Thursday 31 May 2018

Samyutta nikaya 35.19 ಅಸೀವಿ ವರ್ಗ (ಸರ್ಪ ವರ್ಗ)

ಅಸೀವಿ ವರ್ಗ (ಸರ್ಪ ವರ್ಗ)


35.19.1 ಅಸೀವಿಸೋಪಮ ಸುತ್ತಂ (ಸಪರ್ೊಪಮ ಸುತ್ತ)

238. ಭಿಕ್ಷುಗಳೇ, ನಾಲ್ಕುಬಗೆಯ ಸರ್ಪಗಳು ಘೋರವಾಗಿರುತ್ತವೆ ಮತ್ತು ಮಹಾ ವಿಷಕಾರಿಯಾಗಿರುತ್ತವೆ. ಈಗ ಒಬ್ಬನು ಜೀವಿಸಲು ಇಚ್ಛಿಸುತ್ತಾನೆ, ಸಾಯಲು ಇಚ್ಛಿಸುವುದಿಲ್ಲ. ಸುಖಾಪೇಕ್ಷಿಯಾಗಿರುತ್ತಾನೆ, ದುಃಖವನ್ನು ದ್ವೇಷಿಸುವವನಾಗಿದ್ದಾನೆ. ಅಂತಹವನಿಗೆ ಅವರು ಹೀಗೆ ಹೇಳುತ್ತಾರೆ ಎಂದು ಕಲ್ಪಿಸಿಕೊಳ್ಳಿರಿ. ಓ ಸಜ್ಜನನೇ, ಈ ನಾಲ್ಕು ಬಗೆಯ ಸರ್ಪಗಳು ಉಗ್ರತೇಜದಿಂದ ಕೂಡಿವೆ ಹಾಗು ಘೋರ ವಿಷವನ್ನು ಹೊಂದಿವೆ. ಕಾಲಕಾಲಕ್ಕೆ ಇವನ್ನು ಎತ್ತಬೇಕು, ಕಾಲಕಾಲಕ್ಕೆ ಇವನ್ನು ಸ್ನಾನ ಮಾಡಿಸಬೇಕು. ಕಾಲಕಾಲಕ್ಕೆ ಅವುಗಳಿಗೆ ಉಣಿಸಬೇಕು, ಕಾಲಕಾಲಕ್ಕೆ ಅವನ್ನು ಮಲಗಿಸಬೇಕು. ಆದರೆ ಸಜ್ಜನರೆ, ಇವುಗಳಲ್ಲಿ ಒಂದಾದರೂ ಸರ್ಪವು ಕೋಪಗೊಂಡರೆ ನೀನು ಮೃತ್ಯುವನ್ನು ಪಡೆಯುವೆ ಅಥವಾ ಮೃತ್ಯು ಸಮಾನವಾದ ದುಃಖವನ್ನು ಅನುಭವಿಸುವೆ. ಹೀಗಾಗಿ ಏನೆಲ್ಲಾ ಮಾಡಬೇಕಾಗಿದೆಯೋ ಮಾಡು.
ಭಿಕ್ಷುಗಳೇ, ಆಗ ಆ ನಾಲ್ಕು ಸರ್ಪಗಳಿಗೆ ಹೆದರಿ ಆ ಮನುಷ್ಯನು ದಿಕ್ಕಾಪಾಲಾಗಿ ಓಡುವನು. ಆಗ ಅವರು ಹೀಗೆ ಹೇಳುವರು: ಸಜ್ಜನನೇ, ಐವರು ಕೊಲೆಗಾರ ಶತ್ರುಗಳು ನಿನ್ನನ್ನು ಬೆನ್ನಟ್ಟುವರು, ಎಲ್ಲಿ ಆತನನ್ನು ಕಾಣುವೆವೋ ಅಲ್ಲಿ ಆತನನ್ನು ಮುಗಿಸುವೆವು ಎಂದು ಬೆನ್ನಟ್ಟಿದ್ದಾರೆ. ಏನೆಲ್ಲಾ ಮಾಡಬೇಕಾಗಿದೆಯೋ ಮಾಡು.
ಭಿಕ್ಷುಗಳೇ, ಆಗ ಆ ನಾಲ್ಕು ಉಗ್ರತೇಜವುಳ್ಳ ಘೋರ ವಿಷವುಳ್ಳ ಸರ್ಪಗಳಿಂದ ಹಾಗು ಐವರು ಕೊಲೆಗಡುಕರಿಂದ ಆ ಮನುಷ್ಯನು ಒಂದಲ್ಲ ಒಂದು ದಿಕ್ಕಿನೆಡೆಗೆ ಓಡುವನು. ಆಗ ಕೆಲವರು ಅವನಿಗೆ ಹೀಗೆ ಹೇಳುವರು: ಸಜ್ಜನನೇ, ಆರನೇ ಕೊಲೆಗಾರನು ನಿನ್ನ ಆಪ್ತ ಸ್ನೇಹಿತನೇ ಆಗಿದ್ದಾನೆ, ಅವನು ಕತ್ತಿ ಹಿಡಿದುಕೊಂಡು ಆತನು ಎಲ್ಲೇ ಕಾಣಲಿ, ಆ ಸ್ಥಳದಲ್ಲೇ ಆತನ ಶಿರವನ್ನು ಛೇದಿಸುವೆನು ಎಂದು. ಹೀಗಾಗಿ ಸಜ್ಜನನೇ ನೀನು ಏನು ಮಾಡಬೇಕೋ ಮಾಡಿಕೋ.
ಭಿಕ್ಷುಗಳೇ, ನಂತರ ಆ ನಾಲ್ಕು ಘೋರ ಸರ್ಪಗಳಿಂದ, ಐವರು ಕೊಲೆಗಡುಕ ಶತ್ರುಗಳಿಂದ ಹಾಗು ಆಪ್ತನಾಗಿದ್ದಂತಹ ಆರನೇ ಕೊಲೆಗಡುಕನಿಂದ ಭಯಭೀತನಾಗಿ ಒಂದಲ್ಲ ಒಂದು ದಿಕ್ಕಿನತ್ತ ಓಡುತ್ತಿರುತ್ತಾನೆ. ಆಗ ಆತನು ಬರಿದಾದ ಹಳ್ಳಿಯನ್ನು ಕಾಣುತ್ತಾನೆ. ಆತನು ಯಾವುದೇ ಮನೆಯನ್ನು ಪ್ರವೇಶಿಸಿದರೂ ಅದು ಬರಿದಾಗಿರುತ್ತದೆ, ಬಂಜರಾಗಿರುತ್ತದೆ, ಖಾಲಿಯಾಗಿರುತ್ತದೆ. ಯಾವುದೇ ಮಡಿಕೆಯನ್ನು ಹಿಡಿದರೂ ಅದನ್ನು ಸಹಾ ಖಾಲಿಯಾಗಿರುತ್ತವೆ. ಆಗ ಅಲ್ಲಿ ಆತನಿಗೆ ವಿಷಯ ತಿಳಿಯುವುದು. ಈಗತಾನೆ ಡಕಾಯಿತರು ಹಳ್ಳಿಯನ್ನು ಆಕ್ರಮಿಸಲಿದ್ದಾರೆ. ಈ ಶೂನ್ಯವಾಗಿರುವ ಹಳ್ಳಿಯನ್ನು ಆಕ್ರಮಿಸಲಿದ್ದಾರೆ, ನೀನು ಏನನ್ನು ಮಾಡಿಕೊಳ್ಳಬಹುದೋ ಮಾಡಿಕೋ.
ಭಿಕ್ಷುಗಳೇ, ಆಗ ನಾಲ್ಕು ಸರ್ಪಗಳಿಂದ, ಐವರು ಕೊಲೆಗಾರರಿಂದ, ಒಬ್ಬ ಆಪ್ತ ಕೊಲೆಗಾರನಿಂದ, ಹಳ್ಳಿಯ ಮೇಲೆ ಆಕ್ರಮಿಸುವ ಡಕಾಯಿತರಿಂದ ಮುಕ್ತಿ ಪಡೆಯಲು ಆ ಮನುಷ್ಯ ಒಂದಲ್ಲ ಒಂದು ದಿಕ್ಕಿನೆಡೆಗೆ ಓಡುತ್ತಾನೆ. ಆಗ ಆತನಿಗೆ ವಿಸ್ತಾರವಾದ ನದಿಯು ಕಾಣಿಸುವುದು. ಆ ನದಿ ಈ ಬದಿಯ ಭಯಾನಕವಾಗಿಯು ಆಪಾಯದಿಂದಲೂ ಕೂಡಿದೆ. ಆ ಬದಿಯ ದಡವೂ ಕ್ಷೇಮವಾಗಿಯೂ ಅಪಾಯವಿಲ್ಲದೆಯೂ ಇದೆ. ಆದರೆ ಅಲ್ಲಿ ಹೋಗಲು ಯಾವುದೇ ತೆಪ್ಪವಾಗಿ, ದೋಣಿಯಾಗಲಿ, ಸೇತುವೆಯಾಗಲಿ ಇಲ್ಲವಾಗಿವೆ.
ಆಗ ಆ ಮನುಷ್ಯ ಹೀಗೆ ತಕರ್ಿಸುತ್ತಾನೆ: ಈ ತೀರವು ಭಯಾನಕವೂ ಹಾಗು ವಿಪತ್ತಿನಿಂದಲೂ ಕೂಡಿದೆ. ನಡುವೆ ಆಳವಾದ, ವಿಸ್ತಾರವಾದ ನದಿಯಿದೆ. ಆದರೆ ಯಾವುದೇ ತೆಪ್ಪವಾಗಲಿ, ದೋಣಿಯಾಗಲಿ, ಸೇತುವೆಯಾಗಲಿ ಇಲ್ಲವಾಗಿದೆ. ನಾನೇ ಹುಲ್ಲುಗಳನ್ನು, ರೆಂಬೆಗಳನ್ನು, ಕೊಂಬೆಗಳನ್ನು, ಎಲೆಗಳ ಗೊಂಚಲುಗಳನ್ನು ಕಟ್ಟಿ ತೆಪ್ಪವನ್ನು ಕಟ್ಟಬೇಕು. ನಂತರ ನನ್ನ ಕೈಕಾಲುಗಳನ್ನು ಬಳಸಿ ಸುರಕ್ಷಿತವಾಗಿ ಆ ದಡವನ್ನು ಸೇರಬೇಕು.
ನಂತರ ಆ ವ್ಯಕ್ತಿಯು ಹಾಗೆಯೇ ತೆಪ್ಪವನ್ನು ಸಿದ್ಧಪಡಿಸಿ, ಕೈಕಾಲುಗಳನ್ನು ಬಳಸಿ ಸುರಕ್ಷಿತವಾಗಿ ಆ ಬದಿಯ ದಡವನ್ನು ತಲುಪಿದನು. ಹೀಗೆ ದಾಟಿ, ಆ ತೀರದ ದಡದಲ್ಲಿ ಆ ಬ್ರಾಹ್ಮಣನು ನಿಂತನು.
ಭಿಕ್ಷುಗಳೇ ನಾನು ಹೀಗೆ ಉಪಮೆಯೊಂದನ್ನು ಸಿದ್ಧಪಡಿಸಿದ್ದೇನೆ. ಈಗ ಈ ಕಥೆಯಲ್ಲಿನ ಉಪಮೆಯನ್ನು ಬಿಡಿಸುವೆನು. ಭಿಕ್ಷುಗಳೇ, ನಾಲ್ಕು ಘೋರ ಸರ್ಪಗಳು ಯಾವುವೆಂದರೆ, ನಮ್ಮ ದೇಹದಲ್ಲಿನ ನಾಲ್ಕು ಮಹಾಭೂತಗಳು. ಅವೆಂದರೆ, ಪೃಥ್ವಿಧಾತು, ಜಲಧಾತು, ತೇಜೋಧಾತು ಮತ್ತು ವಾಯುಧಾತುವಾಗಿದೆ.
ಐವರು ಕೊಲೆಗಾರ ಶತ್ರುಗಳು ಯಾವುವೆಂದರೆ, ಐದು ಅಂಟುವಿಕೆಯ ರಾಶಿಗಳು. ಅವೆಂದರೆ: ರೂಪರಾಶಿ (ದೇಹ), ವೇದನರಾಶಿ, ಗ್ರಹಿಕೆಯರಾಶಿ, ಸಂಖಾರರಾಶಿ ಮತ್ತು ವಿಞ್ಞಾಣಖಂದ (ಅರಿಯುವಿಕೆಯ ರಾಶಿ).
ಆರನೆಯ ಆಪ್ತನು ಖಡ್ಗಧಾರಿ ಕೊಲೆಗಾರನು ಯಾವುದೆಂದರೆ ಆನಂದಭಾವದ ರಾಗವೇ ಆಗಿದೆ.
ಶೂನ್ಯಗ್ರಾಮವೆಂದರೆ ಆರು ಇಂದ್ರೀಯ ಆಧಾರಗಳು. ಭಿಕ್ಷುವೇನಾದರೂ ಪ್ರಾಜ್ಞನಾಗಿದ್ದರೆ ಆತನು ಪ್ರತಿಯೊಂದು ಪ್ರಕ್ರಿಯೆ ಪರೀಕ್ಷಿಸುತ್ತಾನೆ. ಹೇಗೆಂದರೆ ಯಾವರೀತಿ ಚಕ್ಷುವು ಕಾರ್ಯವಹಿಸುತ್ತದೆ ಎಂಬುದನ್ನು ಅರಿತಾಗ ಚಕ್ಷು ಇಂದ್ರೀಯವು ಶೂನ್ಯವಾಗಿ, ಟೊಳ್ಳಾಗಿ, ಬರಿದಾಗಿ ಕಾಣಿಸುತ್ತವೆ. ಅದೇರೀತಿಯಲ್ಲಿ ಕಿವಿಯು... ಮೂಗು... ನಾಲಿಗೆ... ಕಾಯ... ಮನಸ್ಸು ಸಹಾ ಶೂನ್ಯವಾಗಿ ಟೊಳ್ಳಾಗಿ ಬರಿದಾಗಿ ಕಾಣುತ್ತವೆ.
ಶೂನ್ಯಗ್ರಾಮವನ್ನು ಆಕ್ರಮಣ ಮಾಡುವ ಡಕಾಯಿತರು ಯಾವುದೆಂದರೆ, ಆಂತರ್ಯದ ಆರು ಇಂದ್ರೀಯ ವಿಷಯಗಳು. ಅವೆಂದರೆ ಚಕ್ಷು. ಭಿಕ್ಷುಗಳೇ, ಚಕ್ಷುವು ಒಪ್ಪುವ, ಒಪ್ಪದಿರುವ ದೃಶ್ಯಗಳಿಂದ ಆಕ್ರಮಿತವಾಗುತ್ತವೆ. ಹಾಗೆಯೇ ಕಿವಿ... ಮೂಗು... ನಾಲಿಗೆ... ಶರೀರ... ಮನಸ್ಸು ಒಪ್ಪುವ ಹಾಗು ಒಪ್ಪದಿರುವ ಮಾನಸಿಕ ವಿಷಯಗಳಿಂದ ಆಕ್ರಮಿತವಾಗುತ್ತದೆ.
ಮಹಾನೀರಿನ ವಿಸ್ತಾರವೆಂದರೆ (ನದಿ) ನಾಲ್ಕು ಪ್ರವಾಹಗಳು. ಅವೆಂದರೆ, ಕಾಮಪ್ರವಾಹ, ಭವಪ್ರವಾಹ, ದಿಟ್ಟಿಪ್ರವಾಹ ಮತ್ತು ಅವಿದ್ಯೆಯ ಪ್ರವಾಹವಾಗಿದೆ.
ಈ ಬದಿಯ ಭಯಾನಕ ತೀರವೆಂದರೆ ಸಕ್ಕಾಯದಿಟ್ಟಿಯಾಗಿವೆ.
ಆ ಬದಿಯ ತೀರವೆಂದರೆ ವಿಪತ್ತು ಮುಕ್ತವಾದ, ಸುರಕ್ಷಿತವಾದ ಸ್ಥಾನವೆಂದರೆ ನಿಬ್ಬಾಣವಾಗಿದೆ.
ತೆಪ್ಪವೆಂದರೆ, ಆರ್ಯ ಅಷ್ಟಾಂಗ ಮಾರ್ಗಕ್ಕೆ ಸಂಕೇತವಾಗಿದೆ. ಅವೆಂದರೆ, ಸಮ್ಯಕ್ದೃಷ್ಟಿ ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕರ್ಮ, ಸಮ್ಯಕ್ಜೀವನ, ಸಮ್ಯಕ್ ವ್ಯಾಯಾಮ, ಸಮ್ಯಕ್ಸ್ಮೃತಿ ಮತ್ತು ಸಮ್ಯಕ್ ಸಮಾಧಿ.
ಕೈಕಾಲುಗಳನ್ನು ಬಳಸಿ ಶ್ರಮಿಸುವುದು ಎಂದರೆ ಉತ್ಸಾಹ ಮತ್ತು ಪ್ರಯತ್ನದ ಸಂಕೇತವಾಗಿದೆ.
ದಾಟಿ, ಆಚೆಹೋಗಿ ಆ ನೆಲದಲ್ಲಿ ಬ್ರಾಹ್ಮಣನು ನಿಂತನು ಎಂದರೆ ಅದು ಅರಹಂತರ ಸಂಕೇತವಾಗಿದೆ.


35.19.2 ರಥೋಪಮ ಸುತ್ತಂ (ರಥದ ಉಪಮೆಯ ಸುತ್ತ)

