Thursday 31 May 2018

Samyutta nukaya 35.14 ದೇವದಹ ವಗ್ಗೋ

ದೇವದಹ ವಗ್ಗೋ


35.14.1 ದೇವದಹ ಸುತ್ತಂ

134. ಒಮ್ಮೆ ಭಗವಾನರು ಶಾಕ್ಯರ ದೇವದಹನಾಮದ ನಿಗಮದಲ್ಲಿ ವಾಸಿಸುತ್ತಿದ್ದರು. ಆಗ ಭಗವಾನರು ಭಿಕ್ಷುಗಳೊಂದಿಗೆ ಹೀಗೆ ಸಂಭೋಧಿಸಿದರು: ಭಿಕ್ಷುಗಳೇ, ನಾನು ಎಲ್ಲಾ ಭಿಕ್ಷುಗಳಿಗೂ ಆರು ಇಂದ್ರೀಯಗಳ ಆಧಾರದ ಸಂಸ್ಪರ್ಶಗಳಲ್ಲಿ ಅಪ್ರಮತ್ತರಾಗಿರಬೇಕು ಎಂದು ಹೇಳಲಾರೆ. ಹಾಗೆಯೇ ನಾನು ಎಲ್ಲಾ ಭಿಕ್ಖುಗಳಿಗೂ ಆರು ಇಂದ್ರೀಯಗಳ ಆಧಾರದ ಸಂಸ್ಪರ್ಶಗಳಲ್ಲಿ ಅಪ್ರಮತ್ತರಾಗಿರಬಾರದು ಎಂದು ಹೇಳಲಾರೆ. ಭಿಕ್ಷುಗಳೇ, ಯಾವ ಭಿಕ್ಷುಗಳು ಅರಹಂತರಾಗಿರುವರೋ, ಯಾರ ಆಸವಗಳು ನಾಶವಾಗಿವೆಯೋ, ಯಾರು ಪವಿತ್ರವಾದ ಜೀವನವನ್ನು ಜೀವಿಸಿದ್ದಾರೆಯೋ, ಮಾಡಬೇಕಾದುದನ್ನು ಮಾಡಿರುವರೋ, ಭಾರವನ್ನೆಲ್ಲಾ ಇಳಿಸಿದ್ದಾರೋ, ಗುರಿಯನ್ನು ತಲುಪಿದ್ದಾರೋ, ಭವದ ಸಂಕೋಲೆಗಳನ್ನು ಕತ್ತರಿಸಿಹಾಕಿದ್ದಾರೋ, ಅಂತಿಮ ಜ್ಞಾನದಿಂದ ಪೂರ್ಣವಾಗಿ ವಿಮುಕ್ತರೋ, ಅಂತಹವರಿಗೆ ಆರು ಇಂದ್ರೀಯಗಳ ಆಧಾರದ ಸಂಸ್ಪರ್ಶಗಳಲ್ಲಿ ಅಪ್ರಮತ್ತರಾಗಿರಬೇಕು ಎಂದು ಹೇಳಲಾರೆ. ಏಕೆ? ಏಕೆಂದರೆ, ಅವರು ತಮ್ಮ ಕಾರ್ಯವನ್ನು ಅಪ್ರಮತ್ತರಾಗಿಯೇ ಪೂರ್ಣಗೊಳಿಸಿದ್ದಾರೆ. ಅವರಿಂದ ಪ್ರಮತ್ತರಾಗಲು ಸಾಧ್ಯವಿಲ್ಲ. ಆದರೆ ಯಾವ ಭಿಕ್ಷುಗಳು ಇನ್ನೂ ಶಿಕ್ಷಣ ಕಲಿಯುತ್ತಿರುವರೋ (ಸೇಖ) ಯಾರು ಇನ್ನೂ ತಮ್ಮ ಮನಸ್ಸಿನ ಆದರ್ಶವನ್ನು ಪ್ರಾಪ್ತಿಮಾಡಿಲ್ಲವೋ, ಯಾರು ಅನುತ್ತರ ಕ್ಷೇಮವನ್ನು ಬಯಸುತ್ತ, ಬಂಧನಮುಕ್ತರಾಗಲು ಬಯಸುತ್ತಿರುವರೋ ಅವರೆಲ್ಲಾ ಇನ್ನೂ ಆರು ಆಯತನ (ಇಂದ್ರೀಯ)ಗಳ ಸ್ಪರ್ಶಗಳ ಬಗ್ಗೆ ಅಪ್ರಮತ್ತರಾಗಿರಬೇಕಾಗಿದೆ. ಏಕೆ ಹೀಗೆ? ಭಿಕ್ಷುಗಳೇ, ಕಣ್ಣಿನಿಂದ ಗ್ರಹಸಿಬಹುದಾದಂತಹ ರೂಪಗಳಿವೆ, ಅವು ಒಪ್ಪುವಂತಹದ್ದಾಗಿರುತ್ತದೆ, ಹಾಗೆಯೇ ಒಪ್ಪದಿರುವಂತಹುದು ಆಗಿರುತ್ತದೆ. ಇಂತಹ ಅನುಭವಗಳು ಪುನರಾವತರ್ಿಸುತ್ತಿದ್ದರೂ ಅವರು ಸತತ ಪ್ರಯತ್ನಶಾಲಿಗಳಾಗಿರುವುದಿಲ್ಲ. ಮನಸ್ಸಿಗೆ ಯಾವಾಗ ಈ ಗೀಳಿರುವುದಿಲ್ಲವೋ ಆಗ ಅದಮ್ಯ ಪ್ರಯತ್ನಶೀಲತೆಯು ಜಾಗೃತವಾಗುವುದು. ಗೊಂದಲರಹಿತ ಸ್ಪಷ್ಟವಾದ ಸಂಯಕ್ ಸ್ಮೃತಿಯು ಸ್ಥಾಪಿತವಾಗುವುದು. ಆಗ ಶರೀರವು ಪ್ರಶಾಂತವಾಗುವುದು, ಅಬಾಧಿತವಾಗುವುದು ಹಾಗು ಚಿತ್ತವು ಏಕಾಗ್ರತೆಯಾಗುವುದು, ಸಮಾಧಿಸ್ಥವಾಗುವುದು. ಹೀಗೆ ಅಪ್ರಮತ್ತತೆಯ ಫಲವನ್ನು ಗಮನಿಸಿ ಭಿಕ್ಷುಗಳೇ, ನಾನು ಹೇಳುತ್ತಿದ್ದೇನೆ, ಈ ಭಿಕ್ಷುಗಳು ಆರು ಇಂದ್ರೀಯಗಳ ಬಗ್ಗೆ ಇನ್ನೂ ಅಪ್ರಮತ್ತತೆಯನ್ನು ಸಾಧಿಸಬೇಕಿದೆ. ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಹುದಾದ ಶಬ್ದಗಳಿವೆ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಮಾನಸಿಕ ವಿಷಯಗಳಿವೆ (ಧಮ್ಮ) ಅವು ಸ್ವೀಕಾರಾರ್ಹವಾಗಿರುತ್ತವೆ ಅಥವಾ ಅಸ್ವೀಕಾರಾರ್ಹವಾಗಿರುತ್ತವೆ. ಇವು ಪುನರಾವರ್ತನೆ ಆಗುತ್ತಿದ್ದರೂ ಇದನ್ನು ದಾಟಲು ಈ ಹಿಂದೆ ಶ್ರಮಿಸುತ್ತಿಲ್ಲ. ಆದರೆ ಯಾವಾಗ ಮನಸ್ಸಿಗೆ ಇವು ಆಕ್ರಮಿತವಾಗುವುದಿಲ್ಲವೋ, ಆಗ ಸತತ ಪರಿಶ್ರಮಶೀಲತೆ ಜಾಗೃತವಾಗುವುದು, ಕ್ರಿಯಾಶೀಲವಾಗುವುದು, ಅವಿಚಲ ಜಾಗ್ರತೆ ಸ್ಥಾಪಿತವಾಗುವುದು. ಆಗ ಶರೀರವು ಪ್ರಶಾಂತವಾಗುವುದು, ಚಿತ್ತವು ಏಕಾಗ್ರತೆ ಹೊಂದಿ ಸಮಸ್ಥಿತವಾಗುವುದು. ಅಪ್ರಮತ್ತತೆಯ ಈ ಫಲವನ್ನು ಗಮನಿಸಿ, ನಾನು ಹೇಳುತ್ತಿದ್ದೇನೆ ಭಿಕ್ಷುಗಳೇ, ಏನೆಂದರೆ ಈ ಭಿಕ್ಷುವು ಇನ್ನೂ ಅಪ್ರಮತ್ತತೆಯನ್ನು ಸಾಧಿಸಬೇಕಿದೆ. ಆರು ಇಂದ್ರೀಯಗಳ ಸ್ಪರ್ಶಗಳಲ್ಲಿ ಎಚ್ಚರಿಕೆಯನ್ನು ಇಡಬೇಕಿದೆ.


