Thursday 31 May 2018

Samyutta nikaya 35.17 ಸಟ್ಠಿಪೇಯ್ಯಾಲ ವಗ್ಗೋ

ಸಟ್ಠಿಪೇಯ್ಯಾಲ ವಗ್ಗೋ


35.17.1 ಅಜ್ಝತ್ತ ಅನಿಚ್ಚ ಛನ್ದ ಸುತ್ತಂ (ಆಂತರ್ಯದ ಅನಿತ್ಯದಲ್ಲಿ ಆಸೆ ಸುತ್ತ)

168. ಭಿಕ್ಷುಗಳೇ, ನೀವು ಯಾವುದೆಲ್ಲಾ ಅನಿತ್ಯವೋ ಅವೆಲ್ಲದರ ಮೇಲೆ ಆಸೆಯನ್ನು ಪರಿತ್ಯಾಗ ಮಾಡಿರಿ. ಕಣ್ಣು ಭಿಕ್ಷುಗಳೇ ಅನಿತ್ಯವಾಗಿದೆ... ಕಿವಿಯು... ನಾಲಿಗೆಯು... ದೇಹವು... ಮನಸ್ಸು ಅನಿತ್ಯವಾಗಿದೆ. ಇವುಗಳಲ್ಲಿ ಆಸೆಗಳನ್ನು ಪರಿತ್ಯಾಗ ಮಾಡಿರಿ.

35.17.2 ಅಜ್ಝತ್ತ ಅನಿಚ್ಚ ರಾಗ ಸುತ್ತಂ

169. ಭಿಕ್ಷುಗಳೇ, ನೀವು ಯಾವುದೆಲ್ಲಾ ಅನಿತ್ಯವೋ ಅವುಗಳಲ್ಲಿ ರಾಗವನ್ನು ಪರಿತ್ಯಾಗ ಮಾಡಿರಿ. ಮತ್ತೆ ಯಾವುದು ಅನಿತ್ಯ? ಕಣ್ಣು ಅನಿತ್ಯವಾಗಿದೆ... ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು ಅನಿತ್ಯಕರವಾಗಿದೆ. ನೀವು ಅದರ ಮೇಲಿನ ರಾಗವನ್ನು ಪರಿತ್ಯಾಗ ಮಾಡಿರಿ.

35.17.3 ಅಜ್ಝತ್ತ ಅನಿಚ್ಚ ಛನ್ದರಾಗ ಸುತ್ತಂ

170. ಭಿಕ್ಷುಗಳೇ, ನೀವು ಯಾವುದೆಲ್ಲಾ ಅನಿತ್ಯವೋ ಅವುಗಳಲ್ಲಿ ಛಂದರಾಗವನ್ನು ಪರಿತ್ಯಾಗ ಮಾಡಿರಿ. ಯಾವುದು ಭಿಕ್ಷುಗಳೇ ಅನಿತ್ಯವು? ಕಣ್ಣು ಅನಿತ್ಯವಾಗಿದೆ... ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು ಅನಿತ್ಯಕರವಾಗಿದೆ. ನೀವು ಅದರ ಮೇಲಿನ ಆಸೆ ಹಾಗು ರಾಗವನ್ನು ಪರಿತ್ಯಾಗ ಮಾಡಿರಿ.


35.17.4-6 ದುಃಖ ಛನ್ದಾದಿ ಸುತ್ತಂ

171-173. ಭಿಕ್ಷುಗಳೇ, ಯಾವುದೆಲ್ಲಾ ದುಃಖಕರವೋ ಅವುಗಳ ಬಗಿಗಿನ ಆಸೆಯನ್ನು ಪರಿತ್ಯಾಗ ಮಾಡಿರಿ... ಯಾವುದೆಲ್ಲಾ ದುಃಖಕರವೋ ಅವುಗಳ ಬಗೆಗಿನ ರಾಗವನ್ನು ಪರಿತ್ಯಾಗ ಮಾಡಿರಿ... ಯಾವುದೆಲ್ಲಾ ದುಃಖಕರವೂ ಅವುಗಳ ಬಗೆಗಿನ ಆಸೆಯನ್ನು ಮತ್ತು ರಾಗವನ್ನು ಪರಿತ್ಯಾಗ ಮಾಡಿರಿ. ಮತ್ತು ಯಾವುದು ದುಃಖಕರ? ಕಣ್ಣು ದುಃಖಕರವಾಗಿದೆ... ಕಿವಿಯು ದುಃಖಕರವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ದುಃಖಕರವಾಗಿದೆ. ಅವುಗಳ ಬಗೆಗಿನ ಆಸೆ ಮತ್ತು ರಾಗವನ್ನು ಪರಿತ್ಯಾಗ ಮಾಡಿರಿ. ಭಿಕ್ಷುಗಳೇ, ಯಾವುದೆಲ್ಲಾ ದುಃಖಕರವೋ ಅವುಗಳ ಬಗೆಗಿನ ಆಸೆ ಹಾಗು ರಾಗವನ್ನು ಪರಿತ್ಯಾಗ ಮಾಡಿರಿ.