239. ಭಿಕ್ಷುಗಳೇ, ಮೂರು ಗುಣಗಳನ್ನು ಹೊಂದಿರುವ ಭಿಕ್ಷುವು ಈ ಜೀವನದಲ್ಲಿ ಪೂರ್ಣವಾದ ಸುಖ ಆನಂದದಿಂದ ಕೂಡಿರುತ್ತಾನೆ ಹಾಗು ಆಸವಗಳ ನಾಶಕ್ಕೆ ಭವ್ಯ ಬುನಾದಿ ಸ್ಥಾಪಿಸುತ್ತಾನೆ. ಯಾವುದವು? ಆ ಮೂರು ಗುಣಗಳು? ಅವನು ಇಂದ್ರೀಯ ದ್ವಾರಗಳಲ್ಲಿ ಸುರಕ್ಷಿತವಾಗಿರುವುದು, ಆಹಾರದಲ್ಲಿ ಮಿತಿಯಿಂದಿರುವುದು ಮತ್ತು ಜಾಗರೂಕತೆಯಲ್ಲಿ ನಿಷ್ಠನಾಗಿರುವುದು.
ಮತ್ತೆ ಹೇಗೆ ಭಿಕ್ಷುಗಳೇ, ಭಿಕ್ಷುವೊಬ್ಬನು ಇಂದ್ರೀಯ ದ್ವಾರಗಳಲ್ಲಿ ಸುರಕ್ಷಿತೆ ವಹಿಸುತ್ತಾನೆ. ಇಲ್ಲಿ ಕಣ್ಣಿನಿಂದ ದೃಶ್ಯಗಳನ್ನು ನೋಡುತ್ತಾ ಇದ್ದರೂ ಸಹಾ ಆತನು ಸಂಕೇತಗಳನ್ನಾಗಲಿ ಅಥವಾ ವಿವರ ವಿಶೇಷತೆಗಳಾಗಲಿ ಹಿಡಿಯುವುದಿಲ್ಲ. ಏಕೆಂದರೆ ಆತನು ಚಕ್ಷುವು ಅನಿಯಂತ್ರಿವಾದರೆ (ದುರಾಸೆಯುತ) ಪಾಪಯುತ ಅಕುಶಲ ಸ್ಥಿತಿಗಳು ಆತನಲ್ಲಿ ಆಕ್ರಮಿಸಬಹುದು. ಹೀಗಾಗಿ ಆತನು ನಿಯಂತ್ರತೆಯ ಹಾದಿಯನ್ನು ಅಭ್ಯಸಿಸಬಹುದು. ತನ್ನ ಕಣ್ಣನ್ನು ಸಂರಕ್ಷಣೆ ಮಾಡಬಹುದು. ಹೀಗೆ ಆತನು ಚಕ್ಷು ಇಂದ್ರೀಯವನ್ನು ಸಂರಕ್ಷಣೆ ಮಾಡುತ್ತಾನೆ. ಆತನು ಕಿವಿಯಿಂದ ಶಬ್ದಗಳನ್ನು ಆಲಿಸುತ್ತಿದ್ದರೂ... ಮೂಗಿನಿಂದ ವಾಸನೆಗಳನ್ನು ಆಘ್ರಾಣಿಸುತ್ತಿದ್ದರೂ.... ನಾಲಿಗೆಯಿಂದ ರಸಗಳನ್ನು ಆಸ್ವಾದಿಸುತ್ತಿದ್ದರೂ... ಕಾಯದಿಂದ ಸ್ಪರ್ಶಗಳನ್ನು ಅನುಭವಿಸುತ್ತಿದ್ದರೂ.... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಗ್ರಹಿಸುತ್ತಿದ್ದರೂ ಆತನು ಅವುಗಳ ಸಂಕೇತಗಳನ್ನಾಗಲಿ ಅಥವಾ ವಿವರ ವಿಶೇಷಣೆಗಳಾಗಲಿ ಹಿಡಿಯುವುದಿಲ್ಲ. ಏಕೆಂದರೆ ಆತನ ಚಕ್ಷುವು ಅನಿಯಂತ್ರಿತವಾದರೆ ಪಾಪಯುತ ಅಕುಶಲ ಸ್ಥಿತಿಗಳು ಆತನಲ್ಲಿ ಆಕ್ರಮಿತವಾಗಬಹುದು. ಹೀಗಾಗಿ ಆತನು ನಿಯಂತ್ರಣೆಯ ಹಾದಿಯನ್ನು ಅಭ್ಯಸಿಸಬಹುದು. ಹೀಗೆ ಆತನು ಮನೋ ಇಂದ್ರೀಯವನ್ನು ಸಂರಕ್ಷಣೆ ಮಾಡುತ್ತಾನೆ.
ಭಿಕ್ಷುಗಳೇ, ಊಹಿಸಿಕೊಳ್ಳಿ. ಸರಂಜಾಮುಗಳನ್ನು ಹೊಂದಿದ ರಥವೊಂದು ಗುಡ್ಡಗಾಡು ಪ್ರದೇಶದಲ್ಲೂ ಸಹಾ ಸರಿಯಾಗಿ ನಿಲ್ಲುವುದು. ಅಡ್ಡದಾರಿಗಳಲ್ಲೂ ಸಹಾ ಸರಿಯಾಗಿ ನಿಲ್ಲುವುದು. ಏಕೆಂದರೆ ಚತುರನಾದ ಸಾರಥಿಯು ಲಗಾಮನ್ನು ಎಡಗೈಯಲ್ಲಿ, ಚುಚ್ಚುಗೋಲನ್ನು ಬಲಗೈಯಲ್ಲಿ ಹಿಡಿಯುತ್ತ, ಕುದುರೆಯನ್ನು ನಿಯಂತ್ರಿಸುತ್ತಾನೆ, ಚಾಲನೆ ಮಾಡುತ್ತಾನೆ. ಆತನು ತನಗೆ ಇಷ್ಟಬಂದೆಡೆ ಓಡಿಸುತ್ತಾನೆ (ಚಾಲನೆ ಮಾಡುತ್ತಾನೆ). ಅದೇರೀತಿಯಲ್ಲಿ ಭಿಕ್ಷುವು ಆರು ಇಂದ್ರೀಯಗಳನ್ನು ನಿಯಂತ್ರಿಸುತ್ತಾನೆ, ಸ್ಫೂತರ್ಿಗೊಳಿಸುತ್ತಾನೆ, ಶಾಂತಗೊಳಿಸುತ್ತಾನೆ ತನ್ನ ಇಂದ್ರೀಯಗಳನ್ನು ಸುರಕ್ಷಿತ ಮಾಡುತ್ತಾನೆ.
ಮತ್ತೆ ಹೇಗೆ ಭಿಕ್ಷುಗಳೇ, ಭಿಕ್ಷುವು ಭೋಜನದಲ್ಲಿ ಮಿತಿಯಿಂದಿರುತ್ತಾನೆ. ಇಲ್ಲಿ ಭಿಕ್ಷುವು ಪ್ರಾಜ್ಞನಾಗಿ ಚಿಂತನೆ ಮಾಡುತ್ತಾನೆ. ಹೇಗೆಂದರೆ ತಾನು ಸೇವಿಸುವ ಆಹಾರವು ಮೋಜಿಗಾಗಿ ಅಲ್ಲ, ಮತ್ತಿಗಾಗಿ ಅಲ್ಲ, ಸೌಂದರ್ಯಕ್ಕಾಗಿಯೂ ಅಲ್ಲ, ಆಕರ್ಷಣೆಗಾಗಿಯೂ ಅಲ್ಲ. ಕೇವಲ ಶರೀರದ ಸುಸ್ಥಿತಿಗೆ, ಆಸರೆಗೆ, ವೇದನೆಗಳ ದಮನಕ್ಕಾಗಿ, ಬ್ರಹ್ಮಚರ್ಯೆಯ ಜೀವನದ ಸಹಾಯಕ್ಕೆ ಆತನು ಹೀಗೆ ನಿರ್ಧರಿಸುತ್ತಾನೆ. ನಾನು ಹಳೆಯ ವೇದನೆಗಳನ್ನು ಇಲ್ಲವಾಗಿಸುತ್ತಿದ್ದೆನೆ. ಹಾಗು ಹೊಸ ವೇದನೆಗಳನ್ನು ಉದಯಿಸಲು ಬಿಡುವುದಿಲ್ಲ ಹಾಗು ಕಳಂಕರಹಿತನಾಗಿ ಸುಖಿಯಾಗಿ ಇರುತ್ತೇನೆ. ಹೇಗೆಂದರೆ ರೋಗಿಯೊಬ್ಬನು ವ್ರಣಗಳಿಗೆ ಹಚ್ಚುವ ಲೇಪದಂತೆ ಕೇವಲ ಗುಣಮುಖವಾಗುವ ಉದ್ದೇಶದಂತೆ, ಅಥವಾ ವಾಹನಗಳ ಚಕ್ರಗಳಿಗೆ ಹಚ್ಚುವ ಕೀಲೆಣ್ಣೆಯಂತೆ ಭಿಕ್ಷುವು ಪ್ರಾಜ್ಞನಂತೆ ಚಿಂತನೆ ಮಾಡಿ ಭೋಜನ ಮಾಡುತ್ತಾನೆ... ಈ ರೀತಿಯಾಗಿ ಭಿಕ್ಷುವು ಭೋಜನದಲ್ಲಿ ಮಿತಿಯಿಂದಿರುತ್ತಾನೆ.
ಮತ್ತೆ ಹೇಗೆ ಭಿಕ್ಷುಗಳೇ, ಭಿಕ್ಷುವು ಜಾಗರೂಕತೆಯಲ್ಲಿ ನಿಷ್ಠೆಯನ್ನು ಹೊಂದಿರುತ್ತಾನೆ. ಇಲ್ಲಿ ಹಗಲಿನಲ್ಲಿ ನಡೆದಾಡುವಾಗಾಗಲಿ, ಕುಳಿತಿರುವಾಗಾಗಲಿ, ಭಿಕ್ಷುವು ಮಾನಸಿಕ ತಡೆಗಳಿಂದ ತನ್ನ ಚಿತ್ತವನ್ನು ಶುದ್ಧಗೊಳಿಸುತ್ತಾನೆ. ರಾತ್ರಿಯ ಪ್ರಥಮ ಜಾವದಲ್ಲಿ
(6 ರಿಂದ 10) ನಡಿಗೆಯ ಧ್ಯಾನ ಹಾಗು ಆಸನದಲ್ಲಿರುವಾಗಾಗಲಿ, ತನ್ನ ಮನಸ್ಸನ್ನು ಮಾನಸಿಕ ತಡೆಗಳಿಂದ ಶುದ್ಧಿಗೊಳಿಸುತ್ತಾನೆ. ರಾತ್ರಿಯ ದ್ವಿತೀಯ ಜಾವದಲ್ಲಿ (10 ರಿಂದ 2) ಬಲಬದಿಯಲ್ಲಿ ಸಿಂಹಶಯ್ಯೆಯಲ್ಲಿ ಬಲಗಾಲ ಮೇಲೆ ಎಡಗಾಲನ್ನಿಟ್ಟು ಎಚ್ಚರಿಕೆಯಿಂದ ಏಳುವ ಕಾಲವನ್ನು ನಿಗದಿಮಾಡಿ ನಂತರ ಜಾಗರೂಕತೆಯಿಂದ ನಿದ್ರಿಸುತ್ತಾನೆ. ನಂತರ ಕೊನೆಯ ಜಾವದಲ್ಲಿ ಏಳುತ್ತಾನೆ (2 ರಿಂದ 6) ನಡಿಗೆಯ ಧ್ಯಾನವನ್ನು ಹಾಗು ಸ್ಥಿರಾಸನದಲ್ಲಿ ಧ್ಯಾನವನ್ನು ಮಾಡುತ್ತಾನೆ. ತನ್ನ ಚಿತ್ತವನ್ನು ಮಾನಸಿಕ ತಡೆಗಳಿಂದ ಶುದ್ಧಿಗೊಳಿಸುತ್ತಾನೆ. ಈ ರೀತಿಯಲ್ಲಿ ಭಿಕ್ಷುವು ಜಾಗರೂಕತೆಯಲ್ಲಿ ನಿಷ್ಠನಾಗಿರುತ್ತಾನೆ. ಭಿಕ್ಷುಗಳೇ, ಈ ರೀತಿಯ ಮೂರು ಸದ್ಗುಣಗಳನ್ನು ಹೊಂದಿರುವ ಭಿಕ್ಷುವು ಸುಖಿಯಾಗಿ ಹಾಗು ಆನಂದದಿಂದ ಈ ಜೀವಿತದಲ್ಲೇ ಇರುತ್ತಾನೆ ಮತ್ತು ಅವರು ಆಸವಗಳ ನಾಶಕ್ಕೆ ಬುನಾದಿ ಹಾಕುತ್ತಾನೆ.


35.19.3 ಕುಮ್ಮೋಪಮ ಸುತ್ತಂ (ಆಮೆಯ ಉಪಮೆಯ ಸುತ್ತ)

240. ಭಿಕ್ಷುಗಳೇ, ಹಿಂದೆ ಆಮೆಯ ಆಹಾರಕ್ಕಾಗಿ ನದಿಯ ತೀರದ ಉದ್ದಕ್ಕೂ ಹುಡುಕುತ್ತಾನೆ. ಅದೇ ಸಂಜೆಯಲ್ಲಿ ನರಿಯು ಸಹಾ ಅದೇ ನದಿಯ ತೀರದಲ್ಲಿ ಆಹಾರವನ್ನು ಹುಡುಕುತ್ತಿತ್ತು. ದೂರದಿಂದಲೇ ನರಿಯನ್ನು ಗಮನಿಸಿದಂತಹ ಆಮೆಯು ತಕ್ಷಣ ತನ್ನ ಅಂಗಗಳಾದ ತಲೆ ಹಾಗು ಕಾಲುಗಳನ್ನು ಚಿಪ್ಪಿನಲ್ಲಿ ಎಳೆದುಕೊಂಡು ನಿಶ್ಶಬ್ಧವಾಗಿ ನಿಶ್ಚಲವಾಗಿ ಸ್ಥಿರಗೊಂಡಿತು. ಆಮೆಯನ್ನು ದೂರದಿಂದಲೇ ಗಮನಿಸಿದಂತಹ ನರಿಯು ಹೀಗೆ ಯೋಚಿಸಿತು: ಯಾವಾಗ ಆಮೆಯು ಒಂದಲ್ಲ ಒಂದು ಅಂಗವನ್ನು ಹೊರಚಾಚಿದಾಗ ನಾನು ಅದನ್ನು ಅದೇ ಸ್ಥಳದಲ್ಲಿ ಎಳೆದಾಡುತ್ತೇನೆ ಹಾಗು ತಿನ್ನುತ್ತೇನೆ. ಆದರೆ ಆಮೆಯು ತನ್ನ ನಿಗ್ರಹ ಶಕ್ತಿಯಿಂದ ಅಂತಹುದಕ್ಕೆ ಅವಕಾಶವೇ ನೀಡಲಿಲ್ಲ. ನಿರಾಶೆಗೊಂಡ ನರಿಯು ಅದರ ಆಸಕ್ತಿಯನ್ನು ತೊರೆದು ಹೊರಟಿತು.
ಭಿಕ್ಷುಗಳೇ, ಅದೇರೀತಿಯಲ್ಲಿ ಮಾರನು ನಿಮ್ಮನ್ನು ಅತಿ ಸನಿಹದಿಂದ ಕಾಯುತ್ತಿದ್ದಾನೆ ಹಾಗು ಹೀಗೆ ಯೋಚಿಸುತ್ತಾನೆ: ಬಹುಶಃ ಈ ಭಿಕ್ಷುವು ಇಂದು ಕಣ್ಣಿನ (ಚಕ್ಷು) ಮೂಲಕವೋ, ಕಿವಿಯ ಮೂಲಕವೋ... ಅಥವಾ ಮನಸ್ಸಿನ ಮೂಲಕವೋ ನನ್ನ ಹಿಡಿತಕ್ಕೆ ಸಿಗುವನು. ಭಿಕ್ಷುಗಳೇ, ಆದ್ದರಿಂದ ಇಂದ್ರೀಯಗಳನ್ನು ಸರಿಯಾಗಿ ನಿಗ್ರಹಿಸಿರಿ. ಹೇಗೆಂದರೆ ಕಣ್ಣಿನಿಂದ ರೂಪವನ್ನು ನೋಡಿಯೂ ದೃಶ್ಯಗಳ ಸಂಕೇತಗಳನ್ನಾಗಲಿ ಅಥವಾ ವಿವರ ವಿಶೇಷತೆಗಳನ್ನು ಹಿಡಿಯದಿರಿ. ಏಕೆಂದರೆ ನೀವು ಚಕ್ಷು ಇಂದ್ರೀಯವನ್ನು ರಕ್ಷಿಸದೆ ಹೋದರೆ ಪಾಪಯುತವಾದ ಅಕುಶಲವಾದ ಯೋಚನೆಗಳು ನಿಮ್ಮಲ್ಲಿ ಆಕ್ರಮಿಸಬಹುದು. ನಿಗ್ರಹವನ್ನು ಅಭ್ಯಸಿಸಿರಿ. ಚಕ್ಷು ಇಂದ್ರೀಯವನ್ನು ರಕ್ಷಿಸಿರಿ. ಅದೇರೀತಿಯಲ್ಲಿ ಕಿವಿಯಿಂದ ಶಬ್ದವನ್ನು ಆಲಿಸಿ... ನಾಸಿಕದಿಂದ... ನಾಲಿಗೆಯಿಂದ... ಕಾಯದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಗ್ರಹಿಸಿ ಅದರ ಸಂಕೇತಗಳಿಗಾಗಲಿ ಅಥವಾ ವಿವರ ವಿಶ್ಲೇಷಣೆಗಳಿಗೆ ಹಿಡಿಯಬೇಡಿರಿ. ಏಕೆಂದರೆ ನಿಮ್ಮ ಚಿತ್ತವು ರಕ್ಷಿತವಲ್ಲದೆ ಹೋದರೆ ಪಾಪಯುತವಾದ ಅಕುಶಲವಾದ ಯೋಚನೆಗಳು ನಿಮ್ಮಲ್ಲಿ ಆಕ್ರಮಿಸಬಹುದು. ಅದರಿಂದಾಗಿ ನಿಗ್ರಹವನ್ನು ಅಭ್ಯಸಿಸಿರಿ. ಮನಸ್ಸು ಸುರಕ್ಷಿತಗೊಳಿಸಿರಿ. ಭಿಕ್ಷುಗಳೇ, ಯಾವಾಗ ನೀವು ಇಂದ್ರೀಯ ದ್ವಾರಗಳನ್ನು ಚೆನ್ನಾಗಿ ರಕ್ಷಿತಗೊಳಿಸುವಿರೋ ಆಗ ಮಾರನು ನಿಮ್ಮನ್ನು ತಲುಪಲು ಆಗುವುದಿಲ್ಲ. ನಿಮ್ಮ ಬಗ್ಗೆ ಆಸಕ್ತಿ ತೊರೆದು ಹೊರಟು ಹೋಗುತ್ತಾನೆ. ಹೇಗೆಂದರೆ ನರಿಯು ಆಮೆಯನ್ನು ತೊರೆದು ಹೋಗುವ ರೀತಿಯಲ್ಲಿ ಮಾರನು ನಿಮ್ಮನ್ನು ಬಿಟ್ಟುಬಿಡುತ್ತಾನೆ.
ಹೇಗೆ ಆಮೆಯು ತನ್ನ ಅಂಗಗಳನ್ನು ಹಾಗು ಕಪಾಲವನ್ನು
ಒಳಕ್ಕೆ ಸೆಳೆದುಕೊಂಡು ನಿಗ್ರಹದಿಂದಿತ್ತೋ ಹಾಗೆಯೇ
ಭಿಕ್ಷುವು ಮನಸ್ಸಿನ ವಿತರ್ಕಗಳನ್ನು ನಿಗ್ರಹಿಸಲಿ
ಸ್ವತಂತ್ರನಾಗಲಿ, ಪರರಿಗೆ ಕಿರುಕುಳ ನೀಡದಿರಲಿ
ಹೀಗೆ ಆರಿಹೋದಂತಹ ಭಿಕ್ಷು ಯಾರಿಗೂ ನಿಂದಿಸಲಾರನು.


35.19.4 ಪಠಮ ದಾರುಕ್ಖನ್ದೋಪಮ ಸುತ್ತಂ (ಪ್ರಥಮ ಮಹಾದಿಮ್ಮಿ ಉಪಮೆಯ ಸುತ್ತ)

241. ಒಮ್ಮೆ ಭಗವಾನರು ಕೋಶಂಬಿಯ ಗಂಗಾನದಿ ತೀರದಲ್ಲಿ ವಿಹರಿಸುತ್ತಿದ್ದರು. ಆಗ ಭಗವಾನರು ದೊಡ್ಡ ದಿಮ್ಮಿಯೊಂದು ಗಂಗೆಯ ಅಲೆಗಳಲ್ಲಿ ಸಾಗುತ್ತಿರುವುದನ್ನು ಕಂಡರು. ಆಗ ಭಗವಾನರು ಭಿಕ್ಷುಗಳೊಂದಿಗೆ ಹೀಗೆ ಕೇಳಿದರು: ಭಿಕ್ಷುಗಳೇ, ಈ ಗಂಗಾನದಿಯ ಅಲೆಗಳೊಂದಿಗೆ ಸಾಗುತ್ತಿರುವ ದೊಡ್ಡ ದಿಮ್ಮಿಯನ್ನು ಕಾಣುತ್ತಿರುವಿರೇ? - ಹೌದು ಭಂತೆ. - ಭಿಕ್ಷುಗಳೇ, ಈ ಹಿರಿಯ ಮರದ ದಿಮ್ಮಿಯು ಈ ದಡವನ್ನು ತಲುಪುವುದಿಲ್ಲ, ಆ ತೀರವನ್ನೂ ತಲುಪಲಾರದು. ಈ ಮಧ್ಯೆ ಮುಳುಗಲಾರದು, ನೆಲಕ್ಕೂ ತಲುಪಲಾರದು, ಮಾನವರಿಂದಲೂ ಹಿಡಿಯಲ್ಪಡದು, ಅಮಾನವರಿಂದಲೂ ಹಿಡಿಯಲ್ಪಡದು, ಸುಳಿಗೂ ಸಿಲುಕದು ಅಥವಾ ತನ್ನಲ್ಲೇ ಕೊಳೆಯದು, ಅದು ಇಳಿಕಲ್ಲಿನತ್ತ ಹೋಗುವುದು ಇಳಿಜಾರಿನತ್ತಲೇ ಹೋಗುವುದು, ಕಾರಣವೇನು? ಕಾರಣವೇನೆಂದರೆ ಗಂಗೆಯ ಹರಿವು ಇಳಿಕಲ್ಲಿನತ್ತಲೇ, ಇಳಿಜಾರಿನತ್ತಲೇ ಸಾಗರದ ಕಡೆಯೇ ವಾಲಿರುವುದರಿಂದಲೇ ಹೀಗಾಗುವುದು.
ಭಿಕ್ಷುಗಳೇ, ನೀವು ಸಹಾ ಈ ದಡಕ್ಕೆ ತಲುಪಲಾರಿರಿ, ಆ ದಡಕ್ಕೂ ಸೇರಲಾರಿರಿ, ಮಧ್ಯದಲ್ಲಿಯೂ ಮುಳುಗಲಾರಿರಿ, ನೆಲದಲ್ಲೂ ಇಳಿಯಲಾರಿರಿ, ಮಾನವರಿಂದಲೂ ಹಿಡಿಯಲ್ಪಡುವುದಿಲ್ಲ, ಅಮಾನವರಿಂದಲೂ ಹಿಡಿಯಲ್ಪಡುವುದಿಲ್ಲ, ಸುಳಿಗೂ ಸಿಲುಕುವುದಿಲ್ಲ, ಅಲ್ಲೇ ಕೊಳೆಯುವುದಿಲ್ಲ. ನೀವು ಇಳಿಜಾರಿನತ್ತಲೇ ನಿಬ್ಬಾನದ ಕಡೆ ಬಾಗಿಯೇ ಹರಿಯುತ್ತಿರುವಿರಿ. ಕಾರಣವೇನು? ಏಕೆಂದರೆ ಸಮ್ಯಕ್ದೃಷ್ಟಿಯು ನಿಬ್ಬಾಣದತ್ತಲೆ ಬಾಗಿರುವುದು, ಇಳಿಜಾರಾಗಿರುವುದು, ನಿಬ್ಬಾಣದತ್ತಲೇ ಬಾಗಿರುವುದು.
ಆಗ ಅಲ್ಲಿದ್ದಂತಹ ಭಿಕ್ಷುವೊಬ್ಬನು ಹೀಗೆ ಕೇಳಿದನು: ಭಂತೆ, ಯಾವುದು ಈ ತೀರ? ಆ ತೀರವೆಂದರೆ ಯಾವುದು? ಮಧ್ಯೆಯಲ್ಲಿ ಮುಳುಗುವುದು ಎಂದರೇನು? ನೆಲದಲ್ಲಿ ನಿಲ್ಲುವುದು ಎಂದರೇನು? ಮಾನವರಿಂದ ಹಿಡಿಯಲ್ಪಡುವುದು ಎಂದರೇನು, ಅಮಾನವರಿಂದ ಹಿಡಿಯಲ್ಪಡುವುದು ಎಂದರೇನು? ಸುಳಿಗೆ ಸಿಲುಕುವುದು ಎಂದರೇನು? ಅಲ್ಲೇ ಕೊಳೆಯುವುದು ಎಂದರೇನು?
ಓ ಭಿಕ್ಷುವೇ, ಈ ತೀರವೆಂದರೆ ಆಂತರ್ಯದಲ್ಲಿರುವ ಆರು ಇಂದ್ರೀಯ ಆಧಾರಗಳು (ಕಣ್ಣು ಇತರೆ...) ಆ ತೀರವೆಂದರೆ ಇಂದ್ರೀಯ ವಿಷಯಗಳು (ರೂಪ ಇತರೆ...), ಮಧ್ಯದಲ್ಲಿ ಮುಳುಗುವುದೆಂದರೆ ಆಸೆ ಹಾಗು ರಾಗದಲ್ಲಿ ಅದ್ದಿಹೋಗುವಿಕೆ, ನೆಲ್ಲದಲ್ಲಿ ನಿಲ್ಲುವುದು ಎಂದರೆ ನಾನು ಎಂಬ ಅಹಂಕಾರದಲ್ಲಿ ಸಿಲುಕುವುದು.
ಮತ್ತೆ ಭಿಕ್ಷುಗಳೇ, ಮಾನವರಿಂದ ಹಿಡಿಯಲ್ಪಡುವುದು ಎಂದರೆ ಉಪಾಸಕರೊಂದಿಗೆ ಆನಂದಿಸುವುದು, ಅವರ ದುಃಖದಲ್ಲಿ ದುಃಖಿಸುವುದು. ಅವರ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗುವುದು. ಇದನ್ನೇ ಮಾನವರಿಂದ ಹಿಡಿಯಲ್ಪಡುವುದು ಎನ್ನುತ್ತಾರೆ.
ಮತ್ತೆ ಭಿಕ್ಷುಗಳೇ, ಯಾವುದು ಅಮಾನವರಿಂದ ಹಿಡಿಯಲ್ಪಡುವುದು? ಇಲ್ಲಿ ಭಿಕ್ಷುಗಳೇ, ಕೆಲವರು ದೇವದೇವತೆಗಳ ನಡುವೆ ಜನ್ಮ ತಾಳುವ ಸಂಕಲ್ಪದಿಂದಾಗಿ ಬ್ರಹ್ಮಚರ್ಯ ಜೀವನ ಪಾಲಿಸುತ್ತಾರೆ. ಈ ಶೀಲದಿಂದ, ಈ ವ್ರತದಿಂದ, ಈ ತಪದಿಂದ ನಾನು ದೇವನಾಗಲಿ ಎಂದು ಇಚ್ಛಿಸುತ್ತಾರೆ. ಹೀಗೆ ಅಮಾನವರಿಂದ ಹಿಡಿಯಲ್ಪಡುತ್ತಾರೆ.
ಮತ್ತೆ ಸುಳಿಯಲ್ಲಿ ಸಿಲುಕುವುದೆಂದರೆ ಪಂಚೇಂದ್ರಿಯಗಳ ಸುಖದಲ್ಲಿ ತಲ್ಲೀನನಾಗುವಿಕೆಯಾಗಿದೆ. ಮತ್ತೆ ಕೊಳೆತು ಹೋಗುವಿಕೆ ಎಂದರೆ ದುಶ್ಶೀಲನಾಗುವಿಕೆ, ಸಂಶಯಸ್ಥ ವರ್ತನೆಯುಳ್ಳವನಾಗುವಿಕೆ, ರಹಸ್ಯ ಚಟುವಟಿಕೆಯಲ್ಲಿ ತೊಡಗುವಿಕೆ. ಬ್ರಹ್ಮಚರ್ಯೆಯು ಪ್ರತಿಜ್ಞೆಯಿದ್ದರೂ ಅದರೆ ಅದರಂತೆ ನಡೆಯಲಾರದವನು ತನ್ನಲ್ಲೇ ಕೊಳೆಯುವಂತಾಗುತ್ತಾನೆ.
ಆ ಸಂದರ್ಭದಲ್ಲಿ ನಂದನೆಂಬ ಗೋಪಾಲಕನು ಭಗವಾನರ ಹತ್ತಿರವಿದ್ದನು. ಅವನು ಭಗವಾನರೊಂದಿಗೆ ಹೀಗೆ ನುಡಿದನು: ಭಗವಾನ್, ನಾನು ಈ ದಡದಲ್ಲಿರುವುದಲ್ಲ, ಆ ದಡದಲ್ಲೂ ಇರುವುದಿಲ್ಲ, ಮಧ್ಯೆಯು ಮುಳುಗುವುದಿಲ್ಲ, ಉನ್ನತ ನೆಲದ ಮೇಲೆಯೂ ನಿಲ್ಲುವುದಿಲ್ಲ. ಹಾಗೆಯೇ ಮಾನವರಿಂದಲೂ ಹಿಡಿಯಲ್ಪಡುವುದಿಲ್ಲ, ಹಾಗೆಯೇ ಅಮಾನವರಿಂದಲೂ ಹಿಡಿಯಲ್ಪಡುವುದಿಲ್ಲ. ಸುಳಿಗೂ ಸಿಲುಕುವುದಿಲ್ಲ, ಆಂತರ್ಯದಲ್ಲಿ ಕೊಳೆಯುವುದಿಲ್ಲ, ನಾನು ಭಗವಾನರಿಂದ ಪಬ್ಬಜ್ಜವನ್ನು ಯಾಚಿಸುತ್ತಿದ್ದೇನೆ, ನನಗೆ ಉಪಸಂಪದವು ದೊರಯಲಿ.
ಹಾಗಾದರೆ ನಂದ, ಗೋವುಗಳನ್ನು ಅವುಗಳ ಯಜಮಾನರಿಗೆ ಹಿಂತಿರುಗಿಸು.
ಈ ಹಸುಗಳು ತಮ್ಮ ಕಂದಮ್ಮಗಳ ಮೇಲಿನ ಮಮಕಾರದಿಂದಾಗಿ ಸ್ವಸ್ಥಳಕ್ಕೆ ಹಿಂತಿರುಗುವುದು ಭಂತೆ.
ಗೋವುಗಳನ್ನು ಅವುಗಳ ಯಜಮಾನರಿಗೆ ಹಿಂತಿರುಗಿಸು ನಂದ.
ನಂತರ ನಂದ ಗೋಪಾಲಕನು ಗೋವಿನ ಯಜಮಾನರಿಗೆ ಗೋವುಗಳನ್ನು ಒಪ್ಪಿಸಿದನು. ನಂತರ ಭಗವಾನರಲ್ಲಿಗೆ ಹಿಂತಿರುಗಿದನು ಮತ್ತು ಹೀಗೆ ಹೇಳಿದನು: ಗೋವುಗಳು ಅವುಗಳ ಸ್ವಾಮಿಗೆ ಹಿಂತಿರುಗಿಸಿದ್ದೇನೆ. ಭಂತೆ, ನನಗೆ ಭಗವಾನರಿಂದ ಪಬ್ಬಜ್ಜ ಸಿಗುವುದೇ, ಉಪಸಂಪದ ಸಿಗುವುದೇ?
ಆಗ ನಂದ ಗೋಪಾಲಕನಿಗೆ ಭಗವಾನರಿಂದ ಪಬ್ಬಜ್ಜ ಉಪಸಂಪದ ಸಿಕ್ಕಿತು. ನಂತರ ಸ್ವಲ್ಪಕಾಲದಲ್ಲೇ ಏಕಾಂತದಲ್ಲಿ ವಾಸಿಸಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ, ದೃಢಪರಿಶ್ರಮಿಯಾಗಿ ಆಯುಷ್ಮಂತ ನಂದನು ಅರಹಂತರಲ್ಲಿ ಒಬ್ಬಾನಾದನು.