35.14.2 ಖಣಸುತ್ತಂ (ಸಂಗಯ್ಹ ಸುತ್ತ)

(ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳುವಿಕೆಯ ಸುತ್ತ)
135. ಭಿಕ್ಷುಗಳೇ, ಇದು ನಿಜಕ್ಕೂ ನಿಮಗೆ ಲಾಭದಾಯಕವಾಗಿದೆ. ಏಕೆಂದರೆ, ನೀವು ಪವಿತ್ರಜೀವನ ನಡೆಸುವಂತಹ ಅಪೂರ್ವ ಅವಕಾಶವನ್ನು ಪಡೆದಿರುವಿರಿ. ಭಿಕ್ಷುಗಳೇ, ನಾನು ಛಪಸ್ಸಾಯತನಿಕಾ (ಆರು ಸ್ಪರ್ಶಗಳ ಆಧಾರ) ಎಂಬ ನಿರಯವನ್ನು ಕಂಡಿರುವೆನು. ಅಲ್ಲಿ ಕಣ್ಣಿನಿಂದ ಕಾಣುವ ಯಾವುದೇ ರೂಪಗಳಾಗಲಿ ಅವೆಲ್ಲವೂ ಆಸೆಪಡುವಂತಹದ್ದಾಗಿಲ್ಲ, ಎಂದಿಗೂ ಬಯಸುವಂಥಹದ್ದಲ್ಲ. ಅಪ್ರಿಯವಾದವು ಎಂದಿಗೂ ಪ್ರಿಯವಾದುದಲ್ಲ. ತಿರಸ್ಕೃತವಾಗಿರುವಂತಹುದು ಎಂದಿಗೂ ಒಪ್ಪುವಂತಹುದಲ್ಲ. ಯಾವುದೆಲ್ಲವೂ ಒಬ್ಬನು ಆಲಿಸುತ್ತಾನೋ... ಯಾವುದೆಲ್ಲವನ್ನು ಒಬ್ಬನು ಆಘ್ರಾಣಿಸುತ್ತಾನೋ... ಯಾವುದೆಲ್ಲವನ್ನು ಒಬ್ಬನು ರುಚಿಸುತ್ತಾನೋ.... ಯಾವುದೆಲ್ಲವನ್ನು ಒಬ್ಬನು ಸ್ಪರ್ಶದ ಅನುಭವ ಪಡೆಯುತ್ತಾನೋ... ಯಾವುದೆಲ್ಲ ಮಾನಸಿಕ ವಿಷಯಗಳು ಮನಸ್ಸಿಗೆ ತಾಕುವುದೋ, ಅವೆಲ್ಲ ಆಸೆಪಡುವಂತಹುದಲ್ಲ. ಎಂದಿಗೂ ಬಯಸುವಂತಹುದಲ್ಲ. ಅಪ್ರಿಯವಾದವು ಎಂದಿಗೂ ಪ್ರಿಯವಾದುದಲ್ಲ. ತಿರಸ್ಕೃತವಾಗಿರುವಂತಹುದು ಎಂದಿಗೂ ಒಪ್ಪುವಂತಹುದಲ್ಲ. ಭಿಕ್ಷುಗಳೇ, ಇದು ನಿಜಕ್ಕೂ ನಿಮಗೆ ಲಾಭದಾಯಕವಾಗಿದೆ. ಏಕೆಂದರೆ ನೀವು ಪವಿತ್ರಜೀವನ ನಡೆಸುವಂತಹ ಅಪೂರ್ವ ಅವಕಾಶವನ್ನು ಪಡೆದಿರುವಿರಿ. ಭಿಕ್ಷುಗಳೇ, ನಾನು ಛಪಸ್ಸಾಯಾತನಿಕಾ (ಆರು ಸ್ಪರ್ಶಗಳ ಆಧಾರ) ಎಂಬ ಸ್ವರ್ಗವನ್ನು ಕಂಡಿರುವೆನು. ಅಲ್ಲಿ ನೀವು ಯಾವುದೆಲ್ಲವನ್ನು ಗಮನಿಸಿದರೂ ಅವು ಆಸೆ ಹುಟ್ಟಿಸುವಂತಹದಿರುತ್ತದೆ ಎಂದಿಗೂ ಅನಾಸಕ್ತಿ ಉಂಟುಮಾಡುವುದಿಲ್ಲ. ಪ್ರಿಯವಾಗಿರುತ್ತದೆ ಎಂದಿಗೂ ಅಪ್ರಿಯವಾಗಿರುವುದಿಲ್ಲ. ಒಪ್ಪುವಂತಿರುತ್ತದೆ ಎಂದಿಗೂ ತಿರಸ್ಕರತವಾಗಿರುವುದಿಲ್ಲ. ಅಲ್ಲಿ ಯಾವುದೆಲ್ಲಾ ಶಬ್ದಗಳು ಇರುತ್ತವೆಯೋ ಅವೆಲ್ಲಾ ಆಸೆಹುಟ್ಟಿಸುವಂತದ್ದಾಗಿರುತ್ತದೆ... ಮೂಗಿನಿಂದ ಯಾವುದೆಲ್ಲಾ ವಾಸನೆಗಳನ್ನು... ನಾಲಿಗೆಯಿಂದ ಯಾವುದೆಲ್ಲಾ ರುಚಿಸ್ವಾದವನ್ನು ಆಸ್ವಾದಿಸುವೆವೋ... ಮನಸ್ಸಿನಿಂದ ಯಾವುದೆಲ್ಲಾ ಮಾನಸಿಕ ವಿಷಯಗಳು ಅರಿಯುತ್ತೇವೆಯೋ ಅವೆಲ್ಲಾ ಆಸೆಯನ್ನು ಹುಟ್ಟಿಸುವಂತಿರುತ್ತವೆ, ಎಂದಿಗೂ ಅನಾಸಕ್ತಿಯನ್ನುಂಟುಮಾಡುವುದಿಲ್ಲ, ಪ್ರಿಯವಾಗಿರುತ್ತದೆ ಎಂದಿಗೂ ಅಪ್ರಿಯವಾಗಿರುವುದಿಲ್ಲ. ಒಪ್ಪುವಂತಿರುತ್ತದೆ ಎಂದಿಗೂ ತಿರಸ್ಕರತವಾಗಿರುವುದಿಲ್ಲ. ಆದ್ದರಿಂದಾಗಿ ಭಿಕ್ಷುಗಳೇ, ಇದು ನಿಜಕ್ಕೂ ನಿಮಗೆ ಲಾಭದಾಯಕವಾಗಿದೆ. ಏಕೆಂದರೆ ನೀವು ಪವಿತ್ರ ಜೀವನ ನಡೆಸುವಂತಹ ಅಪೂರ್ವ ಅವಕಾಶವನ್ನು ಪಡೆದಿರುವಿರಿ.