35.17.7-9 ಅನತ್ತ ಛನ್ದಾದಿ ಸುತ್ತಂ

174-176. ಭಿಕ್ಷುಗಳೇ, ಯಾವುವು ಅನಾತ್ಮವೋ ಅವುಗಳ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ, ರಾಗವನ್ನು ಪರಿತ್ಯಜಿಸಿರಿ. ಆಸೆ ಹಾಗು ರಾಗವನ್ನು ಪರಿತ್ಯಜಿಸಿರಿ... ಮತ್ತೆ ಯಾವುದು ಭಿಕ್ಷುಗಳೇ ಅನಾತ್ಮವು? ಭಿಕ್ಷುಗಳೇ, ಇಲ್ಲಿ ಚಕ್ಷು ಅನಾತ್ಮವಾಗಿದೆ. ಅದರ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ, ಅದರ ಬಗೆಗಿನ ರಾಗವನ್ನು ಪರಿತ್ಯಜಿಸಿರಿ. ಅದರ ಬಗೆಗಿನ ಆಸೆ ಹಾಗು ರಾಗವನ್ನು ಪರಿತ್ಯಜಿಸಿರಿ... ಮತ್ತೆ ಇಲ್ಲಿ ಕಿವಿಯು ಅನಾತ್ಮವಾಗಿದೆ... ಮೂಗು... ನಾಲಿಗೆ... ಕಾಯ... ಮನಸ್ಸು ಅನಾತ್ಮವಾಗಿದೆ. ಅದರ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ. ಅದರ ಬಗೆಗಿನ ರಾಗವನ್ನು ಪರಿತ್ಯಜಿಸಿರಿ. ಅದರ ಬಗೆಗಿನ ಆಸೆ ಹಾಗು ರಾಗವನ್ನು ಪರಿತ್ಯಜಿಸಿರಿ.


35.17.10-12 ಬಾಹಿರನಿಚ್ಛ ಛನ್ದಾದಿ ಸುತ್ತಂ

177-179. ಭಿಕ್ಷುಗಳೇ, ಯಾವುದೆಲ್ಲಾ ಅನಿತ್ಯವೋ ಅವುಗಳ ಬಗೆಗಿನ ಆಸೆಯನ್ನು ವಜರ್ಿಸಿರಿ, ರಾಗವನ್ನು ವಜರ್ಿಸಿರಿ. ಆಸೆ ಹಾಗು ರಾಗಗಳನ್ನು ವಜರ್ಿಸಿರಿ. ಯಾವುದು ಭಿಕ್ಷುಗಳೇ ಅನಿತ್ಯವು? ಭಿಕ್ಷುಗಳೇ, ರೂಪಗಳು ಅನಿತ್ಯವಾಗಿವೆ. ಅವುಗಳ ಬಗೆಗಿನ ಆಸೆಯನ್ನು ವಜರ್ಿಸಿರಿ, ರಾಗವನ್ನು ವಜರ್ಿಸಿರಿ, ಆಸೆ ಹಾಗು ರಾಗಗಳನ್ನು ವಜರ್ಿಸಿರಿ. ಶಬ್ದಗಳು ಅನಿತ್ಯಕರವಾಗಿದೆ ಭಿಕ್ಷುಗಳೇ, ಅವುಗಳ ಬಗೆಗಿನ ಆಸೆಯನ್ನು ವಜಿಸಿರಿ, ರಾಗವನ್ನು ವಜರ್ಿಸಿರಿ, ಆಸೆ ಹಾಗು ರಾಗಗಳನ್ನು ವಜರ್ಿಸಿರಿ. ಗಂಧವು ಅನಿತ್ಯಕರವಾಗಿದೆ... ರುಚಿಸ್ವಾದವು... ಸ್ಪರ್ಶಗಳು... ಮಾನಸಿಕ ವಿಷಯಗಳು ಅನಿತ್ಯಕರವಾಗಿದೆ. ಅವುಗಳ ಬಗೆಗಿನ ಆಸೆಯನ್ನು ವಜರ್ಿಸಿರಿ, ರಾಗವನ್ನು ವಜರ್ಿಸಿರಿ, ಅವುಗಳ ಬಗೆಗಿನ ಆಸೆ ಹಾಗು ರಾಗಗಳನ್ನು ವಜರ್ಿಸಿರಿ.