35.19.5 ದುತಿಯಾ ದಾರುಕ್ಖನ್ದೋಪಮ ಸುತ್ತಂ

242. ಒಮ್ಮೆ ಭಗವಾನರು ಕಿಂಬಿಲದಲ್ಲಿ (ಕಿಮ್ಮಿಲಾಯಂ)ದಲ್ಲಿ ಗಂಗಾನದಿಯ ದಡದಲ್ಲಿ ವಾಸಿಸುತ್ತಿದ್ದರು. ಆಗ ಗಂಗಾನದಿಯಲ್ಲಿ ದೊಡ್ಡ ಮರದ ದಿಮ್ಮಿಯು ವೇಗವಾಗಿ ಹೋಗುತ್ತಿರುವುದು ಕಂಡರು. ಆಗ ಅವರು ಭಿಕ್ಷುಗಳೊಂದಿಗೆ ಹೀಗೆ ನುಡಿದರು: ಭಿಕ್ಷುಗಳೇ, ಆ ಮರದ ದಿಮ್ಮಿಯು ಗಂಗೆಯ ಪ್ರವಾಹದ ಜೊತೆಗೆ ಹೋಗುತ್ತಿರುವುದು ಕಾಣುತ್ತಿರುವಿರಲ್ಲವೇ? - ಹೌದು ಭಂತೆ.... (ಹಿಂದಿನ ಸುತ್ತದಂತೆಯೇ ಸಂಭಾಷಣೆಯಿದೆ)...
ಭಿಕ್ಷುಗಳೇ, ಆಂತರ್ಯದಲ್ಲಿ ಕೊಳೆಯುವಿಕೆ ಎಂದರೇನು? ಇಲ್ಲಿ ಭಿಕ್ಷುವು ಕೆಲವು ತಪ್ಪು ಮಾಡುತ್ತಾನೆ. ಆದರೆ ಅದನ್ನು ತೋರಿಸಿಕೊಳ್ಳಲು, ಒಪ್ಪಲು ಸಿದ್ಧನಿರುವುದಿಲ್ಲ. ಇದೇ ಆಂತರ್ಯದ ಕೊಳೆಯುವಿಕೆಯಾಗಿದೆ.