35.14.3 ಪಠಮ ರೂಪಾರಾಮ ಸುತ್ತಂ (ಪ್ರಥಮ ರೂಪಗಳಲ್ಲಿ ರಮಿಸುವಿಕೆಯ ಸುತ್ತ)

136. ಭಿಕ್ಷುಗಳೇ, ದೇವತೆಗಳು ಮತ್ತು ಮಾನವರು ರೂಪಗಳಲ್ಲಿ ರಮಿಸುತ್ತಾರೆ. ರೂಪಗಳಲ್ಲೇ ರತ (ಆನಂದ) ರಾಗಿರುತ್ತಾರೆ, ರೂಪಗಳಲ್ಲೇ ಅತಿ ಆನಂದ ತಾಳುತ್ತಾರೆ. ಆದರೆ ರೂಪಗಳ ಪರಿವರ್ತನೆ, ವಿರಾಗ, ನಿರೋಧಗಳನ್ನು ಗಮನಿಸದಿರುವ ದೇವೆತೆಗಳು ಮತ್ತು ಮಾನವು ದುಃಖದಲ್ಲಿರುತ್ತಾರೆ. ದೇವತೆಗಳು ಹಾಗು ಮಾನವರು ಶಬ್ದಗಳಲ್ಲಿ ರಮಿಸುವರು... ಗಂಧಗಳಲ್ಲಿ ರತರಾಗಿರುವರು... ರುಚಿಸ್ವಾದಗಳಲ್ಲಿ ಆನಂದ ತಾಳುತ್ತಾರೆ... ಕಾಯಸ್ಪರ್ಶಗಳಲ್ಲೇ ಆನಂದಿಸುತ್ತಾರೆ... ಧಮ್ಮಗಳಲ್ಲಿ (ಮಾನಸಿಕ ವಿಷಯಗಳಲ್ಲಿ) ಆನಂದಿಸುತ್ತಾರೆ, ಅವುಗಳಲ್ಲಿ ರಮಿಸುತ್ತಾರೆ, ಅವುಗಳಲ್ಲೇ ರತರಾಗಿರುತ್ತಾರೆ, ಅವುಗಳಲ್ಲೇ ಅತಿ ಆನಂದ ತಾಳುತ್ತಾರೆ. ಆದರೆ ಪರಿವರ್ತನೆ, ವಿರಾಗ, ನಿರೋಧಗಳನ್ನು ಗಮನಿಸಿಸದಿರುವ ದೇವತೆಗಳು ಮತ್ತು ಮಾನವರು ದುಃಖದಲ್ಲಿರುತ್ತಾರೆ. ಆದರೆ ಭಿಕ್ಷುಗಳೇ, ತಥಾಗತರು ಅರಹಂತರಾಗಿದ್ದಾರೆ, ಸಮ್ಮಾಸಂಬುದ್ಧರಾಗಿದ್ದಾರೆ. ಅವರು ಯಥಾಭೂತವಾಗಿ ಅವುಗಳ ಉದಯವನ್ನು ಹಾಗು ಅಳಿಯುವಿಕೆಯನ್ನು ಅರಿಯುತ್ತಾರೆ. ಇಂದ್ರೀಯಗಳ ಆಸ್ವಾದನೆ, ಅಪಾಯ, ಬಿಡುಗಡೆ ಬಲ್ಲವರಾಗಿದ್ದಾರೆ. ಹೀಗಾಗಿ ಅವರು ರೂಪಗಳಲ್ಲಿ ರಮಿಸುವುದಿಲ್ಲ, ರತರಾಗುವುದಿಲ್ಲ, ಆನಂದ ತಾಳುವುದಿಲ್ಲ. ಅವುಗಳ ಅನಿತ್ಯತೆ, ವಿರಾಗ ಹಾಗು ನಿರೋಧತೆಯಿಂದಾಗಿ ತಥಾಗತರು ಸುಖವಾಗಿ ಇರುತ್ತಾರೆ. ಅವರು ಈ ಎಲ್ಲದರ ಉದಯ ಹಾಗು ಅಳಿಯುವಿಕೆ, ಅವುಗಳ ಆಸ್ವಾದತೆ, ಅಪಾಯ, ಬಿಡುಗಡೆ ಬಲ್ಲವರಾಗಿದ್ದಾರೆ. ಹೀಗಾಗಿ ಅವರು ಶಬ್ದಗಳಲ್ಲಿ. ಗಂಧಗಳಲ್ಲಿ... ರಸಗಳಲ್ಲಿ... ಸ್ಪರ್ಶಗಳಲ್ಲಿ... ಮಾನಸಿಕ ವಿಷಯಗಳಲ್ಲಿ ರಮಿಸುವುದಿಲ್ಲ, ರತರಾಗುವುದಿಲ್ಲ, ಅನಂದ ತಾಳುವುದಿಲ್ಲ. ಬದಲಾಗಿ ಅವುಗಳ ಅನಿತ್ಯತೆ, ವಿರಾಗ ಮತ್ತು ನಿರೋಧತೆಯಿಂದಾಗಿ ತಥಾಗತರು ಸುಖವಾಗಿ ಇರುತ್ತಾರೆ. ಹೀಗೆ ನುಡಿದ ಭಗವಾನರು ನಂತರ ಸುಗತರು ಹೀಗೆ ಗಾಥೆಗಳನ್ನು ನುಡಿದರು.