35.17.13-15 ಬಾಹಿರ ದುಃಖ ಛನ್ದಾದಿ ಸುತ್ತಂ

180-182. ಭಿಕ್ಷುಗಳೇ, ಯಾವುದೆಲ್ಲಾ ದುಃಖವೋ ಅವುಗಳ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ, ರಾಗವನ್ನು ಪರಿತ್ಯಜಿಸಿರಿ, ಆಸೆ ಹಾಗು ರಾಗಗಳನ್ನು ಪರಿತ್ಯಜಿಸಿರಿ. ಯಾವುದು ಭಿಕ್ಷುಗಳೇ ದುಃಖವು? ರೂಪಗಳು ಭಿಕ್ಷುಗಳೇ ದುಃಖಕರವಾಗಿವೆ, ಅವುಗಳ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ. ಅವುಗಳ ಬಗೆಗಿನ ರಾಗವನ್ನು ಪರಿತ್ಯಜಿಸಿರಿ. ಅವುಗಳ ಬಗೆಗಿನ ಆಸೆಯನ್ನು ಹಾಗು ರಾಗವನ್ನು ಪರಿತ್ಯಜಿಸಿರಿ. ಶಬ್ದಗಳು ಭಿಕ್ಷುಗಳೇ ದುಃಖಕರವಾಗಿವೆ... ಗಂಧಗಳು... ರಸಗಳು... ಸ್ಪರ್ಶಗಳು... ಮಾನಸಿಕ ವಿಷಯಗಳು ದುಃಖಕರವಾಗಿವೆ. ಅವುಗಳ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ, ರಾಗವನ್ನು ಪರಿತ್ಯಜಿಸಿರಿ. ಆಸೆ ಹಾಗು ರಾಗವನ್ನು ಪರಿತ್ಯಜಿಸಿರಿ.


35.17.16-18 ಬಾಹಿರನತ್ತ ಛನ್ದಾದಿ ಸುತ್ತಂ

183-185. ಭಿಕ್ಷುಗಳೇ, ಯಾವುದೆಲ್ಲಾ ಅನಾತ್ಮವೋ ಅವುಗಳ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ. ಅವುಗಳ ಬಗೆಗಿನ ರಾಗವನ್ನು ಪರಿತ್ಯಜಿಸಿರಿ. ಅವುಗಳ ಬಗೆಗಿನ ಆಸೆ ಹಾಗು ರಾಗವನ್ನು ಪರಿತ್ಯಜಿಸಿರಿ. ಯಾವುವು ಭಿಕ್ಷುಗಳೇ ಅನಾತ್ಮವು? ದೃಶ್ಯಗಳು (ರೂಪಗಳು) ಭಿಕ್ಷುಗಳೇ ಅನಾತ್ಮವಾಗಿವೆ. ಅವುಗಳ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ, ರಾಗಗಳನ್ನು ಪರಿತ್ಯಜಿಸಿರಿ. ಆಸೆಗಳನ್ನು ಹಾಗು ರಾಗಗಳನ್ನು ಪರಿತ್ಯಜಿಸಿರಿ. ಶಬ್ದಗಳು... ಗಂಧಗಳು... ರಸಗಳು... ಸ್ಪರ್ಶಗಳು... ಧಮ್ಮಗಳು (ಮಾನಸಿಕ ವಿಷಯಗಳು) ಅನಾತ್ಮವಾಗಿವೆ. ಅವುಗಳ ಬಗೆಗಿನ ಆಸೆಯನ್ನು ಪರಿತ್ಯಜಿಸಿರಿ. ರಾಗವನ್ನು ಪರಿತ್ಯಜಿಸಿರಿ. ಆಸೆ ಹಾಗು ರಾಗವನ್ನು ಪರಿತ್ಯಜಿಸಿರಿ.


35.17.19 ಅಜ್ಝತ್ತಾತೀತಾ ನಿಚ್ಚ ಸುತ್ತಂ

186. ಭಿಕ್ಷುಗಳೇ, ಅತೀತದ (ಭೂತಕಾಲದ) ಚಕ್ಷುವು ಅನಿತ್ಯವಾಗಿದೆ... ಕಿವಿಯು... ಜಿಹ್ವೆಯು... ನಾಸಿಕವು... ದೇಹವು... ಮನಸ್ಸು ಅನಿತ್ಯವಾಗಿದೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕ ಭಿಕ್ಷುವು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ... ಕಿವಿಯಿಂದ, ನಾಸಿಕದಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿಜ್ಞಾನ ಉಂಟಾಗುತ್ತದೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆ ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯು ಇನ್ನಿಲ್ಲ


35.17.20 ಅಜ್ಝತ್ತಾ ಅನಾಗತ ನಿಚ್ಚ ಸುತ್ತಂ

187. ಭಿಕ್ಷುಗಳೇ, ಅನಾಗತದ (ಭವಿಷ್ಯದ) ಚಕ್ಷುವು ಅನಿತ್ಯವಾಗಿದೆ... ಕಿವಿಯು... ಜಿಹ್ವೆಯು... ನಾಸಿಕವು... ದೇಹವು... ಮನಸ್ಸು ಅನಿತ್ಯವಾಗಿದೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕ ಭಿಕ್ಷುವು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ... ಕಿವಿಯಿಂದ, ನಾಸಿಕದಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿಜ್ಞಾನ ಉಂಟಾಗುತ್ತದೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆ ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯು ಇನ್ನಿಲ್ಲ