35.19.6 ಅವಸ್ಸುತ ಪರಿಯಾಯ ಸುತ್ತಂ

243. ಒಮ್ಮೆ ಭಗವಾನರು ಶಾಕ್ಯರ ಕಪಿಲವತ್ಥುವಿನ ನಿಗ್ರೋಧ ಧಾಮದಲ್ಲಿ ವಾಸಿಸುತ್ತಿದ್ದರು. ಆ ಸಂದರ್ಭದಲ್ಲಿ ಕಪಿಲವಸ್ತುವಿನಲ್ಲಿ ಶಾಕ್ಯರ ಹೊಸ ಸಭಾಂಗಣವೊಂದು ನಿಮರ್ಾಣಗೊಂಡಿತ್ತು. ಅದು ಯಾವ ಸಮಣ ಬ್ರಾಹ್ಮಣರಿಂದಲೂ ಅಷ್ಟೇ ಏಕೆ ಯಾವ ಮಾನವರಿಂದಲೂ ಇನ್ನೂ ನೆಲೆಸಲ್ಪಟ್ಟಿರಲಿಲ್ಲ. ಆಗ ಕಪಿಲವಸ್ತುವಿನ ಶಾಕ್ಯರು ಭಗವಾನರ ಬಳಿಗೆ ಬಂದು ವಂದಿಸಿದರು. ನಂತರ ಒಂದೆಡೆ ಕುಳಿತು ಹೀಗೆ ನುಡಿದರು: ಭಂತೆ, ಹೊಸ ಸಭಾಂಗಣವನ್ನು ಕಪಿಲವತ್ಥುವಿನಲ್ಲಿ ನಿಮರ್ಿಸಿದ್ದೇನೆ. ಅದು ಇದುವರೆವಿಗೆ ಯಾವ ಸಮನ ಬ್ರಾಹ್ಮಣ, ಅಷ್ಟೇ ಏಕೆ ಯಾವ ಮಾನವರಿಂದಲೂ ಇನ್ನೂ ಬಳಸಲಾಗಿಲ್ಲ. ಭಂತೆ, ಭಗವಾನರು ಅದನ್ನು ಮೊದಲು ಬಳಸುವಂತಾಗಲಿ. ಯಾವಾಗ ಭಗವಾನರು ಅದನ್ನು ಮೊದಲು ಬಳಸುವರೋ ನಂತರ ಕಪಿಲವಸ್ತುವಿನ ಶಾಕ್ಯರು ಬಳಸುತ್ತಾರೆ. ಹೀಗಾಗಿ ಇದು ದೀರ್ಘಕಾಲ ಸುಖಕ್ಷೇಮಕ್ಕೆ ಕರೆದೊಯ್ಯುತ್ತದೆ.
ಭಗವಾನರು ಮೌನವಾಗಿ ಒಪ್ಪಿಗೆ ಸೂಚಿಸಿದರು. ನಂತರ ಶಾಕ್ಯರಿಗೆ ಭಗವಾನರ ಒಪ್ಪಿಗೆ ತಿಳಿಯಿತು. ಅವರು ತಮ್ಮ ಆಸನಗಳಿಂದ ಎದ್ದು ವಂದಿಸಿ ಭಗವಾನರ ಬಲಗಡೆಯಿಂದ ಪ್ರದಕ್ಷಿಣೆ ಮಾಡಿ ಅಲ್ಲಿಂದ ಸಂಭಾಂಗಣಕ್ಕೆ ಹೊರಟರು. ಅಲ್ಲಿ ಅವರು ಸಭಾಂಗಣವನ್ನು ಅದ್ಧೂರಿಯಾಗಿ ಸಿಂಗರಿಸಿದರು. ಹೂಗಳಿಂದ, ಪೀಠಗಳಿಂದ, ಅಗಲವಾದ ನೀರಿನ ಪಾತ್ರೆಗಳಿಂದ, ಎಣ್ಣೆ ದೀಪಗಳ ಜೋಡಣೆಯಿಂದ ಇತ್ಯಾದಿ ವಿಧಾನಗಳನ್ನು ಅನುಸರಿಸಿದರು. ನಂತರ ಅವರು ಭಗವಾನರ ಬಳಿಗೆ ಬಂದರು. ಭಗವಾನರಿಗೆ ವಿಷಯವೆಲ್ಲಾ ತಿಳಿಸಿ, ಭಗವಾನರು ತಮ್ಮ ಅನುಕೂಲಕ್ಕೆ ತಕ್ಕಂತೆ ಬರುವಂತಾಗಲಿ ಎಂದರು. ನಂತರ ಭಗವಾವರು ಚೀವರವನ್ನು ಸರಿಪಡಿಸಿಕೊಂಡು, ಪಿಂಡಪಾತ್ರೆಯನ್ನು ತೆಗೆದುಕೊಂಡು, ತಮ್ಮ ಸಂಘದೊಡನೆ ಹೊಸ ಸಭಾಂಗಣಕ್ಕೆ ಬಂದರು. ಅಲ್ಲಿ ಪಾದಗಳನ್ನು ತೊಳೆದುಕೊಂಡು ಆ ಸಭಾಂಗಣಕ್ಕೆ ಪ್ರವೇಶಿಸಿದರು. ನಂತರ ಪೂವರ್ಾಭಿಮುಖವಾಗಿರುವ ಮಧ್ಯದ ಸ್ಥಂಬಕ್ಕೆ ಮುಂಭಾಗದಲ್ಲಿ ಕುಳಿತರು. ನಂತರ ಭಿಕ್ಷುಗಳು ಪಾದಗಳನ್ನು ತೆಗೆದುಕೊಂಡು ಸಭಾಂಗಣವನ್ನು ಪ್ರವೇಶಿಸಿದರು ಹಾಗು ಪೂವರ್ಾಭಿಮುಖವಾಗಿ, ಪಶ್ಚಿಮದ ಗೋಡೆಯ ಮುಂಭಾಗ ಕುಳಿತರು. ನಂತರ ಕಪಿಲವಸ್ತುವಿನ ಶಾಕ್ಯರು ಪಾದಗಳನ್ನು ತೊಳೆದುಕೊಂಡು ಸಭಾಂಗಣ ಪ್ರವೇಶಿಸಿದರು ಹಾಗು ಪಶ್ಚಿಮಾಭಿಮುಖವಾಗಿರುವ ಪೂರ್ವದ ಗೋಡೆಗೆ ಮುಂಭಾಗದಲ್ಲಿ ಕುಳಿತರು.
ಅವರ ಎದುರಾಗಿ ಭಗವಾನರು ಇದ್ದರು. ನಂತರ ಭಗವಾನರು ಅವರಿಗೆ ಮಧ್ಯರಾತ್ರಿಯವರೆಗಿಗೂ ಧಮ್ಮೋಪದೇಶವನ್ನು ನೀಡಿದರು. ಅವರಿಗೆ ಶಿಕ್ಷಣ, ಪ್ರೇರೇಪಣೆ, ಸ್ಫೂತರ್ಿ, ಆನಂದವನ್ನು ನೀಡಿದರು. ನಂತರ ರಾತ್ರಿಯು ಮೀರುತ್ತಲೇ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೋಗಬಹುದು ಎಂದರು. ಆಯಿತು ಭಂತೆ ಎಂದು ಕಪಿಲವಸ್ತುವಿನ ಶಾಕ್ಯರು ಭಗವಾನರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ, ಅಲ್ಲಿಂದ ಹೊರಟರು.
ಅವರು ಹೋದನಂತರ ಭಗವಾನರು ಮೊಗ್ಗಲ್ಲಾನರವರಿಗೆ ಹೀಗೆ ನುಡಿದರು: ಮೊಗ್ಗಲ್ಲಾನ, ಭಿಕ್ಷು ಸಂಘವು ಜಡತೆ ಹಾಗು ಆಲಸ್ಯಗಳಿಂದ ಮುಕ್ತರಾಗಿದ್ದಾರೆ. ಹೀಗಾಗಿ ಅವರಿಗೆ ಧಮ್ಮೋಪದೇಶವನ್ನು ನೀಡು, ನನ್ನ ಬೆನ್ನು ನೋಯುತ್ತಿದೆ, ನಾನು ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ ಎಂದರು. ಮೊಗ್ಗಲ್ಲಾನರು ಆಯಿತು ಭಂತೆ ಎಂದರು. ನಂತರ ಭಗವಾನರು ಹೊರಚೀವರನ್ನು ನಾಲ್ಕು ಮಡಿಕೆ ಹಾಕಿ ನೆಲದಮೇಲೆ ಹಾಸಿ ಬಲಗಡೆ ತಿರುಗಿ ಸಿಂಹಶಯ್ಯೆಯಲ್ಲಿ ಮಲಗಿ ವಿಶ್ರಾಂತಿಯನ್ನು ತೆಗೆದುಕೊಂಡರು. ಸ್ಮೃತಿಯಿಂದ ಜಾಗರೂಕತೆಯಿಂದ ಏಳುವ ಸಮಯವನ್ನು ನಿಗದಿಪಡಿಸುತ್ತಾ ವಿಶ್ರಾಂತಿ ಪಡೆಯಲು ಆರಂಭಿಸಿದರು. ಆಗ ಮೊಗ್ಗಲ್ಲಾನರು ಭಿಕ್ಷುಗಳೊಂದಿಗೆ ಹೀಗೆ ಸಂಬೋಧಿಸಿದರು: ಆಯುಷ್ಮಂತರೇ... ಎಂದರು. ಆಗ ಭಿಕ್ಷುಗಳು ಆಯುಷ್ಮಾನ್ ಎಂದರು. ನಂತರ ಮೊಗ್ಗಲಾನರು ಹೀಗೆ ನುಡಿದರು.
ಹೇಗೆ ಭಿಕ್ಷುಗಳೇ, ಒಬ್ಬನು ಭ್ರಷ್ಟನಾಗುತ್ತಾನೆ (ಅವಸ್ಸುತೋ)? ಇಲ್ಲಿ ಒಬ್ಬನು ರೂಪಗಳನ್ನು ನೋಡುತ್ತಾ, ಪ್ರಿಯವಾದ ರೂಪಗಳನ್ನು ಕಾಣಲು ಬಯಸುತ್ತಾನೆ. ಹಾಗೆಯೇ ಅಪ್ರಿಯವಾದ ರೂಪಗಳನ್ನು ಕಾಣದಿರಲು ಬಯಸುತ್ತಾನೆ. ಆತನು ಕಾಯಗತಸ್ಮೃತಿಯು ಇಲ್ಲದೆ ಜೀವಿಸುತ್ತಾನೆ. ಹೀಗಾಗಿ ಆತನು ಪರಿಮಿತ ಚಿತ್ತದವನಾಗುತ್ತಾನೆ ಮತ್ತು ಆತನಿಗೆ ಚಿತ್ತವಿಮುಕ್ತಿಯು ಅರ್ಥವಾಗುವುದಿಲ್ಲ. ಪ್ರಜ್ಞಾವಿಮುಕ್ತಿಯು ಅರ್ಥವಾಗುವುದಿಲ್ಲ. ಅಂತಹವರಲ್ಲಿ ಹೇಗೆ ಅಕುಶಲ ಯೋಚನೆಗಳು ನಿಶ್ಶೇಷವಾಗಿ ಅಳಿಯುತ್ತವೆ? ಅದೇರೀತಿ ಒಬ್ಬನು ಶಬ್ದಗಳನ್ನು ಕೇಳುತ್ತ... ಮೂಗಿನಲ್ಲಿ ಗಂಧಗಳನ್ನು ಅಘ್ರಾಣಿಸುತ್ತಾ...ನಾಲಿಗೆಯಲ್ಲಿ ರುಚಿ ನೋಡುತ್ತಾ... ಕಾಯದಲ್ಲಿ ಸ್ಪಶರ್ಿಸುತ್ತಾ ಮನಸ್ಸಿನಲ್ಲಿ ಧಮ್ಮವನ್ನು ಗ್ರಹಿಸುತ್ತಾ ಪ್ರಿಯವಾದ ಮಾನಸಿಕ ಸ್ಥಿತಿಗಳಲ್ಲಿ ಆಕಷರ್ಿತನಾಗಿ, ಅಪ್ರಿಯ ಮಾನಸಿಕ ಸ್ಥಿತಿಗಳಲ್ಲಿ ದ್ವೇಷಿಸುತ್ತಾನೆ. ಆತನು ಕಾಯನುಸ್ಮೃತಿಯಲ್ಲಿ ಇರುವುದಿಲ್ಲ, ಪರಿಮಿತ ಚಿತ್ತದಿಂದಿರುತ್ತಾನೆ. ಅಂತಹವನಿಗೆ ಚಿತ್ತವಿಮುಕ್ತಿಯಾಗಲೀ, ಪ್ರಜ್ಞಾವಿಮುಕ್ತಿಯಾಗಲಿ ತಿಳಿಯದು. ಹಾಗಿರುವಾಗ ಅಂತಹವನಲ್ಲಿ ಹೇಗೆ ಅಕುಶಲ ಯೋಚನೆಗಳು ನಿಶ್ಶೇಷವಾಗಿ ನಾಶವಾಗುತ್ತವೆ? ಇದನ್ನೇ ಭಿಕ್ಷುಗಳೇ, ರೂಪಗಳನ್ನು ಗಮನಿಸುತ್ತ ಭ್ರಷ್ಟನಾಗಿರುವವ ಎನ್ನುತ್ತಾರೆ. ಶಬ್ದಗಳನ್ನು ಗಮನಿಸುತ್ತಾ... ಗಂಧಗಳನ್ನು ಆಘ್ರಾಣಿಸುತ್ತಾ... ರಸಗಳನ್ನು ಆಸ್ವಾದಿಸುತ್ತ... ಸ್ಪರ್ಶಗಳನ್ನು ಅನುಭವಿಸುತ್ತಾ... ಧಮ್ಮಗಳನ್ನು ಅರಿಯುತ್ತಾ ಭ್ರಷ್ಟನಾಗಿರುವವ ಎನ್ನುತ್ತಾರೆ. ಯಾವಾಗ ಭಿಕ್ಷುವು ಹೀಗೆ ವಿಹಿರಿಸುತ್ತಾನೆಯೋ ಆಗ ಮಾರನು ಕಣ್ಣಿನ ಮೂಲಕವಾಗಿ ಸಮೀಪಿಸುವನು. ಮಾರನು ಆತನಲ್ಲಿ ಪ್ರವೇಶಿಸಲು ಸಾಧ್ಯ ಮಾಡಿಕೊಳ್ಳುತ್ತಾನೆ. ಮಾರನು ಆತನನ್ನು ಹಿಡಿಯುತ್ತಾನೆ.  ಹೀಗೆ ಭಿಕ್ಷುವು ವಿಹರಿಸುವಾಗ ಮಾರನು ಕಿವಿಯ ಮೂಲಕವಾಗಿ ಸಮೀಪಿಸುವನು... ನಾಸಿಕದ ಮೂಲಕ... ನಾಲಿಗೆಯ ಮೂಲಕ... ಕಾಯದ ಮೂಲಕ... ಮನಸ್ಸಿನ ಮೂಲಕ ಸಮೀಪಿಸುವನು, ಪ್ರವೇಶಿಸುವನು, ಹಿಡಿಯುವನು.
ಊಹಿಸಿ ಭಿಕ್ಷುಗಳೇ, ಇಲ್ಲೊಂದು ಗುಡಿಸಲಿದೆ. ಅದು ಹುಲ್ಲಿನಿಂದ, ಬಳ್ಳಿಗಳಿಂದ, ಒಣಗಿದ ಕಡ್ಡಿಗಳಿಂದ ನಿಮರ್ಿತವಾಗಿದೆ. ಒಂದುವೇಳೆ ಪಂಜು ಹಿಡಿದ ಮನುಷ್ಯನೊಬ್ಬನು ಪಶ್ಚಿಮ ದಿಕ್ಕಿನಿಂದಾಗಲಿ, ಪೂರ್ವ ದಿಕ್ಕಿನಿಂದಾಗಲಿ, ಉತ್ತರ ದಿಕ್ಕಿನಿಂದಾಗಲಿ, ದಕ್ಷಿಣ ದಿಕ್ಕಿನಿಂದಾಗಲಿ, ಮೇಲಿನಿಂದಾಗಲಿ, ಕೆಳಗಿನಿಂದಾಗಲಿ ಯಾವ ದಿಕ್ಕಿನಿಂದ ಸಮೀಪಿಸಿದರೂ ಸಹಾ ಆತನ ಪಂಜಿನ ಜ್ವಾಲೆಯಿಂದಾಗಿ ಆ ಗುಡಿಸಲು ಹತ್ತಿಕೊಂಡು ಉರಿಯುವುದು. ಅದೇರೀತಿಯಲ್ಲಿ ಮಾರನು ಕಣ್ಣಿನ ಮೂಲಕವಾಗಿ, ಕಿವಿಯ ಮೂಲಕವಾಗಿ ಅಥವಾ ಯಾವುದೇ ಇಂದ್ರೀಯದ ಮೂಲಕ ಸಮೀಪಿಸಿದರೂ, ಪ್ರವೇಶಿಸಿದರೂ ಸಹಾ ಮಾರನು ಹಿಡಿಯುತ್ತಾನೆ. ಯಾವಾಗ ಭಿಕ್ಷುವು ಈ ರೀತಿಯಾಗಿ ಜೀವಿಸುವಾಗ ರೂಪಗಳು (ದೃಶ್ಯಗಳು) ಆತನನ್ನು ಸದೆಬಡಿಯುತ್ತವೆ. ಆದೆ ಆತನು ರೂಪಗಳನ್ನು ಸದೆಬಡಿಯಲಾರನು. ಶಬ್ದಗಳು ಆತನನ್ನು ಸದೆಬಡಿಯುತ್ತದೆ, ಆತನು ಶಬ್ದಗಳನ್ನು ಸದೆಬಡಿಯಲಾರನು. ಗಂದಗಳು ಆತನನ್ನು ಸದೆಬಡಿಯುತ್ತವೆ, ಆತನು ಗಂಧಗಳನ್ನು ಸದೆಬಡಿಯಲಾರನು. ರಸಗಳು ಆತನನ್ನು ಸದೆಬಡಿಯುತ್ತವೆ, ಆತನು ರಸಗಳನ್ನು ಸದೆಬಡಿಯಲಾರನು. ಸ್ಪರ್ಶಗಳು ಆತನನ್ನು ಸದೆಬಡಿಯುತ್ತವೆ, ಆತನು ಸ್ಪರ್ಶಗಳನ್ನು ಸದೆಬಡಿಯಲಾರನು. ಧಮ್ಮಗಳು ಆತನನ್ನು ಸದೆಬಡಿಯುತ್ತವೆ, ಆತನು ಧಮ್ಮಗಳನ್ನು ಸದೆಬಡಿಯಲಾರನು. ಹೀಗೆ ಆತನು ಸದೆಬಡಿಯಲ್ಪಡುತ್ತಾನೆ, ನಾಶಗೊಳ್ಳುತ್ತಾನೆ ಹೊರತು ಆತನು ನಾಶ ಮಾಡುವವನಾಗಲಿ, ಸದೆಬಡಿಯುವವನಾಗಲಿ ಆಗುವುದಿಲ್ಲ. ಅಕುಶಲವಾದ ಪಾಪಯುತ ಸ್ಥಿತಿಗಳು ಆತನನ್ನು ಆಕ್ರಮಿಸುತ್ತವೆ. ಹೀಗಾಗಿ ಆತನು ಕಲುಶಿತನಾಗುತ್ತಾನೆ. ಜನ್ಮಕ್ಕೆ ಗುರಿಯಾಗುತ್ತಾನೆ. ಪರಿಣಾಮವಾಗಿ ದುಃಖಗಳಿಗೆ ಬೀಳುತ್ತಾನೆ. ಜಾತಿ ಜರಾಮರಣಗಳಿಗೆ ಗುರಿಯಾಗುತ್ತಾನೆ. ಭಿಕ್ಷುಗಳೇ, ಈ ರೀತಿಯಾಗಿ ಆತನು ಭ್ರಷ್ಟನಾಗುತ್ತಾನೆ.
ಮತ್ತೆ ಹೇಗೆ ಆಯುಷ್ಮಂತರೇ, ಒಬ್ಬನು ಭ್ರಷ್ಟನಾಗುವುದಿಲ್ಲ? ಭಿಕ್ಷುಗಳೇ, ಇಲ್ಲಿ ಕಣ್ಣಿನಿಂದ ರೂಪಗಳನ್ನು (ದೃಶ್ಯಗಳನ್ನು) ನೋಡಿದರೂ, ಪ್ರಿಯವಾದ ರೂಪಗಳ ಬಗ್ಗೆ ಬಾಗುವುದಿಲ್ಲ. ಅಪ್ರಿಯವಾದ ರೂಪಗಳ ಬಗ್ಗೆ ದ್ವೇಷಿಸುವುದಿಲ್ಲ. ಹೀಗಾಗಿ ಆತನು ಕಾಯಗತಾಸ್ಮೃತಿಯಲ್ಲಿರುತ್ತಾನೆ. ಜಾಗರೂಕತೆಯಲ್ಲಿ ನೆಲೆಸುತ್ತಾನೆ. ಹೀಗಾಗಿ ಆತನು ಅಪರಿಮಿತ ಚಿತ್ತದವನಾಗುತ್ತಾನೆ ಮತ್ತು ಆತನು ಚಿತ್ತವಿಮುಕ್ತಿಯನ್ನು ಹಾಗು ಪ್ರಜ್ಞಾವಿಮುಕ್ತಿಯನ್ನು ಅರ್ಥಮಾಡಿಕೊಳ್ಳುತ್ತಾನೆ. ಹೀಗಾಗಿ ಆತನಲ್ಲಿ ಅಕುಶಲ ಮನೋಸ್ಥಿತಿಗಳು ನಿಶ್ಶೇಷವಾಗಿ ನಾಶವಾಗುತ್ತವೆ. ಅದೇರೀತಿಯಲ್ಲಿ ಕಿವಿಯ ಮೂಲಕವಾಗಿ... ನಾಸಿಕದ ಮೂಲಕವಾಗಿ... ನಾಲಿಗೆಯ ಮೂಲಕವಾಗಿ, ಕಾಯದ ಮೂಲಕವಾಗಿ... ಮನಸ್ಸಿನ ಮೂಲಕವಾಗಿ ಧಮ್ಮಗಳನ್ನು ಅರಿತರೂ ಭಿಕ್ಷುವು ಹೀಗೆ ವಿಹರಿಸುತ್ತಾನೆ. ಮಾರನೇನಾದರೂ ಕಣ್ಣಿನ ಮೂಲಕ ಸಮೀಪಿಸಿದರೂ ಆತನನ್ನು ಪ್ರವೇಶಿಸಲು ಸೋಲುತ್ತಾನೆ. ಆತನನ್ನು ಹಿಡಿಯಲು ಸೋಲುತ್ತಾನೆ. ಮಾರನೇನಾದರೂ ಕಿವಿಯ ಮೂಲಕ... ಮೂಗಿನ ಮೂಲಕ... ನಾಲಿಗೆಯ ಮೂಲಕ... ಕಾಯದ ಮೂಲಕ... ಮನಸ್ಸಿನ ಮೂಲಕವಾಗಿ ಸಮೀಪಿಸಿದರೂ ಆತನನ್ನು ಪ್ರವೇಶಿಸಲು ಸೋಲುತ್ತಾನೆ, ಆತನನ್ನು ಹಿಡಿಯಲು ಸೋಲುತ್ತಾನೆ.
ಊಹಿಸಿ ಭಿಕ್ಷುಗಳೇ, ಇಲ್ಲೊಂದು ಸುವ್ಯವಸ್ಥಿತವಾದ ಗೃಹವಿದೆ, ಅಥವಾ ಸಭಾಂಗಣವಿದೆ. ಅದು ದಪ್ಪನೆಯ ಜೇಡಿಮಣ್ಣಿನಿಂದ ಮತ್ತು ನವೀನವಾಗಿ ಗಟ್ಟಿಯಾಗಿ ಅಂಟುವಂತೆ ಲೇಪಿತವಾಗಿದೆ. ಅಲ್ಲಿಗೆ ವ್ಯಕ್ತಿಯೊಬ್ಬನು ಪೂರ್ವದಿಂದ ಅಥವಾ ಪಶ್ಚಿಮದಿಂದ ಅಥವಾ ಉತ್ತರದಿಂದ ಅಥವಾ ದಕ್ಷಿಣದಿಂದ ಅಥವಾ ಮೇಲಿನಿಂದ ಅಥವಾ ಕೆಳಗಿನಿಂದ ಯಾವುದೇ ದಿಕ್ಕಿನಿಂದ ಪಂಜಿನ ಸಮೇತ ಸಮೀಪಿಸಿದರೂ ಅಗ್ನಿಯು ಆ ಮನೆಗೆ ತಾಗಲಾರದು, ಅಗ್ನಿಯು ಪ್ರಚೋದಿತವಾಗಲಾರದು. ಅಗ್ನಿಯು ಅಂಟುವಲ್ಲಿ ವಿಫಲವಾಗುವುದು. ಅದೇರೀತಿ ಆಯುಷ್ಮಂತರೇ, ಯಾವಾಗ ಭಿಕ್ಷುವು ಈ ರೀತಿಯಲ್ಲಿ ವಿಹರಿಸಿದಾಗ ಮಾರನು ಕಣ್ಣಿನ ಮೂಲಕ... ಮನಸ್ಸಿನ ಮೂಲಕ ಸಮೀಪಿಸಬಹುದು. ಆದರೆ ಪ್ರವೇಶಿಸಲು ಸಾಧ್ಯವಿಲ್ಲ, ಹಿಡಿದಿಟ್ಟುಕೊಳ್ಳಲು ಸೋಲುತ್ತಾನೆ.
ಯಾವಾಗ ಭಿಕ್ಷುವು ಈ ರೀತಿಯಾಗಿ ವಿಹರಿಸುವನೋ ಆತನು ದೃಶ್ಯಗಳನ್ನು ದಮಿಸುತ್ತಾನೆ. ಆದರೆ ದೃಶ್ಯಗಳು ಆತನಿಗೆ ದಮಿಸಲಾರವು. ಆತನು ಶಬ್ದಗಳನ್ನು ದಮಿಸುತ್ತಾನೆ. ಆದರೆ ಶಬ್ದಗಳು ಆತನಿಗೆ ದಮಿಸಲಾರವು. ಆತನು ಗಂಧಗಳನ್ನು ದಮಿಸುತ್ತಾನೆ ಗಂಧಗಳು ಆತನನ್ನು ದಮಿಸಲಾರವು. ಆತನು ರಸಗಳನ್ನು ದಮಿಸುತ್ತಾನೆ ರಸಗಳು ಅತನನ್ನು ದಮಿಸಲಾರವು. ಆತನು ಸ್ಪರ್ಶಗಳನ್ನು ದಮಿಸುತ್ತಾನೆ, ಸ್ಪರ್ಶಗಳು ಆತನನ್ನು ದಮಿಸಲಾರವು. ಆತನು ಧಮ್ಮಗಳನ್ನು (ಮಾನಸಿಕ ವಿಷಯಗಳು) ದಮಿಸುತ್ತಾನೆ, ಧಮ್ಮಗಳು ಆತನನ್ನು ದಮಿಸಲಾರವು. ಆತನು ಪಾಪಯುತ ಅಕುಶಲ ಸ್ಥಿತಿಗಳನ್ನು, ಕಲ್ಮಶ ಉತ್ಪನ್ನಕಾರಿಗಳನ್ನು, ಯಾವುವು ಭವಕ್ಕೆ ತಳ್ಳುವುದು, ವಿಪತ್ತುಕಾರಿಗಳನ್ನು, ದುಃಖಫಲಗಳನ್ನು, ಜನ್ಮಜರಾಮರಣ ನೀಡುವುದನ್ನು ದಮಿಸುತ್ತಾನೆ. ಭಿಕ್ಷುಗಳೇ, ಈ ರೀತಿಯಾಗಿ ಒಬ್ಬನು ಭ್ರಷ್ಟಾತೀತನಾಗುತ್ತಾನೆ.
ಆಗ ಭಗವಾನರು ಎದ್ದರು ಹಾಗು ಮೊಗ್ಗಲಾನರಿಗೆ ಹೀಗೆ ಪ್ರಶಂಸಸಿದರು. ಸಾಧು, ಸಾಧು ಮೊಗ್ಗಲಾನ, ಭ್ರಷ್ಟವಾಗುವಿಕೆಯ ಬಗ್ಗೆ ಅದರ ವಿರುದ್ಧವಾದ ಅಭ್ರಷ್ಟತೆಯ ಬಗ್ಗೆ ಭಿಕ್ಷುಗಳಿಗೆ ಚೆನ್ನಾಗಿ ವಿವರಿಸಿರುವೆ. ಹೀಗೆ ಮಹಾಮೊಗ್ಗಲಾನರು ಬೋಧಿಸಿದರು. ಭಗವಾನರು ಸಮ್ಮತಿ ವ್ಯಕ್ತಪಡಿಸಿದರು. ಭಿಕ್ಷುಗಳು ಸಹಾ ಆನಂದಿಸಿದರು.