ರೂಪಗಳು, ಶಬ್ದಗಳು, ರುಚಿಸ್ವಾದ, ಗಂಧ, ಸ್ಪರ್ಶ ಹಾಗು
ಮಾನಸಿಕ ವಿಷಯಗಳು ಆಸೆ ಹುಟ್ಟಿಸುವುವು
ಪ್ರಿಯವಾದವು, ಒಪ್ಪುವಂತಹವು, ಸ್ವಾಗತಿಸುವಂತಹವು.
ದೇವತೆಗಳ ಸಹಿತ ಈ ಲೋಕದಲ್ಲಿ ಇವೆಲ್ಲಾ
ಸುಖವೆಂದು ಸಮ್ಮತಿ ನೀಡಿದ್ದಾರೆ.
ಯಾವಾಗ ಇವು ಕರಗುತ್ತದೆಯೋ
ಅದು ದುಃಖವೆಂದು ಮಾನ್ಯತೆ ನೀಡುತ್ತಾರೆ.
ಈ ಯಾವುದೆಲ್ಲಾ ನನ್ನವು ಎಂಬುದರ ನಿರೋಧದಲ್ಲೆ
ಆರ್ಯರು ಸುಖವೆಂದು ಭಾವಿಸುವರು.
ಈ ದೃಷ್ಟಿಕೋನವುಳ್ಳವರು
ಇಡೀ ಲೋಕಗಳಿಗೆ ವಿರುದ್ಧವಾದ ಪಥದಲ್ಲಿ ಸಾಗುತಿಹರು.
ಯಾವುದನ್ನು ಪರರು ಸುಖವೆಂದು ಪರಿಗಣಿಸುವರೋ
ಅದನ್ನೇ ಆರ್ಯರು ದುಃಖವೆಂದು ನುಡಿಯುವರು
ಯಾವುದನ್ನು ಪರರು ದುಃಖವೆಂದು ಪರಿಗಣಿಸುವರೋ
ಅದನ್ನೇ ಆರ್ಯರು ಸುಖವೆಂದು ನುಡಿಯುವರು.
ಅರಿಯಲು ಕಡುಕಷ್ಟಕರವಾದ ಈ ಧಮ್ಮವನ್ನು ಹಿಡಿಯಿರಿ,
ಇಲ್ಲಿ ಮೂಢರು ದಿಗ್ಭ್ರಮೆಗೊಳ್ಳುತ್ತಾರೆ.
ತಡೆಗಳುಳ್ಳ ಚಿತ್ತದವರಿಗೆ ಇದು ಅಸ್ಪಷ್ಟವಾಗಿರುತ್ತದೆ
ದಶರ್ಿಸದವರಿಗೆ ಅಂಧಕಾರವಾಗಿದೆ.
ಉತ್ತಮರಿಗೆ ಇದು ತೆರೆದುಕೊಳ್ಳುವುದು
ದಶರ್ಿಸುವವರಿಗೆ ಇದು ಮಹಾನ್ ಬೆಳಕಾಗಿದೆ.
ಆದರೆ ಮಾರ್ಗ ಹಾಗು ಧಮ್ಮವನ್ನು ಅರಿಯದ
ಹಾಗು ಚುರುಕಿಲ್ಲದವರು ಇದರ ಸಾನಿದ್ಯದಲ್ಲಿದ್ದರೂ ಅರಿಯಲಾರರು.
ಯಾರಿಗೆ ಭವದಲ್ಲಿರಲು ರಾಗವಿದೆಯೋ
ಯಾರು ಭವಶ್ರೋತದ ಜೊತೆಗೆ ಹರಿಯುತ್ತಿರುವರೋ
ಯಾರು ಮಾರನ ಕ್ಷೇತ್ರದಲ್ಲಿ ಆಳವಾಗಿ ಸಿಲುಕಿರುವರೋ
ಅಂತಹವರಿಗೆ ಈ ಉದಾತ್ತ ಧಮ್ಮವು ಸುಲಭವಾಗಿ ಅರಿಯಲಾಗುವುದಿಲ್ಲ.
ಆರ್ಯರ ಹೊರತು ಇನ್ಯಾರಿಗೆ ಈ ಉತ್ಕೃಷ್ಟ ಸ್ಥಿತಿಯನ್ನು
ಅರಿಯಲು ಸಾಧ್ಯ?
ಯಾವಾಗ ಈ ಸ್ಥಿತಿಯನ್ನು ಸಮಂಜಸವಾಗಿ ಅರಿಯುವರೋ
ಆಗ ಆನಾಸ್ರಾವರು ಪರಿನಿಬ್ಬಾಣ ಪಡೆಯುವರು.