35.17.21 ಅಜ್ಝತ್ತಾ ಪಚ್ಚುಪನ್ನಾ ನಿಚ್ಚ ಸುತ್ತಂ

188. ಭಿಕ್ಷುಗಳೇ, ಈಗಿನ (ವರ್ತಮಾನದ) ಚಕ್ಷುವು ಅನಿತ್ಯವಾಗಿದೆ... ಕಿವಿಯು... ಜಿಹ್ವೆಯು... ನಾಸಿಕವು... ದೇಹವು... ಮನಸ್ಸು ಅನಿತ್ಯವಾಗಿದೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕ ಭಿಕ್ಷುವು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ... ಕಿವಿಯಿಂದ, ನಾಸಿಕದಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿಜ್ಞಾನ ಉಂಟಾಗುತ್ತದೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆ ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯು ಇನ್ನಿಲ್ಲ



35.17.22-24 ಅಜ್ಝತ್ತಾತೀತಾದಿ ದುಃಖ ಸುತ್ತಂ

189-191. ಭಿಕ್ಷುಗಳೇ, ಚಕ್ಷುವು ಭೂತಕಾಲದ್ದೇ ಆಗಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ದುಃಖಕಾರಿಯಾಗಿದೆ. ಕಿವಿಯು... ನಾಸಿಕವು... ನಾಲಿಗೆಯು... ದೇಹವು... ಮನಸ್ಸು ಭೂತಕಾಲಕ್ಕೆ ಆಗಿರಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ದುಃಖಕಾರಿಯಾಗಿದೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಮನಸ್ಸಿನಿಂದ ವಿಕಷರ್ಿಸುತ್ತಾನೆ... ...ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.25-27 ಅಜ್ಝತ್ತಾತೀತಾದಿ ಅನತ್ತ ಸುತ್ತಂ

192-194. ಭಿಕ್ಷುಗಳೇ, ಚಕ್ಷುವು ಭೂತಕಾಲದ್ದೇ ಆಗಿರಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ಅನಾತ್ಮವಾಗಿದೆ... ಕಿವಿಯು... ನಾಸಿಕವು... ನಾಲಿಗೆಯು... ದೇಹವು... ಮನಸ್ಸು ಭಿಕ್ಷುಗಳೇ, ಭೂತಕಾಲದ್ದೇ ಆಗಿರಲಿ ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ಅವೆಲ್ಲಾ ಅನಾತ್ಮವಾಗಿದೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಮನಸ್ಸಿನಿಂದ ವಿಕಷರ್ಿಸುತ್ತಾನೆ... ವಿರಾಗ ಹೊಂದುತ್ತಾನೆ... ವಿಮುಕ್ತನಾಗುತ್ತಾನೆ... ವಿಮುಕ್ತಿಜ್ಞಾನ ಪಡೆಯುತ್ತಾನೆ... ... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.



35.17.28-30 ಬಾಹಿರಾತೀತಾದಿ ಅನಿಚ್ಚ ಸುತ್ತಂ

195-197. ಭಿಕ್ಷುಗಳೇ, ರೂಪಗಳು ಭೂತಕಾಲದ್ದೇ ಆಗಿರಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ, ಅನಿತ್ಯವಾಗಿವೆ. ಹಾಗೆಯೇ ಶಬ್ದಗಳು... ವಾಸನೆಗು... ರಸಗಳು... ಸ್ಪರ್ಶಗಳು... ಧಮ್ಮಗಳು ಅನಿತ್ಯಕರವಾಗಿವೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಧಮ್ಮಗಳಿಂದ (ಮಾನಸಿಕ ವಿಷಯಗಳಿಂದ) ವಿಮುಖನಾಗುತ್ತಾನೆ, ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ... ವಿಮುಕ್ತಿಜ್ಞಾನ ಪಡೆಯುತ್ತಾನೆ... ... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.31-33 ಬಾಹಿರಾತೀತಾದಿ ದುಕ್ಖ ಸುತ್ತಂ