35.19.7 ದುಃಖಧಮ್ಮ ಸುತ್ತಂ

244. ಭಿಕ್ಷುಗಳೇ, ಯಾವಾಗ ಭಿಕ್ಷುವು ದುಃಖಕಾರಿಗಳ ಉದಯವನ್ನು ಹಾಗು ಅಳಿಯುವಿಕೆಯನ್ನು ಯಥಾಭೂತವಾಗಿ ಅರ್ಥಮಾಡಿಕೊಳ್ಳುವನೋ, ಆಗ ಅವನಿಗೆ ಪರರ ಕಾಮಸುಖಗಳು ಈ ರೀತಿಯಾಗಿ ಕಾಣುತ್ತವೆ. ಆಗ ಅವು ಕಾಮಗಳ ಆಸೆ, ಕಾಮಗಳಲ್ಲಿ ಸ್ನೇಹತೆ, ಕಾಮಗಳಲ್ಲಿ ಭಾವಾವೇಶ, ಕಾಮಜ್ವರ ಇತ್ಯಾದಿ. ಆಗ ಇಂದ್ರೀಯ ಸುಖಗಳು ಆತನಲ್ಲಿ ಸೂಪ್ತವಾಗಿ ಉಳಿಯಲಾರದು. ಆಗ ಆತನು ಪುನಃ ಪಾಪಯುತ ಅಕುಶಲ ದುಸ್ಥಿತಿಗಳು ಪುನಃ ಆಕ್ರಮಿಸದಂತೆ ಅಂತಹ ಚಾರಿತ್ರ ಹಾಗು ಧ್ಯಾನದಲ್ಲಿ ವಿಹರಿಸುವಿಕೆ ಸ್ಥಾಪಿಸುತ್ತಾನೆ.
ಮತ್ತೆ ಭಿಕ್ಷುಗಳೇ, ಹೇಗೆ ಭಿಕ್ಷುವು ದುಃಖಕಾರಿಗಳ ವಿಷಯಗಳನ್ನು ಅವುಗಳ ಯಥಾಭೂತ ಸ್ಥಿತಿಯಂತೆಯೇ ಅರಿಯುತ್ತಾನೆ. ಹೇಗೆಂದರೆ ಆತನು ರೂಪವು ಹೀಗಿದೆ, ಇದು ರೂಪದ ಉದಯವು, ಇದು ರೂಪದ ಅಳಿವು, ವೇದನೆಗಳು ಹೀಗಿವೆ... ಸಂಜ್ಞೆಗಳು ಹೀಗಿವೆ... ಸಂಖಾರಗಳು ಹೀಗಿವೆ... ವಿಞ್ಞಾಣಗಳು ಹೀಗಿವೆ... ವಿಞ್ಞಾಣದ ಉದಯವು ಹೀಗೆ, ವಿಞ್ಞಾಣದ ಅಳಿವು ಹೀಗೆ ಎಂದು ಅರಿಯುತ್ತಾನೆ. ಹೀಗೆ ಭಿಕ್ಷುಗಳನ್ನು ಭಿಕ್ಷುವು ದುಃಖಕಾರಿ ವಿಷಯಗಳನ್ನು ಅವುಗಳ ಯಥಾಭೂತ ಸ್ಥಿತಿಯಲ್ಲಿ ಅರಿಯುತ್ತಾನೆ.
ಯಾವರೀತಿ ಭಿಕ್ಷುವು ಕಾಮಗಳನ್ನು ದಶರ್ಿಸುತ್ತಾನೆ? ಯಾವರೀತಿಯಲ್ಲಿ ಕಾಮವು ಸ್ಪಶರ್ಿಸುತ್ತವೆ. ಯಾವರೀತಿಯಲ್ಲಿ ಕಾಮೇಚ್ಚೆಗಳು ಉದಯಿಸುತ್ತವೆ, ಯಾವರೀತಿಯಲ್ಲಿ ಕಾಮಗಳಲ್ಲಿ ಸ್ನೇಹವು ಬಲಯುತವಾಗುವುದು, ಭಾವಾವೇಶವಾಗುವುದು, ಜ್ವರದಂತೆ ಪೀಡಿಸುವುದು ಇತ್ಯಾದಿಗಳನ್ನು ಕಂಡಾಗ ಆತನಲ್ಲಿ ಕಾಮಸುಖಗಳು ಉಳಿಯಲಾರವು. ಹೇಗೆಂದರೆ ಒಬ್ಬ ಮನುಷ್ಯನ ಎತ್ತರದ ಹಳ್ಳದಲ್ಲಿ ಕೆಂಡಗಳನ್ನು ಹಾಕಿ ಬೆಂಕಿಯು ಪ್ರಜ್ವಲಿಸುತ್ತ ಹೊಗೆಯು ಬರುತ್ತಿರುತ್ತದೆ. ಆಗ ಜೀವಿಸಲು ಇಚ್ಛಿಸುವ ಕಷ್ಟಗಳನ್ನು ಸ್ವಲ್ಪವೂ ಇಷ್ಟಪಡದಿರುವ ವ್ಯಕ್ತಿಯನ್ನು ಇಬ್ಬರು ಬಲಿಷ್ಠ ವ್ಯಕ್ತಿಗಳು ಆ ಕೆಂಡಗಳ ಹಳ್ಳಕ್ಕೆ ಎಳೆದೊಯ್ದರೆ, ಆ ಮನುಷ್ಯನು ತಪ್ಪಿಸಿಕೊಳ್ಳು ತನ್ನ ದೇಹವನ್ನು ತಿರುಗಿಸುತ್ತಾ ಬಹಳ ಹೆಣಗಾಡುತ್ತಾನೆ. ಏಕೆ? ಏಕೆಂದರೆ ಆತನಿಗೆ ಗೊತ್ತಿದೆ. ನಾನು ಈ ಕೆಂಡದಲ್ಲಿ ಬಿದ್ದರೆ, ನಾನು ಮೃತ್ಯುವಿಗೆ ವಶವಾಗುತ್ತೇನೆ. ಅಥವಾ ನರಕದಂತಹ ದುಃಖವನ್ನು ಅನುಭವಿಸುತ್ತೇನೆ ಎಂದು. ಅದೇರೀತಿಯಲ್ಲಿ ಭಿಕ್ಖುಗಳೇ, ಕಾಮಸುಖಗಳನ್ನು ಕಂಡಾಗ ಕೆಂಡದ ಹಳ್ಳದಂತೆಯೇ ಭಯಭೀತನಾಗುತ್ತಾನೆ. ಅದೇರೀತಿ ಕಾಮಗಳ ಆಸೆ, ಕಾಮಗಳ ಸ್ನೇಹ, ಕಾಮಗಳ ಭಾವಾವೇಶ, ಕಾಮಗಳ ಜ್ವರಗಳನ್ನು ಕಂಡಾಗ ಕೆಂಡಗಳ ಹಳ್ಳದಂತೆಯೇ ಭಯಭೀತನಾಗುತ್ತಾನೆ.
ಮತ್ತೆ ಭಿಕ್ಷುವು ಚಾರಿತ್ರ್ಯವಿದ್ದರೆ, ವರ್ತನೆಗಳಿದ್ದರೆ, ಯಾವರೀತಿಯಲ್ಲಿ ಜೀವಿಸಿದರೆ, ಆತನಲ್ಲಿ ಪಾಪಯುತವಾದ ದುರಾಸೆ ಇತರ ಅಕುಶಲ ಸ್ಥಿತಿಗಳು ಉದಯಿಸುವುದಿಲ್ಲ? ಊಹಿಸಿರಿ, ವ್ಯಕ್ತಿಯೊಬ್ಬನು ಮುಳ್ಳುಗಳುಳ್ಳ ಕಾಡಿನಲ್ಲಿ ಪ್ರವೇಶಿಸಿದ್ದಾನೆ. ಆಗ ಆತನಿಗೆ ಮುಂದೆಯು ಮುಳ್ಳುಗಳು, ಹಿಂದೆಯು ಮುಳ್ಳುಗಳು, ಎಡಪಕ್ಕದಲ್ಲಿ ಮುಳ್ಳುಗಳು, ಬಲಪಕ್ಕದಲ್ಲಿ ಮುಳ್ಳುಗಳು, ಕೆಳಭಾಗದಲ್ಲಿ ಮುಳ್ಳುಗಳು ಹಾಗು ಮೇಲ್ಭಾಗದಲ್ಲಿ ಮುಳ್ಳುಗಳು ಇರುತ್ತವೆ. ಆಗ ಆತನು ಅತ್ಯಂತ ಜಾಗರೂಕತೆಯಿಂದ ಮುಂದಕ್ಕೆ ಚಲಿಸಬೇಕಾಗುತ್ತದೆ. ಆಗ ಆತನು ಹೀಗೆ ಯೋಚಿಸುತ್ತಿರುತ್ತಾನೆ: ಯಾವ ಮುಳ್ಳು ಸಹಾ ನನಗೆ ಚುಚ್ಚದಿರಲಿ. ಅದೇರೀತಿಯಲ್ಲಿ ಭಿಕ್ಷುಗಳೇ, ಈ ಲೋಕದಲ್ಲಿ ಪ್ರಿಯವಾದುದು ಒಪ್ಪುವಂತಹುದು ಏನೆಲ್ಲಾ ಇವೆಯೋ ಅವೆಲ್ಲವೂ ಆರ್ಯರ ವಿನಯದಲ್ಲಿ ಮುಳ್ಳುಗಳೇ ಆಗಿವೆ. ಈ ರೀತಿಯಾಗಿ ಚಿಂತನೆ ಮಾಡಿದ ವ್ಯಕ್ತಿಯು ಎಲ್ಲಿ ನಿಗ್ರಹದಿಂದಿರಬೇಕು ಮತ್ತು ಎಲ್ಲಿ ಇರಬಾರದು ಎಂದು ಅರ್ಥಮಾಡಿಕೊಳ್ಳುತ್ತಾನೆ.
ಮತ್ತೆ ಹೇಗೆ ಭಿಕ್ಷುಗಳೇ, ಅಸಂಯಮವು ಇರುತ್ತದೆ? ಇಲ್ಲಿ ಕಣ್ಣಿನಿಂದ ರೂಪವನ್ನು ನೋಡಿ ಭಿಕ್ಷುವು ಪ್ರಿಯರಾದ ದೃಶ್ಯಗಳಿಗೆ ಆಕಷರ್ಿತನಾಗುತ್ತಾನೆ ಮತ್ತು ಅಪ್ರಿಯ ವಿಷಯಗಳಿಗೆ ಅಸಂತುಷ್ಟನಾಗುತ್ತಾನೆ. ಆತನು ಕಾಯದಲ್ಲಿ ಜಾಗ್ರತೆಯಿಂದಿರುವುದಿಲ್ಲ. ಪರಿಮಿತವಾದ ಮನಸ್ಸಿನಿಂದ ಕೂಡಿರುತ್ತಾನೆ. ಆತನಿಗೆ ಚಿತ್ತವಿಮುಕ್ತಿಯಾಗಲಿ, ಪ್ರಜ್ಞಾವಿಮುಕ್ತಿಯಾಗಲಿ ಅರ್ಥಮಾಡಿಕೊಳ್ಳುವುದಿಲ್ಲ. ಹೀಗಿರುವಾಗ ಅಂತಹ ಅಕುಶಲ ಚಿತ್ತಸ್ಥಿತಿಗಳು ನಿಶ್ಶೇಷವಾಗಿ ಹೇಗೆತಾನೆ ನಿರೋಧಗೊಳ್ಳುವುದು? ಅದೇರೀತಿಯಲ್ಲಿ ಆತನು ಕಿವಿಯಿಂದ ಶಬ್ದಗಳನ್ನು ಆಲಿಸುವಾಗ... ನಾಸಿಕದಿಂದ ಗಂಧಗಳನ್ನು ಆಘ್ರಾಣಿಸುವಾಗ... ನಾಲಿಗೆಯಿಂದ ರಸಗಳನ್ನು ಆಸ್ವಾದಿಸುವಾಗ... ಕಾಯದಿಂದ ಸ್ಪಶರ್ಿಸುವಾಗ... ಮನಸ್ಸಿನಿಂದ ಅರಿಯುವಾಗ ಆತನು ಪ್ರಿಯವಾದ ಮಾನಸಿಕ ವಿಷಯಗಳಿಗೆ ಆಕಷರ್ಿತನಾಗುತ್ತಾನೆ. ಹಾಗು ಅಪ್ರಿಯವಾದ ಮಾನಸಿಕ ವಿಷಯಗಳಿಗೆ ವಿರೋಧ ವ್ಯಕ್ತಪಡಿಸುತ್ತಾನೆ. ಆತನು ಕಾಯದ ಚಟುವಟಿಕೆಗಳಲ್ಲಿ ಜಾಗ್ರತೆಯಿಂದ ಇರುವುದಿಲ್ಲ. ಪರಿಮಿತವಾದ ಮನಸ್ಸಿನಿಂದ ಕೂಡಿರುತ್ತಾನೆ. ಆತನು ಚಿತ್ತವಿಮುಕ್ತಿಯನ್ನಾಗಲಿ, ಪ್ರಜ್ಞಾವಿಮುಕ್ತಿಯನ್ನಾಗಲಿ ಅರ್ಥಮಾಡಿಕೊಳ್ಳುವುದಿಲ್ಲ. ಹೀಗಿರುವಾಗ ಅಂತಹ ಅಕುಶಲಚಿತ್ತ ಸ್ಥಿತಿಗಳು ನಿಶ್ಶೇಷವಾಗಿ ಹೇಗೆತಾನೆ ನಿರೋಧಗೊಳ್ಳುವುದು. ಹೀಗೆ ಅಸಂಯಮಿಯ ಮಾರ್ಗವು ಇರುತ್ತದೆ.
ಮತ್ತೆ ಹೇಗೆ ಭಿಕ್ಷುಗಳೇ ಸಂಯಮಿಯು ಇರುತ್ತಾನೆ? ಇಲ್ಲಿ ಭಿಕ್ಷುವು ಕಣ್ಣಿನಿಂದ ರೂಪಗಳನ್ನು ನೋಡುವಾಗ ದೃಶ್ಯಗಳು ಪ್ರಿಯವಾಗಿದ್ದರೆ ಆಕಷರ್ಿತನಾಗುವುದಿಲ್ಲ. ದೃಶ್ಯಗಳು ಅಪ್ರಿಯವಾಗಿದ್ದರೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆತನು ಕಾಯದಲ್ಲಿ ಜಾಗ್ರತೆಯಿಂದ ವಿಹರಿಸುತ್ತಾನೆ. ಆತನ ಮನಸ್ಸು ಅಪರಿಮಿತವಾಗುವುದು. ಆತನು ಚಿತ್ತವಿಮುಕ್ತಿಯನ್ನು ಮತ್ತು ಪ್ರಜ್ಞಾವಿಮುಕ್ತಿಯನ್ನು ಅರ್ಥಮಾಡಿಕೊಳ್ಳುತ್ತಾನೆ. ಹೀಗಿರುವಾಗ ಆತನಲ್ಲಿರುವ ಪಾಪಯುತವಾದ ಅಕುಶಲ ಚಿತ್ತಗಳು ನಿಶ್ಶೇಷವಾಗಿ ನಾಶವಾಗುವುದು. ಹೀಗೆ ಸಂಯಮಿಯ ಮಾರ್ಗವಿರುತ್ತದೆ.
ಯಾವಾಗ ಭಿಕ್ಷುವು ಈ ರೀತಿಯಲ್ಲಿ ವಿಹರಿಸುವಾಗ ಈ ರೀತಿಯ ವರ್ತನೆಯಲ್ಲಿದ್ದಾಗ, ಕೆಲವೊಮ್ಮೆ ಅಜಾಗರೂಕತೆಯಿಂದಾಗಿ ಪಾಪಯುತ ಅಕುಶಲ ನೆನಪುಗಳು ಮತ್ತು ಇಚ್ಛೆಗಳು ಹಾಗು ಅಂತಹುದಕ್ಕೆ ಸಂಬಂದಪಟ್ಟಂತಹ ಸಂಕೋಲೆಗಳು ಉದಯಿಸುವುವು. ಆತನಲ್ಲಿ ಜಾಗರೂಕತೆಯು ನಿಧಾನವಾಗಿ ಉದಯಿಸಿದರೂ ಆತನು ಕ್ಷಣಾರ್ಧದಲ್ಲಿ ಅವನ್ನೆಲ್ಲಾ ತೊರೆಯುವನು, ದೂರೀಕರಿಸುವನು. ಅವುಗಳ ಅಂತ್ಯ ಮಾಡುವನು, ಅಳಿಸಿಹಾಕುವನು. ಇದು ಹೇಗಿರುತ್ತದೆ ಎಂದರೆ ಇಡೀ ದಿನವೆಲ್ಲಾ ಕಾದಂತಹ ಕಬ್ಬಿಣದ ತಟ್ಟೆಯ ಮೇಲೆ ಎರಡು ಅಥವಾ ಮೂರು ನೀರಿನ ಬಿಂದುಗಳನ್ನು ಚಿಮುಕಿಸಿದಾಗ, ತಕ್ಷಣವೇ ಪರಿಣಾಮ ಬೀರದು. ನಂತರ ಕ್ಷಣಾರ್ಧದಲ್ಲಿ ಆವಿಯಾಗಿ ಮಾಯವಾಗುವುದು. ಅದೇರೀತಿಯಲ್ಲಿ ಭಿಕ್ಷುವು ಈ ರೀತಿಯಲ್ಲಿ ವಿಹರಿಸುವಾಗ, ವತರ್ಿಸುವಾಗ ಆತನ ಜಾಗರೂಕತೆಯು ನಿಧಾನವಾಗಿ ಆರಂಭವಾಗುವುದು. ಆದರೆ ನಂತರ ಆತನು ಅತಿವೇಗವಾಗಿ ಅವನ್ನೆಲ್ಲಾ ತ್ಯಜಿಸಿಬಿಡುವನು, ದೂರೀಕರಿಸುವನು, ಅಂತ್ಯಮಾಡುವನು ಮತ್ತು ಅಳಿಸಿಹಾಕುವನು. ಹೀಗೆ ಭಿಕ್ಷುವು ಈ ರೀತಿಯಲ್ಲಿ, ಈ ವಿಧಾನದಲ್ಲಿ ಜೀವಿಸುವಾಗ, ವ್ಯವಹರಿಸುವಾಗ, ಅತನಲ್ಲಿ ಪಾಪಯುತವಾದ ಅಕುಶಲ ಚಿತ್ತಸ್ಥಿತಿಗಳಿಂದ ದುರಾಸೆ ಹಾಗು ದ್ವೇಷಗಳು ಆತನನ್ನು ಅಪ್ಪಳಿಸಲಾರವು.
ಯಾವಾಗ ಭಿಕ್ಷುವು ಹೀಗೆ ತನ್ನನ್ನು ನಿಯಂತ್ರಿಸಿಕೊಂಡು ಜೀವಿಸುವನೋ, ಆಗ ರಾಜರು, ಮಂತ್ರಿಗಳು, ಮಿತ್ತರರು, ಸಹೋದ್ಯೋಗಿಗಳು, ಬಂಧುಗಳು, ಇನ್ನಿತರರು ಆತನಿಗೆ ಐಶ್ವರ್ಯ ಸ್ವೀಕರಿಸುವಂತೆ ಆಹ್ವಾನಿಸುವರು ಹಾಗು ಹೀಗೆ ಹೇಳುವರು: ಬಾ ಉತ್ತಮ ಮನುಷ್ಯನೇ, ಏತಕ್ಕಾಗಿ ಕಾಷಾಯ ಧರಿಸಿರುವೆ? ಇಳಿಸಬಾರದೇಕೆ? ಏತಕ್ಕಾಗಿ ಪಿಂಡಪಾತ್ರೆ ಹಿಡಿದು ಆಹಾರಕ್ಕೆ ಅಲೆದಾಡುತ್ತಿರುವೆ? ಬಾ, ಗೃಹಸ್ಥನಾಗಿ ಹಿಂತಿರುಗು, ಐಶ್ವರ್ಯವನ್ನು ಅನುಭವಿಸು. ದಾನಾದಿಗಳನ್ನು ಮಾಡಿ, ಪುಣ್ಯವನ್ನು ಸಂಪಾದಿಸು. ನಿಜಕ್ಕೂ ಭಿಕ್ಷುಗಳೇ, ಯಾವಾಗ ಭಿಕ್ಷುವು ಈ ರೀತಿಯ ಉನ್ನತ ಜೀವನದ ಪಾಲನೆಯಲ್ಲಿರುತ್ತಾನೋ ಅಂತಹ ಈ ಶ್ರೇಷ್ಠಜೀವನ ತ್ಯಜಿಸಿ ಗೃಹಸ್ಥನಾಗಿ ಮರಳುವುದು ಅಸಾಧ್ಯವಾಗಿದೆ.
ಊಹಿಸಿ ಭಿಕ್ಷುಗಳೇ, ಯಾವಾಗ ಗಂಗಾನದಿಯು ಇಳಿಜಾರಿನಲ್ಲಿ ಜಾರುತ್ತ, ಹರಿಯುತ್ತ, ಬಾಗುತ್ತ ಪೂರ್ವದ ಕಡೆಗೆ ಹರಿಯುತ್ತಿರುತ್ತದೆ. ಆಗ ಅಲ್ಲಿಗೆ ಅತಿದೊಡ್ಡ ಗುಂಪೊಂದು ಸಲಿಕೆ ಹಾಗು ಬುಟ್ಟಿಗಳನ್ನು ತೆಗೆದುಕೊಂಡು ಹೀಗೆ ಯೋಚಿಸುತ್ತಾನೆ: ನಾನು ಗಂಗಾನದಿಯ ಇಳಿಜಾರನ್ನು ಬದಲಿಸುತ್ತೇನೆ, ಬಾಗುವಿಕೆಯನ್ನು ಬದಲಿಸುತ್ತೇನೆ, ಗಂಗಾನದಿಯು ಪಶ್ಚಿಮದ ಕಡೆಗೆ ಹರಿಯುವಂತೆ ಮಾಡುತ್ತೇನೆ ಎಂದು ಹೇಳುತ್ತಾರೆ. ಭಿಕ್ಷುಗಳೇ, ಇದು ಸಾಧ್ಯವೇ? ಇಲ್ಲ ಭಂತೆ. - ಕಾರಣವೇನು? - ಏಕೆಂದರೆ, ಗಂಗೆಯ ಇಳಕಲು, ಇಳಿಜಾರುಗಳು, ಬಾಗುವಿಕೆ ಎಲ್ಲವೂ ಪೂರ್ವದ ಕಡೆಗೆ ಬಾಗಿದೆ. ಅದನ್ನು ಪಶ್ಚಿಮದತ್ತ ಬಾಗಿಸಲು ಸುಲಭವಾದ ಮಾತಲ್ಲ. ಆ ಗುಂಪು ದಣಿವನ್ನು, ವ್ಯರ್ಥ ಶ್ರಮವನ್ನು ಕೈಗೆ ತೆಗೆದುಕೊಂಡಿದೆ.
ಅದೇರೀತಿಯಲ್ಲಿ ಭಿಕ್ಷುಗಳೇ, ಯಾವ ಭಿಕ್ಷುವು ಹೀಗೆ ಸಂಯಮದಿಂದ ವಿಹರಿಸುತ್ತಾನೆಯೋ, ಅಂತಹವನಿಗೆ ರಾಜನು, ಮಂತ್ರಿಗಳು, ಮಿತ್ರರು, ಅಮಾತ್ಯರು, ಸಂಬಂಧಿಕರು, ಇನ್ನಿತರರು ಹೀಗೆ ಹೇಳುತ್ತಾರೆ: ಓ ಉತ್ತಮ ಪುರುಷನೆ, ಕಾಷಾಯವಸ್ತ್ರವೇಕೆ ಧರಿಸಿರುವೆ? ಇಳಿಸಬಾರದೇಕೆ? ಪಿಂಡಪಾತ್ರೆಯನ್ನು ಹಿಡಿದು ಅಲೆದಾಡುತ್ತಿರುವೆಯೇಕೆ? ಬಾ, ಗೃಹಸ್ಥನಾಗಿ ಹಿಂತಿರುಗು. ಐಶ್ವರ್ಯವನ್ನು ಅನುಭವಿಸು, ದಾನಾದಿಗಳನ್ನು ಮಾಡಿ ಪುಣ್ಯವನ್ನು ಗಳಿಸು. ಆದರೆ ಆ ದೃಢ ಸಾಧಕನು ಉನ್ನತವಾದ ಧಮ್ಮಶಿಕ್ಷಣವನ್ನು ಬಿಟ್ಟು ಕೆಳಮಟ್ಟದ ಗೃಹಸ್ಥ ಜೀವನವನ್ನು ಮಾಡಲು ಅಸಾಧ್ಯವಾಗಿದೆ. ಕಾರಣವೇಕೆ? ಏಕೆಂದರೆ ಬಹುಕಾಲದಿಂದ ಆತನ ಮನಸ್ಸು ಏಕಾಂತತೆಯೆಡೆಗೆ ಬಾಗಿದೆ, ತಿರುಗಿದೆ, ಹರಿದಿದೆ. ಆದ್ದರಿಂದಾಗಿ ಆತನು ಉನ್ನತ ಜೀವನವನ್ನು ಬಿಟ್ಟು ಕೆಳಮಟ್ಟದ ಜೀವನದೆಡೆಗೆ ಹೋಗುವುದು ಆತನಿಗೆ ಅಸಾಧ್ಯವಾಗಿದೆ.


35.19.8 ಕಿಂಸುಕೋಪಮ ಸುತ್ತಂ (ಕಿಂಸುಕ ವೃಕ್ಷದ ಉಪಮೆಯ ಸುತ್ತ)

