಅನಿತ್ಯವೆಂದು ಯಥಾಭೂತವಾಗಿ ವ್ಯಕ್ತವಾಗುವುದು. ಆದ್ದರಿಂದಾಗಿ ಭಿಕ್ಷುಗಳೇ, ಸಮಾಧಿಯನ್ನು ಅಭಿವೃದ್ಧಿಗೊಳಿಸಿರಿ. ಏಕೆಂದರೆ ಸಮಾಹಿತವಾದ ಚಿತ್ತವು ಯಥಾಭೂತವಾಗಿ ವ್ಯಕ್ತವಾಗುತ್ತದೆ.


35:16:6 ಜೀವನ ಅಂಬವನ ಪಟಿಸಲ್ಲಾನ ಸುತ್ತಂ (ಜೀವಕ ಆಮ್ರವನದ ಏಕಾಂತತೆಯ ಸುತ್ತ)

161. ಒಮ್ಮೆ ಭಗವಾನರು ರಾಜಗೃಹದಲ್ಲಿರುವ ಜೀವಕನ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಭಗವಾನರು ಭಿಕ್ಷುಗಳನ್ನು ಕುರಿತು ಹೀಗೆ ಸಂಬೋಧಿಸಿದರು. ಭಿಕ್ಷುಗಳೇ, ಏಕಾಂತತೆಯಲ್ಲಿ ಪರಿಶ್ರಮಿಗಳಾಗಿ, ಯಾವಾಗ ಭಿಕ್ಷುವು ಏಕಾಂತತೆಯಲ್ಲಿರುವನೋ, ಆಗ ಆತನಿಗೆ ವಿಷಯಗಳು ಸ್ಪಷ್ಟವಾಗಿ ಯಥಾಭೂತವಾಗಿ ಕಾಣುವುವು. ಹಾಗು ಯಾವ ಎಲ್ಲವನ್ನು ಆತನು ವ್ಯಕ್ತವಾಗಿ ಕಾಣಬಹುದು? ಚಕ್ಷುವು ಆತನಿಗೆ ಯಥಾಭೂತವಾಗಿ ಅನಿತ್ಯವೆಂದು ವ್ಯಕ್ತವಾಗುವುದು. ರೂಪಗಳು ಆತನಿಗೆ ಯಥಾಭೂತವಾಗಿ ಅನಿತ್ಯವೆಂದು ವ್ಯಕ್ತವಾಗುವುದು. ಚಕ್ಷುವಿಞ್ಞಾಣ... ಚಕ್ಷುಸಂಸ್ಪರ್ಶ... ಚಕ್ಷುಸಂಸ್ಪರ್ಶಗಳಿಂದ ಉಂಟಾದ ವೇದನೆಗಳಾದ ಪ್ರಿಯ, ಅಪ್ರಿಯ, ಪ್ರಿಯಾಪ್ರಿಯಗಳಲ್ಲದ ವೇದನೆಗಳೆಲ್ಲವೂ ಯಥಾಭೂತವಾಗಿ ಅನಿತ್ಯವೆಂದು ಆತನಿಗೆ ವ್ಯಕ್ತವಾಗುವುದು. ಧಮ್ಮವು ಅನಿತ್ಯವೆಂದು ಯಥಾಭೂತವಾಗಿ ವ್ಯಕ್ತವಾಗುವುದು... ಮನೋಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳೆಲ್ಲವೂ ಅನಿತ್ಯವೆಂದು ಯಥಾಭೂತವಾಗಿ ವ್ಯಕ್ತವಾಗುವುದು. ಆದ್ದರಿಂದಾಗಿ ಭಿಕ್ಷುಗಳೇ, ಏಕಾಂತತೆಯಲ್ಲಿ ಪರಿಶ್ರಮಿಗಳಾಗಿ. ಏಕೆಂದರೆ ಏಕಾಂತವಾದ ಚಿತ್ತವು ಯಥಾಭೂತವಾಗಿ ವ್ಯಕ್ತಗೊಳಿಸುತ್ತದೆ.