198-200. ಭಿಕ್ಷುಗಳೇ, ರೂಪಗಳು ದುಃಖಕಾರಿಯಾಗಿವೆ. ಅವು ಭೂತಕಾಲದ್ದೇ ಆಗಿರಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ, ಅವೆಲ್ಲಾ ದುಃಖಕಾರಿಯಾಗಿವೆ. ಅದೇರೀತಿಯಲ್ಲಿ ಶಬ್ದಗಳು... ವಾಸನೆಗಳು... ರಸಗಳು... ಸ್ಪರ್ಶಗಳು... ಧಮ್ಮಗಳು ದುಃಖಕಾರಿಯಾಗಿವೆ. ಅವು ಭೂತಕಾಲದ್ದೇ ಆಗಿರಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ, ಅವೆಲ್ಲಾ ದುಃಖಕಾರಿಯಾಗಿವೆ. ಈ ರೀತಿಯಲ್ಲಿ ದಶರ್ಿಸಿದಂತಹ ಆರ್ಯಶ್ರಾವಕನು ಧಮ್ಮಗಳಿಂದ (ಮಾನಸಿಕ ವಿಷಯಗಳಿಂದ) ವಿಮುಖನಾಗುತ್ತಾನೆ, ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ... ವಿಮುಕ್ತಿಜ್ಞಾನ ಪಡೆಯುತ್ತಾನೆ... ಜನ್ಮವು ನಾಶವಾಯಿತು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.34-36 ಬಾಹಿರಾತೀತಾದಿ ಅನತ್ತ ಸುತ್ತಂ

201-203. ಭಿಕ್ಷುಗಳೇ, ರೂಪಗಳು ಅನಾತ್ಮವಾಗಿವೆ. ಅವು ಭೂತಕಾಲದ್ದೇ ಆಗಿರಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ, ಅವೆಲ್ಲಾ ಅನಾತ್ಮವಾಗಿವೆ. ಅದೇರೀತಿಯಲ್ಲಿ ಶಬ್ದಗಳು... ವಾಸನೆಗಳು... ರಸಗಳು... ಸ್ಪರ್ಶಗಳು... ಧಮ್ಮಗಳು ಅನಾತ್ಮವಾಗಿವೆ. ಅವು ಭೂತಕಾಲದ್ದೇ ಆಗಿರಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ, ಅವೆಲ್ಲಾ ಅನಾತ್ಮವಾಗಿವೆ. ಈ ರೀತಿಯಲ್ಲಿ ದಶರ್ಿಸಿದಂತಹ ಆರ್ಯಶ್ರಾವಕನು ಧಮ್ಮಗಳಿಂದ (ಮಾನಸಿಕ ವಿಷಯಗಳಿಂದ) ವಿಮುಖನಾಗುತ್ತಾನೆ, ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ... ವಿಮುಕ್ತಿಜ್ಞಾನ ಪಡೆಯುತ್ತಾನೆ... ಜನ್ಮವು ನಾಶವಾಯಿತು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.37 ಅಜ್ಝತ್ತಾತೀತಯದ ನಿಚ್ಚ ಸುತ್ತಂ

204. ಭಿಕ್ಷುಗಳೇ, ಚಕ್ಷು ಅನಿತ್ಯಕರವಾಗಿದೆ. ಯಾವುದು ಅನಿತ್ಯವೋ ಅದು ದುಃಖಕಾರಿಯಾಗಿದೆ. ಯಾವುದು ದುಃಖಕಾರಿಯೋ ಅವು ಅನಾತ್ಮವಾಗಿವೆ. ಯಾವುದು ಅನತ್ಮವೋ ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಆರ್ಯಶ್ರಾವಕನು ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಅದೇರೀತಿಯಾಗಿ ಕಿವಿಯು... ಮೂಗು... ನಾಲಿಗೆಯು... ಕಾಯವು... ಮನಸ್ಸು... ಅನಿತ್ಯಕರವಾಗಿದೆ... ದುಃಖಕರವಾಗಿದೆ... ಅನಾತ್ಮವಾಗಿದೆ... ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಆರ್ಯಶ್ರಾವಕನು ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹೀಗೆ ದಶರ್ಿಸಿದ ಆರ್ಯಶ್ರಾವಕನು ಈ ಎಲ್ಲದರಿಂದ ವಿಮುಖನಾಗುತ್ತಾನೆ, ವಿರಾಗ ಹೊಂದುತ್ತಾನೆ, ವಿಮುಕ್ತಿಜ್ಞಾನ ಪಡೆಯುತ್ತಾನೆ... ಜನ್ಮವು ನಾಶವಾಯಿತು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.38 ಅಜ್ಝತ್ತಾನಾಗತಯದ ನಿಚ್ಚ ಸುತ್ತಂ

205. ಭಿಕ್ಷುಗಳೇ, ಭವಿಷ್ಯದಲ್ಲಿ ಬರುವಂತಹ ಚಕ್ಷುವು ಸಹಾ ಅನಿತ್ಯವಾಗಿದೆ. ಯಾವುದು ಅನಿತ್ಯವೋ ಅವೆಲ್ಲಾ ದುಃಖಕಾರಿಯಾಗಿದೆ. ಯಾವುದು ದುಃಖಕಾರಿಯೋ ಅವೆಲ್ಲಾ ಅನಾತ್ಮವಾಗಿವೆ. ಹೀಗಾಗಿ ಅವನ್ನೆಲ್ಲಾ ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಆರ್ಯಶ್ರಾವಕನು ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಅದೇರೀತಿಯಾಗಿ ಕಿವಿಯು... ಮೂಗು... ನಾಲಿಗೆಯು... ಕಾಯವು... ಮನಸ್ಸು... ಅನಿತ್ಯಕರವಾಗಿದೆ... ದುಃಖಕರವಾಗಿದೆ... ಅನಾತ್ಮವಾಗಿದೆ... ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಆರ್ಯಶ್ರಾವಕನು ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹೀಗೆ ದಶರ್ಿಸಿದ ಆರ್ಯಶ್ರಾವಕನು ಈ ಎಲ್ಲದರಿಂದ ವಿಮುಖನಾಗುತ್ತಾನೆ, ವಿರಾಗ ಹೊಂದುತ್ತಾನೆ, ವಿಮುಕ್ತಿಜ್ಞಾನ ಪಡೆಯುತ್ತಾನೆ... ಜನ್ಮವು ನಾಶವಾಯಿತು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.