245. ಒಮ್ಮೆ ಒಬ್ಬ ಭಿಕ್ಷುವು ಇನ್ನೊಬ್ಬ ಭಿಕ್ಷುವಿನ ಬಳಿಗೆ ಹೋದನು. ನಂತರ ಹೀಗೆ ಕೇಳಿದನು: ಯಾವ ರೀತಿಯಲ್ಲಿ ಭಿಕ್ಷುವಿನ ದರ್ಶನವು ಸುವಿಶುದ್ಧವಾಗುವುದು? ಅದಕ್ಕೆ ಆ ಭಿಕ್ಷುವು ಹೀಗೆ ಉತ್ತರಿಸಿದನು: ಮಿತ್ರನೇ, ಯವಾಗ ಭಿಕ್ಷುವು ಪಂಚ ಉಪಾದಾನ ಖಂದಗಳನ್ನು (ಶರೀರ ಹಾಗು ಮನಸ್ಸಿನ ಅಂಟುವಿಕೆಯ ರಾಶಿಯನ್ನು) ಉದಯ ವ್ಯಯಗಳನ್ನು ಯಥಾಭೂತವಾಗಿ ಅರಿಯುವನೋ ಆಗ ಅತನ ದರ್ಶನವು ಸುವಿಶುದ್ಧವಾಗುವುದು.
ಆದರೆ ಈ ಉತ್ತರದಿಂದಲೂ ಮೊದಲನೆಯ ಭಿಕ್ಷುವು ಅಸಂತುಷ್ಟನಾಗಿ ಇನ್ನೊಬ್ಬ ಭಿಕ್ಷುವಿನ ಬಳಿಯಲ್ಲಿ ಹೀಗೆ ಪ್ರಶ್ನಿಸಿದನು: ಯಾವ ರೀತಿಯಲ್ಲಿ ಮಿತ್ರನೇ, ಭಿಕ್ಷುವಿನ ದರ್ಶನವು ಸುವಿಶುದ್ಧವಾಗುವುದು? - ಮಿತ್ರನೇ, ಯಾವಾಗ ಭಿಕ್ಷುವು ನಾಲ್ಕು ಮಹಾಭೂತಗಳ ಉದಯ ಹಾಗು ಅಳಿವನ್ನು ಯಥಾಭೂತವಾಗಿ ಅರಿಯುವನೋ ಆಗ ಅವನ ದರ್ಶನವು ಸುವಿಶುದ್ಧವಾಗುವುದು ಎಂದು ಉತ್ತರಿಸಿದನು.
ಆದರೆ ಈ ಉತ್ತರದಿಂದಲೂ ಮೊದಲನೆಯ ಭಿಕ್ಷುವು ಅಸಂತುಷ್ಟನಾಗಿ ಇನ್ನೊಬ್ಬ ಭಿಕ್ಷುವಿನ ಬಳಿಯಲ್ಲಿ ಹೀಗೆ ಪ್ರಶ್ನಿಸಿದನು: ಮಿತ್ರನೇ, ಯಾವರೀತಿಯಲ್ಲಿ ಭಿಕ್ಷುವಿನ ದರ್ಶನವು ಸುವಿಶುದ್ಧವಾಗುವುದು? - ಮಿತ್ರನೇ, ಯಾವಾಗ ಭಿಕ್ಷುವು ಯಾವುದೆಲ್ಲವೂ ಉದಯವಾಗುವುದಕ್ಕೆ ಒಳಪಟ್ಟಿದೆಯೋ ಅವೆಲ್ಲವೂ ನಿರೋಧ ಧಮ್ಮಕ್ಕೂ ಒಳಪಟ್ಟಿರುತ್ತವೆ. ಈ ಬಗೆಯ ದರ್ಶನದಿಂದ ಆತನ ದರ್ಶನವು ಸುವಿಶುದ್ಧವಾಗುವುದು.
ಆದರೆ ಈ ಉತ್ತರದಿಂದಲೂ ಅಸಂತುಷ್ಟನಾದ ಆ ಭಿಕ್ಷುವು ನೇರವಾಗಿ ಭಗವಾನರ ಬಳಿಗೆ ಬಂದನು. ಮತ್ತು ಎಲ್ಲರ ಉತ್ತರವನ್ನು ಭಗವಾನರಿಗೆ ನೀಡಿ, ಅವರ ಬಳಿಯಲ್ಲಿ ಅದೇ ಪ್ರಶ್ನೆಯನ್ನು ಕೇಳಿದನು: ಭಂತೆ, ಯಾವರೀತಿಯಲ್ಲಿ ಭಿಕ್ಷುವಿನ ದರ್ಶನವು ಸುವಿಶುದ್ಧವಾಗುವುದು?
ಭಿಕ್ಷು ಊಹಿಸು, ಒಬ್ಬ ಮನುಷ್ಯ ಎಂದಿಗೂ ಕಿಂಸುಕ ವೃಕ್ಷವನ್ನು ಕಂಡಿರುವುದಿಲ್ಲ. ಅಂತಹವನು ಕಿಂಸುಕ ವೃಕ್ಷವನ್ನು ಕಂಡಿರುವವರ ಬಳಿಗೆ ಹೋಗಿ ಹೀಗೆ ಕೇಳಿದನು: ಮಿತ್ರನೇ, ಕಿಂಸುಕ ವೃಕ್ಷವು ಹೇಗಿರುತ್ತದೆ? ಅದನ್ನ ಆ ವ್ಯಕ್ತಿಯು ಹೀಗೆ ಉತ್ತರಿಸುತ್ತಾನೆ: ಓ ಸಜ್ಜನನೇ, ಕಿಂಸುಕ ವೃಕ್ಷವು ಕಪ್ಪಾಗಿರುತ್ತದೆ. ಹೇಗೆಂದರೆ ಸುಟ್ಟ ಕಾಂಡದಂತೆ ಎಂದನು. ಆ ಸಂದರ್ಭದಲ್ಲಿ ಕಿಂಸುಕ ವೃಕ್ಷವು ಆ ಮನುಷ್ಯ ಕಂಡ ರೀತಿಯಲ್ಲೇ ಇತ್ತು. ಆದರೆ ಆ ವ್ಯಕ್ತಿಯು ಆ ಉತ್ತರದಿಂದ ಅಸಂತುಷ್ಟನಾಗಿ ಕಿಂಸುಕ ವೃಕ್ಷವನ್ನು ಕಂಡಿರುವಂತಹ ಇನ್ನೊಬ್ಬನ ಬಳಿಯಲ್ಲಿ ಹೋಗಿ ಸ್ವಾಮಿ, ಕಿಂಸುಕ ವೃಕ್ಷವು ಹೇಗಿರುತ್ತದೆ? ಎಂದನು. ಆಗ ಆ ವ್ಯಕ್ತಿಯು ಹೀಗೆ ಉತ್ತರಿಸುತ್ತಾನೆ: ಸಜ್ಜನನೇ, ಕಿಂಸುಕ ವೃಕ್ಷವು ಕೆಂಪಾಗಿರುತ್ತದೆ, ಹೇಗೆಂದರೆ ಮಾಂಸದ ತುಂಡಿನಂತೆ. ಆ ವ್ಯಕ್ತಿಯು ಹಾಗೆ ಹೇಳಲು ಕಾರಣವಿತ್ತು, ಏನೆಂದರೆ ಆತನು ಆ ವೃಕ್ಷವನ್ನು ನೋಡಿದ್ದಾಗ ಅದು ಹಾಗೆಯೇ ಇತ್ತು. ಈತನ ಉತ್ತರದಿಂದಲೂ ಅಸಂತುಷ್ಟನಾದ ಆ ವ್ಯಕ್ತಿಯು ಇನ್ನೊಬ್ಬನ ಬಳಿಯಲ್ಲಿ (ಆತನು ಕಿಂಸುಕ ವೃಕ್ಷವನ್ನು ಕಂಡಿರುವವನೇ ಆಗಿದ್ದನು) ಹೋದನು. ಆತನ ಬಳಿಯಲ್ಲೂ ಅದೇ ಪ್ರಶ್ನೆಯನ್ನು ಕೇಳಿದನು. ಅದಕ್ಕೆ ಆ ವ್ಯಕ್ತಿಯು ಹೀಗೆ ಉತ್ತರಿಸಿದನು: ಸಜ್ಜನನೇ, ಕಿಂಸುಕ ವೃಕ್ಷವು ಪಟ್ಟೆಗಳನ್ನು ಹೊಂದಿರುವ ತೊಗಟೆಯನ್ನು ಹೊಂದಿರುತ್ತದೆ, ನೇತಾಡುತ್ತಿರುವ ಹಾಗು ಅವುಗಳ ಜೀವಕೋಶವು ಸಿಡಿದು ಹೂಗಿಡದಂತಿರುತ್ತವೆ. (ಆ ವ್ಯಕ್ತಿಯು ಆ ಸಂದರ್ಭದಲ್ಲಿ ನೋಡಿದಾಗ ಅದು ಹಾಗೆಯೇ ಇತ್ತು.) ಆಗ ಆ ವ್ಯಕ್ತಿಯು ಆತನ ಉತ್ತರದಿಂದಲೂ ಅಸಂತೃಪ್ತನಾಗಿ ಇನ್ನೊಬ್ಬನ ಬಳಿಗೆ ಬಂದು ಸ್ವಾಮಿ ಕಿಂಸುಕ ವೃಕ್ಷವು ಹೇಗೆ ಕಾಣುವುದು? ಎಂದು ಆ ವೃಕ್ಷಗಳನ್ನು ನೋಡಿದಂತಹವನಿಗೆ ಪ್ರಶ್ನಿಸುತ್ತಾನೆ. ಓ ಸಜ್ಜನನೇ, ಕಿಂಸುಕ ವೃಕ್ಷವು ಅಪಾರವಾದ ಎಲೆಗಳಿಂದ ಕೂಡಿರುತ್ತದೆ. ಹಾಗು ಎಲೆಗಳ ಗೊಂಚಲುಗಳನ್ನು ಹೊಂದಿರುತ್ತದೆ ಹಾಗು ಅದು ವಿಶಾಲವಾದ ನೆರಳು ನೀಡುತ್ತದೆ. ಆಲದ ಮರದಂತೆ ಕಾಣುತ್ತದೆ ಎಂದು ನುಡಿದನು. ಆ ಸಂದರ್ಭದಲ್ಲಿ ಆ ವಾತಾವರಣದಲ್ಲಿ ಕಿಂಸುಕ ವೃಕ್ಷವು ಹಾಗೆಯೇ ಇತ್ತು.
ಅದೇರೀತಿಯಾಗಿ ಭಿಕ್ಷುವೇ, (ಹೇಗೆ ವಿವಿಧ ಋತುವಿನಲ್ಲಿ ಕಿಂಸುಕ ವೃಕ್ಷವು ವಿಭಿನ್ನವಾಗಿ ಕಾಣುವಂತೆ) ಆಯಾ ಭಿಕ್ಷುಗಳು ತಾವು ಅನುಸರಿಸಿ ವಿಶುದ್ಧಗೊಂಡ ಮಾರ್ಗಗಳಲ್ಲಿ ದರ್ಶನವನ್ನು ವಿಶುದ್ದಿಯನ್ನು ನುಡಿದಿದ್ದಾರೆ.
ಊಹಿಸು ಭಿಕ್ಷು, ರಾಜನೊಬ್ಬನಿಗೆ ಗಡಿನಾಡಿನಲ್ಲಿ ನಗರವಿರುತ್ತದೆ. ಅದಕ್ಕೆ ಬಲಯುತವಾದ ಕೋಟೆಗಳಿರುತ್ತದೆ, ಗೋಡೆಗಳಿರುತ್ತದೆ, ಕಮಾನುಗಳಿರುತ್ತವೆ ಮತ್ತು ಆರು ದ್ವಾರಗಳು ಇರುತ್ತವೆ. ಅಲ್ಲಿನ ಕಾವಲುಗಾರನು ಅತ್ಯಂತ ಬುದ್ಧಿವಂತನು, ಸಮರ್ಥನು ಮತ್ತು ಚಾಣಾಕ್ಷನು ಆಗಿರುತ್ತಾನೆ. ಆತನು ಅಪರಿಚಿತರನ್ನು ತಡೆಯುತ್ತಾನೆ ಹಾಗು ಪರಿಚಿತರನ್ನು ಒಳಗೆ ಬಿಡುತ್ತಾನೆ. ಆಗ ವೇಗವುಳ್ಳ ಇಬ್ಬರು ದೂತರು ಪೂರ್ವದ ಕಡೆಯಿಂದ ಬಂದು ಅಲ್ಲಿನ ದ್ವಾರಪಾಲಕನಿಗೆ ಹೀಗೆ ಕೇಳಿದರು: ಓ ಸಜ್ಜನನೇ, ಈ ನಗರದ ಸ್ವಾಮಿ ಎಲ್ಲಿ? ಆತನು ಹೀಗೆ ಉತ್ತರಿಸುವನು: ಚೌಕದ ಮಧ್ಯೆಯಲ್ಲಿ ಕುಳಿತಿರುವನು. ಆಗ ಆ ವೇಗದೂತರು ಆ ನಗರಸ್ವಾಮಿಗೆ ನೈಜ್ಯತೆಯ ಸಂದೇಶವನ್ನು ತಿಳಿಸಿ ಬಂದ ಹಾದಿಯಲ್ಲಿ ಹಿಂತಿರುಗಿದರು. ಅದೇರೀತಿಯಲ್ಲಿ ಪಶ್ಚಿಮ, ಉತ್ತರ ಮತ್ತು ದಕ್ಷಿಣದ ಕಡೆಗಳಿಂದಲೂ ವೇಗದೂತರು ಸಂದೇಶಗಳನ್ನು ನೀಡಿ ಬಂದ ದಾರಿಯಲ್ಲೇ ಹಿಂತಿರುಗುತ್ತಿದ್ದರು.
ಓ ಭಿಕ್ಷುಗಳೇ, ಅರ್ಥವನ್ನು ಸ್ಪಷ್ಟಪಡಿಸುವ ಸಲುವಾಗಿ ಈ ಉಪಮೆಯನ್ನು ನುಡಿದಿದ್ದೇನೆ. ಇದರ ಅರ್ಥಗಳು ಹೀಗಿವೆ: ಇಲ್ಲಿ ನಗರವೆಂದರೆ ನಾಲ್ಕು ಮಹಾಭೂತಗಳಿಂದ, ತಂದೆ-ತಾಯಿಯರಿಂದ ಉದಯಿಸಿದಂತಹ, ಅನ್ನಗಂಜಿಗಳಿಂದ ವೃದ್ಧಿಯಾದ, ಅನಿತ್ಯಗಳಿಗೆ ಗುರಿಯಾದ, ಶಿಥಿಲವಾಗಿ ಧೂಳಾಗುವ, ಮುರಿದು ಪುಡಿಪುಡಿಯಾಗುವಂತಹದ್ದಗಿದೆ. ಆರು ದ್ವಾರಗಳೆಂದರೆ ಆರು ಇಂದ್ರೀಯ ಆಧಾರಗಳಾಗಿವೆ. ದ್ವಾರಪಾಲಕನೆಂದರೆ ಜಾಗರೂಕತೆಯಾಗಿದೆ. ಇಬ್ಬರು ವೇಗದೂತರೆಂದರೆ ಸಮಥ ಮತ್ತು ವಿಪಶ್ಶನವಾಗಿದೆ. ನಗರಸ್ವಾಮಿ ಎಂದರೆ ವಿಞ್ಞಾಣವಾಗಿದೆ. ಚೌಕದ ಮಧ್ಯೆಯೆಂದರೆ ನಾಲ್ಕು ಮೂಲಭೂತಗಳಾಗಿವೆ. ಅವೆಂದರೆ, ಪೃಥ್ವಿಧಾತು, ಜಲಧಾತು, ವಾಯುಧಾತು ಮತ್ತು ತೇಜೋಧಾತು. ನೈಜ್ಯತೆಯ ಸಂದೇಶವೆಂದರೆ ನಿಬ್ಬಾಣಕ್ಕೆ ಅಂಕಿತವಾಗಿದೆ. ಅವರು ಬಂದು ಹೋದಂತಹ ಮಾರ್ಗವೆಂದರೆ ಆರ್ಯ ಅಷ್ಟಾಂಗ ಮಾರ್ಗವಾಗಿದೆ. ಅವೆಂದರ, ಸಮ್ಯಕ್ದೃಷ್ಟಿ, ಸಮ್ಯಕ್ಸಂಕಲ್ಪ, ಸಮ್ಯಕ್ವಾಚಾ, ಸಮ್ಯಕ್ಕರ್ಮ, ಸಮ್ಯಕ್ಜೀವನೋಪಾಯ, ಸಮ್ಯಕ್ಸ್ಮೃತಿ, ಸಮ್ಯಕ್ಸಮಾಧಿ.



35.19.9 ವೀಣೊಪಮ ಸುತ್ತಂ

246. ಭಿಕ್ಷುಗಳೇ, ಇಲ್ಲಿ ಯಾವುದೇ ಭಿಕ್ಷುವಾಗಲಿ ಅಥವಾ ಭಿಕ್ಷುಣಿಯಾಗಲಿ ಆಸೆ ಅಥವಾ ರಾಗ ಅಥವಾ ದ್ವೇಷ ಅಥವಾ ಮೋಹ ಅಥವಾ ವಿರೋಧತೆಯು ಕಣ್ಣಿನ ಮೂಲಕ ನೋಡುವಾಗ ಉದಯಿಸುವಂತಿದ್ದರೆ ಆಗ ಮನಸ್ಸಿನಿಂದ ಅದಕ್ಕೆ ಕಡಿವಾಣ ಹೀಗೆ ಹಾಕಬೇಕು: ಈ ಮಾರ್ಗವು ಭಯಾನಕವಾದುದು, ಅಪಾಯಕಾರಿ, ಮುಳ್ಳುಗಳಿಂದ ಆವರಿಸಲ್ಪಟ್ಟಿದೆ. ಕಾಡಿನಿಂದ ಆವರಿಸಲ್ಪಟ್ಟಿದೆ, ವಕ್ರದಾರಿಯಾಗಿದೆ, ಕುಮಾರ್ಗವಾಗಿದೆ, ಕೊರತೆಯಿಂದ ಕೂಡಿದ ಮಾರ್ಗವಾಗಿದೆ, ತುಚ್ಛರು ಸಾಗುವಂತಹ ದಾರಿಯಾಗಿದೆ. ಇದು ಶ್ರೇಷ್ಠರು ಸಾಗುವಂತಹ ಪಥವಲ್ಲ, ಇದು ನಮಗಲ್ಲ. ಈ ರೀತಿಯಾಗಿ ಮನಸ್ಸನ್ನು ದೃಢಗೊಳಿಸಿ, ಕಣ್ಣನ್ನು ಕಡಿವಾಣಹಾಕಿ ನಿಯಂತ್ರಣಗೊಳಿಸುವುದು. ಅದೇರೀತಿಯಾಗಿ ಕಿವಿಯ ಮೂಲಕ ಕೇಳಿದಾಗ... ಮೂಗಿನ ಮೂಲಕ... ನಾಲಿಗೆಯ ಮೂಲಕ... ಕಾಯದ ಮೂಲಕ... ಮನಸ್ಸಿನ ಮೂಲಕ ಉದಯಿಸುವಂತಿದ್ದರೆ ಈ ಮಾರ್ಗವು ಭಯಾನಕವಾದುದು, ಅಪಾಯಕಾರಿ, ಮುಳ್ಳುಗಳಿಂದ ಆವರಿಸಲ್ಪಟ್ಟಿದೆ. ಕಾಡಿನಿಂದ ಆವರಿಸಲ್ಪಟ್ಟಿದೆ, ವಕ್ರದಾರಿಯಾಗಿದೆ, ಕುಮಾರ್ಗವಾಗಿದೆ, ಕೊರತೆಯಿಂದ ಕೂಡಿದ ಮಾರ್ಗವಾಗಿದೆ, ತುಚ್ಛರು ಸಾಗುವಂತಹ ದಾರಿಯಾಗಿದೆ. ಇದು ಶ್ರೇಷ್ಠರು ಸಾಗುವಂತಹ ಪಥವಲ್ಲ, ಇದು ನಮಗಲ್ಲ.
ಊಹಿಸಿ ಭಿಕ್ಷುಗಳೇ, ಬಾಲರ್ಿಯು ಪಕ್ವವಾಗಿದೆ. ಆದರೆ ಕಾವಲುಗಾರನು ನಿರ್ಲಕ್ಷೆಯಿಂದಿದ್ದರೆ, ಬಾಲರ್ಿಯನ್ನು ಇಷ್ಟಪಡುವಂತಹ ಎತ್ತು ಆ ಗದ್ದೆಗೆ ಪ್ರವೇಶಿಸಿದರೆ ಅದು ತಾನು ಇಷ್ಟಪಟ್ಟಷ್ಟು ತಿನ್ನಬಹುದು. ಅದೇರೀತಿಯಾಗಿ ಭಿಕ್ಷುಗಳೇ, ಅಶಿಕ್ಷಿತ ಪ್ರಾಪಂಚಿಕನು ಯಾರು ಆರು ಇಂದ್ರೀಯಗಳನ್ನು ನಿಯಂತ್ರಿಸುವುದನ್ನೇ ಕಲಿತಿಲ್ಲವೋ ಆತನು ಇಷ್ಟಪಟ್ಟಷ್ಟು ಕಾಮಸುಖಗಳಲ್ಲಿ ತಲ್ಲೀನನಾಗುತ್ತಾನೆ.
ಊಹಿಸಿ ಭಿಕ್ಷುಗಳೇ, ಬಾಲರ್ಿಯು ಪಕ್ವವಾಗಿದೆ, ಆದರೆ ಕಾವಲುಗಾರನು ಜಾಗರೂಕತೆಯಿಂದಿದ್ದಾನೆ. ಆಗ ಬಾಲರ್ಿಯನ್ನು ಇಷ್ಟಪಡುವಂತಹ ಗೂಳಿಯು ಗದ್ದೆ ಪ್ರವೇಶ ಮಾಡಿದರೂ ಕಾವಲುಗಾರನು ಅದನ್ನು ಮೂಗುದಾರದಿಂದ ನಿಯಂತ್ರಿಸುತ್ತಾನೆ. ಹಾಗೆ ಮೂಗುದಾರದಿಂದ ನಿಯಂತ್ರಿಸುವಾಗ ಆತನು ಕೊಂಬುಗಳು ತಿವಿಯದಿರುವಂತೆ ಜಾಗ್ರತೆ ವಹಿಸುತ್ತಾನೆ. ಪ್ರಬಲವಾದ ಹಿಡಿತ ಸ್ಥಾಪಿಸುತ್ತಾನೆ. ಹಾಗೆಯೇ ತನ್ನ ಕೋಲಿನಿಂದ ಶಬ್ದಬರುವ ಹಾಗೆ ಹೊಡೆಯುತ್ತಾನೆ. ಹೀಗೆ ಆ ಗೂಳಿಯನ್ನು ಹೊರಗಟ್ಟುತ್ತಾನೆ. ಇದೇರೀತಿ ಎರಡು ಅಥವಾ ಮೂರುಸಾರಿ ಹೊರಗಟ್ಟಿದಾಗ, ಆ ಬಾಲರ್ಿಯನ್ನು ಇಷ್ಟಪಡುವ ಗೂಳಿಯು ಹಳ್ಳಿಯಲ್ಲೇ ಆಗಲಿ ಅಥವಾ ಅರಣ್ಯದಲ್ಲೇ ಇರಲಿ ಅದು ನಿಂತಾಗ ಅಥವಾ ಕುಳಿತಾಗ ಹಿಂದೆ ಕೋಲಿನಿಂದ ಪೆಟ್ಟು ಬಿದ್ದಿರುವುದನ್ನು ನೆನಪಿಸಿಕೊಳ್ಳುವುದು. ಹೀಗಾಗಿ ಅದು ಬಾಲರ್ಿ ಗದ್ದೆಗೆ ಪ್ರವೇಶ ಮಾಡುವುದಿಲ್ಲ. ಅದೇರೀತಿಯಲ್ಲಿ ಭಿಕ್ಷುವಿನ ಮನಸ್ಸು ಆಂತರ್ಯದಲ್ಲಿ ಸ್ಥಿರವಾಗುವುದು, ಸಮತ್ತಗೊಳ್ಳುವುದು, ಏಕಾಗ್ರವಾಗುವುದು ಮತ್ತು ಸಮಾಧಿಸ್ಥವಾಗುವುದು.
ಊಹಿಸಿ ಭಿಕ್ಷುಗಳೇ, ರಾಜ ಅಥವಾ ಮಂತ್ರಿಯೊಬ್ಬನು ವೀಣೆಯ ಧ್ವನಿಯನ್ನೇ ಎಂದಿಗೂ ಕೇಳಿರುವುದಿಲ್ಲ. ಆಗ ಆಕಸ್ಮಿಕವಾಗಿ ಆತನು ಆ ಧ್ವನಿಯನ್ನು ಕೇಳಿದಾಗ ಆತನು ಅದರ ಬಗ್ಗೆ ಪ್ರಶ್ನಿಸುತ್ತಾನೆ: ಓ ಸಜ್ಜನನೇ, ಯಾವುದಿದು ಶಬ್ದವನ್ನುಂಟು ಮಾಡುತ್ತಿರುವುದು. ಅತ್ಯಂತ ಪ್ರಲೋಭನಕಾರಿಯಾಗಿದೆ, ಪ್ರಿಯವಾಗಿದೆ, ಮತ್ತೇರಿಸುವಂತಿದೆ, ಮನಮೋಹಕವಾಗಿದೆ. ಆಗ ಅವರು ಹೀಗೆ ಉತ್ತರಿಸುವರು: ಪ್ರಭು, ಇದು ವೀಣೆಯಾಗಿದೆ, ಇದೇ ಮಧುರವಾದ ಶಬ್ದವನ್ನುಂಟುಮಾಡುವುದು. ಆ ಶಬ್ದಗಳು ಪ್ರಲೋಭನಕಾರಿಯಾಗಿರುತ್ತದೆ, ಮತ್ತೇರಿಸುವಂತಿದೆ, ಮನಮೋಹಕವಾಗಿರುತ್ತದೆ. ಆಗ ಆತನು ಹೀಗೆ ಪ್ರತಿಕ್ರಿಯಿಸುತ್ತಾನೆ, ಹೋಗು ಮನುಷ್ಯನೇ, ಆ ವೀಣೆಯನ್ನು ತೆಗೆದುಕೊಂಡು ಬಾ. ಆಗ ಅವರು ಆ ವೀಣೆಯನ್ನು ಆತನಿಗೆ ನೀಡಿ ಹೀಗೆ ಹೇಳವರು: ಪ್ರಭು, ಇದೇ ಆ ವೀಣೆಯಾಗಿದೆ, ಇದರಿಂದ ಹೊರಹೊಮ್ಮುವ ಸ್ವರಗಳು ಮಧುರವ, ಮನಮೋಹಕವು, ಪ್ರಲೋಭನಾಕಾರಿಯು, ಪ್ರಿಯವಾದುದು ಆಗಿದೆ. ಆಗ ರಾಜನು ಹೀಗೆ ಹೇಳುತ್ತಾನೆ: ಈ ವೀಣೆಯಿಂದ ನನಗೆ ಸಾಕಾಗಿದೆ, ನನಗೆ ಕೇವಲ ಆ ಶಬ್ದನ್ನು ತನ್ನಿರಿ. ಆಗ ಜನರು ಹೀಗೆ ಹೇಳುವರು: ಈ ವೀಣೆಯು ಮಹಾಪ್ರಭು, ಹಲವರು ಉಪಕರಣಗಳನ್ನು ಹೊಂದಿದೆ. ಅವೆಂದರೆ, ದೋಣಿಯು (ಹೊಟ್ಟೆಯು), ಚರ್ಮವು, ದಂಡ, ತಂತಿಗಳು, ಶಬ್ದದ ಹಲಗೆ, ತೋಳು, ಶಿರ, ಮೀಟುವಾದ್ಯಗಳು ಇತ್ಯಾದಿ. ಜೊತೆಗೆ ಕಲಾವಿದನ ಸಂಯೋಜನೆ, ಹೀಗೆ ಮಹಾಪ್ರಭು, ಇವು ಹಲವಾರ ಸಲಕರಣೆಗಳನ್ನು ಹೊಂದಿವೆ. ಹೀಗೆ ಹಲವಾರು ಸಲಕರಣೆಗಳು ಒಂದಕ್ಕೊಂದು ಅವಲಂಬನೆಯಿಂದಾಗಿ ಶಬ್ದವು ಹೊರಹೊಮ್ಮುವುದು. ಆಗ ರಾಜನು ಆ ವೀಣೆಯನ್ನು ನೂರು ಭಾಗಗಳಾಗಿ ಹೋಳು ಮಾಡುವನು. ಹೀಗೆ ಹೋಳು ಮಾಡಿಸಿ ಬೆಂಕಿಯಲ್ಲಿ ಹಾಕಿ, ಭಸ್ಮ ಮಾಡುತ್ತಾನೆ. ನಂತರ ಆ ಬೂದಿಯನ್ನು ಗಾಳಿಗೆ ಅಥವಾ ಹರಿಯುವ ನದಿಗೆ ತೂರುತ್ತಾನೆ. ಅಥವಾ ವೀಣೆಯೆಂದು ಕರೆಸಿಕೊಳ್ಳುವ ಯಾವುದೇ ಉಪಕರಣವೂ ಕ್ಷುಲ್ಲಕವಾಗಿದೆ. ಇದು ಆದರಿಸಬೇಡಿರಿ, ಅನಾದಿಕಾಲದಿಂದಲೂ ಬಹುಜನರ ಜಾಗರೂಕತೆಯನ್ನು ಕಸಿದಿದೆ.
ಅದೇರೀತಿಯಲ್ಲಿ ಭಿಕ್ಷುಗಳೇ, ಭಿಕ್ಷುವು ದೇಹವನ್ನು (ರೂಪ) ಅದರ ಮಿತಿಯಿರುವಷ್ಟು ಅನ್ವೇಷಿಸುತ್ತಾನೆ, ವೇದನೆಗಳ ಮಿತಿಯು ಎಲ್ಲಿಯವರೆಗೂ ಹೋಗುವುದೋ, ಅಲ್ಲಿಯವರೆಗೆ ಅನ್ವೇಷಿಸುತ್ತಾನೆ. ಹಾಗೆಯೇ ಗ್ರಹಿಕೆಗಳ ಮಿತಿಯು ಎಲ್ಲಿಯವರೆಗೆ ಸಾಗುವುದೋ ಅಲ್ಲಿಯವರೆಗೆ ಅದನ್ನು ಅನ್ವೇಷಿಸುತ್ತಾನೆ. ಸಂಖಾರಗಳ ಮಿತಿಯು ಎಲ್ಲಿಯವರೆಗೆ ಸಾಗುವುದೋ ಅಲ್ಲಿಯವರೆಗೆ ಅದನ್ನ ಅನ್ವೇಷಿಸುತ್ತಾನೆ. ಹಾಗೆಯೇ ನಿಬ್ಬಾಣದ ಮಿತಿಯು ಎಲ್ಲಿಯವರೆಗೆ ಸಾಗುವುದೋ ಅಲ್ಲಿಯವರೆವಿಗೂ ಅದನ್ನು ಅನ್ವೇಷಿಸುತ್ತನೆ. ಆಗ ಆತನಿಗೆ ಎಲ್ಲಿಯೂ ಯಾವರೀತಿಯಲ್ಲಿಯೂ ನಾನು ಅಥವಾ ನನ್ನದು ಅಥವಾ ನನ್ನ ಆತ್ಮ ಎಂಬುದು ಸಿಗದೆ, ಮುಂದೆ ಅಂತಹ ಭಾವಗಳು ಆತನಲ್ಲಿ ಉದಯಿಸುವುದಿಲ್ಲ.