35.14.4 ದುತಿಯ ರೂಪಾರಾಮ ಸುತ್ತಂ (ಗ್ರಾಹ್ಯ ಸುತ್ತಂ)

137. ಭಿಕ್ಷುಗಳೇ, ದೇವತೆಗಳು ಮತ್ತು ಮಾನವರು ರೂಪಗಳಲ್ಲಿ ರಮಿಸುತ್ತಾರೆ. ರೂಪಗಳಲ್ಲೇ ರತ (ಆನಂದ) ರಾಗಿರುತ್ತಾರೆ, ರೂಪಗಳಲ್ಲೇ ಅತಿ ಆನಂದ ತಾಳುತ್ತಾರೆ. ಆದರೆ ರೂಪಗಳ ಪರಿವರ್ತನೆ, ವಿರಾಗ, ನಿರೋಧಗಳನ್ನು ಗಮನಿಸದಿರುವ ದೇವೆತೆಗಳು ಮತ್ತು ಮಾನವು ದುಃಖದಲ್ಲಿರುತ್ತಾರೆ. ದೇವತೆಗಳು ಹಾಗು ಮಾನವರು ಶಬ್ದಗಳಲ್ಲಿ ರಮಿಸುವರು... ಗಂಧಗಳಲ್ಲಿ ರತರಾಗಿರುವರು... ರುಚಿಸ್ವಾದಗಳಲ್ಲಿ ಆನಂದ ತಾಳುತ್ತಾರೆ... ಕಾಯಸ್ಪರ್ಶಗಳಲ್ಲೇ ಆನಂದಿಸುತ್ತಾರೆ... ಧಮ್ಮಗಳಲ್ಲಿ (ಮಾನಸಿಕ ವಿಷಯಗಳಲ್ಲಿ) ಆನಂದಿಸುತ್ತಾರೆ, ಅವುಗಳಲ್ಲಿ ರಮಿಸುತ್ತಾರೆ, ಅವುಗಳಲ್ಲೇ ರತರಾಗಿರುತ್ತಾರೆ, ಅವುಗಳಲ್ಲೇ ಅತಿ ಆನಂದ ತಾಳುತ್ತಾರೆ. ಆದರೆ ಪರಿವರ್ತನೆ, ವಿರಾಗ, ನಿರೋಧಗಳನ್ನು ಗಮನಿಸಿಸದಿರುವ ದೇವತೆಗಳು ಮತ್ತು ಮಾನವರು ದುಃಖದಲ್ಲಿರುತ್ತಾರೆ. ಆದರೆ ಭಿಕ್ಷುಗಳೇ, ತಥಾಗತರು ಅರಹಂತರಾಗಿದ್ದಾರೆ, ಸಮ್ಮಾಸಂಬುದ್ಧರಾಗಿದ್ದಾರೆ. ಅವರು ಯಥಾಭೂತವಾಗಿ ಅವುಗಳ ಉದಯವನ್ನು ಹಾಗು ಅಳಿಯುವಿಕೆಯನ್ನು ಅರಿಯುತ್ತಾರೆ. ಇಂದ್ರೀಯಗಳ ಆಸ್ವಾದನೆ, ಅಪಾಯ, ಬಿಡುಗಡೆ ಬಲ್ಲವರಾಗಿದ್ದಾರೆ. ಹೀಗಾಗಿ ಅವರು ರೂಪಗಳಲ್ಲಿ ರಮಿಸುವುದಿಲ್ಲ, ರತರಾಗುವುದಿಲ್ಲ, ಆನಂದ ತಾಳುವುದಿಲ್ಲ. ಅವುಗಳ ಅನಿತ್ಯತೆ, ವಿರಾಗ ಹಾಗು ನಿರೋಧತೆಯಿಂದಾಗಿ ತಥಾಗತರು ಸುಖವಾಗಿ ಇರುತ್ತಾರೆ. ಅವರು ಈ ಎಲ್ಲದರ ಉದಯ ಹಾಗು ಅಳಿಯುವಿಕೆ, ಅವುಗಳ ಆಸ್ವಾದತೆ, ಅಪಾಯ, ಬಿಡುಗಡೆ ಬಲ್ಲವರಾಗಿದ್ದಾರೆ. ಹೀಗಾಗಿ ಅವರು ಶಬ್ದಗಳಲ್ಲಿ. ಗಂಧಗಳಲ್ಲಿ... ರಸಗಳಲ್ಲಿ... ಸ್ಪರ್ಶಗಳಲ್ಲಿ... ಮಾನಸಿಕ ವಿಷಯಗಳಲ್ಲಿ ರಮಿಸುವುದಿಲ್ಲ, ರತರಾಗುವುದಿಲ್ಲ, ಅನಂದ ತಾಳುವುದಿಲ್ಲ. ಬದಲಾಗಿ ಅವುಗಳ ಅನಿತ್ಯತೆ, ವಿರಾಗ ಮತ್ತು ನಿರೋಧತೆಯಿಂದಾಗಿ ತಥಾಗತರು ಸುಖವಾಗಿ ಇರುತ್ತಾರೆ.