35.17.39 ಅಜ್ಝತ್ತಪಚ್ಚುಪನ್ನಯದ ನಿಚ್ಚ ಸುತ್ತಂ

206. ಭಿಕ್ಷುಗಳೇ, ವರ್ತಮಾನದ ಚಕ್ಷುವು ಸಹಾ ಅನಿತ್ಯವಾಗಿದೆ. ಯಾವುದು ಅನಿತ್ಯವೋ ಅವೆಲ್ಲಾ ದುಃಖಕಾರಿಯಾಗಿದೆ. ಯಾವುದು ದುಃಖಕಾರಿಯೋ ಅವೆಲ್ಲಾ ಅನಾತ್ಮವಾಗಿವೆ. ಹೀಗಾಗಿ ಅವನ್ನೆಲ್ಲಾ ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಆರ್ಯಶ್ರಾವಕನು ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಅದೇರೀತಿಯಾಗಿ ಕಿವಿಯು... ಮೂಗು... ನಾಲಿಗೆಯು... ಕಾಯವು... ಮನಸ್ಸು... ಅನಿತ್ಯಕರವಾಗಿದೆ... ದುಃಖಕರವಾಗಿದೆ... ಅನಾತ್ಮವಾಗಿದೆ... ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಆರ್ಯಶ್ರಾವಕನು ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹೀಗೆ ದಶರ್ಿಸಿದ ಆರ್ಯಶ್ರಾವಕನು ಈ ಎಲ್ಲದರಿಂದ ವಿಮುಖನಾಗುತ್ತಾನೆ, ವಿರಾಗ ಹೊಂದುತ್ತಾನೆ, ವಿಮುಕ್ತಿಜ್ಞಾನ ಪಡೆಯುತ್ತಾನೆ... ಜನ್ಮವು ನಾಶವಾಯಿತು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.



35.17.40-42 ಅಜ್ಝತ್ತಾತೀತಾದಿಯಂ ದುಃಖ ಸುತ್ತಂ

207-209. ಭಿಕ್ಷುಗಳೇ, ಚಕ್ಷುವು ದುಃಖಕರವಾಗಿದೆ. ಅದು ಅತೀತದ್ದೇ ಆಗಿರಲಿ, ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ. ಯಾವುದು ದುಃಖಕರವೋ ಅವೆಲ್ಲಾ ಅನಾತ್ಮವಾಗಿವೆ, ಯಾವುದು ಅನಾತ್ಮವೋ ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಅತ್ಮವಲ್ಲ ಎಂದು ಆರ್ಯಶ್ರಾವಕನು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಅದೇರೀತಿಯಲ್ಲಿ ಕಿವಿಯು... ನಾಸಿಕವು... ನಾಲಿಗೆಯು... ಕಾಯವು... ಮನಸ್ಸು ದುಃಖಕರವಾಗಿದೆ. ಅದು ಅತೀತದ್ದೇ ಆಗಿರಲಿ ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ. ಯಾವುದು ದುಃಖಕಾರಿಯೋ ಅವು ಅನಾತ್ಮವಾಗಿವೆ. ಯಾವುದು ಅನಾತ್ಮವೋ ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹೀಗೆ ಆರ್ಯಶ್ರಾವಕನು ದಶರ್ಿಸುತ್ತಾ ಎಲ್ಲದರಿಂದ (ಮನಸ್ಸಿನಿಂದ) ವಿಮುಖನಾಗುತ್ತಾನೆ... ವಿರಾಗಿಯಾಗುತ್ತಾನೆ... ವಿಮುಕ್ತನಾಗುತ್ತಾನೆ... ಜ್ಞಾನ ಪಡೆಯುತ್ತಾನೆ. ಜನ್ಮವು ಕ್ಷೀಣಿಸಿತು... ಈ ಬಗೆಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.