35:16:7 ಕೋಟ್ಠಿಕ ಅನಿಚ್ಚ ಸುತ್ತಂ (ಕೋಟ್ಠಿಕ ಅನಿತ್ಯ ಸುತ್ತ)

162. ಆಗ ಆಯುಷ್ಮಂತ ಕೋಟ್ಠಿಕರು ಭಗವಾನರು ಇರುವಲ್ಲಿಗೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಕೋರಿಕೊಂಡರು: ಭಂತೆ, ಭಗವಾನರು ನನಗೆ ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸುವಂತಾಗಲಿ. ಅದನ್ನು ಆಲಿಸಿ ನಾನು ಏಕಾಂಗಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ ಮತ್ತು ದೃಢಪರಿಶ್ರಮಿಯಾಗಲಿ.
ಕೋಟ್ಠಿಕ, ಯಾವುದೆಲ್ಲವೂ ಅನಿತ್ಯವೋ ಅವುಗಳೆಲ್ಲದರ ಆಸೆಗಳನ್ನು ಪರಿತ್ಯಾಗಮಾಡು ಮತ್ತು ಯಾವುದೆಲ್ಲವೂ ಅನಿತ್ಯವಾಗಿದೆ? ಚಕ್ಷು ಅನಿತ್ಯವಾಗಿದೆ, ಅದರ ಬಗೆಗಿನ ಆಸೆಗಳನ್ನು ಪರಿತ್ಯಾಗ ಮಾಡು. ರೂಪಗಳು ಅನಿತ್ಯವಾಗಿವೆ, ಚಕ್ಷು ವಿಞ್ಞಾಣವು ಅನಿತ್ಯವಾಗಿವೆ... ಚಕ್ಷುಸಂಸ್ಪರ್ಶವು ಅನಿತ್ಯವಾಗಿದೆ... ಯಾವುದೆಲ್ಲ ಚಕ್ಷುಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳಿವೆಯೋ ಅವುಗಳ ಬಗ್ಗೆಯ ಆಸೆಗಳನ್ನು ನೀನು ಪರಿತ್ಯಾಗ ಮಾಡುವಂತಾಗು. ಮತ್ತೆ ಕಿವಿಯು ಅನಿತ್ಯವಾಗಿದೆ... ನಾಸಿಕವು... ಜಿಹ್ವೆಯು... ಕಾಯವು... ಮನಸ್ಸು... ಧಮ್ಮವು... ಮನೋವಿಞ್ಞಾಣವು... ಮನೋಸಂಸ್ಪರ್ಶವು... ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳು ಅನಿತ್ಯಕರವಾಗಿವೆ. ಇವುಗಳ ಬಗ್ಗೆಯು ಆಸೆಯನ್ನು ಪರಿತ್ಯಾಗ ಮಾಡು. ಕೋಟ್ಠಿಕ ಹೀಗೆ ನೀನು ಯಾವುದೆಲ್ಲ ಅನಿತ್ಯಕರವಾಗಿವೆಯೋ ಅವುಗಳ ಕುರಿತು ಆಸೆಯನ್ನು ಪರಿತ್ಯಾಗ ಮಾಡುವಂತಾಗು.


35:16:8 ಕೋಟ್ಠಿಕ ದುಃಖ ಸುತ್ತಂ (ಕೋಟ್ಠಿಕ ದುಃಖ ಸುತ್ತ)

163. ಆಗ ಆಯುಷ್ಮಂತ ಕೋಟ್ಠಿಕರು ಭಗವಾನರು ಇರುವಲ್ಲಿಗೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಕೋರಿಕೊಂಡರು: ಭಂತೆ, ಭಗವಾನರು ನನಗೆ ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸುವಂತಾಗಲಿ. ಅದನ್ನು ಆಲಿಸಿ ನಾನು ಏಕಾಂಗಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ ಮತ್ತು ದೃಢಪರಿಶ್ರಮಿಯಾಗಲಿ.
ಕೋಟ್ಠಿಕ, ಯಾವುದೆಲ್ಲವೂ ದುಃಖವೋ ಅವುಗಳೆಲ್ಲದರ ಆಸೆಗಳನ್ನು ಪರಿತ್ಯಾಗಮಾಡು ಮತ್ತು ಯಾವುದೆಲ್ಲವೂ ದುಃಖವಾಗಿದೆ? ಚಕ್ಷು ದುಃಖವಾಗಿದೆ, ಅದರ ಬಗೆಗಿನ ಆಸೆಗಳನ್ನು ಪರಿತ್ಯಾಗ ಮಾಡು. ರೂಪಗಳು ದುಃಖವಾಗಿದೆ, ಚಕ್ಷು ವಿಞ್ಞಾಣವು ದುಃಖವಾಗಿವೆ... ಚಕ್ಷುಸಂಸ್ಪರ್ಶವು ದುಃಖವಾಗಿದೆ... ಯಾವುದೆಲ್ಲ ಚಕ್ಷುಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳಿವೆಯೋ ಅವುಗಳ ಬಗ್ಗೆಯ ಆಸೆಗಳನ್ನು ನೀನು ಪರಿತ್ಯಾಗ ಮಾಡುವಂತಾಗು. ಮತ್ತೆ ಕಿವಿಯು ದುಃಖವಾಗಿದೆ... ನಾಸಿಕವು... ಜಿಹ್ವೆಯು... ಕಾಯವು... ಮನಸ್ಸು... ಧಮ್ಮವು... ಮನೋವಿಞ್ಞಾಣವು... ಮನೋಸಂಸ್ಪರ್ಶವು... ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳು ದುಃಖಕರವಾಗಿವೆ. ಇವುಗಳ ಬಗ್ಗೆಯು ಆಸೆಯನ್ನು ಪರಿತ್ಯಾಗ ಮಾಡು. ಕೋಟ್ಠಿಕ ಹೀಗೆ ನೀನು ಯಾವುದೆಲ್ಲ ದುಃಖಕರವಾಗಿವೆಯೋ ಅವುಗಳ ಕುರಿತು ಆಸೆಯನ್ನು ಪರಿತ್ಯಾಗ ಮಾಡುವಂತಾಗು.