35.14.5 ಪಠಮ ನ ತುಮ್ಹಕ ಸುತ್ತಂ (ಪಲಾಸಿನಾ ಸುತ್ತಂ)

138. ಭಿಕ್ಷುಗಳೇ, ಯಾವುದೆಲ್ಲವೂ ನಿಮ್ಮದಲ್ಲವೊ, ಅವನ್ನೆಲ್ಲಾ ವಜರ್ಿಸಿಬಿಡಿ. ಯಾವಾಗ ನೀವು ದಶರ್ಿಸುವಿರೋ, ಆಗ ಅದು ನಿಮ್ಮ ಕ್ಷೇಮಕ್ಕೆ ಹಾಗು ಸುಖಕ್ಕೆ ಕೊಂಡೊಯ್ಯುತ್ತದೆ ಮತ್ತು ಭಿಕ್ಷುಗಳೇ, ಯಾವುದು ನಿಮ್ಮದಲ್ಲ? ಕಣ್ಣು ನಿಮ್ಮದಲ್ಲ, ಅದನ್ನು ತ್ಯಜಿಸಿಬಿಡಿ. ಯಾವಾಗ ನೀವು ತ್ಯಜಿಸುವಿರೋ ಅಗ ಅದು ನಿಮ್ಮ ಕ್ಷೇಮಕ್ಕೆ ಹಾಗು ಸುಖಕ್ಕೆ ಕೊಂಡೊಯ್ಯುತ್ತದೆ. ಕಿವಿಯು ನಿಮ್ಮದಲ್ಲ ಅದನ್ನು ತ್ಯಜಿಸಿಬಿಡಿ. ಯಾವಾಗ ನೀವು ತ್ಯಜಿಸುವಿರೋ ಅಗ ಅದು ನಿಮ್ಮ ಕ್ಷೇಮಕ್ಕೆ ಹಾಗು ಸುಖಕ್ಕೆ ಕೊಂಡೊಯ್ಯುತ್ತದೆ. ಮೂಗು ನಿಮ್ಮದಲ್ಲ... ನಾಲಿಗೆಯ ನಿಮ್ಮದಲ್ಲ... ದೇಹ ನಿಮ್ಮದಲ್ಲ... ಮನಸ್ಸು ನಿಮ್ಮದಲ್ಲ. ಅವನ್ನೆಲ್ಲಾ ತ್ಯಜಿಸಿಬಿಡಿ. ಯಾವಾಗ ನೀವು ತ್ಯಜಿಸುವಿರೋ ಆಗ ಅದು ನಿಮ್ಮ ಕ್ಷೇಮಕ್ಕೆ ಮತ್ತು ಸುಖಕ್ಕೆ ಕೊಂಡೊಯ್ಯುತ್ತದೆ.
ಭಿಕ್ಷುಗಳೇ, ಬಹುಶಃ ಜನರು ಇದೇ ಜೇತವನದಲ್ಲಿ ಹುಲ್ಲು, ಕಟ್ಟಿಗೆಗಳು, ಕೊಂಬೆಗಳು, ರೆಂಬೆಗಳು ಹಾಗು ಒಣ ಎಲೆಗಳ ಗೊಂಚಲುಗಳನ್ನು ಸುಡುತ್ತಾರೆ ಅಥವಾ ತಮಗಿಷ್ಟ ಬಂದಹಾಗೆ ಮಾಡುತ್ತಾರೆ. ಆಗ ನೀವು ಹೀಗೆ ಯೋಚಿಸುವಿರೇನು? ಜನರು ನಮ್ಮನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಅಥವಾ ನಮ್ಮನ್ನು ಸುಡುತ್ತಿದ್ದರೆ ಅಥವಾ ಅವರಿಷ್ಟ ಬಂದಹಾಗೆ ಮಾಡುತ್ತಿದ್ದಾರೆ - ಇಲ್ಲ ಭಂತೆ. - ಏಕೆ? - ಭಂತೆ, ಏಕೆಂದರೆ ಅವ್ಯಾವುದೂ ತಾನಲ್ಲ ಹಾಗು ತನ್ನದು ಅಲ್ಲ. - ಹೀಗೆಯೇ ಭಿಕ್ಷುಗಳೇ, ಕಣ್ಣು ನಿಮ್ಮದಲ್ಲ... ಕಿವಿಯು... ಮೂಗು... ನಾಲಿಗೆ... ಕಾಯವು... ಮನಸ್ಸು ಸಹಾ ನಿಮ್ಮದಲ್ಲ. ನಿಮ್ಮದಲ್ಲದ್ದನ್ನು ಯಾವಾಗ ನೀವು ತ್ಯಜಿಸುವಿರೋ ಆಗ ಅದು ನಿಮ್ಮ ಕ್ಷೇಮಕ್ಕೆ ಹಾಗು ಸುಖಕ್ಕೆ ಕೊಂಡೊಯ್ಯುತ್ತದೆ.