35.17.43-45 ಅಜ್ಝತ್ತಾತೀತಾದಿಯದನತ್ತ ಸುತ್ತಂ

210-212. ಭಿಕ್ಷುಗಳೇ, ಚಕ್ಷು ಅನಾತ್ಮವಾಗಿವೆ. ಅದು ಅತೀತದ್ದೇ ಆಗಿರಲಿ, ಭವಿಷ್ಯದ್ದೇ ಆಗಿರಲಿ, ವರ್ತಮಾನದ್ದೇ ಆಗಿರಲಿ. ಯಾವುದು ಅನಾತ್ಮವೋ ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹೀಗೆ ದಶರ್ಿಸದ ಆರ್ಯಶ್ರಾವಕನು ಇವುಗಳಿಂದ ವಿಮುಖನಾಗುತ್ತಾನೆ... ವಿರಾಗ ಹೊಂದುತ್ತಾನೆ... ವಿಮುಕ್ತನಾಗುತ್ತಾನೆ... ವಿಮುಕ್ತಿಜ್ಞಾನ ಪಡೆಯುತ್ತಾನೆ. ಜನ್ಮವು ನಾಶವಾಯಿತು... ಈ ಬಗೆಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.



35.17.46-48 ಬಾಹಿರಾತೀತಾದಿಯದ ನಿಚ್ಚ ಸುತ್ತಂ

213-215. ಭಿಕ್ಷುಗಳೇ, ರೂಪಗಳು ಅನಿತ್ಯಕರವಾಗಿವೆ. ಅವು ಅತೀತದ್ದೇ ಆಗಿರಬಹುದು, ಭವಿಷ್ಯದ್ದೇ ಆಗಿರಬಹುದು ಅಥವಾ ವರ್ತಮನದ್ದೇ ಆಗಿರಬಹುದು. ಯಾವುದು ಅನಿತ್ಯವೋ ಅವೆಲ್ಲಾ ದುಃಖಕರವಾಗಿವೆ, ಅನಾತ್ಮವಾಗಿವೆ. ಯಾವುದು ಅನಾತ್ಮವೋ ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹಾಗೆಯೇ ಶಬ್ದಗಳು... ವಾಸನೆಗಳು... ರಸಗಳು... ಸ್ಪರ್ಶಗಳು... ಧಮ್ಮಗಳು (ಮಾನಸಿಕ ವಿಷಯಗಳು) ಅನಿತ್ಯಕರವಾಗಿವೆ. ಅವು ಅತೀತದ್ದೇ ಆಗಿರಬಹುದು, ಭವಿಷ್ಯದ್ದೇ ಆಗಿರಬಹುದು ಅಥವಾ ವರ್ತಮಾನದ್ದೇ ಆಗಿರಬಹುದು. ಯಾವುದು ಅನಿತ್ಯವೋ ಅವೆಲ್ಲಾ ದುಃಖಕರವಾಗಿವೆ, ಅನಾತ್ಮವಾಗಿವೆ. ಯಾವುದು ಅನಾತ್ಮವೋ ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಧಮ್ಮಗಳಿಂದ ವಿಮುಖನಾಗುತ್ತಾನೆ... ವಿರಾಗ ಹೊಂದುತ್ತಾನೆ... ವಿಮುಕ್ತನಾಗುತ್ತಾನೆ... ವಿಮುಕ್ತಿಜ್ಞಾನ ಗಳಿಸುತ್ತಾನೆ. ಜನ್ಮವು ಕ್ಷೀಣವಾಯಿತು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.



35.17.49-51 ಬಾಹಿರಾತೀತಾದಿಯ ದುಃಖ ಸುತ್ತಂ

216-218. ಭಿಕ್ಷುಗಳೇ, ರೂಪಗಳು ದುಃಖಕರವಾಗಿವೆ. ಅವು ಅತೀತದ್ದೇ ಆಗಿರಬಹುದು, ಭವಿಷ್ಯದ್ದೇ ಆಗಿರಬಹುದು ಅಥವಾ ವರ್ತಮಾನದ್ದೇ ಆಗಿರಬಹುದು. ಯಾವುವು ದುಃಖಕರವೋ ಅವು ಅನಾತ್ಮವಾಗಿವೆ. ಯಾವುದು ಅನಾತ್ಮವೋ ಅವನ್ನು ಇದು ನಾನಲ್ಲ, ಇದು ನನ್ನದಲ್ಲ, ಇದು ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ದಶರ್ಿಸುತ್ತಾನೆ. ಅದೇರೀತಿಯಲ್ಲಿ ಶಬ್ದಗಳು... ಗಂಧಗಳು... ರುಚಿಗಳು... ಸ್ಪರ್ಶಗಳು... ಧಮ್ಮಗಳು ದುಃಖಕರವಾಗಿವೆ. ಅವು ಅತೀತದ್ದೇ ಆಗಿರಬಹುದು, ಭವಿಷ್ಯದ್ದೇ ಆಗಿರಬಹುದು ಅಥವಾ ವರ್ತಮಾನದ್ದೇ ಆಗಿರಬಹುದು. ಯಾವೆಲ್ಲವೂ ದುಃಖಕಾರಿಯೋ ಅವೆಲ್ಲಾ ಅನಾತ್ಮವಾಗಿವೆ. ಯಾವುವು ಅನಾತ್ಮವೋ ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ದಶರ್ಿಸುತ್ತಾನೆ.... ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.