35.19.10 ಛಪ್ಪಾಣಕೋಪಮ ಸುತ್ತಂ (ಆರು ಪ್ರಾಣಿಗಳ ಉಪಮೆಯ ಸುತ್ತ)

247. ಭಿಕ್ಷುಗಳೇ, ಊಹಿಸಿರಿ. ಮನುಷ್ಯನೊಬ್ಬನು ಗಾಯಗೊಂದು ಹಾಗು ಹುಣ್ಣಾಗಿರುವಂತಹವನು ಮುಳ್ಳುಗಳಿರುವ ಲಾಳಗಳಿರುವ ವನದಲ್ಲಿ ಪ್ರವೇಶಿಸುತ್ತಾನೆ ಮತ್ತು ಕುಶವೆಂಬ ಮುಳ್ಳುಗಳು ಆತನ ಪಾದಗಳಿಗೆ ಮತ್ತು ಲಾಳದ ಹರಿತವಾದ ಎಲೆಗಳು ಆತನ ಅಂಗಗಳಿಗೆ ಸೀಳನ್ನುಂಟುಮಾಡುವುವು. ಹೀಗಾಗಿ ಆ ಮನುಷ್ಯನು ಅತ್ಯಂತ ನೋವನ್ನು ದುಃಖವನ್ನು ಅನುಭವಿಸುತ್ತಾನೆ. ಅದೇರೀತಿಯಲ್ಲಿ ಭಿಕ್ಷುಗಳೇ, ಕೆಲವು ಭಿಕ್ಷುಗಳು ಹಳ್ಳಿಗೆ ಅಥವಾ ಕಾಡಿಗೆ ಹೋದಾಗ ಹೀಗೆ ನಿಂದೆ ಮಾಡಬಹುದು: ಈ ಭಂತೆಯು ಈ ರೀತಿ ಅಸಹ್ಯಕರ ಹಳ್ಳಿಯ ಮುಳ್ಳಿನಂತೆ ವತರ್ಿಸುತ್ತಿದ್ದಾರೆ, ಈ ಬಗೆಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಅಂತಹವನಿಗೆ ಮುಳ್ಳು ಎಂದು ಭಾವಿಸಿ, ಒಬ್ಬನು ಸಂಯಮವನ್ನು ಮತ್ತು ಅಸಂಯಮವನ್ನು ಅರ್ಥಮಾಡಿಕೊಳ್ಳಬೇಕು.
ಮತ್ತೆ ಹೇಗೆ ಭಿಕ್ಷುಗಳೇ ಅಸಂಯಮಿಯಾಗುತ್ತಾನೆ? ಇಲ್ಲಿ ಪ್ರಿಯವಾದ ರೂಪಗಳನ್ನು (ದೃಶ್ಯ) ಕಣ್ಣಿನಿಂದ ನೋಡಿ ಆತನು ಆಕಷರ್ಿತನಾಗುತ್ತಾನೆ. ಹಾಗೆಯೇ ಅಪ್ರಿಯವಾದ ರೂಪಗಳನ್ನು ನೋಡಿ, ವಿಕಷರ್ಿತನಾಗುತ್ತಾನೆ. ಈ ರೀತಿಯಾಗಿ ಆತನು ಕಾಯದ ಕ್ರಿಯೆಗಳಲ್ಲಿ ಎಚ್ಚರಹೀನನಾಗಿರುತ್ತಾನೆ. ಹೀಗಾಗಿ ಪರಿಮಿತ ಚಿತ್ತದವನು ಆಗಿರುತ್ತಾನೆ. ಆತನು ಚಿತ್ತದ ವಿಮುಕ್ತಿಯನ್ನು ಅರ್ಥಮಾಡಿಕೊಂಡಿರುವುದಿಲ್ಲ. ಹಾಗೆಯೇ ಪ್ರಜ್ಞಾವಿಮುಕ್ತಿಯನ್ನು ಅರ್ಥಮಾಡಿಕೊಂದಿರುವುದಿಲ್ಲ. ಹೀಗಾಗಿ ಹೇಗೆತಾನೆ ಆತನಲ್ಲಿ ಪಾಪಯುತವಾದ ಅಕುಶಲಗಳು ನಿಶ್ಶೇಷವಾಗಿ ನಾಶವಾಗುವುದು. ಹಾಗೆಯೇ ಕಿವಿಯಿಂದ ಪ್ರಿಯವಾದ ಶಬ್ದಗಳನ್ನು... ನಾಸಿಕದಿಂದ ಪ್ರಿಯವಾದ... ನಾಲಿಗೆಯಿಂದ ಪ್ರಿಯವಾದ... ಕಾಯದಿಂದ ಪ್ರಿಯವಾದ... ಮನಸ್ಸಿನಿಂದ ಪ್ರಿಯವಾದ ಮಾನಸಿಕ ವಿಷಯಗಳಿಗೆ ಆಕಷರ್ಿತನಾಗಿ, ಅಪ್ರಿಯವಾದ ಮನಸಿಕ ವಿಷಯಗಳಿಂದ ವಿಕಷರ್ಿತನಾಗುತ್ತಾನೆ. ಆತನು ಕಾಯದ ಚಟುವಟಿಕೆಗಳಲ್ಲಿ ಎಚ್ಚರಹೀನನಾಗಿರುತ್ತಾನೆ. ಪರಿಮಿತ ಚಿತ್ತದವನಾಗಿರುತ್ತಾನೆ. ಆತನಿಗೆ ಯಥಾಭೂತವಾಗಿ ಚಿತ್ತವಿಮುಕ್ತಿಯಾಗಲಿ ಅಥವಾ ಪ್ರಜ್ಞಾದ ವಿಮುಕ್ತಿಯಾಗಲಿ ತಿಳಿದಿರುವುದಿಲ್ಲ. ಹೀಗಿರುವಾಗ ಹೇಗೆತಾನೆ ಆತನಲ್ಲಿ ಅಕುಶಲವಾದ ಪಾಪಯುತ ಮಾನಸಿಕ ಸ್ಥಿತಿಗಳು ನಿಶ್ಶೇಷವಾಗಿ ನಾಶವಾಗುತ್ತವೆ?
ಊಹಿಸಿರಿ ಭಿಕ್ಷುಗಳೇ, ಒಬ್ಬ ಮನುಷ್ಯನು ಆರು ಪ್ರಾಣಿಗಳನ್ನು ಹಿಡಿದಿರುತ್ತಾನೆ. ಆ ಪ್ರಾಣಿಗಳು ವಿವಿಧ ವಲಯಗಳಿಗೆ ಸೇರಿರುತ್ತವೆ ಹಾಗು ಆಹಾರವನ್ನು ಸೇವಿಸುವಂತಾಗಿರುತ್ತದೆ. ಅವುಗಳನ್ನು ಬಲಯುತವಾದ ಹಗ್ಗದಿಂದ ಕಟ್ಟಿರುತ್ತಾನೆ. ಅದೆಂದರೆ, ಹಾವು, ಮೊಸಳೆ, ಪಕ್ಷಿ, ನಾಯಿ, ನರಿ ಮತ್ತು ಕೋತಿ ಇವೆಲ್ಲವನ್ನು ಪ್ರತ್ಯೇಕವಾಗಿ ಕಟ್ಟಿ, ಮತ್ತೆ ಆ ಎಲ್ಲದರ ಹಗ್ಗವನ್ನು ಮಧ್ಯದಲ್ಲಿ ಒಂದು ಗಂಟುಹಾಕಿ ಅವನ್ನು ಸ್ವಲ್ಪ ತಿರುಗಾಡು ಅನುಕೂಲವಾಗಿರುವಂತೆ ಸಡಿಲಗೊಳಿಸುತ್ತಾನೆ. ಆ ಆರು ಪ್ರಾಣಿಗಳು ವಿಭಿನ್ನ ಕ್ಷೇತ್ರದವು ಹಾಗು ವಿಭಿನ್ನ ಆಹಾರವನ್ನು ಅವಲಂಬಿಸಿರುವುದರಿಂದಾಗಿ ಅವು ಬೇರೆ ಬೇರೆ ದಿಕ್ಕಿನೆಡೆಗೆ ಎಳೆಯುತ್ತಿರುತ್ತವೆ. ಹಾವು ಹುತ್ತದೆಡೆಗೆ ಎಳೆಯುತ್ತಿದ್ದರೆ, ಮೊಸಳೆಯು ನೀರಿನೆಡೆಗೆ ಎಳೆಯುತ್ತಿರುತ್ತದೆ, ಪಕ್ಷಿಯು ಆಕಾಶದೆಡೆಗೆ ಹಾರಲು ಯತ್ನಿಸುತ್ತದೆ, ನಾಯಿಯು ಹಳ್ಳಿಯ ಕಡೆಗೆ ಎಳೆಯುತ್ತದೆ, ನರಿಯು ಸ್ಮಶಾನಕ್ಕೆ ಹೋಗಲಿಚ್ಛಿಸಿ ಆ ಕಡೆಗೆ ಎಳೆಯುತ್ತಿರುತ್ತದೆ ಮತ್ತು ಕೋತಿಯು ಅರಣ್ಯಕ್ಕೆ ಹೋಗಲಿಚ್ಛಿಸಿ ಆ ಕಡೆಗೆ ಎಳೆಯುತ್ತಿರುತ್ತದೆ. ಈಗ ಆ ಆರು ಪ್ರಾಣಿಗಳು ಶಕ್ತಿಗುಂದುತ್ತವೆ ಮತ್ತು ದಣಿದಿರುತ್ತವೆ. ಒಂದಕ್ಕೊಂದು ಪೈಪೋಟಿ ನಡೆಸಿ ಶಕ್ತಿವಂತರೆನಿಸಿಕೊಳ್ಳಲು ಯತ್ನಿಸುತ್ತವೆ. ಅದೇರೀತಿಯಾಗಿ ಭಿಕ್ಷುಗಳೇ, ಯಾವಾಗ ಭಿಕ್ಷುವು ಕಾಯಾಗತಸ್ಮೃತಿಯಲ್ಲಿ ನಿಪುಣನಾಗಿಲ್ಲವೋ ಹಾಗು ಪಕ್ವವಾಗಿಲ್ಲವೋ ಅಂತಹವನಲ್ಲಿ ಕಣ್ಣು ಒಂದು ದಿಕ್ಕಿಗೆ ಎಳೆಯುತ್ತದೆ, ಪ್ರಿಯವಾದುದಕ್ಕೆ ಆಕಷರ್ಿಸಿ, ಅಪ್ರಿಯವಾದುದಕ್ಕೆ ವಿಕಷರ್ಿಸುತ್ತದೆ. ಕಿವಿಯು ಒಂದು ದಿಕ್ಕಿಗೆ ಎಳೆಯುತ್ತದೆ... ನಾಸಿಕವು ಒಂದು ದಿಕ್ಕಿಗೆ ಎಳೆಯುತ್ತದೆ... ನಾಲಿಗೆಯು ಒಂದು ದಿಕ್ಕಿಗೆ ಎಳೆಯುತ್ತದೆ... ಕಾಯವು ಒಂದು ದಿಕ್ಕಿಗೆ ಎಳೆಯುತ್ತದೆ... ಮನಸ್ಸು ಒಂದು ದಿಕ್ಕಿಗೆ ಎಳೆಯುತ್ತದೆ, ಪ್ರಿಯವಾದ ಮಾನಸಿಕ ವಿಷಯಗಳಿಗೆ ಆಕಷರ್ಿತವಾಗಿ ಅಪ್ರಿಯ ಮಾನಸಿಕ ವಿಷಯಗಳಿಗೆ ವಿಕಷರ್ಿತವಾಗುತ್ತದೆ. ಈ ರೀತಿಯಾಗಿ ಅಸಂಯಮಿಯ ಹಾದಿಯು ಇರುತ್ತದೆ.
ಮತ್ತೆ ಭಿಕ್ಷುಗಳೇ, ಭಿಕ್ಷುವು ಹೇಗೆ ಸಂಯಮಿಯಾಗಿರುತ್ತಾನೆ? ಇಲ್ಲಿ ಭಿಕ್ಷುವು ಕಣ್ಣಿನಿಂದ ಪ್ರಿಯವಾದ ರೂಪಗಳಲ್ಲಿ ಆಕಷರ್ಿತನಾಗುವುದಿಲ್ಲ. ಅಪ್ರಿಯವಾದ ದೃಶ್ಯಗಳಲ್ಲಿ ವಿಕಷರ್ಿತನಾಗುವುದಿಲ್ಲ. ಅವನು ಕಾಯಗತಾಸ್ಮೃತಿಯಲ್ಲಿ ವಿಹರಿಸುತ್ತನೆ. ಆತನು ಅಪರಿಮಿತವಾದ ಚಿತ್ತದವನಾಗಿರುತ್ತಾನೆ. ಅವನು ಯಥಾಭೂಥವಾಗಿ ಚಿತ್ತವಿಮುಕ್ತಿಯನ್ನು ಮತ್ತು ಪ್ರಜ್ಞಾವಿಮುಕ್ತಿಯನ್ನು ಅರಿತಿರುತ್ತಾನೆ. ಹೀಗಾಗಿ ಆತನಲ್ಲಿ ಪಾಪಯುತವಾದ ಅಕುಶಲ ಧಮ್ಮಗಳು ನಿಶ್ಶೇಷವಾಗಿ ನಾಶವಾಗುತ್ತದೆ. ಹಾಗೆಯೇ ಆತನು ಕಿವಿಯಿಂದ ಪ್ರಿಯವಾದ... ನಾಸಿಕದಿಂದ... ನಾಲಿಗೆಯಿಂದ... ಕಾಯದಿಂದ... ಮನಸ್ಸಿನಿಂದ... ಪ್ರಿಯವಾದ ಮಾನಸಿಕ ವಿಷಯಗಳಿಗೆ ಆಕಷರ್ಿತನಾಗುವುದಿಲ್ಲ. ಹಾಗೆಯೇ ಅಪ್ರಿಯವಾದ ವಿಷಯಗಳಿಗೆ ವಿಕಷರ್ಿತನಾಗುವುದಿಲ್ಲ. ಆತನು ಕಾಯಗತಾನುಸ್ಮೃತಿಯಲ್ಲಿ ವಿಹರಿಸುತ್ತಾನೆ ಆತನು ಅಪರಿಮಿತವಾದ ಚಿತ್ತದವನಾಗಿರುತ್ತಾನೆ. ಅವನು ಯಥಾಭೂತವಾಗಿ ಚಿತ್ತವಿಮುಕ್ತಿಯನ್ನು ಮತ್ತು ಪ್ರಜ್ಞಾವಿಮುಕ್ತಿಯನ್ನು ಅರಿತಿರುತ್ತಾನೆ. ಹೀಗಾಗಿ ಆತನಲ್ಲಿ ಪಾಪಯುತವಾದ ಅಕುಶಲ ಧಮ್ಮಗಳು ನಿಶ್ಶೇಷವಾಗಿ ನಾಶವಾಗುತ್ತದೆ. ಈ ರೀತಿಯಾಗಿ ಸಂಯಮಿಯ ಹಾದಿಯು ಇರುತ್ತದೆ.
ಊಹಿಸಿ ಭಿಕ್ಷುಗಳೇ, ಒಬ್ಬ ಮನುಷ್ಯನು ಆರು ವಿಭಿನ್ನ ವಲಯಗಳ, ವಿಭಿನ್ನ ಆಹಾರಗಳನ್ನು ಸೇವಿಸುವಂತಹ ಆರು ಪ್ರಾಣಿಗಳನ್ನು ಹಿಡಿದಿರುತ್ತಾನೆ ಮತ್ತು ಅವನ್ನು ಬಲಯುತವಾದ ಹಗ್ಗದಿಮದ ಕಟ್ಟಿರುತ್ತಾನೆ. ಆತನು ಹಾವನ್ನು, ಮೊಸಳೆಯನ್ನು, ಪಕ್ಷಿಯನ್ನು, ನಾಯಿಯನ್ನು, ನರಿಯನ್ನು ಮತ್ತು ಮಂಗವನ್ನು ಹಿಡಿದು ಆ ಆರು ಪ್ರಾಣಿಗಳನ್ನು ಕಟ್ಟಿಹಾಕಿ, ಅವೆಲ್ಲವನ್ನು ಬಲಿಷ್ಠವಾದ ಸ್ಥಂಭಕ್ಕೆ ಕಟ್ಟಿಹಾಕಿರುತ್ತಾನೆ. ನಂತರ ಆ ಆರು ಪ್ರಾಣಿಗಳು ವಿಭಿನ್ನವಲಯ ಹಾಗು ವಿಭಿನ್ನ ಆಹಾರ ಪದ್ದತಿಯುಳ್ಳದ್ದಾಗಿರುವುದರಿಂದ ಪ್ರತಿಯೊಂದು ಒಂದೊಂದು ದಿಕ್ಕಿಗೆ ಎಳೆಯುತ್ತಿದ್ದವು. ಹಾವು ನಾನು ಹುತ್ತದೊಳಗೆ ಪ್ರವೇಶಿಸುವೆನು ಎಂದು ಹುತ್ತದೆಡೆಗೆ ಎಳೆಯುತ್ತಿರುತ್ತದೆ. ಮೊಸಳೆಯು ನನಗೆ ನೀರಿನಲ್ಲಿ ಸೇರಲುಬಿಡು ಎಂದು ನೀರಿನ ಬಳಿಗೆ ಎಳೆಯುತ್ತಿರುತ್ತದೆ. ಪಕ್ಷಿಯು ನನಗೆ ಆಕಾಶದಲ್ಲಿ ಹಾರಲು ಬಿಡು ಎಂದು ಮೇಲಕ್ಕೆ ಎಳೆಯುತ್ತಿತ್ತು. ನಾಯಿಯು ನನಗೆ ಹಳ್ಳಿಗೆ ಹೋಗಲು ಬಿಡು ಎಂದು ಹಳ್ಳಿಯತ್ತ ಎಳೆಯುತ್ತಿತ್ತು. ನರಿಯು ನನಗೆ ಸ್ಮಶಾನಕ್ಕೆ ಹೋಗಲುಬಿಡು ಎಂದು ಸ್ಮಶಾನದತ್ತ ಎಳೆಯುತ್ತಿತ್ತು. ಮಂಗವು ನನಗೆ ಕಾಡಿಗೆ ಹೋಗಲು ಬಿಡು ಎಂದು ಅರಣ್ಯದತ್ತ ಎಳೆಯುತ್ತಿತ್ತು. ಈಗ ಯಾವಾಗ ಈ ಆರು ಪ್ರಾಣಿಗಳು ಶಕ್ತಿಗುಂದಿದವೋ ಹಾಗು ದಣಿವು ಹೊಂದಿದವೋ ಆಗ ಅವು ಅಲ್ಲೇ ಕುಳಿತವು ಹಾಗು ಮಲಗಿದವು. ಅದೇರೀತಿಯಾಗಿ ಭಿಕ್ಷುಗಳೇ, ಯಾವಾಗ ಭಿಕ್ಷುವು ಕಾಯಗತಾನುಸ್ಮೃತಿಯನ್ನು ವೃದ್ಧಿಗೊಳಿಸುವನೋ, ಆಗ ಆತನ ಕಣ್ಣು ಆಕರ್ಷಣೆಗಳ ಕಡೆ ಸೆಳೆಯದು. ಹಾಗೆಯೇ ಒಪ್ಪದಿರುವ ರೂಪಗಳ ಕಡೆ ವಿಕರ್ಷಣೆಯನ್ನು ಹೊಂದಿಲಾರದು. ಹಾಗೆಯೇ ಆತನ ಕಿವಿಯು ಒಪ್ಪುವ ಶಬ್ದಗಳ ಕಡೆಗೆ ಸೆಳೆಯದು, ಒಪ್ಪದಿರುವ ಶಬ್ದಗಳ ಕಡೆಗೆ ವಿಕರ್ಷಣೆಯು ಹೊಂದದು. ಹಾಗೆಯೇ ಆತನ ನಾಸಿಕವು ಪ್ರಿಯವಾದ ಗಂಧಗಳ ಬಗ್ಗೆ ಆಕರ್ಷಣೆ ಹೊಂದಲಾರದು. ಹಾಗೆಯೇ ಅಪ್ರಿಯವಾದ ಗಂಧಗಳ ಕಡೆಗೆ ವಿಕರ್ಷಣೆಯು ಹೊಂದಲಾರದು. ಹಾಗೆಯೇ ಆತನ ನಾಲಿಗೆಯು... ಕಾಯವು... ಮನಸ್ಸು ಪ್ರಿಯವಾದ ಮಾನಸಿಕ ವಿಷಯಗಳೆಡೆಗೆ ಆಕರ್ಷಣೆ ಹೊಂದಲಾರದು ಹಾಗೆಯೇ ಅಪ್ರಿಯವಾದ ಮಾನಸಿಕ ವಿಷಯಗಳೆಡೆಗೆ ವಿಷರ್ಕಣೆಯು ಹೊಂದಲಾರದು. ಈ ರೀತಿಯಾಗಿ ಸಂಯಮಿಯು ಇರುತ್ತಾನೆ.
ಭಿಕ್ಷುಗಳೇ, ಇಲ್ಲಿ ದೃಢವಾದ ಬಲಿಷ್ಠವಾದ ಸ್ಥಂಭವೆಂದರೆ ಕಾಯಗತಾಸ್ಮೃತಿಯಾಗಿದೆ. ಆದ್ದರಿಂದಾಗಿ ಭಿಕ್ಷುಗಳೇ, ನೀವು ಹೀಗೆ ಸುಶಿಕ್ಷಿತರಾಗಿ. ನಾವು ಕಾಯಗತಾಸ್ಮೃತಿಯನ್ನು ವೃದ್ಧಿಸುವೆವು. ಅದನ್ನೇ ವಾಹನವನ್ನಾಗಿ ಮಾಡುವೆವು. ಅದನ್ನೇ ಆಧಾರವನ್ನಾಗಿಸುವೆವು, ಸ್ಥಿರಗೊಳಿಸುವೆವು, ಅಭ್ಯಸಿಸುವೆವು, ಪೂರ್ಣಗೊಳಿಸುವೆವು. ಹೀಗೆ ನೀವು ಸುಶಿಕ್ಷಿತಗೊಳಿಸಬೇಕು.