35.14.6 ದುತಿಯ ನ ತುಮ್ಹಕ ಸುತ್ತಂ

139. ಭಿಕ್ಷುಗಳೇ, ಯಾವುದು ನಿಮ್ಮದಲ್ಲವೋ ಅವನ್ನೆಲ್ಲಾ ಪರಿತ್ಯಜಿಸಿರಿ. ಅದರಿಂದಾಗಿ ಹಿತವು ಸುಖವು ಲಭಿಸುವುದು. ಯಾವುದು ಭಿಕ್ಷುಗಳೇ, ನಿಮ್ಮದಲ್ಲ? ಭಿಕ್ಷುಗಳೇ, ರೂಪವು ನಿಮ್ಮದಲ್ಲ, ಅದನ್ನು ಪರಿತ್ಯಜಿಸಿರಿ. ಅದರಿಂದಾಗಿ ಭವಿಷ್ಯದಲ್ಲಿ ಹಿತವು ಹಾಗು ಸುಖವು ಲಭಿಸುವುದು. ಭಿಕ್ಷುಗಳೇ, ಶಬ್ದವು ನಿಮ್ಮದಲ್ಲ... ವಾಸನೆಗಳು ನಿಮ್ಮದಲ್ಲ... ರಸ(ರುಚಿ)ಗಳು ನಿಮ್ಮದಲ್ಲ... ಸ್ಪರ್ಶಗಳು ನಿಮ್ಮದಲ್ಲ... ಮಾನಸಿಕ ವಿಷಯಗಳು ನಿಮ್ಮದಲ್ಲ. ಇದನ್ನು ಪರಿತ್ಯಜಿಸಿರಿ. ಅದರಿಂದಾಗಿ ಹಿತವೂ, ಸುಖವೂ ಲಭಿಸುವುದು. ಬಹುಶಃ ಜನರು ಇದೇ ಜೇತವನದಲ್ಲಿ ಹುಲ್ಲು, ಕಟ್ಟಿಗೆಗಳು, ಕೊಂಬೆಗಳು, ರೆಂಬೆಗಳು ಹಾಗು ಒಣ ಎಲೆಗಳ ಗೊಂಚಲುಗಳನ್ನು ಸುಡುತ್ತಾರೆ ಅಥವಾ ತಮಗಿಷ್ಟ ಬಂದಹಾಗೆ ಮಾಡುತ್ತಾರೆ. ಆಗ ನೀವು ಹೀಗೆ ಯೋಚಿಸುವಿರೇನು? ಜನರು ನಮ್ಮನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಅಥವಾ ನಮ್ಮನ್ನು ಸುಡುತ್ತಿದ್ದರೆ ಅಥವಾ ಅವರಿಷ್ಟ ಬಂದಹಾಗೆ ಮಾಡುತ್ತಿದ್ದಾರೆ - ಇಲ್ಲ ಭಂತೆ. - ಏಕೆ? - ಭಂತೆ, ಏಕೆಂದರೆ ಅವ್ಯಾವುದೂ ತಾನಲ್ಲ ಹಾಗು ತನ್ನದು ಅಲ್ಲ. - ಹೀಗೆಯೇ ಭಿಕ್ಷುಗಳೇ, ಕಣ್ಣು ನಿಮ್ಮದಲ್ಲ... ಕಿವಿಯು... ಮೂಗು... ನಾಲಿಗೆ... ಕಾಯವು... ಮನಸ್ಸು ಸಹಾ ನಿಮ್ಮದಲ್ಲ. ನಿಮ್ಮದಲ್ಲದ್ದನ್ನು ಯಾವಾಗ ನೀವು ತ್ಯಜಿಸುವಿರೋ ಆಗ ಹಿತವೂ ಸುಖವೂ ಲಭಿಸುವುದು.

35.14.7 ಅಜ್ಝತ್ತಾನಿಚ್ಚ ಹೇತು ಸುತ್ತಂ

140. ಭಿಕ್ಷುಗಳೇ, ಚಕ್ಷು ಅನಿತ್ಯವಾಗಿದೆ. ಚಕ್ಷು ಉತ್ಪನ್ನಕ್ಕೆ ಕಾರಣವ ಹಾಗು ಯಾವುದು ಬೆಂಬಲವೋ ಅದು ಸಹಾ ಅನಿತ್ಯಕರವಾಗಿದೆ. ಯಾವ ಚಕ್ಷು ಅನಿತ್ಯದಿಂದ ಉದಯಿಸಿದೆಯೋ ಅದು ಹೇಗೆ ನಿತ್ಯವಾಗಬಲ್ಲದು? ಕಿವಿಯು ಅನಿತ್ಯಕರವಾಗಿದೆ... ಮೂಗು... ನಾಲಿಗೆ... ದೇಹ... ಮನಸ್ಸು ಅನಿತ್ಯಕರವಾಗಿದೆ. ಮನಸ್ಸಿನ ಉತ್ಪನ್ನಕ್ಕೆ ಯಾವುದು ಕಾರಣವೂ ಹಾಗು ಬೆಂಬಲವೂ ಅದು ಸಹಾ ಅನಿತ್ಯಕರವಾಗಿದೆ. ಯಾವ ಮನಸ್ಸು ಅನಿತ್ಯದಿಂದಾಗಿ ಉದಯಿಸಿದೆಯೋ ಅದು ಹೇಗೆ ನಿತ್ಯವಾಗಬಲ್ಲದು? ಹೀಗೆ ಅರಿತ ಆರ್ಯಶ್ರಾವಕ ಭಿಕ್ಷುವು ಆರು ಇಂದ್ರೀಯಗಳಿಂದ ವಿಕಷರ್ಿತನಾಗುತ್ತಾನೆ. ವಿಕರ್ಷಣೆಯಿಂದಾಗಿ ವಿರಾಗವು ಉಂಟಾಗುತ್ತದೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತಿಜ್ಞಾನವು ಲಭಿಸುತ್ತದೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.8 ಅಜ್ಝತ್ತ ದುಃಖ ಹೇತು ಸುತ್ತಂ

141. ಭಿಕ್ಷುಗಳೇ, ಚಕ್ಷು ದುಃಖಕರವಾಗಿದೆ. ಚಕ್ಷು ಉದಯಕ್ಕೆ ಕಾರಣವು ಹಾಗು ಬೆಂಬಲವೂ ಸಹಾ ದುಃಖಕರವಾಗಿದೆ. ಯಾವ ಚಕ್ಷುವಿನ ಉದಯಕ್ಕೆ ಕಾರಣವು ದುಃಖವಾಗಿರುವಾಗ ಅದು ಹೇಗೆ ಸುಖಕಾರಿಯಾಗಬಲ್ಲದು? ಕಿವಿಯು ದುಃಖಕರವಾಗಿದೆ... ಮೂಗು ದುಃಖಕರವಾಗಿದೆ... ನಾಲಿಗೆಯು... ದೇಹವು... ಮನಸ್ಸು ದುಃಖಕರವಾಗಿದೆ. ಯಾವ ಮನಸ್ಸಿನ ಉದಯಕ್ಕೆ ಕಾರಣವು ದುಃಖಕರವಾಗಿರುವಾಗ ಅದನ್ನು ಹೇಗೆ ಸುಖಕರವಾಗಬಲ್ಲದು. ಹೀಗೆ ಅರಿತಂತಹ ಆರ್ಯ ಶ್ರಾವಕನು ಇವುಗಳಿಂದ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.9 ಅಜ್ಝತ್ತನತ್ತ ಹೇತು ಸುತ್ತಂ