35.17.52-54 ಬಾಹಿರಾತೀತಾದಿಯದನತ್ತ ಸುತ್ತಂ

219-221. ಭಿಕ್ಷುಗಳೇ, ರೂಪಗಳು ಅನಾತ್ಮವಾಗಿದೆ. ಅವು ಅತೀತದ್ದಾಗಿರಬಹುದು, ಭವಿಷ್ಯದ್ದಾಗಿರಬಹುದು ಅಥವಾ ವರ್ತಮಾನದ್ದೇ ಆಗಿರಬಹುದು. ಯಾವುದೆಲ್ಲವೂ ಅನಾತ್ಮವೋ ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹಾಗೆಯೇ ಶಬ್ದಗಳು... ವಾಸನೆಗಳು... ರುಚಿಗಳು... ಸ್ಪರ್ಶಗಳು... ಧಮ್ಮಗಳು ಅನಾತ್ಮವಾಗಿವೆ. ಅವು ಅತೀತದ್ದಾಗಿರಬಹುದು, ಭವಿಷ್ಯದ್ದಾಗಿರಬಹುದು, ವರ್ತಮಾನದ್ದಾಗಿರಬಹುದು. ಅವನ್ನು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಯಥಾಭೂತವಾಗಿ ಸಮ್ಯಕ್ ಜ್ಞಾನದಿಂದ ದಶರ್ಿಸುತ್ತಾನೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಇವೆಲ್ಲದಿಂದ ವಿಮುಖನಾಗುತ್ತಾನೆ... ... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.



35.17.55 ಅಜ್ಝತ್ತಾಯತನ ಅನಿಚ್ಚ ಸುತ್ತಂ

222. ಭಿಕ್ಷುಗಳೇ, ಚಕ್ಷು ಅನಿತ್ಯಕರವಾಗಿದೆ.... ಜಿಹ್ವೆಯು ಅನಿತ್ಯಕರವಾಗಿದೆ... ಮನಸ್ಸು ಅನಿತ್ಯಕರವಾಗಿದೆ... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.56 ಅಜ್ಝತ್ತಾಯತನ ದುಃಖ ಸುತ್ತಂ

223. ಭಿಕ್ಷುಗಳೇ, ಚಕ್ಷು ದುಃಖಕರವಾಗಿದೆ... ಜಿಹ್ವೆಯು ದುಃಖಕರವಾಗಿದೆ.... ಮನಸ್ಸು ದುಃಖಕರವಾಗಿದೆ... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.57 ಅಜ್ಝತ್ತಾಯತನ ಅನತ್ತ ಸುತ್ತಂ

224. ಭಿಕ್ಷುಗಳೇ, ಚಕ್ಷು ಅನಾತ್ಮವಾಗಿದೆ... ಜಿಹ್ವೆಯು ಅನಾತ್ಮವಾಗಿದೆ... ಮನಸ್ಸು ಅನಾತ್ಮವಾಗಿದೆ... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.



35.17.58 ಬಾಹಿರಾಯತನ ಅನಿಚ್ಚ ಸುತ್ತಂ

225. ಭಿಕ್ಷುಗಳೇ, ರೂಪಗಳು ಅನಿತ್ಯವಾಗಿವೆ... ಶಬ್ದಗಳು... ಗಂಧಗಳು... ರಸಗಳು... ಸ್ಪರ್ಶಗಳು... ಧಮ್ಮಗಳು ಅನಿತ್ಯಕರವಾಗಿವೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು... ... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.59 ಬಾಹಿರಾಯತನ ದುಃಖ ಸುತ್ತಂ

226. ಭಿಕ್ಷುಗಳೇ, ರೂಪಗಳು ದುಃಖಕರವಾಗಿವೆ. ಶಬ್ದಗಳು... ಗಂಧಗಳು... ರಸಗಳು... ಸ್ಪರ್ಶಗಳು... ಧಮ್ಮಗಳು ದುಃಖಕರವಾಗಿವೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.17.60 ಬಾಹಿರಾಯತನ ಅನತ್ತ ಸುತ್ತಂ

227. ಭಿಕ್ಷುಗಳೇ, ರೂಪಗಳು ಅನಾತ್ಮವಾಗಿವೆ. ಶಬ್ದಗಳು... ಗಂಧಗಳು... ರಸಗಳು... ಸ್ಪರ್ಶಗಳು... ಧಮ್ಮಗಳು ಅನಾತ್ಮವಾಗಿವೆ. ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು... ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


ಇಲ್ಲಿಗೆ ಸಟ್ಠಿಪೇಯ್ಯಾಲವರ್ಗವು ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...