35.19.11 ಯವಕಲಾಪಿ ಸುತ್ತಂ (ಬಾಲರ್ಿಯ ಕಟ್ಟಿನ ಸುತ್ತ)

248. ಆ ಸಮಯದಲ್ಲಿ ಭಗವಾನರು ಕಪಿಲವಸ್ತುವಿನ ಶಾಕ್ಯರ ಗೋಸಿತ ಆರಾಮದಲ್ಲಿದ್ದರು. ಆಗ ಭಗವಾನರು ಭಿಕ್ಷುಗಳೊಂದಿಗೆ ಹೀಗೆ ನುಡಿದರು: ಭಿಕ್ಷುಗಳೇ, ಊಹಿಸಿ. ಬಾಲರ್ಿ ಕಟ್ಟನ್ನು ಅಡ್ಡಹಾಯುವಂತಹ ರಸ್ತೆಗಳ ಬಳಿಯಲ್ಲಿ ಇಟ್ಟಿರುತ್ತಾರೆ. ಹಾಗು ಅವರೆಲ್ಲರೂ ಬಡಿಕೋಲಿನಿಂದ ಆ ಬಾಲರ್ಿ ಕಟ್ಟಿಗೆ ಹೊಡೆಯುತ್ತಾರೆ. ಹೀಗೆ ಅವರೆಲ್ಲರೂ ಹೊಡೆದ ನಂತರ ಏಳನೆಯ ವ್ಯಕ್ತಿಯು ಅಲ್ಲಿಗೆ ಬಡಿಗೋಲಿನ ಸಮೇತ ಬರುತ್ತಾನೆ. ಆತನು ಸಹಾ ಬಡಿಗೋಲಿನಿಂದ ಹೊಡೆಯುತ್ತಾರೆ. ಹೀಗಾಗಿ ಆ ಬಾಲರ್ಿಯ ಕಟ್ಟು ಇನ್ನಷ್ಟು ಸಿಕ್ಕಿಕೊಳ್ಳುವುದು. ಮತ್ತಷ್ಟು ಸಿಕ್ಕಿಕೊಳ್ಳುವುದು.
ಅದೇರೀತಿಯಲ್ಲಿ ಭಿಕ್ಷುಗಳೇ, ಅಶಿಕ್ಷಿತ ಪ್ರಾಪಂಚಿಕನು ಕಣ್ಣಿನಲ್ಲಿ ಪ್ರಿಯ, ಅಪ್ರಿಯ ರೂಪಗಳಿಂದ ಸಿಕ್ಕಿಕೊಳ್ಳುವನು. ಕಿವಿಯಲ್ಲಿ ಪ್ರಿಯಾಪ್ರಿಯ ಶಬ್ದಗಳಿಂದ ಸಿಕ್ಕಿಕೊಳ್ಳುವನು. ನಾಸಿಕದಲ್ಲಿಯೂ ಪ್ರಿಯಾಪ್ರಿಯ ಗಂಧಗಳಿಂದ ಸಿಕ್ಕಿಕೊಳ್ಳುವನು. ನಾಲಿಗೆಯಲ್ಲೂ ಪ್ರಿಯಾಪ್ರಿಯ ರಸಗಳಿಂದ ಸಿಕ್ಕಿಹಾಕಿಕೊಳ್ಳುವನು. ಕಾಯದಲ್ಲಿ ಪ್ರಿಯಾಪ್ರಿಯ ಸ್ಪರ್ಶಗಳಿಂದ ಸಿಕ್ಕಿಹಾಕಿಕೊಳ್ಳುವನು ಮತ್ತು ಮನಸ್ಸಿನಲ್ಲಿಯು ಪ್ರಿಯಾಪ್ರಿಯ ಮಾನಸಿಕ ವಿಷಯಗಳಿಂದ ಸಿಕ್ಕಿಹಾಕಿಕೊಳ್ಳುವರು. ಹೀಗೆ ಅಶಿಕ್ಷಿತ ಪ್ರಾಪಂಚಿಕನು ತಾನು ಭವಿಷ್ಯದಲ್ಲಿ ಹುಟ್ಟಬೇಕೆಂದು ಬಯಸಿದರೆ ಆತನು ಇನ್ನಷ್ಟು ಸಿಕ್ಕಿಕೊಳ್ಳುವನು. ಹೇಗೆಂದರೆ ಏಳನೆಯ ಒಪ್ಪಿಗೆಯಿಂದ ಪೆಟ್ಟು ತಿಂದಂತಹ ಬಾಲರ್ಿಯ ಕಟ್ಟಿನಂತಾಗುವುದು.
ಅತ್ಯಂತ ಅತೀತದಲ್ಲಿ ದೇವತೆಗಳಿಗೂ ಹಾಗು ಅಸುರರಿಗೂ ಯುದ್ಧಕ್ಕೆ ಸಿದ್ಧತೆ ನಡೆಯುತ್ತಿತ್ತು. ಆಗ ಅಸುರರ ಒಡೆಯನಾದ ವಪಚಿತ್ತಿಯು ಅಸುರರೊಂದಿಗೆ ಹೀಗೆ ಹೇಳಿದನು: ಅಸುರರೇ, ಈ ಯುದ್ಧದಲ್ಲಿ ಅಸುರರು ಜಯಗಳಿಸಿ ದೇವತೆಗಳೆಲ್ಲಾ ಪರಾಜಿತರಾದರೆ ಆಗ ಆ ಅಂಧನಾದ ದೇವೇಂದ್ರ ಸಕ್ಕನನ್ನು ಹಿಡಿದು ಈ ಅಸುರರ ಲೋಕಕ್ಕೆ ಕರೆತನ್ನಿರಿ. ಮತ್ತೆ ಅಲ್ಲಿ ಸಕ್ಕ ದೇವತೆಗಳೊಡೆಯನು ಸಹಾ ತಾವತಿಂಸ ದೇವತೆಗಳಿಗೆ ಹೀಗೆ ನುಡಿದನು: ದೇವತೆಗಳೇ, ಈ ಸುರಾಸುರರ ಯುದ್ಧದಲ್ಲಿ ಅಸುರರು ಪರಾಜಿತರಾದರೆ ಆ ಅಸುರರ ಒಡೆಯನಾದ ಅಂಧನಾದ ವೆಪಚಿತ್ತಿಯನ್ನು ಕುತ್ತಿಗೆ ಹಿಡಿದು ಪಂಚವಿಧದ ಬಂಧನಗಳಿಂದ ಬಂಧಿಸಿ, ದೇವತೆಗಳ ಸಭಾಂಗಣವಾದ ಸುಧಮ್ಮಕ್ಕೆ ಕರೆತನ್ನಿರಿ. ಆ ಮಹಾಯುದ್ಧದಲ್ಲಿ ದೇವತೆಗಳು ಜಯಶಾಲಿಗಳಾದರು ಮತ್ತು ಅಸುರರು ಸೋತುಹೋದರು. ನಂತರ ತಾವತಿಂಸ ದೇವತೆಗಳು ವೆಪಚಿತ್ತಿಯನ್ನು ಆತನ ನಾಲ್ಕು ಅಂಗಾಂಗಗಳನ್ನು ಬಂಧಿಸಿ, ಕುತ್ತಿಗೆ ಹಿಡಿದು ಸಕ್ಕನ ಸುಧಮ್ಮ ಸಭಾಂಗಣಕ್ಕೆ ಕರೆತಂದರು. ಆಗ ವೆಪಚಿತ್ತಿಗೆ ಹೀಗೆ ಅನ್ನಿಸಿತು: ಈ ದೇವತೆಗಳು ಧಾಮರ್ಿಕರು ಹಾಗು ಅಸುರರು ಅಧಾಮರ್ಿಕರು. ನಾನು ಈಗಲೇ ದೇವತೆಗಳ ಬಳಿಗೆ ಹೋದರೆ ಹೇಗೆ? ತಕ್ಷಣ ಆತನ ಬಂಧನಗಳು ಇಲ್ಲವಾದವು. ಆಗ ಆತನು ಪಂಚವಿಧದ ಇಂದ್ರೀಯ ಸುಖವು ಲಭಿಸಿತು. ಆಗ ಈ ರೀತಿಯ ಯೋಚನೆ ಉಂಟಾಯಿತು: ಈ ಅಸುರರು ಧಾಮರ್ಿಕರೇ ಆಗಿದ್ದಾರೆ. ನಾನು ಈಗಲೇ ಅಮರ ಲೋಕಕ್ಕೆ ಹೋದರೆ ಹೇಗೆ? ಆ ತಕ್ಷಣ ಪುನಃ ಬಂಧಿಯಾಗಿ ಆ ಪಂಚವಿಧದ ಸುಖಗಳಿಂದ ವಂಚಿತನಾದನು. ಭಿಕ್ಷುಗಳೇ, ಅಸುರಲೋಕದ ಒಡೆಯನಾದ ವೇಪಚಿತ್ತಿಯ ಬಂಧನವು ಸೂಕ್ಷ್ಮವಾದುದು. ಆದರೆ ಮಾರನ ಬಂಧನವು ಇನ್ನಷ್ಟು ಸೂಕ್ಷ್ಮವಾದುದು. ಗ್ರಹಿಕೆಯಿಂದಾಗಿ ಮಾರನ ಬಂಧನದಿಂದ ಬಂಧಿಯಾಗುತ್ತಾನೆ. ಗ್ರಹಿಕೆಯಿಲ್ಲದೆ ಮಾರನ ಬಂಧನದಿಂದ ಮುಕ್ತನಾಗುತ್ತಾನೆ.
ಭಿಕ್ಷುಗಳೇ, ನಾನು ಎಂಬುದು ಗ್ರಹಿಕೆಯಾಗಿದೆ. ಇದೇ ನಾನು ಎಂಬುದು ಗ್ರಹಿಕೆಯಾಗಿದೆ. ನಾನು ಇರುವೆನು ಎಂಬುದು ಗ್ರಹಿಕೆಯಾಗಿದೆ, ನಾನು ಇರುವುದಿಲ್ಲ ಎಂಬುದು ಗ್ರಹಿಕೆಯಾಗಿದೆ. ನಾನು ದೇಹವನ್ನು ಹೊಂದಿದ್ದೇನೆ ಎಂಬುದು ಗ್ರಹಿಕೆಯಾಗಿದೆ. ನಾನು ದೇಹವನ್ನು ಹೊಂದಿಲ್ಲ (ಅರೂಪಿ) ಎಂಬುದು ಗ್ರಹಿಕೆಯಾಗಿದೆ. ನಾನು ಗ್ರಹಣಶೀಲನಾಗಿರುವೆನು ಎಂಬುದು ಗ್ರಹಿಕೆಯಾಗಿದೆ. ನಾನು ಗ್ರಹಣಶೀಲನಾಗಿರುವುದಿಲ್ಲ ಎಂಬುದು ಗ್ರಹಿಕೆಯಾಗಿದೆ. ನಾನು ಗ್ರಹಿಕೆಯಾಗಿರುವುದಿಲ್ಲ, ಗ್ರಹಿಕೆಯಿಲ್ಲದೆಯೂ ಇರುವುದಿಲ್ಲ ಎಂಬುದು ಗ್ರಹಿಕೆಯಾಗಿದೆ. ಆದ್ದರಿಂದಾಗಿ ಭಿಕ್ಷುಗಳೇ, ಗ್ರಹಿಕೆಯು ರೋಗವಾಗಿದೆ, ಗ್ರಹಿಕೆಯು ಗಡ್ಡೆಯಾಗಿದೆ, ಗ್ರಹಿಕೆಯು ಶಲ್ಯವಾಗಿದೆ. ಆದ್ದರಿಂದ ಭಿಕ್ಷುಗಳೇ, ನೀವು ಹೀಗೆ ಸುಶಿಕ್ಷಿತಗೊಳಿಸಿಕೊಳ್ಳಬೇಕು, ನಾವು ಗ್ರಹಿಕೆಯಿಲ್ಲದೆಯೇ ವಿಹರಿಸುವೆವು.
ಭಿಕ್ಷುಗಳೇ, ನಾನು ಎಂಬುದು ಚಲನೆಯಾಗಿದೆ. ಇದೇ ನಾನು... ನಾನು ಇರುವೆನು... ನಾನು ಇರುವುದಿಲ್ಲ... ನಾನು ಅಶರೀರಿ... ನಾನು ಗ್ರಹಣಶೀಲ... ನಾನು ಗ್ರಹಣಶೀಲನಲ್ಲ... ನಾನು ಗ್ರಹಿಕೆಯಲ್ಲ, ಗ್ರಹಿಕೆಯಿಲ್ಲದೆಯೂ ಅಲ್ಲ... ಹೀಗೆ ಇವೆಲ್ಲಾ ಚಲನೆಯಾಗಿದೆ. ಚಲನೆಯು ರೋಗವಾಗಿದೆ, ಗಡ್ಡೆಯಾಗಿದೆ, ಶಲ್ಯವಾಗಿದೆ. ಆದ್ದರಿಂದ ಚಲನೆಗೆ ಅತೀತರಾಗಿರುವೆವು ಎಂದು ಸುಶಿಕ್ಷಿತರಾಗಿರಿ.
ಭಿಕ್ಷುಗಳೇ, ನಾನು ಭವಿಷ್ಯದಲ್ಲಿರುವೆನು... ಭವಿಷ್ಯದಲ್ಲಿರುವುದಿಲ್ಲ... ಭವಿಷ್ಯದಲ್ಲಿ ಶರೀರ ಹೊಂದಿರುವೆನು... ಭವಿಷ್ಯದಲ್ಲಿ ಅಶರೀರಿಯಾಗಿರುವೆನು... ಸಂಜ್ಞೆ ಹೊಂದಿರುವೆನು... ಅಸಂಜ್ಞೆಯಾಗಿರುವೆನು... ನೇವಸಂಜ್ಞೆನಾಸಂಜ್ಞೆಯಾಗಿರುವೆನು, ಹೀಗೆ ಇವೆಲ್ಲಾ ಉದ್ವೇಗವಾಗಿದೆ. ಉದ್ವೇಗವಿಲ್ಲದೆ ಇರುತ್ತೇನೆ ಎಂದು ಸುಶಿಕ್ಷಿತರಾಗಿರಿ.
ಭಿಕ್ಷುಗಳೇ, ನಾನು... ನಾನಿರುವೆನು... ನಾನಿರುವುದಿಲ್ಲ... ನಾನು ಶರೀರಿ... ನಾನು ಅಶರೀರಿ... ನಾನು ಗ್ರಹಣಶೀಲ... ನಾನು ಗ್ರಹಣಶೀಲನಲ್ಲ... ನಾನು ಗ್ರಹಿಕೆಯಲ್ಲ, ಗ್ರಹಿಕೆಯಲ್ಲದೆಯೂ ಇಲ್ಲ. ಹೀಗೆ ಇವೆಲ್ಲಾ ಪ್ರಾಪಂಚಿಕವಾಗಿದೆ. ನಾವು ನಿಷ್ಪ್ರಾಪಂಚಿಕರಾಗಿ ಇರುತ್ತೇವೆ ಎಂದು ಸುಶಿಕ್ಷಿತರಾಗಿರಿ.
ಭಿಕ್ಷುಗಳೇ, ನಾನು ಎಂಬುದು ಅಹಂಗೆ ಒಳಪಡುತ್ತದೆ. ನಾನು ಇದೇ ಎಂಬುದು ಅಹಂಗೆ ಒಳಪಡುತ್ತದೆ. ನಾನಿರುವೆನು,  ನಾನಿರುವುದಿಲ್ಲ, ನಾನು ಶರೀರಿ, ನಾನು ಅಶರೀರಿ, ನಾನು ಗ್ರಹಣಶೀಲ, ನಾನು ಗ್ರಹಣಶೀಲನಲ್ಲ, ನಾನು ಗ್ರಹಿಕೆಯಲ್ಲ, ಗ್ರಹಿಕೆಯಲ್ಲದೆಯೂ ಅಲ್ಲ. ಇವೆಲ್ಲವೂ ಅಹಂಗೆ ಒಳಪಡುತ್ತದೆ. ಈ ರೀತಿಯ ಒಳಪಡುವಿಕೆ ರೋಗವಾಗಿದೆ, ಗಡ್ಡೆಯಾಗಿದೆ, ಶಲ್ಯವಾಗಿದೆ. ಆದ್ದರಿಂದ ಭಿಕ್ಷುಗಳೇ, ನಾನು ಅಹಂನಿಂದ ಮುಕ್ತನಾಗಿ ವಿಹರಿಸುವೆನು ಎಂದು ಸುಶಿಕ್ಷಿತರಾಗಿರಿ.


ಇಲ್ಲಿಗೆ ಅಸೀವಿಸವರ್ಗ ಮುಗಿಯಿತು


ಇಲ್ಲಿಗೆ ಸಳಾಯತನ ವರ್ಗವು ಸಮಾಪ್ತಿಯಾಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...