35:16:9 ಕೋಟ್ಠಿಕ ಅನತ್ತ ಸುತ್ತಂ (ಕೋಟ್ಠಿಕ ಅನಾತ್ಮ ಸುತ್ತ)

164. ಆಗ ಆಯುಷ್ಮಂತ ಕೋಟ್ಠಿಕರು ಭಗವಾನರು ಇರುವಲ್ಲಿಗೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಕೋರಿಕೊಂಡರು: ಭಂತೆ, ಭಗವಾನರು ನನಗೆ ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸುವಂತಾಗಲಿ. ಅದನ್ನು ಆಲಿಸಿ ನಾನು ಏಕಾಂಗಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ ಮತ್ತು ದೃಢಪರಿಶ್ರಮಿಯಾಗಲಿ.
ಕೋಟ್ಠಿಕ, ಯಾವುದೆಲ್ಲವೂ ಅನಾತ್ಮವೋ ಅವುಗಳೆಲ್ಲದರ ಆಸೆಗಳನ್ನು ಪರಿತ್ಯಾಗಮಾಡು ಮತ್ತು ಯಾವುದೆಲ್ಲವೂ ಅನಾತ್ಮವಾಗಿದೆ? ಚಕ್ಷು ಅನಾತ್ಮವಾಗಿದೆ, ಅದರ ಬಗೆಗಿನ ಆಸೆಗಳನ್ನು ಪರಿತ್ಯಾಗ ಮಾಡು. ರೂಪಗಳು ಅನಾತ್ಮವಾಗಿವೆ, ಚಕ್ಷು ವಿಞ್ಞಾಣವು ಅನಾತ್ಮವಾಗಿವೆ... ಚಕ್ಷುಸಂಸ್ಪರ್ಶವು ಅನಾತ್ಮವಾಗಿದೆ... ಯಾವುದೆಲ್ಲ ಚಕ್ಷುಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳಿವೆಯೋ ಅವುಗಳ ಬಗ್ಗೆಯ ಆಸೆಗಳನ್ನು ನೀನು ಪರಿತ್ಯಾಗ ಮಾಡುವಂತಾಗು. ಮತ್ತೆ ಕಿವಿಯು ಅನಾತ್ಮವಾಗಿದೆ... ನಾಸಿಕವು... ಜಿಹ್ವೆಯು... ಕಾಯವು... ಮನಸ್ಸು... ಧಮ್ಮವು... ಮನೋವಿಞ್ಞಾಣವು... ಮನೋಸಂಸ್ಪರ್ಶವು... ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳು ಅನಾತ್ಮವಾಗಿವೆ. ಇವುಗಳ ಬಗ್ಗೆಯು ಆಸೆಯನ್ನು ಪರಿತ್ಯಾಗ ಮಾಡು. ಕೋಟ್ಠಿಕ ಹೀಗೆ ನೀನು ಯಾವುದೆಲ್ಲ ಅನಾತ್ಮವಾಗಿವೆಯೋ ಅವುಗಳ ಕುರಿತು ಆಸೆಯನ್ನು ಪರಿತ್ಯಾಗ ಮಾಡುವಂತಾಗು.