142. ಭಿಕ್ಷುಗಳೇ, ಚಕ್ಷುವು ಅನಾತ್ಮವಾಗಿದೆ. ಯಾವುದು ಚಕ್ಷುವಿನ ಉದಯಕ್ಕೆ ಕಾರಣ (ಹೇತು) ಹಾಗು ಬೆಂಬಲವೋ ಅದು ಸಹಾ ಅನಾತ್ಮವಾಗಿದೆ. ಯಾವುದು ಅನಾತ್ಮದ ಕಾರಣದಿಂದಾಗಿ ಉದಯಿಸಿದೆಯೋ ಅದು ಹೇಗೆ ಆತ್ಮವಾಗಲು ಸಾಧ್ಯವಿದೆ? ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸಿನ ಉದಯಕ್ಕೆ ಯಾವುದು ಕಾರಣ ಹಾಗು ಬೆಂಬಲವೂ ಅನಾತ್ಮವಾಗಿದೆಯೊ ಅದು ಹೇಗೆ ಆತ್ಮವಾಗಲು ಸಾಧ್ಯ? ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಈ ಎಲ್ಲದರಿಂದಾಗಿ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.10 ಬಾಹಿರಾನಿಚ್ಚ ಹೇತು ಸುತ್ತಂ

143. ಭಿಕ್ಷುಗಳೇ, ರೂಪಗಳು ಅನಿತ್ಯವಾಗಿವೆ. ಯಾವುದು ರೂಪಗಳ ಕಾರಣವೋ ಹಾಗು ಬೆಂಬಲವೋ ಅವು ಸಹಾ ಅನಿತ್ಯವಾಗಿವೆ. ಅನಿತ್ಯದ ಕಾರಣದಿಂದಾಗಿ ಉದಯಿಸಿದ ರೂಪಗಳು ಹೇಗೆ ನಿತ್ಯವಾಗಲು ಸಾಧ್ಯ? ಶಬ್ದಗಳು... ವಾಸನೆಗಳು... ರುಚಿಗಳು... ಸ್ಪರ್ಶಗಳು... ಮಾನಸಿಕ ವಿಷಯಗಳು ಸಹಾ ಅನಿತ್ಯವಾಗಿವೆ. ಯಾವುದು ಮಾನಸಿಕ ವಿಷಯಗಳಿಗೆ ಕಾರಣವೋ ಹಾಗು ಬೆಂಬಲವೋ ಅವು ಸಹಾ ಅನಿತ್ಯವಾಗಿವೆ. ಅನಿತ್ಯದ ಕಾರಣಗಳಿಂದ ಉದಯಿಸಿದ ಧಮ್ಮಗಳು ಹೇಗೆ ನಿತ್ಯವಾಗಲು ಸಾದ್ಯ? ಹೀಗೆ ದಶರ್ಿಸಿದಂತಹ ಆರ್ಯಶ್ರಾವಕ ಭಿಕ್ಷುವು ಈ ಎಲ್ಲದರಿಂದಾಗಿ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.11 ಬಾಹಿರಾ ದುಃಖ ಹೇತು ಸುತ್ತಂ

144. ಭಿಕ್ಷುಗಳೇ, ರೂಪಗಳು ದುಃಖಕರವಾಗಿವೆ. ಯಾವುದು ರೂಪಗಳ ಕಾರಣವೊ ಹಾಗು ಬೆಂಬಲವೋ ಅವು ಸಹಾ ದುಃಖಕರವಾಗಿವೆ. ದುಃಖದ ಕಾರಣದಿಂದಾಗಿ ಉದಯಿಸಿದ ರೂಪಗಳು ಹೇಗೆ ಸುಖವಾಗಲು ಸಾದ್ಯ? ಶಬ್ದಗಳು... ವಾಸನೆಗಳು... ರಸಗಳು... ಸ್ಪರ್ಶಗಳು... ಮತ್ತು ಧಮ್ಮಗಳು (ಮಾನಸಿಕ ವಿಷಯಗಳು) ದುಃಖಕರವಾಗಿವೆ. ಯಾವ ಧಮ್ಮಗಳ ಉದಯಕ್ಕೆ ಕಾರಣವು ಹಾಗು ಬೆಂಬಲವೋ ಅದು ಸಹಾ ದುಃಖಕರವಾಗಿವೆ. ದುಃಖ ಕಾರಣದಿಂದ ಉದಯಿಸಿದಂತಹ ಧಮ್ಮಗಳು ಹೇಗೆ ಸುಖಕರವಾಗಲು ಸಾಧ್ಯ.? ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಈ ಎಲ್ಲದರಿಂದಾಗಿ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.14.12 ಬಾಹಿರಾನತ್ತ ಹೇತು ಸುತ್ತಂ

145. ಭಿಕ್ಷುಗಳೇ, ರೂಪಗಳು ಅನಾತ್ಮವಾಗಿವೆ. ರೂಪಗಳ ಉದಯಕ್ಕೆ ಕಾರಣ ಹಾಗು ಬೆಂಬಲವು ಸಹಾ ಅನಾತ್ಮವಾಗಿವೆ. ಅನಾತ್ಮದಿಂದ ಉದಯಿಸಿದಂತಹ ರೂಪಗಳು ಹೇಗೆತಾನೇ ಆತ್ಮವಾಗಲು ಸಾಧ್ಯ? ಶಬ್ದಗಳು... ಗಂಧಗಳು... ರಸಗಳು... ಸ್ಪರ್ಶಗಳು... ಧಮ್ಮಗಳು ಅನಾತ್ಮವಾಗಿವೆ. ಧಮ್ಮಗಳ ಉದಯಕ್ಕೆ ಕಾರಣ ಹಾಗು ಬೆಂಬಲವೂ ಸಹಾ ಅನಾತ್ಮವಾಗಿವೆ. ಅನಾತ್ಮದಿಂದ ಉದಯಿಸಿದಂತಹ ಧಮ್ಮಗಳು ಹೇಗೆತಾನೆ ಆತ್ಮವಾಗಲು ಸಾಧ್ಯ? ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಈ ಎಲ್ಲದರಿಂದಾಗಿ ವಿಕಷರ್ಿತನಾಗುತ್ತಾನೆ. ವಿರಾಗಹೊಂದುತ್ತಾನೆ... ವಿಮುಕ್ತನಾಗುತ್ತಾನೆ, ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು. ಮಾಡಬೇಕಾದ್ದು ಮಾಡಿಯಾಯಿತು. ಈ ಸ್ಥಿತಿಯು ಇನ್ನಿಲ್ಲ ಎಂದು ಅರಿಯುತ್ತಾನೆ.
ಇಲ್ಲಿಗೆ ದೇವದಹವರ್ಗವು ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...