35:16:10 ಮಿಚ್ಚಾದಿಟ್ಠಿ ಪಹಾನ ಸುತ್ತಂ (ಮಿಥ್ಯಾದೃಷ್ಟಿಯ ವರ್ಜನೆಯ ಸುತ್ತ)

165. ಆಗ ಭಿಕ್ಷುವೋರ್ವನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು: ಭಂತೆ, ಮಿಥ್ಯಾದೃಷ್ಟಿಯನ್ನು ವಜರ್ಿಸಲು ಯಾವರೀತಿ ಅರಿಯಬೇಕು? ಹಾಗು ಯಾವರೀತಿಯಲ್ಲಿ ದಶರ್ಿಸಬೇಕು?
ಭಿಕ್ಷು ಯಾವಾಗ ಒಬ್ಬನು ಚಕ್ಷುವನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಅವನ ಮಿಥ್ಯಾದೃಷ್ಟಿಯು ವಜರ್ಿತವಾಗುವುದು. ಯಾವಾಗ ಒಬ್ಬನು ರೂಪಗಳನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಆತನ ಮಿಥ್ಯಾದೃಷ್ಟಿಯು ವಜರ್ಿತವಾಗುವುದು. ಚಕ್ಷುವಿಞ್ಞಾನವನ್ನು... ಚಕ್ಷುಸಂಸ್ಪರ್ಶಗಳನ್ನು... ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ವೇದನೆಗಳನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಆತನ ಮಿಥ್ಯಾದೃಷ್ಟಿಯು ವಜರ್ಿತವಾಗುವುದು.


35:16:11 ಸಕ್ಕಾಯದಿಟ್ಠಿ ಪಹಾನ ಸುತ್ತಂ (ವ್ಯಕ್ತಿತ್ವದ ದೃಷ್ಟಿಯ ವರ್ಜನೆಯ ಸುತ್ತ)

166. ಆಗ ಭಿಕ್ಷುವೋರ್ವನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು: ಭಂತೆ, ಸಕ್ಕಾಯದೃಷ್ಟಿಯನ್ನು ವಜರ್ಿಸಲು ಯಾವರೀತಿ ಅರಿಯಬೇಕು? ಹಾಗು ಯಾವರೀತಿಯಲ್ಲಿ ದಶರ್ಿಸಬೇಕು? - ಭಿಕ್ಷು ಯಾವಾಗ ಒಬ್ಬನು ಚಕ್ಷುವನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಅವನ ಸಕ್ಕಾಯದೃಷ್ಟಿಯು ವಜರ್ಿತವಾಗುವುದು. ಯಾವಾಗ ಒಬ್ಬನು ರೂಪಗಳನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಆತನ ಸಕ್ಕಾಯದೃಷ್ಟಿಯು ವಜರ್ಿತವಾಗುವುದು. ಚಕ್ಷುವಿಞ್ಞಾನವನ್ನು... ಚಕ್ಷುಸಂಸ್ಪರ್ಶಗಳನ್ನು... ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ವೇದನೆಗಳನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಆತನ ಸಕ್ಕಾಯದೃಷ್ಟಿಯು ವಜರ್ಿತವಾಗುವುದು.


35:16:12 ಅತ್ತಾನುದಿಟ್ಠಿ ಪಹಾನ ಸುತ್ತಂ (ಆತ್ಮದ ಬಗೆಗಿನ ದೃಷ್ಟಿಯ ವರ್ಜನೆಯ ಸುತ್ತ)

167. ಆಗ ಭಿಕ್ಷುವೋರ್ವನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು: ಭಂತೆ, ಆತ್ಮದೃಷ್ಟಿಯನ್ನು ವಜರ್ಿಸಲು ಯಾವರೀತಿ ಅರಿಯಬೇಕು? ಹಾಗು ಯಾವರೀತಿಯಲ್ಲಿ ದಶರ್ಿಸಬೇಕು? - ಭಿಕ್ಷು ಯಾವಾಗ ಒಬ್ಬನು ಚಕ್ಷುವನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಅವನ ಆತ್ಮದೃಷ್ಟಿಯು ವಜರ್ಿತವಾಗುವುದು. ಯಾವಾಗ ಒಬ್ಬನು ರೂಪಗಳನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಆತನ ಆತ್ಮದೃಷ್ಟಿಯು ವಜರ್ಿತವಾಗುವುದು. ಚಕ್ಷುವಿಞ್ಞಾನವನ್ನು... ಚಕ್ಷುಸಂಸ್ಪರ್ಶಗಳನ್ನು... ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ವೇದನೆಗಳನ್ನು ಅನಿತ್ಯವೆಂದು ಅರಿತರೆ ಹಾಗು ದಶರ್ಿಸಿದರೆ ಆತನ ಆತ್ಮದೃಷ್ಟಿಯು ವಜರ್ಿತವಾಗುವುದು.
ಇಲ್ಲಿಗೆ ನನ್ದಿಕ್ಖಯ ವರ್ಗವು ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...